Tag: ದೆಹಲಿ ಚುನಾವಣೆ

  • Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

    Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

    – ಯಾರಿಗೂ ವೈಯಕ್ತಿಕವಾಗಿ ಹಣ ನೀಡದ ಕಾಂಗ್ರೆಸ್‌
    – ಕೇಜ್ರಿವಾಲ್‌ಗೆ ಆಪ್‌ನಿಂದ 10 ಲಕ್ಷ ರೂ.

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Election) ಸ್ಪರ್ಧಿಸಿದ ತನ್ನ 68 ಅಭ್ಯರ್ಥಿಗಳಿಗೆ ಬಿಜೆಪಿ (BJP) ತಲಾ 25 ಲಕ್ಷ ರೂ.ಗಳಂತೆ ಒಟ್ಟು 17 ಕೋಟಿ ರೂ.ಗಳನ್ನು ನೀಡಿದರೆ ಆಪ್‌ (AAP) ತನ್ನ 70 ಅಭ್ಯರ್ಥಿಗಳ ಪೈಕಿ 23 ಜನರಿಗೆ ಒಟ್ಟು 2.23 ಕೋಟಿ ರೂ.ಗಳನ್ನು ನೀಡಿದೆ.

    ಕಾಂಗ್ರೆಸ್ (Congress) ತನ್ನ 70 ಅಭ್ಯರ್ಥಿಗಳ ಪೈಕಿ ಯಾರಿಗೂ ವೈಯಕ್ತಿಕವಾಗಿ ಹಣವನ್ನು ನೀಡಿಲ್ಲ. ಆಪ್‌ 10 ಲಕ್ಷ ರೂ.ಗಳನ್ನು ತನ್ನ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಿದೆ.

    ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿದ ವೆಚ್ಚದ ವಿವರಗಳು ಪ್ರಕಟವಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಆಪ್‌ ಒಟ್ಟು 14.51 ಕೋಟಿ ರೂ.ಗಳನ್ನು ಖರ್ಚು ಮಾಡಿದರೆ ಕಾಂಗ್ರೆಸ್‌ ಪ್ರಚಾರಕ್ಕಾಗಿ 46.18 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.

    ಬಿಜೆಪಿ ಇನ್ನೂ ತನ್ನ ಪೂರ್ಣ ವೆಚ್ಚದ ವರದಿಯನ್ನು ಸಲ್ಲಿಸಿಲ್ಲ. ವೆಚ್ಚದ ವರದಿಯಲ್ಲಿ ತನ್ನ ಎಲ್ಲಾ ಅಭ್ಯರ್ಥಿಗಳಿಗೆ ಸಮಾನವಾಗಿ ಹಣವನ್ನು ನೀಡಿದ್ದನ್ನು ಮಾತ್ರ ಉಲ್ಲೇಖಿಸಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ್‌ ಬುಡಕ್ಕೆ ಬಂತು ನ್ಯಾಷನಲ್‌ ಹೆರಾಲ್ಡ್‌ ಕೇಸ್‌

    ದೆಹಲಿಯಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಠ 40 ಲಕ್ಷ ರೂ.ಗಳನ್ನು ಖರ್ಚು ಮಾಡಬಹುದು. ಆದರೆ ಪಕ್ಷಗಳು ಮಾಡುವ ಖರ್ಚಿಗೆ ಯಾವುದೇ ಮಿತಿ ಇಲ್ಲ. ಒಂದು ಪಕ್ಷವು ಒಂದು ಕ್ಷೇತ್ರದಲ್ಲಿ ಎಷ್ಟು ಬೇಕಾದರೂ ಹಣವನ್ನು ಖರ್ಚು ಮಾಡಬಹುದು. ಪಕ್ಷಗಳು ಸಲ್ಲಿಸಿದ ವೆಚ್ಚದ ವಿವರಗಳು ಪಕ್ಷದ ಅಭ್ಯರ್ಥಿಗಳು ಖರ್ಚು ಮಾಡಿದ ಹಣವನ್ನು ಪ್ರತಿಬಿಂಬಿಸುವುದಿಲ್ಲ.

    ಆಪ್‌ ಮಾಧ್ಯಮ ಜಾಹೀರಾತುಗಳು, ಪೋಸ್ಟರ್‌ಗಳು ಮತ್ತು ನೋಟಿಸ್‌ಗಳಿಗಾಗಿ 12.12 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ತನ್ನ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ಜಾಹೀರಾತುಗಳಿಗೆ 16 ಲಕ್ಷ ರೂ., ಗೂಗಲ್‌ ಜಾಹೀರಾತುಗಳಿಗಾಗಿ 2.24 ಕೋಟಿ ರೂ., ಫೇಸ್‌ಬುಕ್‌ನಲ್ಲಿ ಪ್ರಚಾರಕ್ಕಾಗಿ 73.57 ಲಕ್ಷ ರೂ.ಗಳನ್ನು ವೆಚ್ಚ ಮಾಡಿದೆ.

    ಬಿಜೆಪಿಯ ಹರೀಶ್ ಖುರಾನಾ ವಿರುದ್ಧ ಸೋತ ತನ್ನ ಮೋತಿ ನಗರ ಅಭ್ಯರ್ಥಿ ಶಿವ ಚರಣ್ ಗೋಯೆಲ್ ಅವರಿಗೆ ಪಕ್ಷವು ಅತಿ ಹೆಚ್ಚು 39 ಲಕ್ಷ ರೂ.ಗಳನ್ನು ನೀಡಿದೆ. ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೇವಲ 10 ಲಕ್ಷ ರೂ.ಗಳನ್ನು ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಅತಿಶಿ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಲಾ 20 ಲಕ್ಷ ರೂ.ಗಳನ್ನು ಪಡೆದರೆ, ಗೋಪಾಲ್ ರೈ 24.75 ಲಕ್ಷ ರೂ.ಗಳನ್ನು, ಸೌರಭ್ ಭಾರದ್ವಾಜ್ 22.8 ಲಕ್ಷ ರೂ.ಗಳನ್ನು ಮತ್ತು ಸತ್ಯೇಂದರ್ ಜೈನ್ 23 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ – ನಂಗೆ ಮದ್ವೆ ಬೇಡ ಎಂದ ವಧು, ವರ ಶಾಕ್‌

    ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಪ್ರಚಾರಕ್ಕಾಗಿ ಸುಮಾರು 5.94 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರೆ, ಮಾಧ್ಯಮ ಜಾಹೀರಾತು ಮತ್ತು ಪಠ್ಯ ಸಂದೇಶಗಳಿಗಾಗಿ 17.93 ಕೋಟಿ ರೂ.ಗಳನ್ನು ಮತ್ತು ಪೋಸ್ಟರ್‌ಗಳು ಮತ್ತು ಇತರ ಪ್ರಚಾರ ಸಾಮಗ್ರಿಗಳಿಗಾಗಿ 18 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಸಾರ್ವಜನಿಕ ಸಭೆಗಳನ್ನು ನಡೆಸಲು 4.85 ಕೋಟಿ ರೂ. ಮತ್ತು ಸ್ಟಾರ್ ಪ್ರಚಾರಕರ ವೆಚ್ಚಕ್ಕಾಗಿ 37,104 ರೂ.ಗಳನ್ನು ಖರ್ಚು ಮಾಡಿದೆ.

    ಗ್ಯಾರಂಟಿ ಕಾರ್ಡ್‌ಗಳನ್ನು ಮುದ್ರಿಸಲು 2.79 ಕೋಟಿ ರೂ., ಲೈವ್ ಸ್ಟ್ರೀಮಿಂಗ್ ಕಾರ್ಯಕ್ರಮಗಳಿಗಾಗಿ 20.11 ಲಕ್ಷ ರೂ., ಪತ್ರಿಕಾಗೋಷ್ಠಿಗಳಿಗಾಗಿ 33,500 ರೂ.ಗಳನ್ನು ಖರ್ಚು ಮಾಡಿದೆ.

    ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ AIMIM ತನ್ನ ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ಮುದ್ರಿಸಲು ಕೇವಲ 1.86 ಲಕ್ಷ ರೂ.ಗಳನ್ನು ಖರ್ಚು ಮಾಡಿದರೆ, ಸಿಪಿಐ(ಎಂ) ತನ್ನ ಇಬ್ಬರು ಅಭ್ಯರ್ಥಿಗಳಿಗೆ 3.20 ಲಕ್ಷ ರೂ.ಗಳನ್ನು ನೀಡಿದೆ.

    ಸಿಪಿಐ ತನ್ನ ಅಭ್ಯರ್ಥಿಗಳಲ್ಲಿ ಒಬ್ಬರಿಗೆ 5,000 ರೂ.ಗಳನ್ನು ಮತ್ತು ಇನ್ನೊಬ್ಬರಿಗೆ 15,000 ರೂ.ಗಳನ್ನು ನೀಡಿದೆ. ಸಿಪಿಐ(ಎಂಎಲ್)ಎಲ್ ಅಭ್ಯರ್ಥಿಗಳೇ ಪ್ರಚಾರ ನಡೆಸುತ್ತಿದ್ದರಿಂದ ಪ್ರಚಾರಕ್ಕೆ ಯಾವುದೇ ವೆಚ್ಚ ಮಾಡಲಿಲ್ಲ. ಬಿಎಸ್‌ಪಿ ಯಾವುದೇ ಅಭ್ಯರ್ಥಿಗೆ ಹಣಕಾಸು ನೆರವು ನೀಡದೇ ಪ್ರಚಾರಕ್ಕೆ 1.79 ಕೋಟಿ ರೂ. ಖರ್ಚು ಮಾಡಿದೆ.

    ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಒಂದು ಸ್ಥಾನದಲ್ಲಿ ಸ್ಪರ್ಧಿಸಿದ್ದ ಎಲ್‌ಜೆಪಿ (ರಾಮ್ ವಿಲಾಸ್) ಚುನಾವಣೆಗೆ ಸಂಬಂಧಿಸಿದ ಕಚೇರಿ ವೆಚ್ಚವಾಗಿ 39,770 ರೂ. ಖರ್ಚು ಮಾಡಿರುವುದಾಗಿ ಹೇಳಿದೆ.

  • ಮೂವರು ಆಪ್‌ ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ – ದೆಹಲಿಯಲ್ಲಿ ಟ್ರಿಪಲ್‌ ಎಂಜಿನ್‌ ಸರ್ಕಾರ ಬರುತ್ತಾ?

    ಮೂವರು ಆಪ್‌ ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ – ದೆಹಲಿಯಲ್ಲಿ ಟ್ರಿಪಲ್‌ ಎಂಜಿನ್‌ ಸರ್ಕಾರ ಬರುತ್ತಾ?

    ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ (Delhi Election) ಸೋತ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷದ (Aam Admi Party) ಮೂವರು ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಅನಿತಾ ಬಸೋಯಾ, ನಿಖಿಲ್ ಚಪ್ರಾಣ , ಧರಂವೀರ್ ಅವರು ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ. ಮೂವರ ಜೊತೆ ಮಾಜಿ ಆಪ್‌ ಜಿಲ್ಲಾ ಅಧ್ಯಕ್ಷ ಸಂದೀಪ್‌ ಸೇರ್ಪಡೆಯಾಗಿದ್ದಾರೆ.

