Tag: ದುರ್ಯೋಧನ

  • ಕುರುಕ್ಷೇತ್ರ: ದುರ್ಯೋಧನನ ಜೊತೆ ಮಿಂಚುತ್ತಿರೋ ಭೀಷ್ಮ!

    ಕುರುಕ್ಷೇತ್ರ: ದುರ್ಯೋಧನನ ಜೊತೆ ಮಿಂಚುತ್ತಿರೋ ಭೀಷ್ಮ!

    ಬೆಂಗಳೂರು: ಕುರುಕ್ಷೇತ್ರ ಬಿಡುಗಡೆಯಾಗಲು ದಿನಗಣನೆ ಶುರುವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ವಿಜೃಂಭಿಸಿರೋ ಈ ಸಿನಿಮಾ ಅವರ ಅಭಿಮಾನಿಗಳಿಗೂ ಸ್ಪೆಷಲ್. ಇನ್ನೇನು ತೆರೆಯ ಮೇಲೆ ಕುರುಕ್ಷೇತ್ರ ಮೂಡಿಕೊಳ್ಳೋ ಕ್ಷಣಗಳು ಹತ್ತಿರಾಗುತ್ತಲೇ ಥೇಟರ್‌ಗಳ ಮುಂದೆ ಕಟೌಟ್ ಭರಾಟೆಯೂ ಜೋರಾಗಿದೆ. ಹೇಳಿಕೇಳಿ ಇದು ದೊಡ್ಡ ಕ್ಯಾನ್ವಾಸಿನ ಚಿತ್ರ. ಇದರಲ್ಲಿ ಹಲವಾರು ಸ್ಟಾರ್ ನಟ ನಟಿಯರೂ ನಟಿಸಿದ್ದಾರೆ. ಒಂದು ವೇಳೆ ಅವರೆಲ್ಲರ ಕಟೌಟ್ ಹಾಕಿದರೆ ಆಯಾ ಥೇಟರ್ ಇರೋ ಏರಿಯಾವೆಲ್ಲ ಕಟೌಟ್ ಮಯವಾಗಿ ಬಿಡುತ್ತದೆ. ಯಾಕೆಂದರೆ ಅಷ್ಟು ದೊಡ್ಡ ತಾರಾಗಣ ಕುರುಕ್ಷೇತ್ರದಲ್ಲಿದೆ!

    ಹೀಗಿರೋದರಿಂದಲೇ ಇದೀಗ ಥೇಟರ್‌ಗಳ ಮುಂದೆ ಪ್ರಧಾನವಾಗಿ ಇಬ್ಬರ ಕಟೌಟುಗಳು ರಾರಾಜಿಸುತ್ತಿವೆ. ದುರ್ಯೋಧನನಾಗಿ ನಟಿಸಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಭೀಷ್ಮ ಅಂಬರೀಶ್ ಅವರ ಕಟೌಟ್ ಬಹುತೇಕ ಚಿತ್ರಮಂದಿರಗಳ ಮುಂದೆ ಜನರನ್ನು ಸೆಳೆಯುತ್ತಿವೆ. ರವಿಚಂದ್ರನ್, ಅರ್ಜುನ್ ಸರ್ಜಾ ಸೇರಿದಂತೆ ಅನೇಕ ಹೀರೋಗಳು ಈ ಚಿತ್ರದಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ದರ್ಶನ್ ಮತ್ತು ಅಂಬರೀಶ್ ಅವರ ಕಟೌಟುಗಳನ್ನು ಚಿತ್ರಮಂದಿರಗಳ ಮುಂದೆ ನಿಲ್ಲಿಸಲಾಗುತ್ತಿದೆ.

