Tag: ದುರ್ಗಾದೇವಿ

  • ದುರ್ಗಾದೇವಿ ದೇವಸ್ಥಾನಕ್ಕೆ ಬಿಟ್ಟಿದ್ದ ದೇವಿಯ ಕೋಣ ನಾಪತ್ತೆ- ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

    ದುರ್ಗಾದೇವಿ ದೇವಸ್ಥಾನಕ್ಕೆ ಬಿಟ್ಟಿದ್ದ ದೇವಿಯ ಕೋಣ ನಾಪತ್ತೆ- ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

    ಹಾವೇರಿ: ದುರ್ಗಾದೇವಿ (Durga Devi) ದೇವಸ್ಥಾನಕ್ಕೆ ಬಿಟ್ಟಿದ್ದ ದೇವಿಯ ಕೋಣ (Buffalo) ಕಾಣೆಯಾಗಿದ್ದು, ಕೋಣವನ್ನು ಹುಡುಕಿಕೊಡುವಂತೆ ಗ್ರಾಮಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಹಾವೇರಿ (Haveri) ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ.

    ಕಳೆದ ಕೆಲವು ವರ್ಷಗಳಿಂದ ಗ್ರಾಮದ ದೇವಿಗೆ ಹಬ್ಬದ ಕೋಣವನ್ನು ಬಿಡಲಾಗಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಕೋಣ ನಾಪತ್ತೆಯಾಗಿದೆ. ಗ್ರಾಮದ ಜನರು ಕೋಣವನ್ನು ಹುಡುಕಾಡಿ ಸಿಗದೇ ಇದ್ದಾಗ ಕಾಣೆಯಾಗಿರುವ ದೇವರ ಕೋಣವನ್ನು ಹುಡುಕಿ ಕೊಡುವಂತೆ ರಟ್ಟೀಹಳ್ಳಿ ಠಾಣೆಗೆ ದೌಡಾಯಿಸಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಎಫೆಕ್ಟ್ – ಮಹಿಳಾ ಕಾರ್ಮಿಕರು ಸಿಗದೇ ರೈತರ ಪರದಾಟ

    ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರು ಹುಡುಕುವ ಕೆಲಸ ಮಾಡಿದ್ದಾರೆ. ಅದರೂ ಕೋಣ ಪತ್ತೆಯಾಗಿಲ್ಲ. ಗ್ರಾಮದ ಸುತ್ತಮುತ್ತಲಿನ ಗ್ರಾಮ ಸೇರಿದಂತೆ ಹಲವು ಗ್ರಾಮಕ್ಕೆ ಹೋಗಿ ಹುಡುಕಾಟ ಮಾಡಿದ್ದಾರೆ. ಆದರೂ ದೇವರ ಕೋಣ ಪತ್ತೆಯಾಗಿಲ್ಲ. ಹೀಗಾಗಿ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಪತ್ತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

  • Uttar Pradesh | ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಕೋಮು ಸಂಘರ್ಷ – ಲಾಠಿ ಚಾರ್ಜ್, 30 ಮಂದಿ ಬಂಧನ

    Uttar Pradesh | ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಕೋಮು ಸಂಘರ್ಷ – ಲಾಠಿ ಚಾರ್ಜ್, 30 ಮಂದಿ ಬಂಧನ

    ಲಕ್ನೋ: ದುರ್ಗಾದೇವಿ ಮೂರ್ತಿ ವಿಸರ್ಜಣೆ ವೇಳೆ ಎರಡು ಗುಂಪುಗಳ ನಡುವೆ ಕೋಮು ಸಂಘರ್ಷ (Communal clashes) ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟ ಪರಿಣಾಮ ಹಲವು ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನ (Bahraich) ಹಳ್ಳಿಯೊಂದರಲ್ಲಿ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

