Tag: ದಿ ವ್ಯಾಕ್ಸಿನ್ ವಾರ್

  • ರಾಣಿಯಂತೆ ಕಂಗೊಳಿಸಿದ ಕಾಂತಾರದ ಸಪ್ತಮಿ ಗೌಡ

    ರಾಣಿಯಂತೆ ಕಂಗೊಳಿಸಿದ ಕಾಂತಾರದ ಸಪ್ತಮಿ ಗೌಡ

    ಕಾಂತಾರ ಸಿನಿಮಾ ಗೆಲುವು ನಟಿ ಸಪ್ತಮಿ ಗೌಡ ಸಿನಿಮಾ ರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಅವರು ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಅದು ರಾಣಿಯಂತೆಯೇ ಕಂಗೊಳಿಸಿದ್ದಾರೆ. ಸದ್ಯ ಸಪ್ತಮಿ ಬಾಲಿವುಡ್ ಹೆಸರಾಂತ ನಿರ್ದೇಶಕ, ದಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಿ ವ್ಯಾಕ್ಸಿನ್ ವಾರ್ ಹೆಸರಿನ ಸಿನಿಮಾದ ಶೂಟಿಂಗ್ ನಲ್ಲೂ ಅವರು ಭಾಗಿಯಾಗಿದ್ದಾರೆ.

    ಈ ನಡುವೆ ಕನ್ನಡದ ಮತ್ತೊಂದು ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದು ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮುಂಗಾರು ಮಳೆ ಕೃಷ್ಣ ಈ ಸಿನಿಮಾದ ನಿರ್ದೇಶಕರು. ಇದೊಂದು ಪ್ರೇಮಕಥೆಯಾಗಿದ್ದು, ನೈಜ ಘಟನೆಯನ್ನು ಆಧರಿಸಿದ ಚಿತ್ರವಾಗಿದೆ. ಈ ಸಿನಿಮಾದಲ್ಲಿ ಸಪ್ತಮಿ ಪ್ರಮುಖ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ರಜನಿ ಜೊತೆ ಶಿವರಾಜ್ ಕುಮಾರ್: ಫೋಟೋ ಲೀಕ್

    ಕಾಂತಾರ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಪರಭಾಷಾ ಸಿನಿಮಾಗಳಿಗೂ ಆಫರ್ ಬಂದಿವೆ. ಆದರೆ, ತಮ್ಮ ಪಾತ್ರದ ಮಹತ್ವವನ್ನು ಆಧರಿಸಿ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅಲ್ಲದೇ, ಕಾಂತಾರ ಮುಂದಿನ ಭಾಗದ ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿರಬಹುದು ಎನ್ನುವ ನಿರೀಕ್ಷೆ ಕೂಡ ಅವರಿಗಿದೆ. ಇವರ ಪಾತ್ರದ ಹಿನ್ನೆಲೆ ಹೇಗಿರಲಿದೆ ಎನ್ನುವ ಕುತೂಹಲ ಕೂಡ ಅಭಿಮಾನಿಗಳಿಗೆ ಇದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಕಾಂತಾರ’ ನಟಿಗೆ ವೆಲ್ ಕಮ್ ಹೇಳಿದ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ

    ‘ಕಾಂತಾರ’ ನಟಿಗೆ ವೆಲ್ ಕಮ್ ಹೇಳಿದ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ

    ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಮೂಡಿಸಿರುವ ‘ಕಾಂತಾರ’ ಸಿನಿಮಾದ ನಾಯಕಿ ಸಪ್ತಮಿ ಗೌಡ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕರ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ದಲ್ಲಿ ನಟಿಸಲು ಆಯ್ಕೆಯಾಗಿರುವ ವಿಷಯವನ್ನು ನಿನ್ನೆಯಷ್ಟೇ ‘ಪಬ್ಲಿಕ್ ಟಿವಿ ಡಿಜಿಟಲ್’ ಬ್ರೇಕ್ ಮಾಡಿತ್ತು. ಆನಂತರ ಈ ವಿಷಯವನ್ನು ಸ್ವತಃ ಸಪ್ತಮಿ ಗೌಡ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ತಮ್ಮ ತಂಡಕ್ಕೆ ಸಪ್ತಮಿ ಅವರನ್ನು ಸ್ವಾಗತಿಸಿದ್ದಾರೆ. ನೀವು ಅತ್ಯುತ್ತಮ ನಟಿ ಎಂದು ಹೊಗಳಿದ್ದಾರೆ.