    ಈ ಮೂವರು ಅಲ್ಲದೇ ಇನ್ನು ಕೆಲವು ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಮುಂದಿನ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮೇಯರ್‌ ಚುನಾವಣೆಯನ್ನು ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ. 14 ರ ಪೈಕಿ 10 ಶಾಸಕರು ಮತದಾನ ಹಕ್ಕನ್ನು ಹೊಂದಿರುವ ಕಾರಣ ಮೇಯರ್‌ ಚುನಾವಣೆಯನ್ನು ಬಿಜೆಪಿ ಗೆಲ್ಲಬಹದು ಎನ್ನಲಾಗುತ್ತಿದೆ. ಇದನ್ನೂ ಓದಿ: ಶೀಷ್ ಮಹಲ್ ವಿವಾದ; ನವೀಕರಣ, ಐಷಾರಾಮಿ ವೆಚ್ಚದ ವಿವರವಾದ ತನಿಖೆಗೆ ಆದೇಶಿಸಿದ ಕೇಂದ್ರ ಜಾಗೃತ ಆಯೋಗ

    ದೆಹಲಿಯಲ್ಲಿ ಬರುತ್ತಾ ಟ್ರಿಪಲ್‌ ಎಂಜಿನ್‌ ಸರ್ಕಾರ?
    ಮಾರ್ಚ್‌ನಲ್ಲಿ ದೆಹಲಿಯಲ್ಲಿ ಮೇಯರ್‌ ಚುನಾವಣೆ ನಡೆಯಲಿದೆ. ಈ ಚುನಾವಣೆ ಗೆದ್ದರೆ ರಾಜಧಾನಿಯಲ್ಲಿ ಟ್ರಿಪಲ್‌ ಎಂಜಿನ್‌ ಸರ್ಕಾರ ಅಧಿಕಾರಕ್ಕೆ ಬಂದಂತೆ ಆಗುತ್ತದೆ.

    ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ, ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮೇಯರ್‌ ಚುನಾವಣೆ ಗೆದ್ದರೆ ಮಹಾನಗರ ಪಾಲಿಕೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ.

     

  • ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿಗೆ ಲಾಭ – ಸಚಿವ ಚಲುವರಾಯಸ್ವಾಮಿ

    ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿಗೆ ಲಾಭ – ಸಚಿವ ಚಲುವರಾಯಸ್ವಾಮಿ

    ಮಂಡ್ಯ: ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿ ಲಾಭ ಪಡೆದಿದೆ ಅಷ್ಟೇ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಹೇಳಿದರು.

    ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ವಿಚಾರವಾಗಿ, ದೆಹಲಿ ಫಲಿತಾಂಶದಲ್ಲಿ ವಿಶೇಷ ಏನಿಲ್ಲ. ಕೇಜ್ರಿವಾಲ್ ಇಂಡಿಯಾ ಒಕ್ಕೂಟದ ಜೊತೆ ಹೋಗಿದ್ದರೆ ಬಿಜೆಪಿಗೆ ಗೆಲ್ಲುವ ಅವಕಾಶ ಇರಲಿಲ್ಲ. ಆದರೆ ಕೇಜ್ರಿವಾಲ್ ಸ್ವಲ್ಪ ದುಡುಕಿ ನಿರ್ಧಾರ ಮಾಡಿದರು. ಹೀಗಾಗಿ ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿ ಲಾಭ ಪಡೆದಿದೆ ಎಂದರು.ಇದನ್ನೂ ಓದಿ: ಸೋಲು ಒಪ್ಕೋತೀವಿ ಆದ್ರೆ ಇವಿಎಂ ಮೇಲೆ ಅನುಮಾನ ಇದೆ: ಶಿವರಾಜ್ ತಂಗಡಗಿ

    ರಾಜ್ಯ ಬಜೆಟ್ ವಿಚಾರ:
    ಕಳೆದ ಬಾರಿಯೂ ಕೃಷಿ ಇಲಾಖೆಗೆ ಹೊಸ ಕಾರ್ಯಕ್ರಮಗಳ ಮೂಲಕ ಉತ್ತೇಜನ ನೀಡಿದ್ದರು. ಈ ಬಾರಿಯೂ ಉತ್ತಮ ಕಾರ್ಯಕ್ರಮಗಳು ಸಿಗುವ ನಿರೀಕ್ಷೆ ಇದೆ. ಇನ್ನೂ ಸಚಿವಾಕಾಂಕ್ಷಿಗಳಿಗೆ ನಿಗಮ ಮಂಡಳಿ ನೀಡಿ ಸಮಾಧಾನಪಡಿಸಿರುವ ವಿಚಾರವಾಗಿ, ಸಚಿವಾಕಾಂಕ್ಷಿಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ. ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಛೇರ್ಮನ್ ಒಳ್ಳೆಯ ಹುದ್ದೆಯಾಗಿದ್ದು, ರಾಜ್ಯಾದ್ಯಂತ ಕೆಲಸ ಮಾಡಲು ಉತ್ತಮ ಅವಕಾಶವಿದೆ. ನರೇಂದ್ರ ಸ್ವಾಮಿಯವರು ಎಂಜಿನಿಯರ್ ಆಗಿದ್ದರಿಂದ ಅವಕಾಶ ಸಿಕ್ಕಿದೆ ಎಂದರು.

    ಮಂಡ್ಯ ಮಿಮ್ಸ್ ಸಮಸ್ಯೆಯ ಆಗರ:
    ಮಿಮ್ಸ್‌ನಲ್ಲಿ (MIMS) ತುಂಬಾ ಸಮಸ್ಯೆ ಇದೆ. ಹೀಗಾಗಿ ಡಿಸಿ ಮೂಲಕ ಸಮಸ್ಯೆಗಳ ಪಟ್ಟಿ ಮಾಡಿಸಲಾಗಿದೆ. ಮಿಮ್ಸ್‌ಗೆ ಮೇಜರ್ ಸರ್ಜರಿ ಆಗಬೇಕು. ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಶೀಘ್ರವೇ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

    ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೇರಿದೆ. ಆದ್ರೆ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಪ್ ಸೋಲು ಕಂಡಿದ್ದರೆ, `ಕೈ’ ಪಾಳಯ ಸತತ 3ನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ.ಇದನ್ನೂ ಓದಿ: ಡಿಬಾಸ್ ಫ್ಯಾನ್ಸ್‌ಗೆ ಸಿಹಿಸುದ್ದಿ- ಫೆ.16ರಂದು ರಿಲೀಸ್ ಆಗಲಿದೆ ‘ಡೆವಿಲ್’ ಚಿತ್ರದ ಟೀಸರ್

     

