Tag: ದಿ ವಿಲನ್

  • ಇಂಡಿಯಾ ಗೇಟ್ ಮುಂದೆ ಬಾಯ್‌ಫ್ರೆಂಡ್‌ಗೆ ‘ದಿ ವಿಲನ್’ ನಾಯಕಿ ಲಿಪ್‌ಲಾಕ್

    ಇಂಡಿಯಾ ಗೇಟ್ ಮುಂದೆ ಬಾಯ್‌ಫ್ರೆಂಡ್‌ಗೆ ‘ದಿ ವಿಲನ್’ ನಾಯಕಿ ಲಿಪ್‌ಲಾಕ್

    ನ್ನಡದ ‘ದಿ ವಿಲನ್’ (The Villain) ಸಿನಿಮಾದ ನಾಯಕಿ ಆ್ಯಮಿ ಜಾಕ್ಸನ್ (Amy Jackson) 5 ವರ್ಷಗಳ ನಂತರ ಕಳದೆ ಮೂರು ದಿನಗಳ ಹಿಂದೆ ಭಾರತಕ್ಕೆ ಕಾಲಿಟ್ಟಿದ್ದಾರೆ. ಫಾರಿನ್‌ನಲ್ಲಿ ಬೀಡು ಬಿಟ್ಟಿದ್ದ ನಟಿ ಈಗ ಮತ್ತೆ ಭಾರತಕ್ಕೆ (India) ಮರಳಿದ್ದಾರೆ. ಸದ್ಯ ಮುಂಬೈ ಬೀದಿಯಲ್ಲಿ ಬಾಯ್‌ಫ್ರೆಂಡ್ ಎಡ್ ವೆಸ್ಟ್ವಿಕ್ ಜೊತೆ ಸುತ್ತಾಡುತ್ತಿದ್ದಾರೆ. ಗೆಳೆಯನಿಗೆ ಲಿಪ್ ಕಿಸ್ ಕೊಟ್ಟಿರೋ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ತಾಕತ್ತಿದ್ದರೆ ‘ಮಣಿಪುರ ಫೈಲ್ಸ್’ ಮಾಡಿ: ವಿವೇಕ್ ಅಗ್ನಿಹೋತ್ರಿಗೆ ಸವಾಲು

    2018ರಲ್ಲಿ ‘ದಿ ವಿಲನ್’ ಸಿನಿಮಾದ ಮೂಲಕ ಕನ್ನಡ ಸಿನಿ ರಸಿಕರಿಗೆ ಪರಿಚಿತರಾದ ಆ್ಯಮಿ ಜಾಕ್ಸನ್ ಅವರು ಸುದೀಪ್- ಶಿವಣ್ಣ ಅವರ ಜುಗಲ್‌ಬಂದಿಯ ನಡುವೆಯೂ ನಟಿ ಹೈಲೆಟ್ ಆಗಿದ್ರು. ‘ನೋಡವಳಂದಾವ’ ಸಾಂಗ್‌ನಲ್ಲಿ ಆ್ಯಮಿ ಬ್ಯೂಟಿಯನ್ನ ಬಣ್ಣಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಕನ್ನಡದ ಜೊತೆ ಹಿಂದಿ, ತಮಿಳು, ಇಂಗ್ಲೀಷ್ ಸಿನಿಮಾಗಳಲ್ಲೂ ಆ್ಯಮಿ ಜಾಕ್ಸನ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    ಇದೀಗ ಬಿಟ್ರನ್ ಗೆಳೆಯ ಎಡ್ ವೆಸ್ಟ್ವಿಕ್ (Ed Westwick) ಜೊತೆ ನೆನ್ನೆ ಮುಂಬೈನ ಇಂಡಿಯಾ ಗೇಟ್‌ಗೆ (India Gate) ವಿಸಿಟ್ ಮಾಡಿದ್ದಾರೆ. ಬರೀ ಭೇಟಿ ಕೊಡೋದಲ್ದೇ ಇಂಡಿಯಾ ಮುಂದೆಯೇ ಹಸಿ – ಬಿಸಿ ಚುಂಬನವನ್ನೂ ಹಂಚಿಕೊಂಡಿದ್ದಾರೆ. ಈ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅಭಿಮಾನಿಗಳು ಉಬ್ಬೇರಿಸುವಂತೆ ಮಾಡಿದ್ದಾರೆ. ಬ್ರಿಟಿಷ್ ಆಕ್ಟರ್ ಆಗಿತೋ ಎಡ್ ಗಾಸಿಪ್ ಗರ್ಲ್ ಅನ್ನೋ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಇದೀಗ ಗೆಳೆತಿ ಆ್ಯಮಿ ಜೊತೆ ಇಂಡಿಯಾಗೆ ಬಂದಿರೋ ಎಡ್ ಮತ್ತಷ್ಟು ಪ್ರಸಿದ್ಧ ಭಾಗಗಳನ್ನು ನೋಡೋ ಕೌತುಕದಲ್ಲಿದ್ದಾರೆ.

    ಇನ್ನೂ ಫಾರಿನ್‌ನಲ್ಲಿ ಆ್ಯಮಿ ಸೆಟಲ್ ಆಗಿದ್ರು. ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ನಟಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ರು. ಬಾಯ್‌ಫ್ರೆಂಡ್ ಜೊತೆ ಡೇಟಿಂಗ್ ಸುದ್ದಿ, ಮದುವೆಯಾಗದೇ ಮಗು ಬಗ್ಗೆ ಅನೌನ್ಸ್ ಮಾಡಿದ್ದ ಆ್ಯಮಿ , ಈಗ ಹೊಸ ಬಾಯ್‌ಫ್ರೆಂಡ್ ಎಡ್ ವೆಸ್ಟ್ವಿಕ್ ಜೊತೆ ಎಂಗೇಜ್ ಆಗಿದ್ದಾರೆ. ಅಂದ್ಹಾಗೆ ಈಗ ಆ್ಯಮಿ ಜಾಕ್ಸನ್ ಕುರಿತು ಹೊಸ ಚರ್ಚೆ ಏನಂದ್ರೆ, ಸುಮಾರು ಐದು ವರ್ಷಗಳ ನಂತ್ರ ಆ್ಯಮಿ ಭಾರತಕ್ಕೆ ಕಾಲಿಟ್ಟಿದ್ದಾರೆ. ಈ ಭೇಟಿ ಬಗ್ಗೆ ಆ್ಯಮಿ ಕೂಡ ಖುದ್ದಾಗಿ ಖುಷಿ ಹಂಚಿಕೊಂಡಿದ್ದು, ವರ್ಷಗಳ ನಂತ್ರ ಭಾರತಕ್ಕೆ ಬಂದಿರೋದು ಖುಷಿಕೊಟ್ಟಿದೆ ಎಂದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 5 ವರ್ಷಗಳ ನಂತರ ಭಾರತಕ್ಕೆ ಕಾಲಿಟ್ಟ ‘ದಿ ವಿಲನ್‌’ ಚಿತ್ರದ ನಾಯಕಿ

    5 ವರ್ಷಗಳ ನಂತರ ಭಾರತಕ್ಕೆ ಕಾಲಿಟ್ಟ ‘ದಿ ವಿಲನ್‌’ ಚಿತ್ರದ ನಾಯಕಿ

    ನ್ನಡದ ‘ದಿ ವಿಲನ್‌’ (The Villain) ಸಿನಿಮಾದ ನಾಯಕಿ ಆ್ಯಮಿ ಜಾಕ್ಸನ್ (Amy Jackson) 5 ವರ್ಷಗಳ ನಂತರ ಭಾರತಕ್ಕೆ ಕಾಲಿಟ್ಟಿದ್ದಾರೆ. ಫಾರಿನ್‌ನಲ್ಲಿ ಬೀಡು ಬಿಟ್ಟಿದ್ದ ನಟಿ ಈಗ ಮತ್ತೆ ಭಾರತಕ್ಕೆ ಮರಳಿದ್ದಾರೆ. ಈ ಕುರಿತ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    2018ರಲ್ಲಿ ‘ದಿ ವಿಲನ್’ ಸಿನಿಮಾದ ಮೂಲಕ ಕನ್ನಡ ಸಿನಿ ರಸಿಕರಿಗೆ ಪರಿಚಿತರಾದ ಆ್ಯಮಿ ಜಾಕ್ಸನ್ ಅವರು ಸುದೀಪ್- ಶಿವಣ್ಣ ಅವರ ಜುಗಲ್‌ಬಂದಿಯ ನಡುವೆಯೂ ನಟಿ ಹೈಲೆಟ್ ಆಗಿದ್ರು. ʼನೋಡವಳಂದಾವʼ ಸಾಂಗ್‌ನಲ್ಲಿ ಆ್ಯಮಿ ಬ್ಯೂಟಿಯನ್ನ ಬಣ್ಣಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಕನ್ನಡದ ಜೊತೆ ಹಿಂದಿ, ತಮಿಳು, ಇಂಗ್ಲೀಷ್ ಸಿನಿಮಾಗಳಲ್ಲೂ ಆ್ಯಮಿ ಜಾಕ್ಸನ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಜಯಣ್ಣ ಪಾಲಾದ ‘ಜೈಲರ್’ ಚಿತ್ರದ ಕರ್ನಾಟಕ ವಿತರಣಾ ಹಕ್ಕು

