Tag: ದುಷ್ಕರ್ಮಿಗಳು

  • ಬಂಡೆಯಲ್ಲಿ ಕ್ವಾರಿ ನಡೆಸಲು ಕಾಡಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

    ಬಂಡೆಯಲ್ಲಿ ಕ್ವಾರಿ ನಡೆಸಲು ಕಾಡಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

    ಶಿವಮೊಗ್ಗ: ಚಾಮರಾಜನಗರ ಜಿಲ್ಲೆಯ ಬಂಡೀಪುರಕ್ಕೆ ಗ್ರಾಮಸ್ಥರು ಬೆಂಕಿ ಹಚ್ಚಿದ ಬೆನ್ನಲ್ಲೇ ಇದೀಗ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಲ್ಲಿ ದುಷ್ಕರ್ಮಿಗಳು ಕಾಡಿಗೆ ಬೆಂಕಿ ಇಟ್ಟ ಘಟನೆಯೊಂದು ಬೆಳಕಿಗೆ ಬಂದಿದೆ.

    ಬಿದರಗೋಡು ಗ್ರಾ.ಪಂ. ವ್ಯಾಪ್ತಿಯ ಸರ್ವೆ ನಂಬರ್ 172ರಲ್ಲಿ ಸುಮಾರು 25 ಎಕ್ರೆ ಕಿರು ಅರಣ್ಯ ನಾಶ ಮಾಡಿದ್ದಾರೆ. ದುಷ್ಕರ್ಮಿಗಳು ಹಿಟಾಚಿಯಂತಹ ದೈತ್ಯ ಯಂತ್ರ ಬಳಸಿ ಮರ-ಗಿಡ ನಾಶ ಮಾಡಿ ನೆಲಸಮ ಮಾಡಿದ್ದಾರೆ. ಒಂದು ವಾರದಿಂದ ನಿರಂತವಾಗಿ ಅರಣ್ಯ ನಾಶವಾಗುತ್ತಿದೆ.

    ಈ ಭಾಗದಲ್ಲಿ ವ್ಯಾಪಕವಾಗಿರುವ ಬಂಡೆಯಲ್ಲಿ ಕ್ವಾರಿ ನಡೆಸಲು ಹಗಲು- ರಾತ್ರಿ ಕಾಡನ್ನು ನಾಶ ಮಾಡುತ್ತಿದ್ದಾರೆ. ನೂರಾರು ಮರಗಳ ಮಾರಣ ಹೋಮ ನಡೆದರೂ ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಗ್ರಾಮದ ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ವಿರೋಧಿಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

    ಚಾಮರಾಜನಗರದ ಬಂಡೀಪುರದಲ್ಲೂ ದುಷ್ಕರ್ಮಿಗಳು ಕಾಡಿಗೆ ಬೆಂಕಿ ಹಚ್ಚಿದ್ದರು. ಕಾಡು ಪ್ರಾಣಿಗಳಿಗೆ ಬೇಸತ್ತು ಬಂಡೀಪುರ ಅರಣ್ಯಕ್ಕೆ ಬೆಂಕಿ ಹಾಕಿರೋದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದರು. ಇತ್ತೀಚೆಗೆ ಬಂಡೀಪುರ ಅರಣ್ಯದಂಚಿನ ಚೌಡಹಳ್ಳಿ, ಕಲೀಗೌಡನಹಳ್ಳಿ, ಹಂಗಳ ಮೊದಲಾದ ಕಡೆ ಹುಲಿ, ಚಿರತೆ, ಆನೆ ಗ್ರಾಮದತ್ತ ಮುಖ ಮಾಡಿದ್ದವು. ಸತತ ನಾಲ್ಕೈದು ದಿನ ಕಾರ್ಯಚರಣೆ ನಡೆಸಿದ್ರೂ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ವಿಫಲವಾಗಿದ್ದರು. ಹುಲಿಗೆ ಹೆದರಿದ ಕಾಡಂಚಿನ ಗ್ರಾಮಸ್ಥರು ಅರಣ್ಯಕ್ಕೆ ಬೆಂಕಿ ಇಟ್ಟಿದ್ದು, ಪರಿಣಾಮ ಸಾವಿರಾರು ಎಕರೆ ಪ್ರದೇಶ ಭಸ್ಮವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದುಷ್ಕರ್ಮಿಗಳಿಂದ ಯುವ ಜೋಡಿ ಮೇಲೆ ಹಲ್ಲೆ – ಯುವತಿ ಸ್ಥಳದಲ್ಲೇ ಸಾವು

    ದುಷ್ಕರ್ಮಿಗಳಿಂದ ಯುವ ಜೋಡಿ ಮೇಲೆ ಹಲ್ಲೆ – ಯುವತಿ ಸ್ಥಳದಲ್ಲೇ ಸಾವು

    ಹೈದರಾಬಾದ್: ಯುವ ಜೋಡಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಯುವತಿ ಸ್ಥಳದಲ್ಲೇ ಮೃತಪಟ್ಟು, ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಗುಂಟುಪಲ್ಲಿಯ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ.

    ಶ್ರೀಧಾರಿಣಿ ಮೃತಪಟ್ಟ ಯುವತಿ. ನವೀನ್ ಗಂಭೀರವಾಗಿ ಗಾಯಗೊಂಡ ಯುವಕ. ನವೀನ್ ಮೂಲತಃ ಬೀಮಿಲಿ ಮಂಡಲ್‍ನವನಾಗಿದ್ದು, ಧಾರಿಣಿ ಉಂಗುತುರ್ ಮಂಡಲ್‍ನ ಎಂಎಂ ಪುರಂದವಳು. ಭಾನುವಾರ ಬೆಳಗ್ಗೆ 11.30ಕ್ಕೆ ನವೀನ್ ಹಾಗೂ ಧಾರಿಣಿ ಬುದ್ಧ ಸ್ಮಾರಕ ನೋಡಲು ಬೈಕಿನಲ್ಲಿ ತೆರಳಿದ್ದರು.

    ಸ್ಥಳೀಯರ ಹಾಗೂ ಪೊಲೀಸರ ಮಾಹಿತಿ ಪ್ರಕಾರ ಕಾಮವರ್ಪುಕೋಟ ಬಳಿಯಿರುವ ಬೌದ್ಧ ಅರಮಲ ಗುಹೆಯಲ್ಲಿ ಭಾನುವಾರ ಹೆಚ್ಚು ಮಂದಿ ಆಗಮಿಸುತ್ತಾರೆ. ಹಾಗಾಗಿ ಆ ಜಾಗದಲ್ಲಿರುವ ನಿರ್ಜನ ಪ್ರದೇಶಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಸತೀಶ್ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ನಿನ್ನೆ ಮಧ್ಯಾಹ್ನ ಸುಮಾರು 2.45ಕ್ಕೆ ಪರಿಶೀಲನೆ ನಡೆಸಿದ್ದಾಗ ಗುಹೆ ಬಳಿ ಜೋಡಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ.

    ಸತೀಶ್ ಆ ಜೋಡಿಯನ್ನು ನೋಡಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಯುವತಿ ಮೃತಪಟ್ಟಿದ್ದಳು. ಸಿಂತಾಲಾಪುಡಿಯ ಸರ್ಕಲ್ ಇನ್ಸ್ ಪೆಕ್ಟರ್ ವಿಲ್ಸನ್ ಗಾಯಗೊಂಡಿದ್ದ ನವೀನ್ ನನ್ನು ಸ್ಥಳೀಯರ ಸಹಾಯದಿಂದ ಎಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಡಿಎಸ್‍ಪಿ ಸಿ.ಎಚ್ ಮುರಳಿಕೃಷ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸುವಾಗ ಧಾರಿಣಿ ತಲೆಯ ಹಿಂಭಾಗದಲ್ಲಿ ಗಂಭೀರ ಪ್ರಮಾಣದ ಏಟು ಬಿದ್ದಿದೆ. ಧಾರಿಣಿಯ ಮೃತದೇಹದ ಬಳಿ ಕಳ್ಳತನಕ್ಕೆ ಉಪಯೋಗಿಸುವ ಶಸ್ತ್ರಗಳಿಂದ ಜೋಡಿಯ ಮೇಲೆ ಹಲ್ಲೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಯುವತಿಯ ಉಡುಪು ಅಸ್ತವ್ಯಸ್ತ ಆಗಿರುವುದನ್ನು ಕಂಡು ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡಿರಬಹುದು ಎನ್ನುವ ಶಂಕೆ ಕೇಳಿಬಂದಿದೆ.

    ಶ್ರೀ ಧಾರಿಣಿ ಪೋಲಾಸನಿಪಲ್ಲಿಯ ಕಾಲೇಜಿನಲ್ಲಿ ಪ್ರಥಮ ವರ್ಷ ಬಿಎಸ್‍ಸಿ ಓದುತ್ತಿದ್ದರೆ, ನವೀನ್ ಬಿಕಾಂ ಮೊದಲನೇ ವರ್ಷ ಅರ್ಧಕ್ಕೆ ನಿಲ್ಲಿಸಿ ತಂದೆಗೆ ಪೈಟಿಂಗ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದನು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಾಂಶುಪಾಲರ ಕೋಣೆಯಲ್ಲಿ ಕಿಡಿಗೇಡಿಗಳ ಅಸಭ್ಯ ವರ್ತನೆ

    ಪ್ರಾಂಶುಪಾಲರ ಕೋಣೆಯಲ್ಲಿ ಕಿಡಿಗೇಡಿಗಳ ಅಸಭ್ಯ ವರ್ತನೆ

    ವಿಜಯಪುರ: ಸರ್ಕಾರಿ ಶಾಲೆಯ ಪ್ರಾಂಶುಪಾಲರ ಕೋಣೆಯಲ್ಲಿ ಕೆಲ ಪುಡಾರಿಗಳು ದೇಹದ ಕೂದಲನ್ನು ತಗೆದು ಬಿಸಾಕಿದ ಘಟನೆ ವಿಜಯಪುರದ ಜುಮ್ನಾಳ ಗ್ರಾಮದಲ್ಲಿ ನಡೆದಿದೆ.

    ಜುಮ್ನಾಳ ಸರ್ಕಾರಿ ಗಂಡು ಮಕ್ಕಳ ಶಾಲೆಯ ಪ್ರಾಂಶುಪಾಲರ ಕೋಣೆಯ ಗುರುವಾರ ರಾತ್ರಿ ಬೀಗ ಒಡೆದು ಕೋಣೆಯ ಮೇಜಿನ ಮೇಲೆ ದೇಹದ ಕೂದಲು ಮತ್ತು ಅದನ್ನು ತಗೆಯುವುದಕ್ಕೆ ಬಳಸಿದ ಬ್ಲೇಡ್ ಸೇರಿದಂತೆ ಸಾಮಗ್ರಿಗಳನ್ನು ಅಲ್ಲಿಯೇ ಬಿಸಾಡಿದ್ದಾರೆ. ಅಲ್ಲದೆ ಗುಟ್ಕಾ ಚೀಟಿಗಳನ್ನು ಎಸೆದು ಪರಾರಿಯಾಗಿದ್ದಾರೆ.

    ಇಂದು ಶಾಲೆಯ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಶಾಲಾ ಮಕ್ಕಳು ಸೇರಿದಂತೆ ಶಾಲಾ ಸಿಬ್ಬಂದಿ ಭಯ ಭೀತರಾಗಿದ್ದು, ಕಿಡಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಕಿಡಿಗೇಡಿಗಳು ಪ್ರಾಂಶುಪಾಲರ ಕೋಣೆಯಲ್ಲಿ ಈ ರೀತಿ ಕೃತ್ಯ ಎಸಗಿರುವುದು ವಿಚಿತ್ರ ಎಂದು ಎನಿಸುತ್ತದೆ. ಈ ಕೆಲಸ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಸ್ಥಳೀಯರಾದ ಜಿತೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗಳೂರು ಸಮೀಪದ ಗುಡ್ಡಕ್ಕೆ ಬೆಂಕಿ – 15 ಎಕರೆ ಜಾಗದಲ್ಲಿ ಹರಡಿತು ಅಗ್ನಿ

    ಮಂಗಳೂರು ಸಮೀಪದ ಗುಡ್ಡಕ್ಕೆ ಬೆಂಕಿ – 15 ಎಕರೆ ಜಾಗದಲ್ಲಿ ಹರಡಿತು ಅಗ್ನಿ

    ಮಂಗಳೂರು: ಗುಡ್ಡಕ್ಕೆ ಬೆಂಕಿ ಬಿದ್ದು 15 ಎಕರೆ ಪ್ರದೇಶಕ್ಕೆ ಬೆಂಕಿ ಹಬ್ಬಿದ ಕಾರಣ ಆತಂಕ ಸೃಷ್ಟಿಯಾದ ಘಟನೆ ಗುರುವಾರ ರಾತ್ರಿ ಮಂಗಳೂರು ತಾಲೂಕಿನ ಕುಪ್ಪೆಪದವು ಬಳಿ ನಡೆದಿದೆ.

    ಯಾರೋ ದುಷ್ಕರ್ಮಿಗಳು ಮಾಣಿಪಲ್ಲ ಎಂಬಲ್ಲಿನ ಗುಡ್ಡದ ಪೊದೆ ತೆಗೆಯುವುದಕ್ಕಾಗಿ ಸಂಜೆ ಹೊತ್ತಿಗೆ ಬೆಂಕಿ ಹಚ್ಚಿದ್ದರು. ಆದರೆ ಬೆಂಕಿಯ ಕೆನ್ನಾಲಿಗೆ ಹರಡುತ್ತಾ ಇಡೀ ಗುಡ್ಡಕ್ಕೆ ಆವರಿಸಿದೆ. 15 ಎಕರೆ ವ್ಯಾಪ್ತಿಯಲ್ಲಿ ಬೆಂಕಿ ಹರಡಿದ್ದರಿಂದ ಹತೋಟಿಗೆ ತರಲು ಸಾಧ್ಯವಾಗಲಿಲ್ಲ.

    ಇದರಿಂದಾಗಿ ಆಸುಪಾಸಿನ ಹತ್ತಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಅಲ್ಲಿಯೇ ಹತ್ತಿರ ಇದ್ದ ಪೆಟ್ರೋಲ್ ಪಂಪನ್ನು ಬಂದ್ ಮಾಡಲಾಗಿತ್ತು. ಅಗ್ನಿಶಾಮಕ ಸಿಬಂದಿ ಮತ್ತು ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿದ್ದು ತಡರಾತ್ರಿ ವರೆಗೂ ಬೆಂಕಿಯ ಕೆನ್ನಾಲಿಗೆ ಹರಡಿಕೊಂಡಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ.

    ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುತ್ತೂಟ್ ಫೈನಾನ್ಸ್ ಗೆ ನುಗ್ಗಿ ಸಿಬ್ಬಂದಿಗೆ ಗನ್ ತೋರಿಸಿದ ದರೋಡೆಕೋರರು- ವಿಡಿಯೋ ನೋಡಿ

    ಮುತ್ತೂಟ್ ಫೈನಾನ್ಸ್ ಗೆ ನುಗ್ಗಿ ಸಿಬ್ಬಂದಿಗೆ ಗನ್ ತೋರಿಸಿದ ದರೋಡೆಕೋರರು- ವಿಡಿಯೋ ನೋಡಿ

    ಬೀದರ್: ಶನಿವಾರದಂದು ಸಿನಿಮೀಯ ರೀತಿಯಲ್ಲಿ 6 ಮಂದಿ ಮುಸುಕುಧಾರಿಗಳು ಬ್ಯಾಂಕ್ ಸಿಸಿಟಿವಿಗೆ ಸ್ಪ್ರೇ ಮಾಡಿ ದರೋಡೆಗೆ ಯತ್ನಿಸಿದ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಜಿಲ್ಲೆಯ ಮಡಿವಾಳ ವೃತ್ತದಲ್ಲಿರುವ ಮುತ್ತೂಟ್ ಫೈನಾನ್ಸ್ ಗೆ ನುಗ್ಗಿ ದರೋಡೆ ಮಾಡಲು 6 ಮಂದಿ ಯತ್ನಿಸಿದ್ದರು. ಬೆಳಗ್ಗೆ 9 ಗಂಟೆ ಸಮಯದಲ್ಲಿ ಆಗಮಿಸಿದ್ದ ಖದೀಮರು, ಮೊದಲೇ ಪ್ಲಾನ್ ರೂಪಿಸಿಕೊಂಡು ಏಕಾಏಕಿ ಬ್ಯಾಂಕ್ ಪ್ರವೇಶ ಮಾಡಿದ್ದರು. ಇದಾದ ಬಳಿಕ ಕೆಲ ಸಮಯದಲ್ಲೇ ಬ್ಯಾಂಕ್‍ನಿಂದ ಹೊರ ಬಂದ ಆರೋಪಿಗಳು ಕಾರು ಹತ್ತಿ ಪರಾರಿಯಾಗಲು ಸಿದ್ಧರಾಗಿದ್ದರು. ಈ ವೇಳೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ ಬ್ಯಾಂಕ್ ಮುಂದೆ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿತ್ತು. ಆದರೆ ಕ್ಷಣ ಮಾತ್ರದಲ್ಲಿ ಪೊಲೀಸರನ್ನು ಕಣ್ಣು ತಪ್ಪಿಸಿದ ಖದೀಮರು ಕಾರಿನ ಸಮೇತ ಪರಾರಿಯಾಗಿದ್ದರು.

    ಈ ಘಟನೆಗೆ ಸಂಬಂಧಿಸಿದಂತೆ ಬ್ಯಾಂಕ್ ಒಳಗೆ ಖದೀಮರು ಮಾಡಿದ ದುಷ್ಕೃತ್ಯದ ವಿಡಿಯೋ ಇಂದು ಲಭ್ಯವಾಗಿದೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಫುಲ್‍ಪ್ಲಾನ್ ಮಾಡಿಕೊಂಡು, ಮುಖಕ್ಕೆ ಮಾಸ್ಕ್ ಧರಿಸಿ ಬ್ಯಾಂಕ್ ಒಳ ನುಗ್ಗಿದ ದರೋಡೆಕೋರರು ಸಿಬ್ಬಂದಿ ಗನ್ ಹಾಗೂ ಮಾರಕಾಸ್ತ್ರ ತೋರಿಸಿ ಹೆದರಿಸಿದ್ದಾರೆ. ಅಲ್ಲದೆ ಬ್ಯಾಂಕ್ ಒಳಗೆ ಬಂದಂತೆ ಅಲ್ಲಿನ ಸಿಸಿ ಕ್ಯಾಮೆರಾಗೆ ಸ್ಪ್ರೇ ಮಾಡಿ ದರೋಡೆ ಮಾಡಲು ಯತ್ನಿಸಿದ್ದಾರೆ. ದರೋಡೆಕೋರರು ಬೆದರಿಸುತ್ತಿರುವ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ದೊರಕಿದೆ.

    https://www.youtube.com/watch?v=xDwDxv7oGts

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆ ಮುಂದೆ ಪಾರ್ಕ್ ಮಾಡಿದ್ದ ಆಟೋಗೆ ದುಷ್ಕರ್ಮಿಗಳಿಂದ ಬೆಂಕಿ

    ಮನೆ ಮುಂದೆ ಪಾರ್ಕ್ ಮಾಡಿದ್ದ ಆಟೋಗೆ ದುಷ್ಕರ್ಮಿಗಳಿಂದ ಬೆಂಕಿ

    ಬೆಂಗಳೂರು: ಮನೆ ಮುಂದೆ ಪಾರ್ಕ್ ಮಾಡಿದ್ದ ಆಟೋಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಕೆಪಿ ಅಗ್ರಹಾರದ ಭುವನೇಶ್ವರಿನಗರ ಸಮೀಪದ ಅಯ್ಯಪ್ಪ ದೇವಸ್ಥಾನ ಬಳಿ ನಡೆದಿದೆ.

    ಸುನೀಲ್ ಎಂಬವರಿಗೆ ಸೇರಿದ ಆಟೋ ರಿಕ್ಷಾ ದುಷ್ಕರ್ಮಿಗಳಿಂದ ಬೆಂಕಿಗಾಹುತಿಯಾಗಿದೆ. ತಡರಾತ್ರಿ 1.30ರ ವರೆಗೂ ಸುನೀಲ್ ಬಾಡಿಗೆಗೆ ಹೋಗಿ ಮನೆಗೆ ವಾಪಸ್ಸಾಗಿದ್ದರು. ಬೆಳಗಿನ ಜಾವ 3.30ರ ಸುಮಾರಿಗೆ ದುಷ್ಕರ್ಮಿಗಳು ಆಟೋಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಆಟೋರಿಕ್ಷಾ ಸುಟ್ಟು ಭಸ್ಮವಾಗಿದೆ.

    ಸುನೀಲ್ ಕುಟುಂಬಕ್ಕೆ ಜೀವನಾಧಾರವಾಗಿದ್ದ ಆಟೋ ಬೆಂಕಿಗೆ ಆಹುತಿಯಾಗಿದ್ದು, ಇದೀಗ ಘಟನೆಯಿಂದ ಕುಟುಂಬ ಕಂಗಾಲಾಗಿದೆ. ಸದ್ಯ ಸ್ಥಳಕ್ಕೆ ಕೆಪಿ ಅಗ್ರಹಾರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಮಹಿಳಾ ಟೆಕ್ಕಿಯನ್ನು ಅಡ್ಡಗಟ್ಟಿ ಕ್ರೌರ್ಯ ಮೆರೆದ ಕಾಮುಕರು

    ಮಹಿಳಾ ಟೆಕ್ಕಿಯನ್ನು ಅಡ್ಡಗಟ್ಟಿ ಕ್ರೌರ್ಯ ಮೆರೆದ ಕಾಮುಕರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ಕಾಮಣ್ಣರ ಅಟ್ಟಹಾಸ ಮುಂದುವರೆದಿದೆ. ಸ್ನೇಹಿತನೊಂದಿಗೆ ಹೋಗುವಾಗ ಮಹಿಳಾ ಟೆಕ್ಕಿಯನ್ನು ಅಡ್ಡಗಟ್ಟಿ ಕಾಮುಕರು ಕ್ರೌರ್ಯ ಮೆರೆದ ಘಟನೆ ಇಂದಿರಾನಗರದ 100 ಫೀಟ್ ರಸ್ತೆಯಲ್ಲಿ ಮೇ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮಹಿಳಾ ಟೆಕ್ಕಿಯೊಬ್ಬರು ತನ್ನ ಸ್ನೇಹಿತನೊಂದಿಗೆ ಹೋಗುತ್ತಿದ್ದಾಗ ಕಾಮುಕರು ಕ್ರೌರ್ಯವಾಗಿ ವರ್ತಿಸಿದ್ದಾರೆ. ಕಾಮುಕರ ಕಿರುಕುಳಕ್ಕೆ ಪ್ರತಿರೋಧ ತೋರಿಸಿದಾಗ ಟೆಕ್ಕಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ.

    ಈ ಘಟನೆ ಬಗ್ಗೆ ಮಹಿಳಾ ಟೆಕ್ಕಿ ತನ್ನ ಸ್ನೇಹಿತನೊಂದಿಗೆ ದೂರು ದಾಖಲಿಸಲು ಹೋದಾಗ ಜೀವನ್ ಭೀಮಾನಗರ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ. ಚುನಾವಣೆ ನೆಪ ಹೇಳಿ ದೂರು ದಾಖಲಿಸಿಕೊಂಡಿರಲಿಲ್ಲ ಎನ್ನಲಾಗಿದೆ. ನಂತರ ಈ ಘಟನೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ಮೇಲೆ ಪೊಲೀಸರು ಮೇ 16ರಂದು ದೂರು ದಾಖಲಿಸಿಕೊಂಡಿದ್ದಾರೆ.

  • ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆಗೈದು ರುಂಡ, ಮುಂಡ ಬೇರ್ಪಡಿಸಿದ ದುಷ್ಕರ್ಮಿಗಳು!

    ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆಗೈದು ರುಂಡ, ಮುಂಡ ಬೇರ್ಪಡಿಸಿದ ದುಷ್ಕರ್ಮಿಗಳು!

    ಬೆಂಗಳೂರು: ವ್ಯಕ್ತಿಯೊಬ್ಬರ ರುಂಡ ಹಾಗೂ ಮುಂಡ ಬೇರ್ಪಡಿಸಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಡೇವಿಡ್ (42)ಹತ್ಯೆಯಾದ ವ್ಯಕ್ತಿ. ಗುರುವಾರ ರಾತ್ರಿ ಗಂಗಮ್ಮನಗುಡಿಯ ರಾಮಚಂದ್ರಾಪುರ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ರಾತ್ರಿ ಕೊಲೆ ಮಾಡಿದ್ದು, ಇಂದು ಮುಂಜಾನೆ ಮೃತ ಡೇವಿಡ್ ನ ರುಂಡ ಪತ್ತೆಯಾಗಿದೆ.

    ಜೋರಾಗಿ ಬರುತ್ತಿದ್ದ ಮಳೆಯಲ್ಲೇ ದುಷ್ಕರ್ಮಿಗಳು ಡೇವಿಡ್ ನ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದು ಕೊಂದಿದ್ದಾರೆ. ಬಳಿಕ ಡೇವಿಡ್ ನ ರುಂಡ ಒಂದು ಕಡೆ, ಮುಂಡ ಒಂದು ಕಡೆ ಬೀಸಾಕಿ ತಮ್ಮ ವಿಕೃತ ಮೆರೆದಿದ್ದಾರೆ ಎನ್ನಲಾಗಿದೆ.

    ಈ ಕುರಿತು ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಡೇವಿಡ್ ನ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

  • ಹುಡುಗಿಯರ ವಿಷಯಕ್ಕೆ ಜಗಳ- ಆಟೋದಲ್ಲಿ ಬಂದು ವ್ಯಕ್ತಿಯ ಕೊಲೆ!

    ಹುಡುಗಿಯರ ವಿಷಯಕ್ಕೆ ಜಗಳ- ಆಟೋದಲ್ಲಿ ಬಂದು ವ್ಯಕ್ತಿಯ ಕೊಲೆ!

    ಬೆಂಗಳೂರು: ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಆಟೋದಲ್ಲಿ ಬಂದು ಕೊಲೆ ಮಾಡಿದ ಘಟನೆ ನಗರದ ಕಾಮಾಕ್ಷಿಪಾಳ್ಯದ ಸುಂಕದಕಟ್ಟೆ ಬ್ರಿಡ್ಜ್ ಬಳಿ ನಡೆದಿದೆ.

    ಕೋಟೇಶ್ವರ್ ರಾವ್ (30) ಕೊಲೆಯಾದ ವ್ಯಕ್ತಿ. ಹುಡುಗಿಯರ ದಂಧೆ ವಿಷಯವಾಗಿ ಸುರೇಶ್ ಹಾಗೂ ಕೋಟೇಶ್ವರ್ ಅಲಿಯಾಸ್ ಕೋಟೆ ನಡುವೆ ಜಗಳ ನಡಿತಿತ್ತು. ಹುಡುಗಿಯರನ್ನ ಒಂದು ಅಡ್ಡೆಯಿಂದ ಮತ್ತೊಂದು ಅಡ್ಡೆಗೆ ಕರೆದೊಯ್ದು ಹಣ ಕಾಸಿನ ವಿಚಾರಕ್ಕೆ ಗಲಾಟೆ ಆಗಿತ್ತು.

    ಆ ವಿಚಾರವಾಗಿ ಇಂದು ಮಾತನಾಡಲು ಸುರೇಶ್ ಬಳಿಗೆ ಕೋಟೇಶ್ವರ್ ತನ್ನ ಸ್ನೇಹಿತರಾದ ಚಂದ್ರ, ಕೃಷ್ಣ ಹಾಗೂ ಆಂಟೋನಿ ಎಂಬುವರು ಹೋಗಿದ್ದರು. ಈ ವೇಳೆ ಏಕಾಏಕಿ ಅವರ ಮೇಲೆ ದಾಳಿ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ಕೋಟೇಶ್ವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ಅಡಿಕೆ ಮರಗಳನ್ನು ನೆಲಸಮ ಮಾಡಿದ ದುಷ್ಕರ್ಮಿಗಳು- ಮುಗಿಲುಮುಟ್ಟಿದ ರೈತನ ಆಕ್ರಂದನ

    ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ಅಡಿಕೆ ಮರಗಳನ್ನು ನೆಲಸಮ ಮಾಡಿದ ದುಷ್ಕರ್ಮಿಗಳು- ಮುಗಿಲುಮುಟ್ಟಿದ ರೈತನ ಆಕ್ರಂದನ

    ದಾವಣಗೆರೆ: ಆಗ ತಾನೇ ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ನೆಲಸಮ ಮಾಡಿದ ಆಘಾತಕಾರಿ ಘಟನೆಯೊಂದು ದಾವಣಗೆರೆ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಶೇಖರಯ್ಯ ಎಂಬವರ ಅಡಿಕೆ ತೋಟದಲ್ಲಿ ಈ ಘಟನೆ ನಡೆದಿದೆ. ಶೇಖರಯ್ಯ ಅವರು ತೋಟದಲ್ಲಿ ಸುಮಾರು 300ಕ್ಕೂ ಹೆಚ್ಚು ಅಡಿಕೆ ಮರಗಳು ಫಸಲಿಗೆ ಬಂದಿದ್ದವು. ಈ ಸಂತಸದಲ್ಲಿದ್ದ ರೈತನಿಗೆ ದುಷ್ಕರ್ಮಿಗಳ ಕೃತ್ಯದಿಂದ ಆಘಾತವಾಗಿದೆ.

    ದುಷ್ಕರ್ಮಿಗಳು ರಾತ್ರೋರಾತ್ರಿ ಜೆಸಿಬಿ ತಂದು ಶೇಖರಯ್ಯ ಅವರ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಮರಗಳನ್ನು ಸಂಪೂರ್ಣ ನಾಶಮಾಡಿದ್ದಾರೆ. ಇದೀಗ ಕಿಡಿಗೇಡಿಗಳ ಅಟ್ಟಹಾಸದಿಂದ ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ಕಳೆದುಕೊಂಡ ರೈತನ ಅಕ್ರಂದನ ಮುಗಿಲು ಮುಟ್ಟಿದೆ.

    ಹಳೆಯ ದ್ವೇಷ ಇರೋ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.