Tag: ದೆಹಲಿ ಮಹಿಳಾ ಆಯೋಗ

  • ಬಾಲ್ಯದಲ್ಲಿ ನನ್ನ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಅನುಭವಿಸಿದ್ದೆ – ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ

    ಬಾಲ್ಯದಲ್ಲಿ ನನ್ನ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಅನುಭವಿಸಿದ್ದೆ – ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ

    ನವದೆಹಲಿ: ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯೆ ಖುಷ್ಬೂ ಸುಂದರ್ ಅವರು ಬಾಲ್ಯದಲ್ಲಿ ತನ್ನ ತಂದೆಯಿಂದ ಲೈಂಗಿಕ ಕಿರುಕುಳಕ್ಕೊಳಗಾದ ಬಗ್ಗೆ ಹೇಳಿಕೊಂಡ ಬೆನ್ನಲ್ಲೇ, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ (Swati Maliwal) ತಮಗಾದ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ.

    “ನಾನು ಚಿಕ್ಕ ಹುಡುಗಿಯಾಗಿದ್ದಾಗ ನನ್ನ ತಂದೆಯೇ ನನಗೆ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅವರು ನನ್ನನ್ನು ತುಂಬಾ ಥಳಿಸುತ್ತಿದ್ದರು. ಅವರು ಮನೆಗೆ ಬಂದಾಗ ನಾನು ಭಯಭೀತಳಾಗುತ್ತಿದ್ದೆ. ಆಗಾಗ್ಗೆ ಹಾಸಿಗೆಯ ಕೆಳಗೆ ಅಡಗಿಕೊಳ್ಳುತ್ತಿದ್ದೆ” ಎಂದು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಗಿಲ್‌ ಶತಕದ ಮಿಂಚು, ಬ್ಯಾಟಿಂಗ್‌ ಲಯಕ್ಕೆ ಮರಳಿದ ಕೊಹ್ಲಿ ಅರ್ಧ ಶತಕ – ಉತ್ತಮ ಸ್ಥಿತಿಯಲ್ಲಿ ಭಾರತ

    ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಹೇಗೆ ಸಹಾಯ ಮಾಡಬೇಕು ಎಂದು ಯೋಚಿಸುತ್ತೇನೆ. ಹೆಣ್ಣುಮಕ್ಕಳನ್ನು ಶೋಷಿಸುವಂತಹ ಪುರುಷರಿಗೆ ಪಾಠ ಕಲಿಸುವ ಕೆಲಸ ಮಾಡುತ್ತೇವೆ. ಆದರೆ ನನ್ನ ಬಾಲ್ಯದಲ್ಲಿ ನಾನು ಕೂಡ ಲೈಂಗಿಕ ದೌರ್ಜನ್ಯದ ಕರಾಳತೆಯನ್ನು ಎದುರಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ವಧುದಕ್ಷಿಣೆ ಕಡಿಮೆ ಆಯ್ತು ಅಂತಾ ಮದುವೆ ಬೇಡವೆಂದ ಯುವತಿ – ಪ್ರಕರಣ ದಾಖಲಿಸದ ಪೊಲೀಸರು

    ತಂದೆ ನನ್ನ ತಲೆಯನ್ನು ಹಿಡಿದು ಗೋಡೆಗೆ ಹೊಡೆಸಿ ಹಲ್ಲೆ ಮಾಡಿದ್ದರು. ತಲೆಯಿಂದ ರಕ್ತಸ್ರಾವವಾಗಿ ನೋವು ಅನುಭವಿಸಿದ್ದೆ. ಯಾರೇ ಆಗಲಿ, ದೌರ್ಜನ್ಯಗಳನ್ನು ಅನುಭವಿಸಿದಾಗ ಮಾತ್ರ ಇತರರ ನೋವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಇಡೀ ವ್ಯವಸ್ಥೆಯನ್ನು ಅಲುಗಾಡಿಸುವ ಜಾಗೃತರಾಗುತ್ತಾರೆ ಎಂದು ನಾನು ನಂಬುದ್ದೇನೆ ಎಂದಿದ್ದಾರೆ.

