Tag: ದುಬಾರೆ ಸಾಕಾನೆ ಶಿಬಿರ

  • ವರ್ಷದ ಪ್ರಯತ್ನದ ಫಲ, `ಕಾಜೂರು ಕರ್ಣ’ ಸೆರೆ – ರೈತರ ಗುಂಡಿನ ದಾಳಿಯಿಂದ ಆನೆ ನರಳಾಟ

    ವರ್ಷದ ಪ್ರಯತ್ನದ ಫಲ, `ಕಾಜೂರು ಕರ್ಣ’ ಸೆರೆ – ರೈತರ ಗುಂಡಿನ ದಾಳಿಯಿಂದ ಆನೆ ನರಳಾಟ

    ಮಡಿಕೇರಿ: ಮೈತುಂಬೆಲ್ಲ ಗುಂಡೇಟಿನ ಚಹರೆಗಳು. ಎರಡು ಕಾಲಿನಲ್ಲಿ ಸ್ವಾಧೀನ ಇಲ್ಲದೇ ರೋದಿಸುತ್ತಿರುವ ಕಾಡಾನೆ. ಸಾಕಾನೆ ಶಿಬಿರದ ಆನೆ ಕ್ರಾಲ್ ಒಳಗೆ ಚಿಕಿತ್ಸೆ ಪಡೆಯುತ್ತಿರುವ ಕಾಜೂರು ಕರ್ಣ. ಈ ದೃಶ್ಯ ಕಂಡು ಬಂದಿದ್ದು ಕೊಡಗಿನ ದುಬಾರೆ ಸಾಕಾನೆ ಶಿಬಿರ (Dubare Elephant camp) ದಲ್ಲಿ.

    ಹೌದು. ಒಂದು ವರ್ಷದ ಪ್ರಯತ್ನದ ಫಲವಾಗಿ `ಕಾಜೂರು ಕರ್ಣ’ ಸೆರೆಯಾಗಿದ್ದಾನೆ. ಆದ್ರೆ ಜಮೀನಿಗೆ ಲಗ್ಗೆ ಇಡುವ ವೇಳೆ ರೈತರು (Farmers) ಆನೆ ಮೇಲೆ ಗುಂಡಿನ ದಾಳಿಯಿಂದ ಆನೆ ನರಳಾಡುತ್ತಿದೆ. ಆನೆಯ ನರಳಾಟ ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ʻಕೈʼ ಕಾರ್ಯಕರ್ತೆ ಸೂಟ್‌ಕೇಸ್‌ನಲ್ಲಿ ಶವವಾಗಿ ಪತ್ತೆ

    ಕೆಲ ವರ್ಷಗಳಿಂದ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಭಾಗದಲ್ಲಿ ಜನರಿಗೆ ಇನ್ನಿಲ್ಲದಂತೆ ಕಾಡುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ (Forest Department) ಒಂದು ತಿಂಗಳ ಹಿಂದೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಕಾಜೂರು ಕರ್ಣ ಎಂದೇ ಕಾಜೂರು ಭಾಗದಲ್ಲಿ ಹೆಸರಾಗಿದ್ದ ಕಾಡಾನೆ (Wild Elephant) ಸೆರೆಗೆ ಒಂದು ವರ್ಷದ ಹಿಂದೆಯೆ ಅನುಮತಿ ದೊರೆತಿತ್ತು. ಆದರೆ, ಅಷ್ಟೂ ದಿನಗಳಿಂದ ಅರಣ್ಯ ಇಲಾಖೆಯ ಕಣ್ತಪ್ಪಿಸಿ ಚಾಣಾಕ್ಷತನದಿಂದ ಈ ಆನೆ ತಪ್ಪಿಸಿಕೊಳ್ಳುತ್ತಿತ್ತು. ಸಿಸಿಟಿವಿಗಳನ್ನು ಅಳವಡಿಸಿ ಕಾಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಕರೆತಂದಿದ್ದಾರೆ. ಆದ್ರೆ, ಈ ವೇಳೆ ಕಾಜೂರು ಕರ್ಣನ ಮೈತುಂಬ ಗುಂಡಿನ ದಾಳಿಗಳೇ ನಡೆದಿರೋದು ಕಂಡು ಬಂದಿದೆ.

