Tag: ದುಷ್ಕರ್ಮಿಗಳು

  • ನಿಧಿಗಾಗಿ ಬಸವ ಮೂರ್ತಿ ಭಗ್ನಗೊಳಿಸಿದ ಇಬ್ಬರ ಬಂಧನ

    ನಿಧಿಗಾಗಿ ಬಸವ ಮೂರ್ತಿ ಭಗ್ನಗೊಳಿಸಿದ ಇಬ್ಬರ ಬಂಧನ

    ರಾಯಚೂರು: ನಿಧಿಯ ಆಸೆಗಾಗಿ ಬಸವ ಮೂರ್ತಿಯನ್ನ ಭಗ್ನಗೊಳಿಸಿದ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಲುಬುರಗಿಯ ಸೋಮು ಹಾಗೂ ಜಮಖಂಡಿ ತಾಂಡದ ಭೀಮು ಬಂಧಿತ ಆರೋಪಿಗಳು. ರಾಯಚೂರಿನ ದೇವದುರ್ಗದ ಬೆಣಕಲ್ ಗ್ರಾಮದ ಬಳಿಯಿರುವ ಅಣೇಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ದೇವಸ್ಥಾನದಲ್ಲಿದ್ದ ಬಸವನ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ.

    ಜನವರಿಯಲ್ಲಿ ಬಳ್ಳಾರಿ ತಾಲೂಕಿನ ಕುರಗೋಡ ಪಟ್ಟಣದ ವಜ್ರಬಂಡೆಯಲ್ಲಿ ನಿಧಿಯ ಆಸೆಗಾಗಿ ಕೆಲ ದುಷ್ಕರ್ಮಿಗಳು ಪುರಾತನ ಕಾಲದ ಬಸವ ಮೂರ್ತಿಯ ತಲೆ ಕತ್ತರಿಸಿ ಬಳಿಕ ಪರಾರಿಯಾಗಿದ್ದರು.

    ರಾಯಚೂರಿನಲ್ಲಿ ನಡೆದ ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೋಳಿ ಹಬ್ಬದಂದು ಯುವತಿಯ ಮೇಲೆ ಮೂತ್ರ ತುಂಬಿಸಿದ ಬಲೂನ್ ಎಸೆದ ಕಾಮುಕರು

    ಹೋಳಿ ಹಬ್ಬದಂದು ಯುವತಿಯ ಮೇಲೆ ಮೂತ್ರ ತುಂಬಿಸಿದ ಬಲೂನ್ ಎಸೆದ ಕಾಮುಕರು

    ನವದೆಹಲಿ: ಹೋಳಿ ಹಬ್ಬದಂದು ದುಷ್ಕರ್ಮಿಗಳು ಬಲೂನ್‍ನಲ್ಲಿ ಮೂತ್ರ ತುಂಬಿಸಿ ಯುವತಿಯ ಮೇಲೆ ಎಸೆದಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಬುಧವಾರ ಸಂಜೆ ದೆಹಲಿ ವಿಶ್ವವಿದ್ಯಾಲಯದ 18 ವರ್ಷದ ವಿದ್ಯಾರ್ಥಿನಿ ಅಮರ್ ಕಾಲೋನಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದರು. ಆಗ ಬೈಕಿನಲ್ಲಿ ಬಂದ ಇಬ್ಬರು ದುರ್ಷ್ಕಮಿಗಳು ಆಕೆಯ ಮೇಲೆ ಬಲೂನ್ ಎಸೆದಿದ್ದಾರೆ.

    ಬಲೂನ್ ನನ್ನ ಎದೆಯ ಮೇಲೆ ಜೋರಾಗಿ ಬಿತ್ತು. ನೋವನ್ನು ತಾಳಲಾರದೆ ನಾನು ಅಲ್ಲಿಯೇ ಬಿದ್ದು ಹೋದೆ. ನಂತರ ನಾನು ಎದ್ದು ನೋಡುವಷ್ಟರಲ್ಲಿ ಅವರು ಅಲ್ಲಿಂದ ಹೋಗಿ ಬಿಟ್ಟಿದ್ದರು. ಬಲೂನ್ ಹೊಡೆದಾಗ ಅದರಿಂದ ಮೂತ್ರದ ವಾಸನೆ ಬರುತ್ತಿತ್ತು ಎಂದು ಗುರುವಾರ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ರೀತಿಯ ಘಟನೆ ಶನಿವಾರದಂದು ದೆಹಲಿ ವಿಶ್ವವಿದ್ಯಾಲಯದ ಮಹಿಳಾ ಶ್ರೀ ರಾಮ್ ಕಾಲೇಜಿನಲ್ಲಿ ನಡೆದಿತ್ತು. ಈ ಬಗ್ಗೆ ಎಲ್‍ಎಸ್‍ಆರ್ ಸ್ಟೂಡೆಂಟ್ ಯೂನಿಯನ್ ಪ್ರತಿಭಟನೆ ನಡೆಸಿತ್ತು.

