Tag: ದೆಹಲಿ ಅಭಿವೃದ್ಧಿ ಪ್ರಾಧಿಕಾರ

  • ಒತ್ತುವರಿ ತೆರವು – ಮದ್ಯದ ಉದ್ಯಮಿಯ 400 ಕೋಟಿ ರೂ. ಮೌಲ್ಯದ ಫಾರ್ಮ್‌ಹೌಸ್‌ ಧ್ವಂಸ

    ಒತ್ತುವರಿ ತೆರವು – ಮದ್ಯದ ಉದ್ಯಮಿಯ 400 ಕೋಟಿ ರೂ. ಮೌಲ್ಯದ ಫಾರ್ಮ್‌ಹೌಸ್‌ ಧ್ವಂಸ

    ನವದೆಹಲಿ: ಮಹತ್ವದ ಕಾರ್ಯಾಚರಣೆಯಲ್ಲಿ ಛತ್ತರ್‌ಪುರದಲ್ಲಿ ನಿರ್ಮಿಸಿದ್ದ ಮದ್ಯದ ಉದ್ಯಮಿ ದಿವಂಗತ ಪಾಂಟಿ ಚಡ್ಡಾ (Ponty Chadha )ಅವರ 400 ಕೋಟಿ ರೂ. ಮೌಲ್ಯದ ಫಾರ್ಮ್‌ಹೌಸ್‌ ಅನ್ನು ನೆಲಸಮಗೊಳಿಸಲಾಗಿದೆ ಎಂದು ದೆಹಲಿ ಅಭಿವೃದ್ಧಿ ಪ್ರಾಧಿಕಾರದ (Delhi Development Authority) ಅಧಿಕಾರಿಗಳು ತಿಳಿಸಿದ್ದಾರೆ.

    ನಗರದಲ್ಲಿ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಅಕ್ರಮ ಕಟ್ಟಡಗಳ ನಿರ್ಮಾಣ ತೆರವು ಕಾರ್ಯಾಚರಣೆ ಆರಂಭಿಸಿರುವ ಡಿಡಿಎ ಭಾರೀ ಪ್ರಮಾಣದ ಆಸ್ತಿಯನ್ನು ವಶಪಡಿಸಿಕೊಂಡಿದೆ.

    ಸುಮಾರು 10 ಎಕರೆಯಷ್ಟು ವಿಸ್ತೀರ್ಣದಲ್ಲಿ ನಿರ್ಮಿಸಿದ್ದ ಮದ್ಯದ ಉದ್ಯಮಿ ದಿವಂಗತ ಪಾಂಟಿ ಚಡ್ಡಾ ಅಲಿಯಾಸ್ ಗುರುದೀಪ್ ಸಿಂಗ್ ಅವರ ಫಾರ್ಮ್‌ಹೌಸ್ (Farmhouse) ಅನ್ನು ನೆಲಸಮಗೊಳಿಸಿದೆ. ಈ ಫಾರ್ಮ್‌ಹೌಸ್‌ ಸುಮಾರು 400 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸತತ ಎರಡು ದಿನಗಳ ಕಾರ್ಯಾಚರಣೆ ಬಳಿಕ 10 ಎಕರೆ ಭೂಪ್ರದೇಶವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ. ದಿವಂಗತ ಪಾಂಟಿ ಚಡ್ಡಾ ಅಲಿಯಾಸ್ ಗುರುದೀಪ್ ಸಿಂಗ್ ಅವರ ಸಂಸ್ಥೆ ಅಥವಾ ಕುಟುಂಬಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: BJP Lok Sabha Candidates: ಮೊದಲ ಪಟ್ಟಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸೀಟು?

    ಅಲ್ಲದೇ ಕಳೆದ ಜನವರಿ 13 ಮತ್ತು 17ರಂದು ಈಶಾನ್ಯ ದೆಹಲಿಯ ಗೋಕುಲಪುರಿಯಲ್ಲಿ ನಡೆಸಲಾದ ಒತ್ತುವರಿ ಕಾರ್ಯಾಚರಣೆಯಲ್ಲಿ ಹಲವು ವಾಣಿಜ್ಯ ಶೋ ರೂಮ್‌ಗಳನ್ನು ನೆಲಸಮಗೊಳಿಸಿ 4 ಎಕರೆ ಭೂಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇದನ್ನೂ ಓದಿ: ಪತಿ ಇರುವಾಗಲೇ ಸ್ಪೇನ್‌ ಮಹಿಳೆಯ ಮೇಲೆ ಜಾರ್ಖಂಡ್‌ನಲ್ಲಿ 7 ಮಂದಿಯಿಂದ ಗ್ಯಾಂಗ್‌ರೇಪ್‌

  • ಬಡವರಿಗೆ 3 ಸಾವಿರ ಮನೆ ವಿತರಿಸಿದ ಪ್ರಧಾನಿ ಮೋದಿ

    ಬಡವರಿಗೆ 3 ಸಾವಿರ ಮನೆ ವಿತರಿಸಿದ ಪ್ರಧಾನಿ ಮೋದಿ

    ನವದೆಹಲಿ: ಕೊಳೆಗೇರಿ ಪುನರ್ವಸತಿ (Slum Rehabilitation) ಯೋಜನೆಯ ಭಾಗವಾಗಿ ದೆಹಲಿಯಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಬಡವರಿಗೆ ಹೊಸದಾಗಿ ನಿರ್ಮಿಸಲಾದ 3,024 ಮನೆಗಳನ್ನ ಫ್ಲಾಟ್‌ಗಳನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಹಸ್ತಾಂತರಿಸಿದ್ದಾರೆ.

    ಇಂದು ದೆಹಲಿಯಲ್ಲಿ (NewDelhi) ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಫಲಾನುಭವಿಗಳಿಗೆ ಮನೆ ಕೀಲಿಗಳನ್ನ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: 132 ಕೃತ್ಯಗಳಲ್ಲಿ ಭಾಗಿಯಾಗಿದ್ದ ಬೆಳಗಾವಿಯ 12 ಆರೋಪಿಗಳು ಗಡಿಪಾರು

    ಈ ಬೆಳವಣಿಗೆಯು ಕೊಳೆಗೇರಿ ನಿವಾಸಿಗಳಿಗೆ (Slum People) ಮಾಲೀಕತ್ವ ಹಾಗೂ ಭದ್ರತೆಯ ಭಾವನೆ ತರುತ್ತದೆ ಎಂದು ಈ ಹಿಂದೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಹೇಳಿತ್ತು. ಇದನ್ನೂ ಓದಿ: 132 ಕೃತ್ಯಗಳಲ್ಲಿ ಭಾಗಿಯಾಗಿದ್ದ ಬೆಳಗಾವಿಯ 12 ಆರೋಪಿಗಳು ಗಡಿಪಾರು

    ದೆಹಲಿ ಅಭಿವೃದ್ಧಿ ಪ್ರಾಧಿಕಾರವು (DDA) ಸಹ ಪ್ರತಿಯೊಬ್ಬರಿಗೂ ಕೊಳೆಗೇರಿ ಪುನರ್ವಸತಿ ಯೋಜನೆ ಅಡಿಯಲ್ಲಿ 376 ಜುಗ್ಗಿ-ಜೋಪ್ರಿ (Slum) ಕ್ಲಸ್ಟರ್‌ಗಳಲ್ಲಿ ವಸತಿ ಕಲ್ಪಿಸುವ ಉದ್ದೇಶ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.

    ಕಾರ್ಯಕ್ರಮದಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]