Tag: ದೆವ್ವ

  • ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಗೆ ಹಿಗ್ಗಾಮುಗ್ಗಾ  ಥಳಿತ

    ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ

    ಮೈಸೂರು: ವಿಚಿತ್ರವಾಗಿ ವರ್ತಿಸುತ್ತಿದ್ದ ಮಹಿಳೆ ಮೈಮೇಲೆ ದೆವ್ವಬಂದಿದೆ ಎಂದು ತಿಳಿದು ಪೂಜಾರಿಯೊಬ್ಬ ಹಿಗ್ಗಾಮಗ್ಗಾ ಥಳಿಸಿದ್ದಾನೆ.

    ಪಿರಿಯಾಪಟ್ಟಣ ತಾಲೂಕಿನ ನಾಗನಹಳ್ಳಿಪಾಳ್ಯದ ನಿವಾಸಿ ಶಾರದಾ ಅನಾರೋಗ್ಯದಿಂದ ಬಳಲುತ್ತಿದ್ದು, ವಿಚಿತ್ರವಾಗಿ ವರ್ತಿಸುತ್ತಿದ್ದರು. ಈ ಕಾರಣದಿಂದ ಸೆ.30 ರಂದು ಬೆಟ್ಟದಪುರದ ಶನೇಶ್ವರ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದರು.

    ಆರೋಪಿ ಪೂಜಾರಿ ಕುಮಾರ್ ಎಂಬಾತ ಶಾರದ ಅವರ ಮೈಮೇಲೆ ದೆವ್ವ ಬಂದಿದೆ. ಈ ದೆವ್ವವನ್ನು ಬಿಡಿಸುತ್ತೇನೆ ಎಂದು ಹೇಳಿ ಕೋಲಿನಿಂದ ಮೈಯೆಲ್ಲಾ ಬಾಸುಂಡೆ ಬರುವಂತೆ ಹಿಗ್ಗಾಮಗ್ಗಾ ಥಳಿಸಿದ್ದಾನೆ. ನಂತರ ಶಾರದ ಪ್ರಜ್ಞೆ ತಪ್ಪಿದಾಗ ದೆವ್ವ ಬಿಟ್ಟಿದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸೂಚಿಸಿದ್ದಾನೆ.

    ಶಾರದಗೆ ದೆವ್ವ ಬಿಡಿಸುವ ನೆಪ ಹೇಳಿ ಹಿಗ್ಗಾಮಗ್ಗಾ ಥಳಿಸಿದ್ದರಿಂದ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾರೆಂದು ಕುಮಾರ್ ವಿರುದ್ಧ ಬೆಟ್ಟದಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

  • 3 ವರ್ಷದ ಮಗಳ ಕಿವಿಯನ್ನೇ ಕತ್ತರಿಸಿದ ತಂದೆ!

    3 ವರ್ಷದ ಮಗಳ ಕಿವಿಯನ್ನೇ ಕತ್ತರಿಸಿದ ತಂದೆ!

    ನವದೆಹಲಿ: ತಂದೆಯೊಬ್ಬ ತನ್ನ 3 ವರ್ಷದ ಪುಟ್ಟ ಮಗಳ ಕಿವಿಯನ್ನೇ ಕತ್ತರಿಸಿದ ವಿಚಿತ್ರ ಘಟನೆ ದೆಹಲಿಯಲ್ಲಿ ನಡೆದಿದೆ.

    35 ವರ್ಷದ ಅಮೃತ್ ಬಹದ್ದೂರ್ ಈ ಕೃತ್ಯವೆಸಗಿದ್ದು ಇದೀಗ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಗುರುವಾರ ಬೆಳಿಗ್ಗೆ ದೆಹಲಿಯ ಜಿಟಿಬಿಒ ಎನ್‍ಕ್ಲೇವ್‍ನಲ್ಲಿ ಈ ಘಟನೆ ನಡೆದಿದೆ.

    ದೆವ್ವ ಹೇಳ್ತಂತೆ!: ಕುಟುಂಬಸ್ಥರ ಪ್ರಕಾರ ಕೆಲವು ತಿಂಗಳ ಹಿಂದೆ ಒಂದೂವರೆ ವರ್ಷದ ಮಗಳು ಮೃತಪಟ್ಟಿದ್ದು ಅಂದಿನಿಂದ ಬಹದ್ದೂರ್ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಅಂದಿನಿಂದ ದೆವ್ವ ಭೂತ ಎಂಬ ಭ್ರಮೆಗಳನ್ನ ಹೊಂದಿದ್ದು, ಎರಡನೇ ಮಗಳ ಕಿವಿ ಕತ್ತರಿಸುವಂತೆ ದೆವ್ವ ಹೇಳಿತು ಎಂದು ಬಹದ್ದೂರ್ ಹೇಳಿದ್ದಾನೆ.

