Tag: ದೂರುದಾರ

  • ನೀರಿನಲ್ಲಿ ಮುಳುಗಿದ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ʻಚಿನ್ನಯ್ಯʼ – ಮುಸುಕುಧಾರಿಯ ಅಸಲಿಯತ್ತು ಬಯಲು

    ನೀರಿನಲ್ಲಿ ಮುಳುಗಿದ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ʻಚಿನ್ನಯ್ಯʼ – ಮುಸುಕುಧಾರಿಯ ಅಸಲಿಯತ್ತು ಬಯಲು

    – ಮಹಿಳೆಯರ ಮೂಗುತಿ, ಸರಗಳ್ಳತನ ಮಾಡ್ತಿದ್ದ ಮಾಸ್ಕ್‌ ಮ್ಯಾನ್‌

    ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಪ್ರಕರಣ (Dharmasthala Case) ಇನ್ನೇನು ತಾರ್ಕಿಕ ಅಂತ್ಯಕ್ಕೆ ಬರುತ್ತಿದೆ. ತೀವ್ರ ವಿಚಾರಣೆ ಬಳಿಕ ಮುಸುಕುಧಾರಿಯನ್ನು ಬಂಧಿಸಿರುವ ವಿಶೇಷ ತನಿಖಾ ತಂಡ (SIT) ಆತನ ಹೆಸರು, ಊರು, ಹಿನ್ನೆಲೆಯನ್ನು ಬಹಿರಂಗಪಡಿಸಿದೆ.

    ಹೌದು. ನೂರಾರು ಶವಗಳನ್ನು ತಾನೇ ಹೂತಿರುವುದಾಗಿ ಮತ್ತು ಹೂಳುವಾಗ ಶವಗಳು ಕೊಲೆ ಮತ್ತು ಅತ್ಯಾಚಾರ ಮಾಡಿದ್ದ ಸ್ಥಿತಿಯಲ್ಲಿರುತ್ತಿದ್ದವು ಎಂಬುದಾಗಿ ಬುರುಡೆ ಬಿಟ್ಟಿದ್ದ ಮಾಸ್ಕ್‌ ಮ್ಯಾನ್‌ (Mask Man) ಮುಖವಾಡವನ್ನು ಎಸ್‌ಐಟಿ ಅಧಿಕಾರಿಗಳು ಕಳಚಿದ್ದಾರೆ. ಈತನ ಹಿನ್ನೆಲೆಯನ್ನೂ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆನೇ ಇದ್ದಾರೆ: ಮಾಸ್ಕ್ ಮ್ಯಾನ್ ಸ್ಫೋಟಕ ಹೇಳಿಕೆ

    ದೂರುದಾರ ಮೂಲತಃ ಮಂಡ್ಯ (Mandya) ಜಿಲ್ಲೆಯವನಾಗಿದ್ದು, ಸಿ.ಎನ್ ಚಿನ್ನಯ್ಯ ಅಲಿಯಾಸ್ ಚಿನ್ನಪ್ಪ ಅಲಿಯಾಸ್ ಚಿನ್ನಯ್ಯ ಅಲಿಯಾಸ್ ಚೆನ್ನಯ್ಯ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಮುಸುಕುಧಾರಿಗೆ ಈ ಹೆಸರು ಬರೋದಕ್ಕೂ ಒಂದು ಕಾರಣ ಇದೆ. ಈತ ನದಿಯಲ್ಲಿ ಮುಳುಗಿದ ಹೆಣಗಳಿಂದ ಚಿನ್ನ ಕದಿಯುತ್ತಿದ್ದನಂತೆ, ಮಹಿಳೆಯರ ಮೂಗುತಿ, ಕಿವಿಯೋಲೆ, ಸರಗಳನ್ನೂ ಕದಿಯುತ್ತಿದ್ದನಂತೆ. ಈ ಕಾರಣದಿಂದಾಗಿಗೇ ಚಿನ್ನಪ್ಪ, ಚಿನ್ನಯ್ಯ ಎಂದು ಕರೆಯುತ್ತಿದ್ದರಂತೆ. ಇದನ್ನೂ ಓದಿ: ಸೌಜನ್ಯ ತಾಯಿ ಷಡ್ಯಂತ್ರಕ್ಕೆ ಬಲಿಯಾಗಿರುವ ಸಾಧ್ಯತೆಯಿದೆ, ಅವರನ್ನು ವಿಚಾರಣೆ ಒಳಪಡಿಸಬೇಕು: ಸೂಲಿಬೆಲೆ

