ನವದೆಹಲಿ: ಉತ್ತರ ಭಾರತದಲ್ಲಿ ಭಾರೀ ಮಳೆಯು ಮುಂದುವರಿದಿದೆ. ದೆಹಲಿಯಲ್ಲಿ ಎಚ್ಚರಿಕೆ ನೀಡಲಾಗಿದ್ದು, ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇತ್ತ ಪಂಜಾಬ್‌ನಲ್ಲಿ ಸೆ.3ರ ವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನೋಯ್ಡಾ, ಗುರುಗ್ರಾಮ್ ಮತ್ತು ಗಾಜಿಯಾಬಾದ್ ಸೇರಿದಂತೆ ದೆಹಲಿ-NCR ನಲ್ಲಿ ಇಂದೂ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಹರಿಯಾಣ, ದೆಹಲಿ ಭಾಗದಲ್ಲಿ ಮಳೆ ಹಿನ್ನೆಲೆ ಪ್ರವಾಹ ಸ್ಥಿತಿಯಲ್ಲಿ ಯಮುನಾ ನದಿ ಹರಿಯುತ್ತಿದೆ. ನಿರಂತರ ಮಳೆ ಮುಂದುವರಿದರೆ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ತಗ್ಗು ಪ್ರದೇಶದಲ್ಲಿರುವ ಜನರಿಗೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ.
ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್‌ನಲ್ಲಿ ಈವರೆಗೂ 10 ಕ್ಕೂ ಹೆಚ್ಚು ಜಿಲ್ಲೆಗಳು ಜಲಾವೃತಗೊಂಡಿವೆ. ಕನಿಷ್ಠ 29 ಮಂದಿ ಸಾವನ್ನಪ್ಪಿದ್ದಾರೆ. ಪಂಜಾಬ್‌ನಾದ್ಯಂತ 1,300 ಕ್ಕೂ ಹೆಚ್ಚು ಗ್ರಾಮಗಳು ಮುಳುಗಿ ಹೋಗಿದ್ದು, 6,582 ಜನರನ್ನು 122 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಉತ್ತರ ಪ್ರದೇಶದ 22 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಪ್ರತಾಪ್‌ಗಢ, ಸೋನ್‌ಭದ್ರ, ಮಿರ್ಜಾಪುರ್, ಭದೋಹಿ, ಜೌನ್‌ಪುರ್, ಹರ್ದೋಯಿ, ಫರೂಖಾಬಾದ್, ಕನೌಜ್, ಕಾನ್ಪುರ್ ಗ್ರಾಮಾಂತರ, ಬಾಗ್‌ಪತ್, ಮೀರತ್, ಅಲಿಗಢ, ಮಥುರಾ, ಹತ್ರಾಸ್, ಕಾಸ್‌ಗಂಜ್‌ನಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆ ಇಂದು ಮತ್ತು ನಾಳೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ (Delhi NCR) ಪ್ರದೇಶದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಹಲವಾರು ಪ್ರದೇಶಗಳಲ್ಲಿ ವ್ಯಾಪಕ ನೀರು ನಿಂತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಅಲ್ಲದೇ ದೆಹಲಿ ವಿಮಾನ ನಿಲ್ದಾಣದಲ್ಲಿಯೂ (Delhi Airport) ವಿಮಾನಗಳ ಕಾರ್ಯಾಚರಣೆಯಲ್ಲಿ ಸಮಸ್ಯೆಯಾಗಿ 209 ನಿರ್ಗಮನ ಮತ್ತು 43 ಆಗಮನದಲ್ಲಿ ವಿಳಂಬವಾಗಿದೆ.
