Tag: ದೀಪಿಕಾ

  • ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್‌ಗಳನ್ನು ನೋಡಿದಾಗ ಮತ್ತೆ ಬದುಕಿದಂತಾಯ್ತು: ವಿದ್ಯಾರ್ಥಿನಿ

    ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್‌ಗಳನ್ನು ನೋಡಿದಾಗ ಮತ್ತೆ ಬದುಕಿದಂತಾಯ್ತು: ವಿದ್ಯಾರ್ಥಿನಿ

    ಬೆಂಗಳೂರು: ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಯಿಂದ ಪುಟ್ಟ ರಾಷ್ಟ್ರ ಉಕ್ರೇನ್ ಕಂಗೆಟ್ಟಿದ್ದು, ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ತೆರಳಿದ ವಿದ್ಯಾರ್ಥಿಗಳು ಜೀವ ಭಯದಲ್ಲಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ತಮ್ಮ ತಾಯ್ನಾಡಿಗೆ ಕರೆದುಕೊಂಡು ಬರುವಲ್ಲಿ ಸತತ ಪ್ರಯತ್ನ ನqಯುತ್ತಿದ್ದು, ಈಗಾಗಲೇ ಹಲವಾರು ಮಂದಿ ವಾಪಸ್ಸಾಗಿದ್ದು, ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೆಯೇ ವಿದ್ಯಾರ್ಥಿನಿಯೊಬ್ಬಳು ತಮ್ಮ ದೇಶದ ಧ್ವಜ ಇರುವ ಬಸ್ ಕಂಡಾಗ ಆದ ಸಂತಸವನ್ನು ಶೇರ್ ಮಾಡಿಕೊಂಡಿದ್ದಾಳೆ.

    ಹೌದು. ಉಕ್ರೇನ್ ನಿಂದ ವಾಪಾಸ್ ಆದ ವಿದ್ಯಾರ್ಥಿನಿ ದೀಪಿಕಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಮ್ಮ ಹತ್ತಿರದ ಸಿಟಿಗಳಲ್ಲಿ ಬಾಂಬ್ ಬ್ಲಾಸ್ಟ್ ಆಗ್ತಿದ್ರಿಂದ ಭಯ ಆಗಿತ್ತು. ನಿರಂತರವಾಗಿ ನಾವು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೆವು. ಯಾವಾಗ ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್ಸುಗಳನ್ನ ನೋಡಿದ್ವೋ ಮತ್ತೆ ಬದುಕಿದಂತಾಯ್ತು. ನಮ್ಮ ದೇಶಕ್ಕೆ ಬಂದ ಕೂಡಲೇ ನಮ್ಮ ತಾಯಿಯನ್ನ ನೋಡಿದಂತಾಯ್ತು ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಒಂದು ಯುದ್ಧದಿಂದ ತಪ್ಪಿಸಿಕೊಂಡು ಉಕ್ರೇನ್‍ಗೆ ಬಂದ್ರೆ ಇನ್ನೊಂದು ಯುದ್ಧ ಪ್ರಾರಂಭವಾಗಿದೆ: ಅಫ್ಘಾನ್ ನಿವಾಸಿ

    ಅಲ್ಲಿದ್ದಾಗ ತುಂಬಾ ಭಯ ಆಗ್ತಿತ್ತು. ಏನ್ ಮಾಡೋದು ಗೊತ್ತಾಗ್ತಿರಲಿಲ್ಲ. ಅಲ್ಲಿನ ನಿವಾಸಿಗಳನ್ನ ಕೇಳಿದಾಗ ಏನೂ ಆಗಲ್ಲ ಅಂತ ಧೈರ್ಯ ಹೇಳುತ್ತಿದ್ದರು. ಯಾವಾಗ ಯುದ್ಧ ಆಗುತ್ತೆ ಅನ್ನೋದು ಪಕ್ಕಾ ಆಯ್ತೋ ಟಿಕೆಟ್ ಬುಕ್ ಮಾಡೋಕೆ ಹೊದೆವು. ಎಲ್ಲರೂ ಟಿಕೆಟ್ ಬುಕ್ ಮಾಡೋಕೆ ಶುರು ಮಾಡಿದ್ರಿಂದ ಟಿಕೆಟ್ ದರ ಸಹ ಸಿಕ್ಕಾಪಟ್ಟೆ ಜಾಸ್ತಿ ಆಯ್ತು. ಮತ್ತೆ ನಾವು ಬದುಕಿ ಬರ್ತೀವೋ, ಇಲ್ಲವೋ ಅನ್ನೋ ಭಯ ಶುರುವಾಗಿತ್ತು. 2014 ರಲ್ಲೂ ಇದೇ ದರ ಯುದ್ಧ ಭಯ ಇತ್ತಂತೆ. ಏನೂ ಆಗಲ್ಲ ಅಂತ ಅಲ್ಲಿನ ಜನ ನಮಗೆ ಧೈರ್ಯ ಹೇಳುತ್ತಿದ್ದರು ಎಂದು ತಮಗಾದ ಭೀಕರ ಅನುಭವವನ್ನು ದೀಪಿಕಾ ಬಿಚ್ಚಿಟ್ಟಳು. ಇದನ್ನೂ ಓದಿ: ಉಕ್ರೇನ್‍ಗೆ 65 ಕೋಟಿ ದೇಣಿಗೆ ನೀಡಿದ ಜಪಾನ್ ಉದ್ಯಮಿ

