Tag: ದೀಪಾ

  • ಯುವ ನಟಿ ದೀಪಾ ಆತ್ಮಹತ್ಯೆಗೆ ಆ ಹುಡುಗನೆ ಕಾರಣ ?: ಅವನು ಇನ್ನೂ ನಿಗೂಢ

    ಯುವ ನಟಿ ದೀಪಾ ಆತ್ಮಹತ್ಯೆಗೆ ಆ ಹುಡುಗನೆ ಕಾರಣ ?: ಅವನು ಇನ್ನೂ ನಿಗೂಢ

    ಕಾಲಿವುಡ್ ಯುವ ನಟಿ ದೀಪಾ (Deepa) ನಿನ್ನೆಯಷ್ಟೇ ಅವರ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ರೂಮ್ ನಲ್ಲೇ ಸಿಕ್ಕ ಡೆತ್ ನೋಟ್ ನಲ್ಲಿ ತಮ್ಮ ಪ್ರೀತಿ ಪ್ರೇಮದ ಬಗ್ಗೆ ಸವಿವರವಾಗಿ ಬರೆದುಕೊಂಡಿದ್ದಾರೆ. ಸದಾ ನಿನ್ನ ಪ್ರೀತಿಸುತ್ತಲೇ ಇರುತ್ತೇನೆ ಎಂದು ಪತ್ರವನ್ನು ಮುಗಿಸಿದ್ದಾರೆ. ಆದರೆ, ಅವರು ಯಾರನ್ನು ಪ್ರೀತಿಸುತ್ತಿದ್ದರು? ಆ ಹುಡುಗ ಯಾರು? ಇವರಿಬ್ಬರ ಮಧ್ಯೆ ಏನಾಯಿತು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆ ಹುಡುಗ ಯಾರು ಎನ್ನುವುದನ್ನು ಅವರು ಕೂಡ ಡೆತ್ ನೋಟ್ ನಲ್ಲಿ ಬರೆದಿಲ್ಲ. ಹಾಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.

    ಯುವ ನಟಿ ದೀಪಾ ಆತ್ಮಹತ್ಯೆಯಿಂದಾಗಿ ಕಾಲಿವುಡ್ ಆಘಾತಗೊಂಡಿದೆ. ಇತ್ತೀಚೆಗಷ್ಟೇ ತೆರೆಕಂಡ ‘ವೈಧಾ’ (Vaidha) ಚಿತ್ರದಲ್ಲಿ ನಟಿಸಿದ್ದ ಇವರು, ಚೆನ್ನೈನ ವಿರುಗಂಬಕ್ಕಮ್ ನಲ್ಲಿರುವ ತಮ್ಮ ರೂಮ್ ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಹಾಗಾಗಿ ಇದೊಂದು ಆತ್ಮಹತ್ಯೆ ಎಂದು ಪೊಲೀಸ್ ನವರು ಶಂಕಿಸಿದ್ದಾರೆ. ಪೌಲಿನ್ ಜೆಸ್ಸಿಕಾ (Pauline Jessica) ಇವರ ಮೂಲ ಹೆಸರು. ದೀಪಾ ಹೆಸರಿನ ಮೂಲಕ ಫೇಮಸ್ ಆಗಿದ್ದರು. ವೈಧಾ, ತುಪ್ಪರಿವಾಲನ್ (Thupparivalan) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಲಗಳ ಪ್ರಕಾರ ದೀಪಾ ಲವ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಪ್ರೀತಿಯಲ್ಲಿ ಎದುರಾದ ತೊಡಕುಗಳನ್ನು ಬಿಡಿಸಿಕೊಳ್ಳಲಾಗಿದೆ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬೇಬಿ ಬಂಪ್‌ ಲುಕ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ಬಿಪಾಶಾ ಬಸು

