Tag: ದೀಪಾವಳಿ ರೆಸಿಪಿ

  • ದೀಪಾವಳಿ ಸ್ಪೆಷಲ್- ಗೋಧಿ ಹಲ್ವಾ, ಕಜ್ಜಾಯ ಮಾಡುವ ವಿಧಾನ

    ದೀಪಾವಳಿ ಸ್ಪೆಷಲ್- ಗೋಧಿ ಹಲ್ವಾ, ಕಜ್ಜಾಯ ಮಾಡುವ ವಿಧಾನ

    ದೀಪಾವಳಿ ಸಂಭ್ರಮಾಚರಣೆ ಎಲ್ಲೆಡೆ ಮನೆಮಾಡಿದೆ. ದೀಪಾವಳಿ ಹಬ್ಬಕ್ಕೆ ರುಚಿಯಾಗಿರುವ ಸಿಹಿತಿಂಡಿ ಇಲ್ಲ ಅಂದ್ರೆ ಹೇಗೆ ಹಬ್ಬ ಎನ್ನಿಸಿಕೊಳ್ಳುತ್ತದೆ. ಈ ರುಚಿಯಾದ ಎರಡು ಸ್ವೀಟ್ ಮಾಡುವುದರೊಂದಿಗೆ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ.

    ಗೋಧಿ ಹಲ್ವಾ/ ಗೋಧಿ ಹಾಲುಬಾಯಿ

    ಬೇಕಾಗುವ ಸಾಮಗ್ರಿಗಳು:
    * ನೆನಸಿಟ್ ಗೋಧಿ- 1 ಕಪ್
    * ನೀರು- 3 ಕಪ್
    * ಬೆಲ್ಲದ ಪುಡಿ-1 ಕಪ್ ಬೆಲ್ಲ
    * ಏಲಕ್ಕಿ- 4
    * ಪಿಂಚ್ ಕೇಸರಿ – ಅದನ್ನು 2 ಟೀಸ್ಪೂನ್ ನೀರಿನಲ್ಲಿ ನೆನೆಸಿಟ್ಟಿರಬೇಕು
    * ಕತ್ತರಿಸಿದ ಗೋಡಂಬಿ ತುಂಡುಗಳು – 2 ಟೀ ಸ್ಪೂನ್
    * ತೆಂಗಿನ ಎಣ್ಣೆ ಅಥವಾ ತುಪ್ಪ – 3 ರಿಂದ 3.5 ಟೀ ಸ್ಪೂನ್

    ಮಾಡುವ ವಿಧಾನ:
    * 6 ರಿಂದ 8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಗೋಧಿಯನ್ನು ತೊಳೆದು ನೆನೆಸಿಡಬೇಕು.
    * ಬೆಲ್ಲಕ್ಕೆ 1/4 ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಅದನ್ನು ಸೋಸಿ ಎತ್ತಿಟ್ಟುಕೊಳ್ಳಿ.
    * ನೆನೆಸಿದ ಗೋಧಿಗೆ ಅರ್ಧ ಕಪ್ ನೀರನ್ನು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ ಸೋಸಿ.
    * ರುಬ್ಬಿ ಸೋಸಿ ತೆಗೆದಿರುವ ನೀರನ್ನು, ಸೊಸಿ ತೆಗೆದಿರುವ ಬೆಲ್ಲದ ನೀರಿಗೆ ಸೇರಿಸ ಬೇಕು.
    * ಈ ಮಿಶ್ರಣಕ್ಕೆ ಏಲಕ್ಕಿ ಸೇರಿಸಿ ಕಡಿಮೆ ಉರಿಯಲ್ಲಿ ಪ್ಯಾನ್ ಇರಿಸಿ ತಿರುಗಿಸುತ್ತಾ ಇರಬೇಕು.
    * ಈ ಮಿಶ್ರಣವು ದಪ್ಪವಾಗಲು ಪ್ರಾರಂಭಿಸಿದ ನಂತರ ಉರಿ ಕಡಿಮೆ ಮಾಡಿ, 1 ಟೀಸ್ಪೂನ್ ತೆಂಗಿನ ಎಣ್ಣೆ ಅಥವಾ ತುಪ್ಪ ಸೇರಿಸಬೇಕು.
    * ಕೇಸರಿ ನೀರು, ಮತ್ತು ಗೋಡಂಬಿ ತುಂಡುಗಳನ್ನು ಸೇರಿಸಿ ಮಿಶ್ರಣ ದಪ್ಪವಾಗುವವರೆಗೆ ಒಲೆ ಮೇಲೆ ಇಟ್ಟು ಬಿಸಿ ಮಾಡಿಟ್ಟುಕೊಳ್ಳಿ.
    * ತುಪ್ಪವನ್ನು ಸವರಿರುವ ತಟ್ಟೆಗೆ ಈ ಮಿಶ್ರಣವನ್ನು ಹಾಕಿ ತಣ್ಣಗಾಗಲು ಇಡಬೇಕು.
    * ನಂತರ ಚಾಕುಗೆ ಸ್ವಲ್ಪ ತುಪ್ಪ ಸವರಿ ಹಲ್ಬಾಯಿಯನ್ನು ಕತ್ತರಿಸಿದರೆ ಹಬ್ಬಕ್ಕೆ ಗೋಧಿ ಹಾಲುಬಾಯಿ ಸವಿಯಲು ಸಿದ್ಧವಾಗುತ್ತದೆ.