यह वीडियो दिल्ली की पटपरगंज के रोड का है । भाजपा की चार एंजिन की सरकार ने अब तो अब झूठे दावे करने भी बंद कर दिए हैं ।सोच रहे हैं कि बारिश का मौसम खत्म हो और बला टलें ।
दिल्ली वाले सोच रहे हैं आने वाले समय में ये भाजपा सरकार दिल्ली को हर क्षेत्र में पीछे धकेल देगी।
ನಿರಂತರ ಮಳೆಯಿಂದಾಗಿ ನೋಯ್ಡಾ ಮತ್ತು ಗಾಜಿಯಾಬಾದ್‌ಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಿಂದಾಗಿ ಪ್ರಗತಿ ಮೈದಾನ, ಡಿಫೆನ್ಸ್ ಕಾಲೋನಿ ಮತ್ತು ಪ್ರೀತ್ ವಿಹಾರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವ್ಯಾಪಕ ಜಲಾವೃತ ಮತ್ತು ಸಂಚಾರ ದಟ್ಟಣೆ ಉಂಟಾಗಿದೆ. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಬಂದ ರಹಸ್ಯ ಪತ್ರದಿಂದ ಭಾರತ, ಚೀನಾ ಸಂಬಂಧ ಸುಧಾರಣೆ!
VIDEO | Delhi: Vehicles stuck in waterlogging after heavy rains; visuals from West Vinod Nagar show submerged roads.
ರಾಜಧಾನಿಯ ಹಲವಾರು ಪ್ರಮುಖ ಮಾರ್ಗಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಡಿಎನ್‌ಡಿ ಫ್ಲೈವೇ, ಮಥುರಾ ರಸ್ತೆ, ವಿಕಾಸ್ ಮಾರ್ಗ, ಐಎಸ್‌ಬಿಟಿ, ಗೀತಾ ಕಾಲೋನಿ ಮತ್ತು ರಾಜಾರಾಮ್ ಕೊಹ್ಲಿ ಮಾರ್ಗ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಂಚಾರ ನಿಧಾನಗತಿಯಲ್ಲಿ ಸಾಗಿತು. ಇದನ್ನೂ ಓದಿ: ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ನಗರದ ಪ್ರಮುಖ ಭಾಗಗಳು ಮಳೆ ನೀರಿನಿಂದ ಆವೃತವಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ದೆಹಲಿಯಲ್ಲಿ ಕಾರ್ಮೋಡ ಆವರಿಸಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯು ತೀವ್ರ ಶಾಖ ಮತ್ತು ಹೆಚ್ಚಿನ ಮಾಲಿನ್ಯ ಮಟ್ಟವನ್ನು ಇಳಿಸಿದೆ. ಇಂಡಿಯಾ ಗೇಟ್, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಂಡಿ ಹೌಸ್, ತುಘಲಕ್ ರಸ್ತೆ ಮತ್ತು ನಗರದ ಹಲವಾರು ಭಾಗಗಳು ನೀರಿನಿಂದ ಆವೃತವಾಗಿವೆ. ನೆರೆಯ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿಯೂ ಸಹ ಭಾರೀ ಮಳೆಯಾಗುತ್ತಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೆಹಲಿಗೆ ಆರೆಂಜ್ ಅಲರ್ಟ್ ಘೋಷಿಸಿತ್ತು. ಗುಡುಗು ಸಹಿತ ಮಧ್ಯಮ ಮಳೆ (ಗಂಟೆಗೆ 5-15 ಮಿಮೀ) ಮುನ್ಸೂಚನೆ ನೀಡಿತ್ತು. ಬೆಳಗ್ಗೆ ಮಳೆ ನೀರು ನಿಂತಿದ್ದರಿಂದ ವಿವಿಧ ಸ್ಥಳಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಮಹಾಮಾಯ ಮೇಲ್ಸೇತುವೆಯ ಕೆಳಗಿರುವ ರಸ್ತೆ ಮತ್ತು ಅಂಬೇಡ್ಕರ್ ಪಾರ್ಕ್ ಬಳಿಯ ರಸ್ತೆ ಕೂಡ ಜಲಾವೃತವಾಗಿದೆ.