    ಎರಡು ಕಾಲಿಗೂ ಗುಂಡೆಟ್ಟು ತಗುಲಿ ಕಾಲಿನ ಸ್ವಾದಿನವನ್ನೆ ಕರ್ಣ ಕಳೆದುಕೊಂಡು ಮುಕರೋಧನೆಯನ್ನು ಅನುಭವಿಸುತ್ತಿದ್ದಾನೆ. ಒಂದು ತಿಂಗಳಿನಿಂದ ನಿದ್ರೆಯನ್ನು ಮಾಡದೇ ನೋವು ನುಂಗುತ್ತಿದ್ದಾನೆ. ಆನೆ ಪರಿಸ್ಥಿತಿ ಕಂಡು ಅರಣ್ಯ ಇಲಾಖೆ ಅಧಿಕಾರಿಗಳೇ ಕಣ್ಣಿರು ಸುರಿಸುತ್ತಿದ್ದಾರೆ. ಗುಂಡಿನ ದಾಳಿ ನಡೆಸುವ ಬದಲು ಪಟಾಕಿ ಸಿಡಿಸಿ, ಸದ್ದು ಮಾಡಿ ಕಾಡಾನೆಗಳನ್ನು ಹಿಮ್ಮೆಟ್ಟಿಸಿ ಅಂತ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಿಚನ್‌ನಲ್ಲಿ ಕಪ್ಪು ಪ್ಲಾಸ್ಟಿಕ್ ಕಂಟೇನರ್ ಬಳಸೋ ಮುನ್ನ ಎಚ್ಚರ! – ಇದು ಎಷ್ಟು ಸುರಕ್ಷಿತ?

    ಕೊಡಗು ಜಿಲ್ಲೆಯಲ್ಲಿ ಆನೆ ಮಾನವನ ಸಂಘರ್ಷ ಹಲವಾರು ವರ್ಷಗಳಿಂದ ಇದೆ. ಇಲ್ಲಿನ ಜನ ಕಾಡಾನೆಗಳ ಜೊತೆಯೂ ಬದುಕು ಸಾಗಿಸುವ ದಾರಿಯನ್ನು ಕಂಡುಕೊಂಡಿದ್ದಾರೆ. ಶಿಬಿರದಲ್ಲಿ ಇರುವ ಕಾಜೂರು ಕರ್ಣನ ಪರಿಸ್ಥಿತಿಯನ್ನು ಕಂಡು ರೈತರು ಕೂಡ ಮರಗುತ್ತಿದ್ದಾರೆ. ಇದನ್ನ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾಡಾನೆಗಳು ನಾಡಿನತ್ತ ಕಾಲಿಡದಂತೆ ಕ್ರಮವಹಿಸಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಚದುರಂಗದಾಟಕ್ಕೆ ಮೂಡಿಗೆರೆ ಬಿಜೆಪಿ ಬಲಿ, ಬಹುಮತವಿದ್ರೂ ಕಾಂಗ್ರೆಸ್‌ಗೆ ಅಧಿಕಾರ!