  • ಸೋಲು ಒಪ್ಕೋತೀವಿ ಆದ್ರೆ ಇವಿಎಂ ಮೇಲೆ ಅನುಮಾನ ಇದೆ: ಶಿವರಾಜ್ ತಂಗಡಗಿ

    ಸೋಲು ಒಪ್ಕೋತೀವಿ ಆದ್ರೆ ಇವಿಎಂ ಮೇಲೆ ಅನುಮಾನ ಇದೆ: ಶಿವರಾಜ್ ತಂಗಡಗಿ

    ಕೊಪ್ಪಳ: ಸೋಲನ್ನ ಒಪ್ಕೋತೀವಿ ಆದ್ರೆ ಈಗಲೂ ನಮಗೆ ಇವಿಎಂ (EVM) ಮೇಲೆ ಅನುಮಾನ ಇದೆ ಎಂದು ಸಚಿವ ಶಿವರಾಜ ತಂಗಡಗಿ (Shivaraj Tangadagi) ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

    ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ಕುರಿತು ಕನಕಗಿರಿಯಲ್ಲಿ (Kanakagiri) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ತಮಗೆ ಬೇಕಾದ ಕಡೆಯಲ್ಲಿ ಇವಿಎಂ ಮೂಲಕ ಗೆಲ್ಲುತ್ತಾರೆ. ಅವರು ಇವಿಎಂನಿಂದಲೇ ಗೆಲ್ಲೋದು. ಬೇರೆ ಯಾವುದರಿಂದಲೂ ಗೆಲ್ಲಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಮೋದಿ ಅಮೆರಿಕ ಪ್ರವಾಸದ ಬಳಿಕವೇ ದೆಹಲಿಯಲ್ಲಿ ಸರ್ಕಾರ ರಚನೆ?

    ಮಹಾರಾಷ್ಟ್ರ ಚುನಾವಣೆಯ ಸಮಯದಲ್ಲೂ ಹೀಗೆ ಆಗಿದೆ. ಅದರ ಬಗ್ಗೆ ರಾಹುಲ್ ಗಾಂಧಿಯವರು ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ತೊಗರಿ ಬೆಳೆಗಾರರಿಗೆ ಸಿಹಿ ಸುದ್ದಿ – ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯದಿಂದ ಪ್ರೋತ್ಸಾಹ ಧನ

  • ಯಾರಾಗುತ್ತಾರೆ ದೆಹಲಿ ಸಿಎಂ? ರೇಸ್‌ನಲ್ಲಿ ಯಾರಿದ್ದಾರೆ?

    ಯಾರಾಗುತ್ತಾರೆ ದೆಹಲಿ ಸಿಎಂ? ರೇಸ್‌ನಲ್ಲಿ ಯಾರಿದ್ದಾರೆ?

    ನವದೆಹಲಿ: ದೇಶವನ್ನು ಸುದೀರ್ಘ ಕಾಲ ಪಾಲನೆ ಮಾಡಿದ್ದ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ಗೆಲುವಿನ ಪಥದಲ್ಲಿ ಮುನ್ನಡೆಯುತ್ತಿರುವ ಬಿಜೆಪಿಗೆ ದಕ್ಷಿಣ ರಾಜ್ಯಗಳ ಜೊತೆಗೆ ದೆಹಲಿ ಅಸೆಂಬ್ಲಿ ಕೂಡ ಇಷ್ಟು ದಿನ ಕಬ್ಬಿಣದ ಕಡಲೆಯಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪರ ನಿಂತರೂ ಅಸೆಂಬ್ಲಿ ಚುನಾವಣೆ ವಿಚಾರಕ್ಕೆ ಬಂದರೆ ಕಳೆದ 25 ವರ್ಷದಿಂದ ಕೇಸರಿ ಪಕ್ಷವನ್ನು ದೂರ ಇಟ್ಟಿದ್ರು. ಆದ್ರೆ ಈ ಬಾರಿ ದೆಹಲಿ ಗದ್ದುಗೆ ಹಿಡಿಯಲು ಕಮಲ ನಾಯಕರು ಹೂಡಿದ ತಂತ್ರ ಫಲಿಸಿದೆ.

    ದೆಹಲಿ ಪೀಠದಲ್ಲಿ ಕೇಸರಿ ಪತಾಕೆ ಹಾರಿದೆ. ಬಿಜೆಪಿಯ 27 ವರ್ಷಗಳ ಸುದೀರ್ಘ ನಿರೀಕ್ಷಣೆ ಫಲಿಸಿದೆ. ಆಪ್ ಹ್ಯಾಟ್ರಿಕ್ ಆಸೆಗೆ ತಣ್ಣೀರು ಎರಚಿದ ಕಮಲ ಪಕ್ಷ ಗೆಲುವಿನ ನಗಾರಿ ಬಾರಿಸಿದೆ. ಆಪ್ ಜಗಜಟ್ಟಿಗಳನ್ನು ಮಕಾಡೆ ಮಲಗಿಸಿ ಪ್ರಚಂಡ ಗೆಲುವು ಕಂಡಿದೆ. ಮತ ಎಣಿಕೆ ಆರಂಭದಿಂದಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ಸುಲಭವಾಗಿ ಮ್ಯಾಜಿಕ್ ಸಂಖ್ಯೆ ದಾಟಿತು.

    ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಲಿಲ್ಲ. ಕಾಂಗ್ರೆಸ್ ಹ್ಯಾಟ್ರಿಕ್ ಶೂನ್ಯ ಸಂಪಾದನೆ ಮಾಡಿತು. ಈ ಬೆನ್ನಲ್ಲೇ ದೆಹಲಿ ಸಚಿವಾಲಯವನ್ನು ಸೀಜ್ ಮಾಡಿ ಲೆಫ್ಟಿನೆಂಟ್‌ ಗವರ್ನರ್‌ ಆದೇಶ ಹೊರಡಿಸಿದರು. ಅನುಮತಿ ಇಲ್ಲದೇ ಯಾವುದೇ ಕಡತ ಮುಟ್ಟದಂತೆ ಆದೇಶ ನೀಡಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಅಯೋಧ್ಯೆ ಸೋಲಿನ ಸೇಡನ್ನು ತೀರಿಸಿದ ಬಿಜೆಪಿ

    ಯಾರಾಗುತ್ತಾರೆ ಸಿಎಂ?
    ದೆಹಲಿ ಗದ್ದುಗೆಯನ್ನು ಬಿಜೆಪಿ ಗೆದ್ದಾಗಿದೆ. ಈಗ ಮುಖ್ಯಮಂತ್ರಿ ಯಾರಾಗಬಹುದು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಸಿಎಂ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಣಯವೇ ಫೈನಲ್. ಮುಖ್ಯಮಂತ್ರಿ ಆಯ್ಕೆ ನಮಗೆ ದೊಡ್ಡ ಸಮಸ್ಯೆ ಅಲ್ಲ ಅದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ತಿಳಿಸಿದ್ದಾರೆ.

