Tag: ದೂರವಾಣಿ ಕದ್ದಾಲಿಕೆ

  • ಎಚ್‍ಡಿಕೆ ದೂರವಾಣಿ ಕದ್ದಾಲಿಕೆ ಮಾಡುವಂತಹ ವ್ಯಕ್ತಿ ಅಲ್ಲ- ಜೆಡಿಎಸ್ ಶಾಸಕ ಶ್ರೀನಿವಾಸಗೌಡ

    ಎಚ್‍ಡಿಕೆ ದೂರವಾಣಿ ಕದ್ದಾಲಿಕೆ ಮಾಡುವಂತಹ ವ್ಯಕ್ತಿ ಅಲ್ಲ- ಜೆಡಿಎಸ್ ಶಾಸಕ ಶ್ರೀನಿವಾಸಗೌಡ

    ಕೋಲಾರ: ಮಾಜಿ ಸಿಎಂ ಕುಮಾರಸ್ವಾಮಿ ದೂರವಾಣಿ ಕದ್ದಾಲಿಕೆ ಮಾಡುವಂತಹ ವ್ಯಕ್ತಿ ಅಲ್ಲ, ಆ ಮಟ್ಟಕ್ಕೆ ಹೋಗುವವರು ಅವರಲ್ಲ ಎಂದು ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೆಚ್‍ಡಿಕೆ ಪರ ಬ್ಯಾಟಿಂಗ್ ಮಾಡಿದ್ದಾರೆ.

    ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರವಾಣಿ ಕದ್ದಾಲಿಕೆ ಮಾಡಿದರೆ ತಪ್ಪಾಗುತ್ತೆ. ಆದರೆ ಅದರ ಬಗ್ಗೆ ಸರಿಯಾಗಿ ನನಗೆ ಮಾಹಿತಿ ಗೊತ್ತಿಲ್ಲ. ಓದಿ ತಿಳಿದುಕೊಂಡು ಅದರ ಕುರಿತಾಗಿ ಮಾತನಾಡುವೆ. ಆದರೆ ಕುಮಾರಸ್ವಾಮಿ ಹೀಗೆ ಮಾಡಿರಲ್ಲ ಬಿಡಿ, ಅತೃಪ್ತ ಶಾಸಕರು ಪಕ್ಷ ಬಿಟ್ಟು ಹೋಗಿರುವ ಹಿನ್ನೆಲೆ ಹೀಗೆ ಅರೋಪ ಮಾಡುತ್ತಿದ್ದಾರೆ ಎಂದು ದೂರಿದರು.

    ಇದೇ ವೇಳೆ ಮಾತನಾಡಿದ ಕೋಲಾರ ಸಂಸದ ಎಸ್. ಮುನಿಸ್ವಾಮಿ, ರಾಜ್ಯದಲ್ಲಿ ನೆರೆ ಇದೆ ಈ ರೀತಿಯ ಸಂದರ್ಭದಲ್ಲಿ ಹೀಗೆ ಮಾಡಲು ಅವರಿಗೆ ನಾಚಿಕೆಯಾಗಬೇಕು. ಈಗಾಗಲೇ ಜನ ಅವರನ್ನು ತಿರಸ್ಕಾರ ಮಾಡಿದ್ದಾರೆ ಹಾಗಾಗಿಯೇ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಸುಮ್ಮನಿರುವುದು ಬಿಟ್ಟು ಹೀಗೆ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ದೂರವಾಣಿ ಕದ್ದಾಲಿಕೆ ಸಮ್ಮಿಶ್ರ ಸರ್ಕಾರವಿದ್ದಾಗಾಗಿರುವುದು ಎಂಬ ಅರಿವೆ ಅವರಿಗಿಲ್ಲ ಎಂಬುದನ್ನು ತೋರಿಸಿದರು.

    ನೆರೆ ಬಂದು ಸಂಕಷ್ಟದಲ್ಲಿರುವಾಗ ಸಚಿವ ಸಂಪುಟ ವಿಸ್ತರಣೆ ಸರಿಯಲ್ಲ ಹಾಗಾಗಿ ಸಂಪುಟ ವಿಸ್ತರಣೆಯಾಗಿಲ್ಲ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಶಾ ನೆರೆ ವೀಕ್ಷಣೆ ಮಾಡಿದ್ದಾರೆ. ತಡವಾದರೂ ಶೇ.100 ರಷ್ಟು ಕೇಂದ್ರದಿಂದ ಬರ ಪರಿಹಾರ ಸಿಗುತ್ತೆ ಎಂದು ಭರವಸೆ ನೀಡಿದರು.