ದೆಹಲಿ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದ್ದು, ಜನತೆಗೆ ಆಹ್ಲಾದಕರ ಹವಾಮಾನದ ಅನುಭವ ಸಿಗುತ್ತಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ ಕೂಡ ಉತ್ತಮ ಸ್ಥಿತಿಯಲ್ಲಿದೆ. ಮಂಗಳವಾರ ದಕ್ಷಿಣ ದೆಹಲಿ, ಆಗ್ನೇಯ ದೆಹಲಿ, ಮಧ್ಯ ದೆಹಲಿ, ರಾಷ್ಟ್ರೀಯ ಹೆದ್ದಾರಿ 8, ದೆಹಲಿ-ಜೈಪುರ ಮಾರ್ಗ, ಐಟಿಒ ಮತ್ತು ಏಮ್ಸ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ನೀರು ನಿಂತ ಕಾರಣ ಸಂಚಾರ ಜಾಮ್ ಉಂಟಾಗಿತ್ತು.
ಜೂನ್ 29 ರಿಂದ ದೆಹಲಿಯ ಮುಂಗಾರು ಮಳೆಯು ಋತುಮಾನದ ಸರಾಸರಿಗಿಂತ 8% ಹೆಚ್ಚಾಗಿದೆ. ದೆಹಲಿಯಲ್ಲಿ ಇದುವರೆಗೆ 234.6 ಮಿಮೀ ಮಳೆಯಾಗಿದೆ ಎಂದು ಐಎಂಡಿ ದತ್ತಾಂಶವು ತಿಳಿಸಿದೆ.
ಬೆಳಗಿನ ಜಾವದಿಂದ ಭಾರೀ ಮಳೆ ಸುರಿಯುತ್ತಿದ್ದು, ಗಂಟೆಗೆ 80 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು, ಪರಿಣಾಮ ಈ ಅವಘಡ ಸಂಭವಿಸಿದೆ. ಮರ ಉರುಳಿ ಬಿದ್ದ ಪರಿಣಾಮ ಮನೆ ಕುಸಿದಿದ್ದು, ಓರ್ವ ಮಹಿಳೆ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಜ್ಯೋತಿ (26) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದ್ವಾರಕಾ, ಗುರುಗ್ರಾಮ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮರಗಳು ನೆಲಕ್ಕುರುಳಿವೆ.
Hi, some of our flights to and from Delhi are being delayed, which is likely to impact our overall flight schedule. We advise our guests to check the latest status of their flights here https: /https://t.co/RPRPhdS5Ye before heading to the airport.
ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಅಗಾಧ ಪ್ರಮಾಣದ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಸದ್ಯ ಹವಾಮಾನ ಇಲಾಖೆ ರೆಡ್ ಅಲರ್ಟ್ (Red Alert) ಘೋಷಿಸಿದ್ದು, ಗಾಳಿಯ ತೀವ್ರತೆಯಿಂದಾಗಿ 100ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಈ ಕುರಿತು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Delhi International Airport) ಹಾಗೂ ಏರ್ ಇಂಡಿಯಾ (Air India) ವಿಮಾನ ವಿಳಂಬ, ಮಾರ್ಗ ಬದಲಾವಣೆ ಬಗ್ಗೆ ಮಾಹಿತಿ ಹಂಚಿಕೊಂಡಿವೆ.ಇದನ್ನೂ ಓದಿ: ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳು ಇನ್ನೂ ಮಹಾರಾಷ್ಟ್ರ ಭಾಗವಾಗಿಲ್ಲ: ಅಜಿತ್ ಪವಾರ್
ನವದೆಹಲಿ: ಉತ್ತರಾಖಂಡ (Uttarakhand) ಮತ್ತು ದೆಹಲಿಯಲ್ಲಿ (Delhi Rain) ಮಳೆಯಾಗುತ್ತಿದ್ದು, ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ. ಅಲ್ಲದೇ, ಪಶ್ಚಿಮ ಹಿಮಾಲಯದಲ್ಲಿ ಹಿಮಪಾತ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇಂದು ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ, ಮಧ್ಯ ಮಹಾರಾಷ್ಟ್ರ, ಮರಾಠವಾಡದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಚದುರಿದ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ.
