Tag: ದೆಹಲಿ ಕ್ಯಾಪಿಟಲ್ಸ್

  • ಕೋವಿಡ್: ಐಪಿಎಲ್ 2022ರ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಪಂದ್ಯ ಮುಂಬೈಗೆ ಸ್ಥಳಾಂತರ

    ಕೋವಿಡ್: ಐಪಿಎಲ್ 2022ರ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಪಂದ್ಯ ಮುಂಬೈಗೆ ಸ್ಥಳಾಂತರ

    ಮುಂಬೈ: ಐಪಿಎಲ್ 2022ರ ಆವೃತ್ತಿಗೆ ಈಗಾಗಲೇ ಕೋವಿಡ್-19ನ ಕರಿನೆರಳು ಆವರಿಸಿದ್ದು, ಕೊರೊನಾ ಭೀತಿಯಿಂದಾಗಿ ಪುಣೆಯಲ್ಲಿ ಬುಧವಾರ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪಂದ್ಯವನ್ನು ಮುಂಬೈಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಮೂಲವು ತಿಳಿಸಿದೆ.

    ದೆಹಲಿ ತಂಡದ ಆಟಗಾರ, ಸಿಬ್ಬಂದಿ ಸೇರಿದಂತೆ ಈಗಾಗಲೇ 5 ಮಂದಿಗೆ ಕೋವಿಡ್ ದೃಢಪಟ್ಟಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಮೂಲವು ತಿಳಿಸಿದೆ.

    corona

    ಮೊನ್ನೆ ದೆಹಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರಿಗೆ ಕೋವಿಡ್ ಧೃಡವಾಗಿತ್ತು. ಈಗ ದೆಹಲಿ ಕ್ಯಾಪಿಟಲ್ಸ್‍ನ ಆಲ್‍ರೌಂಡರ್ ಮಿಚೆಲ್ ಮಾರ್ಷ್‍ಗೂ ಕೂಡಾ ಕೋವಿಡ್ ದೃಢವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ದೆಹಲಿ ತಂಡವು ಪ್ರಸ್ತುತ ಮುಂಬೈನಲ್ಲಿ ಕ್ವಾರಂಟೈನ್‍ನಲ್ಲಿದೆ. ಮಿಚೆಲ್ ಮಾರ್ಷ್ ಅವರು ಇತ್ತೀಚಿಗಷ್ಟೇ ಗಾಯದಿಂದ ಚೇತರಿಸಿಕೊಂಡು ಐಪಿಎಲ್ 2022ಕ್ಕೆ ಪಾದಾರ್ಪಣೆ ಮಾಡಿದ್ದರು. ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರೊಂದಿಗಿನ ನಿಕಟ ಸಂಪರ್ಕದಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದ ಕಾರಣ ಅವರಿಗೆ ಕೋವಿಡ್ ಸೋಂಕು ಹರಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಒಂದು ವೇಳೆ ಯಾರಲ್ಲಾದರೂ ಕೋವಿಡ್ ಸೋಂಕು ಪತ್ತೆಯಾಗದೆ ಇದ್ದು, ಅವರು ಮುಚ್ಚಿದ ವಾತಾವರಣದಲ್ಲಿ ಪ್ರಯಾಣ ಮಾಡುವ ವೇಳೆ ಅದು ಇನ್ನೊಬ್ಬರಿಗೂ ಹರಡಿ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಬಿಸಿಸಿಐ ಈ ಕ್ರಮಕೈಗೊಂಡಿದೆ.

    ಈಗಾಗಲೇ ಸೋಂಕು ದೃಢಪಟ್ಟಿರುವ ಐವರನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ. ಅವರಿಗೆಲ್ಲಾ ಎರಡು ಬಾರಿ ಕೋವಿಡ್ ನೆಗಟಿವ್ ವರದಿ ಬಂದ ಮೇಲೆ ತಂಡದಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಬಿಸಿಸಿಐ ಸೂಚಿಸಿದೆ.