  • ದೋಸ್ತಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಶೋಭಾ ಕರಂದ್ಲಾಜೆ

    ದೋಸ್ತಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಶೋಭಾ ಕರಂದ್ಲಾಜೆ

    ಬೆಂಗಳೂರು: ರಹೀಂ ಖಾನ್ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ದೂರವಾಣಿ ಕರೆ ಮಾಡಿದ್ದರು ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಅವರು ಮೈತ್ರಿ ಸರ್ಕಾರ ವಿರುದ್ಧ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಹೀಂಖಾನ್ ಯಾರು ಎಂದು ಈಶ್ವರ್ ಖಂಡ್ರೆ ಹೇಳಬೇಕು. ಅವರಿಗೂ ಬಿಜೆಪಿಗೂ ಏನು ಸಂಬಂಧ ಹೇಳಿ. ನಮ್ಮ ಸ್ಪೀಕರ್ ಇದ್ದ ಸಂದರ್ಭದಲ್ಲಿ ಅವರತ್ತ ಪೇಪರ್ ಎಸೆದ ಸಂದರ್ಭದಲ್ಲಿ ಅವರನ್ನ ನಾನು ನೋಡಿದ್ದೆ ಅಷ್ಟೇ. ಮಾತನಾಡುವ ಮುನ್ನ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು ಎಂದು ಎಚ್ಚರಿಕೆ ನೀಡಿದರು.

    ಸುಖಾ ಸುಮ್ಮನೆ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕೆಲಸವನ್ನು ಬಿಟ್ಟು ನಿಜವಾದ ಸಂಗತಿಗಳ ಬಗ್ಗೆ ಹೇಳಬೇಕು. ನಾನು ಅವರೊಂದಿಗೆ ಮಾತನಾಡಿದಲ್ಲಿ ಆ ಆಡಿಯೋ ಬಿಡುಗಡೆ ಮಾಡಿ. ಸರ್ಕಾರ ಉರುಳುತ್ತೆ ಎಂದು ತಿಳಿದ ಕೂಡಲೇ ಮೈತ್ರಿ ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡುವ ಕಾರ್ಯ ಮಾಡುತ್ತಿದೆ. ಆದ್ದರಿಂದಲೇ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಈಗ ಇಡಿ ಒಬ್ಬ ಖಾನ್ ನನ್ನು ಬಂಧಿಸಿ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಯಾವ ಯಾವ ಖಾನ್ ಗಳು ಒಳಗೆ ಹೋಗುತ್ತಾರೆ, ಯಾವ ಅಧಿಕಾರಿಗಳು, ರಾಜಕಾರಣಿಗಳು ಯಾವ ಖಾನ್‍ಗಳ ಜೊತೆ ಸಂಬಂಧ ಇದೆ ಎಂಬುವುದು ಗೊತ್ತಾಗುತ್ತದೆ ಎಂದರು.

    ಸದ್ಯ ನಿಮ್ಮದೇ ಸರ್ಕಾರ ಇರುವುದರಿಂದ ನಿಮ್ಮ ಬಳಿಯೇ ಗುಪ್ತಚರ ಇಲಾಖೆ ಇದೆ. ಇದನ್ನು ಬಳಸಿಕೊಂಡು ಒಮ್ಮೆ ಚೆಕ್ ಮಾಡಿಕೊಳ್ಳಿ. ಸುಖಾ ಸುಮ್ಮನೆ ಆರೋಪ ಮಾಡುತ್ತಿರುವ ಈಶ್ವರ್ ಖಂಡ್ರೆ ಅವರ ನಡೆಯೇ ಮೈತ್ರಿ ಸರ್ಕಾರ ಉರುಳಲಿದೆ ಎಂಬುವುದಕ್ಕೆ ತಾಜಾ ಉದಾಹರಣೆ ಆಗಿದೆ ಎಂದರು. ಅಲ್ಲದೇ ವಿಧಾನಸಭಾ ಮಂಡಲದಲ್ಲಿ ಕಾಲಹರಣ ಮಾಡಲಾಗುತ್ತಿದೆ. ಸ್ಪೀಕರ್ ಅವರ ನೇತೃತ್ವದಲ್ಲಿ ಇದು ನಡೆಯುತ್ತಿದ್ದು, ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದರು.