Tag: ದಿ ವಿಲನ್

  • ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟಿಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ

    ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟಿಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ

    ಬೆಂಗಳೂರು: ವಿಶ್ವಾದ್ಯಂತ ಸದ್ದು ಮಾಡುತ್ತಿರುವ ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟ್‍ಗೆ ಅಭಿಮಾನಿಗಳು ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿ ಕೌರ್ಯ ಮೆರೆದಿದ್ದಾರೆ.

    ಅಭಿಮಾನಿಗಳು ಮಾರಕಾಸ್ತ್ರಗಳನ್ನು ಬಳಸಿ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೆಲಮಂಗಲದ ವಲಯದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

    ಅಭಿಮಾನಿಗಳ ಈ ವರ್ತನೆ ನೋಡಿ ಶಿವಣ್ಣ ಹಾಗೂ ಸುದೀಪ್ ಅಭಿನಯದ ‘ದಿ ವಿಲನ್’ ಸಿನಿಮಾ ತಾರಕಕ್ಕೇರುತ್ತಿದ್ದೀಯಾ ಎಂಬ ಪ್ರಶ್ನೆ ಶುರುವಾಗಿದೆ. ಶಿವಣ್ಣ ಹಾಗೂ ಸುದೀಪ್ ಅಭಿಮಾನಿಗಳ ನಡುವಿನ ಸಮರದ ಸಂಭ್ರಮ ಇದೇನಾ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಅಭಿಮಾನಿಗಳು ತಾಲಿಬಾನ್ ರೀತಿಯಲ್ಲಿ ಕೌರ್ಯ ಮೆರೆದಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸದ್ಯ ದಿ ವಿಲನ್ ಚಿತ್ರ ನೋಡಲು ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಹೌಸ್‍ಫುಲ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿದ್ದು, ಚಿತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಿ ವಿಲನ್ ಸಿನಿಮಾ ಎಫೆಕ್ಟ್- ಮೈಸೂರು ಚಿತ್ರಮಂದಿರ ಧ್ವಂಸ!

    ದಿ ವಿಲನ್ ಸಿನಿಮಾ ಎಫೆಕ್ಟ್- ಮೈಸೂರು ಚಿತ್ರಮಂದಿರ ಧ್ವಂಸ!

    ಮೈಸೂರು: ಸ್ಯಾಂಡಲ್ ವುಡ್ ನ ಬಹುನೀರಿಕ್ಷಿತ ಚಿತ್ರ ದಿ ವಿಲ್ ಸಿನಿಮಾ ಗುರುವಾರ ರಿಲೀಸ್ ಆಗಿದ್ದು, ಚಿತ್ರ ವೀಕ್ಷಿಸಿದ ಬಳಿಕ ಶಿವಣ್ಣ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ಕೆಂಡಾಲರಾಗಿದ್ದರು. ಈ ಬೆನ್ನಲ್ಲೇ ಮೈಸೂರಿನಲ್ಲಿ ಥಿಯೇಟರ್ ಒಂದನ್ನು ಧ್ವಂಸಗೊಳಿಸಲಾಗಿದೆ.

    ಮೈಸೂರಿನ ತಿ.ನರಸೀಪುರ ತಾಲೂಕಿನಲ್ಲಿರೋ ಮುರುಗನ್ ಚಿತ್ರಮಂದಿರವನ್ನು ದಿ ವಿಲನ್ ಚಿತ್ರದ ಅಭಿಮಾನಿಗಳು ಪುಡಿಗೈದಿದ್ದಾರೆ. ಶುಕ್ರವಾರ ರಾತ್ರಿಯ ಶೋ ವೇಳೆ ಈ ಘಟನೆ ನಡೆದಿದೆ.

    ಧ್ವಂಸಗೊಳಿಸಿದ್ದು ಯಾಕೆ?:
    ಶುಕ್ರವಾರ ರಾತ್ರಿ ದಿ ವಿಲನ್ ಚಿತ್ರದ ಸೆಕೆಂಡ್ ಶೋ ನಡೆಯುತ್ತಿತ್ತು. ಈ ವೇಳೆ ಥಿಯೇಟರ್ ನಲ್ಲಿ ಸರಿಯಾಗಿ ಸೌಂಡ್ ಹಾಗೂ ಚಿತ್ರ ಪ್ರದರ್ಶನ ಆಗುತ್ತಿಲ್ಲವೆಂದು ಚಿತ್ರದ ಅಭಿಮಾನಿಗಳು ಗಲಾಟೆ ಶುರುಮಾಡಿಕೊಂಡಿದ್ದರು. ಈ ಜಗಳ ತಾರಕಕ್ಕೇರಿ ವಿಲನ್ ಫ್ಯಾನ್ಸ್ ಥಿಯೇಟರ್ ನಿಂದ ಹೊರಬಂದು ಕಲ್ಲು ತೂರಾಟ ನಡೆಸಿದ್ದಾರೆ.