    ತಂದೆಯಿಂದ ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೆ ಎಂದು ಈಚೆಗಷ್ಟೇ ಖುಷ್ಬೂ ಸುಂದರ್‌ ಅವರು ತಮ್ಮ ಬಾಲ್ಯದ ಕೆಲವು ದುರಂತ ಸನ್ನಿವೇಶಗಳ ಬಗ್ಗೆ ಹೇಳಿಕೊಂಡಿದ್ದರು.

  • ಗ್ಲಾಸ್‍ನಲ್ಲಿ ಕೈ ಲಾಕ್ ಮಾಡಿ ಕಾರು ಓಡಿಸಿದ – ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಗೆ ಕಿರುಕುಳ

    ಗ್ಲಾಸ್‍ನಲ್ಲಿ ಕೈ ಲಾಕ್ ಮಾಡಿ ಕಾರು ಓಡಿಸಿದ – ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಗೆ ಕಿರುಕುಳ

    ನವದೆಹಲಿ: ದೆಹಲಿಯ (Delhi) ಮಹಿಳಾ ಆಯೋಗದ ಅಧ್ಯಕ್ಷೆ (DCW Chief) ಸ್ವಾತಿ ಮಲಿವಾಲ್ (Swati Maliwal) ಅವರನ್ನು ಕಾರು (Car) ಚಾಲಕನೊಬ್ಬ (Driver) 10 ರಿಂದ 15 ಮೀಟರ್ ಧರಧರನೇ ಎಳೆದೊಯ್ದಿರುವ ಘಟನೆ ದೆಹಲಿ ಏಮ್ಸ್ (AIIMS) ಬಳಿ ನಡೆದಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಾತಿ ಮಲಿವಾಲ್, ನಿನ್ನೆ ತಡರಾತ್ರಿ ನಾನು ದೆಹಲಿಯಲ್ಲಿ ಮಹಿಳಾ ಭದ್ರತೆಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೆ. ಈ ವೇಳೆ ಕಾರಿನ ಚಾಲಕನೊಬ್ಬ ಕುಡಿದ ಅಮಲಿನಲ್ಲಿ ನನಗೆ ಕಿರುಕುಳ ನೀಡಿದ್ದಾನೆ. ಆಗ ನಾನು ಅವನನ್ನು ಹಿಡಿಯಲು ಯತ್ನಿಸಿದ್ದೇನೆ. ಆಗ ನನ್ನ ಕೈ ಕಾರಿನ ಕನ್ನಡಿಯ ಒಳಗೆ ಸಿಕ್ಕಿಹಾಕಿಕೊಂಡಿದೆ. ಇದನ್ನು ಗಮನಿಸದೇ ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕ ಕಾರು ಚಾಲನೆ ಮಾಡಿಕೊಂಡು ಎಳೆದೊಯ್ದಿದ್ದಾನೆ. ದೇವರು ನನ್ನ ಜೀವ ಉಳಿಸಿದ್ದಾರೆ. ದೆಹಲಿ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ನನಗೆ ಈ ರೀತಿ ಆಗಿದೆ ಎಂದರೆ, ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ ಎಂದಿದ್ದಾರೆ. ಇದನ್ನೂ ಓದಿ: ಸ್ಕೂಟರ್ ಹಿಂದೆ ಧರಧರನೇ ವೃದ್ದನನ್ನ ಎಳೆದೊಯ್ದ ಆರೋಪಿಗೆ ನ್ಯಾಯಾಂಗ ಬಂಧನ

    ಏನಿದು ಘಟನೆ:
    ಜ.18ರ ತಡರಾತ್ರಿ ಕಾರು ಚಾಲಕ ಕುಡಿದ ಮತ್ತಿನಲ್ಲಿ ಸ್ವಾತಿ ಮಲಿವಾಲ್‍ಗೆ ಕಿರುಕುಳ ನೀಡಿದ್ದಾನೆ. ಈ ವೇಳೆ ಸ್ವಾತಿ ಮಲಿವಾಲ್ ಅವನನ್ನು ಹಿಡಿಯಲು ಕಾರಿನ ಒಳಗೆ ಕೈ ಹಾಕಿದಾಗ ಚಾಲಕ ಕಾರಿನ ಕನ್ನಡಿಯನ್ನು ಮೇಲೆ ಮಾಡಿದ್ದೇನೆ. ಈ ವೇಳೆ ಸ್ವಾತಿ ಮಲಿವಾಲ್ ಅವರ ಕೈ ಕಾರಿನ ಒಳಗೆ ಸಿಕ್ಕಿಹಾಕಿಕೊಂಡಿದೆ. ಇದನ್ನು ಗಮನಿಸದೇ ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕ ಕಾರು ಚಾಲನೆ ಮಾಡಿಕೊಂಡು ಎಳೆದೊಯ್ದಿದ್ದಾನೆ. ಆ ಬಳಿಕ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: 3 ಪತ್ನಿಯರ ಬಗ್ಗೆ ತಿಳಿದುಕೊಂಡ್ಲು ಅಂತಾ 4ನೇ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 3 ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಕರ್ತವ್ಯಕ್ಕೆ ಅನ್‌ಫಿಟ್‌ – ಟೀಕೆ ಬೆನ್ನಲ್ಲೇ ಮಾರ್ಗಸೂಚಿ ಹಿಂಪಡೆದ SBI