    ದೀಪಾ ಅವರ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶವಪರೀಕ್ಷೆಗಾಗಿ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಪ್ರೀತಿ, ಪ್ರೇಮದ ವಿಚಾರವಾಗಿಯೇ ಈ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ಗೀತರಚನೆಕಾರರ ಮಗಳೊಬ್ಬಳು ಇಂಥದ್ದೇ ಪ್ರೇಮಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ರಂಗದ ಪ್ರತಿಭಾವಂತ ಯುವ ನಟಿ ದೀಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಸಿನಿಮಾ ರಂಗದ ಪ್ರತಿಭಾವಂತ ಯುವ ನಟಿ ದೀಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಯುವ ನಟಿ ದೀಪಾ (Deepa) ಆತ್ಮಹತ್ಯೆಯಿಂದಾಗಿ ಕಾಲಿವುಡ್ (Tami) ಆಘಾತಗೊಂಡಿದೆ. ಇತ್ತೀಚೆಗಷ್ಟೇ ತೆರೆಕಂಡ ‘ವೈಧಾ’ (Vaidha) ಚಿತ್ರದಲ್ಲಿ ನಟಿಸಿದ್ದ ಇವರು, ಚೆನ್ನೈನ ವಿರುಗಂಬಕ್ಕಮ್ ನಲ್ಲಿರುವ ತಮ್ಮ ರೂಮ್ ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಹಾಗಾಗಿ ಇದೊಂದು ಆತ್ಮಹತ್ಯೆ ಎಂದು ಪೊಲೀಸ್ ನವರು ಶಂಕಿಸಿದ್ದಾರೆ.

    ಪೌಲಿನ್ ಜೆಸ್ಸಿಕಾ (Pauline Jessica) ಇವರ ಮೂಲ ಹೆಸರು. ದೀಪಾ ಹೆಸರಿನ ಮೂಲಕ ಫೇಮಸ್ ಆಗಿದ್ದರು. ವೈಧಾ, ತುಪ್ಪರಿವಾಲನ್ (Thupparivalan) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಲಗಳ ಪ್ರಕಾರ ದೀಪಾ ಲವ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಪ್ರೀತಿಯಲ್ಲಿ ಎದುರಾದ ತೊಡಕುಗಳನ್ನು ಬಿಡಿಸಿಕೊಳ್ಳಲಾಗಿದೆ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ

    ದೀಪಾ ಅವರ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶವಪರೀಕ್ಷೆಗಾಗಿ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಪ್ರೀತಿ, ಪ್ರೇಮದ ವಿಚಾರವಾಗಿಯೇ ಈ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ಗೀತರಚನೆಕಾರರ ಮಗಳೊಬ್ಬಳು ಇಂಥದ್ದೇ ಪ್ರೇಮಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ದೊಡ್ಡಮ್ಮನ ಕೊಲೆ ಮಾಡಿರೋ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆಯಾಗಿದ್ರೆ ಖುಷಿಯಾಗ್ತಿತ್ತು- ಜಯಾ ತಂಗಿ ಮಗಳ ಹೇಳಿಕೆ

    ದೊಡ್ಡಮ್ಮನ ಕೊಲೆ ಮಾಡಿರೋ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆಯಾಗಿದ್ರೆ ಖುಷಿಯಾಗ್ತಿತ್ತು- ಜಯಾ ತಂಗಿ ಮಗಳ ಹೇಳಿಕೆ

    ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆಯಾಗೋಕಿಂತ ದೊಡ್ಡಮ್ಮನನ್ನ ಕೊಲೆ ಮಾಡಿರೋ ಪ್ರಕರಣದಲ್ಲಿ ಶಿಕ್ಷೆಯಾಗಿದ್ದಿದ್ರೆ ಖುಷಿಯಾಗ್ತಿತ್ತು. ಹೀಗಂತ ದಿವಂಗತ ಜಯಲಲಿತಾ ಅವರ ತಂಗಿ ಶೈಲಜಾ ಅವರ ಮಗಳು ಅಮೃತಾ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

    ಕೊಲೆ ಅಂತ ಸಾಬೀತಾಗಿ ಶಶಿಕಲಾಗೆ ಶಿಕ್ಷೆಯಾದ ಬಳಿಕವೇ ನಾನು ದೊಡ್ಡಮ್ಮನ ಸಮಾಧಿಗೆ ಹೋಗಿ ಅವರ ಶವ ತೆಗೆದು ಅಯ್ಯಂಗಾರ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸುತ್ತೇನೆ ಅಂತಾ ಪ್ರತಿಜ್ಞೆ ಮಾಡಿದ್ದಾರೆ.