    ಈಗಾಗಲೇ ಸಿನಿಮಾದ ಒಂದು ಹಂತದ ಚಿತ್ರೀಕರಣ ಕೂಡ ಮುಗಿದಿದ್ದು, ಎರಡನೇ ಹಂತದ ಶೂಟಿಂಗ್ ನಲ್ಲಿ ಸಪ್ತಮಿ ಪಾಲ್ಗೊಂಡಿದ್ದಾರೆ. ಈ ಬಾರಿಯ ಸಂಕ್ರಾಂತಿಯನ್ನು ದಿ ವ್ಯಾಕ್ಸಿನ್ ವಾರ್ ಶೂಟಿಂಗ್ ಸೆಟ್ ನಲ್ಲೇ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಬಯಸದೇ ಬಂದಿರುವ ಭಾಗ್ಯ ಎಂದೂ ಅವರು ಹೇಳಿಕೊಂಡಿದ್ದಾರೆ. ಸ್ವತಃ ವಿವೇಕ್ ಅಗ್ನಿಹೋತ್ರಿ ಅವರೇ ಸಪ್ತಮಿ ಗೌಡ ಅವರಿಗೆ ಕಾಲ್ ಮಾಡಿ, ನಟಿಸಲು ಅವಕಾಶ ನೀಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ಪಾತ್ರದ ಬಗ್ಗೆ ಹೆಚ್ಚೇನೂ ಹೇಳದ ಸಪ್ತಮಿ, ಈ ಸಿನಿಮಾದಲ್ಲಿ ನಾಯಕ, ನಾಯಕಿ ಅಂತೇನೂ ಇಲ್ಲ. ಕಂಟೆಂಟ್ ಮೇಲೆ ನಿಂತಿರುವಂತಹ ಸಿನಿಮಾ. ಈ ಸಿನಿಮಾದಲ್ಲಿ ನನ್ನದೂ ಪ್ರಮುಖ ಪಾತ್ರ ಅಂದಷ್ಟೇ ಹೇಳಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ಸದ್ಯ ದಿ ವ್ಯಾಕ್ಸಿನ್ ವಾರ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಸಂಕ್ರಾಂತಿ ದಿನದಂದು ಅವರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

    ಕಾಂತಾರ ಸಿನಿಮಾ ಹಾಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಈಗಾಗಲೇ ಆಸ್ಕರ್ ಅಂಗಳದಲ್ಲಿವೆ. ಎರಡೂ ಚಿತ್ರಗಳ ನಡುವೆ ಪೈಪೋಟಿಯೂ ಏರ್ಪಡಬಹುದು. ಇಂತಹ ಹೊತ್ತಿನಲ್ಲಿ ಸಪ್ತಮಿ ಗೌಡ ಅವರಿಗೆ ಬಾಲಿವುಡ್ ಗೆ ಹೋಗುವಂತಹ ಅವಕಾಶ ಸಿಕ್ಕಿದೆ. ಅದರಲ್ಲೂ ಕಳೆದ ವರ್ಷ ಬಾಕ್ಸ್ ಆಫೀಸ್ ದೋಚಿದ್ದ ವಿವೇಕ್ ಅಗ್ನಿಹೋತ್ರಿ ಜೊತೆ ಕೆಲಸ ಮಾಡಲು ಅವರು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಕನ್ನಡದ ಕಾಳಿ ಚಿತ್ರಕ್ಕೂ ಸಪ್ತಮಿ ಗೌಡ ಸಹಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Breaking- ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಚಿತ್ರಕ್ಕೆ ‘ಕಾಂತಾರ’ ಹುಡುಗಿ ಹೀರೋಯಿನ್

    Breaking- ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಚಿತ್ರಕ್ಕೆ ‘ಕಾಂತಾರ’ ಹುಡುಗಿ ಹೀರೋಯಿನ್

    ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಚಿರಪರಿಚಿತರಾದ ಸಪ್ತಮಿ ಗೌಡ (Saptami Gowda), ಇದೀಗ ಸದ್ದಿಲ್ಲದೇ ಬಾಲಿವುಡ್ (Bollywood)ಗೆ ಎಂಟ್ರಿ ಪಡೆದಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ (The Vaccine War) ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಕೂಡ ಮುಗಿದಿದ್ದು, ಎರಡನೇ ಹಂತದ ಶೂಟಿಂಗ್ ನಲ್ಲಿ ಸಪ್ತಮಿ ಪಾಲ್ಗೊಂಡಿದ್ದಾರೆ.

    ತಾವು ದಿ ವ್ಯಾಕ್ಸಿನ್ ವಾರ್ ಸಿನಿಮಾಗೆ ಆಯ್ಕೆಯಾಗಿದ್ದನ್ನು ಖಚಿತ ಪಡಿಸಿರುವ ಸಪ್ತಮಿ ಗೌಡ, ಈ ಬಾರಿಯ ಸಂಕ್ರಾಂತಿಯನ್ನು ದಿ ವ್ಯಾಕ್ಸಿನ್ ವಾರ್ ಶೂಟಿಂಗ್ ಸೆಟ್ ನಲ್ಲೇ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಬಯಸದೇ ಬಂದಿರುವ ಭಾಗ್ಯ ಎಂದೂ ಅವರು ಹೇಳಿಕೊಂಡಿದ್ದಾರೆ. ಸ್ವತಃ ವಿವೇಕ್ ಅಗ್ನಿಹೋತ್ರಿ ಅವರೇ ಸಪ್ತಮಿ ಗೌಡ ಅವರಿಗೆ ಕಾಲ್ ಮಾಡಿ, ನಟಿಸಲು ಅವಕಾಶ ನೀಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಪಾತ್ರದ ಬಗ್ಗೆ ಹೆಚ್ಚೇನೂ ಹೇಳದ ಸಪ್ತಮಿ, ಈ ಸಿನಿಮಾದಲ್ಲಿ ನಾಯಕ, ನಾಯಕಿ ಅಂತೇನೂ ಇಲ್ಲ. ಕಂಟೆಂಟ್ ಮೇಲೆ ನಿಂತಿರುವಂತಹ ಸಿನಿಮಾ. ಈ ಸಿನಿಮಾದಲ್ಲಿ ನನ್ನದೂ ಪ್ರಮುಖ ಪಾತ್ರ ಅಂದಷ್ಟೇ ಹೇಳಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ಸದ್ಯ ದಿ ವ್ಯಾಕ್ಸಿನ್ ವಾರ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಸಂಕ್ರಾಂತಿ ದಿನದಂದು ಅವರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

    ಕಾಂತಾರ ಸಿನಿಮಾ ಹಾಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಈಗಾಗಲೇ ಆಸ್ಕರ್ ಅಂಗಳದಲ್ಲಿವೆ. ಎರಡೂ ಚಿತ್ರಗಳ ನಡುವೆ ಪೈಪೋಟಿಯೂ ಏರ್ಪಡಬಹುದು. ಇಂತಹ ಹೊತ್ತಿನಲ್ಲಿ ಸಪ್ತಮಿ ಗೌಡ ಅವರಿಗೆ ಬಾಲಿವುಡ್ ಗೆ ಹೋಗುವಂತಹ ಅವಕಾಶ ಸಿಕ್ಕಿದೆ. ಅದರಲ್ಲೂ ಕಳೆದ ವರ್ಷ ಬಾಕ್ಸ್ ಆಫೀಸ್ ದೋಚಿದ್ದ ವಿವೇಕ್ ಅಗ್ನಿಹೋತ್ರಿ ಜೊತೆ ಕೆಲಸ ಮಾಡಲು ಅವರು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಕನ್ನಡದ ಕಾಳಿ ಚಿತ್ರಕ್ಕೂ ಸಪ್ತಮಿ ಗೌಡ ಸಹಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲೂ ಅನುಪಮ್ ಖೇರ್: ಇದು ಅವರ 534ನೇ ಚಿತ್ರ

    ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲೂ ಅನುಪಮ್ ಖೇರ್: ಇದು ಅವರ 534ನೇ ಚಿತ್ರ

    ದಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿರುವುದಾಗಿ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಘೋಷಿಸಿದ್ದಾರೆ. ಇಂಥದ್ದೊಂದು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ ಎಂದಿರುವ ಅವರು, ಇದು ಅವರ 534ನೇ ಸಿನಿಮಾ ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾ ಆಕರ್ಷಕ ಮತ್ತು ಸ್ಫೂರ್ತಿದಾಯಕ ಎಂದು ಹೆಮ್ಮೆಪಟ್ಟಿದ್ದಾರೆ. ಶೂಟಿಂಗ್ ಸೆಟ್ ನಿಂದಲೇ ಕ್ಲ್ಯಾಪ್ ಬೋರ್ಡ್ ಹಿಡಿದುಕೊಂಡಿರುವ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ.