  • 2 ಜೀವಗಳನ್ನ ಬಲಿ ಪಡೆದಿದ್ದ, ಇಡೀ ಗ್ರಾಮದ ಜನರನ್ನೇ ಕಾಡಿದ್ದ ಸಲಗ ಕೊನೆಗೂ ಸೆರೆ

    2 ಜೀವಗಳನ್ನ ಬಲಿ ಪಡೆದಿದ್ದ, ಇಡೀ ಗ್ರಾಮದ ಜನರನ್ನೇ ಕಾಡಿದ್ದ ಸಲಗ ಕೊನೆಗೂ ಸೆರೆ

    ಮಡಿಕೇರಿ: ಎರಡು ಜೀವಗಳನ್ನ ಬಲಿ ಪಡೆದು, ಇಡೀ ಗ್ರಾಮದ ಜನರಿಗೆ ಕಾಟ ಕೊಡುತ್ತಿದ್ದ ಒಂಟಿ ಸಲಗವನ್ನ ಕೊನೆಗೂ ಅರಣ್ಯ ಇಲಾಖೆ (Kodagu Forest Department) ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಹೌದು.. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಚೆನ್ನಂಗೊಲ್ಲಿ, ಭದ್ರಗೊಳ, ದೇವರಪುರ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಡ್ಡಾಡುತ್ತಿದ್ದ ಪುಂಡ ಕಾಡಾನೆ (Wild Elephant) ಸುತ್ತಮುತ್ತಲಿನ ಗ್ರಾಮದ ಜನರನ್ನ ಸಿಕ್ಕಾಪಟ್ಟೆ ಕಾಡಿತ್ತು. ಅಂದಾಜು 40 ವರ್ಷ ಪ್ರಾಯದ ಒಂಟಿ ಸಲಗ ಕೆಲವು ತಿಂಗಳ ಹಿಂದೆ ಇದೇ ಭದ್ರಗೊಳ ಗ್ರಾಮದಲ್ಲಿ ಗೌರಿ ಎಂಬ ಮಹಿಳೆಯನ್ನ ಬಲಿ ಪಡೆದಿತ್ತು. ಅದಾದ ಬಳಿಕ ಎರಡು ದಿನಗಳ ಹಿಂದೆ ಚೆನ್ನಂಗೊಲ್ಲಿ ಗ್ರಾಮದಲ್ಲಿ ಪಾರ್ವತಿ (52) ಎಂಬ ಮಹಿಳೆಯನ್ನ ತುಳಿದು ಸಾಯಿಸಿತ್ತು. ಇದನ್ನೂ ಓದಿ: ಎಲಾನ್‌ ಮಸ್ಕ್‌ ಅವರ 13ನೇ ಮಗುವಿಗೆ ಜನ್ಮ ನೀಡಿದ್ದೇನೆ: ಆಶ್ಲೇ ಹೇಳಿಕೆಗೆ ಮೌನ ಮುರಿದ ಮಸ್ಕ್‌

    ಅಷ್ಟೇ ಅಲ್ಲದೇ ಸುತ್ತ ಮುತ್ತಲಿನ ಬಹಳಷ್ಟು ಮಂದಿಯ ಮೇಲೆ ದಾಳಿ ಮಾಡಿ ಭೀತಿ ಹುಟ್ಟಿಸಿತ್ತು. ಹೀಗಾಗಿ ಈ ಆನೆಯನ್ನ ಸೆರೆ ಹಿಡಿಯಲೇಬೇಕೆಂದು ಗ್ರಾಮಸ್ಥರು ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಶಾಸಕ ಎ.ಎಸ್ ಪೊನ್ನಣ್ಣ ಅವರ ಮೂಲಕ ಅರಣ್ಯ ಸಚಿವರಿಗೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಾಡಾನೆ ಸೆರೆಗೆ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರಗೊಳ ಗ್ರಾಮದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯಿತು.

    ಸದ್ಯ ಈ ಆನೆಗೆ ʻವೇದʼ ಎಂದು ಹೆಸರಿಡಲಾಗಿದೆ. ಇದು ಮೊನ್ನೆ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ ಬಳಿಕ ಇದೇ ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟ, ದೇವರ ಕಾಡಿನಲ್ಲಿ ಅಡ್ಡಾಡುತ್ತಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ಈ ಪುಂಡಾನೆ ಮೇಲೆ ಕಣ್ಣಿಟ್ಟಿದ್ದರು, ಸೆರೆ ಹಿಡಿಯಲು ಅನುಮತಿ ಸಿಕ್ಕ ಕೂಡಲೆ ಕಾರ್ಯಾಚರಣೆ ನಡೆಸಿದ್ರು. ಇದನ್ನೂ ಓದಿ: ಅಯೋಧ್ಯೆಗೆ ತೆರಳಿದ್ದ ಕಾರಿನ ಗ್ಲಾಸ್ ಒಡೆದು ಕಳ್ಳತನ – 10 ಮೊಬೈಲ್, 20,000 ರೂ. ದೋಚಿದ ಖದೀಮರು