    ಫಾರಿನ್‌ನಲ್ಲಿ ಆ್ಯಮಿ ಸೆಟಲ್ ಆಗಿದ್ರು. ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ನಟಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ರು. ಬಾಯ್‌ಫ್ರೆಂಡ್ ಜೊತೆ ಡೇಟಿಂಗ್ ಸುದ್ದಿ, ಮದುವೆಯಾಗದೇ ಮಗು ಬಗ್ಗೆ ಅನೌನ್ಸ್ ಮಾಡಿದ್ದ ಆ್ಯಮಿ, ಈಗ ಹೊಸ ಬಾಯ್‌ಫ್ರೆಂಡ್ ಜೊತೆ ಎಂಗೇಜ್ ಆಗಿದ್ದಾರೆ. ಅಂದ್ಹಾಗೆ ಈಗ ಆ್ಯಮಿ ಜಾಕ್ಸನ್ ಕುರಿತು ಹೊಸ ಚರ್ಚೆ ಏನಂದ್ರೆ, ಸುಮಾರು ಐದು ವರ್ಷಗಳ ನಂತ್ರ ಆ್ಯಮಿ ಭಾರತಕ್ಕೆ ಕಾಲಿಟ್ಟಿದ್ದಾರೆ. ಈ ಭೇಟಿ ಬಗ್ಗೆ ಆ್ಯಮಿ ಕೂಡ ಖುದ್ದಾಗಿ ಖುಷಿ ಹಂಚಿಕೊಂಡಿದ್ದು, ವರ್ಷಗಳ ನಂತ್ರ ಭಾರತಕ್ಕೆ ಬಂದಿರೋದು ಖುಷಿಕೊಟ್ಟಿದೆ ಎಂದಿದ್ದಾರೆ.

    ನಟಿ ಭಾರತಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪಾಪರಾಜಿಗಳು ಮುಗಿಬಿದ್ದರು. ಮುಂಬೈ ಏರ್ಪೋರ್ಟ್ ನಲ್ಲಿ ಆ್ಯಮಿ ಜಾಕ್ಸನ್ ಎಂಟ್ರಿ ಕೊಟ್ಟಿರುವ ಫೋಟೋಗಳು ವೈರಲ್ ಆಗಿವೆ. ಆ್ಯಮಿ ಭೇಟಿ ಬಳಿಕ ಆಕೆಯ ಮುಂದಿನ ಸಿನಿಮಾ ಬಗ್ಗೆಯೂ ಸುದ್ದಿ ಶುರುವಾಗಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಬೆಳ್ಳಿ ತೆರೆಗೆ ವಾಪಸ್ಸಾಗಲು, ಆ್ಯಮಿ ಭಾರತಕ್ಕೆ ಬಂದಿಳಿದಿದ್ದಾರೆ ಎನ್ನಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದರ್ಶನ್ ಜೊತೆ ದಿ ವಿಲನ್ ನಿರ್ಮಾಪಕರ ಮಾತುಕತೆ!

    ದರ್ಶನ್ ಜೊತೆ ದಿ ವಿಲನ್ ನಿರ್ಮಾಪಕರ ಮಾತುಕತೆ!

    ಓರ್ವ ನಿರ್ಮಾಪಕ ಮತ್ತು ಯಾವುದೇ ಸ್ಟಾರ್ ನಟನನ್ನು ಭೇಟಿಯಾದರೂ ತಕ್ಷಣವೇ ಹೊಸ ಸಿನಿಮಾ ಶುರುವಾಗಲಿದೆಯಾ ಎಂಬ ಪ್ರಶ್ನೆ ಮೊಳೆತುಬಿಡುತ್ತೆ. ಹಾಗಿರುವಾಗ ಕನ್ನಡ ಚಿತ್ರರರಂಗದ ಸ್ಟಾರ್ ನಿರ್ದೇಶಕರಾಗಿ ಗುರುತಿಸಿಕೊಂಡಿರೋ ಸಿ.ಆರ್.ಮನೋಹರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾದರೆ ಅದೇ ಧಾಟಿಯ ಆಲೋಚನೆ ಬರೋದರಲ್ಲಿ ಯಾವ ಅಚ್ಚರಿಯೂ ಇಲ್ಲ.

    ಸಿ.ಆರ್. ಮನೋಹರ್ ರಾಜರಾಜೇಶ್ವರಿ ನಗರದಲ್ಲಿರೋ ಮನೆಗೆ ಭೇಟಿ ನೀಡಿ ದರ್ಶನ್ ಅವರ ಜೊತೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ಫೋಟೋಗಳನ್ನು ಮನೋಹರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡುತ್ತಿದ್ದಂತೆಯೇ ಇದು ಹೊಸ ಸಿನಿಮಾ ಸಂಬಂಧಿತ ಮಾತುಕತೆ ಎಂಬರ್ಥದಲ್ಲಿ ಚರ್ಚೆಯೂ ಶುರುವಾಗಿದೆ. ಆದರೆ ಈ ಬಗ್ಗೆ ಮನೋಹರ್ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

    ಅವರು ಸಾಕಷ್ಟು ದಿನಗಳಿಂದಲೂ ದರ್ಶನ್ ಅವರನ್ನು ಭೇಟಿ ಮಾಡಬೇಕೆಂಬ ಇರಾದೆ ಹೊಂದಿದ್ದರಂತೆ. ಆದರೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಈ ಭೇಟಿಯ ಸಂದರ್ಭದಲ್ಲಿ ಯಾವುದೇ ಸಿನಿಮಾದ ಮಾತುಕತೆಯೂ ನಡೆದಿಲ್ಲ. ಇದೊಂದು ಔಪಚಾರಿಕ ಭೇಟಿಯಷ್ಟೇ ಅಂತ ಮನೋಹರ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಈಗ ದರ್ಶನ್ ಸಾಲು ಸಾಲಾಗಿ ಮೂರ್ನಾಲಕ್ಕು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮನೋಹರ್ ಕೂಡಾ ಹೊಸ ಸಿನಿಮಾ ಶುರು ಮಾಡಿದ್ದಾರೆ. ಆದ್ದರಿಂದ ಇವರಿಬ್ಬರ ಕಾಂಬಿನೇಷನ್ನಿನ ಚಿತ್ರ ಸದ್ಯಕ್ಕೆ ಶುರುವಾಗೋ ಲಕ್ಷಣಗಳಿಲ್ಲ.

    ಆದರೆ ಈ ಭೇಟಿಯೇ ಮನೋಹರ್ ನಿರ್ಮಾಣದಲ್ಲಿ ದರ್ಶನ್ ಅವರದ್ದೊಂದು ಸಿನಿಮಾ ಮೂಡಿ ಬರುವ ಮುನ್ಸೂಚನೆ ಎಂಬುದನ್ನು ಮಾತ್ರ ತಳ್ಳಿ ಹಾಕುವಂತಿಲ್ಲ. ಮನೋಹರ್ ಈಗಾಗಲೇ ದೊಡ್ಡ ಬಜೆಟ್ಟಿನ ಚಿತ್ರಗಳ ಮೂಲಕ ಸದ್ದು ಮಾಡಿರುವ ನಿರ್ಮಾಪಕರು. ರೋಗ್, ವಜ್ರಕಾಯ, ಶಿವಂ, ದಿ ವಿಲನ್ ಮುಂತಾದ ಬಿಗ್ ಬಜೆಟ್ ಚಿತ್ರಗಳ ನಿರ್ಮಾಪಕರಾದ ಮನೋಹರ್ ಅವರಿಗೆ ದರ್ಶನ್ ಚಿತ್ರ ನಿರ್ಮಾಣ ಮಾಡೋ ಆಸೆಯಂತೂ ಇದೆಯಂತೆ.

  • ರೌಂಡಪ್ 2018 – ಭಾರತದಲ್ಲಿ ಸ್ಯಾಂಡಲ್‍ವುಡ್ ಲೋಕದ ಸದ್ದು ಈ ಬಾರಿ ಹೇಗಿತ್ತು? ಬಾಲಿವುಡ್‍ನಲ್ಲಿ ಏನಾಯ್ತು?

    ರೌಂಡಪ್ 2018 – ಭಾರತದಲ್ಲಿ ಸ್ಯಾಂಡಲ್‍ವುಡ್ ಲೋಕದ ಸದ್ದು ಈ ಬಾರಿ ಹೇಗಿತ್ತು? ಬಾಲಿವುಡ್‍ನಲ್ಲಿ ಏನಾಯ್ತು?

    2018ಕ್ಕೆ ಬೈ ಹೇಳಿ ಎಲ್ಲರೂ 2019ರತ್ತ ಹೆಜ್ಜೆ ಹಾಕುತ್ತಿದ್ದೇವೆ. ಕಲರ್ ಫುಲ್ ದುನಿಯಾ ಅಂದ್ರೆ ಸಿನಿ ಲೋಕ. ಈ ಬಣ್ಣದ ಲೋಕ 2018ರಲ್ಲಿ ಹಲವು ವಿಷಯಗಳನ್ನು ಹೊರಹಾಕಿತು. ಕೆಲವು ಸಿನಿಮಾಗಳು ವಿವಾದದಲ್ಲಿಯೇ ಸದ್ದು ಮಾಡಿದ್ರೆ, ಮತ್ತೆ ಕೆಲವು ತಮ್ಮ ಕಥೆಯಿಂದಲೇ ಇಡೀ ದೇಶವನ್ನೇ ಗಾಂಧಿನಗರದತ್ತ ತಿರುಗಿ ನೋಡುವಂತೆ ಮಾಡಿತು. ಕೆಲ ಕಲಾವಿದರು ತಮ್ಮ ಖಾಸಗಿ ಜೀವನದಿಂದಲೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡರು.

    ಇತ್ತ ಕಿರಿಕ್ ಪಾರ್ಟಿ ಮೂಲಕವೇ ಮನೆ ಮಾತಾಗಿದ್ದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬ್ರೇಕಪ್ ಸುದ್ದಿ ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್ ಅಂಗಳದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇನ್ನು ಮೀಟೂ ವೇದಿಕೆಯಲ್ಲಿ ಕನ್ನಡದ ನಟಿಯರು ತಮಗಾದ ಕಿರುಕುಳವನ್ನು ಹಂಚಿಕೊಂಡಿದ್ದುಂಟು. ನಟಿ ಶೃತಿ ಹರಿಹರನ್ ದಕ್ಷಿಣ ಭಾರತದ ಸ್ಪುರದ್ರೂಪಿ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದರು. ದುನಿಯಾ ವಿಜಯ್ ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದರು. ದುನಿಯಾ ವಿಜಯ್ ಜೈಲು ಸೇರಿದಂತೆ ವಿಜಿ ಪತ್ನಿಯರಿಬ್ಬರ ಜಗಳ ಹೊರ ಬಂದಿತ್ತು. ಹೀಗೆ ದರ್ಶನ್ ಕಾರ್ ಅಪಘಾತ, ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆ ಪ್ರಕರಣ, ದಿ ವಿಲನ್, ರಾಜರಥ ಸಿನಿಮಾ ವಿವಾದ ಎಲ್ಲವು 2018ರ ಪುಟದಲ್ಲಿ ಸೇರಿಕೊಂಡಿವೆ. 2018ರ ಸಿನಿ ಅಂಗಳದ ಟಾಪ್ ಸ್ಟೋರಿಗಳು ಈ ಕೆಳಗಿನಂತಿವೆ. ಇದನ್ನೂ ಓದಿ: 2018ರಲ್ಲಿ ಸಿನಿ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ ಮುದ್ದು ಕಂದಮ್ಮಗಳು

    1. ಪದ್ಮಾವತ್:
    ದೀಪಿಕಾ ಪಡುಕೋಣೆ ನಟಿಸಿರುವ ಐತಿಹಾಸಿಕ ಕಥೆಯನ್ನು ಹೊಂದಿರುವ `ಪದ್ಮಾವತ್’ ಸಿನಿಮಾ ಜನವರಿ 25ರಂದು ತೆರೆಕಂಡಿತ್ತು. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣ್‍ವೀರ್ ಸಿಂಗ್ ಮತ್ತು ರಾಣಾ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಪದ್ಮಾವತ್ ಸಿನಿಮಾ ಸಾಕಷ್ಟು ವಿವಾದಗಳಿಂದಲೇ ಸುದ್ದಿ ಮಾಡಿದತ್ತು. ಎಂಟು ದಿನಗಳಲ್ಲಿ 200 ಕೋಟಿಗೂ ಅಧಿಕ ಹಣವನ್ನು ಗಳಿಸಿ ಯಶಸ್ಸಿನತ್ತ ಮುನ್ನುಗ್ಗಿತ್ತು.

    2. ರಾಜರಥ ಸಿನಿಮಾ:
    ತೆಲುಗು ಭಾಷೆಯ ಬಾಹುಬಲಿ ಸಿನಿಮಾಗೆ ಠಕ್ಕರ್ ನೀಡಿದ ಸಿನಿಮಾ ರಂಗಿತರಂಗ. ರಾಜ್ಯದಲ್ಲಿ ಬಾಹುಬಲಿ ಸದ್ದು ಮಾಡುತ್ತಿದ್ದಾಗಲೇ ತೆರೆಕಂಡಿದ್ದ ರಂಗಿತರಂಗ ಹೊಸ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಗೆಲುವು ಸಾಧಿಸಿತ್ತು. ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಸೋದರರ ಸಾರಥ್ಯದಲ್ಲಿ ಮೂಡಿಬಂದಿದ್ದ ರಂಗಿತರಂಗ ಚಿತ್ರವನ್ನು ಕರುನಾಡಿನ ಜನ ಮೆಚ್ಚಿಕೊಂಡಿದ್ದರು. ಇದನ್ನೂ ಓದಿ: 2018ರಲ್ಲಿ ಸಿನಿಮಾರಂಗ ಕಳೆದುಕೊಂಡ ಕಲಾವಿದರು

    ಇದೇ ಜೋಡಿಯ ಮತ್ತೊಂದು ಚಿತ್ರ ರಾಜರಥ 2018 ಏಪ್ರಿಲ್ ನಲ್ಲಿ ಬಿಡುಗಡೆಗೆ ಸಿದ್ಧಗೊಂಡಿತ್ತು. ಸಿನಿಮಾ ಪ್ರಮೋಷನ್ ಗಾಗಿ ಆರ್.ಜೆ. ರ್ಯಾಪಿಡ್ ರಶ್ಮಿ ನಡೆಸಿಕೊಡುವ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಚಿತ್ರ ತಂಡ ಭಾಗಿಯಾಗಿತ್ತು. ಕಾರ್ಯಕ್ರಮದಲ್ಲಿ ಡ್ಯಾಷಿಂಗ್ ಸುತ್ತಿನಲ್ಲಿ ರಶ್ಮಿ, ರಾಜರಥ ಸಿನಿಮಾ ನೋಡದವ್ರು ಡ್ಯಾಶ್ ಎಂದು ಬಿಟ್ಟ ಸ್ಥಳ ತುಂಬುವಂತೆ ಹೇಳಿದರು. ಈ ವೇಳೆ ನಟ ನಿರೂಪ್ ಭಂಡಾರಿ, ಕಚಡಾ, ಲೋಫರ್ ನನ್ನ್ಮಕ್ಕಳು ಅಂತಾ ಹೇಳಿದ್ದು ದೊಡ್ಡ ವಿವಾದವಾಗಿತ್ತು. ಕೊನೆಗೆ ರಶ್ಮಿ, ನಟ ನಿರೂಪ್ ಭಂಡಾರಿ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಚಲನಚಿತ್ರ ಮಂಡಳಿಯಲ್ಲಿ ಸುದ್ದಿಗೋಷ್ಠಿ ಕರೆದು ಕ್ಷಮೆ ಕೇಳಿದರು.

    3. ಸಲ್ಮಾನ್ ಖಾನ್:
    ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ದೋಷಿ ಎಂದು ಜೋಧಪುರ ಸಿಜೆಎಂ ಕೋರ್ಟ್ ತೀರ್ಪು ನೀಡಿತ್ತು. 5 ವರ್ಷ ಶಿಕ್ಷೆಗೆ ಒಳಗಾಗಿದ್ದ ಸಲ್ಮಾನ್‍ಗೆ ನ್ಯಾಯಾಧೀಶ ರವೀಂಧರ್ ಜೋಶಿ ಅವರು ಷರತ್ತು ಬದ್ಧ ಜಾಮೀನು ನೀಡಿದ್ದರು. 50 ಸಾವಿರ ರೂ. ಎರಡು ಬಾಂಡ್ ಗಳನ್ನು ಸಲ್ಲಿಸಬೇಕು. ಪ್ರಕರಣದ ಇತರೆ ಆರೋಪಿಗಳಾದ ಸೈಫ್ ಆಲಿ ಖಾನ್, ಟಬು, ನೀಲಂ, ಸೋನಾಲಿ ಬೇಂದ್ರೆ ಸೇರಿದಂತೆ 6 ಜನರನ್ನು ಕೋರ್ಟ್ ಖುಲಾಸೆಗೊಳಿಸಿತ್ತು.

    4. ರಕ್ಷಿತ್-ರಶ್ಮಿಕಾ ಬ್ರೇಕಪ್
    2016 ಡಿಸೆಂಬರ್ ನಲ್ಲಿ ಬಿಡುಗಡೆಗೊಂಡ ಚಿತ್ರ ಕಿರಿಕ್ ಪಾರ್ಟಿ. ಈ ಚಿತ್ರದ ಮೂಲಕ ಹೊರಬಂದ ಮುದ್ದಾದ ಜೋಡಿಯೇ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ. ಅಭೂತಪೂರ್ವ ಯಶಸ್ಸು ಕಂಡ ಈ ಸಿನಿಮಾದಲ್ಲಿ ಕರ್ಣ ಮತ್ತು ಸಾನ್ವಿ ಪಾತ್ರಧಾರಿಗಳು ಕರುನಾಡಿದ ಜನಮನದಲ್ಲಿ ಅಚ್ಚು ಉಳಿದಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಡುವೆ ಪ್ರೇಮ ಚಿಗುರಿ ನಿಶ್ಚಿತಾರ್ಥದ ಉಂಗುರವನ್ನ ಪರಸ್ಪರ ಬದಲಿಸಿಕೊಳ್ಳುವ ಮುಂದೆ ಮದುವೆ ಆಗಲಿದ್ದೇವೆ ಅಂತಾ ಜೋಡಿ ಹೇಳಿಕೊಂಡಿತ್ತು. ಮೊದಲ ಸಿನಿಮಾದಲ್ಲಿ ನಿರ್ದೇಶಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ ರಶ್ಮಿಕಾರಿಗೆ ಸಾಲು ಸಾಲು ಸಿನಿಮಾಗಳು ಅರಸಿ ಬಂದವು. ಪುನೀತ್ ರಾಜ್‍ಕುಮಾರ್, ಗಣೇಶ್, ತೆಲುಗಿನ ವಿಜಯದೇವರಕೊಂಡ ಜೊತೆಯಲ್ಲಿ ನಟಿಸಿ ಸೈ ಅನ್ನಿಸಿಕೊಂಡರು. ಇದನ್ನೂ ಓದಿ: 2018ರ ಸಿನಿ ಲೋಕದ ಸುಂದರ ಪ್ರೇಮ ಕಹಾನಿಗಳು

    ಅದೇಕೋ ಏನೋ ಗೊತ್ತಿಲ್ಲ ಅಕ್ಟೋಬರ್ ತಿಂಗಳಲ್ಲಿ ರಶ್ಮಿಕಾ ಮತ್ತು ರಕ್ಷಿತ್ ದೂರವಾಗ್ತಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಗಲ್ಲಿಗಳಲ್ಲಿ ಹರಿದಾಡಿತು. ಕೊನೆಗೆ ರಶ್ಮಿಕಾರ ತಾಯಿ ಹೌದು, ಅವರಿಬ್ಬರು ಬೇರೆ ಆಗ್ತಿದ್ದಾರೆ ಎಂಬ ಸ್ಪಷ್ಟನೆಯನ್ನು ನೀಡಿದರು. ಈ ಬಗ್ಗೆ ಇಬ್ಬರು ಕಲಾವಿದರು ಕಾರಣಾಂತರಗಳಿಂದ ದೂರವಾಗಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು.

    5. ದರ್ಶನ್ ಕಾರ್ ಅಪಘಾತ:
    ಮೈಸೂರಿನ ಹೊರವಲಯದ ಹಿನಕಲ್ ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಅಪಘಾತ ನಡೆದಿದ್ದು, ದರ್ಶನ್ ಅವರ ಬಲಗೈ ಮೂಳೆ ಮುರಿದಿತ್ತು. ಬಳಿಕ ಅವರು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಹಿರಿಯ ನಟ ದೇವರಾಜ್, ಅವರ ಮಗ ಪ್ರಜ್ವಲ್ ದೇವರಾಜ್ ಅವರು ಕೂಡ ಅಪಘಾತದಲ್ಲಿ ಗಾಯಗೊಂಡಿದ್ದರು.

    6. ವೀರ ಮದಕರಿ ವಿವಾದ:
    ಸುದೀಪ್ ಮತ್ತು ದರ್ಶನ್ ಒಂದೇ ಕತೆಯ ಸಿನಿಮಾದಲ್ಲಿ ನಟನೆಗೆ ಒಪ್ಪಿಕೊಂಡಿದ್ದಾರೆ. ಎರಡು ಸಿನಿಮಾಗಳ ರೂಪದಲ್ಲಿ ಚಿತ್ರದುರ್ಗದ ಪಾಳೆಗಾರ ವೀರ ಮದಕರಿ ನಾಯಕ ಪಾತ್ರದಲ್ಲಿ ದರ್ಶನ್ ಮತ್ತು ಸುದೀಪ್ ನಟಿಸುತ್ತಿದ್ದಾರೆ. ಸುದೀಪ್ ಟ್ವಿಟ್ಟರ್ ಪತ್ನಿ ಪ್ರಿಯಾರ ನಿರ್ಮಾಣದಲ್ಲಿ ವೀರ ಮದಕರಿ ಆಗಲಿದ್ದೇನೆ ಎಂದು ತಿಳಿಸಿದ್ದರು. ಇತ್ತ ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ರಾಜೇಂದ್ರ ಸಿಂಗ್‍ಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಹೊರ ಬಂತು. ಈ ವೇಳೆ ನಾಯಕ ನಟರ ಅಭಿಮಾನಿಗಳಲ್ಲಿ ಗೊಂದಲ ಉಂಟಾಯಿತು.

    ರಾಕ್‍ಲೈನ್ ವೆಂಕಟೇಶ್ ಅವರು `ಗಂಡುಗಲಿ ಮದಕರಿ ನಾಯಕ’ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ದರ್ಶನ್ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಸುದೀಪ್ ಅಭಿನಯದ ಈ ಚಿತ್ರಕ್ಕೆ `ದುರ್ಗದ ಹುಲಿ’ ಅಥವಾ `ನಾಯಕ’ ಹೆಸರನ್ನು ಇಡಲು ಚರ್ಚೆ ನಡೆದಿದ್ದು, `ದುರ್ಗದ ಹುಲಿ’ ಟೈಟಲ್ ಅಂತಿಮಗೊಳ್ಳುವ ಸಾಧ್ಯತೆಯಿದೆ. ಕೆಲ ದಿನಗಳಿಂದ ಈ ಚಿತ್ರದ ಕೆಲಸ ಆರಂಭಗೊಂಡಿದ್ದು, ವಿಶೇಷವಾಗಿ ಸುದೀಪ್ ಅವರೇ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ

    7. ಚಂದನವನದಲ್ಲಿ ಮೀಟೂ ಸಂಚಲನ:
    ಈ ವರ್ಷ ಚಂದನವನವನ್ನೇ ಅಲುಗಾಡಿಸಿದ್ದು, ಮೀಟೂ ಆರೋಪ. ನಟಿ ಶೃತಿ ಹರಿಹರನ್ ದಕ್ಷಿಣ ಭಾರತದ ಹಿರಿಯ ನಟ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ದೊಡ್ಡ ಸದ್ದು ಮಾಡಿತ್ತು. ವಿಸ್ಮಯ ಸಿನಿಮಾ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಡಿನ್ನರ್ ಗೆ ಅಂತಾ ಕರೆದಿದ್ದರು ಎಂದು ಪತ್ರಿಕೆ ನೀಡಿದ ಸಂದರ್ಶನದಲ್ಲಿ ಹೊರಹಾಕಿದ್ದರು. ಈ ಸಂಬಂಧ ದಿವಂಗತ ಅಂಬರೀಶ್ ಅವರ ನೇತೃತ್ವದಲ್ಲಿ ಸಂಧಾನ ಸಭೆಯನ್ನ ಮಾಡಲಾಗಿತ್ತು. ಆದ್ರೆ ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದರಿಂದ ಸಂಧಾನ ಸಭೆ ವಿಫಲವಾಗಿತ್ತು. ನಂತರ ಪ್ರಕರಣ ಹಲವು ಏರಳಿತ ಕಂಡು ತನಿಖೆ ಹಾದಿಯಲ್ಲಿದೆ.

    ಮೀಟೂ ವೇದಿಕೆಯಲ್ಲಿ ನಟಿ ಸಂಗೀತಾ ಭಟ್ ಮತ್ತು ಸಂಜನಾ ಗಲ್ರಾನಿ ತಮಗಾದ ಲೈಂಗಿಕ ಕಿರುಕುಳವನ್ನು ಹಂಚಿಕೊಂಡಿದ್ದರು. ಸಿನಿಮಾದಿಂದ ದೂರ ಉಳಿದುಕೊಂಡಿರುವ ಸಂಗೀತಾ ಭಟ್, ಎಲ್ಲಿಯೂ ಕಿರುಕುಳ ನೀಡಿದ ನಿರ್ಮಾಪಕ ಅಥವಾ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿರಲಿಲ್ಲ. ಇತ್ತ ಸಂಜನಾ ಗಲ್ರಾನಿ ತಮಗೆ ಗಂಡ-ಹೆಂಡತಿ ಸಿನಿಮಾದಲ್ಲಿ ಅನಾವಶ್ಯಕವಾಗಿ ಕಿಸ್ ಸೀನ್ ಮಾಡಿಸಲಾಗಿತ್ತು ಎಂದು ನಿರ್ದೇಶಕ ರವಿ ಶ್ರೀವಾತ್ಸ ವಿರುದ್ಧ ಆರೋಪ ಮಾಡಿದ್ದರು. ಈ ಸಂಬಂಧ ರವಿ ಶ್ರೀವಾತ್ಸ್ ಪಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಿಸಿದ್ದರು. ಫಿಲ್ಮ್ ಚೆಂಬರ್ ನಡೆದ ಸಭೆ ನಡೆದಿತ್ತು. ಕೊನೆಗೆ ಹಿರಿಯರ ಸಲಹೆಯಂತೆ ಸಂಜನಾ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದರು. ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ಶೃತಿ ಹರಿಹರನ್ ಗೆ ಬೆಂಬಲ ವ್ಯಕ್ತಪಡಿಸಿದ್ದ ನಟ ಚೇತನ್ ವಿರುದ್ಧ ಐಶ್ವರ್ಯಾ ಸರ್ಜಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

    8. ದುನಿಯಾ ವಿಜಯ್:
    ಸೆಪ್ಟೆಂಬರ್ 22ರ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದರು. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿತ್ತು.

    ಸೆಪ್ಟೆಂಬರ್ 23ರಂದು ಬಂಧನಕ್ಕೊಳಗಾಗಿದ್ದ ದುನಿಯಾ ವಿಜಿಗೆ ಅಕ್ಟೋಬರ್ 1ರಂದು 70ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿತ್ತು. ದುನಿಯಾ ವಿಜಯ್ ಮೇಲೆ ಕಿಡ್ನಾಪ್, ಹಲ್ಲೆ, ಕೊಲೆ ಜೀವ ಬೆದರಿಕೆ, ಐಪಿಸಿ ಸೆಕ್ಷನ್ 365 (ಕಿಡ್ನಾಪ್), 342 (ಅಕ್ರಮ ಬಂಧನ), 325 (ಹಲ್ಲೆ), 506 (ಕೊಲೆ ಬೆದರಿಕೆ) ಪ್ರಕರಣ ದಾಖಲಾಗಿದೆ.

    ಜಿಮ್ ಟ್ರೈನರ್ ಮೇಲೆ ಹಲ್ಲೆ ಮಾಡಿ ಜೈಲಿನಿಂದ ಹೊರ ಬಂದ ನಟ ದುನಿಯಾ ವಿಜಯ್ ಪತ್ನಿಯರಿಬ್ಬರ ಜಗಳವೇ ದೊಡ್ಡ ತಲೆನೋವಾಗಿತ್ತು. ವಿಜಯ್ ಜೈಲು ಸೇರಿದಾಗ ಮನೆಗೆ ಬಂದ ಮೊದಲ ಪತ್ನಿ ನಾಗರತ್ನ ಸವತಿ ಕೀರ್ತಿ ಗೌಡರ ಮೇಲೆ ಹಲ್ಲೆ ನಡೆಸಿದ್ದರು. ವಿಜಯ್ ಮೊದಲ ಪುತ್ರಿ ಚಿಕ್ಕಮ್ಮಳಿಂದ ಹಲ್ಲೆಗೆ ಒಳಗಾಗಿದ್ದೇನೆ ಎಂಬ ದೂರನ್ನು ಸಲ್ಲಿಸಿದರು. ಇದೇ ರೀತಿ ಒಬ್ಬರ ಮೇಲೊಬ್ಬರು ದೂರು ನೀಡುತ್ತಾ ಸುದ್ದಿಯಾದ್ರು.

    9. ವಿಷ್ಣು ಸ್ಮಾರಕ ವಿವಾದ:
    ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕ ನಿರ್ಮಾಣ ಮಾಡಬೇಕೆಂಬ ಕೂಗು ಕೇಳಿ ಬಂತು. ಸರ್ಕಾರವು ಸಹ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆಯನ್ನು ಸೂಚಿಸಿತು. ಈ ಎಲ್ಲ ಬೆಳವಣಿಗೆಯ ನಂತರ ದಿ.ವಿಷ್ಣುವರ್ದನ್ ಅಳಿಯ ಅನಿರುದ್ಧ, ಅಪ್ಪಾಜಿ ಸ್ಮಾರಕ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಈ ಹೇಳಿಕೆಯ ಬೆನ್ನಲ್ಲೇ ವಿಷ್ಣು ಸ್ಮಾರಕ ವಿಷಯ ಜೀವವನ್ನು ಪಡೆದುಕೊಂಡಿತು.

    ಹಲವು ಬೆಳವಣಿಗೆಯನ್ನು ಕಂಡ ಈ ವಿವಾದವನ್ನು ಸಿಎಂ ಕುಮಾರಸ್ವಾಮಿ ಆದಷ್ಟು ಬೇಗ ಪರಿಹರಿಸಲಾಗುವುದು ಅಂತ ಭರವಸೆ ನೀಡಿದ್ದಾರೆ. ಇತ್ತ ವಿಷ್ಣು ಕುಟುಂಬ ಡಿಸೆಂಬರ್ ವರೆಗೂ ಸಮಯವನ್ನು ಸರ್ಕಾರಕ್ಕೆ ನೀಡಿದೆ.

    10. ದಿ ವಿಲನ್ ಮತ್ತು ಕೆಜಿಎಫ್: ಈ ವರ್ಷದ ಚಂದನವನದಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದ ಚಿತ್ರಗಳು ದಿ ವಿಲನ್ ಮತ್ತು ಕೆಜಿಎಫ್. ನವೆಂಬರ್ ನಲ್ಲಿ ಬಿಡುಗಡೆಯಾದ ದಿ ವಿಲನ್ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ತು. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಚಿತ್ರದಲ್ಲಿ ಸುದೀಪ್, ಶಿವರಾಜ್ ಕುಮಾರ್, ಆ್ಯಮಿ ಜಾಕ್ಸನ್ ಸೇರಿದಂತೆ ಬಹುತಾರಾಗಣವನ್ನ ಹೊಂದಿತ್ತು. ಇಂದಿಗೂ ದಿ ವಿಲನ್ ಹಾಡುಗಳು ಬಹುಪಾಲರ ಮೆಚ್ಚುಗೆಯನ್ನು ಪಡೆದುಕೊಂಡಿವೆ.

    ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಇಡೀ ಭಾರತವೇ ಸ್ಯಾಂಡಲ್‍ವುಡ್ ನತ್ತ ತಿರುಗಿ ನೋಡುವಂತೆ ಮಾಡಿತು. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ 100 ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶಿಷ್ಯ ಪ್ರೇಮ್ ಮೇಲೆ ಮುನಿಸಿಕೊಂಡಿದ್ದ ಎ.ಆರ್.ಬಾಬು

    ಶಿಷ್ಯ ಪ್ರೇಮ್ ಮೇಲೆ ಮುನಿಸಿಕೊಂಡಿದ್ದ ಎ.ಆರ್.ಬಾಬು

    ಬೆಂಗಳೂರು: ನಿರ್ದೇಶಕ ಎ.ಆರ್.ಬಾಬು ನಿಧನಕ್ಕೆ ಇಡೀ ಚಿತ್ರರಂಗವೇ ಕಣ್ಣೀರು ಇಡುತ್ತಿದೆ. ನಿರ್ದೇಶಕ ಜೋಗಿ ಪ್ರೇಮ್ ಸಹ ಬಾಬು ಅವರ ಗರಡಿಯಲ್ಲಿ ಪಳಗಿದ್ದರು. ಆದ್ರೆ ಕೆಲ ತಿಂಗಳ ಹಿಂದೆ ಬಾಬು ತಮ್ಮ ಶಿಷ್ಯನ ಮೇಲೆ ಮುನಿಸಿಕೊಂಡಿದ್ದರು.

    ದಿ ವಿಲನ್ ಸಿನಿಮಾ ಬಿಡುಗಡೆಗೆ ಮುನ್ನ ಚಿತ್ರದ ಹಾಡಿನ ಸಾಹಿತ್ಯ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ವೇಳೆ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಲು ಪ್ರೇಮ್ ಫೇಸ್ ಬುಕ್ ಲೈವ್ ಬಂದಿದ್ದರು. ಕೆಲ ನಿರ್ದೇಶಕರು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಟಿ ಮಾಲ್‍ನಲ್ಲಿ ವಿಲನ್ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುವ ಪ್ರೆಕ್ಷಕರಿಗೆ 500 ರೂ. ಟಿಕೆಟ್ ದರವನ್ನು ನಿಗದಿ ಮಾಡಿದ್ದೇವೆ. ಅಲ್ಲಿ ಸಂಗ್ರಹವಾದ ಆ ಹಣವನ್ನು ಹಿರಿಯ ನಿರ್ದೇಶಕರ ಕುಟುಂಬಕ್ಕೆ ಅಲ್ಲೆ ನೀಡಲಾಗುವುದು ಅಂದಿದ್ದರು. ಇದನ್ನೂ ಓದಿ: ನನ್ನ ಆತ್ಮೀಯ ಅಲ್ಲಾಹುವಿನ ಪಾದ ಸೇರಿದ-ಎಆರ್ ಬಾಬು ನಿಧನಕ್ಕೆ ಜಗ್ಗೇಶ್ ಕಂಬನಿ