    3 ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಕರ್ತವ್ಯಕ್ಕೆ ಅನ್‌ಫಿಟ್‌ – ಟೀಕೆ ಬೆನ್ನಲ್ಲೇ ಮಾರ್ಗಸೂಚಿ ಹಿಂಪಡೆದ SBI

    ನವದೆಹಲಿ: ಕರ್ತವ್ಯಕ್ಕೆ ಸಂಬಂಧಿಸಿದಂತೆ ಗರ್ಭಿಣಿಯರಿಗೆ ಹೊರಡಿಸಿದ್ದ ಮಾರ್ಗಸೂಚಿಯು ವಿವಾದಕ್ಕೆ ಸಿಲುಕುತ್ತಿದ್ದಂತೆ ಅದನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹಿಂತೆಗೆದುಕೊಂಡಿದೆ.

    ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಲು ʼತಾತ್ಕಾಲಿಕವಾಗಿ ಅನರ್ಹರುʼ ಎಂದು ಎಸ್‌ಬಿಐ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿತ್ತು. ಇದನ್ನೂ ಓದಿ: Budget Session: ಜ.31, ಫೆ.1ರಂದು ಸಂಸತ್‌ನ ಎರಡೂ ಸದನಗಳಲ್ಲಿ ಪ್ರಶ್ನೋತ್ತರ, ಶೂನ್ಯ ವೇಳೆ ಇರಲ್ಲ

    ಮಾರ್ಗಸೂಚಿಯನ್ನು ವಿರೋಧಿಸಿ ದೆಹಲಿ ಮಹಿಳಾ ಆಯೋಗವು (ಡಬ್ಲ್ಯೂಡಿಸಿ), ಎಸ್‌ಬಿಐಗೆ ನೋಟಿಸ್‌ ಜಾರಿ ಮಾಡಿತ್ತು. ದೆಹಲಿ ಮಾರ್ಗಸೂಚಿಯನ್ನು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ, ಬ್ಯಾಂಕ್‌ನ ಕ್ರಮವು ತಾರತಮ್ಯ ಹಾಗೂ ಕಾನೂನುಬಾಹಿರವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದರು.

    ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿಯರನ್ನು ಕರ್ತವ್ಯಕ್ಕೆ ಹಾಜರಾಗದಂತೆ ತಡೆಯಲು ಎಸ್‌ಬಿಐ ಮಾರ್ಗಸೂಚಿ ಹೊರಡಿಸಿದೆ. ಅಲ್ಲದೇ ಅವರು ತಾತ್ಕಾಲಿಕವಾಗಿ ಅನರ್ಹರು ಎಂದು ಸಹ ಹೇಳಿದೆ. ಇದು ತಾರತಮ್ಯದಿಂದ ಕೂಡಿದ್ದು, ಕಾನೂನುಬಾಹಿರವಾಗಿದೆ. ಈ ಮಹಿಳಾ ವಿರೋಧಿ ನಿಯಮವನ್ನು ಹಿಂಪಡೆಯುವಂತೆ ಕೋರಿ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಟ್ವೀಟ್‌ನಲ್ಲಿ ಸ್ವಾತಿ ತಿಳಿಸಿದ್ದರು. ಇದನ್ನೂ ಓದಿ: ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video