  • ಐಪಿಎಲ್ 2022: ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್‍ಗೆ ಕೋವಿಡ್ ದೃಢ

    ಐಪಿಎಲ್ 2022: ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್‍ಗೆ ಕೋವಿಡ್ ದೃಢ

    ಮುಂಬೈ: ಐಪಿಎಲ್ 2022ರ ಆವೃತ್ತಿಗೆ ಈಗಾಗಲೇ ಕೋವಿಡ್-19ನ ಕರಿನೆರಳು ಆವರಿಸಿದ್ದು, ಮೊನ್ನೆ ತಾನೆ ದೆಹಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರಿಗೆ ಕೋವಿಡ್ ಧೃಡವಾಗಿತ್ತು. ಈಗ ದೆಹಲಿ ಕ್ಯಾಪಿಟಲ್ಸ್‌ನ ಆಲ್‍ರೌಂಡರ್ ಮಿಚೆಲ್ ಮಾರ್ಷ್‍ಗೂ ಕೂಡಾ ಕೋವಿಡ್ ದೃಢವಾಗಿದೆ.

    ಈ ಸಂಬಂಧ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಅವರ ಮುಂದಿನ ಪಂದ್ಯಕ್ಕೆ ಮುಂಚಿತವಾಗಿ ಪುಣೆಗೆ ತೆರಳಲು ಡಿಸಿ ತಮ್ಮ ಪ್ರಯಾಣದ ಯೋಜನೆಯನ್ನು ರದ್ದುಗೊಳಿಸಿದ್ದಾರೆ. ಇಡೀ ತಂಡವು ಪ್ರಸ್ತುತ ಮುಂಬೈನಲ್ಲಿ ಕ್ವಾರಂಟೈನ್‍ನಲ್ಲಿದೆ. ಆಸ್ಟ್ರೇಲಿಯನ್ ಆಲ್ ರೌಂಡರ್ ಆದ ಅವರಿಗೆ ಕೊರೊನಾದ ಕೆಲವು ರೋಗಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಅವರಿಗೆ ರಾಪಿಡ್ ಆಂಟಿಜೆನ್ ಪರೀಕ್ಷೆಯನ್ನು ನಡೆಸಲಾಯಿತು ಎಂದು ತಿಳಿದುಬಂದಿದೆ.

    corona

    ಮಿಚೆಲ್ ಮಾರ್ಷ್ ಅವರು ಇತ್ತಿಚಿಗಷ್ಟೇ ಗಾಯದಿಂದ ಚೇತರಿಸಿಕೊಂಡು ಐಪಿಎಲ್ 2022ಕ್ಕೆ ಪಾದಾರ್ಪಣೆ ಮಾಡಿದ್ದರು. ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರೊಂದಿಗಿನ ನಿಕಟ ಸಂಪರ್ಕದಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದ ಕಾರಣ ಅವರಿಗೆ ಕೋವಿಡ್ ಸೋಂಕು ಹರಡಿದೆ ಎಂದು ಶಂಕೆ ವ್ಯಕ್ತವಾಗಿದೆ.

    ಡಿಸಿ ಇಂದು ಪುಣೆಗೆ ಪ್ರಯಾಣಿಸಬೇಕಿತ್ತು. ಆದರೆ ಈಡೀ ತಂಡದ ಆಟಗಾರರನ್ನು ಆಯಾ ಕೊಠಡಿಗಳಲ್ಲಿ ಕ್ವಾರಂಟೈನ್‍ನಲ್ಲಿಡಲಾಗಿದೆ ಎಂದು ತಿಳಿಸಲಾಗಿದೆ. ಕೊರೊನಾವು ಏಕಾಏಕಿ ಹೇಗೆ ಸಂಭವಿಸಿತು ಹಾಗೂ ಪ್ಯಾಟ್ರಿಕ್ ಫರ್ಹಾರ್ಟ್ ಅವರ ಪ್ರತ್ಯೇಕ ಪ್ರಕರಣವೇ ಇದಕ್ಕೆಲ್ಲಾ ಮೂಲಕಾರಣವಿರಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ತಂಡದ ಪ್ರತೀ ಆಟಗಾರರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಬಿಸಿಸಿಐ ಮೂಲವು ಸೋಮವಾರ ತಿಳಿಸಿದೆ.