    ಬಹದ್ದೂರ್ ಕ್ಲೀನರ್ ಆಗಿ ಕೆಲಸ ಮಾಡ್ತಿದ್ದು, ಮಧ್ಯರಾತ್ರಿ ಸುಮಾರು 1.30ರ ಸಮಯದಲ್ಲಿ ಮನೆಗೆ ಬಂದಿದ್ದ. ಈ ವೇಳೆ ಮದ್ಯಪಾನ ಮಾಡಿದ್ದ. ಈತನಿಗೆ ಈ ಕೃತ್ಯವೆಸಗಲು ಏನೋ ಒಂದು ಪ್ರಚೋದನೆ ನೀಡುತ್ತಿದೆ ಎನ್ನಿಸುತ್ತಿತ್ತಂತೆ. ಒಂದು ವೇಳೆ ಹಾಗೆ ಮಾಡದಿದ್ದರೆ ಎರಡನೇ ಮಗಳನ್ನ ಕಳೆದುಕೊಳ್ಳಬಹುದು ಎಂದುಕೊಂಡಿದ್ದನಂತೆ. ಹೀಗಾಗಿ ಮಗಳ ಕಿವಿಯನ್ನ ಕತ್ತರಿಸಿದೆ ಎಂದಿದ್ದಾನೆ.

    ಈ ವೇಳೆ ಕುಟುಂಬಸ್ಥರು ಎಚ್ಚರಗೊಂಡು ಚೀರಾಡಿದ್ದಾರೆ. ನಂತರ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು ಬಾಲಕಿಯನ್ನ ರಕ್ಷಿಸಲಾಗಿದೆ ಎಂದು ಡಿಸಿಪಿ ನೂಪುರ್ ಪ್ರಸಾದ್ ಎಎನ್‍ಐಗೆ ತಿಳಿಸಿದ್ದರೆ.

    ಬಾಲಕಿಯ ತಾಯಿ ಮಧ್ಯಪ್ರವೇಶಿಸಲು ಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಬಹದ್ದೂರ್ ಹೆಂಡತಿಯನ್ನ ಹೊಡೆದು, ಮನೆ ಬಿಟ್ಟು ಹೋಗುವಂತೆ ಹೇಳಿದ್ದ. ನಂತರ ಹೆಂಡತಿ ಹಾಗೂ ಉಳಿದ ಐವರು ಮಕ್ಕಳನ್ನು ಮೇಲ್ಮಡಿಗೆ ಕರೆದುಕೊಂಡು ಹೋಗಿ ಬಾಗಿಲನ್ನ ಲಾಕ್ ಮಾಡಿದ್ದ. ನಂತರ ವಾಪಸ್ ಬಂದು ಮಗಳಿಗೆ ಮತ್ತಷ್ಟು ಹಿಂಸೆ ನೀಡಿ ಕಿವಿಯನ್ನ ಕತ್ತರಿಸಿದ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕೆಗೆ ತಿಳಿಸಿದ್ದಾರೆ.

    ಕಿವಿಯನ್ನು ಕತ್ತರಿಸಿದ್ರೂ ದೆವ್ವಕ್ಕೆ ತೃಪ್ತಿಯಾಗ್ಲಿಲ್ಲ ಎಂದು ಹೇಳಿ ಬಹದ್ದೂರ್ ಮಗಳ ಕುತ್ತಿಗೆಯಿಂದ ರಕ್ತ ಬೇಕು ಎಂದಿದ್ದ. ಈ ವೇಳೆ ಬಾಲಕಿ ಓಡಿಹೋಗಲು ಯತ್ನಿಸಿದ್ದು ಆತ ಆಕೆಯನ್ನು ಹಿಡಿದುಕೊಂಡಿದ್ದಾನೆ. ಬಾಲಕಿಯ ತಾಯಿ ಜೋರಾಗಿ ಕಿರುಚಾಡೋದನ್ನ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದು ಪೊಲೀಸರಿಗೆ ಕರೆ ಮಾಡಿದ್ರು. ನಂತರ ಪೊಲೀಸರು ಬಹದ್ದೂರ್ ಮನೆ ತಲುಪಿದ್ರು. ಆತ ಕುತ್ತಿಗೆಯನ್ನು ಸೀಳುವ ಮುನ್ನವೇ ಆತನನ್ನ ಹಿಡಿದುಕೊಳ್ಳಲಾಯ್ತು ಎಂದು ಹಿರಿಯ ಅಧಿಕಾರಿಯಬ್ಬರು ಹೇಳಿದ್ದಾರೆ. ಬಾಲಕಿಯನ್ನು ಸದ್ಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.