    ಅಭಿಮಾನಿಗಳ ರೊಚ್ಚಿಗೆ ಚಿತ್ರಮಂದಿರದ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಕೂಡಲೇ ಥಿಯೇಟರ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ತಿ.ನರಸೀಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

    ಶಿವಣ್ಣ ಅಭಿಮಾನಿಗಳಿಗೆ ಪ್ರೇಮ್ ಸ್ಪಷ್ಟನೆ:
    ಚಿತ್ರದಲ್ಲಿ ಶಿವಣ್ಣ ಅವರಿಗೆ ಅವಮಾನಿಸಲಾಗಿದೆ, ಕಾಸ್ಟ್ಯೂಮ್ ನಿಂದ ಹಿಡಿದು ಎಲ್ಲಾ ಪಾತ್ರಗಳಲ್ಲಿಯೂ ಶಿವರಾಜ್ ಕುಮಾರ್ ಅವರಿಗೆ ಅವಮಾನ ಮಾಡಲಾಗಿದೆ ಅಂತ ಅಭಿಮಾನಿಗಳು ಪ್ರೇಮ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರ ನರ್ತಕಿ ಥಿಯೇಟರ್ ಮುಂದೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರೇಮ್, ಸಿನಿಮಾನ ಸಿನಿಮಾ ಥರ ನೋಡಿ. ನಿಮ್ಮನ್ನ ನೋಯಿಸುವುದು ನನ್ನ ಉದ್ದೇಶವಲ್ಲ. ಶಿವಣ್ಣನ ಮುಗ್ಧತೆಯನ್ನು ಆ ಸೀನ್‍ನಲ್ಲಿ ತೋರಿಸಲಾಗಿದೆ. ಆ ಸೀನ್ ನಲ್ಲಿ ಶಿವಣ್ಣ ಅವರ ಅಭಿನಯವೇ ಪ್ರಮುಖ. ಆದ್ದರಿಂದಲೇ ಅಷ್ಟು ಚೆನ್ನಾಗಿ ಮೂಡಿ ಬಂದಿದೆ. ಶಿವಣ್ಣ ಪಾತ್ರ ಒಂದೊಮ್ಮೆ ಫೈಟ್ ಮಾಡಿದ್ದರೆ, ಅಲ್ಲಿ ಅರ್ಥವೇ ಕೆಟ್ಟು ಹೋಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಸಿನಿಮಾ ಗೆಲ್ಲಲು ಅಭಿಮಾನಿಗಳೇ ಕಾರಣ. ನಿಮ್ಮಿಂದಲೇ ಸಿನಿಮಾ ಗೆಲುವು ಪಡೆದಿದೆ. ಬೇರೆ ಭಾಷೆಯ ಸಿನಿಮಾ ಕ್ಷೇತ್ರದ ಜನರು ತಿರುಗಿ ನೀಡುವಂತೆ ಮಾಡಿದ್ದೀರಿ. ಅದ್ದರಿಂದ ಸಿನಿಮಾವನ್ನು ಹಾಗೆಯೇ ನೋಡಿ. ಈ ಕುರಿತು ಕ್ಷಮೆ ಇರಲಿ ಎಂದು ತಿಳಿಸಿದ್ದಾರೆ. ಆದರೆ ಅಭಿಮಾನಿಗಳ ಬೇಡಿಕೆಯಾದ ಫೈಟ್ ದೃಶ್ಯ ಕತ್ತರಿ ಹಾಕುವ ಬಗ್ಗೆ ಯಾವುದೇ ಮಾತುಗಳನ್ನಾಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವರಾಜ್ ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಪ್ರೇಮ್ ಹೇಳಿದ್ದೇನು?

    ಶಿವರಾಜ್ ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಪ್ರೇಮ್ ಹೇಳಿದ್ದೇನು?

    ಬೆಂಗಳೂರು: ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿರುವ `ದಿ ವಿಲನ್’ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ಸುದೀಪ್ ಹೊಡಿದಿರುವ ದೃಶ್ಯಗಳ ವಿರುದ್ಧ ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದರ ಕುರಿತು ನಿರ್ದೇಶಕ ಪೇಮ್ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಪ್ರೇಮ್, ಸಿನಿಮಾನ ಸಿನಿಮಾ ಥರ ನೋಡಿ. ನಿಮ್ಮನ್ನ ನೋಯಿಸುವುದು ನನ್ನ ಉದ್ದೇಶವಲ್ಲ. ಶಿವಣ್ಣನ ಮುಗ್ದತೆಯನ್ನು ಆ ಸೀನ್‍ನಲ್ಲಿ ತೋರಿಸಲಾಗಿದೆ. ಆ ಸೀನ್ ನಲ್ಲಿ ಶಿವಣ್ಣ ಅವರ ಅಭಿನಯವೇ ಪ್ರಮುಖ. ಅದ್ದರಿಂದಲೇ ಅಷ್ಟು ಚೆನ್ನಾಗಿ ಮೂಡಿ ಬಂದಿದೆ. ಶಿವಣ್ಣ ಪಾತ್ರ ಒಂದೊಮ್ಮೆ ಫೈಟ್ ಮಾಡಿದ್ದರೆ, ಅಲ್ಲಿ ಅರ್ಥವೇ ಕೆಟ್ಟು ಹೋಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ‘ದಿ ವಿಲನ್’ ರಿಲೀಸ್ ದಿನವೇ ಪ್ರೇಮ್ ಕೆಂಡಾಮಂಡಲ

