Tag: ದೆಹಲಿ ಚಲೋ

  • ಕೇಂದ್ರದ ವಿರುದ್ಧ ಅನುದಾನ ಸಂಘರ್ಷ ತೀವ್ರ – ಫೆ.7 ರಂದು ದೆಹಲಿಯಲ್ಲಿ ರಾಜ್ಯ ಸರ್ಕಾರದಿಂದ ಪ್ರತಿಭಟನೆ

    ಕೇಂದ್ರದ ವಿರುದ್ಧ ಅನುದಾನ ಸಂಘರ್ಷ ತೀವ್ರ – ಫೆ.7 ರಂದು ದೆಹಲಿಯಲ್ಲಿ ರಾಜ್ಯ ಸರ್ಕಾರದಿಂದ ಪ್ರತಿಭಟನೆ

    – ಕರ್ನಾಟಕಕ್ಕೆ ತೆರಿಗೆ ಪಾಲು ಕಡಿಮೆ ಆಗಿದ್ಯಾಕೆ?
    – 15ನೇ ಹಣಕಾಸು ಆಯೋಗದ `ಅನುದಾನ’ ಲೆಕ್ಕ ಏನು?

    ಬೆಂಗಳೂರು: ಸಾರ್ವತ್ರಿಕ ಚುನಾವಣೆ ಸನಿಹದಲ್ಲಿ ಅನುದಾನ ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಕರ್ನಾಟಕದ ಸರ್ಕಾರದ ನಡುವಣ ಸಂಘರ್ಷ ಮಹತ್ವದ ಘಟ್ಟ ತಲುಪಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ದೆಹಲಿಯ ಜಂತರ್‌ಮಂತರ್‌ನಲ್ಲಿ (Delhi Chalo) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ಎಂಎಲ್‌ಸಿಗಳು, ಸಂಸದರು ಪ್ರತಿಭಟನೆ ನಡೆಸಲಿದ್ದಾರೆ.

    ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿ ಎಲ್ಲಾ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿ-ಅಮಿತ್ ಶಾಗೆ ಕಿವಿ ಕೇಳಲ್ಲ, ನಿರ್ಮಲಾ ಸೀತಾರಾಮನ್‌ಗೆ ಕಣ್ಣು ಕಿವಿ ಎರಡೂ ಇಲ್ಲ: ರಾಮಲಿಂಗಾ ರೆಡ್ಡಿ

    ಕಾಂಗ್ರೆಸ್ ಶಾಸಕರೆಲ್ಲಾ ತಮ್ಮ ಸ್ವಂತ ಖರ್ಚಿನಲ್ಲಿ ದೆಹಲಿ ಕಡೆ ಮುಖ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂಜೆ ಭೋಪಾಲ್‌ಗೆ ತೆರಳಿದ್ದು, ನಾಳೆ ಬೆಳಗ್ಗೆ ದೆಹಲಿ ತಲುಪಲಿದ್ದಾರೆ. ಡಿಸಿಎಂ ನಿನ್ನೆಯೇ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. ಈ ಮಧ್ಯೆ, ಧರಣಿಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿರುವ ಬಿಜೆಪಿಗರನ್ನು ಕಾಂಗ್ರೆಸ್ಸಿಗರು ಕೆಣಕಲು ನೋಡಿದ್ದಾರೆ.

    ಅನುದಾನ ತಾರತಮ್ಯ ಖಂಡಿಸಿ ಕರ್ನಾಟಕ ಸರ್ಕಾರ ಬುಧವಾರ ದೆಹಲಿ ಚಲೋ ಹಮ್ಮಿಕೊಂಡ ಬೆನ್ನಲ್ಲೇ ದಕ್ಷಿಣದ ಉಳಿದ ರಾಜ್ಯಗಳು ಎದ್ದು ಕುಳಿತಿವೆ. ಕರ್ನಾಟಕದ ಹೋರಾಟವನ್ನು ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳು ಕೂಡ ಬೆಂಬಲಿಸಿವೆ. ಗುರುವಾರ ದೆಹಲಿಯಲ್ಲಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಜಂಟಿಯಾಗಿ ಕಪ್ಪು ಪಟ್ಟಿ ಧರಿಸಿ ಕೇಂದ್ರದ ವಿರುದ್ಧ ರಣಕಹಳೆ ಮೊಳಗಿಸಲಿವೆ. ಮತ್ತೊಂದೆಡೆ ಅನುದಾನ ಅನ್ಯಾಯ ಖಂಡಿಸಿ ಟಿಎಂಸಿ ಕೂಡ ಕೇಂದ್ರದ ವಿರುದ್ಧ ಕೋಲ್ಕತ್ತಾದಲ್ಲಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸಿದೆ. ಫೆಬ್ರವರಿ 13 ರವರೆಗೂ ಈ ಪ್ರತಿಭಟನೆ ಮುಂದುವರೆಸಲಿದೆ. ಇದನ್ನೂ ಓದಿ: ಕೇಂದ್ರವನ್ನು ರಾಜ್ಯ ಸರ್ಕಾರದವರು ದೂರುವುದು ಸರಿಯಲ್ಲ, ಅಗತ್ಯವಿದ್ದಾಗಲೆಲ್ಲ ನೆರವು ನೀಡಿದೆ: ಪ್ರಜ್ವಲ್ ರೇವಣ್ಣ