ಮಧ್ಯ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯನ್ನು ಊಹಿಸಲಾಗಿಲ್ಲ. ಆದರೆ ನಂತರ 2-4 °C ರಷ್ಟು ಕುಸಿತ ಸಂಭವಿಸುತ್ತದೆ. ಡಿ.29 ಮತ್ತು 30 ರಂದು ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್‌ನ ಕೆಲವು ಭಾಗಗಳಲ್ಲಿ ಶೀತ ಅಲೆಯಿಂದ ತೀವ್ರ ಶೀತ ಅಲೆಗಳ ಪರಿಸ್ಥಿತಿ ಇರಲಿದೆ.
ನವದೆಹಲಿ: ಈ ವರ್ಷ ಆಗಸ್ಟ್ನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಭಾರಿ ಮಳೆಯಾಗಿದೆ. ನಗರದಲ್ಲಿ ಈವರೆಗೂ 269.9 ಮಿಮೀ. ಮಳೆ ದಾಖಲಾಗಿದೆ. ಇದು ಕಳೆದ ಒಂದು ದಶಕದಲ್ಲೇ ಅತ್ಯಧಿಕ ಮಳೆಯಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ (Indian Meteorological Department) ಅಂಕಿ ಅಂಶಗಳು ತಿಳಿಸಿವೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇಲ್ಲಿಯವರೆಗೆ 269.9 ಮಿಮೀ. ಮಳೆಯಾಗಿದೆ, ಇದು ಆಗಸ್ಟ್ 2013 ರಲ್ಲಿ ದಾಖಲಾದ ಗರಿಷ್ಠವನ್ನು ಪ್ರಮಾಣವನ್ನು ಮೀರಿಸಿದೆ. ಇದರಿಂದಾಗಿ ದೆಹಲಿಯಲ್ಲಿ ನಿರೀಕ್ಷೆ ಮೀರಿದ ದಿನಗಳಿಂದ ಮಳೆಯು ಸುರಿಯುತ್ತಿದೆ.
2.4 ಮಿ.ಮೀಗಿಂತ ಜಾಸ್ತಿ ಮಳೆಯಾದರೆ ಸಾಧಾರಣವಾಗಿ ಜಾಸ್ತಿ ಮಳೆ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಆ.11 ರಿಂದ ಆಗಸ್ಟ್ 22 ರವರೆಗೆ ಭಾರೀ ಮಳೆಯಾಗಿದೆ ಎಂದು ತಿಳಿಸಿದೆ. ಇದು ಈ ವರ್ಷದ ಮಾನ್ಸೂನ್‌ನ ಅಸಾಮಾನ್ಯ ತೀವ್ರತೆಯನ್ನು ಸೂಚಿಸುತ್ತದೆ. ಭಾರತೀಯ ಹವಾಮಾನ ಇಲಾಖೆ ದತ್ತಾಂಶದ ಪ್ರಕಾರ 2012 ಮತ್ತು 2013ರ ಆಗಸ್ಟ್ನಲ್ಲಿ ಕ್ರಮವಾಗಿ 378 ಮಿಮೀ. ಹಾಗೂ 321 ಮಿಮೀ ಮಳೆ ದಾಖಲಾಗಿತ್ತು.
ಶುಕ್ರವಾರ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 36 ಡಿಗ್ರಿ ಸೆಲ್ಸಿಯಸ್ ಮತ್ತು 26 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಗೊಂಡಿದೆ. ಹವಾಮಾನ ಇಲಾಖೆ ತಜ್ಞರು ಮುಂದಿನ ಏಳು ದಿನಗಳವರೆಗೆ, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ (Weather Forecast) ನೀಡಿದ್ದಾರೆ.
