Tag: ದೆಹಲಿ ಗಣರಾಜ್ಯೋತ್ಸವ

  • ನಾರಾಯಣ ಗುರುಗಳ ಬಗ್ಗೆ ಪ್ರಧಾನಿ ಸೇರಿದಂತೆ ಎಲ್ಲರಿಗೂ ಗೌರವ ಇದೆ: ಎಸ್.ಅಂಗಾರ

    ನಾರಾಯಣ ಗುರುಗಳ ಬಗ್ಗೆ ಪ್ರಧಾನಿ ಸೇರಿದಂತೆ ಎಲ್ಲರಿಗೂ ಗೌರವ ಇದೆ: ಎಸ್.ಅಂಗಾರ

    ಉಡುಪಿ: ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ. ಈ ಬೆಳವಣಿಗೆ ವಿರುದ್ಧ ಇಂದು ಕರಾವಳಿಯಯಲ್ಲಿ ಸ್ವಾಭಿಮಾನ ನಡಿಗೆ ನಡೆಯುತ್ತಿದೆ. ಈ ಬಗ್ಗೆ ಮೀನುಗಾರಿಕಾ ಬಂದರು ಸಚಿವ ಎಸ್.ಅಂಗಾರ ಮಾತನಾಡಿದ್ದಾರೆ.

    ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾರಾಯಣ ಗುರುಗಳ ಬಗ್ಗೆ ದೇಶದಲ್ಲಿ ಎಲ್ಲರಿಗೂ ಅಭಿಮಾನ ಇದೆ. ನಾರಾಯಣ ಗುರುಗಳ ವಿಚಾರದಲ್ಲಿ ರಾಜಕೀಯ ದೃಷ್ಟಿಕೋನಗಳು ಪ್ರತಿಭಟನೆ ಮಾಡುವುದು ಸರಿಯಲ್ಲ. ಇದಕ್ಕೆ ನನ್ನ ವಿರೋಧ ಇದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ನಮಗೆ ಗೌರವ ಕೊಟ್ಟಿದ್ದಕ್ಕೆ ಜಾರಕಿಹೊಳಿಗೆ ಅಭಿನಂದನೆ: ಎಚ್‍ಡಿಕೆ

    ನಾರಾಯಣ ಗುರುಗಳ ಬಗ್ಗೆ ಯಾರಿಗೂ ಗೌರವ ಕಡಿಮೆಯಾಗಿಲ್ಲ. ಗುರುಗಳು ಸಮಾಜಕ್ಕೆ ಪ್ರಮುಖರು. ಇತಿಹಾಸದಲ್ಲಿ ಅವರ ಎಲ್ಲ ವಿಚಾರವನ್ನು ಎಲ್ಲರೂ ಒಪ್ಪುವಂಥದ್ದು. ಈ ಹಿಂದೆ ಈ ವಿಚಾರಗಳು ಯಾಕೆ ಚರ್ಚೆಯಾಗಿಲ್ಲ? ಈಗ ರಾಜಕೀಯಕ್ಕೆ ಇಳಿಸುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.

    ಈ ಎಲ್ಲವನ್ನು ಆಲೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಪ್ರಧಾನಿ ನರೇಂದ್ರ ಮೋದಿಗೆ ನಮಗೆ ಮತ್ತು ನಮ್ಮ ಸಂಘಟನೆಗೆ ನಾರಾಯಣ ಗುರುಗಳ ಬಗ್ಗೆ ಗೌರವವಿದೆ. ನಾರಾಯಣ ಗುರುಗಳ ವಿಚಾರದಲ್ಲಿ ಮುಂದೆ ಏನೇನು ಮಾಡಬೇಕು ಇದನ್ನು ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು. ಇದನ್ನೂ ಓದಿ: ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!