    ರಾಜ್ಯಕ್ಕೆ ಅನುದಾನ ಕೇಳಿದರೆ ಹಣಕಾಸು ಆಯೋಗದ ಕಡೆ ವಿತ್ತ ಸಚಿವೆ ಬೆರಳು ಮಾಡುತ್ತಿದ್ದಾರೆ. ಹಾಗಾದರೆ, ರಾಜ್ಯಕ್ಕೆ 15ನೇ ಹಣಕಾಸು ಯೋಜನೆಯಡಿ ತೆರಿಗೆ ಪಾಲು, ಅನುದಾನ ಕಡಿತ ಆಗಿದ್ದು ಏಕೆ ಎಂಬ ವಿವರ ಇಲ್ಲಿದೆ.

    15ನೇ ಹಣಕಾಸು ಆಯೋಗದ `ಅನುದಾನ’ ಲೆಕ್ಕ
    * 2020-2026ರ ಅವಧಿಗೆ ಅನ್ವಯವಾಗುವ ಹಣ ಹಂಚಿಕೆ ಶಿಫಾರಸು
    * ಜನಸಂಖ್ಯೆ, ಭೂಪ್ರದೇಶ, ಅರಣ್ಯ, ಆದಾಯ ಅಂತರ, ತೆರಿಗೆ ಪರಿಗಣಿಸಿ ಅನುದಾನ ಹಂಚಿಕೆ
    * 2011ರ ಜನಗಣತಿಯನ್ನು ಮೂಲ ವರ್ಷವಾಗಿ ಪರಿಗಣಿಸಿ ತೆರಿಗೆ ಪಾಲು ಹಂಚಿಕೆ
    (ಈ ಹಿಂದಿನ ಎಲ್ಲಾ ಹಣಕಾಸು ಆಯೋಗಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ 1972ನೇ ಇಸವಿಯನ್ನು ಮೂಲ ವರ್ಷವಾಗಿ ಪರಿಗಣಿಸಿದ್ದವು)

    ಕರ್ನಾಟಕಕ್ಕೆ ತೆರಿಗೆ ಪಾಲು ಕಡಿತ ಆಗಿದ್ಯಾಕೆ?
    * ಜನಸಂಖ್ಯೆ ನಿಯಂತ್ರಣ ಇರುವ ಕಾರಣ ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳಿಗೆ ಕಡಿಮೆ ಪಾಲು
    * ತೆರಿಗೆ ಹಣ ಹಂಚಿಕೆಯಲ್ಲಿ ಕರ್ನಾಟಕಕ್ಕೆ 3.6%, ಕೇರಳಕ್ಕೆ 1.93%, ತಮಿಳುನಾಡಿಗೆ 4% ಪಾಲು
    * ಇದು 14ನೇ ಹಣಕಾಸು ಆಯೋಗದ ಶಿಫಾರಸುಗಳಿಗಿಂತ ರಾಜ್ಯಕ್ಕೆ 13,633 ಕೋಟಿಯಷ್ಟು ಕಡಿಮೆ
    (ರಾಜ್ಯದಿಂದ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುವ ಹಣ 4 ಲಕ್ಷ ಕೋಟಿ ರೂಪಾಯಿ)
    * ಜನಸಂಖ್ಯೆ ಹೆಚ್ಚಿರುವ ಕಾರಣ ಯುಪಿಗೆ 18%, ಬಿಹಾರಕ್ಕೆ 10% ತೆರಿಗೆ ಹಣದ ಪಾಲು