    ದುಬಾರೆ, ಮತ್ತಿಗೋಡು ಮತ್ತು ಹಾರಂಗಿ ಸಾಕಾನೆ ಶಿಬಿರದ ಏಳು ಸಾಕಾನೆಗಳು ಮತ್ತು 90ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ರು. ದೇವರ ಕಾಡಿನಲ್ಲಿ ಬಿಂದಾಸ್ ಆಗಿ ಅಡ್ಡಾಡುತ್ತಿದ್ದ ಕಾಡಾನೆಗೆ ಅರವಳಿಕೆ ತಜ್ಞ ಡಾ.ರಮೇಶ್ ಅರವಳಿಕೆ ಇಂಜೆಕ್ಷನ್ ಶೂಟ್​ ಮಾಡಿದ್ರು. ಇಷ್ಟು ದಿನ ತನ್ನದೇ ಲೋಕದಲ್ಲಿ ವಿಹರಿಸುತ್ತಾ ಪುಂಡಾಟವಾಡುತ್ತಿದ್ದ ವೇದ ಕೊನೆಗೂ ಸೆರೆಯಾಯಿತು. ಸೆರೆಯಾದ ಬಳಿಕ ಹೆಚ್ಚೇನೂ ನಖರಾ ಮಾಡದೇ ಕ್ರೇನ್ ಸಹಾಯದಿಂದ ಲಾರಿ ಏರಿತು.

    ಸದ್ಯ ವೇದನನ್ನ ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಗಿದ್ದು ಅಲ್ಲಿ ಕ್ರಾಲ್​ನಲ್ಲಿ ಹಾಕಿ ಸನ್ನಡತೆಯ ಪಾಠ ಹೇಳಲಾಗುತ್ತದೆ. ಇದನ್ನೂ ಓದಿ: ಸ್ಥಳೀಯ ಚುನಾವಣೆಯಿಂದ ಲೋಕಸಭಾ ಚುನಾವಣೆವರೆಗೂ ಸಿದ್ದರಾಮಯ್ಯ ಬೇಕು: ಡಿಕೆಶಿ

  • ಪವನ್‌ ಕಲ್ಯಾಣ್‌ ಮನವಿ – ಆಂಧ್ರದ ಅರಣ್ಯ ಸಿಬ್ಬಂದಿಗೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ತರಬೇತಿ

    ಪವನ್‌ ಕಲ್ಯಾಣ್‌ ಮನವಿ – ಆಂಧ್ರದ ಅರಣ್ಯ ಸಿಬ್ಬಂದಿಗೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ತರಬೇತಿ

    ಮಡಿಕೇರಿ: ಆಂಧ್ರ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿಗೆ 1 ತಿಂಗಳು ತರಬೇತಿ ನೀಡುವ ಕಾರ್ಯಾಗಾರಕ್ಕೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ (Dubare Elephant Camp) ಚಾಲನೆ ಸಿಕ್ಕಿದೆ. ಆಂಧ್ರದ ಅರಣ್ಯ ಸಚಿವ ಪವನ್‌ ಕಲ್ಯಾಣ್‌ (Pawan Kalyan) ಅವರ ಮನವಿ ಮೇರೆಗೆ 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.

    ಕಾಡಾನೆ (Forest Elephant) ಸೇರಿದಂತೆ ವನ್ಯಜೀವಿಗಳ ಸಮಸ್ಯೆ ಕರ್ನಾಟಕ ಮಲೆನಾಡು ಭಾಗದಲ್ಲಿ ಮಾತ್ರವಲ್ಲ, ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲೂ ಹೆಚ್ಚಾಗಿದೆ. ಕಾಡಾನೆಗಳ ಹಾವಳಿಯಂತು ಮಿತಿಮೀರಿಹೋಗಿದೆ. ನಾಡಿಗೆ ನುಗ್ಗುವ ಆನೆಗಳನ್ನ ಮತ್ತೆ ಕಾಡಿಗಟ್ಟಲು ನುರಿತ ಮಾವುತರು ಹಾಗೂ ಕಾವಾಡಿಗಳು ಇಲ್ಲದೇ ಇರೋದು ಸಮಸ್ಯೆಗೆ ಕಾರಣವಾಗಿದೆ. ಆದ್ದರಿಂದ ವನ್ಯಜೀವಿ ನಿರ್ವಹಣೆ ಕುರಿತು ರಾಜ್ಯದ ಅರಣ್ಯ ಸಿಬ್ಬಂದಿಗೆ ತರಬೇತಿ ನೀಡಬೇಕೆಂದು ಕರ್ನಾಟಕದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ (Eshwar Khandre) ಅವರಿಗೆ ಪವನ್‌ ಕಲ್ಯಾಣ್ ಮನವಿ ಮಾಡಿದ್ದರು. ಅದರಂತೆ‌ ಎರಡು ರಾಜ್ಯಗಳ ಅರಣ್ಯ ಇಲಾಖೆಗಳ ಪರಸ್ಪರ ಸಹಕಾರದೊಂದಿಗೆ ತರಬೇತಿ ನೀಡಲಾಗುತ್ತಿದೆ. ಇದನ್ನೂ ಓದಿ: ಕರುನಾಡಿಗೆ ಮತ್ತೊಂದು ಗರಿ: ದೇಶದ ಅತ್ಯಂತ ಕಿರಿಯ ಪೈಲಟ್ ಆಗಿ ವಿಜಯಪುರದ ಸಮೈರಾ

    ಆಂಧ್ರ ಪ್ರದೇಶದ 17 ಮಾವುತ ಮತ್ತು ಕಾವಾಡಿಗರು, ನಾಲ್ವರು ಇಲಾಖೆ ಸಿಬ್ಬಂದಿ ಸೇರಿ 21 ಮಂದಿಗೆ ನಮ್ಮ ರಾಜ್ಯದ ಮಾವುತರು ಮತ್ತು ಕವಾಡಿಗಳು ತರಬೇತಿ ನೀಡುತ್ತಿದ್ದಾರೆ. ಸಾಕಾನೆಗಳಿಗೆ ಸ್ನಾನ ಮಾಡಿಸುವುದು, ಆಹಾರ ಕೊಡುವುದು, ಇಂತಹದ್ದೇ ಪದಗಳನ್ನು ಬಳಸಿ ಆನೆಗಳನ್ನು ಮಾತನಾಡಿಸುವುದು, ವನ್ಯಜೀವಿ‌ ಸಂಘರ್ಷ ತಡೆಯುವುದು ಸೇರಿದಂತೆ ಇನ್ನಿತರ ವನ್ಯಜೀವಿ ನಿರ್ವಹಣೆ ಕುರಿತು ಹೇಳಿಕೊಡುತ್ತಿದ್ದಾರೆ. ಇದನ್ನೂ ಓದಿ: ಕೋಲಾರಕ್ಕೆ ಈ ಬಾರಿ ಮಂತ್ರಿ ಸ್ಥಾನ ನೀಡಲೇಬೇಕು, ನಾನು ಅರ್ಹನಿದ್ದೇನೆ: ಕೆವೈ ನಂಜೇಗೌಡ

    ಆನೆ ಪಳಗಿಸುವುದು ಹೇಗೆ?
    ಒಂದು ಆನೆಯನ್ನು ಪಳಗಿಸಿ ಸರಿದಾರಿಗೆ ತರೋದು ಮಕ್ಕಳಿಗೆ ಅ, ಆ, ಇ, ಈ ಕಲಿಸಿದಷ್ಟು ಸುಲಭದ ಕೆಲಸವಲ್ಲ. ಕೊಂಚ ಯಡವಟ್ಟಾದ್ರೂ ಪ್ರಾಣವೇ ಹೋಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಮಾವುತರು ಬಹಳ ಜಾಣ್ಮೆಯಿಂದಲೇ ಪಾಠ ಹೇಳಿಕೊಡುತ್ತಾರೆ. ಒಂದೊಂದೇ ಪದವನ್ನು ಕಲಿಸುತ್ತಾ… ಆನೆ ತಮ್ಮ ಮಾತಿಗೆ ಸ್ಪಂದಿಸಿದಾಗ ಶಬ್ಬಾಸ್ ಹೇಳಿ ಮೈದಡವಿ ಖುಷಿಡಿಸುತ್ತಾರೆ.

    ಹೀಗೆ ನಿಧಾನವಾಗಿ ಆನೆಯನ್ನ ತಮ್ಮವಶಕ್ಕೆ ತೆಗೆದುಕೊಳ್ಳುಬೇಕು ಎಂದು ಇಲ್ಲಿನ ಮಾವುತರು ಆಂಧ್ರಪ್ರದೇಶದ ಅರಣ್ಯ ಸಿಬ್ಬಂದಿಗೆ ಪಾಠ ಹೇಳಿಕೋಡುತ್ತಿದ್ದಾರೆ. ಇದನ್ನೂ ಓದಿ: ಒಂದು ಕ್ಷಣವೂ ಯೋಚಿಸದೇ ದಾಖಲೆ, ವೀಡಿಯೋ ರಿಲೀಸ್‌ ಮಾಡ್ಲಿ – ಯತ್ನಾಳ್‌ಗೆ ವಿಜಯೇಂದ್ರ ಸವಾಲ್‌

  • ದುಬಾರೆ ಸಾಕಾನೆ ಶಿಬಿರದಲ್ಲಿ ಮತ್ತೆ ಧನಂಜಯ – ಕಂಜನ್‌ ಫೈಟ್‌

    ದುಬಾರೆ ಸಾಕಾನೆ ಶಿಬಿರದಲ್ಲಿ ಮತ್ತೆ ಧನಂಜಯ – ಕಂಜನ್‌ ಫೈಟ್‌

    ಮಡಿಕೇರಿ: ದಸರಾ ಮಹೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದ ಕಂಜನ್‌ (Kanjan Elephant) ಮತ್ತು ಧನಂಜಯ ಆನೆಗಳು ಮತ್ತೆ ದುಬಾರೆ ಸಾಕಾನೆ ಶಿಬಿರದಲ್ಲಿ (Dubare Elephant Camp) ಕಾದಾಟ ನಡೆಸಿವೆ.

    ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮೈಸೂರು ದಸರಾ ಸಂದರ್ಭದಲ್ಲಿ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ದಸರಾ ಗಜಪಡೆಯ ಭಾಗವಾಗಿದ್ದ ಧನಂಜಯ ಆನೆ (Dhananjaya Elephant), ಕಂಜನ್‌ ಆನೆಯನ್ನು ಅಟ್ಟಾಡಿಸಿತ್ತು. ಈ ವೇಳೆ ಜನರು ದಿಕ್ಕಾಪಾಲಾಗಿ ಓಡಿದ್ದರು. ಈ ಘಟನೆ ಮಾಸುವ ಮುನ್ನವೇ ಧನಂಜಯ ಹಾಗೂ ಕಂಜನ್ ಮತ್ತೆ ಕಾದಾಟ ನಡೆಸಿವೆ. ಇದನ್ನೂ ಓದಿ: ಸಂಸದ ಸುಧಾಕರ್ ಬಾಗಿನ ಅರ್ಪಣೆಗೆ ಆಗಮಿಸುವಷ್ಟರಲ್ಲಿ ಹೆಜ್ಜೇನು ದಾಳಿ – ನಗರಸಭಾ ಸದಸ್ಯರು ಸೇರಿ ಹಲವರು ಆಸ್ಪತ್ರೆಗೆ ದಾಖಲು

    ಹೌದು. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿಂದು ಧನಂಜಯ ಆನೆ ಮತ್ತು ಕಂಜನ್ ಅನೆಗಳು ಮತ್ತೆ ಶಿಬಿರದಲ್ಲಿ ಫೈಟ್ ಮಾಡಿಕೊಂಡಿವೆ. ಬೆಳಗ್ಗೆ ಧನಂಜಯ ಆನೆ ಮತ್ತು ಕಂಜನ್ ಆನೆ ಶಿಬಿರದ ಒಳಗೆ ಹೋಗುವ ಸಂದರ್ಭ ಎರಡು ಅನೆಗಳು ಮುಖಾಮುಖಿಯಾಗಿವೆ. ದಿಢೀಋನೆ ಧನಂಜಯ ಆನೆ ಕಂಜನ್, ಆನೆ ಮೇಲೆ ಏಕಾಏಕಿ ದಾಳಿ ಮಾಡಲು ಮುಂದಾಗಿದೆ. ಶಿಬಿರದ ಕಾಂಪೌಂಡ್ ಬಳಿ ತಳಿಕೊಂಡು ಹೋಗಿ ಸೊಂಡಿಲಿನಲ್ಲಿ ಕಂಜನ್ ಆನೆಗೆ ಹೋಡೆದು ನಂತರ ತನ್ನ ದಂತದಿಂದ ಬಾಲದ ಬಳಿ ತಿವಿದು ನಂತರ ಕಾಲಿಗೂ ತಿವಿದಿದೆ. ಹೀಗಾಗಿ ಕಂಜನ್ ಆನೆಗೆ ಕಾಲಿಗೆ ಗಂಭೀರ ಗಾಯವಾಗಿದೆ.

    ಬೆಳಗ್ಗೆಯಿಂದಲ್ಲೂ ಮದದಲ್ಲಿ ಇದ್ದ ಧನಂಜಯನನ್ನು ನಿಯಂತ್ರಣ ಮಾಡಲು ಮಾವುತರು ಕಾವಾಡಿಗಳು ಪ್ರಯತ್ನ ಮಾಡಿದರು. ಅಲ್ಲದೇ ಶಿಬಿರದಲ್ಲಿ ನೂರಾರು ಪ್ರವಾಸಿಗರು ಇರುವ ಸಂದರ್ಭದಲ್ಲೇ ಸಾಕಾನೆಗಳ ಕಾದಾಟ ಆಗಿರುವುದರಿಂದ ಪ್ರವಾಸಿಗರು ಕೆಲ ನಿಮಿಷಗಳ ಕಾಲ ಆತಂಕಕ್ಕೆ ಒಳಗಾಗಿದ್ರು. ನಂತರ ಧನಂಜಯ ಆನೆಯನ್ನು ಮಾವುತರು ಕಾವೇರಿ ನದಿಯ ಬಳಿ ಕರೆದುಕೊಂಡು ಸರಪಳಿಯಿಂದ ಕಟ್ಟಿದ ನಂತರ ವಾತಾವರಣ ತಿಳಿಯಾಗಿದೆ ಎಂದು ಅರಣ್ಯ ಇಲಾಖೆಯ ಆದಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಫಸ್ಟ್‌ ಟೈಂ ಸೆಟ್‌ಗೆ ಬಂದಾಗ ದಪ್ಪಗಿದ್ದೇನೆ, ಕುಳ್ಳಗಿದ್ದೇನೆಂದು ಅಪಹಾಸ್ಯ ಮಾಡಿದ್ದರು: ನಿತ್ಯಾ ಮೆನನ್‌ 

  • ದುಬಾರೆಯಲ್ಲಿದ್ದ ಆನೆಯ ಕಣ್ಣಿಗೆ ಕಡ್ಡಿ ಬಡಿದು ಕುರುಡ – ಸೊಂಡಿಲೇ ಈಗ ರಾಮನಿಗೆ ಆಧಾರ

    ದುಬಾರೆಯಲ್ಲಿದ್ದ ಆನೆಯ ಕಣ್ಣಿಗೆ ಕಡ್ಡಿ ಬಡಿದು ಕುರುಡ – ಸೊಂಡಿಲೇ ಈಗ ರಾಮನಿಗೆ ಆಧಾರ

    – ಕಣ್ಣೀರು ತರಿಸುತ್ತೆ ದೈತ್ಯ ಜೀವಿಯ ಪರದಾಟ

    ಮಡಿಕೇರಿ: ಆನೆ ನಡೆದದ್ದೇ ದಾರಿ ಅನ್ನೋ ಗಾದೆ ಮಾತಿದೆ. ಅದರಲ್ಲೂ ಅಜಾನುಬಾಹುವಿನಂತ ದೇಹ, ನೋಡಿದರೆ ಎದೆನಡುಗಂತಹ ಅಷ್ಟು ಉದ್ದದ ಕೋರೆಯ ಇಂತಹ ಆನೆಗಳು ನಡೆದರೆ, ನಡೆದದ್ದೇ ದಾರಿಯಾಗದೇ ಇರದು. ಅಜಾನುಬಾಹು ಸಾಕಾನೆಗೆ ಎರಡು ಕಣ್ಣು ಕಾಣದೇ ಅಹಾರ ತಿನ್ನುಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ದೊಡ್ಡ ಗಾತ್ರದ ದೇಹ, ಊಹೆಗೂ ಮೀರಿದ ಕೋರೆ ಹೊಂದಿರುವ ಆನೆ ಹೆಸರು ರಾಮ. ರಾಮನಂತೆ ಸೌಮ್ಯ ಸ್ವಭಾವದವನು 65 ರ ಹರೆಯದ ಈ ಆನೆ. ಕೊಡಗು ಜಿಲ್ಲೆಯ ವಿಶ್ವ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ಈ ಆನೆ ಇದೆ. ತನ್ನ ಅಜಾನುಬಾಹು ದೇಹದಿಂದಲೇ ನಿತ್ಯ ದುಬಾರೆ ಸಾಕಾನೆ ಶಿಬಿರಕ್ಕೆ ಬರುವ ಸಾವಿರಾರು ಪ್ರವಾಸಿಗರ ಕಣ್ಮನ ಕೋರೈಸಿ ಮುದ ನೀಡುವ ಈ ಆನೆಗೆ ಎರಡು ಕಣ್ಣು ಕಾಣೋದೇ ಇಲ್ಲ.

    ಈ ಆನೆಯನ್ನು 2002 ರಲ್ಲಿ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಿ ರಾಮ ಎಂದು ಹೆಸರಿಡಲಾಗಿತ್ತು. ಅದನ್ನು ಸೆರೆ ಹಿಡಿದಾಗಲೇ ಅದರ ಒಂದು ಕಣ್ಣು ಕಾಣುತ್ತಿರಲಿಲ್ಲ. ಒಂದೇ ಕಣ್ಣಿನಿಂದಲೇ ಗಜಗಾಂಭೀರ್ಯವಾಗಿ ಓಡಾಡಿಕೊಂಡಿದ್ದ ರಾಮನಿಗೆ ಹತ್ತು ವರ್ಷ ಎನ್ನುವಷ್ಟರಲ್ಲಿ ಶಿಬಿರದಲ್ಲಿ ಇರುವಾಗಲೇ ಕಡ್ಡಿಯೊಡೆದು ಇದ್ದ ಮತ್ತೊಂದು ಕಣ್ಣು ಕಾಣದಂತಾಗಿ ಶಾಶ್ವತ ಕುರುಡು ಆವರಿಸಿತು. ಅಂದಿನಿಂದ ಈ ಅಜಾನುಬಾನು ಆನೆ ಅಕ್ಷರಶಃ ಮಗುವಿನಂತಾಗಿದೆ. ಈಗ ಸೊಂಡಿಲ ಸಹಾಯದಿಂದಲೇ ಓಡಾಡುವ ಈ ಆನೆ ಚಿಕ್ಕ ಮರಿಯಾನೆ ಬಂದರೂ ಹೆದರಿ ನಿಲ್ಲುತ್ತದೆ. ಹೀಗಾಗಿಯೇ ಅದನ್ನು ಎಲ್ಲಿಯೂ ಹೊರಗೆ ಕರೆದೊಯ್ಯವುದಿಲ್ಲ. ಶಿಬಿರದಲ್ಲಿ ಜೋಪಾನವಾಗಿ ನೋಡಿಕೊಳ್ಳಲಾಗುತ್ತಿದೆ.