Tag: ದೆಹಲಿ ಉದ್ಯಮಿ

  • ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ

    ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ

    ನವದೆಹಲಿ: ದೆಹಲಿ (Delhi) ಉದ್ಯಮಿ ತನ್ನ ಪತ್ನಿಯನ್ನು ಕೊಂದು ಚರಂಡಿಗೆಸೆದ 15 ದಿನಗಳ ಬಳಿಕ ಆಕೆಯ ಮೂಗುತಿಯ ಮೂಲಕ ಪೊಲೀಸರು ಗುರುತನ್ನು ಪತ್ತೆಹಚ್ಚಿದ್ದಾರೆ. ಈ ಘಟನೆ ದ್ವಾರಕಾದ (Dwaraka) ಚಾವ್ಲಾ ಪ್ರದೇಶದಲ್ಲಿ ನಡೆದಿದೆ.

    ಮಾ.15 ರಂದು ಸೀಮಾ ಸಿಂಗ್ (47) ಎಂಬ ಮಹಿಳೆಯ ಮೃತದೇಹ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. ಆದರೆ ಪತ್ತೆಯಾಗಿ 15 ದಿನ ಕಳೆದರೂ ಆಕೆಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ತನಿಖಾಧಿಕಾರಿಗಳು ಆಕೆ ಹಾಕಿಕೊಂಡಿದ್ದ ಮೂಗುತಿಯ ಆಧಾರದ ಮೇಲೆ ತನಿಖೆ ಆರಂಭಿಸಿದ್ದರು.ಇದನ್ನೂ ಓದಿ: ಜಾತಿಗಣತಿ ವರದಿ ಸೀಲ್ ಓಪನ್… ಕ್ಯಾಬಿನೆಟ್‌ನಲ್ಲಿ ಮಂಡನೆ; ಮುಂದಿನ‌ ಕ್ಯಾಬಿನೆಟ್‌ಗೆ ಕ್ಲೈಮ್ಯಾಕ್ಸ್..!

    ಅಧಿಕಾರಿಗಳು ಮೂಗುತಿ ಖರೀದಿಸಿದ್ದ ಅಂಗಡಿಯನ್ನು ಪತ್ತೆ ಹಚ್ಚಿ, ಖರೀದಿದಾರರ ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಯನ್ನು ಪಡೆದುಕೊಂಡರು. ಇದರಿಂದ ಸಂಪರ್ಕಕ್ಕೆ ಸಿಕ್ಕ ದೆಹಲಿ ಉದ್ಯಮಿಯನ್ನು ವಿಚಾರಿಸಿದಾಗ ನನ್ನ ಪತ್ನಿ ವೃಂದಾವನಕ್ಕೆ (Vrindavan) ಹೋಗಿರುವುದಾಗಿ ತಿಳಿಸಿದ್ದಾನೆ.

    ಹೆಚ್ಚಿನ ತನಿಖೆಗಾಗಿ ವಿಚಾರಣೆಗೊಳಪಡಿಸಿದಾಗ ಉದ್ಯಮಿ ತಪ್ಪೊಪ್ಪಿಕೊಂಡಿದ್ದು, ತನ್ನ ಪತ್ನಿಯನ್ನು ಭದ್ರತಾ ಸಿಬ್ಬಂದಿಯ ಸಹಾಯದಿಂದ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಹಾಗೂ ನಮ್ಮಿಬ್ಬರ ಸಂಬಂಧದಲ್ಲಿ ತುಂಬಾ ಭಿನ್ನಾಭಿಪ್ರಾಯಗಳಿದ್ದ ಕಾರಣ ಕೊಲೆ ಮಾಡಿರುವುದಾಗಿ ತಿಳಿಸಿದ್ದು, ಸದ್ಯ ಪೊಲೀಸರು ಪತಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ

  • ಡಿವೋರ್ಸ್‌ ವಿಚಾರ, ವ್ಯವಹಾರದಲ್ಲಿ ಕಲಹ – ಆತ್ಮಹತ್ಯೆಗೆ ಶರಣಾದ ದೆಹಲಿ ಉದ್ಯಮಿ

    ಡಿವೋರ್ಸ್‌ ವಿಚಾರ, ವ್ಯವಹಾರದಲ್ಲಿ ಕಲಹ – ಆತ್ಮಹತ್ಯೆಗೆ ಶರಣಾದ ದೆಹಲಿ ಉದ್ಯಮಿ

    ನವದೆಹಲಿ: ಇಲ್ಲಿನ ಉದ್ಯಮಿಯೊಬ್ಬರು (Business) ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ.