    ಹಾಗಂತ ಇದರ ಹಿಂದೆ ಯಾವ ಉದ್ದೇಶಗಳೂ ಇಲ್ಲ. ಈ ಬಗ್ಗೆ ಕುರುಕ್ಷೇತ್ರದಲ್ಲಿ ನಟಿಸಿರೋ ಸಕಲ ಕಲಾವಿದರಿಗೂ ಸಹಮತವಿದೆ. ಅಷ್ಟಕ್ಕೂ ಈ ಹಿಂದೆ ಖುದ್ದು ದರ್ಶನ್ ಅವರೇ ಯಾರ ಕಟೌಟುಗಳನ್ನು ನಿಲ್ಲಿಸೋದೂ ಬೇಡ, ಅಂಬರೀಶ್ ಅವರ ಕಟೌಟ್ ಒಂದಿದ್ದರೆ ಸಾಕು ಎಂದಿದ್ದರು. ಆದರೂ ಇದು ದರ್ಶನ್ ಅವರ ಐವತ್ತನೇ ಚಿತ್ರ. ಇನ್ನು ಅಂಬರೀಶ್ ಅವರನ್ನು ಅಪ್ಪಾಜಿ ಎಂದೇ ಕರೆಯುತ್ತಾ ಅವರ ಬಗ್ಗೆ ವಿಶೇಷವಾದ ಅಕ್ಕರಾಸ್ಥೆ ಹೊಂದಿರುವವರು ದರ್ಶನ್. ಈ ಕಾರಣದಿಂದಲೇ ಭೀಷ್ಮನ ಜೊತೆ ದುರ್ಯೋಧನನ ಕಟೌಟುಗಳನ್ನೂ ಹಾಕಲಾಗುತ್ತಿದೆ.

    ಚಿತ್ರಮಂದಿರಗಳ ಎದುರು ಹೀಗೆ ಭೀಷ್ಮ ಮತ್ತು ದುರ್ಯೋಧನನ ಕಟೌಟುಗಳು ರಾರಾಜಿಸುತ್ತಿರೋದನ್ನು ಕಂಡು ಅಭಿಮಾನಿಗಳು ಮಾತ್ರವಲ್ಲದೇ ಜನರೆಲ್ಲ ಖುಷಿಗೊಳ್ಳುತ್ತಿದ್ದಾರೆ. ಕುರುಕ್ಷೇತ್ರ ಬಿಡುಗಡೆಯಾಗಲು ಎರಡು ದಿನ ಬಾಕಿ ಇರುವಾಗಲೇ ರಾಜ್ಯಾದ್ಯಂತ ಇಂಥಾ ಕಟೌಟ್ ನಿರ್ಮಿಸೋ ಕಾರ್ಯ ಭರದಿಂದ ಸಾಗುತ್ತಿದೆ. ಪ್ರೇಕ್ಷಕರಂತೂ ತಮ್ಮಿಷ್ಟದ ನಟರನ್ನು ಒಂದೇ ತೆರೆಯ ಮೇಲೆ ನೋಡಲು ಕಾತರರಾಗಿದ್ದಾರೆ.

  • ಮುಂದಿನ ವರ್ಷ ಈ ತಿಂಗಳಲ್ಲಿ ರಿಲೀಸ್ ಆಗಲಿದೆ ಮುನಿರತ್ನ ಕುರುಕ್ಷೇತ್ರ

    ಮುಂದಿನ ವರ್ಷ ಈ ತಿಂಗಳಲ್ಲಿ ರಿಲೀಸ್ ಆಗಲಿದೆ ಮುನಿರತ್ನ ಕುರುಕ್ಷೇತ್ರ

    ಬೆಂಗಳೂರು: ಅಲ್ಲಲ್ಲಿ ಒಂದೊಂದು ಫೋಟೋ ರಿಲೀಸ್ ಆಗಿದ್ದು ಬಿಟ್ಟರೆ `ಕುರುಕ್ಷೇತ್ರ’ ಚಿತ್ರದ ಬಗ್ಗೆ ಅದ್ಯಾರೂ ಮಾತನಾಡಿಯೇ ಇರಲಿಲ್ಲ. ಈ ಚಿತ್ರದ ಬಗ್ಗೆ ಅಂತೆ ಕಂತೆಗಳೇ ಸುದ್ದಿಯಾಗುತ್ತಿದ್ದವು. ದರ್ಶನ್ ಅಭಿನಯಿಸಿರುವ ಈ ಚಿತ್ರ ಹಾಗಂತೆ, ಹೀಗಂತೆ ಎನ್ನುವ ವಿಷಯ ಬಿಟ್ಟು ಅಸಲಿ ಸತ್ಯ ಏನು ಎನ್ನುವುದನ್ನು ಬಿಚ್ಚಿಡಲಿದ್ದೇವೆ.

