Tag: ದುರ್ಗಾಪೂಜೆ

  • ದಸರಾ ಸಂಭ್ರಮ – 85 ದೇಶಗಳ 1.50 ಲಕ್ಷ ಭಕ್ತರಿಂದ ಪ್ರಾರ್ಥನೆ

    ದಸರಾ ಸಂಭ್ರಮ – 85 ದೇಶಗಳ 1.50 ಲಕ್ಷ ಭಕ್ತರಿಂದ ಪ್ರಾರ್ಥನೆ

    ಬೆಂಗಳೂರು: ಇಲ್ಲಿನ ಆರ್ಟ್‌ ಆಫ್‌ ಲಿವಿಂಗ್‌ (Art of Living) ಅಂತಾರಾಷ್ಟ್ರೀಯ ಕೇಂದ್ರದಲ್ಲಿ ದುರ್ಗಾಷಮಿ ಪೂಜಾ ಮಹೋತ್ಸವದ (Dasara Celebration) ಅದ್ಧೂರಿ ಆಚರಣೆ ನಡೆಯಿತು. 82 ದೇಶಗಳಿಂದ ಒಂದೂವರೆ ಲಕ್ಷ ಜನರು ವಿಶೇಷ ಹೋಮ, ಮಂತ್ರೋಚ್ಚಾರಣೆ, ಭಜನೆ, ಧ್ಯಾನದ ಮೂಲಕ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದರು.

    ವಿಶ್ವದ ಶಾಂತಿಗಾಗಿ ಹಾಗೂ ಯೋಗಕ್ಷೇಮಕ್ಕಾಗಿ ಶಕ್ತಿಶಾಲಿ ಚಂಡಿ ಹೋಮ ನೆರವೇರಿಸಲಾಯಿತು. ಮಂತ್ರೋಪಚಾರಣೆಯೊಂದಿಗೆ 108 ಗಿಡಮೂಲಿಕೆಗಳು, ಹಣ್ಣುಗಳು ಹಾಗೂ ವಿಶೇಷ ಪದಾರ್ಥಗಳನ್ನು ಹೋಮಕ್ಕೆ ಅರ್ಪಣೆ ಮಾಡಲಾಯಿತು. 700 ಶ್ಲೋಕಗಳನ್ನೊಳಗೊಂಡ ದುರ್ಗಾ ಸಪ್ತಶತಿ ಪಾರಾಯಣ ಮಾಡಿದ ನಂತರ ಗೋಪೂಜೆ, ಗಜಪೂಜೆ, ಕನ್ಯಾಪೂಜೆ, ವಟುಪೂಜೆ ಹಾಗೂ ದಂಪತಿ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಇದನ್ನೂ ಓದಿ: ಸ್ವಚ್ಛನಗರಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿದ ಬೆಂಗಳೂರು- ಬಿಗ್‌ಶೇಮ್‌ ಎಂದು ಕುಟುಕಿದ ಪೈ

    ಈ ಕುರಿತು ಮಾತನಾಡಿದ ಶ್ರೀ ಶ್ರೀ ರವಿಶಂಕರ್‌ ಗುರೂಜಿ (Sri Sri Ravi Shankar Guruj) ಅವರು, ಚಂಡಿ ಎಂದರೆ ಬಹಳ ಶಕ್ತಿಶಾಲಿ ಎಂದರ್ಥ. ಚಂಡಿಹೋಮದ ಪ್ರತಿಯೊಂದು ಮಂತ್ರದೊಡನೆ ಒಂದು ಗಿಡಮೂಲಿಕೆ ಸಂಬಂಧ ಪಟ್ಟಿದೆ. ಪ್ರತೀ ಮಂತ್ರವೂ ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿದೆ. ಇದು ವಾತಾವರಣದಲ್ಲಿ ಸಕಾರಾತ್ಮಕ ಕಂಪನಗಳನ್ನುಂಟುಮಾಡುತ್ತದೆ. ಈ ನವರಾತ್ರಿ ಉತ್ಸವವು ಸಂಕುಚಿತ ಮನಸ್ಸಿನಿಂದ ವಿಶಾಲ ಮನಸ್ಸಿನ ಚಲನೆಯ ಸಂಭ್ರಮಾಚರಣೆಗೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಾಂಡಿಯಾ ಪೆಂಡಾಲ್‌ನಲ್ಲಿ ಮುಸ್ಲಿಮ್ ಯುವಕರಿಗೆ ಏನು ಕೆಲಸ – ಮುತಾಲಿಕ್ ಪ್ರಶ್ನೆ

    ನವರಾತ್ರಿಯ ಮತ್ತೊಂದು ವಿಶೇಷವೆಂದರೆ ಆಶ್ರಮದ ಅಡುಗೆ ಮನೆಯಲ್ಲಿ ಪ್ರತಿನಿತ್ಯವೂ ಸಾವಿರಾರು ಭಕ್ತರಿಗಾಗಿ ಪ್ರಸಾದ ವಿತರಣೆ ಮಾಡಲಾಯಿತು. ಅದಕ್ಕಾಗಿ 60 ಟನ್ ಅಕ್ಕಿ, 40 ಟನ್ ಗೋಧಿಹಿಟ್ಟು, 20 ಟನ್ ಬೇಳೆ, 40,000 ಲೀಟರ್ ಎಣ್ಣೆ, 45,000 ಲೀಟರ್ ಹಾಲು, 250 ಟನ್ ತರಕಾರಿ, 10,000 ಲೀಟರ್ ಮೊಸರನ್ನು ಬಳಸಲಾಯಿತು.

    Live Tv
    [brid partner=56869869 player=32851 video=960834 autoplay=true]

  • ದುರ್ಗಾಪೂಜೆಗೆ ಪಾರಂಪರಿಕ ಸ್ಥಾನಮಾನ ಕೊಟ್ಟ UNESCO

    ದುರ್ಗಾಪೂಜೆಗೆ ಪಾರಂಪರಿಕ ಸ್ಥಾನಮಾನ ಕೊಟ್ಟ UNESCO

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ದುರ್ಗಾಪೂಜೆ ಹಬ್ಬಕ್ಕೆ ಯುನೆಸ್ಕೋ ಬುಧವಾರ ಪಾರಂಪರಿಕ ಸ್ಥಾನಮಾನವನ್ನು ನೀಡಿದೆ.

    ಈ ಕುರಿತು ಯುನೆಸ್ಕೋ ಸಂಸ್ಥೆ ಟ್ವಿಟ್ಟರ್‌ನಲ್ಲಿ ದುರ್ಗಾ ದೇವಿ ವಿಗ್ರಹದ ಫೋಟೋವನ್ನು ಹಾಕಿ ‘ಕೋಲ್ಕತ್ತಾದಲ್ಲಿನ ದುರ್ಗಾಪೂಜೆಯನ್ನು ಅಮೂರ್ತ ಪರಂಪರೆಯ ಪಟ್ಟಿಯಲ್ಲಿ ಬರೆಯಲಾಗಿದೆ. ಅಭಿನಂದನೆಗಳು ಭಾರತ’ ಎಂದು ಬರೆದು ಟ್ವೀಟ್ ಮಾಡಿದೆ. ಈ ಹಿನ್ನೆಲೆ ಕೊಲ್ಕತ್ತಾದ ಜನರೆಲ್ಲರೂ ಸಂತೋಷನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಸೆಮಿಕಂಡಕ್ಟರ್ ಉತ್ಪಾದನೆಗೆ 76,000 ಕೋಟಿ – ಕೇಂದ್ರ ಸಂಪುಟ ಅನುಮೋದನೆ

    ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆ ಮತ್ತು ಸಂತೋಷದ ವಿಷಯ ಎಂದು ಯುನೆಸ್ಕೋದ ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.

    ರಾಜ್ಯ ಪಾರಂಪರಿಕ ಆಯೋಗದ ಅಧ್ಯಕ್ಷ ಸುವಪ್ರಸನ್ನ ಈ ಕುರಿತು ಮಾತನಾಡಿದ್ದು, ದುರ್ಗಾಪೂಜೆ ಉತ್ಸವದ ಬಗ್ಗೆ ಅದರ ವೈಭವದ ಬಗ್ಗೆ ವಿಶ್ವದಾದ್ಯಂತ ಹೆಚ್ಚಿನ ಜನರಿಗೆ ಅರಿವು ಮೂಡಿಸಿದೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.

  • ದುರ್ಗಾ ಪೂಜೆಗೆ ತೆರಳುತ್ತಿದ್ದಾಗ 4ರ ಬಾಲಕಿ ಮೇಲೆ ಅತ್ಯಾಚಾರ

    ದುರ್ಗಾ ಪೂಜೆಗೆ ತೆರಳುತ್ತಿದ್ದಾಗ 4ರ ಬಾಲಕಿ ಮೇಲೆ ಅತ್ಯಾಚಾರ

    ಲಕ್ನೋ: 4 ವರ್ಷದ ಬಾಲಕಿ ಮೇಲೆ 28 ವರ್ಷದ ಯುವಕನೋರ್ವ ಅತ್ಯಾಚಾರ ಎಸಗಿರುವ ಘಟನೆ ಶುಕ್ರವಾರ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.

    ಪೊಲೀಸರ ಮಾಹಿತಿ ಪ್ರಕಾರ, ಬಾಲಕಿ ‘ದುರ್ಗಾ ಪೂಜೆ’ ನೋಡಲು ತನ್ನ ಮನೆಯಿಂದ ಹೊರಗೆ ಹೋದಾಗ ಈ ಘಟನೆ ಸಂಭವಿಸಿದೆ. ಸ್ಥಳೀಯರು ಆರೋಪಿಯನ್ನು ಹಿಡಿದಿದ್ದು, ಆರೋಪಿಯನ್ನು ವಿನೋದ್ ಗಿರಿ ಎಂದು ಗುರುತಿಸಲಾಗಿದೆ. ನಂತರ ಆತ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

    ಪೋಕ್ಸೊ ಮತ್ತು ಐಪಿಸಿ ಸೆಕ್ಷನ್ 376(ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಅಡಿ ಬಸ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಬಾಲಕಿಗೆ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಶೀಘ್ರದಲ್ಲೇ ಬಾಲಕಿಯನ್ನು ಡಿಸ್ಚಾರ್ಜ್ ಮಾಡಲಾಗುವುದು. ಸ್ಥಳೀಯರು ಆರೋಪಿಯನ್ನು ಹಿಡಿದಿದ್ದರೂ ಆತ ತಪ್ಪಿಸಿಕೊಂಡಿದ್ದಾನೆ ಎಂದು ಬಸ್ತಿ ಎಸ್‍ಪಿ ಪಂಕಜ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಆರೋಪಿಯನ್ನು ಹಿಡಿಯಲು ತಂಡವನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಿ ಜೈಲಿಗಟ್ಟಲಾಗುವುದು ಎಂದು ಐಜಿ ಅಶುತೋಷ್ ಕುಮಾರ್ ಭರವಸೆ ನೀಡಿದ್ದಾರೆ.