    ಬಹ್ರೈಚ್‌ನ ಮಹ್ಸಿ ಉಪವಿಭಾಗದ ಮೂಲಕ ಸಾಗುತ್ತಿದ್ದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆಸಿದಾಗ ಘರ್ಷಣೆಗಳು ಭುಗಿಲೆದ್ದವು. ಘರ್ಷಣೆಯ ನಂತರ ಜಿಲ್ಲಾಡಳಿತವು ಮಹ್ಸಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕನಿಷ್ಠ 30 ಜನರನ್ನು ಬಂಧಿಸಿದ್ದಾರೆ. ಸಲ್ಮಾನ್ ಎಂದು ಗುರುತಿಸಲಾದ ಒರ್ವ ವ್ಯಕ್ತಿಯನ್ನು ಪೊಲೀಸರು (UP Police) ಆತನ ಮನೆ ಮತ್ತು ಅಂಗಡಿಯಿಂದ ಮೆರವಣಿಗೆಯ ಮೇಲೆ ಗುಂಡು ಹಾರಿಸಿದ ಪುರಾವೆಗಳನ್ನು ಕಂಡುಕೊಂಡ ಬಳಿಕ ಬಂಧಿಸಿದ್ದಾರೆ.

    ಜೊತೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಹತ್ತು ಜನರಲ್ಲಿ ಆರು ಜನರನ್ನು ಅಬ್ದುಲ್ ಹಮೀದ್, ಸರ್ಫರಾಜ್, ಫಹೀಮ್, ಸಾಹಿರ್ ಖಾನ್, ನಂಕೌ ಮತ್ತು ಮಾರ್ಫ್ ಅಲಿ ಎಂದು ಗುರುತಿಸಿದೆ ಬಾಕಿ ನಾಲ್ವರು ಆರೋಪಿಗಳ ಗುರುತು ಪತ್ತೆಯಾಗಬೇಕಿದೆ. ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್, ಸಿದ್ದರಾಮಯ್ಯ ಮುಸಲ್ಮಾನರ ಬಿಗ್‌ ಬಾಸ್: ಅಶೋಕ್‌ ಲೇವಡಿ

    ಗಲಭೆಕೋರರ ವಿರುದ್ಧ ಕಠಿಣ ಕ್ರಮ:
    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯನ್ನು ಖಂಡಿಸಿದ್ದಾರೆ. ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚಿಸಲು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದವರನ್ನು ಬಿಡಲಾಗುವುದಿಲ್ಲ. ಎಲ್ಲರಿಗೂ ಸುರಕ್ಷತೆಯ ಭರವಸೆ ಇದೆ, ಆದರೆ ಗಲಭೆಕೋರರನ್ನು ಮತ್ತು ಘಟನೆಗೆ ಕಾರಣವಾದವರ ನಿರ್ಲಕ್ಷ್ಯವನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

    ಯಾವುದೇ ಸಮುದಾಯವು ಇತರ ಸಮುದಾಯವನ್ನು ಕೆರಳಿಸಬಾರದು. ಯಾವುದೇ ಸಮುದಾಯವು ಇತರ ಸಮುದಾಯದ ಮೇಲೆ ಕಲ್ಲು ತೂರಾಟ ಮಾಡಬಾರದು. ನಿಮ್ಮ ಸಮಸ್ಯೆಗಳನ್ನು ಆಡಳಿತಕ್ಕೆ ಹೇಳುವುದು ಸರಿಯಾದ ಮಾರ್ಗವಾಗಿದೆ. ಆದರೆ ಜನರು ಸಮುದಾಯಗಳನ್ನು ಪ್ರಚೋದಿಸುತ್ತಾರೆ ಎಂದು ಎಸ್ಪಿ ನಾಯಕ ಎಸ್‌.ಟಿ ಹಸನ್ ಹೇಳಿದ್ದಾರೆ. ಇದನ್ನೂ ಓದಿ: ಎಸ್‌ಸಿಒ ಶೃಂಗಸಭೆ – ಮಂಗಳವಾರ ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

    ನಮಾಜ್ ಸಮಯದಲ್ಲಿ ಜನರು ಮಸೀದಿಗಳ ಬಳಿ ಧ್ವನಿವರ್ಧಕದಲ್ಲಿ ಡಿಜೆ ಹಾಕುತ್ತಾರೆ. ಅಂತಹ ಘರ್ಷಣೆಗಳು ನಡೆಯುವ ಹೆಚ್ಚಿನ ಸ್ಥಳಗಳಲ್ಲಿ ಅದು ಹಿಂದೂ-ಮುಸ್ಲಿಂ ಹಿಂಸಾಚಾರವಾಗಿ ಪರಿವರ್ತನೆಯಾಗುತ್ತದೆ. ಇದು ದೇಶ ಮತ್ತು ಸಮಾಜವನ್ನು ದುರ್ಬಲಗೊಳಿಸುತ್ತದೆ. ಕಾನೂನನ್ನು ಕೈಯಲ್ಲಿ ತೆಗೆದುಕೊಳ್ಳುವವರ ವಿರುದ್ಧ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮೊರಾದಾಬಾದ್ ಮಾಜಿ ಸಂಸದರು ಹೇಳಿದ್ದಾರೆ.

  • ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ – 8 ಮಂದಿ ಸಾವು, ಮೋದಿ ಸಂತಾಪ

    ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ – 8 ಮಂದಿ ಸಾವು, ಮೋದಿ ಸಂತಾಪ

    ಕೋಲ್ಕತ್ತಾ: ದುರ್ಗಾದೇವಿ ಮೂರ್ತಿ ವಿಸರ್ಜನೆ (Durga Idol Immersion) ವೇಳೆ ಉಂಟಾದ ದಿಢೀರ್ ಪ್ರವಾಹದಿಂದ (Flood)  8 ಮಂದಿ ಸಾವನ್ನಪ್ಪಿ ಹಲವರು ನಾಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ (West Bengal)  ಜಲ್‍ಪೈಗುರಿಯಲ್ಲಿ (Jalpaiguri) ಬುಧವಾರ ರಾತ್ರಿ ನಡೆದಿದೆ.

    ಪಶ್ಚಿಮ ಬಂಗಾಳದ ಜಲ್‍ಪೈಗುರಿಯಲ್ಲಿ ನಿಯೋರಾ ನದಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ದುರ್ಗಾದೇವಿ ಮೂರ್ತಿ ವಿಸರ್ಜನೆ ಮಾಡಲಾಗುತ್ತಿತ್ತು. ಈ ವೇಳೆ ಏಕಾಏಕಿ ಪ್ರವಾಹ ಪರಿಸ್ಥಿತಿ ತಲೆದೂರಿದೆ. ದುರ್ಘಟನೆಯಲ್ಲಿ ಈಗಾಗಲೇ 8 ಮಂದಿ ಮರಣ ಹೊಂದಿದ್ದು, ನಾಪತ್ತೆಯಾದವರ ಪತ್ತೆ ಕಾರ್ಯಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ 5 ಮಂದಿ ನೀರುಪಾಲು

    ಕಳೆದೆರಡು ದಿನದಿಂದ ಈ ಭಾಗದಲ್ಲಿ ಅಧಿಕ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ನದಿಯಲ್ಲಿ ದಿಢೀರ್ ಆಗಿ ಉಂಟಾದ ಪ್ರವಾಹದಲ್ಲಿ ಅನೇಕ ಭಕ್ತರು ಕೊಚ್ಚಿಹೋಗಿದ್ದಾರೆ. 8 ಮಂದಿಯ ಮೃತದೇಹ ಪತ್ತೆಯಾಗಿದ್ದು, 50ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದೆ. 13 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ರಾವಣನ ಬದಲಾಗಿ, ಇಡಿ, ಸಿಬಿಐ ಪ್ರತಿಕೃತಿ ಸುಟ್ಟು ವಿಜಯದಶಮಿ ಆಚರಿಸಿದ ಕೈ ಕಾರ್ಯಕರ್ತರು

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳಿಂದ ರಕ್ಷಣಾ ಕಾರ್ಯಚರಣೆ ನಡಯುತ್ತಿದೆ. ದುರಂತದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಾಂಡಿಯಾ ನೃತ್ಯ ಮಾಡಿ ಸಂಭ್ರಮಿಸಿದ ಅಂಜಲಿ ನಿಂಬಾಳ್ಕರ್

    ದಾಂಡಿಯಾ ನೃತ್ಯ ಮಾಡಿ ಸಂಭ್ರಮಿಸಿದ ಅಂಜಲಿ ನಿಂಬಾಳ್ಕರ್

    ಬೆಳಗಾವಿ: ದಸರಾ ಹಿನ್ನೆಲೆ ಜಿಲ್ಲೆಯ ಜಳಗಾ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ದುರ್ಗಾದೇವಿ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಖಾನಾಪುರ ಶಾಸಕಿ ಅಂಜಳಿ ನಿಂಬಾಳ್ಕರ್ ಮಹಿಳೆಯರೊಂದಿಗೆ ದಾಂಡಿಯಾ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.

    ದಸರಾ ಪ್ರಯುಕ್ತ ಜಳಗಾ ಗ್ರಾಮದಲ್ಲಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಲಾಗಿತ್ತು. ನವರಾತ್ರಿ ಹಬ್ಬದ ಹತ್ತನೇ ದಿನ ವಿಜಯ ದಶಮಿಯನ್ನು ಆಚರಿಸಲಾಗುತ್ತದೆ. 10 ದಿನಗಳ ಕಾಲ ದುರ್ಗಾದೇವಿಯನ್ನು ಪೂಜಿಸಿ ಇಂದು ವಿಸರ್ಜನೆ ಕಾರ್ಯಕ್ರಮ ಗ್ರಾಮದಲ್ಲಿ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ನಿಂಬಾಳ್ಕರ್ ಭಾಗವಹಿಸಿದ್ದಾರೆ. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರಿನ ಜಂಬೂಸವಾರಿ ಆರಂಭ

    ದುರ್ಗಾದೇವಿಯ ವಿಸರ್ಜನಾ ಮೆರವಣಿಗೆಯಲ್ಲಿ ಮಹಿಳೆಯರು ದಾಂಡಿಯ ನೃತ್ಯ ಮಾಡುತ್ತಿದ್ದರು. ಈ ವೇಳೆ ಅವರೊಂದಿಗೆ ಸೇರಿಕೊಂಡ ಅಂಜಲಿ ನಿಂಬಾಳ್ಕರ್ ಕೂಡ ದಾಂಡಿಯಾ ಸ್ಟೆಪ್ಸ್ ಹಾಕಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಇದನ್ನೂ ಓದಿ: 16 ಕೆ.ಜಿ ಚಿನ್ನದ ಸೀರೆ ಉಡಿಸಿ ಮಹಾಲಕ್ಷ್ಮಿ ದೇವಿಗೆ ಅಲಂಕಾರ

  • 45 ಅಡಿ ಎತ್ತರದ ಪರಿಸರ ಸ್ನೇಹಿ ದುರ್ಗಾದೇವಿ ಮೂರ್ತಿ – ಫೋಟೋ ವೈರಲ್

    45 ಅಡಿ ಎತ್ತರದ ಪರಿಸರ ಸ್ನೇಹಿ ದುರ್ಗಾದೇವಿ ಮೂರ್ತಿ – ಫೋಟೋ ವೈರಲ್

    ಹೈದರಾಬಾದ್: ಹೈದರಾಬಾದಿನ ಎಸಾಮಿಯಾ ಬಜಾರ್‌ನಲ್ಲಿ 45 ಅಡಿ ಎತ್ತರದ ದುರ್ಗಾದೇವಿ ಮೂರ್ತಿಯನ್ನು ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸಿ ಸ್ಥಾಪಿಸಲಾಗಿದೆ.

    Durga Devi

    ಈ ಮೂರ್ತಿಯನ್ನು ಹುಲ್ಲು, ಮಣ್ಣು, ಕೆಂಪು ಮರಳು ಮತ್ತು ಪೇಯಿಂಟ್‍ನಿಂದ ವಿನ್ಯಾಸಗೊಳಿಸಲಾಗಿದೆ. ಈ ವಿಗ್ರಹವು 9 ಮುಖ ಹಾಗೂ 9 ಜೋಡಿ ಕೈಗಳನ್ನು ಹೊಂದಿದ್ದು, ದೇವತೆಯ 9 ರೂಪಗಳನ್ನು ಸೂಚಿಸುತ್ತದೆ. ಈ ವಿಗ್ರಹವನ್ನು ಸ್ಥಾಪಿಸಲು ಗುಲಾಬ್ ಶ್ರೀನಿವಾಸ್ ಗಂಗಪುತ್ರ ಅವರು, 22 ಕೆಲಸಗಾರರೊಂದಿಗೆ 35 ದಿನಗಳ ಕಾಲ ಸಮಯ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಸಚಿವ ಎಸ್.ಟಿ ಸೋಮಶೇಖರ್‌ರಿಂದ ಡೋಲು ಬಡಿತ, ವೀರಗಾಸೆ ಕುಣಿತ