ನವದೆಹಲಿ: ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ರಾಷ್ಟ್ರ ರಾಜಧಾನಿ ದೆಹಲಿಯ (New Delhi) ಜನರಿಗೆ ಈ ಬಾರಿ ಮಾನ್ಸೂನ್‌ನ ಮೊದಲ ಮಳೆ ದೊಡ್ಡ ರಿಲ್ಯಾಕ್ಸ್ ನೀಡಿದೆ. ಆದರೆ ನಿನ್ನೆ ರಾತ್ರಿ ಸುರಿದ ದಾಖಲೆ ಪ್ರಮಾಣದ ಮಳೆ ಇಡೀ ದೆಹಲಿಯನ್ನು ಸಂಕಷ್ಟಕ್ಕೆ ದೂಡಿದೆ. ಎಲ್ಲಾ ರಸ್ತೆಗಳಲ್ಲಿ ನೀರು ತುಂಬಿದೆ. ಇಡೀ ನಗರದಲ್ಲಿ ಟ್ರಾಫಿಕ್ ಜಾಮ್ ಆವರಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು.
ಗುರುವಾರ ರಾತ್ರಿ ಸರಿ ಸುಮಾರು ಮೂರು ಗಂಟೆ ಸುರಿದ ಮಳೆಗೆ ಭಾಗಶಃ ದೆಹಲಿ ಜಲಾವೃತಗೊಂಡಿದೆ. ದೆಹಲಿ ವಿಮಾನ ನಿಲ್ದಾಣದ (Delhi Airport) ಟರ್ಮಿನಲ್ 1 ರ ಮೇಲ್ಛಾವಣಿಯ ಒಂದು ಭಾಗವು ಕುಸಿದುಬಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿ ಆರು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ಏರ್‌ಪೋರ್ಟ್ ಮೇಲ್ಛಾವಣಿ ಕುಸಿತ- ಮೃತನ ಕುಟುಂಬ, ಗಾಯಾಳುಗಳಿಗೆ ಪರಿಹಾರ
ಮತ್ತೊಂದು ಕಡೆ ಇಡೀ ನಗರದಲ್ಲಿ ಬಹುತೇಕ ಪ್ರದೇಶಗಳು ನೀರಿನಿಂದ ಜಲಾವೃತಗೊಂಡಿದೆ. ಐಟಿಓ, ಲೋಧಿ ಎಸ್ಟೇಟ್, ಕಮಲ ನಗರಾ, ಲಜ್‌ಪತ್ ನಗರ, ಏಮ್ಸ್ ಪ್ರದೇಶ, ಸಬ್ದರ್ ಜಂಗ್ ಎನ್ಕ್ಲೇವ್, ಮಾತೃವಾ ರಸ್ತೆ, ತೀನ್ ಮೂರ್ತಿ ಮಾರ್ಗ, ಮೂಲಚಂದ್, ಮಿಂಟೋ ರಸ್ತೆ, ಆನಂದ್ ವಿಹಾರ್, ಮೆಹ್ರೌಲಿ ಬದರ್‌ಪುರ್ ರಸ್ತೆ, ಮಂಡವಾಲಿ, ಭಿಕಾಜಿ ಕಾಮಾ ಪ್ಲೇಸ್, ಮಧು ವಿಹಾರ್, ಪ್ರಗತಿ ಮೈದಾನ, ಮುನಿರ್ಕಾ, ಧೌಲಾ ಕುವಾ, ಮೋತಿ ಬಾಗ್, ಐಟಿಒ ಮತ್ತು ನೋಯ್ಡಾದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕಿಲೋಮೀಟರ್ ಉದ್ದಕ್ಕೂ ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ತೊಂದರೆಯಾಯಿತು.