    ಉಕ್ರೇನ್ ಸರ್ಕಾರ ಉಳಿಯುತ್ತೆ ಅನ್ನೋ ವಿಶ್ವಾಸ ಇದೆ. ನಮ್ಮ ವಿದ್ಯಾಭ್ಯಾಸ ಮುಂದುವರಿಸಬೇಕು. ಅದಷ್ಟು ಬೇಗ ಎಲ್ಲ ಸರಿಹೋಗಬೇಕು. ಒಂದಿಬ್ಬರು ಮಾತ್ರ ಉಕ್ರೇನ್ ಗೆ ಹೋಗಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಉಕ್ರೇನ್ ಮೇಲಿದೆ. ಮತ್ತೆ ಎಲ್ಲ ಸರಿಹೋಗಿ ನಾವು ನಮ್ಮ ವಿದ್ಯಾಭ್ಯಾಸ ಮುಂದುವರಿಸುವುದಾಗಿ ಅವರು ತಿಳಿಸಿದಳು. ಇದನ್ನೂ ಓದಿ: ಮೋದಿ ಜೀ, ಯೋಗಿ ಜೀ ಯಾರಿದ್ದೀರಿ..? ಪ್ಲೀಸ್ ನಮ್ಮನ್ನು ಕಾಪಾಡಿ- ಯುಪಿ ವಿದ್ಯಾರ್ಥಿನಿ ಅಳಲು

  • ‘ನನ್ನ ತೋಳುಗಳು ನಿನಗೆ ಮನೆಯಾಗಿರುತ್ತೆ’ -ಪ್ರಿಯಕರನೊಂದಿಗೆ ‘ಕುಲವಧು’ ನಟಿ ನಿಶ್ಚಿತಾರ್ಥ

    ‘ನನ್ನ ತೋಳುಗಳು ನಿನಗೆ ಮನೆಯಾಗಿರುತ್ತೆ’ -ಪ್ರಿಯಕರನೊಂದಿಗೆ ‘ಕುಲವಧು’ ನಟಿ ನಿಶ್ಚಿತಾರ್ಥ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಪಾತ್ರದಲ್ಲಿ ನಟಿಸುತ್ತಿರುವ ದೀಪಿಕಾ ತಮ್ಮ ಪ್ರಿಯಕರನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ನಿಶ್ಚಿತಾರ್ಥದ ಬಗ್ಗೆ ಸ್ವತಃ ದೀಪಿಕಾ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

    ದೀಪಿಕಾ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಕ್ಕು ಆಕರ್ಶ್ ಅವರನ್ನು ಬಹಳ ದಿನದಿಂದಲೂ ಪ್ರೀತಿ ಮಾಡುತ್ತಿದ್ದರು. ಈಗ ಅವರು ಅಕ್ಕು ಆಕರ್ಶ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    AKARSHADEEPA ????…..❤❤❤@akku_akarsh_official