  • ಕೇಂದ್ರದ ವಿರುದ್ಧ ಮತ್ತೆ ಸಿಡಿದ ರೈತರು; ಫೆಬ್ರವರಿ 26 ಕ್ಕೆ ರೈತರಿಂದ ದೆಹಲಿ ಚಲೋ

    ಕೇಂದ್ರದ ವಿರುದ್ಧ ಮತ್ತೆ ಸಿಡಿದ ರೈತರು; ಫೆಬ್ರವರಿ 26 ಕ್ಕೆ ರೈತರಿಂದ ದೆಹಲಿ ಚಲೋ

    ಬೆಂಗಳೂರು: ದೆಹಲಿಯಲ್ಲಿ ಒಂದು ವರ್ಷ ಕಾಲ ಹೋರಾಟ ಮಾಡಿದ ರೈತರಿಗೆ 2021 ರ ಡಿಸೆಂಬರ್ 21 ರಂದು ಪ್ರಧಾನ ಮಂತ್ರಿಗಳು ನೀಡಿದ್ದ ಭರವಸೆ ಈಡೇರದ ಕಾರಣ ದೇಶಾದ್ಯಂತ ಮುಂದಿನ ಫೆಬ್ರವರಿ 26 ಕ್ಕೆ ದೆಹಲಿ ಚಲೋ (Delhi Chalo) ಮಾಡಲು ರೈತರು ತೀರ್ಮಾನಿಸಿದ್ದಾರೆ.

    ದೇಶದ ರೈತರ ಪ್ರಮುಖ 7 ಒತ್ತಾಯಗಳ ಬಗ್ಗೆ ‘ದೆಹಲಿ ಚಲೋ’ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾಜಕೀಯತರವಾಗಿ ರೈತರನ್ನ ಜಾಗೃತಿ ಮೂಡಿಸಲು ದೇಶಾದ್ಯಂತ ಕಿಸಾನ್ ಮಹಾ ಪಂಚಾಯತ್ ನಡೆಸಲಾಗುತ್ತಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ 6 ಕಿಸಾನ್ ಮಹಾ ಪಂಚಾಯತ್‌ಗಳನ್ನು ಒಡಿಸ್ಸಾದ ಭುವನೇಶ್ವರ, ಪಂಜಾಬಿನ ಲೂಧಿಯಾನ ಮತ್ತು ಮೊಗಾ, ಕೇರಳದ ಪಾಲಕ್ಕಾಡ್, ತಮಿಳುನಾಡಿನ ಚೆನ್ನೈ, ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗಿದೆ. ಮುಂಬರುವ ಒಂದೂವರೆ ತಿಂಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಇನ್ನೂ 14 ಕಿಸಾನ್ ಮಹಾ ಪಂಚಾಯತ್ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಹಿಜಬ್ ವಿವಾದದ ಬಗ್ಗೆ ಮಾತನಾಡದೆ ಸುಮ್ಮನೆ ಕೈ ಸನ್ನೆ ಮಾಡಿದ ಡಿ.ಕೆ.ಶಿವಕುಮಾರ್