    ಸಿನಿಮಾ ಗೆಲ್ಲಲು ಅಭಿಮಾನಿಗಳೇ ಕಾರಣ. ನಿಮ್ಮಿಂದಲೇ ಸಿನಿಮಾ ಗೆಲುವು ಪಡೆದಿದೆ. ಬೇರೆ ಭಾಷೆಯ ಸಿನಿಮಾ ಕ್ಷೇತ್ರದ ಜನರು ತಿರುಗಿ ನೀಡುವಂತೆ ಮಾಡಿದ್ದೀರಿ. ಅದ್ದರಿಂದ ಸಿನಿಮಾವನ್ನು ಹಾಗೆಯೇ ನೋಡಿ. ಈ ಕುರಿತು ಕ್ಷಮೆ ಇರಲಿ ಎಂದು ತಿಳಿಸಿದ್ದಾರೆ. ಆದರೆ ಅಭಿಮಾನಿಗಳ ಬೇಡಿಕೆಯಾದ ಫೈಟ್ ದೃಶ್ಯ ಕತ್ತರಿ ಹಾಕುವ ಬಗ್ಗೆ ಮಾತನಾಡಿಲ್ಲ.  ಇದನ್ನೂ ಓದಿ:  ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ರು ಶಿವಣ್ಣನ ಅಭಿಮಾನಿಗಳು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಶಿವಣ್ಣ ಏನ್ ದಡ್ಡರೇ- ಅಭಿಮಾನಿಗಳಿಗೆ ಸುದೀಪ್ ಪ್ರಶ್ನೆ

    ಶಿವಣ್ಣ ಏನ್ ದಡ್ಡರೇ- ಅಭಿಮಾನಿಗಳಿಗೆ ಸುದೀಪ್ ಪ್ರಶ್ನೆ

    ದಾವಣಗೆರೆ: ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ 36 ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಸಿನಿಮಾದ ಕಥೆಯನ್ನು ಕೇಳಿಯೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಶಿವಣ್ಣ ಏನೇನು ದಡ್ಡರಾ ಎಂದು ಅಭಿನಯ ಚಕ್ರವರ್ತಿ ಸುದೀಪ್ ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ.

    ಶಿವಣ್ಣ ಕಥೆಯನ್ನು ಒಪ್ಪಿಕೊಂಡು ಚಿತ್ರ ಮಾಡಿದ್ದಾರೆ. ಕತೆ ಕೇಳಿ ಸಿನಿಮಾ ಒಪ್ಪಿಕೊಂಡಿದ್ದು ಅವರ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರತಿಭಟನೆ ಮಾಡುತ್ತಿರುವ ಶಿವಣ್ಣರ ನಿರ್ಧಾರಕ್ಕೆ ವಿರೋಧ ಮಾಡಿದಂತಾಗುತ್ತದೆ. ಒಬ್ಬ ವ್ಯಕ್ತಿ ಇನ್ನೊಬ್ಬನ ಸೇರಿಸುವುದಕ್ಕೆ ಹೋದಾಗ ಮಾಡುವ ತ್ಯಾಗವನ್ನು ಅಲ್ಲಿ ತೋರಿಸಲಾಗಿದೆ.

    ಪಾತ್ರ ಅಂತಾ ಬಂದಾಗ ಅಲ್ಲಿ ಶಿವಣ್ಣ ನನ್ನ ಮೇಲೆ ಕೈ ಮಾಡುವ ಸೀನ್ ಬಂದಿದ್ದರೆ, ಖಂಡಿತ ನಾನು ಹೊಡೆಸಿಕೊಳ್ಳುತ್ತಿದ್ದೆ. ಹಿಂದೆ ಒಂದು ಸಿನಿಮಾದಲ್ಲಿ ಯಾರು ಅಂತಾ ಗೊತ್ತಿಲ್ಲ. ಒಂದು ಸನ್ನಿವೇಶದಲ್ಲಿ ಅವರ ಮಗ ಸಾವನ್ನಪ್ಪಿದ್ದಕ್ಕೆ ನನಗೆ ಹೊಡೆಯುತ್ತಾರೆ. ಅಂದು ನಾನು ಹೊಡೆಸಿಕೊಂಡಿದ್ದೇನೆ. ಕಥೆಗಾಗಿ ಆ ದೃಶ್ಯಗಳನ್ನು ಮಾಡಿರುತ್ತೇವೆ. ಶಿವಣ್ಣರ ಅನುಭವವನ್ನು ನಾವು ಪ್ರಶ್ನಿಸಲು ಹೋಗುವಷ್ಟು ದೊಡ್ಡವನು ನಾನು ಅಲ್ಲ ಅಂತಾ ಹೇಳಿದರು. ಇದನ್ನೂ ಓದಿ:  ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ರು ಶಿವಣ್ಣನ ಅಭಿಮಾನಿಗಳು!

    ಚಿತ್ರದಲ್ಲಿ ಮಗನನ್ನು ಕರೆದುಕೊಂಡು ಬರುತ್ತೇನೆ ಅಂತಾ ತಾಯಿಗೆ ಮಾತು ಕೊಟ್ಟಿರುತ್ತಾರೆ. ಹಾಗಾಗಿ ನನ್ನ ಮೇಲೆ ಕೈ ಮಾಡಲ್ಲ. ಕೈ ಮಾಡುವ ಮುನ್ನ ನನಗೂ ಶಿವಣ್ಣ ಯಾರು ಅಂತಾ ಗೊತ್ತಿರಲ್ಲ. ತಾಯಿ ಜೊತೆ ಸೇರಿಸಲು ಬಂದ ವ್ಯಕ್ತಿ ಅಂತಾ ಗೊತ್ತಾದ ಕೂಡಲೇ ಎಲ್ಲ ಫೈಟಿಂಗ್ ಸೀನ್ ನಿಂತು ಹೋಗುತ್ತದೆ. ಅಭಿಮಾನಿಗಳನ್ನು ಸಿನಿಮಾವನ್ನು ಸಿನಿಮಾ ರೀತಿಯಲ್ಲಿ ನೋಡಲಿ. ಬೇಕಾದ್ರೆ ಶಿವಣ್ಣ ಆ ಸೀನ್ ಕಟ್ ಮಾಡಿಸಲಿ. ನನ್ನದೇನೂ ಅಭ್ಯಂತರವಿಲ್ಲ ಅಂತಾ ಸುದೀಪ್ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ‘ದಿ ವಿಲನ್’ ರಿಲೀಸ್ ದಿನವೇ ಪ್ರೇಮ್ ಕೆಂಡಾಮಂಡಲ

    ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ಚಿತ್ರ ‘ದಿ ವಿಲನ್’ ಗುರುವಾರವಷ್ಟೇ ತೆರೆಕಂಡಿದ್ದು, ಇದೀಗ ಸಿನಿಮಾ ನೋಡಿದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಪ್ರೇಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಿನಿಮಾದಲ್ಲಿ ಸುದೀಪ್ ಅವರು ಶಿವಣ್ಣನಿಗೆ ಹೊಡೆಯುವ ದೃಶ್ಯವಿದ್ದು, ಈ ದೃಶ್ಯಕ್ಕೆ ಕತ್ತರಿ ಹಾಕಬೇಕು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಸಂಬಂಧ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಸಿನಿಮಾ ನೋಡಲು ಬಂದವ್ರಿಗೆ ಪೊಲೀಸರೇ `ವಿಲನ್’ ಗಳಾದ್ರು!

    ಸಿನಿಮಾ ನೋಡಲು ಬಂದವ್ರಿಗೆ ಪೊಲೀಸರೇ `ವಿಲನ್’ ಗಳಾದ್ರು!

    ಶಿವಮೊಗ್ಗ: ಕಿಚ್ಚ ಸುದೀಪ್ ಹಾಗೂ ಟಗರು ಶಿವಣ್ಣ ಅಭಿನಯದ `ದಿ ವಿಲನ್’ ಸಿನಿಮಾಕ್ಕೆ ಪ್ರದರ್ಶನಕ್ಕೆ ಚುನಾವಣಾ ನೀತಿ ಸಂಹಿತೆಯೇ ವಿಲನ್ ಆದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ.

    ಇಲ್ಲಿನ ಲಕ್ಷ್ಮೀ ಟಾಕೀಸ್ ನಲ್ಲಿ ವಿಲನ್ ಚಿತ್ರದ ಮಧ್ಯರಾತ್ರಿ ಪ್ರದರ್ಶನ ನಿಗದಿ ಆಗಿತ್ತು. ಅಭಿಮಾನಿ ಸಂಘದವರಿಗೆ ಟಿಕೆಟ್ ನೀಡುವ ಭರವಸೆಯನ್ನೂ ಟಾಕೀಸ್ ನವರು ನೀಡಿದ್ದರು. ಆದರೆ, ಈ ಪ್ರದರ್ಶನಕ್ಕೆ ಚುನಾವಣಾ ಆಯೋಗದ ಅನುಮತಿ ಪಡೆಯದಿರಲಿಲ್ಲ. ಈ ಕಾರಣಕ್ಕೆ ಪೊಲೀಸರು ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ.

    ಹೀಗಾಗಿ ಅದೂವರೆಗೂ ಮಧ್ಯರಾತ್ರಿಯೇ ಅಭಿಮಾನದ ನಟರ ಸಿನೆಮಾ ನೋಡುವ ಉಮೇದಿನಲ್ಲಿದ್ದ ಅಭಿಮಾನಿಗಳು ಆಕ್ರೋಶಗೊಂಡರು. ಅದೂವರೆಗೂ ಕಟೌಟ್ ಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಕುಂಬಳಕಾಯಿ ಒಡೆದು, ಕರ್ಪೂರ ಹಚ್ಚಿ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಪೊಲೀಸರೂ ವಿಲನ್ ಗಳಾದರು. ಎಲ್ಲರನ್ನೂ ಹೊರ ಕಳಿಸಿ, ಗೇಟು ಮುಚ್ಚಿಸಿದರು. ತೀವ್ರ ನಿರಾಸೆಯಲ್ಲಿ ಅಭಿಮಾನಿಗಳು ಹಿಂತಿರುಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • My dear hero ಅಂದ್ರು ಮಿಸಸ್ ಪ್ರಿಯಾ

    My dear hero ಅಂದ್ರು ಮಿಸಸ್ ಪ್ರಿಯಾ

    ಬೆಂಗಳೂರು: ಇಂದು ರಾಜ್ಯಾದ್ಯಂತ ಬಹುನಿರೀಕ್ಷಿತ ಸಿನಿಮಾ ‘ದಿ ವಿಲನ್’ ಚಿತ್ರ ಬಿಡುಗಡೆಯಾಗಿದೆ. ಆದರೆ ಸಿನಿಮಾ ಬಿಡುಗಡೆಯ ಮೊದಲೇ ಈ ಬಗ್ಗೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.

    ಪ್ರಿಯಾ ಸುದೀಪ್ ಅವರು, ”ನಾನು ಇದುವೆರೆಗೂ ಈ ರೀತಿಯ ಕ್ರೇಜ್ ಅನ್ನು ಈ ಹಿಂದೆ ನೋಡಿಯೇ ಇರಲಿಲ್ಲ. ರಾಜ್ಯಾದ್ಯಂತ ಇದು ಹಬ್ಬದ ರೀತಿ ಆಗಿದೆ. ಎನರ್ಜಿಟಿಕ್ ಶಿವಣ್ಣ, ನಿರ್ದೇಶಕ ಪ್ರೇಮ್ ಹಾಗೂ ನನ್ನ ಪ್ರೀತಿಯ ಹೀರೋ ಸುದೀಪ್ ಸೇರಿದಂತೆ ಇಡೀ ‘ದಿ ವಿಲನ್’ ಚಿತ್ರತಂಡಕ್ಕೆ ನನ್ನ ಶುಭಾಶಯಗಳು”  ಎಂದು ಬರೆದು  ಟ್ವೀಟ್ ಮಾಡಿದ್ದಾರೆ.