    Durga Devi

    ಸದ್ಯ ಈ ಮೂರ್ತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಮಗೆ ಬೇಕಾಗಿರುವುದು ಪರಿಸರ ಸ್ನೇಹಿ ಮೂರ್ತಿಗಳು. ಆದರೆ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಸಿದ್ದಪಡಿಸಿದ ವಿಗ್ರಹಗಳು ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ನಮ್ಮ ಪರಿಸರ ಹಾಳಾಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಅಕ್ಟೋಬರ್ 7ರಿಂದ ಆರಂಭವಾದ ನವರಾತ್ರಿಯ ಹಬ್ಬವನ್ನು ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ವರ್ಷ ಅಕ್ಟೋಬರ್ 13 ರಂದು ಅಷ್ಟಮಿ ಬರುತ್ತದೆ ಮತ್ತು ದಶಮಿ ಅಕ್ಟೋಬರ್ 15 ರಂದು ಬರುತ್ತದೆ. ವಿಜಯ ದಶಮಿಯನ್ನು ದಸರಾ ಎಂದೂ ಕರೆಯುತ್ತಾರೆ, ಇದು ರಾಮನ ಕೈಯಲ್ಲಿ 10 ತಲೆಯ ರಾವಣನ ಸೋಲನ್ನು ಸೂಚಿಸುತ್ತದೆ.

  • ಗಣೇಶೋತ್ಸವದಂತೆ ದುರ್ಗಾದೇವಿ ಪ್ರತಿಷ್ಠಾಪನೆಗೂ ಪಾಲಿಕೆ ನಿರ್ಬಂಧ

    ಗಣೇಶೋತ್ಸವದಂತೆ ದುರ್ಗಾದೇವಿ ಪ್ರತಿಷ್ಠಾಪನೆಗೂ ಪಾಲಿಕೆ ನಿರ್ಬಂಧ

    ಬೆಂಗಳೂರು:  ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಕಡಿಮೆ ಆಗಿದೆ. ಈ ಹಿನ್ನೆಲೆ ಸಾಲು ಸಾಲು ಹಬ್ಬಗಳನ್ನ ಮಾಡಲು ಜನ ಸಜ್ಜಾಗುತ್ತಿದ್ದಾರೆ. ಈಗ ದುರ್ಗಾದೇವಿ ಪ್ರತಿಷ್ಠಾಪಿಸಿ ಪೂಜಿಸಲು ಬೆಂಗಳೂರಿನಲ್ಲಿ ತುದಿಗಾಲಲ್ಲಿ ನಿಂತಿದ್ದಾರೆ. ಗಣೇಶೋತ್ಸವದಂತೆ ದುರ್ಗಾದೇವಿ ಪ್ರತಿಷ್ಠಾಪನೆಗೂ ಪಾಲಿಕೆ ನಿರ್ಬಂಧವನ್ನು ಹೇರಿ ಕೆಲವು ಗೈಡ್ ಲೈನ್ಸ್ ಮಾಡಿದೆ.

    ದುರ್ಗಾದೇವಿಯನ್ನು ಪ್ರತಿಷ್ಠಾಪಿಸಲು ಅವಕಾಶ ಕೊಡಬೇಕು ಬಿಬಿಎಂಪಿಗೆ ಅರ್ಜಿ ಸಲ್ಲಿಸಲಾಗಿತ್ತು. ಈಗ ಬಿಬಿಎಂಪಿ ದುರ್ಗಾದೇವಿ ಪೂಜಿಸಿ ಪ್ರತಿಷ್ಠಾಪಿಸಲು ಪ್ರತ್ಯೇಕ ಗೈಡ್ ಲೈನ್ ಬಿಡುಗಡೆ ಮಾಡಿದೆ.