    ಈಗಾಗಲೇ ತಂಡದ ಮತ್ತೋರ್ವ ಸಹಾಯಕ ಸಿಬ್ಬಂದಿಯ ಸದಸ್ಯನಿಗೆ ಕೊರೊನಾದ ರೋಗಲಕ್ಷಣಗಳು ಕಂಡು ಬಂದಿದೆ. ಆದರೆ ಆರ್‌ಟಿಪಿಸಿಆರ್ ಫಲಿತಾಂಶಗಳಿಗೆ ಕಾಯಲಾಗುತ್ತಿದೆ. ಐಪಿಎಲ್‍ನ ಎಲ್ಲಾ ತಂಡಗಳು ಪುಣೆಯ ಕಾನ್ರಾಡ್ ಹೋಟೆಲ್‍ನಲ್ಲಿ ಉಳಿದುಕೊಂಡಿವೆ. ಹೋಟೆಲ್‍ನಲ್ಲಿ ಬಿಸಿಸಿಐ ಕೋವಿಡ್ ಸಲುವಾಗಿ ಬಯೋ ಬಬಲ್ ಅನ್ನು ರಚಿಸಿದೆ. ದೆಹಲಿ ತಂಡವು ಇವತ್ತಿಗಾಗಲೇ ಪುಣೆಯಲ್ಲಿರಬೇಕಾಗಿತ್ತು. ಆದರೆ ಕೋವಿಡ್‍ನಿಂದಾಗಿ ಸ್ವಲ್ಪ ವಿಳಂಬವಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.

  • ಡೆಲ್ಲಿ ಕ್ಯಾಪಿಟಲ್ಸ್ ಫಿಸಿಯೋಗೆ ಕೊರೊನಾ

    ಡೆಲ್ಲಿ ಕ್ಯಾಪಿಟಲ್ಸ್ ಫಿಸಿಯೋಗೆ ಕೊರೊನಾ

    ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಫಿಸಿಯೋ ಮತ್ತು ಪ್ರಸ್ತುತ ದೆಹಲಿ ಕ್ಯಾಪಿಟಲ್ಸ್‌ನ ಪ್ಯಾಟ್ರಿಕ್ ಫರ್ಹಾರ್ಟ್ ಅವರಿಗೆ ಕೋವಿಡ್ ದೃಢಪಟ್ಟಿದೆ.

    ಕ್ವಾರಂಟೈನ್‍ನಲ್ಲಿರುವ ಪ್ಯಾಟ್ರಿಕ್ ಫರ್ಹಾರ್ಟ್ ಅವರನ್ನು ಡಿಸಿ ವೈದ್ಯಕೀಯ ತಂಡವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಕೋವಿಡ್ ಪ್ರಕರಣಗಳು ಕ್ರಮೇಣ ಹೆಚ್ಚಾಗುವ ಪರಿಣಾಮ ಎಲ್ಲಿ ಎರಡು ತಿಂಗಳ ಅವಧಿಯ ಐಪಿಎಲ್ 2022ಕ್ಕೂ ಕೋವಿಡ್‍ನ ಬಿರುಗಾಳಿ ಅಪ್ಪಳಿಸುತ್ತೋ ಎಂಬ ಭಯ ಕಾಡುತ್ತಿದೆ. ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಸ್ಟ್ರಾಂಗ್ ಕಮ್‍ಬ್ಯಾಕ್ – ಐಪಿಎಲ್‍ನಲ್ಲಿ ಬುಲೆಟ್ ಥ್ರೋ, ವಿಕೆಟ್ ಕಟ್

    corona

    ಕಳೆದ ವರ್ಷ, ಮೇ ತಿಂಗಳಲ್ಲಿ ಕೊರೊನಾದಿಂದಾಗಿ ಐಪಿಎಲ್ 14ನೇ ಆವೃತ್ತಿಯ ಮೊದಲಾರ್ಧವನ್ನು ಸ್ಥಗಿತಗೊಳಿಸಿ ನಂತರ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಕಾಲಿಗೆ ನಮಸ್ಕರಿಸಿದ ಜಾಂಟಿ ರೋಡ್ಸ್

    ಈ ಬಾರಿಯ ಐಪಿಎಲ್ ಸರಣಿಯನ್ನು ಮಹಾರಾಷ್ಟ್ರದ ನಾಲ್ಕು ಕ್ರೀಡಾಂಗಣಗಳಲ್ಲಿ ನಡೆಸಲಾಗುತ್ತಿದೆ. ಮುಂಬೈ, ನವಿ ಮುಂಬೈ ಮತ್ತು ಪುಣೆಯಲ್ಲಿರುವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

     

  • ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ

    ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ

    ಮುಂಬೈ: ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ದುಷ್ಕರ್ಮಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿರುವುದಾಗಿ ಮುಂಬೈ ಪೊಲೀಸರು ಬುಧವಾರ ತಿಳಿಸಿದ್ದಾರೆ.