    ಗರ್ಭಿಣಿಯರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಲಾಗುವುದು. ಹೆರಿಗೆ ನಂತರ ನಾಲ್ಕು ತಿಂಗಳೊಳಗೆ ಅವರು ಕರ್ತವ್ಯಕ್ಕೆ ಮರಳಲು ಅನುಮತಿಸಬಹುದು ಎಂದು ಸುತ್ತೋಲೆಯಲ್ಲಿದೆ. ಈ ನಿಯಮಗಳನ್ನು ಬ್ಯಾಂಕ್‌ ರೂಪಿಸಿದೆ ಎಂದು ತೋರುತ್ತದೆ. ಇದು ಗಂಭೀರವಾದ ವಿಷಯ. ಈ ಕ್ರಮ ಬ್ಯಾಂಕ್‌ ಸಾಮಾಜಿಕ ಭದ್ರತೆ ಸಂಹಿತೆ, 2020ರ ಅಡಿ ಒದಗಿಸಲಾದ ಹೆರಿಗೆ ಪ್ರಯೋಜನೆಗಳಿಗೆ ವಿರುದ್ಧವಾಗಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿತ್ತು.

    ಈ ಮಾರ್ಗಸೂಚಿಗಳನ್ನು ಯಾವ ಮಾನದಂಡಗಳ ಆಧಾರದಲ್ಲಿ ರೂಪಿಸಲಾಯಿತು ಎಂಬುದನ್ನು ವಿವರಿಸಲು ಮತ್ತು ಅವುಗಳನ್ನು ಅನುಮೋದಿಸಿದ ಅಧಿಕಾರಿಗಳ ಹೆಸರನ್ನು ನೀಡುವಂತೆ ಎಸ್‌ಬಿಐಗೆ ಮಹಿಳಾ ಆಯೋಗ ಕೇಳಿತ್ತು. ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಸುಶಾಂತ್ ಸಿಂಗ್ ನೆರೆಮನೆಯಾತನ ಬಂಧನ

    ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಗರ್ಭಿಣಿಯರಿಗೆ ಹೊರಡಿಸಲಾಗಿದ್ದ ಪರಿಷ್ಕೃತ ಮಾರ್ಗಸೂಚಿಗಳನ್ನು ಹಿಂಪಡೆಯಲಾಗಿದೆ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ.

  • ಹೊರಗೆ ಸ್ಪಾ, ಒಳಗೆ ಸೆಕ್ಸ್ ದಂಧೆ- ಮಹಿಳಾ ಆಯೋಗದ ದಾಳಿ

    ಹೊರಗೆ ಸ್ಪಾ, ಒಳಗೆ ಸೆಕ್ಸ್ ದಂಧೆ- ಮಹಿಳಾ ಆಯೋಗದ ದಾಳಿ

    -ಕಾಂಡೋಮ್, ಆಕ್ಷೇಪಾರ್ಹ ವಸ್ತುಗಳು ಪತ್ತೆ
    -ಸ್ಪಾದಲ್ಲಿದ್ದ ಐದು ಜನ ಗ್ರಾಹಕರು ವಶಕ್ಕೆ

    ನವದೆಹಲಿ: ದೇಶದ ರಾಜಧಾನಿಯ ತಿಲಕ್ ನಗರದಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿದ್ದ ಸೆಕ್ಸ್ ದಂಧೆಯ ಮೇಲೆ ದೆಹಲಿಯ ಮಹಿಳಾ ಆಯೋಗ ದಾಳಿ ನಡೆಸಿದೆ.

    ದೆಹಲಿ ಮಹಿಳಾ ಆಯೋಗದ ಹೆಲ್ಪ್‍ಲೈನ್ 181 ಸಂಖ್ಯೆಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿ ತಿಲಕ್ ನಗರದ ಸ್ಪಾದಲ್ಲಿ ನಡೆಯುತ್ತಿರೋ ಸೆಕ್ಸ್ ದಂಧೆಯ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಮಹಿಳಾ ಅಯೋಗದವರು ದೆಹಲಿ ಪೊಲೀಸರ ಜೊತೆ ಮಾಂಸದಂಧೆಯ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ದೆಹಲಿ ಮಹಿಳಾ ಆಯೋಗದ ಸದಸ್ಯೆ ಕಿರಣ್ ನೇಗಿ, ಈ ಸಂಬಂಧ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಮಾಹಿತಿ ನೀಡಿದ್ರು. ಸೂಚನೆ ಸಿಗುತ್ತಿದ್ದಂತೆ ದಾಳಿ ನಡೆಸಲು ನಾವು ಎರಡು ತಂಡಗಳ ರಚನೆ ಮಾಡಲಾಯ್ತು. ಸರಿಯಾದ ಸಮಯಕ್ಕೆ ಪೊಲೀಸರು ಅಲ್ಲಿಗೆ ಬಂದಾಗ ಅವರ ಜೊತೆ ಸ್ಪಾ ಒಳಗೆ ಹೋದೆವು ಎಂದು ಹೇಳಿದ್ರು.