ಭಿಕಾಜೀ ಕಾಮಾ ಮೆಟ್ರೋ ನಿಲ್ದಾಣದಲ್ಲಿ ನೀರು ನುಗ್ಗಿದೆ. ಆಗ್ನೇಯ ದೆಹಲಿಯ ಚಿತ್ತರಂಜನ್ ಪಾರ್ಕ್‌ನಲ್ಲಿರುವ ಮನೆಗಳಿಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಮತ್ತು ಪೀಠೋಪಕರಣಗಳಿಗೆ ಹಾನಿಯಾಗಿದೆ. ಆಜಾದ್ ಮಾರ್ಕೆಟ್ ಅಂಡರ್ ಪಾಸ್‌ನಲ್ಲಿ ಪ್ರಯಾಣಿಕರ ಬಸ್ ಕೆಟ್ಟು ನಿಂತಿದ್ದು, ಪ್ರಯಾಣಿಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಯಿತು. ಐಟಿಓ ಪ್ಲೈವೋವರ್ ಬಳಿ ಬಸ್, ಕಾರುಗಳಲ್ಲಿ ನೀರು ನುಗ್ಗಿ ಕೆಟ್ಟು ನಿಂತವು. ಇದನ್ನೂ ಓದಿ: ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 1 ರಲ್ಲಿ ಛಾವಣಿ ಕುಸಿದು 6 ಮಂದಿಗೆ ಗಾಯ
ಈ ನಡುವೆ ನಿನ್ನೆ ಒಂದೇ ದಿನ ರಾತ್ರಿ 228 ಎಂಎಂ ಮಳೆ ದಾಖಲಾಗಿದೆ. 1936 ರಲ್ಲಿ 235.5 ಎಂಎಂ ಮಳೆ ದಾಖಲಾಗಿತ್ತು. ಇದಾದ ಬಳಿಕ ನಿನ್ನೆ ಅತಿ ಹೆಚ್ಚು ಮಳೆ ಒಂದೇ ದಿನ ಸುರಿದಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಇನ್ನೂ ಮುಂದಿನ ಒಂದು ವಾರ ಭಾರಿ ಮಳೆಯ ಎಚ್ಚರಿಕೆ ನೀಡಿದೆ.
ದೆಹಲಿಯಲ್ಲಿ (Delhi Rains) ನೀರು ನುಗ್ಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋ ಪೋಸ್ಟ್ ಮಾಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನೀರು ತುಂಬಿದ್ದಕ್ಕೆ ಕೇಜ್ರಿವಾಲ್ ಸರ್ಕಾರವನ್ನು, ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತಕ್ಕೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಇದನ್ನೂ ಓದಿ: ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್‌ಗೆ ಜಾಮೀನು ಮಂಜೂರು
ನವದೆಹಲಿ: ದೆಹಲಿ (Delhi Rain) ಮತ್ತು ಎನ್‌ಸಿಆರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಸಾಧಾರಣದಿಂದ ಭಾರೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ದೆಹಲಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಹಗಲಿನಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ.
ದೆಹಲಿಯಲ್ಲಿ ಕಳೆದ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಈ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್ ಸಕ್ರಿಯವಾಗಿರುವುದನ್ನು ಸೂಚಿಸುತ್ತದೆ. ಮುಂದಿನ ಏಳು ದಿನಗಳ ಕಾಲ ದೆಹಲಿ ಮತ್ತು ಎನ್‌ಸಿಆರ್‌ನ ಹಲವು ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ತೀವ್ರತೆಯ ಮಳೆ ಮುಂದುವರಿಯುತ್ತದೆ ಎಂದು ಐಎಂಡಿ ತಿಳಿಸಿದೆ. ಇದನ್ನೂ ಓದಿ: ರಾಜ್ಯದ ಕರಾವಳಿಯಲ್ಲಿ ಮಳೆಯಬ್ಬರ- ಮೈದುಂಬಿದ ನದಿಗಳು, ಜಮೀನು ಜಲಾವೃತ
ದೆಹಲಿ ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ, ಸಾಧಾರಣ ಮಳೆ/ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ. ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 25 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಳಿದಾಡುವ ಸಾಧ್ಯತೆಯಿದೆ.