    A post shared by Dhanya (deepika) (@dhanya_deepika_official) on

    ನಿಶ್ಚಿತಾರ್ಥ ಫೋಟೋ ಹಾಕಿ ದೀಪಿಕಾ ಅದಕ್ಕೆ, “ನಮ್ಮ ಲವ್ ಸ್ಟೋರಿಯ ಉತ್ತಮ ಭಾಗವೆಂದರೆ ಅದು ನನ್ನ ಹಾಗೂ ನಿಮ್ಮ ಹೃದಯದ ನಿಶ್ಚಿತಾರ್ಥ. ನಾನು ನಿಮ್ಮನ್ನು ಮೊದಲನೇ ಬಾರಿ ನೋಡಿದ್ದಾಗ ಪ್ರೀತಿಸಲು ಶುರು ಮಾಡಿದೆ. ನಾನು ನಿಮ್ಮನ್ನು ಪ್ರೀತಿಸುವ ವಿಷಯ ಮೊದಲೇ ಗೊತ್ತಿದ್ದರಿಂದ ನೀವು ಮುಗುಳು ನಕ್ಕಿದ್ದೀರಿ. ನೀವು ಎಲ್ಲ ಸಮಯದಲ್ಲೂ ನನ್ನ ಜೊತೆಯಲ್ಲಿ ಇದ್ದೀರಾ. ನಾನು ನಿಮಗೆ ಒಳ್ಳೆಯ ಜೀವನ ಸಂಗಾತಿ ಆಗಿ ಇರುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ದೀಪಿಕಾ ಅಲ್ಲದೆ ಅಕ್ಕು ಆಕರ್ಶ್ ಕೂಡ, “ಹೌದು. ನಾವು ಈಗ ಎಂಗೇಜ್ ಆಗಿದ್ದೇವೆ. ಇದು ನಾವಿಬ್ಬರು ಜೊತೆಯಲ್ಲಿ ಇರುವ ಮೊದಲ ನೆನಪು ಹಾಗೂ ಆ ಉಂಗುರದ ಜೊತೆ ನಾನು ನನ್ನ ಹೃದಯವನ್ನು ನಿನಗೆ ನೀಡಿದ್ದೇನೆ. ನೀನು ಎಂದಿಗೂ ಒಬ್ಬಂಟಿಯಾಗಿ ನಡೆಯಲು ನಾನು ಬಿಡುವುದಿಲ್ಲ. ನನ್ನ ಹೃದಯ ನಿನಗೆ ನೆರಳಾಗಿ ಇರುತ್ತದೆ. ನನ್ನ ತೋಳುಗಳು ನಿನಗೆ ಮನೆಯಾಗಿಯಾಗಿ ಇರುತ್ತದೆ. ನಿನ್ನ ಜೊತೆ ಇಡೀ ಜೀವನ ಕಳೆಯಲು ನಾನು ಅದೃಷ್ಟ ಮಾಡಿದೆ” ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    I love u because I know no matter what happens, u’ll always love me back ❤️♥️❤️♥️❤️

    A post shared by Akarsh (@akku_akarsh_official) on

    ಈ ಹಿಂದೆ ದೀಪಿಕಾ “ಇದು ನಮ್ಮಿಬ್ಬರ ಮೊದಲ ಫೋಟೋವಾಗಿದ್ದು, ಇವರ ಜೊತೆ ಏಳು ಜನ್ಮದಲ್ಲೂ ಏಳು ಹೆಜ್ಜೆಗಳನ್ನು ಇಡುತ್ತೇನೆ” ಎಂದು ಬರೆದು ತಮ್ಮ ಮತ್ತು ಅಕ್ಕು ಆಕರ್ಶ್ ಪೇಂಟಿಂಗ್ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಇನ್ನೊಂದು ಫೋಟೋ ಪೋಸ್ಟ್ ಮಾಡಿ ಅದರಲ್ಲಿ “ನೀನು ನನಗೆ ಪ್ರತಿದಿನದ ಸೂರ್ಯ ಇದ್ದಂತೆ. ನನ್ನ ಹೃದಯ ನಿನಗೆ ಸೋತಿದೆ” ಎಂದು ಹೇಳಿಕೊಂಡಿದ್ದರು.

  • ‘ಮಿಸ್ ಸೌತ್ ಇಂಡಿಯಾ’ ಕಿರೀಟ ಗೆದ್ದ ಕುಲವಧು ಧನ್ಯಾ

    ‘ಮಿಸ್ ಸೌತ್ ಇಂಡಿಯಾ’ ಕಿರೀಟ ಗೆದ್ದ ಕುಲವಧು ಧನ್ಯಾ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ಇತ್ತೀಚೆಗಷ್ಟೆ ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

    ನಟಿ ದೀಪಿಕಾ ಅವರು ಈ ಬಗ್ಗೆ ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ತಾವು ವಿನ್ನರ್ ಆದ ತಕ್ಷಣದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮತ್ತು ತಮ್ಮ ಗೆಳೆಯನಿಗೆ ಧನ್ಯವಾದ ತಿಳಿಸಿದ್ದಾರೆ.