    ಐಪಿಎಲ್ ಸೀಸನ್ 15 ಮಾರ್ಚ್ 26 ರಿಂದ ಆರಂಭವಾಗಲಿದೆ. ಎಲ್ಲಾ ತಂಡಗಳ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿ ಎಲ್ಲಾ ಪಂದ್ಯಗಳು ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿವೆ. ಮುಂಬೈನ ಮೂರು ಸ್ಟೇಡಿಯಂಗಳಲ್ಲಿ ಅಂದರೆ ವಾಂಖೆಡೆ, ಬ್ರಾಬನ್ ಮತ್ತು ಡಿವೈ ಪಾಟೀಲ್‍ನಲ್ಲಿ ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಎಲ್ಲಾ ತಂಡಗಳ ಆಟಗಾರರು ಮುಂಬೈ ಕಡೆ ಪ್ರಯಾಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ಆಟಗಾರರ ಭದ್ರತೆಯಲ್ಲಿ ಭಾರೀ ಲೋಪ ಕಂಡುಬಂದಿದೆ.

    ಮಾರ್ಚ್ 16 ರಂದು, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಆಟಗಾರರನ್ನು ಕರೆತರಲು 5-ಸ್ಟಾರ್ ಹೋಟೆಲ್‍ನ ಹೊರಗೆ ನಿಲ್ಲಿಸಿದ್ದ ಐಷಾರಾಮಿ ಬಸ್‍ನ ಗಾಜುಗಳನ್ನು ಒಡೆದು ದುಷ್ಕೃತ್ಯ ಮೆರೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ, ಸಿಎಂ ಏನೇ ಮಾತಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಡಿಕೆಶಿ

    ದೆಹಲಿ ಕ್ಯಾಪಿಟಲ್ ಐಪಿಎಲ್ ತಂಡದ ನಿಂತಿದ್ದ ಬಸ್ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಐಪಿಸಿಯ 143, 147, 149, 427 ಸೆಕ್ಷನ್‍ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

    ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಪ್ಯಾಲೇಸ್ ಎಂಬ ಹೋಟೆಲ್‍ನಲ್ಲಿ ದೆಹಲಿ ತಂಡ ತಂಗಿದೆ. ಪ್ರಸಿದ್ಧವಾದ ‘ಗೇಟ್‍ವೇ ಆಫ್ ಇಂಡಿಯಾ’ ಈ ಹೋಟೆಲ್‍ಗೆ ತುಂಬಾ ಹತ್ತಿರದಲ್ಲಿದ್ದು, ಇದು ವಾಂಖೆಡೆ ಸ್ಟೇಡಿಯಂಗೆ ಕೂಡ ಹತ್ತಿರದಲ್ಲಿದೆ.

    ದೆಹಲಿ ಕ್ಯಾಪಿಟಲ್ಸ್ ಕಳೆದ ವಾರವಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ಗಾಗಿ ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿತ್ತು. ಇದರಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್, ವೇಗದ ಬೌಲರ್ ಅನ್ರಿಚ್ ನಾಟ್ರ್ಜೆ ಮತ್ತು ಹೊಸ ಆಟಗಾರ ಡೇವಿಡ್ ವಾರ್ನರ್ ಹೊಸ ಜೆರ್ಸಿಯೊಂದಿಗೆ ಪೋಸ್ ನೀಡಿದ್ದರು.