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅಲ್ಲದೇ, ಈ ಸಿನಿಮಾ ವಿವಾದವಾದಾಗ ನಿರ್ದೇಶಕರ ಪರವಾಗಿ ನಿಂತಿದ್ದರು. ಈಗ ಮತ್ತೆ ವಿವೇಕ್ ಜೊತೆ ಮತ್ತೊಂದು ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಈ ನಿರ್ದೇಶಕರ ಜೊತೆ ಮತ್ತೆ ಮತ್ತೆ ಸಿನಿಮಾ ಮಾಡುವ ಇಂಗಿತವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಮತ್ತೆ ಮತ್ತೆ ಈ ರೀತಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದೂ ಅವರು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‌ ಉದ್ಘಾಟನೆಗೊಂಡ 4ನೇ ದಿನಕ್ಕೆ ಕಲ್ಲು ತೂರಾಟ- ಕಿಟಕಿ ಗಾಜು ಪುಡಿ ಪುಡಿ

    ಸದ್ಯ ದಿ ವಾಕ್ಸಿನ್ ವಾರ್ ಸಿನಿಮಾದ ಶೂಟಿಂಗ್ ಲಖನೌದಲ್ಲಿ ನಡೆದಿದೆ. ಈ ಸಿನಿಮಾದಲ್ಲಿ ನಾಯಕನಾಗಿ ನಾನಾ ಪಾಟೇಕರ್ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಗೋಪಾಲ್ ಸಿಂಗ್, ದಿವ್ಯಾ ಸೇಠ್ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ವಿವೇಕ್ ಅಗ್ನಿಹೋತ್ರಿ.

    Live Tv
    [brid partner=56869869 player=32851 video=960834 autoplay=true]

  • ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಸಿನಿಮಾದಲ್ಲಿ ನಾನಾ ಪಾಟೇಕರ್

    ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಸಿನಿಮಾದಲ್ಲಿ ನಾನಾ ಪಾಟೇಕರ್

    ಬಾಲಿವುಡ್ ನಟ ನಾನಾ ಪಾಟೇಕರ್, ದಿ ಕಾಶ್ಮೀರ್ ಫೈಲ್ಸ್ (The Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ದಟ್ಟವಾಗಿಯೇ ಕೇಳಿ ಬರುತ್ತಿದೆ. ಸದ್ಯ ವಿವೇಕ್ ಅಗ್ನಿಹೋತ್ರಿ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ನಾಯಕನಾಗಿ ನಾನಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಧಿಕೃತವಾಗಿ ವಿವೇಕ್ ಅಗ್ನಿಹೋತ್ರಿಯಾಗಲಿ, ನಾನಾ ಪಾಟೇಕರ್ (Nana Patekar) ಆಗಲಿ ಈ ವಿಷಯವನ್ನು ಹೇಳದೇ ಇದ್ದರೂ, ಈ ಸುದ್ದಿಯಂತೂ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ. ಇಂಥದ್ದೊಂದು ಜೋಡಿ ಒಟ್ಟಾಗಿ ಸಿನಿಮಾ ಮಾಡಲು ಸಾಧ್ಯವಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಹಾಗಾಗಿ ಈ ಸುದ್ದಿ ಗಾಸಿಪ್ ಅಂತಾನೂ ಹೇಳಲಾಗುತ್ತಿದೆ.  ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಸಿನಿಮಾ ವಿಚಾರದಲ್ಲಿ ಅವರು ನಟ, ಇವರು ನಿರ್ದೇಶಕ. ಹೇಳುವ ಕಥೆಗೂ ಮತ್ತು ಖಾಸಗಿ ಜೀವನಕ್ಕೂ ಸಂಬಂಧವಿಲ್ಲ. ಹಾಗಾಗಿ ಒಟ್ಟಾಗಿ ಸಿನಿಮಾ ಮಾಡುವುದರಲ್ಲಿ ಯಾವುದೇ ತೊಂದರೆ ಆಗಲಾರದು. ಈ ರೀತಿಯ ಜೋಡಿಯು ಒಟ್ಟಾಗಿ ಸಿನಿಮಾ ಮಾಡಿದರೆ, ಅಲ್ಲೊಂದು ಬೇರೆ ರೀತಿಯ ಸಂದೇಶ ಕೂಡ ಹೋಗಬಹುದು ಎನ್ನುತ್ತಾರೆ ಹಲವರು. ಯಾರು ಏನೇ ಹೇಳಿದರೂ, ವಿವೇಕ್ ಸಿನಿಮಾ ಮಾಡಲು ಒಪ್ಪಿಕೊಂಡರೂ, ನಾನಾ ಇದಕ್ಕೆ ಒಪ್ಪುತ್ತಾರಾ ಕಾದು ನೋಡಬೇಕು.