    ರಿಸೆಪ್ಷನ್ ನಲ್ಲಿ ಕುಳಿತಿದ್ದ ಯುವತಿಗೆ ಮಾಲೀಕನನ್ನ ಕರೆಸುವಂತೆ ಹೇಳಲಾಯ್ತು. ದಾಳಿಯ ವಿಷಯ ತಿಳಿಯುತ್ತಲ್ಲೇ ಮಾಲೀಕ ತನ್ನ ಫೋನ್ ಸ್ವಿಚ್ಛ್ ಮಾಡಿದ. ಸ್ಪಾದಲ್ಲಿದ್ದ ಐವರು ಗ್ರಾಹಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯರ ಹೇಳಿಕೆಯನ್ನ ದಾಖಲಿಸಿಕೊಳ್ಳಲಾಗಿದೆ. ಸ್ಪಾದ ಸಿಸಿಟಿವಿ ಫೋಟೋಜ್ ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಕಿರಣ್ ನೇಗಿ ತಿಳಿಸಿದ್ದಾರೆ.

    ಮಹಿಳಾ ಆಯೋಗಕ್ಕೆ ಮೂರು ಸ್ಪಾಗಳ ಬಗ್ಗೆ ಮಾಹಿತಿ ಬಂದಿತ್ತು. ಒಂದರ ಮೇಲೆ ದಾಳಿ ನಡೆಯುತ್ತಿದ್ದಂತೆ ಇನ್ನೆರಡು ಸ್ಪಾಗಳ ಬಾಗಿಲು ಹಾಕಿವೆ. ಮಹಾಮಾರಿ ಕೊರೊನಾ ಹಿನ್ನೆಲೆ ಸ್ಪಾಗಳನ್ನ ತೆರೆಯದಂತೆ ಸರ್ಕಾರ ಹೇಳಿದೆ. ಮಾರ್ಗಸೂಚಿಯಲ್ಲಿ ಸ್ಪಾಗಳ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲ. ಆದ್ರೂ ದೆಹಲಿಯಲ್ಲಿ ಸ್ಪಾಗಳು ಆರಂಭವಾಗಿದ್ದು ಹೇಗೆ? ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ವಾ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಪ್ರಶ್ನಿಸಿದ್ದಾರೆ.

  • ಸೆಕ್ಸ್ ವರ್ಕರ್ ಮೇಲೆ ಲವ್, ವೇಶ್ಯಾಗೃಹದಿಂದ ಆಕೆಯನ್ನ ರಕ್ಷಿಸಿದ ಪ್ರೇಮಿ- ಮುಂದೆ ಮದುವೆ

    ಸೆಕ್ಸ್ ವರ್ಕರ್ ಮೇಲೆ ಲವ್, ವೇಶ್ಯಾಗೃಹದಿಂದ ಆಕೆಯನ್ನ ರಕ್ಷಿಸಿದ ಪ್ರೇಮಿ- ಮುಂದೆ ಮದುವೆ

    ನವದೆಹಲಿ: ವ್ಯಕ್ತಿಯೊಬ್ಬರು ತಾನು ಪ್ರೀತಿಸಿದ ಯುವತಿಯನ್ನ ವೇಶ್ಯಾಗೃಹದಿಂದ ಪಾರು ಮಾಡಿ ಈಗ ಮದುವೆಗೆ ಅಣಿಯಾಗುತ್ತಿರೋ ಅಪರೂಪದ ಲವ್ ಸ್ಟೋರಿ ಇದು.