  • 9 ವರ್ಷದ ರಾಜಸ್ಥಾನ್ ನಂಟು ಮುರಿದು ದೆಹಲಿ ಪರ ಬ್ಯಾಟ್ ಬೀಸಲಿದ್ದಾರೆ ರಹಾನೆ

    9 ವರ್ಷದ ರಾಜಸ್ಥಾನ್ ನಂಟು ಮುರಿದು ದೆಹಲಿ ಪರ ಬ್ಯಾಟ್ ಬೀಸಲಿದ್ದಾರೆ ರಹಾನೆ

    ಮುಂಬೈ: ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮುಂದಿನ ಇಂಡಿಯನ್ ಪ್ರಿಮಿಯರ್ ಲೀಗ್ ಆವೃತ್ತಿಯಲ್ಲಿ ದೆಹಲಿ ಪರ ಆಡಲಿದ್ದಾರೆ. ಈ ಮೂಲಕ ಐಪಿಎಲ್‍ನಲ್ಲಿ ಒಂಬತ್ತು ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ರಹಾನೆ ತಂಡದಿಂದ ಹೊರಬಿದ್ದಿದ್ದಾರೆ.

    ಐಪಿಎಲ್ ಉಭಯ ತಂಡಗಳ ನಡುವಿನ ವರ್ಗಾವಣೆ ಪ್ರಕ್ರಿಯೆ ಇಂದು ಪೂರ್ಣಗೊಳ್ಳಲಿದೆ. ಈ ಮೂಲಕ ರಹಾನೆಯನ್ನು ಕೈಬಿಟ್ಟಿರುವ ರಾಜಸ್ಥಾನ ತಂಡವು ದೆಹಲಿ ಕ್ಯಾಪಿಟಲ್ಸ್ ತಂಡದ ಇಬ್ಬರು ಆಟಗಾರರನ್ನು ಪಡೆಯಲಿದೆ. ಇದಲ್ಲದೆ ಮುಂದಿನ ಆವೃತ್ತಿಯಲ್ಲಿ ವರ್ಗಾವಣೆ ಒಪ್ಪಂದಗಳ ನಂತರ, ಟ್ರೆಂಟ್ ಬೋಲ್ಟ್ ಈಗ ಮುಂಬೈ ಇಂಡಿಯನ್ಸ್ ಮತ್ತು ಅಂಕಿತ್ ರಜಪೂತ್ ರಾಜಸ್ಥಾನದಲ್ಲಿ ಆಡಲಿದ್ದಾರೆ. ವರ್ಗಾವಣೆ ಪ್ರಕ್ರಿಯೆ ಗುರುವಾರ ಮುಕ್ತಾಯವಾದ ನಂತರ, ಯಾವುದೇ ಆಟಗಾರರನ್ನು ಫ್ರಾಂಚೈಸಿಗಳ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

    ಅಜಿಂಕ್ಯ ರಹಾನೆ 2011ರಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದರು. ಕಳೆದ ಆವೃತ್ತಿಯಲ್ಲಿ ಅವರನ್ನು 4 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ರಹಾನೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ತಂಡವು ಅವರನ್ನು ಕೈಬಿಟ್ಟಿದೆ ಎಂದು ವರದಿಯಾಗಿದೆ.

    ರಹಾನೆಯನ್ನು ತಂಡಕ್ಕೆ ಸೇರಿಸಿಕೊಳ್ಳಲು ದೆಹಲಿ ಕ್ಯಾಪಿಟಲ್ಸ್ ರಾಜಸ್ಥಾನ್ ತಂಡದೊಂದಿಗೆ ಮಾತುಕತೆ ನಡೆಸಿತ್ತು. ಸೌರವ್ ಗಂಗೂಲಿ ದೆಹಲಿ ಸಲಹೆಗಾರರಾಗಿದ್ದಾಗ ರಹಾನೆ ಅವರನ್ನು ತಂಡಕ್ಕೆ ಸೇರಿಸುವ ಬಗ್ಗೆ ಸಲಹೆ ನೀಡಿದ್ದರು. ರಹಾನೆ ಎಲ್ಲಾ ಮಾದರಿಯ ಆಟಗಾರ ಎಂದು ಗಂಗೂಲಿ ಭಾವಿಸಿದ್ದಾರೆ. ವರದಿಗಳ ಪ್ರಕಾರ, ರಹಾನೆ ಕೂಡ ತಂಡವನ್ನು ಬದಲಾಯಿಸಲು ಬಯಸಿದ್ದರು. ಐಪಿಎಲ್‍ನ 2019ರ ಆವೃತ್ತಿಯಲ್ಲಿ ಎಂಟು ಪಂದ್ಯಗಳ ನಂತರ ರಹಾನೆ ನಾಯಕತ್ವವನ್ನು ಹಿಂಪಡೆದು ಸ್ಟೀವ್ ಸ್ಮಿತ್‍ಗೆ ಹಸ್ತಾಂತರಿಸಲಾಗಿತ್ತು. ಈ ನಡೆಯ ಬಗ್ಗೆ ರಹಾನೆ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

    ರಹಾನೆ ಆಗಮನದಿಂದ ದೆಹಲಿ ತಂಡದ ಬ್ಯಾಟಿಂಗ್ ಕ್ರಮಾಂಕ ಇನ್ನಷ್ಟು ಬಲಗೊಳ್ಳಲಿದೆ. ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಹನುಮಾ ವಿಹಾರಿ ಅವರಂತಹ ಆಟಗಾರರಿಗೆ ರಹಾನೆ ಸಾಥ್ ನೀಡಲಿದ್ದಾರೆ. ದೆಹಲಿ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ವೈಯಕ್ತಿಕ ತರಬೇತುದಾರ ಪ್ರವೀಣ್ ಅಮ್ರೆ ಅವರೊಂದಿಗೆ ರಹಾನೆ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

    ಐಪಿಎಲ್‍ನಲ್ಲಿ ರಹಾನೆ ದಾಖಲೆ ಅಂತರಾಷ್ಟ್ರೀಯ ಟಿ-20 ವೃತ್ತಿಜೀವನಕ್ಕಿಂತ ಉತ್ತಮವಾಗಿದೆ. ಐಪಿಎಲ್‍ನ 140 ಪಂದ್ಯಗಳಲ್ಲಿ ರಹಾನೆ ಸುಮಾರು 33 ಸರಾಸರಿಯಲ್ಲಿ 3,820 ರನ್ ಗಳಿಸಿದ್ದಾರೆ. ಅಂತರಾಷ್ಟ್ರೀಯ ಟಿ-20ಯ 20 ಪಂದ್ಯಗಳಲ್ಲಿ 21 ಸರಾಸರಿಯಲ್ಲಿ 375 ರನ್ ಗಳಿಸಿದ್ದಾರೆ.

    2020ರ ಐಪಿಎಲ್‍ನಲ್ಲಿ ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ದೆಹಲಿ ಕ್ಯಾಪಿಟಲ್ಸ್ ಬದಲಿಗೆ ಮುಂಬೈ ಇಂಡಿಯನ್ಸ್ ಪರ ಆಡಲಿದ್ದು, ದೇಶೀಯ ವೇಗದ ಬೌಲರ್ ಅಂಕಿತ್ ರಜಪೂತ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬದಲು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಲಿದ್ದಾರೆ. ಬೋಲ್ಟ್ 2014ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. ಅವರು ಕಳೆದ ಎರಡು ಆವೃತ್ತಿಗಳಲ್ಲಿ ದೆಹಲಿ ತಂಡದ ಪರ ಆಡಿದ್ದರು. ಒಟ್ಟು 33 ಪಂದ್ಯಗಳನ್ನು ಆಡಿರುವ ಬೋಲ್ಟ್ ಒಟ್ಟು 38 ವಿಕೆಟ್ ಪಡೆದಿದ್ದಾರೆ. ಪಂಜಾಬ್ ತಂಡವನ್ನು 2018ರಲ್ಲಿ ಸೇರಿಕೊಂಡಿದ್ದ ಅಂಕಿತ್ 23 ಐಪಿಎಲ್ ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. ಅಂಕಿತ್ 2018ರಲ್ಲಿ ಹೈದರಾಬಾದ್ ತಂಡದ ವಿರುದ್ಧ ಪಂದ್ಯದಲ್ಲಿ ಕೇವಲ 14 ರನ್ ನೀಡಿ, 5 ವಿಕೆಟ್ ಉಳಿಸಿ ಭರ್ಜರಿ ಮಿಂಚಿದ್ದರು.