ಇನ್ನು ದೆಹಲಿಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ದಾಖಲಾಗಿದೆ. ಮಾರ್ಚ್‌ನಲ್ಲಿ ಸಾಮಾನ್ಯ ಮಳೆಯ ಪ್ರಮಾಣ 17.4 ಮಿಮೀ ಇದ್ದು, ಈ ಬಾರಿ 53.2 ಮಿಮೀ ಮಳೆಯಾಗಿದೆ. ಏಪ್ರಿಲ್‌ನಲ್ಲಿ ಸರಾಸರಿ 16.3 ಮಿಮೀ ಇದ್ದು 20.1 ಮಿಮೀ, ಮೇನಲ್ಲಿ ಸಾಮಾನ್ಯ 30.7 ಮಿಮೀ ಇದ್ದು 111 ಮಿಮೀ ಮಳೆಯಾಗಿದೆ. ಜೂನ್‌ನಲ್ಲಿ 74.1 ಮಿಮೀ ಬದಲಿಗೆ 101.7 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: ಕೆಜಿ ಟೊಮೆಟೊಗೆ 200 ರೂ., ಮೆಣಸಿನಕಾಯಿಗೆ 170 ರೂ. – ತರಕಾರಿಗಳ ಬೆಲೆ ಭಾರೀ ದುಬಾರಿ!
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಾಲುವೆ, ಚರಂಡಿಯ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ದೆಹಲಿಯ ಐಟಿಓ ಬಳಿಯಲ್ಲಿ 10 ಮನೆಗಳು ಕೊಚ್ಚಿಕೊಂಡು ಹೋಗಿವೆ. ಮನೆಗಳು ಬೀಳುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಐಟಿಓ ಬಳಿಯ ಅನ್ನಾ ನಗರದಲ್ಲಿ 10 ಮನೆಗಳನ್ನು ಕಾಲುವೆ ಆಹುತಿ ಪಡೆದುಕೊಂಡಿದೆ. ಈ ಪ್ರದೇಶದಲ್ಲಿ ಡಬ್ಲ್ಯೂಹೆಚ್‍ಓ ಗೆ ಸಂಬಂಧಿಸಿದ ಹೆಡ್‍ಕ್ವಾಟರ್ ನಿರ್ಮಿಸಲಾಗುತ್ತಿದ್ದು, ನೀರು ರಸ್ತೆಯ ಮೇಲೆ ಹರಿಯುತ್ತಿದೆ ಎಂದು ವರದಿಯಾಗಿದೆ. ಈ ಪ್ರದೇಶದ ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಮನೆಗಳು ಕೊಚ್ಚಿಕೊಂಡ ಹೋಗಿದ್ದರಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಪ್ರಾಣ ಹಾನಿ ಆಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.
ದೆಹಲಿ ಮಳೆಗೆ ಸಂಬಂಧಿಸಿದ ಹಲವು ವಿಡಿಯೋಗಳು ವೈರಲ್ ಆಗಿವೆ. ದೂರದಿಂದ ಮನೆಯಿಂದ ಹೊರಗೆ ಬನ್ನಿ ಎಂದು ಜೋರಾಗಿ ಹೇಳುತ್ತಿರೋದನ್ನು ಗಮನಿಸಕಬಹುದು. ನಗರದ ಮಿಂಟೋ ಬ್ರಿಜ್ ಮುಳುಗಡೆಯಾಗುವ ಸಾಧ್ಯತೆಗಳಿವೆ.
Rain: A blessing to some, curse to others! This is absolutely shocking. This happened in a slum in Anna Nagar, near ITO in Delhi. pic.twitter.com/ghtnIYEmzu