    ದೆಹಲಿಯ ವುಡ್‌ ಬಾಕ್ಸ್‌ ಕೆಫೆಯ (Woodbox Cafe) ಸಹ-ಸಂಸ್ಥಾಪಕ ಪುನೀತ್ ಖುರಾನಾ ಅವರು ಇಲ್ಲಿನ ಮಾಡೆಲ್‌ ಟೌನ್‌ನ ಕಲ್ಯಾಣ್‌ ವಿಹಾರ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ – ಹೊಸವರ್ಷಕ್ಕೂ ಮುನ್ನಾದಿನವೇ ತಾಯಿ, ನಾಲ್ವರು ಸಹೋದರಿಯರ ಹತ್ಯೆಗೈದ ಯುವಕ

    ಖುರಾನಾ ಮತ್ತು ಅವರ ಪತ್ನಿ ಮಾಣಿಕಾ ಜಗದೀಶ್ ಪಹ್ವಾ ಜೊತೆಗಿನ ವಿಚ್ಛೇದನ ಹಾಗೂ ಕೆಫೆ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆ ನಡುವೆಯೇ ಈ ಘಟನೆ ನಡೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ವುಡ್‌ಬಾಕ್ಸ್ ಕೆಫೆ ಹೊಂದಿದ್ದ ದಂಪತಿ ಜಂಟಿಯಾಗಿ ವ್ಯವಹಾರ ನಡೆಸುತ್ತಿದ್ದರು. ಇಬ್ಬರ ನಡುವೆ ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಏರ್ಪಟ್ಟಿತ್ತು. ಅಲ್ಲದೇ ಇಬ್ಬರ ನಡುವೆ ಮೊದಲಿನಿಂದಲೂ ದಾಂಪತ್ಯ ಕಲಹವಿತ್ತು. ಇದೇ ಕಾರಣಕ್ಕೆ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರಿಬ್ಬರು 2016ರಲ್ಲಿ ಮದುವೆಯಾಗಿದ್ದರು, ಪತ್ನಿ ಮೇಲೆ ಖುರಾನಾಗೆ ಅಸಮಾಧಾನ ಇತ್ತು ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಈ ಮಧ್ಯೆ ಇಬ್ಬರ ನಡುವಿನ 16 ನಿಮಿಷಗಳ ಸಂಭಾಷಣೆಯ ಆಡಿಯೋವೊಂದು ಲಭ್ಯವಾಗಿದೆ. ಅದರಲ್ಲಿ ಇಬ್ಬರು ಕೆಫೆ ವ್ಯವಹಾರದ ವಿಚಾರವಾಗಿ ಜಗಳವಾಡುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ʻಕೈʼ ಶಾಸಕ ನರೇಂದ್ರಸ್ವಾಮಿಗೆ ಐಶ್ವರ್ಯಗೌಡ ಹಣ ನೀಡಿದ್ದಾರೆ: ಅನ್ನದಾನಿ ಬಾಂಬ್‌

    ಆಡಿಯೋದಲ್ಲಿ ನಾವಿಬ್ಬರೂ ಡಿವೋರ್ಸ್‌ ಪಡೆದುಕೊಳ್ಳೋಣ. ಆದ್ರೆ ವಿಚ್ಛೇದನದ ನಂತರವೂ ವ್ಯವಹಾರದಲ್ಲಿ ಪಾಲುದಾರಳಾಗಿರುತ್ತೇನೆ. ನೀವು ನನ್ನ ಬಾಕಿ ಸಾಲವನ್ನ ತೀರಿಸಬೇಕು ಎಂದು ಖುರಾನಾ ಪತ್ನಿ ಮನಿಕಾ ಹೇಳಿದ್ದಾರೆ. ಘಟನೆಯ ಬಳಿಕ ಪೊಲೀಸರು ಖುರಾನಾ ಪತ್ನಿಯ ಫೋನನ್ನು ವಶಕ್ಕೆ ಪಡೆದಿದ್ದು, ಆಕೆಯನ್ನು ವಿಚಾರಣೆಗೆ ಕರೆದಿದ್ದಾರೆ. ಇದನ್ನೂ ಓದಿ:  ಬಿಜೆಪಿಯ ಮತ ಖರೀದಿ ಯತ್ನವನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ – ಭಾಗವತ್‌ಗೆ ಕೇಜ್ರಿವಾಲ್ ಪ್ರಶ್ನೆ

    ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದ ಅತುಲ್ ಸುಭಾಷ್ ಪತ್ನಿಯ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದರು. ಸಾವಿಗೂ ಮೊದಲು ಅತುಲ್ ಸುಭಾಷ್ ಅವರು 24 ಪುಟಗಳ ಡೆತ್‌ನೋಟ್‌ ಬರೆದಿದ್ದು, ಅದನ್ನು ತಮ್ಮ ಕುಟುಂಬಸ್ಥರಿಗೆ ಕಳುಹಿಸಿದ್ದರು. ಅತುಲ್‌ ಸಾವು ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದಲ್ಲದೇ ಅನೇಕರು ಏಕಪಕ್ಷೀಯವಾಗಿರುವ ಕೌಟುಂಬಿಕ ವಿವಾಹ ಕಾಯ್ದೆಯ ಬಗ್ಗೆ ಚರ್ಚೆ ನಡೆಸುವಂತೆ ಮಾಡಿತ್ತು. ಅತುಲ್ ಸುಭಾಷ್ ಸಾವಿನ ನಂತರ ಅವರ ಪತ್ನಿ ನಿಖಿತಾ ಸಿಂಘಾನಿಯಾ ಆಕೆಯ ತಾಯಿ ಹಾಗೂ ಸೋದರನನ್ನು ಪೊಲೀಸರು ಬಂಧಿಸಿ 14 ದಿನಗಳ ನ್ಯಾಯಾಂಗ ಕಸ್ಟಡಿಯಲ್ಲಿರಿಸಿದ್ದು, ತನಿಖೆ ಮುಂದುವರಿದಿದೆ.