    ಮುಂದಿನ ಒಂದು ವಾರದೊಳಗೆ ಸಿಎಂ ಆಯ್ಕೆ ಆಗಬಹುದು ಎನ್ನಲಾಗಿದೆ. ಜೈಂಟ್ ಕಿಲ್ಲರ್ ಪರ್ವೇಶ್ ವರ್ಮಾ ಅವರು ಅಮಿತ್‌ಶಾರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿದ್ದಾರೆ.  ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

    ಪರ್ವೇಶ್ ವರ್ಮಾ
    ಕೇಜ್ರಿವಾಲ್ ಸೋಲಿಸಿದ ದೈತ್ಯ. ಮಾಜಿ ಸಿಎಂ ಸಾಹೀಬ್ ಸಿಂಗ್ ವರ್ಮಾ ಪುತ್ರ. ಜಾಟರ ಪ್ರಭಾವಿ ನಾಯಕ ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣ: ಪ್ರಿಯಾಂಕಾ ಜಾರಕಿಹೊಳಿ

    ವಿಜೇಂದರ್ ಗುಪ್ತಾ
    ಪಕ್ಷದ ಹಿರಿಯ ನಾಯಕ. 2015, 2020ರಲ್ಲಿ ಆಪ್ ಹವಾ ನಡುವೆಯೂ ಗೆದ್ದಿದ್ದರು. ವಿಪಕ್ಷ ನಾಯಕನಾಗಿ, ಪಕ್ಷದ ಅಧ್ಯಕ್ಷರಾಗಿ ಸೇವೆ.

     

    ಸತೀಶ್ ಉಪಾಧ್ಯಾಯ್
    ಮೊದಲ ಬಾರಿ ಸ್ಪರ್ಧಿಸಿ ಮಾಳವೀಯ ನಗರದಿಂದ ಆಯ್ಕೆಯಾಗಿದ್ದಾರೆ. ಮೂಲತಃ ಉದ್ಯಮಿಯಾಗಿದ್ದಾರೆ.

    ವೀರೇಂದ್ರ ಸಚ್‌ದೇವ್
    ಹಾಲಿ ಬಿಜೆಪಿ ಅಧ್ಯಕ್ಷ. ಕಿಂಗ್ ಮೇಕರ್ ಅಂದ್ರೂ ತಪ್ಪಾಗಲಾರದು. ಚುನಾವಣೆಯಲ್ಲಿ ಸ್ಪರ್ಧಿಸದೇ ಆಪ್ ತಂತ್ರಗಳಿಗೆ ಗಟ್ಟಿ ಕೌಂಟರ್ ನೀಡಿದವರು.

    ದುಷ್ಯಂತ್ ಕುಮಾರ್ ಗೌತಮ್
    ಕರೋಲ್‌ಬಾಗ್‌ನಲ್ಲಿ ಸೋತಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪ್ರಮುಖ ದಲಿತ ನಾಯಕರಾಗಿದ್ದಾರೆ.

     

  • ಬಿಜೆಪಿಯನ್ನು ಗೆಲ್ಲಿಸಿದ ರಾಹುಲ್‌ಗೆ ಅಭಿನಂದನೆಗಳು: ಕೆ.ಟಿ ರಾಮ್ ರಾವ್

    ಬಿಜೆಪಿಯನ್ನು ಗೆಲ್ಲಿಸಿದ ರಾಹುಲ್‌ಗೆ ಅಭಿನಂದನೆಗಳು: ಕೆ.ಟಿ ರಾಮ್ ರಾವ್

    ಹೈದರಾಬಾದ್: ಬಿಜೆಪಿಯನ್ನು (BJP) ಮತ್ತೊಮ್ಮೆ ಗೆಲ್ಲಿಸಿದ್ದಕ್ಕಾಗಿ ರಾಹುಲ್ ಗಾಂಧಿಯವರಿಗೆ (Rahul Gandhi) ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಆರ್‌ಎಸ್‌ನ ಹಾಲಿ ರಾಜ್ಯಾಧ್ಯಕ್ಷ ಕೆ.ಟಿ ರಾಮ್ ರಾವ್ (KT Rama Rao) ವ್ಯಂಗ್ಯವಾಡಿದ್ದಾರೆ.


    ತೆಲಂಗಾಣದಲ್ಲಿ ದೆಹಲಿ ಚುನಾವಣಾ (Delhi Election) ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. ಅವರು ಬಿಜೆಪಿಯನ್ನು ಸೋಲಿಸುವಲ್ಲಿ ರಾಹುಲ್ ಗಾಂಧಿಯವರು ಅಸಮರ್ಥರು ಎಂದು ದೆಹಲಿ ಚುನಾವಣಾ ಫಲಿತಾಂಶವು ಸಾಬೀತು ಮಾಡಿದೆ. ಅವರು ಸ್ವಂತ ಬಲದಿಂದಲೂ ಸಹ ಗೆಲ್ಲಲು ಸಾಧ್ಯವಿಲ್ಲ. ಅಲ್ಲದೆ ಇತರೇ ಸ್ಥಳೀಯ ಪಕ್ಷಗಳನ್ನು ದುರ್ಬಲಗೊಳಿಸಿ, ಪರೋಕ್ಷವಾಗಿ ಬಿಜೆಪಿಯ ಗೆಲುವಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

    ಬಿಜೆಪಿಯನ್ನು ಗೆಲ್ಲಿಸಿದಂತಹ ರಾಹುಲ್ ಗಾಂಧಿಯವರಿಗೆ ನಾನು ಅಭಿನಂದನೆ ಸಲ್ಲಿಸಲು ಇಚ್ಛಿಸುತ್ತೇನೆ. ಈ ಸಾಧನೆಯ ಬಗ್ಗೆ ಅವರಿಗೆ ಬಹಳ ಹೆಮ್ಮೆ ಇದೆ ಎಂದು ನಾನು ಭಾವಿಸುತ್ತೇನೆ ಎಂದು ವ್ಯಂಗ್ಯವಾಡಿದರು.

     

  • ದೆಹಲಿಯಲ್ಲಿ ಬಿಜೆಪಿ ಗೆಲುವು, ರಾಜ್ಯದ ಮುಂದಿನ ಚುನಾವಣೆಗೆ ದಿಕ್ಸೂಚಿ – ಆರ್.ಅಶೋಕ್

    ದೆಹಲಿಯಲ್ಲಿ ಬಿಜೆಪಿ ಗೆಲುವು, ರಾಜ್ಯದ ಮುಂದಿನ ಚುನಾವಣೆಗೆ ದಿಕ್ಸೂಚಿ – ಆರ್.ಅಶೋಕ್

    ಬೆಂಗಳೂರು: ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದು ಕರ್ನಾಟಕ ಬಿಜೆಪಿಗೆ ಶಕ್ತಿ ತುಂಬಿದಂತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ದೆಹಲಿ ಚುನಾವಣಾ ಫಲಿತಾಂಶವು ಮುಂದಿನ ಕರ್ನಾಟಕ, ತೆಲಂಗಾಣದ ಚುನಾವಣೆಗೆ ದಾರಿದೀಪವಾಗಲಿದೆ. ಇದು ದೇಶಕ್ಕೆ ಸಿಕ್ಕಿರುವ ಗೆಲುವು. ಡಿಕೆಶಿ ಗ್ಯಾರಂಟಿ ದೆಹಲಿಯಲ್ಲಿ ಠುಸ್ ಪಟಾಕಿ ಆಗಿದೆ ಎಂದು ವ್ಯಂಗ್ಯವಾಡಿದರು.ಇದನ್ನೂ ಓದಿ: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ಕರ್ನಾಟಕದಲ್ಲಿ 5 ಗ್ಯಾರಂಟಿ ಕೊಟ್ಟು ಅಭಿವೃದ್ಧಿ ಇಲ್ಲವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದೇ ಕೇಜ್ರಿವಾಲ್ 25 ಉಚಿತಗಳನ್ನು ನೀಡಿದ್ದರು. ಅವರ ಸ್ಥಿತಿ ಏನಾಗಿದೆ? ಎಂದು ಪ್ರಶ್ನಿಸಿದರು. ಇದು ದೇಶಕ್ಕೆ ದಿಕ್ಸೂಚಿ ಎಂದು ತಿಳಿಸಿದರು.

    ಇದೇ ವೇಳೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಮಾತನಾಡಿ, ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಸರ್ಕಾರ ಭ್ರಷ್ಟಾಚಾರಕ್ಕೆ ಬಲಿಯಾಗಿದೆ. ಬಿಜೆಪಿ ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿಚಾರದಲ್ಲಿ ಒಂದೇ ಒಂದು ಆಪಾದನೆಯನ್ನೂ ಹೊತ್ತಿಲ್ಲ. ಕರ್ನಾಟಕದಲ್ಲಿ ನಮ್ಮ ವಿರುದ್ಧ ಶೇ.40 ಕಮೀಷನ್, ಪೇ ಸಿಎಂ ಮತ್ತಿತರ ಆರೋಪ ಮಾಡಿ ಚುನಾವಣಾ ತಂತ್ರ ಹೆಣೆದಿದ್ದ ಕಾಂಗ್ರೆಸ್ಸಿನದು ದೆಹಲಿಯಲ್ಲಿ ಶೂನ್ಯ ಸಂಪಾದನೆಯಾಗಿದೆ. ಈಗ ಅವರು ಖಾತೆ ತೆರೆದಿಲ್ಲ. ಆದರೆ ಕ್ಯಾತೆ ತೆಗೆಯುವುದನ್ನು ಬಿಡುವುದಿಲ್ಲ ಎಂದು ತಿಳಿಸಿದರು.

    ಇನ್ನೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಅವರು ಮಾತನಾಡಿ, ಕೇಜ್ರಿವಾಲ್ ಪ್ರಾಮಾಣಿಕ ಅಲ್ಲ. ಭ್ರಷ್ಟ ಎಂಬುದು ಜನರಿಗೆ ಮನವರಿಕೆ ಆಗಿದೆ. ಸುಳ್ಳಿನ ಮುಖವಾಡ ಕಳಚಿಬಿದ್ದಿದೆ. ಕೇವಲ ನಕಾರಾತ್ಮಕ ಪ್ರಚಾರದಿಂದ ಚುನಾವಣೆ ಗೆಲ್ಲಲು ಅಸಾಧ್ಯ ಎಂದು ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಬೇಕಿದೆ. ಅಂಬೇಡ್ಕರರ ಸಂವಿಧಾನ, ಜನತೆಯ ಸಂವಿಧಾನ ಗೆದ್ದಿದೆ ಎಂದು ವಿಶ್ಲೇಷಿಸಿದರು.ಇದನ್ನೂ ಓದಿ: ದೆಹಲಿ ಚುನಾವಣೆಯಲ್ಲಿ ಸೋತ AAPಯನ್ನು ಕೌರವರಿಗೆ ಹೋಲಿಸಿದ ಸ್ವಾತಿ ಮಲಿವಾಲ್‌

  • ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

    ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

    ನವದೆಹಲಿ: ದೆಹಲಿ ಚುನಾವಣೆಯಲ್ಲಿ (Delhi Election) ಮುಸ್ಲಿಮ್‌ ಬಾಹುಳ್ಯ ಇರುವ ಮುಸ್ತಫಾಬಾದ್ಮುಸ್ತಫಾಬಾದ್ (Mustafabad) ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿದೆ.