    ಗುರುವಾರದಂದು ದೆಹಲಿ ಮಹಿಳಾ ಆಯೋಗ 27 ವರ್ಷ ವಯಸ್ಸಿನ ನೇಪಾಳ ಮೂಲದ ಯುವತಿಯನ್ನ ಇಲ್ಲಿನ ಜಿಬಿ ರೋಡ್‍ನ ವೇಶ್ಯಾಗೃಹದಿಂದ ರಕ್ಷಿಸಿದೆ. ಯುವತಿ ಸದರ್ ಬಜಾರ್‍ನ ತನ್ನ ಪ್ರೇಮಿಯನ್ನ ಮದುವೆಯಾಗಲಿದ್ದಾರೆ.

    ಎರಡು ವರ್ಷಗಳ ಹಿಂದೆ ಶುಭಿ ಮತ್ತು ಸಾಗರ್‍ಗೆ (ಹೆಸರು ಬದಲಾಯಿಸಲಾಗಿದೆ) ದೆಹಲಿಯ ಸ್ಥಳೀಯ ಮಾರುಕಟ್ಟೆಯೊಂದರಲ್ಲಿ ಪರಿಚಯವಾಗಿತ್ತು. ಮೊದಲ ನೋಟದಲ್ಲೇ ಒಬ್ಬರನ್ನೊಬ್ಬರು ಇಷ್ಟಪಡೋಕೆ ಶುರು ಮಾಡಿದ್ರು. ನಂತರ ಸಾಗರ್ ಶುಭಿಯನ್ನು ಭೇಟಿಯಾಗಲು ಗ್ರಾಹಕನಂತೆ ವೇಶ್ಯಾಗೃಹಕ್ಕೆ ಆಗಾಗ ಹೋಗ್ತಿದ್ದರು. ಈ ವೇಳೆ ಇಬ್ಬರಿಗೂ ಪ್ರೇಮವಾಗಿ ಮದುವೆಯಾಗಿ ಹೊಸ ಜೀವನ ಶುರು ಮಾಡಬೇಕು ಅಂತ ನಿರ್ಧರಿಸಿದ್ರು.

    ಶುಭಿ ವೇಶ್ಯಾಗೃಹದಲ್ಲಿದ್ದ ಇತರೆ ಕೆಲವು ಮಹಿಳೆಯರೊಂದಿಗೆ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ಅಲ್ಲಿಂದ ಹೇಗಾದ್ರೂ ಮಾಡಿ ಪರಾರಿಯಾಗಬೇಕು ಎಂದು ಸಾಕಷ್ಟು ಬಾರಿ ಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ನಂತರ ಸಾಗರ್ ಮಹಿಳಾ ಆಯೋಗದ ಸಹಾಯವಾಣಿಗೆ ಕರೆ ಮಾಡಿ ತನ್ನ ಕಥೆಯನ್ನ ಹೇಳಿಕೊಂಡ್ರು. ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಆಯೋಗ, ಪೊಲೀಸರ ಜೊತೆಗೂಡಿ ವೇಶ್ಯಾಗೃಹದ ಮೇಲೆ ದಾಳಿ ಮಾಡಿ ಯುವತಿಯನ್ನು ರಕ್ಷಿಸಿದ್ದಾರೆ.

    ಮದುವೆಗೆ ಸಿದ್ಧತೆ: ಸಾಗರ್ ಈಗಾಗಲೇ ಮನೆಯವರನ್ನ ಒಪ್ಪಿಸಿದ್ದು, ತಾನು ಪ್ರೀತಿಸಿದ ಶುಭಿಯನ್ನು ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶುಭಿ ಹೊಸ ಜೀವನ ಪ್ರಾರಂಭಿಸಬೇಕೆಂದಿದ್ದು, ಆಕೆಯ ಹಿಂದಿನ ಜೀವನದಿಂದಾಗ ಯಾರೂ ಆಕೆಗೆ ತೊಂದರೆ ಕೊಡದಂತೆ, ಆಕೆಯ ಮರ್ಯಾದೆಗೆ ಹಾನಿ ಮಾಡದಂತೆ ಸ್ಥಳೀಯ ಪೊಲೀಸರು ರಕ್ಷಣೆ ನೀಡಲಿದ್ದಾರೆ ಎಂದು ಮಹಿಳಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ನಮಗೆ ವ್ಯಕ್ತಿಯೊಬ್ಬರಿಂದ ಕರೆ ಬಂತು. ಜಿಬಿ ರೋಡ್‍ನಲ್ಲಿನ ಯುವತಿಯೊಬ್ಬರನ್ನ ಪ್ರೀತಿಸುತ್ತಿರುವ ಬಗ್ಗೆ ಹೇಳಿದ್ರು. ಇಲ್ಲಿನ ವೇಶ್ಯಾಗೃಹದಲ್ಲಿ ಯುವತಿ ಇದ್ದು, ಈ ವೃತ್ತಿಯನ್ನ ತ್ಯಜಿಸಿ ತನ್ನೊಂದಿಗೆ ಬರಬೇಕೆಂದಿದ್ದಾರೆ ಎಂದು ಹೇಳಿದ್ರು ಅಂತ ಮಹಿಳಾ ಆಯೋಗದ ಹಿರಿಯ ಅಧಿಕರಿಯೊಬ್ಬರು ಹೇಳಿದ್ದಾರೆ.