    ದೆಹಲಿ ಚಲೋ ಕಾರ್ಯಕ್ರಮದ ಪ್ರಮುಖ ಒತ್ತಾಯಗಳು
    * ಡಾ. ಸ್ವಾಮಿನಾಥನ್ ವರದಿಯಂತೆ C2+50% ಸೂತ್ರದ ಪ್ರಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. MSP ಅನ್ನು ಖಾತರಿಪಡಿಸಲು ಕಾನೂನನ್ನು ಮಾಡಬೇಕು.
    * ದೇಶದ ಎಲ್ಲ ರೈತರನ್ನು ಸಂಪೂರ್ಣ ಕೃಷಿ ಸಾಲದಿಂದ ಋಣಮುಕ್ತರನ್ನಾಗಿಸಬೇಕು.
    * ಭೂಸ್ವಾಧೀನ ಕಾನೂನು 2013 ರಲ್ಲಿ ರಾಜ್ಯ ಸರ್ಕಾರಗಳು ಮಾಡಿದ ಬದಲಾವಣೆಗಳನ್ನು ತಕ್ಷಣವೇ ಹಿಂಪಡೆಯಬೇಕು. 70% ರೈತರ ಲಿಖಿತ ಅನುಮತಿ ಮತ್ತು ಯಾವುದೇ ಭೂಸ್ವಾಧೀನಕ್ಕೆ ಮೊದಲು ಬಡ್ಡಿದರ ಜೊತೆಗೆ 4 ಪಟ್ಟು ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಭೂ ಸ್ವಾಧೀನ ಕಾನೂನು 2013 ಅನ್ನು ಜಾರಿಗೊಳಿಸಬೇಕು.
    * ಎಲ್ಲಾ ಕೃಷಿ ಉತ್ಪನ್ನಗಳ ಆಮದು ಸುಂಕವನ್ನು ಹೆಚ್ಚಿಸಿ, ಕೃಷಿ ಉತ್ಪನ್ನಗಳ ಬೆಲೆ ಕುಸಿಯದಂತೆ ರಕ್ಷಿಸಬೇಕು. ಭಾರತ ಸರ್ಕಾರ ಡಬ್ಲ್ಯೂಟಿಒದಿಂದ ಹೊರಬರಬೇಕು. ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು. ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಯನ್ನು ನಿಲ್ಲಿಸಬೇಕು.
    * ವಿದ್ಯುತ್ ಮಂಡಳಿಗಳ ಖಾಸಗೀಕರಣ ಬೇಡ. ಕೃಷಿ ಪಂಪ್ಸೆಟ್‌ಗಳಿಗೆ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರ ನಿಲ್ಲಬೇಕು.
    * ಕೃಷಿ ಮತ್ತು ಚಿಲ್ಲರೆ ಸಣ್ಣ ಉದ್ಯಮಗಳಿಗೆ ಮಾತ್ರ ಮೀಸಲಿಡಬೇಕು. ಕೃಷಿಯಲ್ಲಿ ಎಫ್‌ಡಿಐ ಮತ್ತು ಇ-ಕಾಮರ್ಸ್ ಸೇರಿದಂತೆ ಚಿಲ್ಲರೆ ವ್ಯಾಪಾರದ ಎಲ್ಲಾ ಸ್ವರೂಪಗಳನ್ನು ನಿಷೇಧಿಸಲಾಗುವುದು. ಕೃಷಿ ಮತ್ತು ಚಿಲ್ಲರೆ ವ್ಯಾಪಾರದ ಕಾರ್ಪೊರೇಟೀಕರಣವನ್ನು ತಡೆಗಟ್ಟಲು ನೀತಿ ಮತ್ತು ಕಾನೂನು ಜಾರಿ ಮಾಡಬೇಕು.
    * 60 ವರ್ಷ ತುಂಬಿದ ರೈತರಿಗೆ ಪಿಂಚಣಿಯನ್ನು ಮಾಸಿಕ ಐದು ಸಾವಿರ ನಿಗದಿಪಡಿಸಬೇಕು. ಇದನ್ನೂ ಓದಿ: ಕಾಂಗ್ರೆಸ್‍ನ ಮೊದಲ ಅಧ್ಯಕ್ಷರೇ ಬ್ರಿಟಿಷರು, ಹಾಗಾದ್ರೆ ಕಾಂಗ್ರೆಸ್ಸಿಗರು ಬ್ರಿಟಿಷರ ಬೂಟು ನೆಕ್ಕಿದ್ರಾ? – ಆರ್.ಅಶೋಕ್ ಕೌಂಟರ್

    ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಕುರುಬೂರ್ ಶಾಂತಕುಮಾರ್, ಜಗಜೀತ್ ಸಿಂಗ್ ದಲ್ಲೆವಾಲ್ (ಪಂಜಾಬ್), ಕೆ.ವಿ.ಬಿಜು (ಕೇರಳ), ಅಭಿಮನ್ಯು ಕೋಹರ್ ಮತ್ತು ಲಖ್ವಿಂದರ್ ಸಿಂಗ್ ಔಲಾಖ್ (ಹರಿಯಾಣ), ಸಚಿನ್ ಮೊಹಾಪಾತ್ರ (ಒರಿಸ್ಸಾ), ಅರುಣ್ ಸಿನ್ಹಾ (ಬಿಹಾರ), ರವಿದತ್ ಸಿಂಗ್ (ಮಧ್ಯಪ್ರದೇಶ), ಶಂಕರ್ ದಾರೆಕರ್ (ಮಹಾರಾಷ್ಟ್ರ), ರಾಜ್ಯ ರೈತ ಸಂಘದ ವಿ.ಆರ್.ನಾರಾಯಣ ರೆಡ್ಡಿ, ರಾಜ್ಯ ಕಬ್ಬು ಬೆಳೆಗಾರ ಸಂಘದ ಬಸವರಾಜ್ ಪಾಟೀಲ್, ಎನ್.ಹೆಚ್.ದೇವಕುಮಾರ್, ಅತ್ತಳ್ಳಿ ದೇವರಾಜ್, ಬರಡನ್ಪುರ ನಾಗರಾಜ್, ಪರಶುರಾಮ್, ರಾಜೇಶ್, ಧರ್ಮರಾಜ್ ಉಪಸ್ಥಿತರಿದ್ದರು.