    ಬಿಜೆಪಿಯ ಮೋಹನ್‌ ಸಿಂಗ್‌ ಬಿಶ್ತ್ (Mohan Singh Bisht) 17,578 ಮತಗಳಿಂದಿಂದ ಆಪ್‌ನ ಅದೀಲ್‌ ಅಹ್ಮದ್‌ ಖಾನ್‌ ವಿರುದ್ಧ ಜಯಗಳಿಸಿದ್ದಾರೆ. ಬಿಜೆಪಿಯ ಮೋಹನ್‌ ಸಿಂಗ್‌ ಬಿಶ್ತ್ 85,2015 ಮತಗಳನ್ನು ಪಡೆದರೆ ಆಪ್‌ನ ಅದೀಲ್‌ ಅಹ್ಮದ್‌ ಖಾನ್‌ 67,637 ಮತಗಳನ್ನು ಪಡೆದಿದ್ದಾರೆ.

    ಮಾಜಿ ಕೌನ್ಸಿಲರ್ ಮತ್ತು 2020 ರ ದೆಹಲಿ ಗಲಭೆ ಆರೋಪಿಯಾಗಿರುವ ತಾಹಿರ್ ಹುಸೇನ್‌ಗೆ (Md Tahir Hussain) ಅಸಾದುದ್ದೀನ್‌ ಓವೈಸಿಯ ಎಐಎಂಐಎಂ ಟಿಕೆಟ್‌ ನೀಡಿತ್ತು. ತಾಹಿರ್ ಹುಸೇನ್‌ 33,474 ಮತಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ಸೋಲಿಸಿ ತಾಯಿಯ ಸೋಲಿಗೆ ಸೇಡು ತೀರಿಸಿದ ಸಂದೀಪ್‌ ದೀಕ್ಷಿತ್‌

     

    ಮುಸ್ತಫಾಬಾದ್ ಕ್ಷೇತ್ರದಲ್ಲಿ 39.5% ಮುಸ್ಲಿಮ್‌ ಮತದಾರರಿದ್ದಾರೆ. ಅದೀಲ್‌ ಅಹ್ಮದ್‌ ಖಾನ್‌ ಮತ್ತು ತಾಹಿರ್ ಹುಸೇನ್‌ ಮಧ್ಯೆ ಮತಗಳು ಹಂಚಿ ಹೋಗಿದ್ದರಿಂದ ಮೋಹನ್‌ ಸಿಂಗ್‌ ಬಿಶ್ತ್ ಜಯಗಳಿಸಿದ್ದಾರೆ.

    2020ರ ಗಲಭೆಯಲ್ಲಿ ಈಶಾನ್ಯ ದೆಹಲಿಯ ಮುಸ್ತಫಾಬಾದ್ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿತ್ತು ಅಷ್ಟೇ ಅಲ್ಲದೇ ಕನಿಷ್ಠ 53 ಜನರು ಪ್ರಾಣ ಕಳೆದುಕೊಂಡಿದ್ದರು.

    2020ರ ಮುಸ್ತಫಾಬಾದ್ ಚುನಾವಣೆಯಲ್ಲಿ ಆಪ್‌ನ ಹಾಜಿ ಯೂನಿಸ್‌ ಅವರು 20 ಸಾವಿರಕ್ಕೂ ಹೆಚ್ಚು ಮತಗಳಿಂದ ಬಿಜೆಪಿಯ ಜಗದೀಶ್‌ ಪ್ರಧಾನ್‌ ಅವರನ್ನು ಸೋಲಿಸಿದ್ದರು.

    ಮೋಹನ್ ಸಿಂಗ್ ಬಿಶ್ತ್ 1998 ರಿಂದ ಕರವಾಲ್ ನಗರದ ಶಾಸಕರಾಗಿದ್ದರು. 2015 ರಲ್ಲಿ ಅವರು ಆಪ್‌ನ ಕಪಿಲ್‌ ಮಿಶ್ರಾ ವಿರುದ್ಧ ಸೋತಿದ್ದರು. 2020 ರಲ್ಲಿ ಕರವಾಲ್ ನಗರದಿಂದ ಗೆದ್ದು ಶಾಸಕರಾಗಿದ್ದರು. ಈ ಬಾರಿಯೂ ಅದೇ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದರು. ಆದರೆ ಬಿಜೆಪಿ ಟಿಕೆಟ್‌ ಅನ್ನು ಕಪಿಲ್‌ ಮಿಶ್ರಾಗೆ ನೀಡಿತ್ತು.

    ಟಿಕೆಟ್‌ ಕೈಪ್ಪಿದ್ದಕ್ಕೆ ಬಿಶ್ತ್ ಅಸಮಾಧಾನಗೊಂಡಾಗ ಬಿಜೆಪಿ ಹೈಕಮಾಂಡ್‌ ಮಧ್ಯಪ್ರವೇಶಿಸಿ ಪಹಾಡಿ ಮತದಾರರನ್ನು ಗಮನದಲ್ಲಿಟ್ಟುಕೊಂಡು ಮುಸ್ತಫಾಬಾದ್‌ ಟಿಕೆಟ್‌ ನೀಡಿತ್ತು.

  • ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ: ಕೇಜ್ರಿವಾಲ್‌

    ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ: ಕೇಜ್ರಿವಾಲ್‌

    ನವದೆಹಲಿ: ಜನರ ಆದೇಶವನ್ನು ನಾವು ಅತ್ಯಂತ ನಮ್ರತೆಯಿಂದ ಸ್ವೀಕರಿಸುತ್ತೇವೆ ಎಂದು ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

    ದೆಹಲಿ ಚುನಾವಣೆಯಲ್ಲಿ ಸೋತ ಬಳಿಕ ಮಾತನಾಡಿದ ಅವರು, ಈ ಗೆಲುವಿಗಾಗಿ ನಾನು ಬಿಜೆಪಿಯನ್ನು ಅಭಿನಂದಿಸುತ್ತೇನೆ. ಚುನಾವಣೆಯಲ್ಲಿ ಅವರು ನೀಡಿದ ಎಲ್ಲಾ ಭರವಸೆಗಳನ್ನುಈಡೇರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

    ಕಳೆದ 10 ವರ್ಷಗಳಲ್ಲಿ ನಾವು ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ನಾವು ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುವುದರ ಜೊತೆಗೆ ಜನರ ನಡುವೆಯೇ ಇದ್ದು ಅವರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

  • Delhi Election 2025 Results | ಅರವಿಂದ್‌ ಕೇಜ್ರಿವಾಲ್‌ಗೆ ಸೋಲು

    Delhi Election 2025 Results | ಅರವಿಂದ್‌ ಕೇಜ್ರಿವಾಲ್‌ಗೆ ಸೋಲು

    ನವದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಸಾಹಿಬ್‌ ಸಿಂಗ್‌ ವಿರುದ್ಧ ಸೋಲು ಕಂಡಿದ್ದಾರೆ. ಈ ಮೂಲಕ ಸತತ 3ನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗುವ ಕನಸು ನುಚ್ಚುನೂರಾಗಿದೆ.

    ಕಳೆದ 2 ಚುನಾವಣೆಗಳಲ್ಲೂ ನವದೆಹಲಿ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದ ಕೇಜ್ರಿವಾಲ್‌ ಸತತ 2 ಬಾರಿ ಸಿಎಂ ಆಗಿದ್ದರು. 3ನೇ ಬಾರಿಯೂ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಪರ್ವೇಶ್‌ ವಿರುದ್ಧ 3,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಇದನ್ನೂ ಓದಿ: ನಮ್ಮನ್ನು ಸೋಲಿಸಲು ಮೋದಿಗೆ ಇನ್ನೊಂದು ಜನ್ಮ ಬೇಕು ಎಂದಿದ್ದ ಕೇಜ್ರಿವಾಲ್‌ಗೆ ಸೋಲು

    ಸತತ 3ನೇ ಬಾರಿಗೆ ನವದೆಹಲಿ ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಿದ ಕೇಜ್ರಿವಾಲ್‌ ಒಟ್ಟು 25,999 ಮತಗಳನ್ನು ಪಡೆದಿದ್ದರೆ, ಸಂದೀಪ್‌ ದೀಕ್ಷಿತ್‌ 4,568 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಒಟ್ಟು 30,088 ಮತಗಳನ್ನು ಪಡೆದುಕೊಂಡಿದ್ದು 4,089 ಮತಗಳಿಂದ ಗೆದ್ದು ಬೀಗಿದ್ದಾರೆ. ಕೇಜ್ರಿವಾಲ್‌, ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಸಾಹಿಬ್‌ ಸಿಂಗ್‌ ವಿರುದ್ಧ 4,089 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

    ಮದ್ಯ ನೀತಿ ಹಗರಣದಲ್ಲಿ ಭ್ರಷ್ಟಾಚಾರಾ ಆರೋಪದ ಮೇಲೆ ಜೈಲು ಸೇರಿದ ಕೇಜ್ರಿವಾಲ್‌ ರಾಜೀನಾಮೆ ಕೊಡಲು ಹಿಂದೇಟು ಹಾಕಿದರು. ಈ ವೇಳೆ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಸೇರಿ ಹಲವು ನಾಯಕರು ಜೈಲುಪಾಲಾದರು. ಇನ್ನೇನು ಆಪ್‌ ಬಹುತೇಕ ನಾಮಾವಶೇಷವಾಯ್ತು ಅನ್ನೋ ಹೊತ್ತಿಗೆ ಜೈಲಿನಿಂದ ಕೇಜ್ರಿವಾಲ್‌ ಬಿಡುಗಡೆಯಾದರು. ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಜನಾದೇಶ ಪಡೆದು ಆಯ್ಕೆಯಾದ ಬಳಿಕವೇ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವುದಾಗಿ ಶಪಥಗೈದಿದ್ದರು.

    ಈ ನಡುವೆ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲಿನ ದೌರ್ಜನ್ಯ ಪ್ರಕರಣ ಸಹ ಸಂಕಷ್ಟ ತಂದೊಡ್ಡಿತು. ಪ್ರತಿ ಹಂತದಲ್ಲೂ ಲೆಪ್ಟಿನೆಂಟ್ ಗರ್ವನರ್ ಜೊತೆಗೆ ಸಂಘರ್ಷ ನಡೆಯುತ್ತಲೇ ಇತ್ತು. ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಶೀಷ್ ಮಹಲ್ ಆರೋಪ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಖುದ್ದು ಪ್ರಧಾನಿ ಮೋದಿ ಅವರೇ ಶೀಷ್‌ಮಹಲ್‌ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಅಕ್ರಮ ಮಾಡಿರುವುದಾಗಿ ಆರೋಪಿಸಿದ್ದರು. ಇದನ್ನೂ ಓದಿ: ದೆಹಲಿ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾಗೆ ಹೀನಾಯ ಸೋಲು

    ಹೀಗೆ ಆಪ್ ಸಂಚಾಲಕ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸಾಲು ಸಾಲು ಸವಾಲು ಎದುರಿಸಬೇಕಾಯ್ತು. ಕೊನೆಗೆ ಜನರಿಂದ ಮಾನ್ಯತೆ ಪಡೆಯದೇ ಮತ್ತೆ ಸಿಎಂ ಕುರ್ಚಿ ಮೇಲೆ ಕೂರಲ್ಲ ಎಂದು ಶಪಥ ಮಾಡಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಇದೀಗ ಈ ಹೋರಾಟದಲ್ಲಿ ಕೇಜ್ರಿವಾಲ್‌ ಸೋಲು ಕಂಡಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ಯಮುನಾ ನದಿಗೆ ಕಳಂಕ ತಂದಿದ್ದೇ ಆಪ್‌ ಸೋಲಿಗೆ ಕಾರಣ: ಆರ್‌. ಅಶೋಕ್‌