Tag: ದುನಿಯಾ ಸೂರಿ

  • 15 ವರ್ಷದ ನಂತರ ದುನಿಯಾ ಸೂರಿ ಸಿನಿಮಾದಲ್ಲಿ ದುನಿಯಾ ವಿಜಯ್

    15 ವರ್ಷದ ನಂತರ ದುನಿಯಾ ಸೂರಿ ಸಿನಿಮಾದಲ್ಲಿ ದುನಿಯಾ ವಿಜಯ್

    ದುನಿಯಾ ಸಿನಿಮಾದ ಮೂಲಕ ಕನ್ನಡ ಚಿತ್ರ ಜಗತ್ತಿಗೆ ವಿಜಯ್ ಕುಮಾರ್ ಅಲಿಯಾಸ್ ವಿಜಯ್ (Duniya Vijay) ಅವರನ್ನು ಹೀರೋ ಆಗಿ ಪರಿಚಯಿಸಿದರು ನಿರ್ದೇಶಕ ಸೂರಿ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಪಡೆಯಿತು. ಈ ಸಿನಿಮಾದಿಂದಾಗಿಯೇ ದುನಿಯಾ ಸೂರಿ (Duniya Suri) ಮತ್ತು ದುನಿಯಾ ವಿಜಯ್ ಎಂಬ ಇಬ್ಬರು ಪ್ರತಿಭಾವಂತರ ಜನ್ಮ ತಾಳಿದರು.

    ದುನಿಯಾ ಗೆಲುವು ಮತ್ತೆ ಈ ಜೋಡಿಯನ್ನು ಜಂಗ್ಲಿ ಸಿನಿಮಾದಲ್ಲಿ ಕೆಲಸ ಮಾಡುವಂತೆ ಮಾಡಿತ್ತು. ಬಾಕ್ಸ್ ಆಫೀಸಿನಲ್ಲಿ ಜಂಗ್ಲಿ ಕೂಡ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿತು. ಜಂಗ್ಲಿ ರಿಲೀಸ್ ಆಗಿ 15 ವರ್ಷಗಳ ಗತಿಸಿವೆ. ಒಂದೂವರೆ ದಶಕದ ನಂತರ ಮತ್ತೆ ಈ ಜೋಡಿ ಸಿನಿಮಾ (New movie) ಮಾಡಲಿದೆ.

     

    ಹೌದು, ದುನಿಯಾ ವಿಜಯ್ ಗಾಗಿ ಸೂರಿ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಜಯಣ್ಣಈ ಸಿನಿಮಾದ ನಿರ್ಮಾಪಕರು ಎನ್ನುವ ಮಾಹಿತಿಯೂ ಇದೆ. ಈಗಾಗಲೇ ವಿಜಿಗಾಗಿ ಸೂರಿ ಸ್ಕ್ರಿಪ್ಟ್ ಕೂಡ ತಯಾರಿ ಮಾಡಿದ್ದರಂತೆ. ಅಧಿಕೃತವಾಗಿ ಮುಂದಿನ ದಿನಗಳಲ್ಲಿ ಈ ಸುದ್ದಿ ಹೊರಬರಬಹುದು.

  • ‘ಕದನ ವಿರಾಮ’ ಸಿನಿಮಾ ಯಾರಿಗೆ ಮಾಡ್ತಾರೆ ದುನಿಯಾ ಸೂರಿ

    ‘ಕದನ ವಿರಾಮ’ ಸಿನಿಮಾ ಯಾರಿಗೆ ಮಾಡ್ತಾರೆ ದುನಿಯಾ ಸೂರಿ

    ನಿರ್ದೇಶಕ ದುನಿಯಾ ಸೂರಿ (Duniya Suri) ಈ ಹಿಂದೆ ರಕ್ಷಿತ್ ಶೆಟ್ಟಿಗಾಗಿ (Rakshit Shetty) ‘ಕದನ ವಿರಾಮ’ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಆಯಿತು. ಆ ನಂತರ ಈ ಸಿನಿಮಾ ಆಗಲೇ ಇಲ್ಲ. ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಸೂರಿ ಬ್ಯುಸಿಯಾದರು. ಇದೀಗ ಈ ಸಿನಿಮಾದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.