  • ಬಿಎಂಟಿಸಿ ಬಸ್‍ಗೆ ನುಗ್ಗಿ ಮೂವರು ದುಷ್ಕರ್ಮಿಗಳಿಂದ ವ್ಯಕ್ತಿಯ ಬರ್ಬರ ಹತ್ಯೆ

    ಬಿಎಂಟಿಸಿ ಬಸ್‍ಗೆ ನುಗ್ಗಿ ಮೂವರು ದುಷ್ಕರ್ಮಿಗಳಿಂದ ವ್ಯಕ್ತಿಯ ಬರ್ಬರ ಹತ್ಯೆ

    ಬೆಂಗಳೂರು: ಮೂವರು ಅಪರಿಚಿತರು ಬಿಎಂಟಿಸಿ ಬಸ್ಸಿನೊಳಗೆ ನುಗ್ಗಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಎಲೆಕ್ಟ್ರಾನಿಕ್ಸ್ ಸಿಟಿಗೆ ಹೊಂದಿಕೊಂಡಿರುವ ಕೋನಪ್ಪನ ಅಗ್ರಹಾರದಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿ ಆಂಧ್ರ ಮೂಲದವರಾಗಿದ್ದು ಸುಮಾರು 32 ವರ್ಷದವರು ಎನ್ನುವ ಮಾಹಿತಿ ಲಭ್ಯವಾಗಿದೆ. ಅತ್ತಿಬೆಲೆ ಕಡೆಯಿಂದ ಬಂದ ವ್ಯಕ್ತಿಯನ್ನು ಹಿಂಬಾಲಿಸಿ ಚಾಕುವಿನಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮೃತರ ಬಳಿಯಿದ್ದ ಮೊಬೈಲ್‍ನಿಂದಲೂ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಹಳೇ ದ್ವೇಷದ ಮೇಲೆ ಪರಿಚಿತರೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಕೋನಪ್ಪನ ಅಗ್ರಹಾರದಲ್ಲಿ ಈ ಘಟನೆ ನಡೆದಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ತರಲಾಗಿದೆ. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಉತ್ತರ ಭಾರತದ ಬಳಿಕ ರಾಜ್ಯದಲ್ಲಿ ಪದ್ಮಾವತ್‍ಗೆ ವಿರೋಧ – ಬೆಳಗಾವಿ ಚಿತ್ರಮಂದಿರಕ್ಕೆ ಬೆಂಕಿ ಹಾಕಲು ಯತ್ನ

    ಉತ್ತರ ಭಾರತದ ಬಳಿಕ ರಾಜ್ಯದಲ್ಲಿ ಪದ್ಮಾವತ್‍ಗೆ ವಿರೋಧ – ಬೆಳಗಾವಿ ಚಿತ್ರಮಂದಿರಕ್ಕೆ ಬೆಂಕಿ ಹಾಕಲು ಯತ್ನ

    ಬೆಳಗಾವಿ: ಉತ್ತರ ಭಾರತದ ಬಳಿಕ ಇದೀಗ ರಾಜ್ಯದಲ್ಲಿಯೂ ನಟಿ ದೀಪಿಕಾ ಪಡುಕೋಣೆ ಅಭಿನಯದ `ಪದ್ಮಾವತ್’ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ.

    ಗುರುವಾರ ರಾತ್ರಿ 9.25ರ ಸುಮಾರಿಗೆ ಶೋ ಮುಗಿಸಿ ವಾಪಸ್ ಆಗುವಾಗ ದುಷ್ಕರ್ಮಿಗಳು ಸೀಮೆಎಣ್ಣೆ ತುಂಬಿದ ಬಾಟಲ್‍ನನ್ನು ಪ್ರೇಕ್ಷಕರ ಕಡೆ ಎಸೆದು ಪರಾರಿಯಾಗಿದ್ದಾರೆ. ಬೆಳಗಾವಿಯ ಪ್ರಕಾಶ ಚಿತ್ರಮಂದಿರದ ಮುಂಭಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

    ಪ್ರೇಕ್ಷಕರು ಹೊರಬರುತ್ತಿದ್ದ ವೇಳೆ ದುಷ್ಕೃತ್ಯ ಎಸಗಿದ್ದು, ಭಯದಿಂದ ಪ್ರೇಕ್ಷಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆದರೆ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಭಾರೀ ಅನಾಹುತ ತಪ್ಪಿಸಿದ್ದಾರೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಖಡೇಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪದ್ಮಾವತಿ ಚಿತ್ರ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಪದ್ಮಾವತ್ ಆಗಿ ಬದಲಾಗಿದ್ದು, ಯು/ಎ ಸರ್ಟಿಫಿಕೆಟ್ ದೊರೆತಿತ್ತು. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟ ರಣ್‍ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಆಗಿ ಬಣ್ಣ ಹಚ್ಚಿದ್ದಾರೆ.

  • ಹಳೆಯ ದ್ವೇಷಕ್ಕೆ ತೊಗರಿ ಬೆಳೆಗೆ ಬೆಂಕಿ- ಠಾಣೆ ಮೆಟ್ಟಿಲೇರಿದ್ರೂ ರೈತನಿಗೆ ಸಿಗಲಿಲ್ಲ ನ್ಯಾಯ

    ಹಳೆಯ ದ್ವೇಷಕ್ಕೆ ತೊಗರಿ ಬೆಳೆಗೆ ಬೆಂಕಿ- ಠಾಣೆ ಮೆಟ್ಟಿಲೇರಿದ್ರೂ ರೈತನಿಗೆ ಸಿಗಲಿಲ್ಲ ನ್ಯಾಯ

    ಬೀದರ್: ತಾಲೂಕಿನ ನೌಬಾದ್‍ನಲ್ಲಿ ದುಷ್ಕರ್ಮಿಗಳು ಹಳೆಯ ದ್ವೇಷಕ್ಕೆ ಬೆಳೆಗೆ ಬೆಂಕಿಹಚ್ಚಿ ಅಟ್ಟಹಾಸ ಮೆರೆದ್ದಾರೆ. ಲಕ್ಷ ಲಕ್ಷ ಬೆಲೆ ಬಾಳುವ ತೊಗರಿ ಹಾಗೂ ಕಾರಳು ಕಟಾವು ಮಾಡಿಟ್ಟಿದ್ದ ರಾಶಿಗೆ ಕೀಡಿಗೇಡಿಗಳು ಬೆಂಕಿ ಹಂಚಿದ್ದಾರೆ.

    ಈ ಕೃತ್ಯಕ್ಕೆ ಸಂಬಂಧಿಕರಲ್ಲಿ ಇದ್ದ ಹಳೆಯ ದ್ವೇಷವೇ ಕಾರಣ ಎಂದು ರೈತ ಬಂಡೆಪ್ಪಾ ಆರೋಪಿಸಿದ್ದಾರೆ. ಈಗ ಬಂಡೆಪ್ಪಾ ಬೆಳೆ ಕಳೆದುಕೊಂಡು ಇಗಾ ಪೊಲೀಸ್ ಠಾಣೆ ಸುತ್ತಿ ಸುತ್ತಿ ಬೇಸತ್ತಿದ್ದಾರೆ.

    ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಈ ಕುರಿತು ಮನವಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಕೊಲೆ ಮಾಡಲು ಕೀಡಿಗೇಡಿಗಳು ಸಂಚು ರೂಪಿಸಿ ಯತ್ನ ಮಾಡಿ ವಿಫಲರಾಗಿದ್ದಾರೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ರೈತ ಬಂಡೆಪ್ಪಾ ಅಂಗಲಾಚುತ್ತಿದ್ದಾರೆ.

     

  • ನಗರದ ವಿವಿಧೆಡೆ 8ಕ್ಕೂ ಅಧಿಕ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ನಗರದ ವಿವಿಧೆಡೆ 8ಕ್ಕೂ ಅಧಿಕ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ಕಲಬುರಗಿ: ದುಷ್ಕರ್ಮಿಗಳು ನಗರದ ವಿವಿಧೆಡೆ ಕಾರುಗಳಿಗೆ ಬೆಂಕಿ ಹಾಕುತ್ತಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ದುಷ್ಕರ್ಮಿಗಳು ಸೇಡಂ ರಸ್ತೆಯ ಜಯನಗರದಲ್ಲಿ ಬಳಿ 2, ಬನಶಂಕರಿ ಕಾಲೋನಿ ಬಳಿ 1, ವಿಶ್ವೇಶರಯ್ಯ ಕಾಲೋನಿಯಲ್ಲಿ ಬಳಿ 1, ಯುನೈಟೆಡ್ ಆಸ್ಪತ್ರೆ ಬಳಿ 1, ಲಾಲಗೇರಿ ಕ್ರಾಸ್ ಬಳಿ 1 ಕಾರು ಸೇರಿದಂತೆ ಎಂಟಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.

    ಒಂದೇ ಕಿಡಿಗೇಡಿಗಳ ಗುಂಪಿನಿಂದ ಎಲ್ಲೆಡೆ ಏಕಕಾಲಕ್ಕೆ ಬೆಂಕಿ ಹಚ್ಚಿರುವ ಸಾಧ್ಯತೆಯಿದ್ದು, ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಲಬುರಗಿ ನಗರ ಜನರು ಬೆಚ್ಚಿಬಿದಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮಂಗ್ಳೂರು: ಸುರತ್ಕಲ್ ಬಳಿ ಮಾರಕಾಸ್ತ್ರದಿಂದ ಕಡಿದು ಯುವಕನ ಬರ್ಬರ ಕೊಲೆ

    ಮಂಗ್ಳೂರು: ಸುರತ್ಕಲ್ ಬಳಿ ಮಾರಕಾಸ್ತ್ರದಿಂದ ಕಡಿದು ಯುವಕನ ಬರ್ಬರ ಕೊಲೆ

    ಮಂಗಳೂರು: ನಗರದಲ್ಲಿ ಮತ್ತೆ ದುಷ್ಕರ್ಮಿಗಳು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ನಗರದ ಹೊರವಲಯದಲ್ಲಿ ದುಷ್ಕರ್ಮಿಗಳು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಈ ಘಟನೆ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ನಡೆದಿದೆ. ಮೃತ ದುರ್ದೈವಿ ಯುವಕನನ್ನು ಕೃಷ್ಣಾಪುರದ ಗಣೇಶ್ ಪುರ ನಿವಾಸಿ ದೀಪಕ್ (32) ಎಂದು ಗುರುತಿಸಲಾಗಿದೆ. ಮೃತ ದೀಪಕ್ ಮೊಬೈಲ್ ಕಂಪನಿಯೊಂದರಲ್ಲಿ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಸ್ಥಳೀಯ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದನು ಎನ್ನಲಾಗಿದೆ.

    ದೀಪಕ್ ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ನಾಲ್ವರ ತಂಡವೊಂದು ಕಾರಿನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಬಳಿಕ ದುಷ್ಕರ್ಮಿಗಳು ಕಾರಿನಿಂದ ಇಳಿದು ನೇರವಾಗಿ ದೀಪಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಮುಸ್ಲಿಮರು ಕಲ್ಲೆಸೆದು ದುಷ್ಕರ್ಮಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಿ ತೀವ್ರ ಗಾಯಗೊಂಡ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸುರತ್ಕಲ್ ಮತ್ತು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

  • ಹೊಯ್ಸಳ ಪೊಲೀಸರ ಮೇಲೆ ಲಾಂಗ್ ಬೀಸಿದ ಸುಲಿಗೆಕೋರರು

    ಹೊಯ್ಸಳ ಪೊಲೀಸರ ಮೇಲೆ ಲಾಂಗ್ ಬೀಸಿದ ಸುಲಿಗೆಕೋರರು

    – ಹೋಂಗಾರ್ಡ್ ಗೆ ಲಾಂಗ್‍ನಿಂದ ಹಲ್ಲೆ, ಎಎಸ್‍ಐ ಬಚಾವ್

    ಬೆಂಗಳೂರು: ನಗರದಲ್ಲಿ ಸುಲಿಗೆಗಾರರ ಹವಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸುವ ಕ್ಯಾಬ್‍ಗಳಲ್ಲಿ ಸುಲಿಗೆ ಮಾಡುತ್ತಿದ್ದ ದುಷ್ಕರ್ಮಿಗಳ ತಂಡವೊಂದು ಹೊಯ್ಸಳ ಪೊಲೀಸರ ಮೇಲೆ ದಾಳಿಯ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.

    ಎರಡು ಡಿಯೋ ಬೈಕ್ ನಲ್ಲಿ ಮುಸುಕು ಹಾಕಿಕೊಂಡು ನಾಲ್ವರು ಸುಲಿಗೆಕೋರರು ಬಂದಿದ್ದಾರೆ. ಈ ವೇಳೆ ನಗರದ ಬಿಇಎಲ್ ಸರ್ಕಲ್‍ನಲ್ಲಿ ರಾತ್ರಿ ಸುಮಾರು 2.30 ಕ್ಕೆ ಪಾರ್ಕ್ ಮಾಡಿದ್ದ ಕ್ಯಾಬ್ ಚಾಲಕರಿಗೆ ಲಾಂಗ್ ಮಚ್ಚುಗಳನ್ನು ತೋರಿಸಿ ಕ್ಯಾಬ್ ಚಾಲಕರ ಬಳಿಯಿದ್ದ ಹಣ, ಪರ್ಸ್, ಮೊಬೈಲ್ ಕಸಿದುಕೊಂಡು ಬಿಇಎಲ್ ಸರ್ಕಲ್ ನಿಂದ ಗಂಗಮ್ಮನಗುಡಿ ಸರ್ಕಲ್ ಕಡೆಗೆ ಪರಾರಿಯಾಗಿದ್ದಾರೆ.

    ಹಣ ಕಳೆದುಕೊಂಡ ಕ್ಯಾಬ್ ಚಾಲಕ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದರು. ರಾತ್ರಿ ಗಸ್ತಿನಲ್ಲಿದ್ದ ಜಾಲಹಳ್ಳಿ ಪೊಲೀಸ್ ಹೊಯ್ಸಳ ಸಿಬ್ಬಂದಿ ದರೋಡೆಕೋರರ ಬೆನ್ನತ್ತಿದ್ದಾರೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ತಮ್ಮ ಬಳಿಯಿದ್ದ ಲಾಂಗ್ ಮಚ್ಚಿನಿಂದ ದರೋಡೆಕೋರರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಪರಿಣಾಮ ಹೋಂಗಾರ್ಡ್ ಹನುಮಂತರಾಜು ಎಂಬವರ ತಲೆಗೆ ಲಾಂಗಿನಿಂದ ಹೊಡೆದು ಪರಾರಿಯಾಗಿದ್ದಾರೆ.

    ಸದ್ಯಕ್ಕೆ ಹೋಂಗಾರ್ಡ್ ಹನುಮಂತರಾಜು ಅವರನ್ನು ಕೆ ಸಿ ಜನರಲ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಯ್ಸಳದಲ್ಲಿದ್ದ ಎಎಸ್‍ಐ ಮೋಪುರಿ ಎಂಬವರು ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಈ ಸಂಬಂಧ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಬಂಧನಕ್ಕೆ ಬಲೆ ಬಿಸಿದ್ದಾರೆ.

     

  • ಬೆಂಗಳೂರಿಗರೇ ಎಚ್ಚರವಾಗಿರಿ, ಕಾರಿನಲ್ಲಿ ಹೋಗುತ್ತಿರುವಾಗ ಕಳ್ಳರು ನಿಮ್ಮನ್ನೂ ಹೀಗೂ ಸುಲಿಗೆ ಮಾಡಬಹುದು!

    ಬೆಂಗಳೂರಿಗರೇ ಎಚ್ಚರವಾಗಿರಿ, ಕಾರಿನಲ್ಲಿ ಹೋಗುತ್ತಿರುವಾಗ ಕಳ್ಳರು ನಿಮ್ಮನ್ನೂ ಹೀಗೂ ಸುಲಿಗೆ ಮಾಡಬಹುದು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುಲಿಗೆಕೋರರ ಹಾವಳಿ ಮುಂದುವರೆದಿದ್ದು,  ಜನರು ನೋಡುತ್ತಿದ್ದಂತೆ  ದುಷ್ಕರ್ಮಿಗಳು  ಕಾರಿನಿಂದ   ಹಣದ ಬ್ಯಾಗನ್ನು ಸುಲಿಗೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಫೆಬ್ರವರಿ 15 ರಂದು ಭಾರತಿನಗರದ ಅಡ್ಯಾರ್ ಆನಂದ್ ಭವನ್ ಹೊಟೇಲ್ ಬಳಿ ನಡೆದಿದೆ. ಈ ಸಂಬಂಧ ಆಶಾ ಕಿರಣ್ ಎಂಬವರು ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಅಂದು ಏನಾಯ್ತು?
    ಬುಧವಾರ ಸಂಜೆ 4 ಗಂಟೆ ವೇಳೆಗೆ ಕಾರಿನಲ್ಲಿ ಭಾರತೀನಗರ ಠಾಣೆ ಸಮೀಪದಿಂದ ಅಲಸೂರು ಕೆರೆ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಅಡ್ಯಾರ್ ಆನಂದ ಭವನ್ ಬಳಿ ಬೈಕಿನಲ್ಲಿ ಬಂದಿದ್ದ ಸವಾರನೊಬ್ಬ ಇಂಧನ ಟ್ಯಾಂಕ್ ಫುಲ್ ಆಗಿ ಸೋರುತ್ತಿದೆ ಎಂದು ಹೇಳಿದ್ದ. ಈತನ ಮಾತನ್ನು ನಂಬಿದ್ದ ಆಶಾ ಕಿರಣ್ ತಮ್ಮ ಕಾರನ್ನು ನಿಲ್ಲಿಸಿ ಇಂಧನ ಟ್ಯಾಂಕನ್ನು ಪರೀಕ್ಷೆ ಮಾಡಿದ್ದಾರೆ. ಪರಿಶೀಲನೆ ವೇಳೆ ಸೀಮೆ ಎಣ್ಣೆಯನ್ನು ಇಂಧನ ಟ್ಯಾಂಕ್ ಮೇಲೆ ಚೆಲ್ಲಿರುವುದು ಗೊತ್ತಾಗಿದೆ.

    ಆಶಾ ಅವರು ಕಾರಿನಿಂದ ಇಳಿಯುವುದನ್ನು ಕಾದಿದ್ದ ದುಷ್ಕರ್ಮಿಗಳ ಗುಂಪು ಡೋರ್ ತೆಗೆದು ಬ್ಯಾಗನ್ನು ಕದ್ದುಕೊಂಡು ಪರಾರಿಯಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಜನರಿದ್ದರೂ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ. ಬಳಿಕ ರಾತ್ರಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಆಶಾ ಅವರು ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ್ದಾರೆ.

    ಹಣ ಹೋಯ್ತು ಕಾರ್ಡ್  ಸಿಕ್ಕಿತ್ತು: ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಅನಾಮಿಕ ವ್ಯಕ್ತಿಯೊಬ್ಬರು ಕರೆ ಮಾಡಿ ಒಂದು ಬ್ಯಾಗ್ ನಮಗೆ ಸಿಕ್ಕಿದೆ. ಆ ಬ್ಯಾಗ್‍ನಲ್ಲಿ ನಿಮ್ಮ ನಂಬರ್ ಇತ್ತು ಎಂದು ತಿಳಿಸಿದ್ದಾರೆ. ಅನಾಮಿಕ ವ್ಯಕ್ತಿಯೊಬ್ಬರು ನೀಡಿದ ವಿಳಾಸಕ್ಕೆ ತೆರಳಿದ ಆಶಾ ಅವರು ತಮ್ಮ ಬ್ಯಾಗ್ ಪಡೆದುಕೊಂಡಿದ್ದಾರೆ. ಈ ವೇಳೆ ಬ್ಯಾಗ್‍ನಲ್ಲಿದ್ದ 30 ಸಾವಿರ ರೂ. ಹಣವನ್ನು ದೋಚಿದ್ದ ಕಳ್ಳರು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಿಟ್ಟು ತೆರಳಿದ್ದಾರೆ.

    ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,  ಎಲ್ಲ ಸಿಗ್ನಲ್‍ಗಳಲ್ಲಿ ಸಿಸಿ ಕ್ಯಾಮೆರಾಗಳ ದೃಶ್ಯ ಇದ್ದರೂ ಪೊಲೀಸರು ಈ ರೀತಿಯ ಕೃತ್ಯ ನಡೆಯುತ್ತದೆ ಎಂದು ತಿಳಿಸಿದ್ದಾರೆ ಎಂಬುದಾಗಿ ಆಶಾ ಕಿರಣ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಮತ್ತೊಂದು ಕೃತ್ಯ: ನನ್ನ ಗಮನವನ್ನು ಬೇರೆಡೆಗೆ ಸೆಳೆದು ಹೇಗೆ ಕಳ್ಳತನ ಮಾಡಿದ್ದಾರೋ ಅದೇ ರೀತಿ ಕೃತ್ಯ ಅದೇ ದಿನ ಮಧ್ಯಾಹ್ನ 2.45ಕ್ಕೆ ನಡೆದಿದೆ. ಗೌರಿ ದೀಪಕ್ ಅವರ ವಸ್ತುಗಳನ್ನು ದುಷ್ಕರ್ಮಿಗಳು ಕದ್ದಿದ್ದಾರೆ ಎಂದು ಆಶಾ ಕಿರಣ್ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.