  • ರೈತರು, ಕೇಂದ್ರ ಸರ್ಕಾರವನ್ನು ಒಳಗೊಂಡ ಸಮಿತಿ ರಚಿಸಿ – ಸುಪ್ರೀಂ

    ರೈತರು, ಕೇಂದ್ರ ಸರ್ಕಾರವನ್ನು ಒಳಗೊಂಡ ಸಮಿತಿ ರಚಿಸಿ – ಸುಪ್ರೀಂ

    ನವದೆಹಲಿ: ರೈತರ ಪ್ರತಿಭಟನೆಗೆ ಸಂಬಧಿಸಿದಂತೆ ರೈತರು ಮತ್ತು ಕೇಂದ್ರ ಸರ್ಕಾರವನ್ನು ಒಳಗೊಂಡ ಸಮಿತಿಯನ್ನು ರಚಿಸಿ ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥ್ಯಗೊಳಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದೆ.

    ಪ್ರತಿಭಟನಾ ನಿರತ ರೈತರನ್ನು ಹೆದ್ದಾರಿಗಳಿಂದ ಕಳುಹಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಮುಖ್ಯನ್ಯಾಯಾಧೀಶ ಎಸ್.ಎ.ಬೊಬ್ಡೆ ನೇತೃತ್ವದ ಪೀಠದಲ್ಲಿ ನಡೆಯಿತು.

    ಈ ವೇಳೆ ರೈತ ಸಂಘಟನೆಗಳು ಮತ್ತು ಈ ಪ್ರತಿಭಟನೆಗೆ ಸಂಬಂಧಿಸಿದವರನ್ನು ಒಳಗೊಂಡ ಸಮಿತಿ ರಚನೆಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇದು ರಾಷ್ಟ್ರೀಯ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಇದು ಕೇವಲ ಸರ್ಕಾರ ಮಟ್ಟದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗುವಂತೆ ಕಾಣಿಸುತ್ತಿಲ್ಲ ಎಂದು ನ್ಯಾ. ಬೊಬ್ಡೆ ಅಭಿಪ್ರಾಯಪಟ್ಟರು.

    ರೈತರು ಮತ್ತು ಸರ್ಕಾರ ನಡುವಿನ ಮಾತುಕತೆ ಅಂತಿಮ ಹಂತಕ್ಕೆ ಬಂದಿಲ್ಲ. ಯಾವುದೇ ಒಮ್ಮತದ ನಿರ್ಣಯಕ್ಕೂ ಇದುವರೆಗೂ ಬರಲಾಗಿಲ್ಲ ಎಂದು ಕೇಂದ್ರದ ಪರ ಹಾಜರಾದ ತುಷಾರ್ ಮೆಹ್ತಾ ನ್ಯಾಯಾಲಯದ ಗಮನಕ್ಕೆ ತಂದರು. ಈ ಸಂಬಂಧ ಸುಪ್ರೀಂಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಉತ್ತರ ಕೇಳಿದೆ. ಅರ್ಜಿ ಸಂಬಂಧ ರೈತರಿಗೂ ತಮ್ಮ ವಾದ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿದ್ದು, ನಾಳೆ ಮತ್ತೆ ಅರ್ಜಿಯ ವಿಚಾರಣೆ ನಡೆಯಲಿದೆ.

    ರೈತರ ಧರಣಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಹಲವು ಪಿಐಎಲ್ ಗಳು ಸಲ್ಲಿಕೆಯಾಗಿವೆ. ರೈತರ ಪ್ರತಿಭಟನೆಯಿಂದ ದೇಶದ ರಾಜಧಾನಿ ಸಂಪರ್ಕಿಸುವ ರಸ್ತೆಗಳು ಬಂದ್ ಆಗಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಪ್ರತಿಭಟನಾ ಸ್ಥಳದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೊನಾ ತಡೆ ನಿಯನಗಳನ್ನ ಪಾಲಿಸುತ್ತಿಲ್ಲ. ಇದರಿಂದ ಕೊರೊನಾ ಸ್ಫೋಟವಾಗುವ ಸಾಧ್ಯತೆಗಳಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ

  • ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ ಭರವಸೆ- ಹಠ ಬಿಡದ ಅನ್ನದಾತರಿಂದ ಹೋರಾಟ ತೀವ್ರ

    ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ ಭರವಸೆ- ಹಠ ಬಿಡದ ಅನ್ನದಾತರಿಂದ ಹೋರಾಟ ತೀವ್ರ

    ನವದೆಹಲಿ: ಕೇಂದ್ರ ಒಪ್ತಿಲ್ಲ – ರೈತರು ಪಟ್ಟು ಸಡಿಲಿಸ್ತಿಲ್ಲ. ಕೇಂದ್ರ ಕಳಿಸಿದ ಲಿಖಿತ ಭರವಸೆಯನ್ನು ಕೂಡ ರೈತರು ಒಪ್ಪಿಲ್ಲ. ಪರಿಣಾಮ, ಸತತ 14ನೇ ದಿನವೂ ದೆಹಲಿ ಹೊರ ವಲಯದಲ್ಲಿ ಅನ್ನದಾತರ ಪ್ರತಿಭಟನೆ ಮುಂದುವರಿದಿದೆ.

    ಮಂಗಳವಾರ ರಾತ್ರಿ ಅಮಿತ್ ಶಾ ಜೊತೆಗಿನ ಸಂಧಾನ ಸಭೆ ವಿಫಲವಾದ ಬಳಿಕ ಇವತ್ತಿನ ಸಭೆ ರದ್ದು ಮಾಡಿದ ಕೇಂದ್ರ ಸರ್ಕಾರ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಇರುತ್ತೆ ಎಂಬ ಭರವಸೆ ಸೇರಿ ಹಲವು ತಿದ್ದುಪಡಿಗಳಿಗೆ ಸಮ್ಮತಿ ಸೂಚಿಸಿ ಲಿಖಿತ ಪ್ರಸ್ತಾವನೆಯನ್ನು ಧರಣ ನಿರತ ಅನ್ನದಾತರ ಬಳಿಗೆ ಕಳಿಸಿತ್ತು. ಆದರೆ ಅನ್ನದಾತರು ಮಾತ್ರ ಇದನ್ನು ಒಪ್ಪೋಕೆ ರೆಡಿ ಇಲ್ಲ. ಸಿಂಘು ಗಡಿಯಲ್ಲಿ ಇಂದು ಸಭೆ ಸೇರಿದ್ದ ರೈತರು, ತಮ್ಮ ಹಳೆಯ ನಿಲುವಿಗೆ ಅಂಟಿಕೊಂಡಿರಲು ತೀರ್ಮಾನಿಸಿದ್ದಾರೆ.

    ಸಭೆಯ ಬಳಿಕ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡೋವರೆಗೂ ಹೋರಾಟದಿಂದ ವಿರಮಿಸಲ್ಲ ಎಂದು ಘೋಷಿಸಿದ್ದಾರೆ. ಸೋಮವಾರ ದೆಹಲಿಯಲ್ಲಿ ದೊಡ್ಡಮಟ್ಟದ ಸಮಾವೇಶ, ಡಿಸೆಂಬರ್ 12ರವರೆಗೂ ಜೈಪುರ-ದೆಹಲಿ, ಆಗ್ರಾ-ದೆಹಲಿ ಹೈವೇ ತಡೆ ನಡೆಸೋದಾಗಿ ಎಚ್ಚರಿಸಿದ್ದಾರೆ. ದೇಶಾದ್ಯಂತ ಎಲ್ಲಾ ಟೋಲ್‍ಗಳ ಬಳಿ ಪ್ರತಿಭಟನೆ ನಡೆಸುವುದಾಗಿಯೂ ತಿಳಿಸಿದ್ದಾರೆ.

    ಡಿಸೆಂಬರ್ 13ರಿಂದ ಬಿಜೆಪಿ ನಾಯಕರಿಗೆ ಕಂಡಕಂಡಲ್ಲಿ ಘೇರಾವ್ ಹಾಕೋದಾಗಿ ರೈತರು ಪ್ರಕಟಿಸಿದ್ದು, ಡಿಸೆಂಬರ್ 14ರಂದು ದೇಶಾದ್ಯಂತ ಚಳವಳಿ ನಡೆಡುವ ಸಂದೇಶವನ್ನ ಕೇಂದ್ರಕ್ಕೆ ರವಾನಿಸಿದ್ದಾರೆ. ಕೇಂದ್ರ ಸರ್ಕಾರ ತಮ್ಮ ಬೇಡಿಕೆಗೆ ಒಪ್ಪಿದ್ರೇ ನಾಳೆಯೇ ಕೇಂದ್ರದ ಜೊತೆ ಮಾತುಕತೆ ಸಿದ್ಧ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.

    ಈ ಮಧ್ಯೆ, ಸಂಜೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ವಿಪಕ್ಷ ನಿಯೋಗ, ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಮನವಿ ಪತ್ರ ಸಲ್ಲಿಸಿದ್ರು. ರಾಹುಲ್ ಗಾಂಧಿ, ಶರದ್ ಪವಾರ್ ಸೇರಿ ಹಲವರು ಈ ವೇಳೆ ಉಪಸ್ಥಿತರಿದ್ದರು.

  • ದೆಹಲಿಯ ಆಂದೋಲನದ ಕಿಚ್ಚು ದೇಶವ್ಯಾಪಿ ಹರಡಬೇಕು: ಅಣ್ಣಾ ಹಜಾರೆ

    ದೆಹಲಿಯ ಆಂದೋಲನದ ಕಿಚ್ಚು ದೇಶವ್ಯಾಪಿ ಹರಡಬೇಕು: ಅಣ್ಣಾ ಹಜಾರೆ

    ಮುಂಬೈ: ದೆಹಲಿಯ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಅಂದೋಲನ ದೇಶದ ಪ್ರತಿಭಾಗಕ್ಕೂ ವಿಸ್ತರಣೆ ಆಗಬೇಕು. ಹಾಗಾದ್ರೆ ಮಾತ್ರ ಸರ್ಕಾರದ ಮೇಲೆ ಒತ್ತಡ ಬೀಳುತ್ತೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ನೀಡಿರುವ ಅಣ್ಣಾ ಹಜಾರೆ ಒಂದು ದಿನದ ಉಪವಾಸ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

    ಕಳೆದ 10 ದಿನಗಳಿಂದ ದೆಹಲಿ ಗಡಿಭಾಗದಲ್ಲಿ ಚಳಿಯನ್ನ ಲೆಕ್ಕಿಸದೇ ರೈತರು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಆಂದೋಲನ ದೇಶವ್ಯಾಪಿ ವಿಸ್ತರಣೆ ಆಗಬೇಕು. ಸರ್ಕಾರದ ಒತ್ತಡ ಹೇರಲು ದೇಶದ ಎಲ್ಲ ರೈತರು ರಸ್ತೆಗಿಳಿದಾಗ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತೆ. ಹಾಗಾಗಿ ಈ ಆಂದೋಲನದಲ್ಲಿ ದೇಶದ ಜನತೆ ಭಾಗಿಯಾಗಬೇಕು ಎಂದು ಅಣ್ಣಾ ಹಜಾರೆ ಮನವಿ ಮಾಡಿಕೊಂಡಿದ್ದಾರೆ.

    ಈ ಹೋರಾಟದಲ್ಲಿ ಯಾರು ಅಹಿಂಸ ಮಾರ್ಗದತ್ತ ಹೆಜ್ಜೆ ಹಾಕಬಾರದು ಎಂಬುವುದು ನನ್ನ ಮನವಿ. ಕೃಷಿ ವಲಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದುವೇ ಸೂಕ್ತ ಸಮಯ. ಈ ಮೊದಲು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿಯೂ ಅವರ ಜೊತೆಯಲ್ಲಿರುತ್ತೇನೆ. ಕೇಂದ್ರ ಸರ್ಕಾರ ರೈತರಿಗೆ ಆಶ್ವಾಸನೆ ನೀಡುವ ಬದಲು ಸಮಸ್ಯೆಗಳ ಪರಿಹರಿಸಲು ಮುಂದಾಗಬೇಕೆಂದು ಅಣ್ಣಾ ಹಜಾರೆ ಆಗ್ರಹಿಸಿದ್ದಾರೆ.

  • ದೆಹಲಿಯಲ್ಲಿ ರೈತ ಸಂಘಟನೆ ಜೊತೆಗಿನ ಕೇಂದ್ರದ ಮಾತುಕತೆ ವಿಫಲ

    ದೆಹಲಿಯಲ್ಲಿ ರೈತ ಸಂಘಟನೆ ಜೊತೆಗಿನ ಕೇಂದ್ರದ ಮಾತುಕತೆ ವಿಫಲ

    ದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಜೊತೆ ಕೇಂದ್ರ ಸರ್ಕಾರ ನಡೆಸಿದ ಮಾತುಕತೆ ವಿಫಲವಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅವರ ಸಮಿತಿ ರಚನೆಯ ಪ್ರಸ್ತಾಪವನ್ನ ರೈತ ಸಂಘಟನೆಗಳು ತಿರಸ್ಕರಿಸಿವೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅವರು 32 ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ದೆಹಲಿ ಕೃಷಿ ಭವನದಲ್ಲಿ ನಡೆಸಿದ ಸಂಧಾನ ಸಭೆ ವಿಫಲವಾಗಿದೆ.