    ಇಂದು ಹಲವು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಇತ್ತೀಚೆಗೆ ಸುದೀಪ್ ಕುಟುಂಬ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿಯಾಗಿದ್ದರು. ಭೇಟಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟ ಸುದೀಪ್ ‘ಅವುಕು ರಾಜಾ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮುಖ್ಯ ಪಾತ್ರ ಪೋಷಿಸುತ್ತಿರುವ ಸುದೀಪ್ ಅವರ ಲುಕ್ ಈಗಾಗಲೇ ಬಹಿರಂಗವಾಗಿದೆ.

    ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಶೂಟಿಂಗ್ ನ ಬಿಡುವಿನ ವೇಳೆ ಚಿರಂಜೀವಿ ಜೊತೆಗೆ ಸುದೀಪ್ ಕುಟುಂಬ ಸಮಯ ಕಳೆದಿದೆ. ಚಿರಂಜೀವಿ ಜೊತೆಗೆ ಸುದೀಪ್ ಪುತ್ರಿ ಸಾನ್ವಿ ಕೂಡ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

    ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಚಿರಂಜೀವಿ, ಸುದೀಪ್ ಜೊತೆಗೆ ಜಗಪತಿ ಬಾಬು, ವಿಜಯ್ ಸೇತುಪತಿ, ನಯನತಾರಾ, ತಮನ್ನಾ, ಪೂನಂ ಕೌರ್ ನಟಿಸಿದ್ದಾರೆ. ವಿಶೇಷ ಪಾತ್ರವೊಂದರಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಬಣ್ಣ ಹಚ್ಚಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೇಮ್ ಆಕ್ರೋಶಕ್ಕೆ ನರ್ತಕಿ ಚಿತ್ರಮಂದಿರದ ಮ್ಯಾನೇಜರ್ ಪ್ರತಿಕ್ರಿಯೆ

    ಪ್ರೇಮ್ ಆಕ್ರೋಶಕ್ಕೆ ನರ್ತಕಿ ಚಿತ್ರಮಂದಿರದ ಮ್ಯಾನೇಜರ್ ಪ್ರತಿಕ್ರಿಯೆ

    ಬೆಂಗಳೂರು: ಇಂದು ಬೆಳಗ್ಗೆ ದಿ ವಿಲನ್ ಸಿನಿಮಾ ನಿರ್ದೇಶಕ ಪ್ರೇಮ್ ನರ್ತಕಿ ಚಿತ್ರಮಂದಿರದ ಸೌಂಡ್ ಎಂಜಿನಿಯರ್ ವಿರುದ್ಧ ಕೋಪಗೊಂಡಿದ್ದರು. ಈ ಸಂಬಂಧ ಮಾಧ್ಯಮಗಳ ಮುಂದೆಯೂ ಪ್ರೇಮ್ ಅಸಮಾಧಾನ ಹೊರ ಹಾಕಿದ್ದರು. ಸದ್ಯ ಪ್ರೇಮ್ ಹೇಳಿಕೆಗೆ ನರ್ತಕಿ ಚಿತ್ರಮಂದಿರದ ಮ್ಯಾನೇಜರ್ ನರಸಿಂಹ ಯಾದವ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ನಗರದ ಕೆ.ಜಿ.ರಸ್ತೆಯಲ್ಲಿ ನಮ್ಮದೇ ನಂಬರ್ ಒನ್ ಥಿಯೇಟರ್. ಇಲ್ಲಿ ಯಾವುದೇ ಸೌಂಡ್ ಸಮಸ್ಯೆ ಇಲ್ಲ. ನಮ್ಮಲ್ಲಿ ಎಲ್ಲ ಸಿನಿಮಾಗಳು ಸರಿಯಾಗಿ ಪ್ರದರ್ಶನ ಆಗುತ್ತವೆ. ದಿ ವಿಲನ್ ಚಿತ್ರ ಪ್ರದರ್ಶನ ಆರಂಭದಲ್ಲಿ ಸೌಂಡ್ ಸರಿ ಮಾಡುವಾಗ ಅರೆಕ್ಷಣ ತಾಂತ್ರಿಕ ತೊಂದರೆ ಆಯಿತು. ಪ್ರೇಮ್ ಸಿನಿಮಾವನ್ನು ಕಷ್ಟಪಟ್ಟು ಇಷ್ಟದಿಂದ ಮಾಡಿದಾಗ ಸೌಂಡ್ ಸಮಸ್ಯೆಯಾದಾಗ ಬೇಸರವಾಗುವುದು ಸಹಜ ಎಂದು ನರಸಿಂಹ ಯಾದವ್ ತಿಳಿಸಿದ್ದಾರೆ.