    ಹೈದರಾಬಾದ್ ನಲ್ಲಿ ಕುರುಕ್ಷೇತ್ರದ ಚಿತ್ರೀಕರಣ ನಡೆಯುತ್ತಿದೆ. ಚಿತ್ರತಂಡ ಇದುವರೆಗೂ ಮಾಧ್ಯಮದ ಜೊತೆ ಒಂದೇ ಒಂದು ಸುಳಿವು ಬಿಟ್ಟುಕೊಟ್ಟಿಲ್ಲ. ಒಂದು ಸಾಮಾನ್ಯ ಸಿನಿಮಾ ತಯಾರಾಗಬೇಕು ಎಂದಾದರೆ ಒಂದು ವರ್ಷ ಬೇಕಾಗುತ್ತೆ. ಹೀಗಿರುವಾಗ ಅದ್ಧೂರಿ ಗ್ರಾಫಿಕ್ಸ್ ಕಮ್ ಬಿಗ್ ಬಜೆಟ್ ಸಿನಿಮಾ ಮಾಡಬೇಕಾದರೆ ಸಿಕ್ಕಾಪಟ್ಟೆ ಟೈಮ್ ಬೇಕು. ಹೀಗಿದ್ದರೂ ಜನವರಿಯ ಸಂಕ್ರಾಂತಿ ಹಬ್ಬಕ್ಕೆ ಇದು ತೆರೆಗೆ ಬರುತ್ತೆ ಎನ್ನಲಾಗುತ್ತಿತ್ತು. ಆದರೆ ಈಗ ಕುರುಕ್ಷೇತ್ರ ತೆರೆ ಕಾಣೋದು ಜನವರಿಯಲ್ಲಿ ಅಲ್ಲ ಬದಲಿಗೆ ಫೆಬ್ರವರಿ ಕೊನೇ ವಾರದಲ್ಲಿ ಅಂತ ಗೊತ್ತಾಗಿದೆ.

    ಮಹಾಭಾರತದ ವೀರಾಧಿವೀರ ಯೋಧರಲ್ಲಿ ಅಭಿಮನ್ಯು ಕೂಡ ಒಬ್ಬ. ಚಿಕ್ಕ ವಯಸ್ಸಿನಲ್ಲಿಯೇ ಅಭಿಮನ್ಯು ಕೌರವರಿಗೆ ಬೆವರಿಳಿಸುವ ಸಾಮಥ್ರ್ಯ ಹೊಂದಿರುತ್ತಾನೆ. ಅಂಥ ಶೂರನ ಪಾತ್ರ ಮಾಡುತ್ತಿರೋದು ಜಾಗ್ವಾರ್ ಹುಡುಗ ಹೆಚ್‍ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್.

    ಕುರುಕ್ಷೇತ್ರದ ಕಥೆ ಬಿಡಿ ಗೊತ್ತಿರೋ ವಿಚಾರ ಅಂದುಕೊಂಡರೆ ಅದು ತಪ್ಪು. ದಿಗ್ಗಜರೆಲ್ಲಾ ಒಟ್ಟಿಗೆ ಸೇರಿ ಅಭಿನಯಿಸುತ್ತಿರುವ ಇದರಲ್ಲಿ ಪ್ರತಿ ಕ್ಷಣವೂ ಕುತೂಹಲ ಫಿಕ್ಸ್. ಅದಕ್ಕೆ ಒಂದು ಚಿಕ್ಕ ಉದಾಹರಣೆ ಮೊದಲಾರ್ಧದಲ್ಲಿ ಅಭಿಮನ್ಯು ಪಾತ್ರಧಾರಿ ನಿಖಿಲ್ ಮಾಡಿರುವ ಚಕ್ರವ್ಯೂಹದ ಮಹಾ ಯುದ್ಧ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನ ಪಾತ್ರದಲ್ಲಿ ಅಟ್ಟಹಾಸ ಮೊದಲಾರ್ಧದಲ್ಲಿ ವಾರೇ ವ್ಹಾ ಎಂದೆನ್ನಿಸಿದ್ದರೆ ದ್ವೀತಿಯಾರ್ಧದಲ್ಲಿ ಭಾರತೀಯ ಚಿತ್ರರಂಗವೇ ಒಮ್ಮೆ ಸ್ಯಾಂಡಲ್‍ವುಡ್ ಕಡೆ ತಿರುಗಿ ನೋಡುವಂಥ ಯುದ್ಧದ ಸನ್ನಿವೇಶ ನೋಡಬಹುದು. ಬಾಹುಬಲಿ ಚಿತ್ರದ ಫೈಟ್ ಮಾಸ್ಟರ್ ಸೋಲೋಮನ್ ಗರಡಿಯಲ್ಲಿ ಯುದ್ಧದ ಸನ್ನಿವೇಶಗಳು ಮೂಡಿಬಂದಿವೆ. ಅದೊಂದು ದೃಶ್ಯದಲ್ಲಿ ನಾಲ್ಕು ಕುದುರೆಗಳ ಮೇಲೇರಿ ಧಗಧಗಿಸುತ್ತಾ ಬರುವ ಅಭಿಮನ್ಯುವನ್ನು ನೋಡೋಕೆ ಎರಡು ಕಣ್ಣು ಸಾಲುವುದಿಲ್ಲವಂತೆ.

    ಅಭಿಮನ್ಯು ಪಾತ್ರದ ಸುತ್ತ ಹೆಣೆದ ಟೀಸರ್ ಡಿಸೆಂಬರ್ 16, ಹೆಚ್‍ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬದಂದು ಹೊರಬೀಳಲಿದೆ. ಶೂಟಿಂಗ್ ಕೊಂಚ ಬಾಕಿ ಇದೆ. ಹೀಗಾಗಿಯೇ ಫೆಬ್ರವರಿ ಕೊನೆಯ ವಾರದಲ್ಲಿ ಕುರುಕ್ಷೇತ್ರ ತೆರೆ ಮೇಲೆ ಬರಲಿದೆ ಅಂತ ಹೇಳಲಾಗಿದೆ.

  • ಕುರುಕ್ಷೇತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಮಾಧ್ಯಮಗಳ ಪ್ರಶ್ನೆಗೆ ರಾಣಾ ದಗ್ಗುಬಾಟಿ ಉತ್ತರಿಸಿದ್ದು ಹೀಗೆ

    ಕುರುಕ್ಷೇತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಮಾಧ್ಯಮಗಳ ಪ್ರಶ್ನೆಗೆ ರಾಣಾ ದಗ್ಗುಬಾಟಿ ಉತ್ತರಿಸಿದ್ದು ಹೀಗೆ

    ಬೆಂಗಳೂರು: ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ಅಭಿನಯಿಸುತ್ತೇನೆ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.

    ‘ನೀನೆ ರಾಜಾ ನೀನೆ ಮಂತ್ರಿ’ ತೆಲುಗು ಚಿತ್ರದ ಪ್ರಚಾರಕ್ಕಾಗಿ ಇಂದು ರಾಣಾ ದಗ್ಗುಬಾಟಿ ಬೆಂಗಳೂರಿಗೆ ಆಗಮಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಕನ್ನಡದ ಸಿನಿಮಾವೊಂದರಲ್ಲಿ ನಟಿಸುವ ಸಂಬಂಧವಾಗಿ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

    ದಗ್ಗುಬಾಟಿ ಬಾಯಿಯಿಂದ ಈ ವಿಚಾರ ಹೊರಬೀಳುತ್ತಿದ್ದಂತೆ ಪತ್ರಕರ್ತರು, ಕುರುಕ್ಷೇತ್ರ ಸಿನಿಮಾ ತಯಾರಾಗುತ್ತಿದ್ದು, ಇದರಲ್ಲಿ ನಟಿಸಲು ನಿಮಗೆ ಆಹ್ವಾನ ಬಂದಿದ್ಯಾ ಎನ್ನುವ ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆಗೆ, ಕುರುಕ್ಷೇತ್ರ ಚಿತ್ರದ ಬಗ್ಗೆ ಕೇಳಿದ್ದೇನೆ. ನಟಿಸಲು ಆಹ್ವಾನ ಬಂದಿಲ್ಲ. ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ ಎಂದು ರಾಣಾ ಉತ್ತರಿಸಿದರು.

    ಕಾಜಲ್ ಅಗರ್‍ವಾಲ್, ಕ್ಯಾಥರೀನ್ ತೆರೆಸ ನಟಿಸಿರುವ ನೀನೆ ರಾಜಾ ನೀನೆ ಮಂತ್ರಿ ಆಗಸ್ಟ್ 11ರಂದು ಬಿಡುಗಡೆಯಾಗುತ್ತಿದೆ.

    ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನ ಪಾತ್ರವನ್ನು ದರ್ಶನ್ ಮಾಡುತ್ತಿದ್ದಾರೆ. ಭೀಮನ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.

    ಇದನ್ನೂ ಓದಿ:ಈ 1 ಕಾರಣಕ್ಕಾಗಿ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದಲ್ಲಿ ನಟಿಸುತ್ತಿಲ್ಲ `ಶಿವಣ್ಣ-ಅಪ್ಪು-ಕಿಚ್ಚ’

    ಇದನ್ನೂ ಓದಿ:ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

     

     

  • ಕುಮಾರಸ್ವಾಮಿ ದುರ್ಯೋಧನ ಇದ್ದಂತೆ, ರಣರಂಗದಲ್ಲೇ ತೊಡೆ ತಟ್ಟುತ್ತೇವೆ: ತೇಜಸ್ವಿನಿ ರಮೇಶ್

    ಕುಮಾರಸ್ವಾಮಿ ದುರ್ಯೋಧನ ಇದ್ದಂತೆ, ರಣರಂಗದಲ್ಲೇ ತೊಡೆ ತಟ್ಟುತ್ತೇವೆ: ತೇಜಸ್ವಿನಿ ರಮೇಶ್

    ರಾಮನಗರ: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿಯವರನ್ನ ದುರ್ಯೋಧನ ಎಂದು ಸಂಭೋಧಿಸಿದ್ದಲ್ಲದೇ, ಅವರಿಗೆ ಮಾತಿನಲ್ಲಿ ಉತ್ತರವನ್ನ ನೀಡುವುದಿಲ್ಲ ರಣರಂಗದಲ್ಲೇ ದುರ್ಯೋಧನನಿಗೆ ತೊಡೆ ತಟ್ಟುತ್ತೇವೆ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ತಿರುಗೇಟು ನೀಡಿದ್ದಾರೆ.

    ಇಂದು ರಾಮನಗರದ ಪರಿವೀಕ್ಷಣ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ತನ್ನನ್ನು ಕ್ರ್ಯಾಕ್ ಎಂದು ಕರೆದಿದ್ದಾರೆ. ಅದಕ್ಕೆ ನಾನು ಪರ್ವರ್ಟ್ ಎಂದು ಹೇಳಬೇಕಾಗುತ್ತೆ, ಅದನ್ನ ಹೇಳುವುದಕ್ಕೆ ಇಷ್ಟವಿಲ್ಲ. ಜನ ಅದನ್ನ ಅರ್ಥ ಕೂಡಾ ಮಾಡಿಕೊಳ್ಳಲ್ಲ. ಮಾಜಿ ಸಿಎಂ ಎಂಬ ಅಹಂಕಾರ ಬಿಟ್ಟು ಸರಳ ಸಜ್ಜನ ರಾಜಕಾರಣಿಯಂತೆ ಇರಲಿ. ಅವರ ಮಾತುಗಳೇ ಅವರ ಸಂಸ್ಕøತಿಯನ್ನ ತೋರಿಸುತ್ತೆ ಅಂದ್ರು.

    ನಾನು ಇಬ್ಬರನ್ನ ಕೌರವರು ಅಂತಾ ಹೇಳಿದ್ದೆ, ಅದರಲ್ಲಿ ತಪ್ಪೇನಿದೆ? ಹೊಂದಾಣಿಕೆ ರಾಜಕಾರಣ ಮಾಡ್ತಾ ಇರೋದಕ್ಕೆ ಕೌರವರು ಅಂತಾ ಹೇಳಿದ್ದು ಅಂದ್ರು.

    ಕಾಂಗ್ರೆಸ್ ಹಾಗೂ ಜೆಡಿಎಸ್ ಕೌರವ ಪಾಳಯವಿದ್ದಂತೆ. ಹೆಚ್‍ಡಿಕೆ ಹಾಗೂ ಡಿಕೆ ಶಿವಕುಮಾರ್ ದುರ್ಯೋಧನ- ದುಶ್ಯಾಸನರಿದ್ದಂತೆ ಎಂದು ಕಳೆದ ವಾರ ತೇಜಸ್ವಿನಿ ರಮೇಶ್ ಹೇಳಿಕೆ ನೀಡಿದ್ದರು.