    ರೈತ ಸಂಘಟನೆಗಳ ಜೊತೆಗಿನ ಸಭೆಯಲ್ಲಿ ಕೃಷಿ ಕಾಯಿದೆಯ ಸಮಗ್ರ ಚರ್ಚೆಗೆ ರೈತರು, ಸರ್ಕಾರ ಮತ್ತು ತಜ್ಞರನ್ನು ಒಳಗೊಂಡ ಸಮಿತಿ ರಚಿಸೋ ಪ್ರಸ್ತಾಪ ಮುಂದಿಟ್ಟಿದ್ದರು. ಪ್ರತಿಯೊಂದು ಸಂಘಟನೆ ನಾಲ್ಕರಿಂದ ಐದು ಜನರ ಈ ಸಮಿತಿಯಲ್ಲಿ ಇರುತ್ತಾರೆ. ಅದರಂತೆ ಸರ್ಕಾರದ ಕೆಲ ಅಧಿಕಾರಿಗಳು ಮತ್ತು ಕೃಷಿ ತಜ್ಞರನ್ನೊಳಗೊಂಡ ಸಮಿತಿ ರಚಿಸುವುದು ಎಂದು ಹೇಳಿದ್ದರು. ಪ್ರಸ್ತಾಪಕ್ಕೂ ಮುನ್ನ ರೈತ ಸಂಘಟನೆಗಳಿಗೆ ಹೊಸ ಕೃಷಿ ಕಾನೂನುಗಳಿಗೆ ಸಂಬಂಧಿಸಿದ ಮಾಹಿತಿಯನ್ನ ಎಲ್‍ಇಡಿ ಮೂಲಕ ತೋರಿಸಲಾಗಿತ್ತು.

    ಇಂದು ಬೆಳಗ್ಗೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ನರೇಂದ್ರ ಸಿಂಗ್ ಥೋಮರ್ ಮಾತುಕತೆ ನಡೆಸಿದ್ದರು. ಈ ಸಭೆಯಲ್ಲಿ ಪ್ರತಿಭಟನಾ ನಿರತ ರೈತರ ಜೊತೆ ಸಂಧಾನದ ಮಾತುಕತೆ ಬಗ್ಗೆ ಚರ್ಚಿಸಲಾಗಿತ್ತು.

    ಕೇಂದ್ರ ಸರ್ಕಾರ ಅಹಂಕಾರ ಬಿಟ್ಟು ರೈತರ ಸಮಸ್ಯೆಯನ್ನು ಆಲಿಸಬೇಕು ಎಂದು ಕೇಂದ್ರಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಏಟು ಕೊಟ್ಟಿದ್ದಾರೆ. ರೈತರಿಗೆ ನ್ಯಾಯ ಒದಗಿಸಿದರೆ ಮಾತ್ರ ಅವರ ಋಣ ತೀರಿಸಲು ಸಾಧ್ಯವೇ ವಿನಃ ರೈತರ ಮೇಲೆ ಲಾಠಿ, ಅಶ್ರುವಾಯು ಪ್ರಯೋಗಿಸಿ ದೌರ್ಜನ್ಯ ಎಸಗುವುದಲ್ಲ ಎಂದು ಸಲಹೆ ಕೊಟ್ಟಿದ್ದಾರೆ. ಈ ಮಧ್ಯೆ, ಭಾರತದ ರೈತರ ಪ್ರತಿಭಟನೆ ಬಗ್ಗೆ ಇಂಗ್ಲೆಂಡ್ ಕ್ರಿಕೆಟಿಗ ಮಾಂಟಿ ಪನೇಸರ್, ಕೆನಡಾ ಪ್ರಧಾನಿ ಜಸ್ಟೀನ್ ಟ್ರಡೋ ಕಳವಳ ವ್ಯಕ್ತಪಡಿಸಿದೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ನಿಮ್ಮ ಕಳವಳ ಅನಪೇಕ್ಷಿತ ಮತ್ತು ಅನಗತ್ಯ ಅಂತ ಹೇಳಿದೆ.