    2015ರಲ್ಲಿ ನೇಪಾಳದಲ್ಲಿ ಭೂಕಂಪವಾದಾಗ ಈ ಯುವತಿ ಭಾರತಕ್ಕೆ ಬಂದ್ರು. ಆಕೆ ತೀರಾ ಬಡ ಕುಟುಂಬದವರಾಗಿದ್ದು, ಎಲ್ಲವನ್ನೂ ಕಳೆದುಕೊಂಡಿದ್ರು. ತಿನ್ನಲು ಅನ್ನವಿಲ್ಲದೆ, ಜೀವನಾಧಾರವಿಲ್ಲದೆ ದೆಹಲಿಗೆ ಬಂದಿದ್ರು. ನಂತರ ಆಕೆಯನ್ನು ಯಾರೋ ಜಿಬಿ ರೋಡ್‍ನ ವೇಶ್ಯಾಗೃಹಕ್ಕೆ ಮಾರಿದ್ರು ಎಂದು ಅಧಿಕಾರಿ ಹೇಳಿದ್ದಾರೆ.

    ಜಿಬಿ ರೋಡ್: (ಗಾಸ್ರ್ಟಿನ್ ಬ್ಯಾಸ್ಟಿಯನ್ ರೋಡ್) ರಾಷ್ಟ್ರರಾಜಧಾನಿಯ ದೊಡ್ಡ ರೆಡ್ ಲೈಟ್ ಏರಿಯಾ. ಇಲ್ಲಿ ಸುಮಾರು 93 ವೇಶ್ಯಾಗೃಹಗಳಿದ್ದು, 3500 ಸೆಕ್ಸ್ ವರ್ಕರ್ಸ್ ಇದ್ದಾರೆ. ಸೆಕ್ಸ್ ವರ್ಕರ್ ಗಳ ಸುಮಾರು 8 ಸಾವಿರ ಮಕ್ಕಳು ಇಲ್ಲಿ ವಾಸವಿದ್ದು, ಎನ್‍ಜಿಓಗಳು ಇವರ ವಿದ್ಯಾಭ್ಯಾಸಕ್ಕೆ ಸಹಾಯ ಮಡುತ್ತಿವೆ. ಸಿಕ್ಕಿಂ, ನೇಪಾಳ, ಒಡಿಶಾ, ಅಸ್ಸಾಂ, ಜರ್ಖಂಡ್ ಮತ್ತು ಪಶ್ಚಿಮ ಬಂಗಾಳದಿಂದ ಬಂದ ಹುಡುಗಿಯರೇ ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಾರೆ. ಹುಡುಗಿಯರು ಸಂಕಷ್ಟದಲ್ಲಿದ್ರೆ ಅದನ್ನೇ ಬಂಡವಾಳ ಮಾಡಿಕೊಂಡು ಜಿಬಿ ರೋಡ್‍ನಂತಹ ನರಕಕ್ಕೆ ತಳ್ತಾರೆ. ಇದು ತುಂಬಾ ಗಂಭೀರವಾದ ವಿಷಯವಾಗಿದ್ದು, ಜಿಬಿ ರೋಡ್ ಬೇಗನೆ ಬಂದ್ ಮಾಡಬೇಕು ಎಂದು ಮಹಿಳಾ ಆಯೋಗದ ಅಧಿಕಾರಿ ಸ್ವಾತಿ ಮಲಿವಾಲ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.