    ಇಷ್ಟು ದಿನ ದೊಡ್ಡಮ್ಮನ ಮುಂದೆ ಮುಖವಾಡ ಹಾಕಿಕೊಂಡಿದ್ದವರ ನಿಜ ಮುಖ ಈಗ ಗೊತ್ತಾಗ್ತಿದೆ. ಅಜಿತ್ ಬಗ್ಗೆ ದೊಡ್ಡಮ್ಮನಿಗೆ ಅಭಿಮಾನವಿತ್ತು ಅಷ್ಟೆ. ಅವರನ್ನ ಸಿಎಂ ಮಾಡೋ ಆಸೆ ಇರಲಿಲ್ಲ ಅಂದಿದ್ದಾರೆ. ಶಶಿಕಲಾಗಿಂತಲೂ ದೀಪಾ ತುಂಬಾ ಡೇಂಜರ್. ಶಶಿಕಲಾ ನೇರವಾಗಿ ಚೂರಿ ಹಾಕಿದ್ರೆ, ದೀಪಾ ಬೆನ್ನಿಗೆ ಚೂರಿ ಹಾಕ್ತಾಳೆ ಅಂತ ಅಮೃತಾ ಹೇಳಿದ್ರು.

  • ಶಶಿಕಲಾ ರೆಸಾರ್ಟ್ ಬಿಟ್ಟರೂ ಶಾಸಕರ ಠಿಕಾಣಿ- ಅಧಿಕಾರಿಗಳಿಂದ ರೆಸಾರ್ಟ್‍ನ ವಿದ್ಯುತ್ ಸಂಪರ್ಕ ಕಟ್

    ಶಶಿಕಲಾ ರೆಸಾರ್ಟ್ ಬಿಟ್ಟರೂ ಶಾಸಕರ ಠಿಕಾಣಿ- ಅಧಿಕಾರಿಗಳಿಂದ ರೆಸಾರ್ಟ್‍ನ ವಿದ್ಯುತ್ ಸಂಪರ್ಕ ಕಟ್

    ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ಮಂಗಳವಾರ ತೀರ್ಪು ಪ್ರಕಟ ಆಗಲು ಸಮಯ ನಿಗದಿಯಾಗುತ್ತಿದ್ದ ಹಾಗೆ ಸೋಮವಾರವೇ ಶಾಸಕರ ಜೊತೆ ರೆಸಾರ್ಟ್ ಸೇರಿದ್ದ ಚಿನ್ನಮ್ಮ ತಡರಾತ್ರಿ ಪೋಯಸ್ ಗಾರ್ಡನ್ ಮನೆಗೆ ಬಂದಿದ್ದಾರೆ. ನಿನ್ನೆ ತಡರಾತ್ರಿ ಪೋಯಸ್ ಗಾರ್ಡನ್ ಮನೆಗೆ ತೆರಳುವುದಕ್ಕೆ ಮುಂಚೆ ಸ್ಥಳೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ಶಶಿಕಲಾ, ಒಂದು ರೀತಿಯ ವಿದಾಯ ಭಾಷಣ ಮಾಡಿದ್ದಾರೆ.

    ನನಗೆ ಬೆಂಬಲ ಸೂಚಿಸಿದ ಎಲ್ಲಾ ಶಾಸಕರುಗಳಿಗೂ ಧನ್ಯವಾದ. ಎಐಡಿಎಂಕೆ ಪಕ್ಷ ಮಾತ್ರ ನನಗೆ ಮುಖ್ಯವಾಗಿದ್ದು, ನನ್ನನ್ನು ಪಕ್ಷದಿಂದ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ವಿಚಾರವನ್ನು ಅಲ್ಲಿನ ಜಯಾ ಟಿವಿ ಪ್ರಸಾರ ಮಾಡಿದೆ. ಇದಾದ ಬಳಿಕ ಪೋಯಸ್ ಗಾರ್ಡನ್ ಮನೆ ಮುಂದೆ ಜಮಾಯಿಸಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಚಿನ್ನಮ್ಮ, ನಾನು ಜೈಲಿಗೆ ಹೋಗುತ್ತಿದ್ದೇನೆ ಅಂತಾ ನೀವು ಅಳಬೇಡಿ ಅಂತಾ ಹೇಳಿದ್ದಾರೆ.