    “ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದರಲ್ಲೂ ನಾನು ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ಗೆದ್ದಿದ್ದಕ್ಕೆ ತುಂಬಾ ಖುಷಿಯಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ವೇದಿಕೆ ಮೇಲೆ ರ‍್ಯಾಂಪ್‌ ಮಾಡಲು ನನಗೆ ಆತ್ಮವಿಶ್ವಾಸ ತುಂಬಿದ ಹಾಗೂ ಎಲ್ಲ ಹಂತದಲ್ಲೂ ಸಪೋರ್ಟ್ ಮಾಡಿದ ಅಭಿಮಾನಿಗಳಿಗೆ ಧನ್ಯವಾದಗಳು” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಅಷ್ಟೇ ಅಲ್ಲದೆ “ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಜೀವನದ ವಿಶೇಷ ವ್ಯಕ್ತಿಗೆ ಧನ್ಯವಾದಗಳು ಎಂದು ತಮ್ಮ ಗೆಳೆಯ ಆಕರ್ಶ್ ಅವರಿಗೆ ಸಮರ್ಪಿಸಿದ್ದಾರೆ. ನಿಮ್ಮ ಬೆಂಬಲ ಇಲ್ಲದಿದ್ದರೆ ನನ್ನಿಂದ ಈ ಗೆಲವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಸಹಕಾರದಿಂದಲೇ ಈ ಸಾಧನೆ ಮಾಡಿದ್ದೇನೆ” ಧನ್ಯವಾದಗಳು ಮೈ ಸ್ವೀಟ್ ಎಂದು ಹೇಳಿಕೊಂಡಿದ್ದಾರೆ.

    https://www.instagram.com/p/By7NJYNgvw4/

    ಇತ್ತೀಚೆಗಷ್ಟೆ ದೀಪಿಕಾ ತಮ್ಮ ಗೆಳೆಯನನ್ನು ಪರಿಚಯಿಸಿದ್ದರು. ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಕ್ಕು ಅಕರ್ಶ್ ಅವರನ್ನು ದೀಪಿಕಾ ಬಹಳ ದಿನದಿಂದಲೂ ಪ್ರೀತಿ ಮಾಡುತ್ತಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪ್ರಿಯಕರನೊಂದಿಗೆ 7 ಹೆಜ್ಜೆ ಇಡಲು ಸಿದ್ಧರಾದ ‘ಕುಲವಧು’ ಧನ್ಯಾ

    ಪ್ರಿಯಕರನೊಂದಿಗೆ 7 ಹೆಜ್ಜೆ ಇಡಲು ಸಿದ್ಧರಾದ ‘ಕುಲವಧು’ ಧನ್ಯಾ

    ಬೆಂಗಳೂರು: ಇತ್ತೀಚೆಗೆ ಕಿರುತೆರೆಯ ನಟಿಯರು ದಾಪಂತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ‘ಕುಲವಧು’ ಧಾರಾವಾಹಿಯ ಪಾತ್ರಧಾರಿ ವಚನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇದೇ ಸೀರಿಯಲ್‍ನ ಧನ್ಯಾ ಕೂಡ ಸಪ್ತಪದಿ ತುಳಿಯಲು ತಯಾರಾಗಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಪಾತ್ರಧಾರಿ ದೀಪಿಕಾ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ತಾವೂ ಪ್ರೀತಿಸುತ್ತಿರುವ ಹುಡುಗ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

    https://www.instagram.com/p/Bw_zumDAKvE/

    ದೀಪಿಕಾ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಕ್ಕುಅಕರ್ಶ್ ಅವರನ್ನು ಬಹಳ ದಿನದಿಂದಲೂ ಪ್ರೀತಿ ಮಾಡುತ್ತಿದ್ದಾರೆ. ಈ ಬಗ್ಗೆ ದೀಪಿಕಾ “ಇದು ನಮ್ಮಿಬ್ಬರು ಮೊದಲು ಫೋಟೋವಾಗಿದ್ದು, ಇವರ ಜೊತೆ ಏಳು ಜನ್ಮದಲ್ಲೂ ಏಳು ಹೆಜ್ಜೆಗಳನ್ನು ಇಡುತ್ತೇನೆ” ಎಂದು ಬರೆದು ತಮ್ಮ ಮತ್ತು ಅಕ್ಕು ಅಕರ್ಶ್ ಪೇಂಟಿಂಗ್ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

    ಇನ್ನೊಂದು ಫೋಟೋ ಪೋಸ್ಟ್ ಮಾಡಿ ಅದರಲ್ಲಿ “ನೀನು ನನಗೆ ಪ್ರತಿದಿನದ ಸೂರ್ಯ ಇದ್ದಂತೆ. ನನ್ನ ಹೃದಯ ನಿನಗೆ ಸೋತಿದೆ” ಎಂದು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ದೀಪಿಕಾ ‘ಕುಲವಧು’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

    https://www.instagram.com/p/BxAp0MuAF5V/

  • ಕರ್ಣಿ ಸೇನೆಯ ಬೆದರಿಕೆಗೆ ದೀಪಿಕಾ ಹೇಳಿದ್ದು ಹೀಗೆ!