    ಬಹದ್ದೂರ್‍ನ ಅಣ್ಣ 7 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅಣ್ಣನ ಸಾವಿನ ನಂತರ ಆತ 4 ಮಕ್ಕಳಿದ್ದ ಅತ್ತಿಗೆಯನ್ನೇ ಮದುವೆಯಾಗಿದ್ದಾನೆಂದು ವರದಿಯಾಗಿದೆ.

  • 4 ತಿಂಗಳ ಗರ್ಭಿಣಿಯನ್ನು 4ನೇ ಮಹಡಿಯಿಂದ ತಳ್ಳಿತು ದೆವ್ವ!

    4 ತಿಂಗಳ ಗರ್ಭಿಣಿಯನ್ನು 4ನೇ ಮಹಡಿಯಿಂದ ತಳ್ಳಿತು ದೆವ್ವ!

    ನವದೆಹಲಿ: ದೆವ್ವರೂಪಿ ಪತಿಯೊಬ್ಬ ತನ್ನ 4 ತಿಂಗಳ ಗರ್ಭಿಣಿ ಪತ್ನಿಯನ್ನು ಕಡ್ಟಡದ 4ನೇ ಮಹಡಿಯಿಂದ ತಳ್ಳಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

    ಫರಿ ಚೌಕಂಡಿ ನಿವಾಸಿಯಾಗಿರುವ ಅಮರ್ ಸಿಂಗ್(26) ಎಂಬಾತ ತನ್ನ ಗರ್ಭಿಣಿ ಪತ್ನಿ ಬಬಿತಾ ಜೊತೆ ಜಗಳವಾಡಿ ನಂತರ ಆಕೆಯನ್ನು ಕಟ್ಡಡದಿಂದ ಕೆಳಕ್ಕೆ ತಳ್ಳಿದ್ದಾನೆ.

    ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಬಿತಾ ತಲೆ, ಬೆನ್ನೆಲುಬು ತುಂಬಾ ಗಾಯಗಳಾಗಿವೆ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ.

    ಶನಿವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದ್ದು, ಭಾನುವಾರ ಬೆಳಗ್ಗೆ 4 ಗಂಟೆಗೆ ಬಬಿತಾ ಸಹೋದರ ಸತೀಂದರ್‍ಗೆ ಕರೆ ಮಾಡಿ ಅಮರ್ ಸಿಂಗ್ ದೆವ್ವವೊಂದು ಬಬಿತಾಳನ್ನು ಕಟ್ಟಡದಿಂದ ತಳ್ಳಿದೆ ಎಂದು ಕಟ್ಟು ಕತೆಯನ್ನು ಹೇಳಿದ್ದಾನೆ.

    ಈ ವೇಳೆ ದೆವ್ವ ಅಂದ್ರೆ ಏನು ಎಂದು ಪ್ರಶ್ನಿಸಿದ್ದಕ್ಕೆ ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಲೇ ಇದ್ದ ಎಂದು ಸತೀಂದರ್ ಹೇಳಿದ್ದಾರೆ. 2016 ರಲ್ಲಿ ಅಮರ್ ಸಿಂಗ್ ಹಾಗೂ ಬಬಿತಾ ಅವರಿಗೆ ಮದುವೆಯಾಗಿದ್ದು, ಅವರಿಗೆ 8 ತಿಂಗಳ ಮಗುವಿದೆ. ಆಕೆ ಮತ್ತೆ ಗರ್ಭಿಣಿಯಾಗಿದ್ದು, ಅಮರ್ ಸಿಂಗ್ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ಸತೀಂದರ್ ತಿಳಿಸಿದ್ದಾರೆ.

    ಸತೀಂದರ್ ನೀಡಿದ ದೂರಿನ ಆಧಾರದಲ್ಲಿ ಅಮರ್ ಸಿಂಗ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುವುದು ಪೊಲೀಸ್ ಅಧಿಕಾರಿ ಜಹೀರ್ ಖಾನ್ ತಿಳಿಸಿದ್ದಾರೆ.

    ಇದನ್ನೂ ಓದಿ:ನಿಮ್ಮನ್ನ ಬಿಟ್ಟು ಹೋಗ್ತಿದ್ದೀನಿ, SORRY ಪ್ಲೀಸ್ ಅಳ್ಬೇಡಿ: ಗಂಡನಿಗೆ ಪತ್ರ ಬರೆದು ಮಗುವಿನೊಂದಿಗೆ ಬೇರೊಬ್ಬನ ಜೊತೆ ಪರಾರಿ!