Tag: ದೀಪಕ್ ಹೂಡಾ

  • ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ – ಕಬಡ್ಡಿ ಆಟಗಾರ ಪತಿ ವಿರುದ್ಧ ಬಾಕ್ಸರ್‌ ಎಫ್‌ಐಆರ್‌ ದಾಖಲು

    ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ – ಕಬಡ್ಡಿ ಆಟಗಾರ ಪತಿ ವಿರುದ್ಧ ಬಾಕ್ಸರ್‌ ಎಫ್‌ಐಆರ್‌ ದಾಖಲು

    ಚಂಡೀಗಢ: ಅರ್ಜುನ ಪ್ರಶಸ್ತಿ ಪುರಸ್ಕೃತೆ, ಮಾಜಿ ವಿಶ್ವ ಚಾಂಪಿಯನ್‌ ಬಾಕ್ಸರ್‌ ಸವೀತಿ ಬೂರಾ ಅವರು ತಮ್ಮ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ.

    ಬೂರಾ ಅವರು ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಕಬಡ್ಡಿ ಆಟಗಾರ ಪತಿ ದೀಪಕ್ ಹೂಡಾ ಮತ್ತು ಅವರ ಕುಟುಂಬದವರು ವರದಕ್ಷಿಣೆಗಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

    ಈ ಇಬ್ಬರೂ 2022 ರಲ್ಲಿ ವಿವಾಹವಾದರು. ಅರ್ಜುನ ಪ್ರಶಸ್ತಿ ಪುರಸ್ಕೃತ ಹೂಡಾ ವಿರುದ್ಧ ಬೂರಾ ಅವರು ಹರಿಯಾಣದ ಹಿಸಾರ್‌ನಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ.

    ಫೆ.25 ರಂದು ಸವೀತಿ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಹೂಡಾ ಅವರಿಗೆ ನಾವು 2-3 ಬಾರಿ ನೋಟಿಸ್ ನೀಡಿದ್ದೇವೆ. ಆದರೆ, ಅವರು ವಿಚಾರಣೆಗೆ ಹಾಜರಾಗಿಲ್ಲ ಎಂದು ಹಿಸಾರ್‌ನ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೀಮಾ ತಿಳಿಸಿದ್ದಾರೆ.

    ಈ ಬಗ್ಗೆ ಹೂಡಾ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಆರೋಗ್ಯದ ಸಮಸ್ಯೆಯಿಂದಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿದ್ದೇನೆ. ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿದ್ದೇನೆ. ಖಂಡಿತವಾಗಿಯೂ ಠಾಣೆಗೆ ತೆರಳಿ ವಿಚಾರಣೆ ಎದುರಿಸಲಿದ್ದೇನೆ. ಆದರೆ, ನನ್ನ ಹೆಂಡತಿಯ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನನಗೆ ಆಕೆಯನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.

    ಕಬಡ್ಡಿ ಆಟಗಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 85 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೂಡಾ 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ರೋಹ್ಟಕ್ ಜಿಲ್ಲೆಯ ಮೆಹಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಅವರು 2016 ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು 2014 ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಕಬಡ್ಡಿ ತಂಡದ ಭಾಗವಾಗಿದ್ದರು. ಅವರು ಪ್ರೊ ಕಬಡ್ಡಿ ಲೀಗ್‌ನಲ್ಲೂ ಸ್ಪರ್ಧಿಸಿದ್ದಾರೆ.

  • ವೈಡ್ ಕೊಡದ ಅಂಪೈರ್‌ಗೆ ನಿಂದಿಸಿದ ದೀಪಕ್ ಹೂಡಾ

    ವೈಡ್ ಕೊಡದ ಅಂಪೈರ್‌ಗೆ ನಿಂದಿಸಿದ ದೀಪಕ್ ಹೂಡಾ

    ಮುಂಬೈ: ಶ್ರೀಲಂಕಾ (Sri Lanka) ವಿರುದ್ಧ ನಡೆದ ಮೊದಲ ಟಿ20 (T20I) ಪಂದ್ಯದಲ್ಲಿ ವೈಡ್ ಕೊಡದ ಅಂಪೈರ್ (Umpire) ವಿರುದ್ಧ ಟೀಂ ಇಂಡಿಯಾ ಬ್ಯಾಟ್ಸ್‌ಮ್ಯಾನ್‌ ದೀಪಕ್ ಹೂಡಾ (Deepak Hooda) ಗರಂ ಆದ ಘಟನೆ ಪಂದ್ಯದ ನಡುವೆ ನಡೆದಿದೆ.

    ಸ್ಲಾಗ್ ಓವರ್‌ಗಳಲ್ಲಿ ದೀಪಕ್ ಹೂಡಾ ಅಬ್ಬರದ ಬ್ಯಾಟಿಂಗ್‍ಗೆ ಮುಂದಾಗಿದ್ದರು. 18 ಓವರ್ ಎಸೆಯಲು ಬಂದ ಕಸುನ್ ರಂಜಿತ್ ತಮ್ಮ 5ನೇ ಎಸೆತ ಆಫ್‌ಸೈಡ್‌ ಎಸೆದರು. ಈ ವೇಳೆ ಒಂದು ಹೆಜ್ಜೆ ಆಫ್‌ಸೈಡ್‌ ಮುಂದೆ ಕಾಲಿಟ್ಟಿದ್ದ ಹೂಡಾ ಹೊಡೆಯಲು ಪ್ರಯತ್ನಿಸಿ ವೈಡ್ ಎಂದು ತಿಳಿದು ಬಾಲ್ ಬಿಟ್ಟಿದ್ದಾರೆ. ಆದರೆ ಅಂಪೈರ್ ವೈಡ್ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹೂಡಾ ಅಂಪೈರ್‌ಗೆ ನಿಂದಿಸಿದ್ದಾರೆ. ಇದನ್ನೂ ಓದಿ: ಅಕ್ಷರ್, ಹೂಡಾ ಹೊಡಿಬಡಿ ಆಟ – ಲಂಕಾಗೆ ಲಗಾಮು ಹಾಕಿದ ಮಾವಿ

    ಅನ್‍ಫೀಲ್ಡ್ ಅಂಪೈರ್ ಕೆ.ಎನ್ ಅನಂತ ಪದ್ಮನಾಭನ್ ವಿರುದ್ಧ ವೈಡ್‍ಗಾಗಿ ವಾದಿಸಿದ ಹೂಡಾ. ಓವರ್ ಮುಕ್ತಾಯದ ಬಳಿಕ ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ.

    ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಹೂಡಾ, ಅಕ್ಷರ್
    94 ರನ್‍ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಕುಸಿತಕಂಡಿದ್ದ ತಂಡಕ್ಕೆ ಆ ಬಳಿಕ ಸ್ಲಾಗ್ ಓವರ್‌ಗಳಲ್ಲಿ ಶಕ್ತಿ ತುಂಬಿದ್ದು, ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್. ಇವರಿಬ್ಬರೂ ಕುಸಿತದ ಭೀತಿಯಲ್ಲಿದ್ದ ತಂಡಕ್ಕೆ ಭರ್ಜರಿ ಬ್ಯಾಟಿಂಗ್ ಮೂಲಕ ಚೇತರಿಕೆ ನೀಡಿದರು. ಹೂಡಾ ತನ್ನ ಹೊಡಿಬಡಿ ಬ್ಯಾಟಿಂಗ್ ಮೂಲಕ 41 ರನ್ (23 ಎಸೆತ, 1 ಬೌಂಡರಿ, 4 ಸಿಕ್ಸ್) ಚಚ್ಚಿ ಮಿಂಚಿದರು. ಅಕ್ಷರ್ ಪಟೇಲ್ 31 ರನ್ (20 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಇದನ್ನೂ ಓದಿ: ಮಂಕಡ್‌ ಮೂಲಕ ರನೌಟ್ ಮಾಡಿದ ಜಂಪಾ – ನಾಟೌಟ್‌ ಎಂದ ಅಂಪೈರ್!