    ಕರ್ಣಿ ಸೇನೆಯ ಬೆದರಿಕೆಗೆ ದೀಪಿಕಾ ಹೇಳಿದ್ದು ಹೀಗೆ!

    ಮುಂಬೈ: ಪದ್ಮಾವತಿ ಚಿತ್ರ ಶುರುವಾದಗಿಂದ ಸಾಕಷ್ಟು ತೊಂದರೆಗಳನ್ನು ಎದರಿಸುತ್ತಾ ಬರುತ್ತಿದೆ. ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಪದ್ಮಾವತಿ ಚಿತ್ರ ಸಾಕಷ್ಟು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ರಜಪೂತ ಕರ್ಣಿ ಸೇನಾ ಈ ಮೊದಲು ಜನವರಿ ತಿಂಗಳಲ್ಲಿ ಚಿತ್ರದ ಸೆಟ್ ಮೇಲೆ ದಾಳಿ ನಡೆಸಿದ್ದರು. ಆದರೆ ಈಗ ಹಲವಾರು ಸಂಘಟನೆಗಳಿಂದ ದೀಪಿಕಾ ಅವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ.

    ರಜಪೂತರು ಯಾವತ್ತೂ ಹೆಣ್ಣಿನ ಮೇಲೆ ಕೈ ಮಾಡುವುದಿಲ್ಲ. ಆದರೆ ಸಂದರ್ಭ ಬಂದಾಗ ಲಕ್ಷ್ಮಣ ಶೂರ್ಪಣಕಿಗೆ ಮಾಡಿದ ರೀತಿಯನ್ನು ನಾವು ದೀಪಿಕಾಗೆ ಮಾಡಬೇಕಾಗುತ್ತದೆ ಎಂದು ರಜಪೂತ್ ಕರ್ಣಿ ಸೇನೆಯ ಮಹಿಪಾಲ್ ಸಿಂಗ್ ಮಕ್ರಾನಾ ತಿಳಿಸಿದ್ದಾರೆ.

    ಇನ್ನೊಂದಡೆ ರಜಪೂತ್ ಸಮುದಾಯದ ಹಿರಿಯ ನಾಯಕರಾದ ಲೋಕೆಂದ್ರ ಸಿಂಗ್ ಕಾಲ್ವಿ ಅವರು ಡಿಸೆಂಬರ್ 1 ರಂದು ಭಾರತ್ ಬಂದ್ ಗೆ ಕರೆ ನೀಡಿದ್ದಾರೆ. ನಾವು ಲಕ್ಷಾಂತರ ಮಂದಿ ಸೇರುತ್ತೇವೆ. ನಮ್ಮ ಪೂರ್ವಜರು ಈ ಇತಿಹಾಸವನ್ನು ರಕ್ತದಲ್ಲಿ ಬರೆದಿದ್ದರು. ನಾವು ಈ ಇತಿಹಾಸಕ್ಕೆ ಮಸಿ ಬಳಿಯುವಂತಹ ಕೆಲಸವನ್ನು ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

    ಇನ್ನೂ ಮೀರತ್ ನ ನಾಯಕರದ ಠಾಕೂರ್ ಅಭೀಷೇಕ್ ಸೋಮ್ ಅವರು ದೀಪಿಕಾ ತಲೆಯನ್ನು ತೆಗೆಯುವರಿಗೆ 5 ಕೋಟಿ ರೂ. ನೀಡುತ್ತೇವೆ ಎಂದು ಹೇಳಿದ್ದಾರೆ ಅಂತ ವರದಿಯಾಗಿದೆ.

    ಈ ಎಲ್ಲಾ ಸುದ್ದಿ ಹಾಗೂ ಬೆದರಿಕೆಗಳಿಗೆ ಪ್ರತಿಕ್ರಿಯಿಸಿದ ದೀಪಿಕಾ ಈ ಸಂದರ್ಭದಲ್ಲಿ ನಾನು ಒಬ್ಬ ಹೆಣ್ಣಾಗಿ, ಕಲಾವಿದೆಯಾಗಿ ಹಾಗೂ ದೇಶದ ಪ್ರಜೆಯಾಗಿ ನಾನು ಕೋಪಗೊಂಡಿದ್ದೇನೆ, ನಿರಾಶಿತಳಾಗಿದ್ದೇನೆ. ನಾನು ಈಗ ಯಾರಿಗೂ ಹೆದರುವುದಿಲ್ಲ. ಭಯ ಎಂಬ ಭಾವನೆ ನನಲ್ಲಿ ಇಲ್ಲ. ನಾನು ಅದನ್ನು ಗುರುತಿಸುವುದಿಲ್ಲ ಎಂದು ದೀಪಿಕಾ ಪ್ರತಿಕ್ರಿಯಿಸಿದ್ದಾರೆ.

    ಚಿತ್ರವನ್ನು ನೋಡದೇ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡಿದ ನಾನು ಹೇಳುತ್ತಿದ್ದೇನೆ, ಈ ಚಿತ್ರವನ್ನು ನೋಡಿದ ಮೇಲೆ ಪ್ರತಿಯೊಬ್ಬ ಭಾರತಿಯರು ಹೆಮ್ಮೆ ಪಡುತ್ತಾರೆ. ರಾಣಿ ಪದ್ಮಾವತಿ ಜೀವನ ಪಯಣವನ್ನು ತೋರಿಸುತ್ತಿದ್ದಕ್ಕೆ ನಮಗೆ ಖುಷಿಯಾಗುತ್ತಿದೆ. ಆಕೆಯ ಜೀವನ ಚರಿತ್ರೆಯನ್ನು ಭಾರತದಲ್ಲದೇ ಇಡೀ ವಿಶ್ವಕ್ಕೆ ತಿಳಿಸಬೇಕು ಎಂದು ದೀಪಿಕಾ ತಿಳಿಸಿದ್ದಾರೆ.

     

  • `ಪದ್ಮಾವತಿ’ ಲೆಹೆಂಗಾದ ತೂಕ ಕೇಳಿದರೆ ಶಾಕ್ ಆಗ್ತೀರಿ!

    `ಪದ್ಮಾವತಿ’ ಲೆಹೆಂಗಾದ ತೂಕ ಕೇಳಿದರೆ ಶಾಕ್ ಆಗ್ತೀರಿ!

    ಮುಂಬೈ: ಮೀರಾತ್ ರಾಣಿ ಪದ್ಮಿನಿಯಾಗಿ ಅಭಿನಯಿಸಿರುವ `ಪದ್ಮಾವತಿ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಬರೋಬ್ಬರಿ 30 ಕೆ.ಜಿ ತೂಕದ ಲೆಹೆಂಗಾ ಧರಿಸಿ ಮಿಂಚಿಸಿದ್ದಾರೆ.

    ಐತಿಹಾಸಿಕ ಕಥೆಯನ್ನು ಹೊಂದಿರುವುದರಿಂದ ಪಾತ್ರಕ್ಕೆ ತಕ್ಕಂತೆ ವಸ್ತ್ರ ಮತ್ತು ಆಭರಣಗಳನ್ನು ವಿನ್ಯಾಸ ಮಾಡಲಾಗಿದೆ. ದೀಪಿಕಾ ಧರಿಸಿರುವ ಲೆಹೆಂಗಾವನ್ನು ಜರತಾರಿ ರೇಷ್ಮೆ ಬಟ್ಟೆಯಲ್ಲಿ ಕಸೂತಿ ಮಾಡಲಾಗಿದ್ದು, ಲೆಹೆಂಗಾ 26 ಕೆಜಿ ತೂಕ ಇದ್ದು, ಅದರ ದುಪಟ್ಟ 4 ಕೆಜಿ ಇದೆ. ದೀಪಿಕಾ ಅವರು ಧರಿಸಿರುವ ಆಭರಣಗಳು ಹೊರತುಪಡಿಸಿ ಇದೊಂದೇ ಸುಮಾರು 30 ಕೆಜಿಯಷ್ಟು ತೂಕವನ್ನು ಹೊಂದಿದೆ.

    ದಿಪೀಕಾ ಇಷ್ಟು ತೂಕದ ಉಡುಪನ್ನು ಧರಿಸಿ ಅಭಿನಯಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ರಾಮ್‍ಲೀಲಾ ಸಿನಿಮಾದಲ್ಲೂ ಸುಮಾರು 30 ಕೆಜಿ ಮತ್ತು ಬಾಜಿರಾವ್ ಮಸ್ತಾನಿ ಸಿನಿಮಾದಲ್ಲೂ 20 ಕೆ.ಜಿ ತೂಕದ ಉಡುಪನ್ನು ಧರಿಸಿದ್ದರು.

    ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ ದೇವದಾಸ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಅವರು 30 ಕೆಜಿ ತೂಕದ ಉಡುಪನ್ನು ಧರಿಸಿದ್ದರು. ಅನುಷ್ಕ ಶರ್ಮಾ ಅವರು `ಏ ದಿಲ್ ಹೈ ಮುಷ್ಕೀಲ್’ ಸಿನಿಮಾದ ಹಾಡೊಂದರಲ್ಲಿ 20 ಕೆ.ಜಿ ತೂಕದ ಲೆಹೆಂಗಾವನ್ನು ಧರಿಸಿದ್ದರು.

    ದೀಪಿಕಾ ಧರಿಸಿರುವ ಲೆಹೆಂಗಾವನ್ನು ಡಿಸೈನರ್ ರಿಮ್ಮಲ್ ತಯಾರಿಸಿದ್ದು, ಬಹಳಷ್ಟು ಮುತ್ತು, ರತ್ನ ಹಾಗೂ ಹವಳದಿಂದ ಕಸೂತಿ ಮಾಡಿ ಸಿದ್ಧಪಡಿಸಲಾಗಿದೆ. ರಾಜಸ್ಥಾನಿ ಆಭರಣಗಳನ್ನು ಅಲಂಕರಿಸಿ ಸಂಪೂರ್ಣ ರಜಪೂತ ಯುಗದ ಸೌಂದರ್ಯವನ್ನು ಮರಳಿ ತಂದಿರುವಂತೆ ವಿನ್ಯಾಸಗೊಳಿಸಲಾಗಿದೆ. ದೀಪಿಕಾ ಧರಿಸಿರುವ ಆಭರಣವನ್ನು 200 ಮಂದಿ ಸೇರಿ ಬರೋಬ್ಬರಿ 600 ದಿನಗಳನ್ನು ತೆಗೆದುಕೊಂಡು ಸಿದ್ಧ ಪಡಿಸಿದ್ದಾರೆ.

    ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರು ರಾಣಿ ಪದ್ಮಿನಿ (ಪದ್ಮಾವತಿ)ಯನ್ನು ಇಷ್ಟ ಪಟ್ಟಿದ್ದ. ಹೀಗಾಗಿ ರಾಣಿಯನ್ನು ಒಲಿಸಿಕೊಳ್ಳಲು ಚಿತ್ತೂರು ಕೋಟೆಗೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದ. ಅದರಂತೆ 1303ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರು ಕೋಟೆಗೆ ದಾಳಿ ನಡೆಸಿ ಗುಹಿಲಾ ರತ್ನಸಿಂಹ (ರಾಜಾ ರತನ್ ಸಿಂಗ್) ನನ್ನು ಬಂಧಿಸಿ 8 ತಿಂಗಳು ಸೆರೆಯಲ್ಲಿಟ್ಟಿದ್ದ. ಆದರೆ ಅಲ್ಲಾವುದ್ದೀನ್‍ನಿಂದ ತಪ್ಪಿಸಿಕೊಳ್ಳಲು ರಾಣಿ ಪದ್ಮಿನಿ (ಪದ್ಮಾವತಿ) ಜೋಹರ್(ಸತಿ ಸಹಗಮನನ ಪದ್ದತಿ) ಮೂಲಕ ತನ್ನ ಪ್ರಾಣವನ್ನು ಕಳೆದುಕೊಳ್ಳುವ ಕಥೆಯನ್ನು ಚಿತ್ರ ಹೊಂದಿದೆ.

    ಪದ್ಮಾವತಿ ಚಿತ್ರದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ರಾಣಾ ರತನ್ ಸಿಂಗ್ ಆಗಿ ಶಾಹಿದ್ ಕಪೂರ್, ಅಲ್ಲಾವುದ್ದೀನ್ ಖಿಲ್ಜಿ ಆಗಿ ರಣ್‍ವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿದ್ದು, ಡಿಸೆಂಬರ್ 1 ರಂದು ಬಿಡುಗಡೆ ಆಗಲಿದೆ.