    ಸದ್ಯ ಮಾಸ್ಕ್‌ ಮ್ಯಾನನ್ನ ಬಂಧಿಸಿರುವ ಎಸ್‌ಐಟಿ ಪೊಲೀಸರು ಮೆಡಿಕಲ್‌ ಟೆಸ್ಟ್‌ಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಕರೆತಂದಿದ್ದಾರೆ. ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಆತನನ್ನ ನ್ಯಾಯಾಧೀಶರ ಎದುರು ಹಾಜರುಪಡಿಸಿ, ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: Dharmasthala Case | ಎಸ್‌ಐಟಿಯಿಂದ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಅರೆಸ್ಟ್‌

  • ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮಾರಾಟ ಮಾಡುವುದಾಗಿ ವಂಚನೆ – ಆರೋಪಿ ಅರೆಸ್ಟ್

    ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮಾರಾಟ ಮಾಡುವುದಾಗಿ ವಂಚನೆ – ಆರೋಪಿ ಅರೆಸ್ಟ್

    ಬೆಂಗಳೂರು: ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮಾರಾಟ ಮಾಡುವುದಾಗಿ ವಂಚಸಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

    ದೆಹಲಿ ಮೂಲದ ಅಮನ್ ಕುಮಾರ್ (20) ಬಂಧಿತ ಆರೋಪಿ. ಅಮನ್ ಓಎಲ್‍ಎಕ್ಸ್ ನಲ್ಲಿ 1.50 ಲಕ್ಷ ಮೌಲ್ಯದ ಲ್ಯಾಪ್‍ಟಾಪ್ ಜಾಹೀರಾತು ನೀಡಿದ್ದನು. ಈ ವೇಳೆ ದೂರುದಾರನೊಬ್ಬನು ವಂಚನೆಕೋರನನ್ನು ಸಂಪರ್ಕಿಸಿದ್ದನು. ಈ ಸಂದರ್ಭದಲ್ಲಿ ಆರೋಪಿಯು ಪ್ಯಾಕಿಂಗ್ ಚಾರ್ಜ್, ಶಿಪ್ಪಿಂಗ್ ಚಾರ್ಜ್ ಎಂದು 72 ಸಾವಿರ ರೂ. ಪಡೆದಿದ್ದ. ಇದನ್ನೂ ಓದಿ: ಹಿಜಬ್ ಸಂಘರ್ಷ ಮಧ್ಯೆ ಸಾವರ್ಕರ್ ಫೋಟೋ ವಿವಾದ – ವಿದ್ಯಾರ್ಥಿಗಳ ಮೇಲೆ ಹಲ್ಲೆ

    ದುಡ್ಡು ಪಡೆದ ಬಳಿಕ ಲ್ಯಾಪ್‍ಟಾಪ್ ಬದಲು ಖಾಲಿ ಪಾರ್ಸೆಲ್ ರವಾನಿಸಿದ್ದಾನೆ. ಈ ಕುರಿತು ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಸೆರೆಹಿಡಿಯಲಾಗಿದೆ. ಇದನ್ನೂ ಓದಿ: ಮುಸ್ಲಿಂ ಸಂಘಟನೆಗಳ ಪ್ರತಿಭಟನೆ – ಬೆಂಗಳೂರಿನ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ

  • ಕಂಪ್ಲೇಂಟ್ ಕೊಟ್ಟವನೇ ಕಳ್ಳ-ಪೊಲೀಸರ ತನಿಖೆಯಲ್ಲಿ ಸಂಚು ಬಯಲು

    ಕಂಪ್ಲೇಂಟ್ ಕೊಟ್ಟವನೇ ಕಳ್ಳ-ಪೊಲೀಸರ ತನಿಖೆಯಲ್ಲಿ ಸಂಚು ಬಯಲು

    -ಪೊಲೀಸರ ಅತಿಥಿಯಾದ ದೂರುದಾರ

    ಚಿಕ್ಕಬಳ್ಳಾಪುರ: ನನ್ನನ್ನ ಅಡ್ಡಗಟ್ಟಿದ ದರೋಡೆಕೋರರು ಹಲ್ಲೆ ಮಾಡಿ ನನ್ನ ಬಳಿ ಇದ್ದ ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡಿಕೊಂಡು ಹೋದ್ರು ಅಂತ ಪೊಲೀಸ್ ಠಾಣೆಗೆ ದೂರು ನೀಡಿದ ದೂರುದಾರನೇ ಪೊಲೀಸರ ಅತಿಥಿಯಾಗಿ ಜೈಲು ಸೇರಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಕೋಳಿ ಮಾರಾಟ ಮಾಡುವ ಲೋಟಸ್ ಖಾಸಗಿ ಕಂಪನಿಯ ಸೂಪರ್ ವೈಸರ್ ಉದಯ್ ಕುಮಾರ್ ಬಂಧಿತ ದೂರುದಾರ. ಜುಲೈ 21 ರಂದು ಚಿಕ್ಕಬಳ್ಳಾಪುರ ತಾಲೂಕು ಆನೆಮಡುಗು ಗ್ರಾಮದ ಬಳಿಯ ಹರೀಶ್ ಎಂಬುವರಿಗೆ ಸೇರಿದ ಕೋಳಿ ಫಾರಂ ಗೆ ಭೇಟಿ ನೀಡಿ ಅಲ್ಲಿದ್ದ ಕೋಳಿಗಳನ್ನ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದನು. ಮಾರಾಟದಿಂದ ಬಂದ 7 ಲಕ್ಷದ 91 ಸಾವಿರ ರೂಪಾಯಿ ಪಡೆದು ತನ್ನೂರಾದ ಗುಡಿಬಂಡೆ ತಾಲೂಕು ಎಲ್ಲೋಡು ಗ್ರಾಮದತ್ತ ತೆರಳಿದ್ದನು.

    ಈ ವೇಳೆ ಕೇತೇನಹಳ್ಳಿ ಬಳಿ ನನ್ನನ್ನು ಅಡ್ಡಗಟ್ಟಿದ್ದ ಗೌರಿಬಿದನೂರು ತಾಲೂಕು ಸಾಗಾನಹಳ್ಳಿ ಗ್ರಾಮದ ಪ್ರಶಾಂತ್, ನರಸಿಂಹಮೂರ್ತಿ, ಪ್ರಥ್ವಿರಾಜ್, ಕಿರಣ್, ನವೀನ್ ಕುಮಾರ್ ಹಲ್ಲೆ ಮಾಡಿ ಹಣ ಕಸಿದುಕೊಂಡು ಹೋದರು ಎಂದು ಉದಯ್ ಕುಮಾರ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಈ ಸಂಬಂಧ ತನಿಖೆಗಿಳಿದ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಇದೆಲ್ಲವೂ ದೂರುದಾರ ಉದಯ್ ಕುಮಾರ್ ಪ್ಲಾನ್ ಎಂಬ ವಿಷಯ ತಿಳಿದಿದೆ. ಉದಯಕುಮಾರ್ ನಮಗೆ ಈ ರೀತಿ ದರೋಡೆ ಮಾಡಿ ತನ್ನ ಕಂಪನಿಯ ಹಣ ಎಗಿರಿಸುವ ಸಂಚು ರೂಪಿಸಿದ್ದನು. ಅವನ ಸೂಚನೆಯಂತೆ ನಾವು ಈ ಕೃತ್ಯ ಮಾಡಿದ್ದೀವಿ ಅಂತ ಬಾಯಿ ಬಿಟ್ಟಿದ್ದಾರೆ.

    ಹೀಗಾಗಿ ದೂರುದಾರನನ್ನೇ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತರ ಬಳಿ 7 ಲಕ್ಷದ 60 ಸಾವಿರ ಹಾಗೂ ಕೃತ್ಯಕ್ಕೆ ಬಳಿಸಿದ ಇನ್ನೋವಾ ಕಾರು 4 ಮೊಬೈಲ್ ಪೋನ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.