    ಈ ವೇಳೆ ತಮ್ಮ ಮಾತಿನಲ್ಲಿ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ನಿರ್ದೇಶಕರು ಎ.ಟಿ.ರಘು, ಎ.ಆರ್.ಬಾಬು ಸೇರಿದಂತೆ ಹಲವರು ನಿರ್ಗತಿಕರಾಗಿದ್ದಾರೆ ಎಂದು ಹೇಳಿದ್ದರು. ನಿರ್ದೇಶಕರಿಗೆ ನಿರ್ಗತಿಕರು ಎಂಬ ಪದ ಬಳಸಿದ್ದಕ್ಕೆ ಎ.ಆರ್.ಬಾಬು ಆಕ್ರೋಶ ವ್ಯಕ್ತಪಡಿಸಿದ್ದರು. ಚಂದನವನದ ಹಿರಿಯ ನಿರ್ದೇಶಕರು ಆರ್ಥಿಕ ಸಂಕಷ್ಟದಲ್ಲಿರೋದು ನಿಜ. ಆದ್ರೆ ಪ್ರೇಮ್ ನಿರ್ಗತಿಕರು ಎಂಬ ಪದ ಬಳಸಿರೋದು ತಪ್ಪು. ನಿರ್ಗತಿಕರು ಅಂದ್ರೆ ಯಾರು ಇಲ್ಲದವರರು ಎಂದರ್ಥವಾಗುತ್ತದೆ ಎಂದು ಬಾಬು ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಿ ವಿಲನ್ ಸಿನಿಮಾ ಟೀಂ ವಿರುದ್ಧ ಕಿಚ್ಚ ಸುದೀಪ್ ಫುಲ್ ಗರಂ

    ದಿ ವಿಲನ್ ಸಿನಿಮಾ ಟೀಂ ವಿರುದ್ಧ ಕಿಚ್ಚ ಸುದೀಪ್ ಫುಲ್ ಗರಂ

    ಬೆಂಗಳೂರು: ಮರಾಠಿ ಪತ್ರಿಕೆಯಲ್ಲಿ `ದಿ ವಿಲನ್’ ಚಿತ್ರದ ಪೇಪರ್ ಜಾಹೀರಾತಿಗೆ ನಟ ಕಿಚ್ಚ ಸುದೀಪ್ ಖುಷಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ವಿಲನ್ ಟೀಮ್ ಸದಸ್ಯರ ವಿರುದ್ಧವೂ ಕಿಡಿಕಾರಿದ್ದಾರೆ.

    ಟ್ವೀಟ್ ಮೂಲಕ ಕಿಡಿಕಾರಿರುವ ಕಿಚ್ಚ ಸುದೀಪ್, ದಿ ವಿಲನ್ ಬಗ್ಗೆ ಮರಾಠಿ ಪತ್ರಿಕೆಗಳಲ್ಲಿ ಇಂದಿಗೂ ಪ್ರಚಾರ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಯಾಕಿಲ್ಲ? ಕಳೆದ ಒಂದು ವಾರದಿಂದ ಇದಕ್ಕೆ ಸಂಬಂಧ ಪಟ್ಟವರೆಲ್ಲರೂ ರಿಲ್ಯಾಕ್ಸ್ ಮೂಡ್‍ಗೆ ಹೋದಂತಿದೆ. ನಿಮಗೆ ನಮ್ಮ ವಿಲನ್ ಟೀಮ್ ಸದಸ್ಯರು ಯಾರಾದರೂ ಸಿಕ್ಕಲ್ಲಿ ನಾನು ಅವ್ರನ್ನ ಸಂಪರ್ಕಿಸುವುದಕ್ಕೆ ಪ್ರಯತ್ನ ಪಡುತ್ತಿದ್ದೇನೆ ಅಂತಾ ತಿಳಿಸಿ ಎಂದು ಪೋರಕ್ಷವಾಗಿ ಚಿತ್ರತಂಡಕ್ಕೆ ಟಾಂಗ್ ಕೊಟ್ಟಿದ್ದಾರೆ.

    ಪರಭಾಷಿಗರೇ ಕನ್ನಡ ಸಿನಿಮಾವನ್ನು ಪ್ರಮೋಟ್ ಮಾಡುತ್ತಿದ್ದಾರೆ. ಆದರೆ ನಮ್ಮವರಿಗೆ ಸಿನಿಮಾ ಮರೆತೇ ಹೋಗಿದೆ ಎನ್ನುವುದನ್ನು ಟ್ವಿಟ್ಟರ್ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಕಳೆದ ತಿಂಗಳು 18 ರಂದು ‘ದಿ ವಿಲನ್’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿತ್ತು. ಈಗ ಸಿನಿಮಾ ಪ್ರಮೋಟ್ ಕಡಿಮೆ ಮಾಡಿರುವುದೇ ಕಿಚ್ಚ ಅವರ ಕೋಪಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ‘ದಿ-ವಿಲನ್’ ಚಿತ್ರ ನೋಡಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದ ಕಿಚ್ಚ

    ‘ದಿ-ವಿಲನ್’ ಚಿತ್ರ ನೋಡಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದ ಕಿಚ್ಚ

    ಬೆಂಗಳೂರು: ಸ್ಯಾಂಡಲ್‍ವುಡ್ ಬಹು ನಿರೀಕ್ಷಿತ ‘ದಿ-ವಿಲನ್’ ಚಿತ್ರ ವಿಶ್ವದ್ಯಾಂತ ಯಶಸ್ಸು ಕಾಣುತ್ತಿದೆ. ಸದ್ಯ ಕಿಚ್ಚ ಸುದೀಪ್ ದಿ-ವಿಲನ್ ಚಿತ್ರ ವೀಕ್ಷಿಸಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದಿದ್ದಾರೆ.

    ಕಿಚ್ಚ ಸುದೀಪ್ ದಿ-ವಿಲನ್ ಸಿನಿಮಾ ನೋಡಿದ ಅಭಿಮಾನಿಗಳಿಗೆ ತಮ್ಮ ಗೂಗಲ್ ಪ್ಲಸ್ ಪತ್ರವನ್ನು ಬರೆದು ಟ್ವಿಟ್ಟರಿನಲ್ಲಿ ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ನನ್ನ ಎಲ್ಲ ಅಭಿಮಾನಿ ಸ್ನೇಹಿತರೇ, ಅಭಿಮಾನಿ ಸಂಘಗಳ ಸದಸ್ಯರು ಹಾಗೂ ಮುಖ್ಯಸ್ಥರೇ, ನಿಮ್ಮೆಲ್ಲರಿಗೂ ನನ್ನ ಪ್ರೀತಿಯ ಅಪ್ಪುಗೆ. ಇದು ನೀವೆಲ್ಲರೂ “ದಿ ವಿಲನ್” ಚಿತ್ರವನ್ನು ಉದಾರವಾಗಿ ಬರಮಾಡಿಕೊಂಡಿದಕ್ಕೆ, ಶಿವಣ್ಣ ಹಾಗೂ ಪ್ರೇಮ್ ರವರ ಮೇಲೆ ತೋರಿಸಿದ ಪ್ರೀತಿಗಾಗಿ, ಚಿತ್ರದ ಎರಡೂ ನಾಯಕ ನಟರ ಮೇಲೆ ಸಮನಾದ ಆದರ ವ್ಯಕ್ತಪಡಿಸಿದ್ದಕ್ಕೆ ಮತ್ತು ಚಿತ್ರಮಂದಿರಗಳಲ್ಲಿ ಶಾಂತಿಯನ್ನು ಕಾಪಾಡಿಕೊಂಡಿದ್ದಕ್ಕೆ.

    ನಾನು ನಿಮ್ಮೆಲ್ಲರ ಮನಸಿನಲ್ಲಿ ನೆಲೆಸಿದ್ದೇನೆ. ಆದ್ದರಿಂದಲೇ ನೀವು ಈ ಚಿತ್ರಕ್ಕೆ ಸ್ಪಂದಿಸಿದ ರೀತಿಯಲ್ಲಿ ನನ್ನದೇ ಪ್ರತಿಬಿಂಬ ಕಾಣುತಿದ್ದೇನೆ. ನನ್ನನ್ನು ಹೆಮ್ಮೆಪಡುವಂತೆ ಮಾಡಿದ ನನ್ನ ಕುಟುಂಬದ ಸದಸ್ಯರೇ ಆದ ನಿಮ್ಮ ಪ್ರತಿಯೊಬ್ಬರಿಗೂ ನಾನು ಎಂದೆಂದಿಗೂ ಚಿರಋಣಿ. ನಿಮ್ಮ ಕಿಚ್ಚ ಎಂದು ಬರೆದಿದ್ದಾರೆ.