    ಬಳಿಕ ಜಯಲಲಿತಾ ಹಾಗೂ ನನ್ನ ಮೇಲೆ ಉದ್ದೇಶಪೂರ್ವಕವಾಗಿ ಕೇಸ್ ಹಾಕಿದ್ದು ಡಿಎಂಕೆ ಅಂತಾ ದೂರಿದ್ದಾರೆ. ಇದರ ಮಧ್ಯೆ ಕೊವತ್ತೂರು ರೆಸಾರ್ಟ್ ಖಾಲಿ ಮಾಡುವಂತೆ ಎಐಡಿಎಂಕೆ ಪಕ್ಷದ ಶಶಿಕಲಾ ಗುಂಪಿನ ಶಾಸಕರಿಗೆ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ರು. ಆದ್ರೆ ಶಾಸಕರು ಗೋಲ್ಡನ್ ಬೇ ರೆಸಾರ್ಟ್ ಖಾಲಿ ಮಾಡಲು ನಿರಾಕರಿಸಿದ್ರು, ಏನಾದ್ರು ಒತ್ತಾಯ ಮಾಡಿ ದಬ್ಬಾಳಿಕೆ ಮಾಡಿದ್ರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ರು. ಆ ಬಳಿಕ ರೆಸಾರ್ಟ್‍ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತ ಮಾಡಲಾಗಿದೆ. ಆದ್ರೂ ಕೂಡ ಶಾಸಕರು ಅಲ್ಲೇ ಬೀಡುಬಿಟ್ಟಿದ್ದಾರೆ.

    ಜಯಾ ಸಮಾಧಿಗೆ ಪನ್ನೀರ್, ದೀಪಾ ಭೇಟಿ: ಮಂಗಳವಾರ ಬೆಳಗ್ಗೆ ಸುಪ್ರೀಂಕೋರ್ಟ್‍ನಲ್ಲಿ ತೀರ್ಪು ಪ್ರಕಟ ಆಗ್ತಿದ್ದ ಹಾಗೆ ಜಯಲಲಿತಾ ಸೋದರ ಸಂಬಂಧಿಗಳಾದ ದೀಪಾ ಹಾಗೂ ದೀಪಕ್‍ರನ್ನು ಕರೆದು ಚಿನ್ನಮ್ಮ ಶಶಿಕಲಾ ಮಾತನಾಡಿದ್ರು. ಇದಾದ ಬಳಿಕ ಸಂಜೆ ದೀಪಾ, ಪನ್ನೀರ್ ಸೆಲ್ವಂ ಬಳಗ ಸೇರಿದ್ದು, ರಾತ್ರಿ ಜಯಾ ಸಮಾಧಿಗೆ ಪನ್ನೀರ್ ಸೆಲ್ವಂ ಹಾಗೂ ಈಗಾಗಲೇ ಪಕ್ಷದಿಂದ ವಜಾಗೊಂಡಿರುವ ಶಾಸಕರು ಹಾಗೂ ಸಂಸದರ ಜೊತೆ ಭೇಟಿ ನೀಡಿದ್ರು. ಇಂದಿನಿಂದ ನಾನು ಸಕ್ರಿಯ ರಾಜಕಾರಣಕ್ಕೆ ಬರುತ್ತೇನೆ ಅಂತಾ ದೀಪಾ ಸಮಾಧಿ ಬಳಿಯೇ ಘೋಷಣೆ ಮಾಡಿದ್ರು. ಈ ಮೂಲಕ ಪನ್ನೀರ್ ಸೆಲ್ವಂ ಬಣದ ಬಲ ನಿಧಾನವಾಗಿ ಹೆಚ್ಚಾಗುತ್ತಿದೆ. ಇದಕ್ಕೂ ಮೊದಲು ಎಐಎಡಿಎಂ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಎಡಪ್ಪಾಡಿ ಕೆ ಪಳನಿಸ್ವಾಮಿ ರಾಜ್ಯಪಾಲ ಸಿ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಮನವಿ ಮಾಡಿದ್ರು. ಈ ವೇಳೆ ಹಲವು ಸಚಿವರು ಪಳನಿಸ್ವಾಮಿಗೆ ಸಾಥ್ ನೀಡಿದ್ರು.