Tag: ದುಃಖ

  • ನಾಯಿ ಕಳೆದುಕೊಂಡ ನೋವು: ಪ್ರಚಾರಕ್ಕೆ ಬಾರದ ರಮ್ಯಾ

    ನಾಯಿ ಕಳೆದುಕೊಂಡ ನೋವು: ಪ್ರಚಾರಕ್ಕೆ ಬಾರದ ರಮ್ಯಾ

    ಸ್ಯಾಂಡಲ್ ವುಡ್ ಖ್ಯಾತ ನಟಿ ರಮ್ಯಾ (Ramya) ಅವರು ಎರಡು ದಿನಗಳ ಹಿಂದೆಯಷ್ಟೇ ತಮ್ಮ ನೆಚ್ಚಿನ ನಾಯಿ ಚಾಂಪ್ (Champ) ನನ್ನು ಕಳೆದುಕೊಂಡಿದ್ದಾರೆ (Death). ಮುದ್ದಿನ ನಾಯಿಯನ್ನು (Dog) ಕಳೆದುಕೊಂಡ ದುಃಖದಲ್ಲಿರುವ ರಮ್ಯಾ, ಮನೆಯಿಂದ ಆಚೆ ಬಾರದಷ್ಟು ನೋವಿನಲ್ಲಿದ್ದಾರೆ. ಹೀಗಾಗಿಯೇ ಎರಡು ದಿನಗಳಿಂದ ಅವರು ಯಾವುದೇ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಿಲ್ಲ. ಮನೆಯಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ತಮ್ಮ ಮುದ್ದಿನ ಶ್ವಾನ ನಾಪತ್ತೆ ವಿಷಯ ತಿಳಿಯುತ್ತಿದ್ದಂತೆ ರಮ್ಯ ಕಣ್ಣೀರು ಹಾಕಿದ್ದರು. ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಈ ಮಾಹಿತಿ ಸಿಗುತ್ತಿದ್ದಂತೆ ತೀವ್ರ ನೊಂದುಕೊಂಡಿದ್ದ ರಮ್ಯಾ, ತಕ್ಷಣ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಆಗಮಸಿದ್ದರು. ಅವರು ಬೆಂಗಳೂರಿಗೆ ಬರುವಷ್ಟರಲ್ಲಿ ಚಾಂಪ್ ನಿಧನ ಹೊಂದಿದ ಸುದ್ದಿ ಅವರಿಗೆ ಮತ್ತಷ್ಟು ಆಘಾತ ತರಿಸಿತ್ತು. ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ತಮಿಳು ನಾಡಿನಲ್ಲಿ ಪ್ರದರ್ಶನವಿಲ್ಲ

    ಶನಿವಾರ ರಮ್ಯಾ ವಾಸವಿದ್ದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ನಾಯಿ ಕಾಣೆಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅದಾದ ಕೆಲವು ಹೊತ್ತಿನ ನಂತರ ಚಾಂಪ್ ಇನ್ನಿಲ್ಲ ಎಂದು ಅವರೇ ಬಹಿರಂಗ ಪಡಿಸಿದರು.

    ರಮ್ಯಾ ಅವರಿಗೆ ನಾಯಿ ಅಂದರೆ ಎಲ್ಲಿಲ್ಲದ ಪ್ರೀತಿ. ನಾಯಿ ಕಥೆಯನ್ನು ಇಟ್ಟುಕೊಂಡೇ ಅವರೊಂದು ಸಿನಿಮಾ ಕೂಡ ಮಾಡಿದ್ದಾರೆ. ‘ನಾನು ಏನ್ ಮಾಡ್ಲಿ ಸ್ವಾಮಿ.. ನನ್ನ ಹುಡುಗಿ ನಾಯಿ ಪ್ರೇಮಿ’ ಎನ್ನುವ ಹಾಡು ಕೂಡ ಸಖತ್ ಫೇಮಸ್ ಆಗಿತ್ತು. ಇದೀಗ ನಾಯಿಯನ್ನು ಕಳೆದುಕೊಂಡು ದುಃಖ ಪಡುತ್ತಿದ್ದಾರೆ ರಮ್ಯಾ.

  • ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ: ನಟಿ ವಿಜಯಲಕ್ಷ್ಮಿ

    ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ: ನಟಿ ವಿಜಯಲಕ್ಷ್ಮಿ

    -ನಾನು ಇನ್ನು ಮುಂದೆ ತಮಿಳುನಾಡಿಗೆ ಹೋಗಲ್ಲ

    ಬೆಂಗಳೂರು: ವಯೋಸಹಜವಾದ ಕಾಯಿಲೆಯಿಂದ ಇಂದು ತಾಯಿಯನ್ನು ಕಳೆದುಕೊಂಡಿರುವ ನಟಿ ವಿಜಯಲಕ್ಷ್ಮಿ ಅವರು ಎಲ್ಲರ ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ ಎಂದು ತಮ್ಮ ದುಃಖವನ್ನು ತೊಡಿಕೊಂಡಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚೆನ್ನೈಯಲ್ಲಿ ಸಮಸ್ಯೆ ಆಗಿ ತಾಯಿ, ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದೇನೆ. ಅಕ್ಕ, ತಾಯಿ ನನ್ನ ಮಕ್ಕಳ ಸಮವಾಗಿದ್ದಾರೆ. ಬೆಳಗ್ಗೆ 12 ಗಂಟೆಗೆ ಅಮ್ಮನಿಗೆ ನೋಡಿ ಆಘಾತ ಆಯಿತು. ಕೂಡಲೇ ಹೋಟೆಲ್ ಅವರನ್ನು ಕರೆದು ನೋಡಿದಾಗ ಅವರು ಇನ್ನಿಲ್ಲ ಅಂತ ತಿಳಿಯಿತು. ಕೂಡಲೇ ಬಾ. ಮಾ ಹರೀಶ್ ಅವರಿಗೆ ತಿಳಿಸಿದೆ, ಅವರು ಬಂದು ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ:  ನಟಿ ವಿಜಯಲಕ್ಷ್ಮಿ ತಾಯಿ ನಿಧನ

    ಸಾಕಷ್ಟು ಹೊಡೆತ ತಿಂದಿದ್ದೇನೆ, ನೀವೆಲ್ಲ ಜೊತೆಗೆ ಇದ್ದೀರಾ. ಅನಾಥ ಆಶ್ರಮಕ್ಕೆ ಕರೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸುತ್ತೇವೆ. ನನ್ನ ಅಕ್ಕ ಉಷಾ ಅವರಿಗೆ ಚಿಕಿತ್ಸೆ ಕೊಡಬೇಕು. ನನ್ನ ಅಕ್ಕನಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ನಾನು ಮಾತನಾಡೋದು ಒರಟು ಅನ್ನಿಸಬಹುದು. ಅಕ್ಕನಿಗೆ ಎಲ್ಲಾ ರೀತಿಯ ಸೇವೆ ನಾನು ಮಾಡುತ್ತಿದ್ದೇನೆ ಎಂದು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:  ಭಾರತ್ ಬಂದ್ ಮಾಡಿದ್ದು ರೈತರಲ್ಲ, ಮಧ್ಯವರ್ತಿಗಳು: ನಾರಾಯಣಗೌಡ

    ಅಮ್ಮ ಬಿಟ್ಟು ಹೋದ ಮೇಲೆ ನಾನು ಬದಲಾಗುತ್ತೇನೆ. ನಾನು ಇನ್ನು ಮುಂದೆ ತಮಿಳುನಾಡಿಗೆ ಹೋಗಲ್ಲ. ಇಲ್ಲೇ ಇರುತ್ತೇನೆ ಇಲ್ಲೇ ಜೀವನ ಸಾಗಿಸುತ್ತೇನೆ. ಅಕ್ಕನಿಗೆ ಸಮಸ್ಯೆ ಆದ ಮೇಲೆ ಅಮ್ಮ ಮಾನಸಿಕವಾಗಿ ನೊಂದಿದ್ದರು. ನೀವೆಲ್ಲಾ ಇದ್ದೀರ, ನಾನು ಧೈರ್ಯವಾಗಿ ಇರುತ್ತೇನೆ ಎಂದು ಹೇಳುತ್ತಾ ತಾಯಿ ಅಗಲಿರುವ ನೋವನ್ನು ಹೇಳಿಕೊಂಡಿದ್ದಾರೆ.

  • ನನ್ನ ಮಗ ಬರ್ತಾನೆ ಬಾಗಿಲು ತೆಗೀರಿ- ಸುರೇಶ್ ಅಂಗಡಿ ತಾಯಿಯ ಕಣ್ಣೀರು

    ನನ್ನ ಮಗ ಬರ್ತಾನೆ ಬಾಗಿಲು ತೆಗೀರಿ- ಸುರೇಶ್ ಅಂಗಡಿ ತಾಯಿಯ ಕಣ್ಣೀರು

    – ದುಃಖದ ಮಡುವಿನಲ್ಲಿ ಮಕ್ಕಳು, ಕುಟುಂಬಸ್ಥರು

    ಬೆಳಗಾವಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್(65) ಅಂಗಡಿಯವರು ವಿಧಿವಶರಾಗಿದ್ದು, ಕುಟುಂಬಸ್ಥರು ತೀವ್ರ ದುಃಖತಪ್ತರಾಗಿದ್ದಾರೆ. ಅವರ ತಾಯಿ, ಪತ್ನಿ ಹಾಗೂ ಮಗಳು ಕಣ್ಣೀರು ಹಾಕುತ್ತಿದ್ದು, ಸಂಬಂಧಿಕರು ಹಾಗೂ ಸ್ನೇಹಿತರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ.

