Tag: ದುಬಾರೆ ಆನೆಶಿಬಿರ

  • ಮಾವುತನ ಮೇಲೆ ಸಾಕಾನೆ ದಾಳಿ- ದಂತದಿಂದ ತಿವಿದು ಗಾಯ

    ಮಾವುತನ ಮೇಲೆ ಸಾಕಾನೆ ದಾಳಿ- ದಂತದಿಂದ ತಿವಿದು ಗಾಯ

    ಮಡಿಕೇರಿ: ಸಾಕಾನೆಯೊಂದು ಮಾವುತನ ಮೇಲೆ ದಾಳಿ ಮಾಡಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಆನೆ ಶಿಬಿರದಲ್ಲಿ ನಡೆದಿದೆ.

    ದಾಳಿ ಹಿನ್ನೆಲೆಯಲ್ಲಿ ಮಾವುತ ಅಪ್ಪಯ್ಯ(40) ಗಂಭೀರವಾಗಿ ಗಾಯಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ ಕಾಡಿಗಟ್ಟಲು ಸಾಕಾನೆ ಗೋಪಿಯನ್ನು ಸರಪಳಿಯಿಂದ ಬಿಚ್ಚುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿದೆ. ಅಪ್ಪಯ್ಯ ಅವರಿಗೆ ದಂತದಿಂದ ತಿವಿದು ಗಾಯಗೊಳಿಸಿದೆ.

    ಪರಿಣಾಮ ಗಂಭೀರವಾಗಿ ಗಾಯಗೊಂಡ ಮಾವುತ ಅಪ್ಪಯ್ಯ ಅವರಿಗೆ ಸಿದ್ದಾಪುರ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.