    bbmp guidelines durga devi

    ವಾರ್ಡ್‍ಗೆ ಒಂದೇ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಎತ್ತರ 4 ಅಡಿ ಮೀರದಂತೆ ಕ್ರಮ ವಹಿಸಬೇಕು. ದರ್ಶನದ ವೇಳೆ ಗರಿಷ್ಠ 100 ಮಂದಿಗೆ ಅವಕಾಶ ನೀಡಲಾಗಿದೆ. ವಾರ್ಡಿನಲ್ಲಿ ವಲಯ ಜಂಟಿ ಆಯುಕ್ತರಿಂದ ಅನುಮತಿ ಪಡೆದು ವಾರ್ಡ್‍ಗೆ ಒಂದೇ ಮೂರ್ತಿ ಕೂರಿಸಬೇಕು. ಇದನ್ನೂ ಓದಿ: ರಾತ್ರಿಯಿಂದ ಬೆಂಗಳೂರಲ್ಲಿ ಜಿಟಿಜಿಟಿ ಮಳೆ – ಮಲೆನಾಡು, ಗದಗ, ಕಲಬುರಗಿ, ಕೋಲಾರ, ಚಿತ್ರದುರ್ಗದಲ್ಲೂ ವರ್ಷಧಾರೆ

    ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಗೆ ಮುನ್ನ ಸ್ಥಳವನ್ನು ಸ್ಯಾನಿಟೈಸ್ ಮಾಡಬೇಕು. ದುರ್ಗಾದೇವಿ ಪ್ರಾರ್ಥನೆ ವೇಳೆ 50 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ದೇವಿ ದರ್ಶನಕ್ಕೆ ಅತಿಥಿಗಳು ಬಂದಾಗ 100 ಕ್ಕಿಂತ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು. ಡಿಜೆ ಸಂಗೀತ ನಿಷೇಧ, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ, ವಿಸರ್ಜನೆ ವೇಳೆ 10 ಜನ ಕ್ಕಿಂತ ಮೀರಬಾರದು. ದುರ್ಗಾದೇವಿಯನ್ನು ಕೂರಿಸಲು 5 ದಿನ ಮಾತ್ರ ಅವಕಾಶ ನೀಡಲಾಗಿದೆ.

    ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

  • ಪ್ರತಿ ಬಾರಿನೂ ದುರ್ಗಾದೇವಿ ಆಶೀರ್ವಾದ ಮಾಡ್ಕೊಂಡೇ ಬಂದಿದ್ದಾಳೆ: ಕೌರವ

    ಪ್ರತಿ ಬಾರಿನೂ ದುರ್ಗಾದೇವಿ ಆಶೀರ್ವಾದ ಮಾಡ್ಕೊಂಡೇ ಬಂದಿದ್ದಾಳೆ: ಕೌರವ

    ಹಾವೇರಿ: ಯಾವತ್ತೂ ನಮಗೆ ದುರ್ಗಾ ದೇವತೆ ಆಶೀರ್ವಾದ ಮಾಡಿಕೊಂಡೇ ಬಂದಿದ್ದಾಳೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ಬಿ.ಸಿ ಪಾಟೀಲ್ ಅವರು ಇಂದು ಹಾವೇರಿ ಜಿಲ್ಲೆ ಹಿರೇಕರೂರು ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಕುಟುಂಬ ಸದಸ್ಯರು ತೆರಳಿ ಪೂಜೆ ಸಲ್ಲಿಸಿದರು. ಪುತ್ರಿ ಹಾಗೂ ಬೆಂಬಲಿಗರ ಜೊತೆ ತೆರಳಿ ದುರ್ಗಾದೇವಿಗೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯನವರ ಹೊಗಳಿಕೆ ನಮ್ಮ ಪಕ್ಷಕ್ಕೆ ಅಗತ್ಯ ಇಲ್ಲ: ಬಿ.ಸಿ.ಪಾಟೀಲ್

    ಬಳಿಕ ಮಾತನಾಡಿದ ಶಾಸಕರು, ನಾನು ಹಿರೆಕೇರೂರಿಗೆ ಬಂದಾಗಿಂದ ನನ್ನ ಪ್ರತಿ ಚುನಾವಣೆಯ ನಾಮಪತ್ರಕ್ಕೆ ಸಹಿ ಮಾಡಿದ್ದು ದುರ್ಗಾದೇವಿ ದೇವಸ್ಥಾನದಲ್ಲಿ. ಸಮಯ ಸಿಕ್ಕಾಗೆಲ್ಲ ಹಿರೆಕೇರೂರಿಗೆ ಬಂದಾಗೆಲ್ಲ ದೇವಸ್ಥಾನಕ್ಕೆ ಹೋಗಿ ಬರ್ತಿದ್ದೆ. ಅದರಂತೆ ಇಂದು ಕೂಡ ದೇವಸ್ಥಾನಕ್ಕೆ ಹೋಗಿ ದೇವಿ ಆಶೀರ್ವಾದ ಪಡೆದುಕೊಂಡು ಬಂದಿರುವೆ ಎಂದರು.

    ನಾನು ಆಶಾದಾಯಕ, ಯಾವಾಗ್ಲೂ ಒಳ್ಳೆಯದಾಗುತ್ತೆ ಅಂತಾ ಬಯಸುವವನು. ಒಳ್ಳೆಯದಾಗುತ್ತೆ ಅಂತಾ ಭರವಸೆ ಇದೆ, ಹಾಗೆಯೇ ಭರವಸೆ ಇಟ್ಟುಕೊಳ್ಳುವಂಥವನು. ಸಚಿವ ಸ್ಥಾನ ನೋಡೋಣ ಕಾದು ನೋಡೋಣ. ಯಾವತ್ತೂ ನಮಗೆ ದುರ್ಗಾ ದೇವತೆ ಆಶೀರ್ವಾದ ಮಾಡಿಕೊಂಡೆ ಬಂದಿದ್ದಾಳೆ ಎಂದು ಹೇಳಿದರು. ಇದನ್ನೂ ಓದಿ:ನೂತನ ಸಂಪುಟದಲ್ಲೂ ಸಚಿವ ಸ್ಥಾನಕ್ಕೆ ನಾರಾಯಣಗೌಡ ಕಸರತ್ತು

  • ದುರ್ಗಾದೇವಿ ಜಾತ್ರೆಯಲ್ಲಿ ‘ಹೌದು ಹುಲಿಯಾ’ ಡೈಲಾಗ್

    ದುರ್ಗಾದೇವಿ ಜಾತ್ರೆಯಲ್ಲಿ ‘ಹೌದು ಹುಲಿಯಾ’ ಡೈಲಾಗ್

    ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಕೋಡಿ ದುರ್ಗಾದೇವಿ ಜಾತ್ರೆಗೆ ಮಂಗಳವಾರ ಸಂಜೆ ಅದ್ಧೂರಿ ಚಾಲನೆ ದೊರಕಿತು. ಈ ಬಾರಿ ಜಾತ್ರೆಯಲ್ಲಿ ‘ಹೌದು ಹುಲಿಯಾ’ ಡೈಲಾಗ್ ಹೆಚ್ಚು ಸದ್ದು ಮಾಡುತ್ತಿದೆ.

    ಗ್ರಾಮದ ಗ್ರಾಮದೇವತಾ ದೇವಸ್ಥಾನದಿಂದ ಸರ್ವಾಲಂಕಾರ ಭೂಷಿತಳಾದ ದೇವಿಯನ್ನು ಶೃಂಗಾರಗೊಂಡ ಬಂಡಿಯಲ್ಲಿ ಪ್ರತಿಷ್ಠಾಪಿಸಲಾಯ್ತು. ಸಕಲ ವಾದ್ಯ ಮೇಳಗಳೊಂದಿಗೆಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತರು ಜಯಘೋಷಗಳೊಂದಿಗೆ ಮೆರವಣಿಗೆ ಸಾಗಿ ಕೋಡಿ ದುರ್ಗಾದೇವಿ ದೇವಸ್ಥಾನ ತಲುಪಿ ದೇವಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿಸಲಾಯಿತು.

    ಗ್ರಾಮದ ಯುವ ಸಮೂಹ ಚಿತ್ರ ಗೀತೆಗಳಿಗೆ ಕುಣಿದು ಕುಪ್ಪಳಿಸುವ ದೃಶ್ಯ ನೋಡಗುರ ಗಮನ ಸೆಳೆಯಿತು. ಉಪ ಚುನಾವಣೆಯಲ್ಲಿ ಸದ್ದು ಮಾಡಿದ್ದ ಹೌದ ಹುಲಿಯಾ ಡೈಲಾಗ್ ಜಾತ್ರೆಯಲ್ಲಿ ಹೆಚ್ಚು ಕೇಳಿ ಬಂತು. ಮೆರವಣಿಗೆಯಲ್ಲಿ ‘ಹೌದು ಹುಲಿಯಾ’ ಎಂದು ಹೇಳುತ್ತಾ ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.