    ಬುಧವಾರ ರಾತ್ರಿ ಸುರೇಶ್ ಅಂಗಡಿಯವರು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಪ್ರಧಾನಿ ಮೋದಿ ಸೇರಿ ದೇಶಾದ್ಯಂತ ಹಲವು ರಾಷ್ಟ್ರೀಯ ಹಾಗೂ ನಾಯಕರು ಕಂಬನಿ ಮಿಡಿದ್ದಾರೆ. ಅವರ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ. ಸುರೇಶ್ ಅಂಗಡಿ ತಾಯಿ ಸೋಮವ್ವ ಅಂಗಡಿಯವರು ತೀವ್ರ ದುಃಖತಪ್ತರಾಗಿದ್ದು, ನನ್ನ ಮಗ ಬರ್ತಾನೆ, ಬಾಗಿಲು ತೆಗೀರಿ ಅವನಿಗೆ ಎನೂ ಆಗಿಲ್ಲ ಎಂದು ರೋಧಿಸುತ್ತಿದ್ದಾರೆ. ಸುರೇಶ್ ಅಂಗಡಿ ಅವರ ತಾಯಿಗೆ ವಯಸ್ಸಾದ ಪರಿಣಾಮ ದೆಹಲಿ ತೆರಳಿಲ್ಲ. ಬೆಳಗಾವಿಯ ಮನೆಯಲ್ಲೇ ಇದ್ದು, ದುಃಖದ ಮಡುವಿನಲ್ಲಿದ್ದಾರೆ.

    ತಂದೆಯನ್ನು ಕಳೆದುಕೊಂಡು ಅವರ ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳು ನೋವಿನಲ್ಲಿದ್ದಾರೆ. ಹಲವು ಸಂಬಂಧಿಕರು ಹಾಗೂ ಸ್ನೇಹಿತರು ಸಹ ಅವರ ಮೆನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ದಾಸ್ತಿಕೊಪ್ಪ, ಇಟಗಿ ಗ್ರಾಮದಿಂದ ಚಿಕ್ಕಮ್ಮಂದಿರು ಸೇರಿದಂತೆ ಅವರ ಸಂಬಂಧಿಕರು ಆಗಮಿಸಿದ್ದು, ಸಂಭದಿಕರ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಸಹೋದರಿ ಸಹ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಹ ಸುರೇಶ್ ಅಂಗಡಿ ನಿವಾಸದ ಬಳಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುತ್ತಿದ್ದಾರೆ.

    ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ. ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದ್ದು, ದೆಹಲಿಯ ದ್ವಾರಕಾ ಸೆಕ್ಟರ್-24 ರಲ್ಲಿ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ತವರು ಕ್ಷೇತ್ರ ಬೆಳಗಾವಿಗೆ ಪಾರ್ಥಿವ ಶರೀರ ಕೊಂಡ್ಯೋಯಲು ಅನುಮತಿ ನೀಡದ ಹಿನ್ನೆಲೆ ದೆಹಲಿಯಲ್ಲೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ವಿಧಿವಶರಾದ ನಂತರ ಮತ್ತೊಂದು ಬಾರಿ ಕೊರೊನಾ ಪಾಸಿಟವ್ ಬಂದ ಹಿನ್ನಲೆಯಲ್ಲಿ ಪಾರ್ಥಿವ ಶರೀರ ಕೊಂಡೊಯ್ಯುವುದು ಬೇಡವೆಂದು ನಿರ್ಧರಿಸಲಾಗಿದೆ. ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ಏಮ್ಸ್ ಆಸ್ಪತ್ರೆಯಲ್ಲೇ ಅಂತಿಮ ದರ್ಶನ ಮಾಡಿದ್ದಾರೆ.

    ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸುರೇಶ ಅಂಗಡಿ ಹಿರಿಯ ಪುತ್ರಿ ಡಾಕ್ಟರ್ ಶೃತಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಹಿನ್ನಲೆಯಲ್ಲಿ ಸಂಜೆಗೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ ಮುಂಬೈ ಮೂಲಕ ದೆಹಲಿಗೆ ತೆರಳಿದ್ದಾರೆ. ಬೆಳಗಾವಿ ಮೂಲಕ ಮುಂಬೈ ನಂತರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಪುತ್ರಿ, ಮೊಮ್ಮಗಳು ಹಾಗೂ ಅಂತ್ಯಕ್ರಿಯೆ ವಿಧಿವಿಧಾನ ನೇರವೇರಿಸವ ಸ್ವಾಮೀಜಿ ಬಾಳಯ್ಯ ದೆಹಲಿಗೆ ತೆರಳಿದ್ದಾರೆ.

  • ಸತ್ತ ಮಗನ ನೆನಪಿನಲ್ಲಿ ಪ್ರತಿನಿತ್ಯ ಉಚಿತವಾಗಿ ಊಟ ದಾನ ಮಾಡುತ್ತಿರುವ ದಂಪತಿ

    ಸತ್ತ ಮಗನ ನೆನಪಿನಲ್ಲಿ ಪ್ರತಿನಿತ್ಯ ಉಚಿತವಾಗಿ ಊಟ ದಾನ ಮಾಡುತ್ತಿರುವ ದಂಪತಿ

    ಮುಂಬೈ: ಮಗನನ್ನು ಕಳೆದುಕೊಂಡ ನಂತರ ಅವನನ್ನು ಪ್ರತಿನಿತ್ಯ ಸ್ಮರಿಸುತ್ತಾ ಆತನ ಹೆಸರಿನಲ್ಲಿ ಹಿರಿಯ ನಾಗರೀಕರಿಗಾಗಿ ಟಿಫಿನ್ ಸೆಂಟರ್ ನಡೆಸುತ್ತಿರೋ ಈ ಮುಂಬೈ ದಂಪತಿ ಪ್ರತಿನಿತ್ಯ ಬಡವರಿಗೆ ಹಾಗೂ ವೃದ್ಧರಿಗೆ ಉಚಿತವಾಗಿ ಆಹಾರವನ್ನು ನೀಡುತ್ತಿದ್ದಾರೆ.

    ಇವರ ಪುತ್ರ ನಿಮೇಶ್ ತನ್ನಾ 2011 ರಲ್ಲಿ ಒಂದು ಸ್ಥಳೀಯ ರೈಲ್ವೇ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮುಂಬೈನಲ್ಲಿ ಮೀಟಿಂಗ್‍ವೊಂದಕ್ಕೆ ತೆರಳುತ್ತಿದ್ದ ವೇಳೆ ಜನಜಂಗುಳಿಯಿದ್ದ ರೈಲನ್ನು ಏರಿ ಸ್ಥಳದಲ್ಲೇ ಸಾವನ್ನಪ್ಪಿದ್ರು.

    ಮಗನ ಸಾವಿನ ನಂತರ ಆತನ ಹೆಸರು ಸದಾ ಕಾಲ ಚಿರಸ್ಮರಣಿಯಾಗಿ ಇರಬೇಕು ಎಂದು ಬಡವರಿಗೆ ಊಟ ಒದಗಿಸುವ ಉದ್ದೇಶದಿಂದ ದಂಪತಿ ಶ್ರೀ ನಿಮೇಶ್ ತನ್ನಾ ಚಾರಿಟೇಬಲ್ ಟ್ರಸ್ಟ್ ಆರಂಭಿಸಿದರು.

    ಮೊದಲು ಸಣ್ಣ ಅಡುಗೆ ಮನೆಯಲ್ಲಿ ಊಟವನ್ನು ತಯಾರಿಸಿಕೊಂಡು ಪ್ರತಿನಿತ್ಯ ಸುಮಾರು 30 ಮಂದಿಗೆ ನೀಡುತ್ತಿದ್ದರು. ಈಗ ಟ್ರಸ್ಟ್ ಅಭಿವೃದ್ಧಿಯಾಗಿ ಸುಮಾರು 7 ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯಕರವಾದ ಆಹಾರವನ್ನು ತಯಾರಿಸಿ ಮುಂಬೈನಲ್ಲಿ ಪ್ರತಿದಿನ 100 ಬಡ ಜನರಿಗೆ ಊಟವನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳಿಗೆ ಉಚಿತವಾಗಿ ಬಟ್ಟೆ, ಪುಸ್ತಕಗಳು ಹಾಗೂ ವೃದ್ಧರಿಗೆ ಔಷಧವನ್ನು ಕೂಡ ನೀಡುತ್ತಿದ್ದಾರೆ.

    https://www.youtube.com/watch?v=qG0_SPfmp_U