    ಪ್ರೇಮ್ ಅವರು ಮೇಲುಗಡೆ ಕ್ಯಾಬಿನ್ ನಲ್ಲಿ ಕುಳಿತು 5 ನಿಮಿಷ ಸಿನಿಮಾ ವೀಕ್ಷಿಸಿದ್ದಾರೆ. ಈವಾಗ ಬಂದು ಕುಳಿತು ನೋಡಲಿ. ಆಗ ನಂಗೂ ಅವರ ಅಭಿಪ್ರಾಯವನ್ನು ಕೇಳಬಹುದು. ಸಡನ್ ಆಗಿ ಅವರು ಆ ತರ ಹೇಳಿರುವುದು ಅವರ ಅಭಿಪ್ರಾಯವಷ್ಟೇ. ಆದ್ರೆ ಇಂದು ಮೆಜೆಸ್ಟಿಕ್, ಕೆ.ಜಿ ರೋಡ್ ಗೆ ನಂಬರ್ 1 ಥಿಯೇಟರ್ ಅಂದ್ರೆ ಅದು ನರ್ತಕಿ. ಇಲ್ಲಿ ರಾತ್ರಿ, ಹಗಲು ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ ಅಂತ ಅವರು ಹೇಳಿದ್ರು.

    ನಮ್ಮ ಚಿತ್ರಮಂದಿರಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ. ಜನರಿಗೆ ಯಾವ ರೀತಿ, ಮನರಂಜನೆ ಹಾಗೂ ಖುಷಿ ನೀಡಬೇಕೋ ಅದಕ್ಕೆ ಎಲ್ಲಾ ರೀತಿಯಲ್ಲೂ ಸಿದ್ಧತೆ ನಡೆಸಿದ್ದೇವೆ ಅಂತ ಅವರು ಚಿತ್ರವೀಕ್ಷಕರಲ್ಲಿ ಮನವಿ ಮಾಡಿಕೊಂಡರು.

    ನರ್ತಕಿ ಥಿಯೇಟರ್ ನಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗಿತ್ತು. ಚಿತ್ರದ ಆರಂಭದಲ್ಲಿಯೇ ಥಿಯೇಟರ್ ನಲ್ಲಿ ಸೌಂಡ್ ಸಮಸ್ಯೆ ಕಾಣಿಸಿಕೊಂಡಿತು. ಚಿತ್ರ ವೀಕ್ಷಿಸಿಸಲು ಖುಷಿಯಿಂದ ಬಂದ ಅಭಿಮಾನಿಗಳಿಗೆ ಕೆಲ ನಿಮಿಷ ಭಾರೀ ನಿರಾಸೆ ಉಂಟಾಯಿತು. ಇದರಿಂದ ಕೋಪಗೊಂಡು ಹೊರಬಂದ ಪ್ರೇಮ್ ಮಾಧ್ಯಮಗಳ ಮುಂದೆಯೇ ಚಿತ್ರಮಂದಿರದ ಮಾಲೀಕರ ಮೇಲೆ ಕೋಪಗೊಂಡರು.

    ಪ್ರಪಂಚದ ದೊಡ್ಡ ದೊಡ್ಡ ಎಂಜಿನಿಯರ್ ಗಳ ಕರೆಸಿ ಸಾಂಗ್ ಮಾಡಿಸಿದ್ದೇನೆ. ಚಿತ್ರದ ಆರಂಭದಲ್ಲಿ ಸಿನಿಮಾ ನಿಲ್ಲಿಸೋಣ ಅಂದುಕೊಂಡಿದ್ದೆ. ಆದರೆ ಅಭಿಮಾನಿಗಳಿಗೆ ನಿರಾಸೆ ಆಗುತ್ತೆ ಅಂತಾ ನಿರ್ಧಾರ ಬದಲಿಸಿ ಹೊರಗೆ ಬಂದಿದ್ದೇನೆ ಎಂದು ನರ್ತಕಿ ಚಿತ್ರಮಂದಿರದ ಸೌಂಡ್ ಎಂಜಿನಿಯರ್ ವಿರುದ್ಧ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ದಿ ವಿಲನ್’ ರಿಲೀಸ್ ದಿನವೇ ಪ್ರೇಮ್ ಕೆಂಡಾಮಂಡಲ

    ‘ದಿ ವಿಲನ್’ ರಿಲೀಸ್ ದಿನವೇ ಪ್ರೇಮ್ ಕೆಂಡಾಮಂಡಲ

    ಬೆಂಗಳೂರು: ಇಂದು ವಿಶ್ವದಾದ್ಯಂತ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳು ಸುದೀಪ್ ಮತ್ತು ಶಿವರಾಜ್‍ಕುಮಾರ್ ಅಭಿನಯವನ್ನು ನೋಡಲು ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳತ್ತ ಬಂದಿದ್ದಾರೆ. ನಗರದ ನರ್ತಕಿ ಚಿತ್ರಮಂದಿರ ಮಾಲೀಕರ ವಿರುದ್ಧ ನಿರ್ದೇಶಕ ಪ್ರೇಮ್ ಗರಂ ಆಗಿದ್ದಾರೆ.

    ನರ್ತಕಿ ಥಿಯೇಟರ್ ನಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗಿತ್ತು. ಚಿತ್ರದ ಆರಂಭದಲ್ಲಿಯೇ ಥಿಯೇಟರ್ ನಲ್ಲಿ ಸೌಂಡ್ ಸಮಸ್ಯೆ ಕಾಣಿಸಿಕೊಂಡಿತು. ಚಿತ್ರ ವೀಕ್ಷಿಸಿಸಲು ಖುಷಿಯಿಂದ ಬಂದ ಅಭಿಮಾನಿಗಳಿಗೆ ಕೆಲ ನಿಮಿಷ ಭಾರೀ ನಿರಾಸೆ ಉಂಟಾಯಿತು. ಇದರಿಂದ ಕೋಪುಗೊಂಡು ಹೊರಬಂದ ಪ್ರೇಮ್ ಮಾಧ್ಯಮಗಳ ಮುಂದೆಯೇ ಚಿತ್ರಮಂದಿರದ ಮಾಲೀಕರ ಮೇಲೆ ಕೋಪಗೊಂಡರು.

