Tag: ದುಬೈ ಪೊಲೀಸರು

  • ದುಬೈನಲ್ಲಿ ಪ್ರವಾಸಿಗ ಕಳೆದುಕೊಂಡಿದ್ದ ವಾಚ್‌ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಭಾರತೀಯ ಹುಡುಗನಿಗೆ ಪ್ರಶಂಸೆ

    ದುಬೈನಲ್ಲಿ ಪ್ರವಾಸಿಗ ಕಳೆದುಕೊಂಡಿದ್ದ ವಾಚ್‌ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಭಾರತೀಯ ಹುಡುಗನಿಗೆ ಪ್ರಶಂಸೆ

    ದುಬೈ: ಇಲ್ಲಿ ಪ್ರವಾಸಿಗರೊಬ್ಬರ ಕಳೆದುಹೋದ ವಾಚ್‌ ಅನ್ನು ಅಧಿಕಾರಿಗಳಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಭಾರತೀಯ ಹುಡುಗನನ್ನು ಪ್ರಶಂಸಿಸಿ ಪ್ರಮಾಣ ಪತ್ರ ನೀಡಲಾಗಿದೆ.

    ಮುಹಮ್ಮದ್‌ ಅಯಾನ್‌ ಯೂನಿಸ್‌ ತನ್ನ ತಂದೆಯೊಂದಿಗೆ ಪ್ರವಾಸದಲ್ಲಿದ್ದ. ಈ ವೇಳೆ ಆತನಿಗೆ ವಾಚ್‌ವೊಂದು ಸಿಕ್ಕಿದೆ. ತೆಗೆದುಕೊಂಡು ದುಬೈ (Dubai) ಪೊಲೀಸರಿಗೆ ಹುಡುಗ ನೀಡಿದ್ದಾನೆ. ಅಲ್ಲದೇ ಸಂಬಂಧಪಟ್ಟ ಮಾಲೀಕರಿಗೆ ಹಿಂದಿರುಗಿಸುವಂತೆ ತಿಳಿಸಿದ್ದ. ಅದರಂತೆ ಪೊಲೀಸರು ಯಶಸ್ವಿಯಾಗಿ ವಾಚ್‌ನ್ನು ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಹುಡುಗನ ಪ್ರಾಮಾಣಿಕತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸ್ಲೋವಾಕಿಯಾ ಪ್ರಧಾನ ಮಂತ್ರಿ ರಾಬರ್ಟ್‌ಗೆ ಗುಂಡೇಟು

    ದುಬೈ ಟೂರಿಸ್ಟ್ ಪೋಲೀಸ್ ಇಲಾಖೆಯು ಹುಡುಗನ ಪ್ರಾಮಾಣಿಕತೆಯನ್ನು ಗೌರವಿಸಿ ಪ್ರಮಾಣಪತ್ರವನ್ನು ನೀಡಿತು. ದುಬೈ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಹಮ್ಮದ್ ಅಯಾನ್ ಯೂನಿಸ್ ಭಾವಚಿತ್ರದೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

    ಪ್ರವಾಸಿ ಪೊಲೀಸ್ ಇಲಾಖೆಯ ನಿರ್ದೇಶಕ ಬ್ರಿಗೇಡಿಯರ್ ಖಾಲ್ಫಾನ್ ಒಬೇದ್ ಅಲ್ ಜಲ್ಲಾಫ್, ಉಪ ಲೆಫ್ಟಿನೆಂಟ್ ಕರ್ನಲ್ ಮುಹಮ್ಮದ್ ಅಬ್ದುಲ್ ರಹಮಾನ್ ಮತ್ತು ಕ್ಯಾಪ್ಟನ್ ಶಹಾಬ್ ಅಲ್ ಸಾದಿ ಅವರು ಬಾಲಕನಿಗೆ ಪ್ರಮಾಣಪತ್ರವನ್ನು ನೀಡಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಅಳಿವಿನಂಚಿಗೆ ಸಾಗುತ್ತಿದ್ಯಾ ಭೂಮಿ? – ಕೆಂಡದಂತಾದ ಧರಣಿಗೆ ‘ರೆಡ್‌ ಅಲರ್ಟ್‌’; ಹವಾಮಾನ ತಜ್ಞರ ಆತಂಕ!

  • ಕೊನೆಗೂ ದುಬೈನಲ್ಲಿ ಐಎಂಎ ಮಾಲೀಕ ಮನ್ಸೂರ್ ಖಾನ್ ಪತ್ತೆ

    ಕೊನೆಗೂ ದುಬೈನಲ್ಲಿ ಐಎಂಎ ಮಾಲೀಕ ಮನ್ಸೂರ್ ಖಾನ್ ಪತ್ತೆ

    ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ಕೊನೆಗೂ ದುಬೈನಲ್ಲಿ ಪತ್ತೆಯಾಗಿದ್ದಾನೆ. ಮನ್ಸೂರ್ ಖಾನ್ ಹಾಗೂ ಆತನ ಕುಟುಂಬವನ್ನು ರಾ ಸಂಸ್ಥೆಯ ಅಧಿಕಾರಿಗಳು ದುಬೈನಿಂದ 122 ಕಿ.ಮೀ. ದೂರವಿರುವ ಬೀಚ್ ಸಿಟಿಯ ರಾಸ್-ಅಲ್- ಕೈಯಮ್ ಬಳಿ ಪತ್ತೆ ಮಾಡಿದ್ದಾರೆ.

    ದುಬೈಯಿಂದ ಬೇರೆ ಕಡೆ ಹೋಗದಂತೆ ಅಧಿಕಾರಿಗಳು ಕಣ್ಣಿಟ್ಟಿದ್ದರು. ಅಲ್ಲದೆ ಮನ್ಸೂರ್ ಬಗ್ಗೆ ದುಬೈ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. 15 ದಿನದಲ್ಲಿ ಮನ್ಸೂರ್ ನನ್ನು ಕರ್ನಾಟಕಕ್ಕೆ ಕರೆ ತರಲು ಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಪತ್ತೆಯಾಗಿದ್ದು ಹೇಗೆ?
    ಮನ್ಸೂರ್ ಸಿಗಲು ಮೌಲ್ವಿಯೊಬ್ಬರು ಸುಳಿವು ಕೊಟ್ಟಿದ್ದರು. ಆ ಮೌಲ್ವಿಯ ಎಡವಟ್ಟಿನಿಂದ ಮನ್ಸೂರ್ ಬಲೆಗೆ ಬಿದ್ದಿದ್ದಾನೆ. ಇಂಟರ್ ನೆಟ್ ಕಾಲ್‍ನಲ್ಲಿ ಮನ್ಸೂರ್ ಬೆಂಗಳೂರಿನ ಮೌಲ್ವಿ ಶೋಯಬ್ ನನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದನು. ಮನ್ಸೂರ್ ಗಂಟೆಗೊಮ್ಮೆ ಫೇಸ್‍ಬುಕ್‍ನಲ್ಲಿ ಆನ್‍ಲೈನ್‍ಗೆ ಬಂದು ಹೋಗುತ್ತಿದ್ದನು. ಹಾಗಾಗಿ ಪೊಲೀಸರು ಆತನ ಇಂಟರ್ ನೆಟ್ ಕಾಲ್ ಮೇಲೆ ಕಣ್ಣಿಟ್ಟಿದ್ದರು. ಮನ್ಸೂರ್ ಮೆಸೆಂಜರ್ ಮೂಲಕ ಮೌಲ್ವಿ ಶೋಯಬ್‍ಗೆ ಕರೆ ಮಾಡುತ್ತಿದ್ದನು.

    ಯಾರು ಮೌಲ್ವಿ ಶೋಯಬ್?
    ಶೋಯಬ್ ಹೆಣ್ಣೂರು ರಸ್ತೆಯಲ್ಲಿ ಮದರಸ ನಡೆಸುತ್ತಿದ್ದು, ಮನ್ಸೂರ್ ಈ ಮೌಲ್ವಿ ಜೊತೆ ನಿಕಟ ಸಂಪರ್ಕ ಹೊಂದಿದ್ದನು. ಬೆಂಗಳೂರಿನಲ್ಲಿದ್ದಾಗ ಮದರಸ ಕಟ್ಟಲು ಮನ್ಸೂರ್, ಮೌಲ್ವಿಗೆ 20 ಕೋಟಿ ಹಣ ನೀಡಿದ್ದನು. ಮನ್ಸೂರ್ ಸಹಾಯದೊಂದಿಗೆ ಮೌಲ್ವಿ ಮದರಸ ನಿರ್ಮಾಣ ಮಾಡಿಕೊಂಡಿದ್ದನು. ಆ ಮದರಸದಲ್ಲಿಯೇ ಮನ್ಸೂರ್ ಖಾನ್ ಜನರಿಗೆ ಮರಳು ಮಾಡುತ್ತಿದ್ದನು.