    ಕಜ್ಜಾಯ
    ನೆನೆಸಿದ ದೋಸೆ ಅಕ್ಕಿ- 1 ಕಪ್
    ಬೆಲ್ಲ -1 ಕಪ್
    ಎಳ್ಳು- 1 ಸ್ಪೂನ್
    ಗಸಗಸೆ _ 1 ಸ್ಪೂನ್
    ಏಲಕ್ಕಿ- 1/2 ಸ್ಪೊನ್
    ಅಡುಗೆ ಎಣ್ಣೆ

    ಮಾಡುವ ವಿಧಾನ:
    * ಒಂದು ದಿನ ಮೊದಲೇ ನೆನಸಿಟ್ಟ ಅಕ್ಕಿಯನ್ನು ಒಂದು ಬಟ್ಟೆಯ ಮೇಲೆ ಹಾಕಿ ಸೋಸಿ ನೀರು ತೆಗೆದು ಅಕ್ಕಿಯನ್ನು ಒಣಗಿಬೇಕು.
    * ಒಣಗಿರುವ ಅಕ್ಕಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಬೇಕು.
    * ಪುಡಿ ಮಾಡಿರುವ ಅಕ್ಕಿಯನ್ನು ಚೆನ್ನಾಗಿ ಜರಡಿಯಿಂದ ಸೋಸಿ ತೆಗೆಯಬೇಕು.
    * ಒಂದು ಪಾತ್ರೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಪಾಕ ಗಟ್ಟಿಯಾಗಿ ಉಂಡೆ ರೂಪಕ್ಕೆ ಬರುವವರೆಗೆ ಬಿಸಿ ಮಾಡಬೇಕು.
    * ಈ ಬೆಲ್ಲದ ಪಾಕಕ್ಕೆ ಎಳ್ಳು, ಗಸಗಸೆ, ಏಲಕ್ಕಿ ಪೌಡರ್ ಹಾಕಿ ಸ್ವಲ್ಪ ಬಿಸಿ ಮಾಡಬೇಕು.
    * ಬೆಲ್ಲದ ಪಾಕಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಗಟ್ಟಿಯಾಗುವರೆಗೆ ಬಿಸಿಮಾಡಿ ತಣ್ಣಗಾಗಲು ಬಿಡಬೇಕು.
    * ಈ ಮಿಶ್ರಣದಿಂದ ಸಣ್ಣ ಸಣ್ಣದಾಗಿರುವ ಉಂಡೆಗಳನ್ನು ಮಾಡಿ ರೊಟ್ಟಿಯಂತೆ ಕಜ್ಜಾಯವನ್ನು ತಟ್ಟಬೇಕು.
    * ಈ ಕಜ್ಜಾಯವನ್ನು ಎಣ್ಣೆ ಬಾಣಲೆಯಲ್ಲಿ ಬಿಟ್ಟು ಫ್ರೈ ಮಾಡಿಕೊಳ್ಳಿ.
    * ಈಗ ರುಚಿ ರುಚಿಯಾಗಿರುವ ಕಜ್ಜಾಯ ಸವಿಯಲು ಸಿದ್ಧವಾಗುತ್ತದೆ.