    ಸದ್ಯ ದಿ ವಿಲನ್ ಚಿತ್ರ ನೋಡಲು ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಹೌಸ್‍ಫುಲ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿದ್ದು, ಚಿತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೈಕ್, ಕಮೆಂಟ್‍ಗಾಗಿ ಇಷ್ಟ ಬಂದಂತೆ ಬರೆಯೋ ವಿಕೃತಕಾಮಿಗಳಿದ್ದಾರೆ: ಪ್ರೇಮ್

    ಲೈಕ್, ಕಮೆಂಟ್‍ಗಾಗಿ ಇಷ್ಟ ಬಂದಂತೆ ಬರೆಯೋ ವಿಕೃತಕಾಮಿಗಳಿದ್ದಾರೆ: ಪ್ರೇಮ್

    – ಅಷ್ಟು ತಾಕತ್ತಿದ್ರೆ ನೀವು ಸಿನಿಮಾ ಮಾಡಿ: ವಿಲನ್ ನಿರ್ದೇಶಕ ಸವಾಲ್

    ಬೆಂಗಳೂರು: `ದಿ ವಿಲನ್’ ಸಿನಿಮಾ ಯಶಸ್ವಿಯಾಗಿ ಮೂಡಿಬಂದಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಲೈಕ್, ಕಮೆಂಟ್ ಪಡೆಯಲು ವಿಕೃತಕಾಮಿಗಳು ತಮ್ಮಗೆ ಇಷ್ಟ ಬಂದಂತೆ ಬರೆಯುತ್ತಾರೆ. ನಿಮಗೆ ಅಷ್ಟು ತಾಕತ್ತಿದ್ರೆ ನೀವು ಸಿನಿಮಾ ಮಾಡಿ ಎಂದು ನಿರ್ದೇಶಕ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    `ದಿ ವಿಲನ್’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ್, ಮಾಧ್ಯಮಗಳು ವಿಮರ್ಶೆ ಮಾಡಿ ನಮ್ಮ ಕಷ್ಟ, ಶ್ರಮವನ್ನು ತಿಳಿದು ಬಳಿಕ ನಮ್ಮ ತಪ್ಪುಗಳನ್ನು ತಿಳಿಸುತ್ತವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಅವರೇ ಹೀರೋ ಆಗಿ, ವಿಮರ್ಶೆ ಮಾಡುವ ಬದಲು ವೈಯಕ್ತಿಕವಾಗಿ ಟೀಕೆ ಮಾಡುತ್ತಾರೆ. ಸಿನಿಮಾ ಮಾಡಲು ಬಹಳ ಇಷ್ಟ ಇದೆ. ಆದರೆ ಮಾತು ಮಾತಿಗೂ ರಾಜಮೌಳಿ, ಮುರುಗದಾಸ್ ಎನ್ನುತ್ತೀರಾ. ಕೆಲವರು ತೆಲುಗು, ತಮಿಳು ಜನರಿಗೆ ಹೋಲಿಕೆ ಮಾಡಿ ನೋಡುತ್ತೀರಾ. ಕನ್ನಡ ಬಗ್ಗೆ ಅಭಿಮಾನ ಇಲ್ಲದೇ ಇದ್ದರೆ ನಾನು ಏನು ಮಾಡಲು ಆಗುತ್ತೆ. ಏಕೆ ನಮ್ಮ ಕಷ್ಟ ನಿಮಗೇ ಕಾಣಿಸುವುದಿಲ್ಲವಾ ಎಂದು ಪ್ರಶ್ನೆ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಇಂದು ಕನ್ನಡ ಸಿನಿಮಾವನ್ನು ಬೇರೆ ರಂಗದಲ್ಲಿ ಗುರುತಿಸವಂತೆ ಮಾಡಲು ಹಗಲು, ರಾತ್ರಿ ನನ್ನಂತಹ ಹಲವರು ದಿನ ನಿತ್ಯ ಕುಟುಂಬ ಬಿಟ್ಟು ಶ್ರಮಿಸುತ್ತಿದ್ದಾರೆ. ನಾಡಿನಲ್ಲಿ ಒಬ್ಬ ರೈತ ಹೇಗೆ ಎಲ್ಲವನ್ನೂ ಶ್ರಮ ವಹಿಸಿ ಮಾಡುತ್ತಾರೋ ಹಾಗೆಯೇ ನಾನು ಕೂಡ ಶ್ರಮಿಸಿದ್ದೇನೆ. ಒಂದೊಮ್ಮೆ ಆ ವರ್ಷ ಬೆಳೆ ಬರಲಿಲ್ಲ ಎಂದರೆ ರೈತ ಮತ್ತೆ ಪ್ರಯತ್ನ ಮಾಡುತ್ತಾರೆ. ನಾನು ಅಷ್ಟೇ. ಆದರೆ ನನ್ನ ಕೆಲಸಕ್ಕೆ ಬೆಲೆ ನೀಡದೇ ಇದ್ದರೂ ಪರವಾಗಿಲ್ಲ. ಆದರೆ ವೈಯಕ್ತಿಕ ಟೀಕೆ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.

    ಪ್ರೇಮ್ ಚಾಲೆಂಜ್
    ನಿಮಗೇ ನನ್ನ ಸಿನಿಮಾ ಇಷ್ಟ ಆಗಿಲ್ಲ ಎಂದರೆ ವಿಮರ್ಶೆ ಮಾಡಿ. ಆದರೆ ಟೀಕೆ ಮಾಡುವ ಮೊದಲು ನಿಮ್ಮ ಹಣದಲ್ಲಿ ಒಂದು ಸಿನಿಮಾ ಮಾಡಲು ಕಥೆ ಸಿದ್ಧಪಡಿಸಿ, ನಾಯಕ ನಟರ ಪಡೆಯಿರಿ. ಬಳಿಕ ನನ್ನನ್ನು ಕೂಲಿ ಮಾಡುವ ವ್ಯಕ್ತಿಯಂತೆ ನಿರ್ದೇಶನ ಮಾಡಲು ಕರೆದು ನೋಡಿ ಬರುತ್ತೇನೆ. ಆಗ ಒಬ್ಬ ಕಲಾವಿದನ ಕಷ್ಟ ತಿಳಿಯುತ್ತದೆ. ಟೀಕೆ ಮಾಡುವವರು ಒಂದು ಸಿನಿಮಾ ಮಾಡಿ ಎಂದು ಸವಾಲು ಹಾಕುತ್ತಿದ್ದೇನೆ ಎಂದು ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಚಾಲೆಂಜ್ ನೀಡಿದರು.

    ನಿಮಗೆ ನಟರ ಬಗ್ಗೆ ಅಷ್ಟು ಅಭಿಮಾನ ಇದ್ದರೆ ನಿಮಗೇ ಬೇಕಾದ ನಟ, ನಟಿ ಬಳಿ ಹೋಗಿ ಪ್ರೇಮ್ ಜೊತೆ ಸಿನಿಮಾ ಬೇಡ ಎಂದು ಹೇಳಿ. ಅವರ ನಿರ್ದೇಶನದಲ್ಲಿ ಮಾಡದಂತೆ ಹೇಳಿ. ನಾನು ಏನೂ ಹೇಳಲ್ಲ. ಏಕೆಂದರೆ ನಿಮ್ಮ ವೈಯಕ್ತಿಕ ಟೀಕೆಗಳು ನನಗೆ ಸಾಕಷ್ಟು ನೋವು ತಂದಿದೆ. ನನ್ನ ಬಳಿ ಸುಮಾರು 9 ವಿಡಿಯೋಗಳು ಇದೆ. ಅವುಗಳನ್ನು ನನ್ನ ವಕೀಲರ ಬಳಿ ನೀಡಿದ್ದೇನೆ. ವಿಡಿಯೋದಲ್ಲಿನ ವ್ಯಕ್ತಿಗಳ ವಿರುದ್ಧ ದೂರು ದಾಖಲು ಮಾಡುತ್ತೇನೆ. ದಯಮಾಡಿ ಅದರಲ್ಲಿ ನಿಮ್ಮ ಮಕ್ಕಳಿದ್ದರೆ ನಮ್ಮನ್ನು ಕ್ಷಮಿಸಿ ಅಮ್ಮ. ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇನೆ. ನಿಮ್ಮ ಟೀಕೆ ನೋಡಿದರೆ ನೀವು ಕುಟುಂಬದಲ್ಲಿ ಬೆಳೆದು ಬಂದಿಲ್ಲ ಎಂದು ಹೇಳುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಕೃತ ಮನಸ್ಸುಗಳಿವೆ. ಅವುಗಳ ವಿರುದ್ಧ ನ್ಯಾಯಾಲಯಕ್ಕೆ ಬೇಕಾದರೂ ಹೋಗುತ್ತೇನೆ ಎಂದರು.

    ವೈಯಕ್ತಿಕವಾಗಿ ಟೀಕೆ ಮಾಡಿದವರ ವಿರುದ್ಧ ನಾನು ಯುದ್ಧ ಸಾರುತ್ತೇನೆ. ಈ ಕುರಿತು ಫೇಸ್‍ಬುಕ್ ಪೇಜ್ ಆರಂಭಿಸುತ್ತೇನೆ. ಕನ್ನಡ ಯಾವುದೇ ಕಲಾವಿದನ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಬೇಡ ಎಂಬುವುದೇ ನನ್ನ ಮಾತಿನ ಉದ್ದೇಶ. ಯಾವುದೇ ನಿರ್ದೇಶಕ ಶೇ. 100ರಷ್ಟು ಎಲ್ಲರಿಗೂ ಒಪ್ಪಿಸಲು ಸಾಧ್ಯವಿಲ್ಲ. ಶೇ.80 ಜನ ಸಿನಿಮಾ ಬಗ್ಗೆ ಖುಷಿ ವ್ಯಕ್ತಪಡಿಸಿದರೆ, ಉಳಿದ ಶೇ.20 ಮಂದಿ ಮಾತ್ರ ಹೀಗೆ ಇರುತ್ತಾರೆ. ಎಲ್ಲಾ ನಟರು ಒಪ್ಪಿಯೇ ಸಿನಿಮಾ ಮಾಡುತ್ತಾರೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಒಪ್ಪಿಯೇ ಸಿನಿಮಾ ಮಾಡಿದ್ದಾರೆ. ಎಲ್ಲರೂ ಬೆಂಬಲ ನೀಡಿದ ಕಾರಣಕ್ಕೆ ಸಿನಿಮಾ ಆಗಿದೆ. ಈಗಲೂ ಶಿವರಾಜ್ ಕುಮಾರ್ ಅವರು ಒಂದು ಮಾತು ಹೇಳಿದರೆ ನಾನು ಆ ದೃಶ್ಯ ತೆಗೆಯಲು ಸಿದ್ಧ ಎಂದರು.

    ಇದೇ ವೇಳೆ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡ ನಾಡಿನ ಜನರಿಗೆ ವಂದನೆ ತಿಳಿಸಲು ಸುದೀಪ್, ಶಿವಣ್ಣ ಅವರೊಂದಿಗೆ ನಾವು ಎಲ್ಲ ಕಡೆ ಹೋಗುತ್ತೇವೆ. ಈ ಕುರಿತು ಎರಡು ದಿನಗಳಲ್ಲಿ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಕ್ಷಿತಾ ಪ್ರೇಮ್ ವಿರುದ್ಧ ರವಿಚಂದ್ರನ್ ಅಭಿಮಾನಿಗಳು ಸಿಟ್ಟಾಗಿದ್ದೇಕೆ?

    ರಕ್ಷಿತಾ ಪ್ರೇಮ್ ವಿರುದ್ಧ ರವಿಚಂದ್ರನ್ ಅಭಿಮಾನಿಗಳು ಸಿಟ್ಟಾಗಿದ್ದೇಕೆ?

    ಭಾರೀ ಅಬ್ಬರದೊಂದಿಗೆ ತೆರೆ ಕಂಡಿರುವ ದಿ ವಿಲನ್ ಚಿತ್ರ ಈಗಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಳಿಕೆಯಲ್ಲಿಯೂ ಕೂಡಾ ದಾಖಲೆಯನ್ನೇ ಮಾಡುತ್ತಿದೆ. ಹೀಗಿದ್ದರೂ ಕೆಲ ಮಂದಿ ಈ ಚಿತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಸಿಡಿಮಿಡಿಗೊಂಡು ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರೋ ಬರಹವೊಂದೀಗ ರವಿಚಂದ್ರನ್ ಅಭಿಮಾನಿಗಳು ಸಿಟ್ಟಾಗುವಂತೆ ಮಾಡಿದೆ.

    ತನ್ನ ಪತಿ ಪ್ರೇಮ್ ವಿರುದ್ಧ ಕಮೆಂಟ್ ಮಾಡುತ್ತಿರುವವರ ವಿರುದ್ಧ ರಕ್ಷಿತಾ ಪತ್ರವೊಂದನ್ನು ಪೋಸ್ಟ್ ಮಾಡೋ ಮೂಲಕ ಟಾಂಗ್ ಕೊಟ್ಟಿದ್ದಾರೆ. ಈ ಪತ್ರದಲ್ಲಿ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರದ ಬಗ್ಗೆಯೂ ಉಲ್ಲೇಖಿಸಲಾಗಿದೆ. ರವಿಚಂದ್ರನ್ ಅವರಿಗೆ ತಂದೆಯ ಶ್ರೀಮಂತ ಹಿನ್ನೆಲೆ ಸಾಥ್ ನೀಡಿತ್ತು. ನಾದಬ್ರಹ್ಮ ಹಂಸಲೇಖಾ ಅವರಂಥಾ ಮಹನೀಯರು ಜೊತೆಗಿದ್ದರು. ಆ ಪ್ರೇಮಲೋಕ ಮತ್ತು ಇತ್ತೀಚೆಗೆ ತೆರೆ ಕಂಡಿದ್ದ ಟಗರು ಚಿತ್ರದಲ್ಲಿಯೂ ಕಥೆ ಇರಲಿಲ್ಲ. ಆದರೂ ಅವುಗಳನ್ನು ಜನ ನೋಡಿಲ್ವಾ? ಗೆಲ್ಲಿಸಿಲ್ವಾ ಎಂಬರ್ಥದಲ್ಲಿ ರಕ್ಷಿತಾ ಬರೆದುಕೊಂಡಿದ್ದರು.

    https://www.facebook.com/raks5/posts/10210116243822635

    ಪ್ರೇಮಲೋಕದಲ್ಲಿ ಕಥೆ ಇಲ್ಲ ಅಂತ ಟಾರ್ಗೆಟ್ ಮಾಡಿರೋದರ ವಿರುದ್ಧ ರವಿಚಂದ್ರನ್ ಅಭಿಮಾನಿಗಳೀಗ ಕೆಂಡ ಕಾರಲಾರಂಭಿಸಿದ್ದಾರೆ. ಪ್ರೇಮಲೋಕ ಸಿನಿಮಾ ಅರ್ಥವಾಗದಿದ್ದರೆ ಇನ್ನೊಂದು ಸಲ ನೋಡಿ ಅರ್ಥ ಮಾಡಿಕೊಳ್ಳಿ. ತಂತ್ರಜ್ಞಾನ ಕುಂಟುತ್ತಿದ್ದ ಕಾಲದಲ್ಲಿಯೇ ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದು ನಮ್ಮ ಪ್ರೇಮಲೋಕ. ಅಂಥಾ ಚಿತ್ರದಲ್ಲಿ ಕಥೆ ಇಲ್ಲ ಅಂತ ಹೇಳಬೇಡಿ ಅಂತ ಕನಸುಗಾರನ ಅಭಿಮಾನಿಗಳು ರಕ್ಷಿತಾ ಪ್ರೇಮ್‍ಗೆ ತಿರುಗೇಟು ನೀಡಿದ್ದಾರೆ.

    ಈ ಪತ್ರವನ್ನು ರಕ್ಷಿತಾ ಅವರೇ ಬರೆದರಾ? ಅವರೇಕೆ ಕನಸುಗಾರನ ಚಿತ್ರವನ್ನು ಟಾರ್ಗೆಟ್ ಮಾಡಿದರೆಂಬ ಪ್ರಶ್ನೆ ಇದ್ದೇ ಇದೆ. ಆದರೆ ಆ ಪತ್ರದಲ್ಲಿ ಪ್ರೇಮಲೋಕ ಚಿತ್ರದ ಬಗ್ಗೆ ಉಲ್ಲೇಖವಾಗಿರೋದರ ವಿರುದ್ಧ ಮಾತ್ರ ರವಿಚಂದ್ರನ್ ಅಭಿಮಾನಿಗಳು ಕುದ್ದು ಹೋಗಿದ್ದಾರೆ! ಇದನ್ನು ಓದಿ: ಪ್ರೇಮ್ ಕಾಲೆಳೆದವರಿಗೆ ಮಾತಿನಲ್ಲೇ ಚಾಟಿ ಬೀಸಿದ ರಕ್ಷಿತಾ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಣ ಬಲಿ ಕೊಟ್ಟ ರಕ್ತದಿಂದ ವಿಲನ್ ಪೋಸ್ಟರಿಗೆ ಅಭಿಷೇಕ!

    ಕೋಣ ಬಲಿ ಕೊಟ್ಟ ರಕ್ತದಿಂದ ವಿಲನ್ ಪೋಸ್ಟರಿಗೆ ಅಭಿಷೇಕ!

    ಬೆಂಗಳೂರು: ವಿಲನ್ ಚಿತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೋಣವನ್ನು ಬಲಿಕೊಟ್ಟಿದ್ದಾರೆ. ಥಿಯೇಟರ್ ಮುಂದೆ ಕೋಣದ ತಲೆಯನ್ನು ಒಂದೇ ಏಟಿಗೆ ಕತ್ತರಿಸಿ, ಬಳಿಕ ಆ ತಲೆಯನ್ನು ಹಿಡಿದು ಅಭಿಮಾನಿಯೊಬ್ಬ ವಿಲನ್ ಪೋಸ್ಟರ್ ಗೆ ರಕ್ತದ ಅಭಿಷೇಕ ಮಾಡಿದ್ದಾನೆ.

    ಕೋಣ ಕಡಿದು ರಕ್ತದ ಅಭಿಷೇಕ ಮಾಡಿದ್ದು ಎಲ್ಲಿ ಎನ್ನುವುದು ಗೊತ್ತಿಲ್ಲ. ಫೋಟೋ ಮತ್ತು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಜೊತೆಯಲ್ಲೇ ಅಭಿಮಾನಿಗಳು ಕುರಿಯನ್ನು ಕಡಿದು ಸುದೀಪ್ ಭಾವಚಿತ್ರಕ್ಕೆ ರಕ್ತದ ಅಭಿಷೇಕ ಮಾಡಿದ್ದಾರೆ. ಕುರಿಯನ್ನು ಕಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಅಭಿಮಾನವಿದ್ರೆ ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ನಟನ ಹೆಸರಿನಲ್ಲಿ ಆಹಾರ ನೀಡಲಿ ಅಥವಾ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಿ. ಅದನ್ನು ಬಿಟ್ಟು ಪ್ರಾಣಿಗಳನ್ನು ಸಾರ್ವಜನಿಕವಾಗಿ ಕಡಿದು ಅಜ್ಞಾನಿಗಳಂತೆ ವರ್ತಿಸಿರುವುದು ಸರಿಯಲ್ಲ ಎಂದು ಜನ ಈ ಅಭಿಮಾನಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv