Tag: ದುಶ್ಯಂತ್

  • ದುಶ್ಯಂತ್-ಆಶಿಕಾ ನಟನೆಯ `ಗತವೈಭವ’ದ ಫಸ್ಟ್‌ ಸಾಂಗ್‌ ರಿಲೀಸ್

    ದುಶ್ಯಂತ್-ಆಶಿಕಾ ನಟನೆಯ `ಗತವೈಭವ’ದ ಫಸ್ಟ್‌ ಸಾಂಗ್‌ ರಿಲೀಸ್

    ನಿರ್ದೇಶಕ ಸಿಂಪಲ್ ಸುನಿ ಬೆಳ್ಳಿತೆರೆಯಲ್ಲಿ ‘ಗತವೈಭವ’ (Gathavaibhava Movie) ಸೃಷ್ಟಿಸಲು ಸಜ್ಜಾಗಿದ್ದಾರೆ. ಹೊಸ ಪ್ರತಿಭೆ ದುಶ್ಯಂತ್ ನಾಯಕನಾಗಿ, ಚುಟುಚುಟು ಬ್ಯೂಟಿ ಆಶಿಕಾ ರಂಗನಾಥ್ (Ashika Ranganath) ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದ ಮೊದಲ ಗೀತೆ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಟೀಸರ್ ಮೂಲಕ ಗಮನಸೆಳೆದಿರುವ ಗತವೈಭವ ಸಿನಿಮಾದ ಮೊದಲ ಹಾಡನ್ನು ಅನಾವರಣ ಮಾಡಲಾಗಿದೆ.

    ಪತ್ರಗಳ ಮೂಲಕ ಪ್ರೀತಿ ವಿನಿಮಯ ಮಾಡುವ ನವ ಪ್ರೇಮಿಗಳ ನಡುವಿನ ವರ್ಣಮಾಲೆ ಹಾಡಿಗೆ ಸಿಂಪಲ್ ಸುನಿ (Simple Suni) ಕ್ಯಾಚಿ ಮ್ಯಾಚಿ ಪದ‌ ಪೋಣಿಸಿದ್ದಾರೆ. ಅಭಿನಂದನ್ ಮಹಿಶಾಲೆ, ಸುನಿಧಿ ಗಣೇಶ್ ಕಂಠ ಕುಣಿಸಿದ್ದು, ಜೂಡಾ ಸ್ಯಾಂಡಿ‌ ಸಂಗೀತದ ಇಂಪು ವರ್ಣಮಾಲೆ ಗೀತೆಯ ಶ್ರೀಮಂತಿಕೆ ಹೆಚ್ಚಿಸಿದೆ. ದುಶ್ಯಂತ್-ಆಶಿಕಾ ಹಳ್ಳಿ ಗೆಟಪ್ ನಲ್ಲಿ ಮಿಂಚಿದ್ದಾರೆ.

    ‘ಗತವೈಭವ’ ಫ್ಯಾಂಟಸಿ ಹಾಗೂ ಪುರಾಣದ ಕಥೆ ಜೊತೆಗೆ ರೋಮ್ಯಾಂಟಿಕ್ ಲವ್ ಸ್ಟೋರಿ ಮಿಕ್ಸ್ ಮಾಡಿ ಸಿನಿಮಾ ಮಾಡಲಾಗಿದೆ. ಹೀಗಾಗಿ ಇದು ಸಿಂಪಲ್ ಸುನಿ ಕರಿಯರ್‌ನ ವಿಭಿನ್ನ ಸಿನಿಮಾ. ಕಥೆ-ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡಿಗೆ ಸಾಹಿತ್ಯ ಕೂಡ ಬರೆದಿದ್ದಾರೆ. ಸರ್ವ್‌ಗರಾ ಸಿಲ್ವರ್ ಸ್ಕ್ರೀನ್ಸ್ ಹಾಗೂ ಸುನಿ ಸಿನಿಮಾಸ್ ಸಂಸ್ಥೆಯಲ್ಲಿ ದೀಪಿಕ್ ತಿಮ್ಮಯ್ಯ ಹಾಗೂ ಸುನಿ ಇಬ್ಬರೂ ಸೇರಿ ನಿರ್ಮಾಣ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.

  • ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ವಾಸ್ಕೋಡಿಗಾಮನ ಕಥೆ

    ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ವಾಸ್ಕೋಡಿಗಾಮನ ಕಥೆ

    ಹೊಸ ಹುಡುಗನನ್ನು ಸಿನಿಮಾ ರಂಗಕ್ಕೆ ಲಾಂಚ್ ಮಾಡಲು ಹೊರಟಿರುವ ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾದ ಕಥೆ ಇದೀಗ ರಿವಿಲ್ ಆಗಿದೆ. ಈ ಸಿನಿಮಾದಲ್ಲಿ ವಾಸ್ಕೋಡಿಗಾಮನ ಕಥೆಯೂ ಇದೆಯಂತೆ. ಇಂದು ಗತವೈಭವ ಸಿನಿಮಾದ  ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಸುನಿ, “ಗತವೈಭವ ಎಂದರೆ ಗತಿಸಿ ಹೋದ ವೈಭವ ಎಂದು. ಈ ನಮ್ಮ ಚಿತ್ರದಲ್ಲಿ ವಾಸ್ಕೋಡಿಗಾಮನ ಕಥೆ ಸೇರಿದಂತೆ ಕೆಲವು ಐತಿಹಾಸಿಕ ಸನ್ನಿವೇಶಗಳಿರುತ್ತದೆ. ಫನ್, ಸೆಂಟಿಮೆಂಟ್ ಹಾಗೂ ಮೈಂಡ್ ಗೇಮ್ ನ ಮಿಶ್ರಣ ಅನ್ನಬಹುದು” ಎನ್ನುವ ಮೂಲಕ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ಮೊನ್ನೆಯಷ್ಟೇ ಈ ಸಿನಿಮಾದ ನಾಯಕನನ್ನು ಪರಿಚಯಿಸುವ ಟೀಸರ್ ಒಂದನ್ನು ಸುನಿ ಬಿಡುಗಡೆ ಮಾಡಿದ್ದರು. ಅದಕ್ಕೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನೂ ಓದಿ : ಮಹಾಶಿವರಾತ್ರಿಗೆ ಶಿವಾಜಿ ಸುರತ್ಕಲ್ ಪೋಸ್ಟರ್

    ಮೂಲತಃ ತುಮಕೂರಿನವರಾದ ದುಶ್ಯಂತ್ ಈ ಸಿನಿಮಾದ ನಾಯಕ. ಇವರು ಗುಬ್ಬಿ ಶಾಸಕ ಶ್ರೀನಿವಾಸ್ ಪುತ್ರ. ವಿದೇಶದಲ್ಲಿ ಎಲ್.ಎಲ್.ಬಿ ಮುಗಿಸಿಕೊಂಡು ಬಂದು, ಇದೀಗ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. ಸಿನಿಮಾ ರಂಗಕ್ಕೆ ದುಶ್ಯಂತ್ ಬರುವುದು ತಂದೆ ತಾಯಿಗೆ ಇಷ್ಟವಿಲ್ಲದಿದ್ದರೂ, ಈ ರಂಗದ ಮೇಲಿನ ಆಸಕ್ತಿ ಇಲ್ಲಿಗೆ ಬರುವಂತೆ ಮಾಡಿದೆಯಂತೆ. ಇದನ್ನೂ ಓದಿ : ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

    ಈ ಕುರಿತು ಮಾತನಾಡಿದ ದುಶ್ಯಂತ್ ‘ಕೆಲವರು ಹೇಳುತ್ತಾರೆ ದುಡ್ಡಿರುವವರ ಮಕ್ಕಳು ಹೀರೋ ಆಗುತ್ತಾರೆ ಅಂತ. ನಾನು ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಪುತ್ರ. ಆದರೆ ನಮ್ಮ ತಂದೆಗೆ ನಾನು ಚಿತ್ರರಂಗಕ್ಕೆ ಬರಲು ಇಷ್ಟವಿಲ್ಲ. ನನಗೆ ಇದಲ್ಲದೆ ಬೇರೆ ಇಷ್ಟವಿಲ್ಲ ಹಾಗಾಗಿ ನಾನು ನಿರ್ಮಾಪಕರ ಹುಡುಕಿ ಹಣ ಹೊಂದಿಸಲು ಒಂದು ವರ್ಷಕ್ಕೂ ಅಧಿಕ ಸಮಯ ತೆಗೆದುಕೊಂಡೆ’ ಎನ್ನುತ್ತಾರೆ. ಇದನ್ನೂ ಓದಿ : ಜೇಮ್ಸ್ ಟ್ರೇಡ್ ಮಾರ್ಕ್ ಹಾಡಿಗೆ ಪುನೀತ್ ಭರ್ಜರಿ ಸ್ಟೆಪ್: ಭಾವುಕರಾದ ಅಭಿಮಾನಿಗಳು

    ಅಂದಹಾಗೆ ಈ ಸಿನಿಮಾವನ್ನು ನಿರ್ದೇಶಕ ಸುನಿ ಜೊತೆಗೆ ದೀಪಕ್ ತಿಮ್ಮಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಏಪ್ರಿಲ್ ಕೊನೆಯ ವಾರದಿಂದ ಚಿತ್ರೀಕರಣ ಶುರುವಾಗಲಿದೆ.

  • ಹೀರೋ ನೋಡಿ ಅಲ್ಲ ಟ್ಯಾಲೆಂಟ್ ನೋಡಿ ಸಿನಿಮಾ ಮಾಡ್ತೀನಿ ಅಂದಿದ್ಯಾಕೆ ಸಿಂಪಲ್ ಸುನಿ

    ಹೀರೋ ನೋಡಿ ಅಲ್ಲ ಟ್ಯಾಲೆಂಟ್ ನೋಡಿ ಸಿನಿಮಾ ಮಾಡ್ತೀನಿ ಅಂದಿದ್ಯಾಕೆ ಸಿಂಪಲ್ ಸುನಿ

    ಸಿಂಪಲ್ ಸುನಿ ಸ್ಯಾಂಡಲ್‍ವುಡ್ ಅಂಗಳದ ಒನ್ ಆಫ್ ದಿ ಟ್ಯಾಲೆಂಟೆಡ್ ಡೈರೆಕ್ಟರ್. ಸಿಂಪಲ್ ಆಗ್ ಒಂದು ಲವ್ ಸ್ಟೋರಿ ಹೇಳಿ ಪ್ರೇಕ್ಷಕರ ಮನದಲ್ಲಿ ರಾಯಲ್ ಆಗಿ ಕುಳಿತಿರುವ ಇವ್ರು ಕಟೆಂಟ್ ಹಾಗೂ ಪ್ರೆಸೆಂಟೇಶನ್ ಮೂಲಕವೇ ಎಲ್ಲರನ್ನು ಕ್ಲೀನ್ ಬೋಲ್ಡ್ ಮಾಡಿಬಿಡ್ತಾರೆ.

    ಸದ್ಯ ಅವತಾರ ಪುರುಷ ಬಿಡುಗಡೆಗೆ ಸಿದ್ಧರಾಗಿರುವ ಇವ್ರು ಹೀರೋ ನೋಡಿ ಅಲ್ಲ ಟ್ಯಾಲೆಂಟ್ ನೋಡಿ ಸಿನಿಮಾ ಮಾಡ್ತೀನಿ ಅಂತ ಹೇಳ್ತಿದ್ದಾರೆ. ಅರೆ, ಹೀಗ್ ಯಾಕ್ ಹೇಳಿದ್ರು ಅಂತ ನೀವೇನು ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ. ಗತವೈಭವ ಹೀರೋ ಲಾಂಚ್ ಟೀಸರ್ ನೋಡಿದ್ರೆ ಸಾಕು ಆನ್ಸರ್ ಸಿಕ್ಕಿಬಿಡುತ್ತೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

    ಹೌದು, ಗತವೈಭವ ಸಿಂಪಲ್ ಸುನಿ ಮುಂದಿನ ಸಿನಿಮಾ. ಈ ಸಿನಿಮಾ ಮೂಲಕ ನವ ನಟ ದುಶ್ಯಂತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ಸುನಿ. ಗತವೈಭವ ಚಿತ್ರದ ನಾಯಕನ ಇಂಟ್ರಡಕ್ಷನ್ ಟೀಸರ್ ಇಂದು ಬಿಡುಗಡೆಯಾಗಿದೆ. ಡಿಫ್ರೆಂಟ್ ಅಂಡ್ ಕ್ರಿಯೇಟಿವ್ ಆಗಿ ಮೂಡಿ ಬಂದಿರುವ ಹೀರೋ ಲಾಂಚ್ ಟೀಸರ್ ಸಖತ್ ಇಂಟ್ರಸ್ಟಿಂಗ್ ಆಗಿ ಮೂಡಿ ಬಂದಿದ್ದು ವಾವ್ ಎನ್ನುತ್ತಿದ್ದಾರೆ ನೋಡುಗರು. ಈಗಾಗಲೇ ಬಜಾರ್ ಮೂಲಕ ಧನ್ವೀರ್‍ರನ್ನು ಚಿತ್ರರಂಗಕ್ಕೆ ಲಾಂಚ್ ಮಾಡಿ ಸೈ ಎನಿಸಿಕೊಂಡಿರುವ ಸಿಂಪಲ್ ಸುನಿ ಮತ್ತೊಬ್ಬ ಯುವ ನಟ ದುಶ್ಯಂತ್ ಅವರನ್ನು ಚಂದನವನಕ್ಕೆ ಪರಿಚಯಿಸುತ್ತಿದ್ದಾರೆ.

    ಗುಬ್ಬಿ ಕ್ಷೇತ್ರದ ಶಾಸಕ ಎಸ್. ಆರ್. ಶ್ರೀನಿವಾಸ್ ಪುತ್ರ ದುಶ್ಯಂತ್. ಈ ಮೂಲಕ ಮತ್ತೊಬ್ಬ ರಾಜಕರಣಿಯ ಪುತ್ರ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ನಟನೆ, ಡಾನ್ಸ್, ಆಕ್ಷನ್ ಹೀಗೆ ಎಲ್ಲದರಲ್ಲೂ ಸರ್ವ ರೀತಿಯಲ್ಲೂ ತಯಾರಿ ಮಾಡಿಕೊಂಡು ಬಂದಿದ್ದಾರೆ ದುಶ್ಯಂತ್. ಸದ್ಯ ಟೀಸರ್ ಮೂಲಕ ಚಮಕ್ ಕೊಟ್ಟಿರುವ ಸಿಂಪಲ್ ಸುನಿ ಅವತಾರ ಪುರುಷ ಬಿಡುಗಡೆ ನಂತರ ಗತವೈಭವನ ಚಿತ್ರೀಕರಣಕ್ಕೆ ಹೊರಡಲಿದ್ದಾರೆ. ಈ ಬಾರಿ ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಸಬ್ಜೆಕ್ಟ್ ಹೊತ್ತು ತರ್ತಿರುವ ಸಿಂಪಲ್ ಸುನಿ ಅದಕ್ಕೆ ಬೇಕಾದ ಸಕಲ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್

    ಚಿತ್ರವನ್ನು ದೀಪಕ್ ತಿಮ್ಮಪ್ಪ ಹಾಗೂ ಸಿಂಪಲ್ ಸುನಿ ಇಬ್ಬರೂ ಜೊತೆಗೂಡಿ ಸುನಿ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ರವೀಂದ್ರನಾಥ್ ಟಿ ಸಿನಿಮಾಟೋಗ್ರಫಿ, ಭರತ್ ಬಿ.ಜೆ ಸಂಗೀತ, ಮನು ಶೇಡ್ಗಾರ್ ಸಂಕಲನವಿದೆ. ಸದ್ಯದಲ್ಲೇ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದೆ ಚಿತ್ರತಂಡ. ಇದನ್ನೂ ಓದಿ: ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