    https://www.instagram.com/p/BaOeI90lkck/?hl=en&tagged=padmavati

    https://www.instagram.com/p/BaOD5GSAoFb/?hl=en&tagged=padmavati

    https://www.instagram.com/p/BaOAk3RAc6P/?hl=en&tagged=padmavati

    https://www.instagram.com/p/BaNP2geFZm-/?hl=en&tagged=padmavati

    https://www.instagram.com/p/BZ6EdyZgphe/?hl=en&taken-by=tanishqjewellery

    https://www.instagram.com/p/BZx_fEtgErC/?hl=en&taken-by=tanishqjewellery

    https://www.youtube.com/watch?v=HYGgAHo186s

  • ಪದ್ಮಾವತಿಗಾಗಿ ಕತ್ತಿ ವರಸೆ ಕಲಿಯುತ್ತಿರುವ ಶಾಹೀದ್ ಕಪೂರ್-ಫೋಟೋಗಳು ಲೀಕ್

    ಪದ್ಮಾವತಿಗಾಗಿ ಕತ್ತಿ ವರಸೆ ಕಲಿಯುತ್ತಿರುವ ಶಾಹೀದ್ ಕಪೂರ್-ಫೋಟೋಗಳು ಲೀಕ್

    ಮುಂಬೈ: ಬಾಲಿವುಡ್‍ನ ನಟ ಶಾಹೀದ್ ಕಪೂರ್ `ಪದ್ಮಾವತಿ’ ಸಿನಿಮಾಕ್ಕಾಗಿ ಕತ್ತಿ ಹೋರಾಟದ ತರಬೇತಿಯಲ್ಲಿ ಪಡೆಯುತ್ತಿದ್ದು, ಅದರ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಹೌದು, ಬಾಲಿವುಡ್‍ನ ನಟರಾದ ಶಾಹೀದ್ ಕಪೂರ್, ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯಿಸುತ್ತಿರುವ ಸಿನಿಮಾ `ಪದ್ಮಾವತಿ’. ಈ ಸಿನಿಮಾದಲ್ಲಿ ಶಾಹೀದ್ ಕಪೂರ್ ರಾಜ ರಾವತ್ ರತನ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಕತ್ತಿ ವರಸೆಯನ್ನು ಕಲಿಯುತ್ತಿದ್ದಾರೆ.

    ಶಾಹೀದ್ ಈ ಪಾತ್ರಕ್ಕಾಗಿ 6 ವಿಭಿನ್ನ ರೂಪದ ಕತ್ತಿ ವರಸೆಗಳನ್ನು ಅದರಲ್ಲೂ 6 ವಿವಿಧ ತರಬೇತುದಾರರಿಂದ ಕಲಿಯುತ್ತಿದ್ದಾರೆ. “ರಜಪೂತ ಶೈಲಿಯಲ್ಲಿ ಕತ್ತಿವರಸೆ ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಅವರ ದೇಹವು ಕೂಡ ಬಲಿಷ್ಠವಾಗುತ್ತಿದೆ. ಶಾಹೀದ್ ಗಟ್ಕಾ, ಅಂಗಾಂಪೋರಾ, ಕಳರಿಪಯಟ್ಟು ಹಾಗೂ ಸ್ಪೀರ್‍ಪ್ಲೇ ವರಸೆಗಳನ್ನು ಕಲಿಯುತ್ತಿದ್ದಾರೆ.

    `ಪದ್ಮಾವತಿ’ ಸಿನಿಮಾ ರಾಜಸ್ಥಾನದ ರಾಣಿ ಪದ್ಮಾವತಿಯ ಐತಿಹಾಸಿಕ ಕಥಾಹಂದರವುಳ್ಳ ಭಾರತೀಯ ನಾಟಕ ಆಧಾರಿತ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ರಾಣಿ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ, ರಾಜ ರಾವತ್ ರತನ್ ಸಿಂಗ್ ಪಾತ್ರದಲ್ಲಿ ಶಾಹೀದ್ ಕಪೂರ್ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ.

    https://www.instagram.com/p/BZJV2T3HGXk/?taken-by=pyarshasha

    https://www.instagram.com/p/BYYk5wKHHkF/?taken-by=pyarshasha

    https://www.instagram.com/p/BY0eP54nm6j/?taken-by=pyarshasha

    https://www.instagram.com/p/BZKtvk-HTZ2/?taken-by=circleofbollywood

    https://www.instagram.com/p/BZJuZH2Bfb-/?taken-by=shahidkapoor_f.c

    https://www.instagram.com/p/BZJpIn2Bomi/?taken-by=shahidkapoor_f.c

    https://www.instagram.com/p/BZJwrrqhIKR/?taken-by=shahidkapoor_f.c

    https://www.instagram.com/p/BZJ5MUxgND-/?taken-by=bollywood_by_karak

    https://www.instagram.com/p/BY8KTv0HTwh/?taken-by=pyarshasha

    https://www.instagram.com/p/BXKYvTbgLdc/?taken-by=shahidkapoor

    https://www.instagram.com/p/BXk42xHAdVA/?taken-by=shahidkapoor