    ಪ್ರಪಂಚದ ದೊಡ್ಡ ದೊಡ್ಡ ಇಂಜಿನಿಯರ್ ಗಳ ಕರೆಸಿ ಸಾಂಗ್ ಮಾಡಿಸಿದ್ದೇನೆ. ಚಿತ್ರದ ಆರಂಭದಲ್ಲಿ ಸಿನಿಮಾ ನಿಲ್ಲಿಸೋಣ ಅಂದುಕೊಂಡಿದ್ದೆ, ಆದರೆ ಅಭಿಮಾನಿಗಳಿಗೆ ನಿರಾಸೆ ಆಗುತ್ತೆ ಅಂತಾ ನಿರ್ಧಾರ ಬದಲಿಸಿ ಹೊರಗೆ ಬಂದಿದ್ದೇನೆ ಎಂದು ನರ್ತಕಿ ಚಿತ್ರಮಂದಿರದ ಸೌಂಡ್ ಇಂಜಿನಿಯರ್ ವಿರುದ್ಧ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ವರ್ಷನಾಗಟ್ಟುಲೇ ಸಿನಿಮಾ ಮಾಡಿದ್ದೀವಿ. ದಯವಿಟ್ಟು ಮೊಬೈಲಿನಲ್ಲಿ ಸೆರೆ ಹಿಡಿಯಬೇಡಿ ಎಂದು ಜನರಲ್ಲಿ ಪ್ರೇಮ್ ಮನವಿ ಮಾಡಿಕೊಂಡರು.

    ಎಲ್ಲೆಡೆ ಟಿಕೆಟ್‍ಗೆ ನೂಕುನುಗ್ಗಲು ಕಂಡು ಬರುತ್ತಿದೆ. ಮಲ್ಟಿಪ್ಲೆಕ್ಸ್ ಗಳು ಹೌಸ್‍ಫುಲ್ ಆಗಿವೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯಾದ್ಯಂತ ‘ದಿ ವಿಲನ್’ ಹವಾ- ಥಿಯೇಟರ್ ಗಳ ಮುಂದೆ ಅಭಿಮಾನಿಗಳ ಡ್ಯಾನ್ಸ್

    ರಾಜ್ಯಾದ್ಯಂತ ‘ದಿ ವಿಲನ್’ ಹವಾ- ಥಿಯೇಟರ್ ಗಳ ಮುಂದೆ ಅಭಿಮಾನಿಗಳ ಡ್ಯಾನ್ಸ್

    ಬೆಂಗಳೂರು: ಇವತ್ತು ಡಬಲ್ ಧಮಾಕಾ. ಒಂದೆಡೆ ದಸರಾ ಸಂಭ್ರಮ. ಇನ್ನೊಂದೆಡೆ ದಿ ವಿಲನ್ ರಿಲೀಸ್ ಸಡಗರ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸಿರುವ ‘ದಿ ವಿಲನ್’ ಸಿನಿಮಾ ರಿಲೀಸ್ ಆಗಿದೆ.

    ಬಳ್ಳಾರಿಯ ಥಿಯೇಟರ್‍ಗಳಲ್ಲಿ ಬೆಳಗ್ಗೆ 5 ಗಂಟೆಗೆ ಮೊದಲ ಶೋ ಶುರುವಾಗಿದೆ. ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಮಂಡ್ಯ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ವಿಲನ್ ಫಸ್ಟ್ ಶೋ ಶುರುವಾಗಿದೆ. ಹಲವೆಡೆ ಇದೀಗ ಶೋ ಆರಂಭವಾಗಲಿದೆ. ಎಲ್ಲಾ ಥಿಯೇಟರ್‍ಗಳ ಮುಂದೆ ದಿ ವಿಲನ್ ನೋಡಲು ನಸುಕಿನ ಜಾವವೇ ಮುಗಿಬಿದ್ದಿದ್ದಾರೆ. ರಾತ್ರಿಯಿಂದಲೇ ಟಿಕೆಟ್‍ಗೆ ಕಾದು ಕುಳಿತಿದ್ದ ಶಿವಣ್ಣ, ಕಿಚ್ಚನ ವೀರಾಭಿಮಾನಿಗಳು, ಇದೀಗ ಸಿನಿಮಾ ಹಾಲ್ ಪ್ರವೇಶ ಮಾಡಿದ್ದಾರೆ.

    ಶಿವಮೊಗ್ಗದ ಲಕ್ಷ್ಮೀ ಟಾಕೀಸ್ ನಲ್ಲಿ ಮೂರು ದಿನಗಳ ಟಿಕೇಟ್ ಗಳು ಈಗಾಗಲೇ ಆನ್ ಲೈನ್ ನಲ್ಲಿ ಬುಕ್ ಆಗಿವೆ. ಮಧ್ಯರಾತ್ರಿಯೇ ಲಕ್ಷ್ಮಿ ಟಾಕೀಸ್ ಬಳಿ ಡೊಳ್ಳು, ತಮಟೆ ತರಿಸಿ ಅಭಿಮಾನಿಗಳು ಡ್ಯಾನ್ಸ್ ಮಾಡಿದರು. ಕುಂಬಳ ಕಾಯಿ ಒಡೆದು, ಕಟೌಟ್ ಮುಂದೆ ಕರ್ಪೂರ ಹಚ್ಚಿ ಸಂಭ್ರಮಿಸಿದರು. ಗಲಾಟೆ ಆಗಬಹುದು ಎನ್ನುವ ಕಾರಣಕ್ಕೆ ಮಿಡ್‍ನೈಟ್ ಶೋಗೆ ಪೊಲೀಸ್ ಇಲಾಖೆ ಅವಕಾಶ ನೀಡಲಿಲ್ಲ. ಇದರಿಂದಾಗಿ ಸಾವಿರಾರು ಅಭಿಮಾನಿಗಳಿಗೆ ಭಾರೀ ನಿರಾಸೆ ಆಯ್ತು. ಪೊಲೀಸ್ ಮತ್ತು ಜಿಲ್ಲಾಡಳಿತದ ಅನುಮತಿ ಪಡೆಯದೇ ಲಕ್ಷ್ಮೀ ಟಾಕೀಸ್ ಮಾಲೀಕರು ಟಿಕೆಟ್ ಮಾರಾಟ ಮಾಡಿದ್ದರು.

    ಎಲ್ಲೆಡೆ ಟಿಕೆಟ್‍ಗೆ ನೂಕುನುಗ್ಗಲು ಕಂಡು ಬರುತ್ತಿದೆ. ಮಲ್ಟಿಪ್ಲೆಕ್ಸ್ ಗಳು ಹೌಸ್‍ಫುಲ್ ಆಗಿವೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುದೀಪ್, ಆ್ಯಮಿ ಕಾಂಬಿನೇಷನ್ ರೊಮ್ಯಾಂಟಿಕ್ ಹಾಡಿನ ಝಲಕ್ ರಿಲೀಸ್

    ಸುದೀಪ್, ಆ್ಯಮಿ ಕಾಂಬಿನೇಷನ್ ರೊಮ್ಯಾಂಟಿಕ್ ಹಾಡಿನ ಝಲಕ್ ರಿಲೀಸ್

    ಬೆಂಗಳೂರು: ದಿ ವಿಲನ್ ಕರುನಾಡಿನ ಜನತೆ ಕಾಯುತ್ತಿರುವ ಮಲ್ಟಿ ಸ್ಟಾರ್ ಸಿನಿಮಾ. ಸಿನಿಮಾ ಅಕ್ಟೋಬರ್ 18ಕ್ಕೆ ರಿಲೀಸ್ ಆಗಲಿದ್ದು, ಚಿತ್ರತಂಡ ಸಿನಿಮಾದ ಮೇಕಿಂಗ್ ಮತ್ತು ಹಾಡಿನ ತುಣುಖೂಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದೆ. ಈಗ ಅಭಿನಯ ಚಕ್ರವರ್ತಿ ಸುದೀಪ್, ಬ್ರಿಟನ್ ಸುಂದರಿ ಆ್ಯಮಿ ಜಾಕ್ಸನ್ ಕಾಂಬೀನೇಷನ್ ‘ಹೇಳಲ್ಲ.. ನಾ, ಹೇಳಲ್ಲ’ ಹಾಡಿನ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಕೇವಲ 30 ಸೆಕೆಂಡ್‍ನ ಈ ವಿಡಿಯೋದಲ್ಲಿ ಮನೆಯೊಂದಕ್ಕೆ ಬಣ್ಣ ಹಚ್ಚುತ್ತಿದ್ದು, ಸುದೀಪ್ ಮತ್ತು ಆ್ಯಮಿ ರೊಮ್ಯಾಂಟಿಕ್ ಆಗಿ ಮಿಂಚಿದ್ದಾರೆ. ಸುದೀಪ್ ಬಿಳಿ ಮತ್ತು ನೀಲಿ ಬಣ್ಣದ ಕುರ್ತಾ ಧರಿಸಿ, ತಲೆಗೆ ಟ್ರೆಂಡಿಂಗ್ ಬಟ್ಟೆ ಕಟ್ಟಿದ್ದರೆ, ಇತ್ತ ಆ್ಯಮಿ ಸೀರೆ, ಲಂಗ-ದವಣಿಯಲ್ಲಿ ಕುಣಿದಿದ್ದಾರೆ. ದಿ ವಿಲನ್ ಸಿನಿಮಾದ ಟ್ರೇಲರ್, ಹಾಡಿನ ಲಿರಿಕ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಂಚನ್ನು ಹರಿಸಿವೆ.

    ಮಂಗಳವಾರ ಬಿಡುಗಡೆಯಾದ ದಿ ವಿಲನ್ ಹಾಡಿನ ಅಲ್ಬಂ ಟ್ರೆಂಡಿಂಗ್ 2 ರಲ್ಲಿದೆ. ಬಿಡುಗಡೆಯಾದ ಒಂದೇ ದಿನಕ್ಕೆ 8.9 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಮೊದಲ ಬಾರಿಗೆ ಅಭಿನಯಿಸಿದ್ದು, ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಅರ್ಜುನ್ಯ ಸಂಗೀತ ನೀಡಿದ್ದು, ಯುಟ್ಯೂಬ್‍ನಲ್ಲಿ ಸಂಚಲನ ಹುಟ್ಟುಹಾಕಿವೆ. ಚಿತ್ರ ಇದೇ ತಿಂಗಳು ಅಕ್ಟೋಬರ್ 18ರಂದು ತೆರೆಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv