Tag: ದುನಿಯಾ

  • ಐವತ್ತು ಸಿನಿಮಾ ಪೂರೈಸಿದ ಲೂಸ್ ಮಾದ ಯೋಗಿ

    ಐವತ್ತು ಸಿನಿಮಾ ಪೂರೈಸಿದ ಲೂಸ್ ಮಾದ ಯೋಗಿ

    ದುನಿಯಾ (Duniya) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಯೋಗಿ ಅಲಿಯಾಸ್ ಲೂಸ್ ಮಾದ ಯೋಗಿ (Loose Mada Yogi) ಈವರೆಗೂ ಬರೋಬ್ಬರಿ ಐವತ್ತು ಸಿನಿಮಾ ಪೂರೈಸಿದ್ದಾರೆ. ಅವರ ಐವತ್ತನೇ ಚಿತ್ರಕ್ಕೆ ‘ರೋಜಿ’ (Rosie) ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಸಮಾರಂಭ ಇತ್ತೀಚೆಗೆ ನವರಂಗ್ ಚಿತ್ರಮಂದಿರದಲ್ಲಿ ನಡೆಯಿತು. ಡಾಲಿ ಧನಂಜಯ (Dolly Dhananjay) ಚಿತ್ರದ ಶೀರ್ಷಿಕೆ ಅನಾವರಣ ಮಾಡಿ, ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

    ಹೆಡ್ ಬುಷ್ ಚಿತ್ರದ ನಂತರ ಶೂನ್ಯ (Shoonya ) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಡಿ.ವೈ.ರಾಜೇಶ್ ಹಾಗೂ ಡಿ.ವೈ.ವಿನೋದ್ ನಿರ್ಮಾಣ ಮಾಡುತ್ತಿದ್ದಾರೆ. ಯೋಗಿ ನನ್ನ ಆತ್ಮೀಯ ಗೆಳೆಯ. ‘ರೋಜಿ’  ಯೋಗಿ ಅಭಿನಯದ 50ನೇ ಸಿನಿಮಾ ಎಂದು ತಿಳಿದು ಸಂತೋಷವಾಯಿತು. ಶೂನ್ಯ ಕೂಡ ನಮ್ಮ ಸಂಸ್ಥೆಯ ನಿರ್ಮಾಣದ ಹೆಡ್ ಬುಷ್ ಚಿತ್ರ ನಿರ್ದೇಶನ ಮಾಡಿದ್ದರು. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಡಾಲಿ ಹಾರೈಸಿದರು.

    ಇದು ನನ್ನ ಐವತ್ತನೇ ಚಿತ್ರ. ನಾನು ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ ಎನ್ನಬಹುದು. ಶೂನ್ಯ ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ಶೀರ್ಷಿಕೆ ಬಿಡುಗಡೆ ಮಾಡಿ, ಶುಭ ಹಾರೈಸಿದ ಸ್ನೇಹಿತ ಡಾಲಿ ಧನಂಜಯ ಅವರಿಗೆ ಧನ್ಯವಾದ ಎಂದರು ನಾಯಕ ಯೋಗಿ.

    ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ಎಲ್ಲರೂ ನೀಡಿದ್ದ ಪ್ರೋತ್ಸಾಹಕ್ಕೆ ಚಿರ ಋಣಿ. ಈಗ ನನ್ನ ನಿರ್ದೇಶನದ ಎರಡನೇ ಚಿತ್ರ ರೋಜಿಗೆ ಚಾಲನೆ ಸಿಕ್ಕಿದೆ. ಚಿತ್ರದಲ್ಲಿ ಯೋಗಿ ಅವರ ಹೆಸರೆ ರೋಜಿ.  ಚಿತ್ರರಂಗದವರಿಗೆ ಚಿತ್ರಮಂದಿರ ದೇವಸ್ಥಾನವಿದಂತೆ. ಹಾಗಾಗಿ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಆರಂಭಿಸಿದ್ದೇವೆ.  ಮೇ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಶೂನ್ಯ ತಿಳಿಸಿದರು.

  • ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಅನೌನ್ಸ್

    ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಅನೌನ್ಸ್

    ದುನಿಯಾ ವಿಜಯ್ ಮತ್ತೊಂದು ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಎಂದು ಎರಡು ದಿನಗಳ ಹಿಂದೆಯಷ್ಟೇ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಇದೀಗ ಸ್ವತಃ ವಿಜಯ್ ಅವರೇ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ, ಅಧಿಕೃತಗೊಳಿಸಿದ್ದಾರೆ. ತಮ್ಮ ಎರಡನೇ ಸಿನಿಮಾ ಕುರಿತು ಅತೀ ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿ

    ಸದ್ಯಕ್ಕೆ ‘ವಿಕೆ 28’ ಹೆಸರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿರುವ ದುನಿಯಾ ವಿಜಯ್, ಈ ಸಿನಿಮಾ ಕೂಡ ರಕ್ತಸಿಕ್ತ ಅಧ್ಯಾಯವೊಂದನ್ನು ತೆರೆದಿಡಲಿದೆ ಎನ್ನುವಂತೆ ಪೋಸ್ಟರ್. ಲವ್ ಸ್ಟೋರಿಗಳಿಗಿಂತಲೂ ಲಾಂಗು ಮಚ್ಚುಗಳ ಚಿತ್ರಗಳನ್ನೇ ಮಾಡುತ್ತಾ ಬಂದಿರುವ ದುನಿಯಾ ವಿಜಯ್, ಆ ಸರಣಿಯನ್ನು ಇಲ್ಲಿಯೂ ಮುಂದುವರೆಸಿದ್ದಾರೆ. ಇದನ್ನೂ ಓದಿ : ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ

    ವಿಜಯ್ ಚೊಚ್ಚಲು ನಿರ್ದೇಶನದ ಸಲಗ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಬಂದರೂ, ನಿರ್ಮಾಪಕರ ಜೇಬು ತುಂಬಿಸುವಲ್ಲಿ ಸೋಲಲ್ಲಿ. ಹಾಗಾಗಿ ಈ ವರ್ಷದ ಗೆಲುವಿನ ಸಿನಿಮಾಗಳ ಪಟ್ಟಿಯಲ್ಲಿ ಅದು ಸ್ಥಾನ ಪಡೆದುಕೊಂಡಿತು. ಸಲಗ ಸಕ್ಸಸ್ ಆಗುತ್ತಿದ್ದಂತೆಯೇ ವಿಜಯ್ ಮನೆಯ ಮುಂದೆ ನಿರ್ಮಾಪಕರು ಸಾಲುಗಟ್ಟಿದರು. ಈಗದು ಎರಡನೇ ಸಿನಿಮಾವಾಗಿ ಬದಲಾಗಿದೆ. ಇದನ್ನೂ ಓದಿ : ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್

    ಅಂದಹಾಗೆ ಸಲಗ ಸಿನಿಮಾ ಮಾಡಿದ್ದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಬದಲು ಈ ಸಿನಿಮಾವನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಉಳಿದ ವಿವರವನ್ನು ಮುಂದಿನ ದಿನಗಳಲ್ಲಿ ನೀಡುತ್ತಾರಂತೆ ದುನಿಯಾ ವಿಜಯ್.

  • ಸಲಗದ ನಂತರ ಮತ್ತೆ ನಿರ್ದೇಶನಕ್ಕೆ ದುನಿಯಾ ವಿಜಯ್

    ಸಲಗದ ನಂತರ ಮತ್ತೆ ನಿರ್ದೇಶನಕ್ಕೆ ದುನಿಯಾ ವಿಜಯ್

    ದುನಿಯಾ ವಿಜಯ್ ನಿರ್ದೇಶನ ಮಾಡುತ್ತಾರಾ ಎನ್ನುವ ಪ್ರಶ್ನೆಯೊಂದಿಗೆ ಶುರುವಾದ ‘ಸಲಗ’ ಸಿನಿಮಾ, ಇದೀಗ ಯಶಸ್ಸಿನ ಕಿರೀಟ ತೊಟ್ಟುಕೊಂಡಿದೆ. ನಿರ್ದೇಶನದ ಮೊದಲ ಸಿನಿಮಾದಲ್ಲಿಯೇ ಗೆದ್ದು ಬೀಗುತ್ತಿರುವ ದುನಿಯಾ ವಿಜಯ್, ಸದ್ಯದಲ್ಲೇ ಮತ್ತೊಂದು ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ದುನಿಯಾ ಅಂಗಳದಿಂದ ಬಂದಿದೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?


    ಸಲಗ ಸೋತರೂ, ಗೆದ್ದರೂ ತಾವು ನಟನೆಯ ಜತೆಗೆ ನಿರ್ದೇಶನದಲ್ಲೂ ಮುಂದುವರೆಯುವುದಾಗಿ ದುನಿಯಾ ವಿಜಯ್ ಈ ಹಿಂದೆಯೇ ಹೇಳಿದ್ದರು. ಅಂದುಕೊಂಡ ಕನಸು ಅವರನ್ನು ಕೈ ಬಿಡಲಿಲ್ಲ. ಪ್ರೇಕ್ಷಕ ಸಲಗ ಗೆಲ್ಲಿಸಿಬಿಟ್ಟ. ಹಾಗಾಗಿ ನಿರ್ದೇಶಕನಾಗುವ ಹುರುಪು ಇಮ್ಮಡಿಯಾಗಿದೆ.  ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ


    ಸದ್ಯ ಹೊಸ ಸಿನಿಮಾದ ಕಥೆ ಬರೆಯುವುದರಲ್ಲಿ ವಿಜಯ್ ತೊಡಗಿಕೊಂಡಿದ್ದಾರೆ. ಈ ಬಾರಿಯೂ ಅವರು ರಾ ಆಗಿರುವಂತಹ ಕಥೆಯನ್ನೇ ಸಿನಿಮಾ ಮಾಡಲಿದ್ದಾರಂತೆ. ಪಕ್ಕಾ ಮಾಸ್ ಸಿನಿಮಾ ಅದಾಗಿದ್ದು, ನಿರ್ದೇಶನದ ಜತೆಗೆ ನಟನೆಯನ್ನೂ ಮಾಡುತ್ತಾರಾ ಅಥವಾ ಬೇರೆ ಕಲಾವಿದರಿಗೆ ಹೊಸ ಸಿನಿಮಾ ಮಾಡುತ್ತಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಇದನ್ನೂ ಓದಿ : ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?


    ಅಂದುಕೊಂಡಂತೆ ಆದರೆ, ಶಿವರಾತ್ರಿ ಹೊತ್ತಿಗೆ ಈ ಸಿನಿಮಾದ ಮುಹೂರ್ತ ನಡೆಯಲಿದೆ. ಅಲ್ಲಿಯವರೆಗೂ ಸಂಭಾಷಣೆಕಾರ ಮಾಸ್ತಿ ಮತ್ತು ದುನಿಯಾ ವಿಜಯ್ ಸ್ಕ್ರಿಪ್ಟ್ ಬರೆಯುವುದರಲ್ಲಿ ಮಗ್ನರಾಗಿರುತ್ತಾರೆ. ಜತೆ ಜತೆಗೆ ಕಲಾವಿದರ ಆಯ್ಕೆ ಕೂಡ ನಡೆಯಲಿದೆಯಂತೆ. ಎರಡನೇ ಸಿನಿಮಾಗೆ ನಿರ್ದೇಶನ ಮಾಡುವುದು ಪಕ್ಕಾ ಆಗಿದ್ದು, ಕಲಾವಿದರು ಮತ್ತು ತಂತ್ರಜ್ಞರ ಕುರಿತು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

  • ಮಾರುತಿಗೌಡ ತುಂಬಾ ಇಷ್ಟವಾದ ಹುಡುಗ: ದುನಿಯಾ ವಿಜಿ

    ಮಾರುತಿಗೌಡ ತುಂಬಾ ಇಷ್ಟವಾದ ಹುಡುಗ: ದುನಿಯಾ ವಿಜಿ

    ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಕೇಸಿನಲ್ಲಿ ಜೈಲಿಗೆ ಹೋಗಿದ್ದ ನಟ ದುನಿಯಾ ವಿಜಿ ಸೋಮವಾರ ಸಂಜೆ ರಿಲೀಸ್ ಆಗಿದ್ದಾರೆ. ಜೈಲು ಮುಕ್ತನಾಗುತ್ತಿದ್ದಂತೆಯೇ ರಾತ್ರಿ ಸುಮಾರು 11 ಗಂಟೆಗೆ ಎರಡನೇ ಪತ್ನಿ ಕೀರ್ತಿ ಜೊತೆ ಸುದ್ದಿಗೋಷ್ಠಿ ನಡೆಸಿದ್ದಾರೆ.

    ಕಾಂಪಿಟೇಷನ್ ಗೆ ಹೋಗಿ ವಾಪಸ್ ಬರುತ್ತಿದ್ದೆವು. ಆಗ ನಾನು ಕಿಟ್ಟಿ ಎಲ್ಲಿ ಎಂದು ಕೇಳಿದೆ ಅಷ್ಟೆ. ನನಗೂ ಕಿಟ್ಟಿಗೂ ನಡುವೆ ಯಾವುದೇ ದ್ವೇಷ ಇಲ್ಲ. ಆದರೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಮಾತನಾಡುತ್ತಿಲ್ಲ. ಅಲ್ಲಿ ಜನಸಂದಣಿಯಿಂದ ನನ್ನ ಮಗನ ತಲೆಯ ಮೇಲೆ ಮಾರುತಿ ಗೌಡ ಹೊಡೆದಿದ್ದಾರೆ. ಇದರಿಂದ ಅಲ್ಲಿ ಗಲಾಟೆ ಆಗಿದೆ. ಇದು ಕಿಟ್ಟಿಗೆ ಗೊತ್ತಿಲ್ಲ. ಮಾರುತಿಗೌಡ ತುಂಬಾ ಇಷ್ಟವಾದ ಹುಡುಗ ಎಂದು ಹೇಳಿದ್ದಾರೆ.

    ಗಲಾಟೆಯ ವೇಳೆ ಮಾರುತಿ ಗೌಡ ಅವರಿಗೆ ಜನರು ಹಲ್ಲೆ ಮಾಡಿದ್ದಾರೆ. ಆದ್ರೆ ನನ್ನ ಕಡೆಯವರು ಹೊಡೆದಿಲ್ಲ. ಜನಸಂದಣಿಯಲ್ಲಿ ನಾನು ಮುಂದೆ ಬಂದೆ. ಪ್ರಮಾಣಿಕವಾಗಿ ನಾನು ಹೊಡೆದಿಲ್ಲ. ಗುಂಪಿನಲ್ಲಿ ಜನರು ಹೊಡೆದಿದ್ದರು. ಬಳಿಕ ಅವರನ್ನು ನಾನೇ ಬಿಡಿಸಿ ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದೆ. ಆಗ ಆರ್‍ಆರ್ ನಗರದ ಬಳಿ ಕಾರನ್ನ ನಿಲ್ಲಿಸಿದೆವು. ಮಾರುತಿ ಅವರ ಬಟ್ಟೆಗೆ ರಕ್ತ ಆಗಿತ್ತು. ಹೀಗಾಗಿ ಬಟ್ಟೆ ಬದಲಾಯಿಸೋಣ ಅಂತ ಹೇಳಿದೆ. ಆದರೆ ಮಾರುತಿ ಗೌಡ ಅದಕ್ಕೆ ಒಪ್ಪಲಿಲ್ಲ. ಅಲ್ಲದೇ ನನ್ನನ್ನು ಇಲ್ಲೇ ಬಿಟ್ಟು ಬಿಡಿ ಎಂದು ಹೇಳಿದರು. ನಾನು ಇದಕ್ಕೆ ಒಪ್ಪಲಿಲ್ಲ. ನಂತರ ಕಿಟ್ಟಿ ಕರೆ ಮಾಡಿದ್ರು, ಅವರಿಗೂ ಮಿಸ್ ಅಂಡರ್ ಸ್ಟಾಂಡ್ ಆಗಿತ್ತು. ಇದನ್ನು ಮಾತನಾಡಿ ಸರಿಪಡಿಸಲು ಕಿಟ್ಟಿ ಮನೆ ಬಳಿ ಹೋಗುತ್ತಿದ್ದೆವು ಅಂದ್ರು.

    ಇದೇ ವೇಳೆ ಪೊಲೀಸ್ ಕಡೆಯಿಂದ ಕರೆ ಬಂತು. ನಂತರ ಮಾರುತಿಗೌಡರನ್ನು ಕರೆದುಕೊಂಡು ಹೈಗ್ರೌಂಡ್ ಪೊಲೀಸ್ ಠಾಣೆಗೆ ಹೋದೆವು. ಆದರೆ ಅಲ್ಲಿ ನಾನು ಪ್ರೀತಿಯಿಂದ ಮಾತನಾಡಿಸಲು ಹೋದಾಗ ಅವರೇ ನನಗೆ ಡಿಚ್ಚಿ ಹೊಡೆದರು. ನಾನು ಏನೂ ಮಾತನಾಡಿಲ್ಲ. ನಾನು ವಕೀಲರಿಗೂ ನಿಜ ಹೇಳಿದ್ದೇನೆ. ನಾನು ಹೊಡೆದಿಲ್ಲ, ನಾನು ಕಿಡ್ನಾಪ್ ಮಾಡಿಲ್ಲ. ಮಾರುತಿ ಗೌಡ ಅವರಿಗೆ 24 ಹೊಲಿಗೆ ಹಾಕಿಲ್ಲ. ಕಿಟ್ಟಿಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಸಂಜೆ ವೇಳೆಗೆ ಬೇರೆ ಬೇರೆ ಕೇಸ್ ಹಾಕಿಸಿದ್ದರು ಎಂದು ವಿಜಿ ತಿಳಿಸಿದ್ರು.

    ನಾನು ಕಿಟ್ಟಿ ಜೊತೆ ಮಾತನಾಡುತ್ತೇನೆ. ನಾನು ಜಗಳ ಬಿಡಿಸಲು ಹೋದೆ, ಆದ್ರೆ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ನಾನು ಹೊಡೆದಿಲ್ಲ. ಈ ಬಗ್ಗೆ ನಾನು ಎಲ್ಲೂ ಮಾತನಾಡುವುದಿಲ್ಲ. ಒಂದು ದಿನ ಕಿಟ್ಟಿಗೆ ಸತ್ಯ ಗೊತ್ತಾಗುತ್ತದೆ ಎಂದು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾರಿಕಾಂಬೆ ಜಾತ್ರೆಯಲ್ಲಿ ಲೂಸ್ ಮಾದ ಅಭಿನಯದ ದುನಿಯಾ2 ಚಿತ್ರದ ಆಡಿಯೋ, ಟ್ರೇಲರ್ ಬಿಡುಗಡೆ

    ಮಾರಿಕಾಂಬೆ ಜಾತ್ರೆಯಲ್ಲಿ ಲೂಸ್ ಮಾದ ಅಭಿನಯದ ದುನಿಯಾ2 ಚಿತ್ರದ ಆಡಿಯೋ, ಟ್ರೇಲರ್ ಬಿಡುಗಡೆ

    ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ನಡೆಯುತ್ತಿರುವ ಮಾರಿಕಾಂಬೆ ಜಾತ್ರೆಯಲ್ಲಿ ಲೂಸ್ ಮಾದ ಯೋಗೀಶ್ ಅಭಿನಯದ ದುನಿಯಾ 2 ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡಲಾಯಿತು.

    ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಡಿಯೋ ಬಿಡುಗಡೆ ಮಾಡಿ, ಚಿತ್ರ ಶತದಿನ ಪ್ರದರ್ಶನ ಕಾಣಲಿ ಅಂತಾ ಹೇಳಿದ್ರು.

    10 ವರ್ಷಗಳ ಹಿಂದೆ ದುನಿಯಾ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದಿದ್ದೆ. ಇದೀಗ ದುನಿಯಾ 2 ಚಿತ್ರದಲ್ಲಿ ನಾಯಕನಾಗಿ ಮತ್ತೆ ಅಭಿನಯಿಸಿದ್ದೇನೆ. ಸಾಗರ ಮಾರಿಕಾಂಬೆ ಜಾತ್ರೆಯಲ್ಲಿ ಆಡಿಯೋ ಬಿಡುಗಡೆ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಈ ಸಿನೆಮಾವನ್ನೂ ಗೆಲ್ಲಿಸಿ ಅಂತಾ ಯೋಗೀಶ್ ಹೇಳಿದ್ರು.

    ಬಳಿಕ ಅಭಿಮಾನಿಗಳ ಆಗ್ರಹದ ಮೇರೆಗೆ ಹುಡುಗರು ಹಾಗೂ ಸಿದ್ಲಿಂಗು ಚಿತ್ರದ ಡೈಲಾಗ್ ಹೇಳಿ ರಂಜಿಸಿದರು. ಚಿತ್ರದ ಸಂಗೀತ ನಿರ್ದೇಶಕ ಭರತ್, ನಿರ್ದೇಶಕ ಹರಿ, ನಿರ್ಮಾಪಕರಾದ ಸಿದ್ದರಾಜು, ಶೃತಿ ವೆಂಕಟೇಶ್ ಇನ್ನಿತರರು ಇದ್ದರು.