    ಕದನ ವಿರಾಮ ಸಿನಿಮಾವನ್ನು ದರ್ಶನ್ (Darshan) ಗಾಗಿ ಸೂರಿ ಮಾಡಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ದರ್ಶನ್ ಮತ್ತು ಸೂರಿ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಬರಲಿದೆ ಎಂದೂ ಹೇಳಲಾಗುತ್ತಿತ್ತು. ಈ ಕುರಿತಂತೆ ಸೂರಿ ಸ್ಪಷ್ಟನೆ ಕೊಟ್ಟಿದ್ದಾರೆ. ಕದನ ವಿರಾಮ ಸಿನಿಮಾವನ್ನು ದರ್ಶನ್ ಅವರಿಗೆ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

     

    ಅಲ್ಲದೇ, ದರ್ಶನ್ ಅವರ ಜೊತೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಸ್ಟಾರ್ ನಟರಿಗೆ ಸೂರಿ ಸಿನಿಮಾ ಮಾಡುವುದಿಲ್ಲ ಎಂಬ ಗಾಸಿಪ್ ಇತ್ತು. ಅದಕ್ಕೂ ಅವರು ತೆರೆ ಎಳೆದಿದ್ದಾರೆ. ಕಥೆ ಯಾರನ್ನು ಕೇಳುತ್ತದೆಯೋ ಅವರಿಗೆ ಸಿನಿಮಾ ಮಾಡುವೆ. ನನ್ನ ಸ್ವಭಾವ ಅದು ಎಂದು ಅವರು ಹೇಳಿಕೊಂಡಿದ್ದಾರೆ.

  • ‘ಬ್ಯಾಡ್‌ ಮ್ಯಾನರ್ಸ್‌’ ರಿಲೀಸ್‌ಗೂ ಮೊದಲೇ ಹೊಸ ಚಿತ್ರ ಕೈಗೆತ್ತಿಕೊಂಡ ನಿರ್ದೇಶಕ ಸೂರಿ

    ‘ಬ್ಯಾಡ್‌ ಮ್ಯಾನರ್ಸ್‌’ ರಿಲೀಸ್‌ಗೂ ಮೊದಲೇ ಹೊಸ ಚಿತ್ರ ಕೈಗೆತ್ತಿಕೊಂಡ ನಿರ್ದೇಶಕ ಸೂರಿ

    ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್’ (Bad Manners)ಸಿನಿಮಾ ರಿಲೀಸ್‌ಗೂ ಮೊದಲೇ ಹೊಸ ಸಿನಿಮಾಗೆ ಸೂರಿ ಕೈಜೋಡಿಸಿದ್ದಾರೆ. ಇದೇ ಮೊದಲ ಬಾರಿಗೆ ಜಯಣ್ಣ ಫಿಲಂಸ್ ಜೊತೆ ನಿರ್ದೇಶಕ ಸೂರಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ‘ಕಿಸ್’ (Kiss) ಹೀರೋ ವಿರಾಟ್‌ಗೆ ಸೂರಿ (Duniya Suri) ನಿರ್ದೇಶನ ಮಾಡ್ತಿದ್ದಾರೆ.

    ಜಯಣ್ಣ- ಬೋಗೇಂದ್ರ ಫಿಲಂಸ್ ಸಂಸ್ಥೆಯೊಂದಿಗೆ ಬಹು ಚಿತ್ರಗಳನ್ನ ಮಾಡಲು ನಟ ವಿರಾಟ್ ಸಹಿ ಮಾಡ್ತಿದ್ದಾರೆ. ಈ ಸಂಸ್ಥೆ ಜೊತೆ ದಿನಕರ್ ತೂಗುದೀಪ್ ನಿರ್ದೇಶನದ ‘ರಾಯಲ್’ (Royal) ಚಿತ್ರದಲ್ಲಿ ವಿರಾಟ್ ನಟನೆ ಮಾಡ್ತಿದ್ದಾರೆ. ಇದಾದ ಬಳಿಕ ವಿರಾಟ್‌ಗೆ ‘ಟಗರು’ ಖ್ಯಾತಿಯ ಸೂರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

     

    View this post on Instagram

     

    A post shared by Viraat (@viraat_official)

    ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್‌ ಮ್ಯಾನರ್ಸ್’ ಸಿನಿಮಾ ಮೇ ಅಂತ್ಯದಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ರಿಲೀಸ್ ಬಳಿಕ ವಿರಾಟ್ ಕೈಗೆತ್ತಿಕೊಳ್ಳಲಿದ್ದಾರೆ ನಿರ್ದೇಶಕ ಸೂರಿ. ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ ಮಾಡಲು ಪ್ಲ್ಯಾನ್‌ ಮಾಡಿದ್ದಾರೆ. ಇದನ್ನೂ ಓದಿ:ನೆಟ್ಟಿಗರ ಹಾಸ್ಯಕ್ಕೆ ಗುರಿಯಾದ ‘ಬಿಗ್ ಬಾಸ್’ ಸೋನು ಗೌಡ ಬ್ರಾ ವೀಡಿಯೋ

    ಹೊಸ ಬಗೆಯ ಕಥೆ ಹೊತ್ತು  ಜಯಣ್ಣ ಫಿಲಂಸ್ ಅಡಿ ವಿರಾಟ್ ಲೈಟ್, ಕ್ಯಾಮೆರಾ, ಆ್ಯಕ್ಷನ್, ಎಂದು ಹೇಳಲು ರೆಡಿಯಾಗಿದ್ದಾರೆ. ದುನಿಯಾ ಸೂರಿ- ನಟ ವಿರಾಟ್ ಕಾಂಬೋ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.

  • Breaking- ದುನಿಯಾ ಸೂರಿ ಟೀಮ್ ಜೊತೆ ಸತೀಶ್ ನೀನಾಸಂ ಸಿನಿಮಾ: ಕುತೂಹಲ ಮೂಡಿಸಿದ ಜೋಡಿ

    Breaking- ದುನಿಯಾ ಸೂರಿ ಟೀಮ್ ಜೊತೆ ಸತೀಶ್ ನೀನಾಸಂ ಸಿನಿಮಾ: ಕುತೂಹಲ ಮೂಡಿಸಿದ ಜೋಡಿ

    ಸರಾ, ಮ್ಯಾಟ್ನಿ, ಅಶೋಕ ಬ್ಲೇಡ್ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕನ್ನಡದ ಪ್ರತಿಭಾವಂತ ನಟ ಸತೀಶ್ ನೀನಾಸಂ (Satish Ninasam) ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಸುದ್ದಿಕೊಟ್ಟಿದ್ದಾರೆ. ಹೆಸರಾಂತ ನಿರ್ದೇಶಕ ದುನಿಯಾ ಸೂರಿ (Duniya Suri) ಟೀಮ್ ಜೊತೆ ಕೆಲಸ ಮಾಡುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಈ ಸಿನಿಮಾವ ಸೂರಿ ಅವರ ಮಾರ್ಗದರ್ಶನದಲ್ಲಿ ನಡೆಯುವುದಾಗಿಯೂ ತಿಳಿಸಿದ್ದಾರೆ.

    ಸೂರಿ ನಿರ್ದೇಶನದ ಕೆಲ ಸಿನಿಮಾಗಳಲ್ಲಿ ಸತೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಸೋಲೋ ಹೀರೋ ಆಗಿ ಕಾಣಿಸಿಕೊಂಡಿಲ್ಲ. ಹಾಗಾಗಿಯೇ ಸತೀಶ್ ಗಾಗಿಯೇ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕು ಎನ್ನುವ ಮಾತುಗಳನ್ನು ಈ ಹಿಂದೆ ಸೂರಿ ಆಡಿದ್ದರು. ಆದರೆ, ಈ ಬಾರಿ ತಮ್ಮ ಶಿಷ್ಯ ಸುರೇಶ್ ಎನ್ನುವವರಿಗೆ ಈ ಅವಕಾಶವನ್ನು ಬಿಟ್ಟುಕೊಟ್ಟಿದ್ದಾರೆ ಸೂರಿ. ಹತ್ತಾರು ವರ್ಷಗಳ ಕಾಲ ಸೂರಿಯೊಂದಿಗೆ ಕೆಲಸ ಮಾಡಿರುವ ಸುರೇಶ್ (Suresh) ತಮ್ಮ ಚೊಚ್ಚಲು ನಿರ್ದೇಶನದ ಸಿನಿಮಾಗೆ ಸತೀಶ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

    ಸೂರಿ ಸಿನಿಮಾಗಳೆಂದರೆ, ಅದಕ್ಕೊಂದು ಬ್ರ್ಯಾಂಡ್ ಇದೆ. ಅವರದ್ದೇ ಆದ ಸ್ಟೈಲ್ ಇದೆ. ಶಿಷ್ಯರಿಗೂ ಅದೇ ಹಾದಿಯನ್ನೇ ಕಲಿಸಿ ಕೊಟ್ಟಿದ್ದಾರೆ. ಈ ಕಾರಣದಿಂದಾಗಿಯೇ ಸತೀಶ್ ನಟನೆಯ ಹೊಸ ಸಿನಿಮಾ ಕೂಡ ಅದೇ ಮಾದರಿಯಲ್ಲಿ ಇರಲಿದೆ. ಇದೇ ಮೊದಲ ಬಾರಿಗೆ ಅಂತಹ ಸಿನಿಮಾದಲ್ಲಿ ಸತೀಶ್ ನಟಿಸುತ್ತಿದ್ದಾರೆ. ದನ್ನೂ ಓದಿ: Oscar-ಆಸ್ಕರ್ ಪ್ರಶಸ್ತಿ ಪಡೆದ ನಾಟು ನಾಟು ‘ಲಹರಿ’ಯ ಹಾಡು ನೀವಿನ್ನೂ ನೋಡಿಲ್ವಾ?

    ಹೊಸ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನೂ ಕೊಡದೇ ಇದ್ದರೂ, ಸೂರಿ ಟೀಮ್ ಜೊತೆ ಸಿನಿಮಾ ಮಾಡುತ್ತಿರುವುದನ್ನು ಸತೀಶ್ ಖಚಿತ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ನೀಡುವುದಾಗಿಯೂ ಅವರು ತಿಳಿಸಿದ್ದಾರೆ. ಸದ್ಯ ಮ್ಯಾಟ್ನಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಅವರು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ.

  • ಅಭಿಷೇಕ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಡಿಂಪಲ್ ಕ್ವೀನ್

    ಅಭಿಷೇಕ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಡಿಂಪಲ್ ಕ್ವೀನ್

    ಬೆಂಗಳೂರು: ನಟ ಅಭಿಷೇಕ್ ಅಂಬರೀಷ್ ಎರಡನೇ ಚಿತ್ರ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಭರದಿಂದ ಸಾಗಿದ್ದು, ಇದೀಗ ನಾಯಕ ನಟಿಯನ್ನು ಆಯ್ಕೆ ಮಾಡಿರುವ ಕುರಿತ ಸುದ್ದಿಯನ್ನು ಸಹ ಸಿನಿಮಾ ತಂಡ ರಿವೀಲ್ ಮಾಡಿದೆ.

    ಬ್ಯಾಡ್ ಮ್ಯಾನರ್ಸ್ ಸಿನಿಮಾ ಶುರುವಾಗಿ ಅನೇಕ ದಿನಗಳು ಕಳೆದಿವೆ. ಆದರೆ ಈ ಬಗ್ಗೆ ಹೆಚ್ಚು ಅಪ್‍ಡೇಟ್ ಸಿಕ್ಕಿರಲಿಲ್ಲ. ಇದೀಗ ಸಿನಿಮಾ ತಂಡ ಬಿಗ್ ಸಪ್ರ್ರೈಸ್ ನೀಡಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರವನ್ನು ದುನಿಯಾ ಸೂರಿ ನಿರ್ದೇಶಿಸುತ್ತಿದ್ದು, ಅಭಿಷೇಕ್ ಅಂಬರೀಷ್ ಅವರ ಬಹುನಿರೀಕ್ಷಿತ ಸಿನಿಮಾ ಆಗಿದೆ. ಸದ್ಯ ಚಿತ್ರತಂಡ ಮಂಡ್ಯದಲ್ಲಿ ಶೂಟಿಂಗ್ ನಡೆಸುತ್ತಿದ್ದು, ಇದೇ ಸಂದರ್ಭದಲ್ಲಿ ಹೀರೋಯಿನ್ ಆಯ್ಕೆ ಕುರಿತು ಸುದ್ದಿ ರಿವೀಲ್ ಆಗಿದೆ.

    ಚಿತ್ರದಲ್ಲಿ ಇಬ್ಬರು ಹೀರೋಯಿನ್‍ಗಳು ಇರಲಿದ್ದು, ಅಭಿಷೇಕ್ ಅಂಬರೀಷ್ ಜೊತೆ ನಟಿ ರಚಿತಾ ರಾಮ್ ಹಾಗೂ ಪ್ರಿಯಾಂಕಾ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಲವ್ ಯು ರಚ್ಚು ಸಿನಿಮಾದಲ್ಲಿ ರಚಿತಾ ರಾಮ್ ಬ್ಯುಸಿಯಾಗಿದ್ದು, ಇದೇ ವೇಳೆ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ.

    ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದ್ದು, ತಾರಾ, ಶರತ್ ಲೋಹಿತಾಶ್ವ ಸಹ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದೆ. ಮೊದಲ ಸಿನಿಮಾದಲ್ಲಿ ರೊಮ್ಯಾಂಟಿಕ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಭಿಷೇಕ್, ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಯಾವ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ. ಕಳೆದ ವರ್ಷ ಅಂಬರೀಷ್ ಹುಟ್ಟುಹಬ್ಬದಂದು ಸಿನಿಮಾ ಲಾಂಚ್ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ನಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರಂಭವಾಗಿದ್ದು, ಭರದಿಂದ ಸಾಗಿದೆ.

    ಚಿತ್ರದಲ್ಲಿ ರಚಿತಾ ರಾಮ್ ಫುಲ್ ಟ್ರೆಡಿಷನಲ್ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನು ಪ್ರಿಯಾಂಕ ಅವರ ಪಾತ್ರದ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ. ಒಟ್ಟಿನಲ್ಲಿ ಇಬ್ಬರು ನಟಿಮಣಿಯರ ಜೊತೆ ಅಭಿಷೇಕ್ ಅಂಬರೀಷ್ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬುದು ಇದೀಗ ತಿಳಿದಿದೆ.

  • ಪೊಗದಸ್ತಾದ ಟಗರು!

    ಪೊಗದಸ್ತಾದ ಟಗರು!

    ಬೆಂಗಳೂರು: ಟಗರು ಥಿಯೇಟರಿಗೆ ಬಂದಿದೆ. ಸೂರಿ ನಿರ್ದೇಶನ, ಶಿವರಾಜ್ ಕುಮಾರ್ ಹೀರೋ. ಇಬ್ಬರಿಬ್ಬರ ಕಾಂಬಿನೇಷನ್ನಿನಲ್ಲಿ ಬಂದ ಎರಡನೇ ಸಿನಿಮಾ. ಹೀಗೆ ಹತ್ತು ಹಲವರು ಕಾರಣಗಳಿಗಾಗಿ ಟಗರು ಸಿನಿಮಾದ ಬಗ್ಗೆ ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದವರ ಪಾಲಿಗೂ ವಿಪರೀತ ಕುತೂಹಲವಿತ್ತು. ಈಗ ಆ ಎಲ್ಲ ನಿರೀಕ್ಷೆಗಳಿಗೂ ಉತ್ತರ ಸಿಕ್ಕಿದೆ.

    ಇರೋ ಬುದ್ಧಿಯನ್ನೇ ಬಂಡವಾಳ ಮಾಡಿಕೊಂಡು ಕ್ರೂರ ಕೆಲಸಗಳನ್ನು ಮಾಡಿಸುವ ಇಂಟಲಿಜೆಂಟ್ ಕ್ರಿಮಿನಲ್ಲುಗಳು. ರಾಜಕಾರಣಿಗಳು ಮತ್ತವರ ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಹನಿ ಟ್ರ್ಯಾಪ್ ಮಾಡುವ ದುಷ್ಟರು. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕೊಲೆಗಡುಕರನ್ನು ಮಟ್ಟಹಾಕಲು ನಿಲ್ಲುವ ಪೊಲೀಸ್ ಅಧಿಕಾರಿಗಳು. ಪ್ರೀತಿಸಿದವರಿಗೆ ಸಹಾಯ ಮಾಡಲು ಹೋಗಿ ಫೀಲ್ಡಿಗಿಳಿದು ಡಾನ್ ಆದವನು. ಸಹವಾಸ ದೋಷದಿಂದ ಬೇಡದ್ದನ್ನೆಲ್ಲಾ ಕಲಿತ ಹುಡುಗಿ. ಹೀಗೆ ಸಾಕಷ್ಟು ಎಲಿಮೆಂಟುಗಳನ್ನು ಒಂದಕ್ಕೊಂದು ಪೋಣಿಸಿ ತಯಾರಿಸಿರುವ ಗುಚ್ಛವೇ ಟಗರು.

    ಸೂರಿ ಕಥೆ ಕಟ್ಟುವ ರೀತಿಯೇ ವಿಶಿಷ್ಟ. ನೇರವಾಗಿ ಹೇಳಿಬಿಡಬಹುದಾದ ಎಳೆಯನ್ನು ಬೇರೆಯದ್ದೇ ಹಾದಿಯಲ್ಲಿ ಕೊಂಡೊಯ್ದು ನೋಡುಗರ ಎದೆ ಮುಟ್ಟಿಸುವ ಅವರ ಕಸುಬುದಾರಿಕೆ ಟಗರು ಚಿತ್ರದಲ್ಲೂ ಗೆಲುವು ಕಂಡಿದೆ. ಇಂಥ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಬಹಳ ಮುಖ್ಯ. ಇದೇ ಸಿನಿಮಾ ಬೇರೊಬ್ಬರ ಕೈಗೆ ಸಿಕ್ಕಿದ್ದರೆ ಅಬ್ಬರದಿಂದ ಗೊಬ್ಬರವಾಗುತ್ತಿತ್ತೋ ಏನೋ? ಆದರೆ ಸಂಗೀತ ನಿರ್ದೇಶಕ ಚರಣ್ ರಾಜ್ ಸಮಚಿತ್ತದಿಂದ ಕೂತು ಹಿನ್ನೆಲೆ ಶಬ್ದಗಳನ್ನು ಸೃಷ್ಟಿಸಿದ್ದಾರೆ. ಕ್ಯಾಮೆರಾ ಕೆಲಸ ಮಾಡಿರುವ ಮಹೇನ್ ಸಿಂಹ ಅಂತೂ ಇದು ಸಿನಿಮಾ ಅನ್ನೋದನ್ನೇ ಮರೆತು ಕಣ್ಣೆದುರೇ ನಡೆಯುತ್ತಿರುವ ದೃಶ್ಯಗಳಂತೆ ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.

    ಸಿನಿಮಾದಲ್ಲಿನ ಒಂದೊಂದು ಪಾತ್ರಗಳೂ ಖಡಕ್ಕಾಗಿ ಮೂಡಿಬಂದಿವೆ. ಇಂಟಲಿಜೆಂಟ್ ಡಾನ್ ಪಾತ್ರದಲ್ಲಿ ನಟಿಸಿರೋ ರಂಗಭೂಮಿ ಕಲಾವಿದ ಸಚ್ಚು ಮುಖಪರಿಚಯ ಮಾಮೂಲಿ ಪ್ರೇಕ್ಷಕರಿಗೆ ಗೊತ್ತಿಲ್ಲದಿದ್ದರೂ ಯಾವತ್ತಿಗೂ ನೆನಪಿನಲ್ಲುಳಿಯುವಂತೆ ನಟಿಸಿದ್ದಾರೆ. ಇನ್ನು ಮುಂದೆ ಹೀರೋ ಆಗಿಯೇ ಮುಂದುವರೆಯಬೇಕೆನ್ನುವ ಆಸೆಯನ್ನು ಪಕ್ಕಕ್ಕಿಟ್ಟು ಇಂಥಾ ಖಡಕ್ಕು ರೋಲುಗಳಲ್ಲಿ ಕಾಣಿಸಿಕೊಂಡರೆ ಧನಂಜಯ, ವಸಿಷ್ಠರಂತ ನಟರು ದೊಡ್ಡ ಎತ್ತರಕ್ಕೇರುವುದರಲ್ಲಿ ಡೌಟಿಲ್ಲ.

    ಇನ್ನು ಟಗರು ಟೈಟಲ್ ಸಾಂಗ್‍ಗೆ ಚರಣ್ ರಾಜ್ ಕೊಟ್ಟಿರೋ ಟ್ಯೂನು, ಅಂಥೋಣಿ ದಾಸನ್ ಧ್ವನಿಗೆ ನಿಜಕ್ಕೂ ಬೆಲೆ ತಂದುಕೊಟ್ಟಿರೋದು ನೃತ್ಯ ನಿರ್ದೇಶಕ. ಲಾರಿ ಎಪಿಸೋಡುಗಳ ಫೈಟ್ ಕಂಪೋಸ್ ಮಾಡಿರುವ ಜಾಲಿ ಬಾಸ್ಟಿನ್ ಕೆಲಸ ರೋಚಕ. ಸಂಭಾಷಣೆ ಬರೆದಿರುವ ಮಾಸ್ತಿ ಸಾಮಾನ್ಯವಾಗಿ ರೌಡಿಗಳ ಬಾಯಿಂದ ಹೊರಡುವ ಮಾತನ್ನೇ ಯಥಾವತ್ತು ಅಕ್ಷರಕ್ಕಿಳಿಸಿದ್ದಾರೆ.

    ಒಟ್ಟಾರೆಯಾಗಿ ನೋಡಿದರೆ ಟಗರು ಕಮರ್ಷಿಯಲ್ ಸಿನಿಮಾಗಳನ್ನು ಇಷ್ಟಪಡುವವರು ಮತ್ತು ಫ್ಯಾಮಿಲಿ ಆಡಿಯನ್ಸು ಕೂಡಾ ನೋಡಬಹುದಾದ ಸಿನಿಮಾ.