    ದಿ ವ್ಯಾಕ್ಸಿನ್ ವಾರ ಸಿನಿಮಾದ ಸ್ಕ್ರಿಪ್ಟ್ ಮುಗಿದಿದೆ. ಇನ್ನಷ್ಟೇ ಚಿತ್ರತಂಡ ಶೂಟಿಂಗ್ ಗೆ ಹೊರಡಬೇಕು. ಕೋವಿಡ್ ವೇಳೆಯಲ್ಲಿ ನಡೆದ ಘಟನೆಯನ್ನೇ ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ವಿವೇಕ್. ಇದೊಂದು ದೇಶವೇ ಹೆಮ್ಮೆ ಪಡುವಂತಹ ಸಿನಿಮಾವಾಗಲಿದೆ ಎಂದು ಈ ಹಿಂದೆಯೇ ವಿವೇಕ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದಲ್ಲೂ ಮೂಡಿ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಹೊಸ ಸಿನಿಮಾ

    ಕನ್ನಡದಲ್ಲೂ ಮೂಡಿ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಹೊಸ ಸಿನಿಮಾ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮೂಲಕ ಸಂಚಲನವನ್ನೇ ಸೃಷ್ಟಿ ಮಾಡಿದ್ದ  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri), ಇದೀಗ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಆ ಸಿನಿಮಾಗೆ ‘ದಿ ವ್ಯಾಕ್ಸಿನ್ ವಾರ್’ (The Vaccine War) ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ನಿರ್ಮಾಣವಾಗುತ್ತಿರುವುದು ವಿಶೇಷ. ದಿ ಕಾಶ್ಮೀರ್ ಫೈಲ್ಸ್ ಈ ಹಿಂದೆ ಕೇವಲ ಹಿಂದಿಯಲ್ಲಿ ಮಾತ್ರ ಮೂಡಿ ಬಂದಿತ್ತು. ಆನಂತರ ಓಟಿಟಿಯಲ್ಲಿ ಕನ್ನಡಕ್ಕೆ ಡಬ್ ಮಾಡಲಾಗಿತ್ತು. ಇದೀಗ ಹಿಂದಿ, ತಮಿಳು, ತೆಲುಗು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.

    ಕೊರೋನಾ ಸಮಯದಲ್ಲಿ ವ್ಯಾಕ್ಸಿನ್ ಏನೆಲ್ಲ ಆವಾಂತರ ಸೃಷ್ಟಿ ಮಾಡಿತು ಎನ್ನುವ ಅರಿವು ಬಹುತೇಕರಿಗಿದೆ. ಈ ವ್ಯಾಕ್ಸಿನ್ ಏನೆಲ್ಲ ಕೆಲಸ ಮಾಡಿತು ಎಂದು ಕಂಡವರು ಇದ್ದಾರೆ. ವ್ಯಾಕ್ಸಿನ್ ಮಾಫಿಯಾ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾದವು. ಹೀಗಾಗಿಯೇ ವ್ಯಾಕ್ಸಿನ್ ಸುತ್ತ ಕಥೆಯನ್ನು ಬರೆದಿರುವ ವಿವೇಕ್, ವ್ಯಾಕ್ಸಿನ್ ಸಾಧಕ ಬಾಧಕಗಳ ಬಗ್ಗೆಯೇ ಸಿನಿಮಾ ಮಾಡುತ್ತಿದ್ದಾರಂತೆ. ಇದನ್ನೂ ಓದಿ:ಸಮಂತಾ ಬಾಳಲ್ಲಿ ಆಶಾಕಿರಣ: ನಾಗ ಚೈತನ್ಯ ಮನಸ್ಸು ಮಾಡಲಿ ಎಂದು ಫ್ಯಾನ್ಸ್

    ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ತಯಾರಿ ವೇಳೆಯಲ್ಲೇ ವ್ಯಾಕ್ಸಿನ್ ಬಗ್ಗೆ ಸಂಶೋಧನೆ ಮಾಡಿದ್ದರಂತೆ ವಿವೇಕ್. ಕೋವಿಡ್ ಕಾರಣದಿಂದಾಗಿ ಕಾಶ್ಮೀರ್ ಫೈಲ್ಸ್ ಶೂಟಿಂಗ್ ಮುಂದೂಡಲ್ಪಟ್ಟಾಗ  ವ್ಯಾಕ್ಸಿನ್ ಹಿಂದೆ ಬಿದ್ದಿದ್ದರಂತೆ. ತಮ್ಮ ಸಂಶೋಧನೆಯಲ್ಲಿ ಕಂಡ  ಅನುಭವಗಳನ್ನು ಈ ಸಿನಿಮಾದಲ್ಲಿ ಅವರು ಅಳವಡಿಸಿಕೊಂಡಿದ್ದಾರಂತೆ. ವ್ಯಾಕ್ಸಿನ ತಯಾರಿಕೆಯಲ್ಲಿ ಗೆದ್ದಿರುವ ವಿಜ್ಞಾನಿಗಳ ಶ್ರಮ, ಅದನ್ನು ಅಷ್ಟೇ ವೇಗವಾಗಿ ತಲುಪಿಸಿದ ರೋಚಕ ಕಥೆಯೂ ಈ ಸಿನಿಮಾದಲ್ಲಿ ಇರಲಿದೆಯಂತೆ.

    kashmir

    ತಮ್ಮದೇ ಬ್ಯಾನರ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ವಿವೇಕ್, ಪತ್ನಿ ನಟಿ ಪಲ್ಲವಿ ಜೋಷಿ ಅವರೇ ಈ ಚಿತ್ರದ ನಿರ್ಮಾಪಕರು ಎಂದು ಘೋಷಣೆ ಮಾಡಿದ್ದಾರೆ. ತಾರಾಗಣದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಕೊಟ್ಟಿಲ್ಲವಾದರೂ, ಶೀಘ್ರದಲ್ಲೇ ಎಲ್ಲ ವಿಷಯವನ್ನೂ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Breaking – ವ್ಯಾಕ್ಸಿನ್ ಮೇಲೆ ಸಿನಿಮಾ ಮಾಡಲಿದ್ದಾರೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    Breaking – ವ್ಯಾಕ್ಸಿನ್ ಮೇಲೆ ಸಿನಿಮಾ ಮಾಡಲಿದ್ದಾರೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, (Vivek Agnihotri) ಇದೀಗ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದು, ಈ ಸಿನಿಮಾ ವ್ಯಾಕ್ಸಿನ್ ವಾರ್ ಮೇಲೆ ಇರಲಿದೆಯಂತೆ. ಹಾಗಾಗಿಯೇ ಈ ಚಿತ್ರಕ್ಕೆ ಅವರು ‘ದಿ ವ್ಯಾಕ್ಸಿನ್ ವಾರ್’ (The Vaccine War) ಎಂದು ಹೆಸರಿಟ್ಟಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರುತ್ತಿರುವುದು ವಿಶೇಷ.

    kashmir

    ಕೊರೋನಾ ಸಮಯದಲ್ಲಿ ವ್ಯಾಕ್ಸಿನ್ ಏನೆಲ್ಲ ಆವಾಂತರ ಸೃಷ್ಟಿ ಮಾಡಿತು ಎನ್ನುವ ಅರಿವು ಬಹುತೇಕರಿಗಿದೆ. ಈ ವ್ಯಾಕ್ಸಿನ್ ಏನೆಲ್ಲ ಕೆಲಸ ಮಾಡಿತು ಎಂದು ಕಂಡವರು ಇದ್ದಾರೆ. ವ್ಯಾಕ್ಸಿನ್ ಮಾಫಿಯಾ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾದವು. ಹೀಗಾಗಿಯೇ ವ್ಯಾಕ್ಸಿನ್ ಸುತ್ತ ಕಥೆಯನ್ನು ಬರೆದಿರುವ ವಿವೇಕ್, ವ್ಯಾಕ್ಸಿನ್ ಸಾಧಕ ಬಾಧಕಗಳ ಬಗ್ಗೆಯೇ ಸಿನಿಮಾ ಮಾಡುತ್ತಿದ್ದಾರಂತೆ. ಇದನ್ನೂ ಓದಿ:ಮುತ್ತೆತ್ತರಾಯನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್