Tag: ದೂರ

  • ಲೇಖಕ ಚೇತನ್ ಭಗತ್, ನಟಿ ಉರ್ಫಿ ಜಾವೇದ್ ಜಟಾಪಟಿ: ಸ್ಕ್ರೀನ್ ಶಾಟ್ ಶೇರ್

    ಲೇಖಕ ಚೇತನ್ ಭಗತ್, ನಟಿ ಉರ್ಫಿ ಜಾವೇದ್ ಜಟಾಪಟಿ: ಸ್ಕ್ರೀನ್ ಶಾಟ್ ಶೇರ್

    ಮ್ಮ ವಿಭಿನ್ನ ಕಾಸ್ಟ್ಯೂಮ್ ಮೂಲಕವೇ ಸದಾ ಸುದ್ದಿ ಆಗುವ ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್, ಲೇಖಕ ಚೇತನ್ ಭಗತ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಚೇತನ್ ಭಗತ್ ಅವರ ಮೀಟು ಆರೋಪದ ವೇಳೆಯಲ್ಲಿ ಹರಿದಾಡಿದ ವಾಟ್ಸ್ ಅಪ್ ಚಾಟ್ ಗಳನ್ನು ಉರ್ಫಿ ಮತ್ತೆ ಶೇರ್ ಮಾಡಿದ್ದಾಳೆ. ಜೊತೆಗೆ ಮಹಿಳೆಯರು ಇಂತಿಷ್ಟೇ ಬಟ್ಟೆಗಳನ್ನು ಹಾಕಿಕೊಳ್ಳಿ ಅಂತ ಹೇಳುವುದಕ್ಕೆ ನೀವ್ಯಾರು ಎಂದು ಕೇಳಿದ್ದಾರೆ.

    ಚೇತನ್ ಭಗತ್ ಕಾರ್ಯಕ್ರಮವೊಂದರಲ್ಲಿ ಯುವಕರ ಬಗ್ಗೆ ಮಾತನಾಡುತ್ತಾ, ‘ಇಂದಿನ ಯುವಕರಿಗೆ ಮೊಬೈಲ್ ಅಡ್ಡಿಯಾಗಿದೆ. ಅವರು ದಿನದ ಬಹಳ ಹೊತ್ತು ಮೊಬೈಲ್ ನಲ್ಲೇ ಕಳೆಯುತ್ತಾರೆ. ಉರ್ಫಿ ಜಾವೇದ್ ಹಾಕುವ ಕಾಸ್ಟ್ಯೂಮ್ ಗೆ ಲೈಕ್ ಹಾಗೂ ಕಾಮೆಂಟ್ ಮಾಡುವುದರಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ. ಪ್ರತಿಯೊಬ್ಬರಿಗೂ ಈ ಉರ್ಫಿ ಜಾವೇದ್ ಗೊತ್ತು ಅಂತೆಲ್ಲ ಮಾತನಾಡಿದ್ದರು. ಯಾವುದೇ ಕಾರ್ಯಕ್ರಮದಲ್ಲಿ ತನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದಕ್ಕೆ ಉರ್ಫಿ ಗರಂ ಆಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಚೇತನ್ ಭಗತ್ ಸುದೀರ್ಘವಾಗಿ ಬರೆದುಕೊಂಡಿದ್ದರು. ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು `ಅಗ್ನಿಸಾಕ್ಷಿ’ಯ ವೈಷ್ಣವಿ ಗೌಡ

    ಸೋಷಿಯಲ್ ಮೀಡಿಯಾ ಮೂಲಕ ಚೇತನ್ ಭಗತ್ ಅವರಿಗೆ ಟಾಂಗ್ ನೀಡಿದ್ದ ಉರ್ಫಿ, ‘ಕಾರ್ಯಕ್ರಮದಲ್ಲಿ ಅವರು ನನ್ನ ಹೆಸರನ್ನು ಎಳೆತರಬಾರದಿತ್ತು. ಯುವಕರ ಮನಸ್ಸನ್ನು ನಾನು ಹಾಳು ಮಾಡಿಲ್ಲ. ನನ್ನ ಚಿಕ್ಕಪ್ಪನ ವಯಸ್ಸಿನ ಚೇತನ್, ಈ ಹಿಂದೆ ಹುಡುಗಿಯರಿಗೆ ಅಶ್ಲೀಲ ಮಸೇಜ್ ಕಳುಹಿಸಿ ಮೀಟೂ ಆರೋಪಿಯಾಗಿದ್ದರು. ನನ್ನ ಕಾಸ್ಟ್ಯೂಮ್ ಬಗ್ಗೆ ಅವರಿಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ’ ಎಂದು ಬರೆದುಕೊಂಡಿದ್ದರು.

    ಉರ್ಫಿಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದ ಚೇತನ್ ಭಗತ್, ‘ನಾನು ಹೇಳಿದ್ದು ಬೇರೆ ಅರ್ಥದಲ್ಲಿ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಯುವಕರಿಗೆ ಆ ರೀತಿ ಸಲಹೆ ನೀಡಿದ್ದೆ. ಆದರೆ, ನನ್ನ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ. ಆ ರೀತಿ ತಗೆದುಕೊಂಡಿದ್ದಕ್ಕೆ ವಿಷಾದವಿದೆ’ ಎಂದು ಹೇಳುವ ಮೂಲಕ ಈ ಪ್ರಕರಣವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದರು. ಆದರೆ, ಅದು ತಣ್ಣಗಾಗುವಂತೆ ಕಾಣುತ್ತಿಲ್ಲ. ಚೇತನ್ ಭಗತ್ ಅವರ ಮೀಟೂ ಸಂದೇಶದ ಸ್ಕ್ರೀನ್ ಶಾಟ್ ಹಾಕುವ ಮೂಲಕ ಈ ಜಗಳವನ್ನು ಉರ್ಫಿ ಮುಂದುವರೆಸಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ, ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ರಂಗ ತೊರೆದು, ಕ್ಲಿನಿಕ್ ಮಾಡ್ತಾರಂತೆ ಖ್ಯಾತ ನಟಿ ಸಾಯಿ ಪಲ್ಲವಿ

    ಸಿನಿಮಾ ರಂಗ ತೊರೆದು, ಕ್ಲಿನಿಕ್ ಮಾಡ್ತಾರಂತೆ ಖ್ಯಾತ ನಟಿ ಸಾಯಿ ಪಲ್ಲವಿ

    ಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ ಬಗ್ಗೆ ಮತ್ತೊಂದು ಗಾಸಿಪ್ ಹರಡಿದೆ. ಇವರ ಮುಖ್ಯ ಭೂಮಿಕೆಯ ಗಾರ್ಗಿ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಅಲ್ಲದೇ, ಸಾಯಿ ಪಲ್ಲವಿ ಅವರು ಕಾಶ್ಮೀರ ಹತ್ಯೆಯನ್ನು, ಗೋ ಹತ್ಯೆ ಮಾಡುವವರಿಗೆ ಹೋಲಿಸಿದರು ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರನ್ನು ಕೂಡ ನೀಡಲಾಯಿತು. ಇದರಿಂದ ಬೇಸತ್ತು, ಅವರು ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎನ್ನುವ ಸುದ್ದಿ ಹರಡಿದೆ.

    ಸಿನಿಮಾ ರಂಗದಲ್ಲಿ ಗಾಸಿಪ್ ಕಾಮನ್. ಸಾಯಿ ಪಲ್ಲವಿ ಸಿನಿಮಾ ರಂಗದಿಂದ ದೂರವಾಗುತ್ತಾರಾ ಎನ್ನುವುದು ಕೂಡ ಗಾಸಿಪ್ ಇರಬಹುದು ಎಂದೇ ನಂಬಲಾಗಿತ್ತು. ಆದರೆ, ಅವರು ಕ್ಲಿನಿಕ್ ತೆರೆಯುವ ಕುರಿತು ಮನೆಯಲ್ಲಿ ಚರ್ಚೆ ಮಾಡಿದ್ದರಿಂದ ಇದು, ಇಂದಲ್ಲ ನಾಳೆ ನಿಜವೂ ಆಗಬಹುದು ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಸಾಯಿ ಪಲ್ಲವಿ ಕೂಡ ತುಂಬಾ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇದನ್ನೂ ಓದಿ:ಪೊರಕೆ ಹಿಡಿದ ಮತ್ತೋರ್ವ ಕನ್ನಡದ ನಟ : ‘ಆಮ್ ಆದ್ಮಿ ಪಾರ್ಟಿ’ಗೆ ಸೇರ್ಪಡೆಯಾದ ಟೆನ್ನಿಸ್ ಕೃಷ್ಣ

    ಸಾಯಿ ಪಲ್ಲವಿ ಉತ್ತಮ ನಟಿ. ದಕ್ಷಿಣದ ಸ್ಟಾರ್ ನಟಿಯರಿಗೆ ನಿದ್ದೆ ಕೆಡಿಸಿದಾಕೆ. ಅತೀ ಕಡಿಮೆ ಸಮಯದಲ್ಲೇ ಅತ್ಯುತ್ತಮ ಸಿನಿಮಾಗಳನ್ನು ಪಡೆದವರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡವರು. ಪ್ರತಿಷ್ಠಿತ ಪ್ರಶಸ್ತಿಗಳು ಕೂಡ ಅವರನ್ನು ಹುಡುಕಿಕೊಂಡು ಬಂದವು. ಆದರೂ, ಒಂದಿಲ್ಲೊಂದು ರೀತಿಯಲ್ಲಿ ಅವರಿಗೆ ಕಿರುಕುಳ ನಡೆಯುತ್ತಲೇ ಬಂದಿವೆ. ಹೀಗಾಗಿ ಮೂಲತಃ ವೈದ್ಯಯೂ ಆಗಿರುವ ಸಾಯಿ ಪಲ್ಲವಿ ಹೊಸದೊಂದು ಕ್ಲಿನಿಕ್ ಶುರು ಮಾಡಿ, ವೈದ್ಯ ವೃತ್ತಿಯಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗುತ್ತಿದೆ. ಹಾಗೊಂದು ವೇಳೆ ಅವರು ಸಿನಿಮಾ ರಂಗವನ್ನು ತೊರೆಯುವುದಾದರೆ, ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಆಗುವುದರಲ್ಲಿ ಎರಡು ಮಾತಿಲ್ಲ.

    Live Tv
    [brid partner=56869869 player=32851 video=960834 autoplay=true]

  • ದೂರು ಕೊಡಲು ಬಂದ ಮಹಿಳೆಗೆ ಪಾನಮತ್ತ ಪೇದೆ ನಿಂದನೆ

    ದೂರು ಕೊಡಲು ಬಂದ ಮಹಿಳೆಗೆ ಪಾನಮತ್ತ ಪೇದೆ ನಿಂದನೆ

    ಮೈಸೂರು: ಅಪಘಾತದ ವಿಚಾರದಲ್ಲಿ ಬಸ್ ಚಾಲಕನ ವಿರುದ್ಧ ದೂರು ನೀಡಲು ಬಂದ ಮಹಿಳೆಗೆ ಪೊಲೀಸ್ ಪೇದೆ ನಶೆಯಲ್ಲಿ ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅಂತರ ಸಂತೆ ಉಪ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೇದೆ ಶ್ರೀನಿವಾಸ್ ಪಾನಮತ್ತರಾಗಿ ತಮ್ಮನ್ನು ನಿಂದಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಪೇದೆ ಮತ್ತು ಮಹಿಳೆ ಜೊತೆಗಿನ ವಾಗ್ವಾದದ ದೃಶ್ಯಾವಳಿಯನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಲಾಗಿದೆ.

    ಎಚ್.ಡಿ. ಕೋಟೆಯ ರಾಘವೇಂದ್ರ ಅವರ ಕುಟುಂಬ ಸಫಾರಿಗಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿತ್ತು. ಈ ವೇಳೆ ಕೆಎಸ್ಆರ್‌ಟಿಸಿ ಬಸ್ ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಸಂಬಂಧ ಕುಟುಂಬದಲ್ಲಿನ ಮಹಿಳೆ ಎಚ್.ಡಿ. ಕೋಟೆಯ ಅಂತರ ಸಂತೆಯ ಉಪ ಪೊಲೀಸ್ ಠಾಣೆಗೆ ಬಂದಿದ್ದಾರೆ.

    ಈ ವೇಳ ಕರ್ತವ್ಯದಲ್ಲಿದ್ದ ಪೇದೆ ಶ್ರೀನಿವಾಸ್ ದೂರು ಪಡೆಯದೆ ಬಸ್ ಚಾಲಕನ ಪರ ವಕಾಲತ್ತು ವಹಿಸಿದ್ದಾರೆ. ಅಲ್ಲದೆ ಶ್ರೀನಿವಾಸ್ ಮದ್ಯಪಾನ ಮಾಡಿ ತಮ್ಮನ್ನು ಅವಾಚ್ಯವಾಗಿ ನಿಂದಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಈಗ ಈ ಪೇದೆಯ ವಿರುದ್ಧ ಮಹಿಳೆ ದೂರು ನೀಡಲು ಮುಂದಾಗಿದ್ದಾರೆ.