Tag: ದೆಹಲಿ ಕರ್ನಾಟಕ ಭವನ

  • ದೆಹಲಿಯ ಕರ್ನಾಟಕ ಭವನದಲ್ಲಿ 68ನೇ ಕನ್ನಡ ರಾಜ್ಯೋತ್ಸವ

    ದೆಹಲಿಯ ಕರ್ನಾಟಕ ಭವನದಲ್ಲಿ 68ನೇ ಕನ್ನಡ ರಾಜ್ಯೋತ್ಸವ

    ನವದೆಹಲಿ: ದೆಹಲಿ ಕರ್ನಾಟಕ ಭವನದಲ್ಲಿ (Karnataka Bhavan) (ಶರಾವತಿ) ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ (Kannada Rajyotsava) ಆಚರಿಸಲಾಯಿತು. ಕರ್ನಾಟಕ ಸರ್ಕಾರದ ನವದೆಹಲಿಯ (New Delhi)  ವಿಶೇಷ ಪ್ರತಿನಿಧಿಗಳಾದ ಪ್ರಕಾಶ್ ಹುಕ್ಕೇರಿ (Prakash Hukkeri) ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಪಣೆ ಮಾಡಿ ಧ್ವಜಾರೋಹಣ ನೆರವೇರಿಸಿದರು.

    ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, ದೆಹಲಿ ಕನ್ನಡಿಗರು ಸೇರಿದಂತೆ ರಾಜ್ಯದ ಜನರಿಗೆ ಶುಭ ಹಾರೈಸಿದರು. ಇನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ರಕ್ತದಾನ ಹಾಗೂ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಇದನ್ನೂ ಓದಿ: ಮಕ್ಕಳಿಗೆ ಕನ್ನಡ ಭಾಷೆಯಲ್ಲೇ ಪರೀಕ್ಷೆ ಮಾಡುವಂತೆ ಪ್ರಧಾನಿಗೆ ಪತ್ರ ಬರೀತಿನಿ: ಸಿಎಂ

    ಕಾರ್ಯಕ್ರಮದಲ್ಲಿ ಕರ್ನಾಟಕ ಭವನದ ಅಪರ ಮುಖ್ಯ ಕಾರ್ಯದರ್ಶಿ ವಂದನ ಗುರ್ನಾನಿ (ಸಮನ್ವಯ), ನಿವಾಸಿ ಆಯುಕ್ತ ಇಮ್ ಕೊಂಗ್ಲ ಜಮೀರ್, ಅಪರ ನಿವಾಸಿ ಆಯುಕ್ತ ಆಕೃತಿ ಬನ್ಸಲ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಿಬ್ಬಂದಿ ಪರಿವಾರದವರು ಉಪಸ್ಥಿತರಿದ್ದರು. ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌, ಕುಡಿಯುವ ನೀರು: ಸಿಎಂ ಘೋಷಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದೊಂದು ಮಾನಗೆಟ್ಟ ಕೆಲಸ – ಜಾರಕಿಹೊಳಿ ವಿರುದ್ದ ಸಿದ್ದರಾಮಯ್ಯ ಕಿಡಿ

    ಇದೊಂದು ಮಾನಗೆಟ್ಟ ಕೆಲಸ – ಜಾರಕಿಹೊಳಿ ವಿರುದ್ದ ಸಿದ್ದರಾಮಯ್ಯ ಕಿಡಿ

    ಚಿಕ್ಕಬಳ್ಳಾಪುರ: ಇದೊಂದು ಮಾನಗೆಟ್ಟ ಕೆಲಸ, ಸಚಿವರಾದವರು ಯಾರಾದರೂ ಇಂತಹ ಕೆಲಸ ಮಾಡುತ್ತಾರಾ ಎಂದು ರಮೇಶ್ ಜಾರಕಿಹೊಳಿ ರಾಸಲೀಲೆ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವರಾಗಿ ಯಾರಾದರೂ ಇಂತಹ ಕೆಲಸ ಮಾಡುತ್ತಾರಾ? ಅದರಲ್ಲೂ ಸರ್ಕಾರಿ ವಸತಿ ಗೃಹ, ದೆಹಲಿಯ ಕರ್ನಾಟಕ ಭವನದಲ್ಲಿ ಈ ಘಟನೆ ನಡೆದಿದೆ. ಇಂತಹ ಅಸಹ್ಯ ಆಶ್ಲೀಲವಾದದನ್ನು ನಾನೂ ಎಂದೂ ಕಂಡಿರಲಿಲ್ಲ. ರಮೇಶ್ ಜಾರಕಿಹೊಳಿ ನಿನ್ನೆಯೇ ರಾಜೀನಾಮೆ ನೀಡಬೇಕಿತ್ತು. ಒಂದು ದಿನ ತಡ ಮಾಡಿದ್ದೇ ತಪ್ಪು ಎಂದು ಹೇಳಿದರು.

    ಇದಕ್ಕೂ ಮುನ್ನ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಗೆ ಮಾಜಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಾಗಿನ ಅರ್ಪಿಸಿದರು. ಅಂದಹಾಗೆ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಇದೇ ಖಾಲಿ ಕೆರೆಗೆ ಭೇಟಿ ನೀಡಿ ಎಚ್‍ಎನ್ ವ್ಯಾಲಿ ಯೋಜನೆಗೆ ಶಂಕುಸ್ಥಾಪನೆ ನೇರವೇರಿಸಿದ್ದರು. ಈಗ ಆ ಕಂದವಾರ ಕೆರೆ ಎಚ್‍ಎನ್ ವ್ಯಾಲಿ ಯೋಜನೆ ನೀರಿಂದ ತುಂಬಿ ತುಳುಕುತ್ತಿದೆ.

    ಇದೇ ವೇಳೆ ಎಚ್‍ಎನ್ ವ್ಯಾಲಿ ಯೋಜನೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯನವರು ಇದು ಕುಡಿಯುವ ನೀರಿನ ಯೋಜನೆ ಅಲ್ಲ. ಅಂತರ್ಜಲ ಅಭಿವೃದ್ಧಿಗೆ ಎಂದು ಎಚ್‍ಎನ್ ವ್ಯಾಲಿ ಜಾರಿ ಮಾಡಿದ್ದೀವಿ. ಈಗ ಕೆರೆ ತುಂಬಿ ಹರಿತಿರುವುದು ಬಹಳ ಸಂತಸ ತಂದಿದೆ ಎಂದರು.

  • ವರ್ಗಾವಣೆಯಾಗ್ತಿದ್ದಂತೆ ನಾಲ್ವರಿಗೆ ಮುಂಬಡ್ತಿ ನೀಡಿದ ಕರ್ನಾಟಕ ಭವನದ ನಿವಾಸಿ ಆಯುಕ್ತರು

    ವರ್ಗಾವಣೆಯಾಗ್ತಿದ್ದಂತೆ ನಾಲ್ವರಿಗೆ ಮುಂಬಡ್ತಿ ನೀಡಿದ ಕರ್ನಾಟಕ ಭವನದ ನಿವಾಸಿ ಆಯುಕ್ತರು

    ನವದೆಹಲಿ: ಕೇಂದ್ರ ಸೇವೆಗೆ ವರ್ಗಾವಣೆಯಾಗಿರುವ ದೆಹಲಿ ಕರ್ನಾಟಕ ಭವನದ ನಿವಾಸಿ ಆಯುಕ್ತ ನಿಲಯ್ ಮಿತಾಶ್ ತಮ್ಮ ನಿರ್ಗಮನ ವೇಳೆ ನಾಲ್ವರು ಉದ್ಯೋಗಿಗಳಿಗೆ ಮುಂಬಡ್ತಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

    ನಿಲಯ್ ಮಿತಾಶ್ ಅವರು ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ಗೆ ನೇಮಕವಾದ ಹಿನ್ನೆಲೆ ವಿ. ವಿಧ್ಯಾವತಿಯವರನ್ನು ಕರ್ನಾಟಕ ಭವನದ ನಿವಾಸಿ ಆಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಿಲಯ್ ಮಿತಾಶ್ ತಮ್ಮ ನಿರ್ಗಮನದ ಮುನ್ನ ಸಹಾಯಕ ಸಮನ್ವಯ ಅಧಿಕಾರಿಗಳಾಗಿದ್ದ ಕುಸುಮಾ ಪಿ ನಿಂದರಗಿ, ಅಶೋಕ್ ಸಿ. ಕುಂಬಾರ್, ಐ ಶಂಬುಲಿಂಗಪ್ಪ, ಎಲ್.ದಿವಾಕರ್ ಗೆ ಉಪ ಸಮನ್ವಯ ಅಧಿಕಾರಗಳಾಗಿ ಮುಂಬಡ್ತಿ ನೀಡಿದ್ದಾರೆ.

    ಮುಂಬಡ್ತಿ ನಿಯಮ ಬಾಹಿರವಾಗಿದ್ದು ಏಕಾಏಕಿ ಬಡ್ತಿ ನೀಡಲಾಗಿದೆ ಎಂದು ಭವನದ ಇತರೆ ಕೆಲವು ಹೆಸರು ಹೇಳಲು ಇಚ್ಛಿಸದ ಉದ್ಯೋಗಿಗಳು ಆರೋಪಿಸಿದ್ದಾರೆ. ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಫೈಲ್ ಗಳು ಬಾಕಿ ಉಳಿಸಿಕೊಂಡಿದ್ದಾರೆ. ವರ್ಗಾವಣೆ ಆದೇಶಯಾಗುತ್ತಿದ್ದಂತೆ ಎಲ್ಲ ಫೈಲ್ ಗಳನ್ನು ಬಿಟ್ಟು ನಿಯಮ ಮೀರಿ ನಾಲ್ವರನ್ನ ಮಾತ್ರ ಪ್ರಮೋಷನ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.