    ಈ ಜೋಡಿ 6ನೇ ವಿಕೆಟ್‍ಗೆ ಅಜೇಯ 68 ರನ್ (35 ಎಸೆತ) ಚಚ್ಚಿದ ಪರಿಣಾಮ 20 ಓವರ್‌ಗಳಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 162 ರನ್ ಬಾರಿಸಿತು. ಬ್ಯಾಟಿಂಗ್‍ನಲ್ಲಿ ಅಕ್ಷರ್ ಪಟೇಲ್ ಮತ್ತು ದೀಪಕ್ ಹೂಡಾ ಧೂಳೆಬ್ಬಿಸಿದರೆ, ಬೌಲಿಂಗ್‍ನಲ್ಲಿ ಶಿವಂ ಮಾವಿ ಶೈನ್ ಆದರು. ಪರಿಣಾಮ 20 ಓವರ್‌ಗಳಲ್ಲಿ 163 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ 160 ರನ್‍ಗಳಿಗೆ ಸರ್ವಪತನ ಕಂಡು ಸೋಲುಂಡಿತು. ಇತ್ತ 2 ರನ್‍ಗಳ ರೋಚಕ ಜಯ ಸಾಧಿಸಿದ ಭಾರತ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಐರ್ಲೆಂಡ್ ವಿರುದ್ಧ ಶುಭಾರಂಭ ಕಂಡ ಭಾರತ – ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ದೀಪಕ್ ಹೂಡಾ

    ಐರ್ಲೆಂಡ್ ವಿರುದ್ಧ ಶುಭಾರಂಭ ಕಂಡ ಭಾರತ – ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ದೀಪಕ್ ಹೂಡಾ

    ಡಬ್ಲಿನ್: ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮಳೆಯಾಟದ ನಡುವೆ ಭಾರತ ತಂಡ 7 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ ಶುಭಾರಂಭ ಕಂಡಿದೆ.

    ಮಳೆಯಿಂದಾಗಿ 12 ಓವರ್‍ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 4 ವಿಕೆಟ್ ನಷ್ಟಕ್ಕೆ 108 ಬಾರಿಸಿತು. 109 ರನ್‍ಗಳ ಗುರಿ ಬೆನ್ನಟ್ಟಿದ ಭಾರತ 9.2 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 111 ರನ್ ಬಾರಿಸಿ ಇನ್ನೂ 16 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಅಂತರದ ಜಯ ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ – ಕ್ಯಾನ್ಸಲ್ ಆಗುತ್ತಾ ಟೆಸ್ಟ್ ಪಂದ್ಯ?

    111 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತದ ಪರ ದೀಪಕ್ ಹೂಡಾ ಆರಂಭಿಕರಾಗಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಇಶಾನ್ ಕಿಶನ್ 26 ರನ್ (11 ಎಸೆತ, 3 ಬೌಂಡರಿ, 2 ಸಿಕ್ಸ್), ಹಾರ್ದಿಕ್ ಪಾಂಡ್ಯ 24 ರನ್ (12 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ತಂಡಕ್ಕೆ ನೆರವಾದರು. ಇತ್ತ ಆರಂಭಿಕರಾಗಿ ಕಣಕ್ಕಿಳಿದು ಕಡೆಯ ವರೆಗೆ ಹೋರಾಡಿದ ದೀಪಕ್ ಹೂಡಾ ಅಜೇಯ 47 ರನ್ (29 ಎಸೆತ, 6 ಬೌಂಡರಿ, 2 ಸಿಕ್ಸ್) ಚಚ್ಚಿ ತಂಡಕ್ಕೆ ಜಯ ತಂದುಕೊಟ್ಟರು. ಇದನ್ನೂ ಓದಿ: ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್

    ಈ ಮೊದಲು ಐರ್ಲೆಂಡ್ ತಂಡದ ಆರಂಭಿಕರು ಬ್ಯಾಟಿಂಗ್‍ನಲ್ಲಿ ಮಿಂಚಲು ವಿಫಲರಾದರು. ಆ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಟೆಕ್ಟರ್ ಸಿಡಿಲ್ಲಬ್ಬರ ಬ್ಯಾಟಿಂಗ್ ಮೂಲಕ ಐರ್ಲೆಂಡ್‍ಗೆ ನೆರವಾದರು. ಹ್ಯಾರಿ ಟೆಕ್ಟರ್ ಅಜೇಯ 64 ರನ್ (33 ಎಸೆತ, 6 ಬೌಂಡರಿ, 3 ಸಿಕ್ಸ್) ಬಾರಿಸಿದ ಪರಿಣಾಮ ಐರ್ಲೆಂಡ್ ತಂಡ 12 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಪೇರಿಸುವಂತಾಯಿತು.

    Live Tv