Tag: ದಿ ಲಾಸ್ಟ್ ಶೋ

  • Breaking- ಆಸ್ಕರ್ ಅಂಗಳದಲ್ಲಿರುವ ಗುಜರಾತಿ ಚಿತ್ರಕ್ಕೆ ಕನ್ನಡದ ಹುಡುಗನೇ ಸಂಕಲನಕಾರ: ಪವನ್ ಭಟ್ ಎಂಬ ಎಡಿಟರ್

    Breaking- ಆಸ್ಕರ್ ಅಂಗಳದಲ್ಲಿರುವ ಗುಜರಾತಿ ಚಿತ್ರಕ್ಕೆ ಕನ್ನಡದ ಹುಡುಗನೇ ಸಂಕಲನಕಾರ: ಪವನ್ ಭಟ್ ಎಂಬ ಎಡಿಟರ್

    ಗುಜರಾತಿ ಭಾಷೆಯಲ್ಲಿ ಮೂಡಿ ಬಂದಿರುವ ‘ಚೆಲ್ಲೋ ಶೋ’ ಸಿನಿಮಾ 2023ರ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಅಧಿಕೃತವಾಗಿ ಸ್ಪರ್ಧಿಸುತ್ತಿದೆ.  ಈಗಾಗಲೇ ಮೂವತ್ತು ಹೆಚ್ಚು ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಭಾರತದಲ್ಲಿ ಇನ್ನೂ ಬಿಡುಗಡೆ ಆಗಬೇಕಿದೆ. ಅದಕ್ಕೂ ಮೊದಲು ಆಸ್ಕರ್ ಪ್ರಶಸ್ತಿಯ ರೇಸ್ ನಲ್ಲಿ ಈ ಚಿತ್ರ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಪಾನ್ ನಲಿನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ, ಚಿತ್ರರಂಗದ ಬೆಳವಣಿಗೆ ಕುರಿತಾದ ಕಥಾ ಹಂದರವನ್ನೂ ಹೊಂದಿದೆ. ಈ ಚಿತ್ರಕ್ಕೆ ಕನ್ನಡದ ಪವನ್ ಭಟ್ ಎನ್ನುವವರು ಸಂಕಲನದ ಕೆಲಸ ಮಾಡಿದ್ದಾರೆ.

    ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಪವನ್ ಭಟ್ ಮೂಲತಃ ಉಪ್ಪಿನಂಗಡಿಯ ಹುಡುಗ. ಓದಿದ್ದು ಇಂಜಿನಿಯರಿಂಗ್. ಆದರೆ, ಆಸಕ್ತಿ ಬೆಳೆದದ್ದು ಸಿನಿಮಾ ಎಡಿಟಿಂಗ್ ನತ್ತ. ಹಾಗಾಗಿ ಮೊದಲು ಎಂಟು ವರ್ಷಗಳ ಕಾಲ ಮುಂಬೈನಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಎಡಿಟಿಂಗ್ ಮಾಡಿದ ಹೆಗ್ಗಳಿಕೆ ಇವರದ್ದು. ಸೀನಿಯರ್ ಎಡಿಟರ್ ಜೊತೆ ಸೇರಿಕೊಂಡು ಚೆಲ್ಲೋ ಶೋ ಸಿನಿಮಾಗಾಗಿ ಭಟ್ ಕೆಲಸ ಮಾಡಿದ್ದಾರೆ. ಈಗ ಅವರು ಸಂಕಲಿಸಿದ ಸಿನಿಮಾಗೆ ಆಸ್ಕರ್ ಗೆ ಹೋಗುವಂತಹ ಅವಕಾಶ ಸಿಕ್ಕಿದೆ. ಇದನ್ನೂ ಓದಿ:‘ಸೈಮಾ ಅವಾರ್ಡ್’ ಐಷಾರಾಮಿ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳ ತಡರಾತ್ರಿ ಪಾರ್ಟಿ : FIR ದಾಖಲು

    ತಮ್ಮ ಸಿನಿಮಾ ಆಯ್ಕೆಗೆ ನಿರ್ದೇಶಕರು ಕೃತಜ್ಞತೆ ತಿಳಿಸಿದ್ದಾರೆ. ಒಂಬತ್ತು ವರ್ಷದ ಹುಡುಗನೊಬ್ಬ ಡಿಜಿಟಲ್ ಕ್ರಾಂತಿಯ ಮಾಂತ್ರಿಕತೆ ಬೆನ್ನು ಬೀಳುವಂತಹ ಕಥೆಯು ಸಿನಿಮಾದಲ್ಲಿ ಇದೆಯಂತೆ. ನಿರ್ದೇಶಕರ ಜೀವನದಲ್ಲಿ ನಡೆದ ಹಲವು ಘಟನೆಗಳನ್ನೂ ಸಿನಿಮಾದಲ್ಲಿ ಬಳಸಿದ್ದಾರಂತೆ. ಈ ಸಿನಿಮಾ ಈಗಾಗಲೇ ವಿವಿಧ ದೇಶಗಳಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಹತ್ತಾರು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಆಸ್ಕರ್‌ಗೆ ಹೋಗಲಿಲ್ಲ ‘ದಿ ಕಾಶ್ಮೀರ್ ಫೈಲ್ಸ್’, ‘ಆರ್‌ಆರ್‌ಆರ್‌’: ಆಸ್ಕರ್ ರೇಸ್‌ನಲ್ಲಿ ಗುಜರಾತಿ ಫಿಲ್ಮ್

    ಕೊನೆಗೂ ಆಸ್ಕರ್‌ಗೆ ಹೋಗಲಿಲ್ಲ ‘ದಿ ಕಾಶ್ಮೀರ್ ಫೈಲ್ಸ್’, ‘ಆರ್‌ಆರ್‌ಆರ್‌’: ಆಸ್ಕರ್ ರೇಸ್‌ನಲ್ಲಿ ಗುಜರಾತಿ ಫಿಲ್ಮ್

    ಕೆಲ ದಿನಗಳಿಂದ ಆಸ್ಕರ್ (Oscar) ಪ್ರಶಸ್ತಿ ಕುರಿತಾಗಿಯೇ ಭಾರತೀಯ ಸಿನಿಮಾ ರಂಗದಲ್ಲಿ ಚರ್ಚೆ ಶುರುವಾಗಿತ್ತು. 2023ನೇ ಸಾಲಿನ ಆಸ್ಕರ್‌ಗೆ ಭಾರತದ ಅಧಿಕೃತ ಸಿನಿಮಾವಾಗಿ ಯಾವುದನ್ನು ಕಳುಹಿಸಬೇಕು ಎನ್ನುವ ಮಾತುಕತೆ ಕೂಡ ನಡೆದಿತ್ತು. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ (RRR) ಮತ್ತು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಕಳುಹಿಸುವಂತೆ ಒತ್ತಡ ಹೇರಲಾಗಿತ್ತು.

    ಆರ್.ಆರ್.ಆರ್ ಅಥವಾ ದಿ ಕಾಶ್ಮೀರ್ ಫೈಲ್ಸ್ (The Kashmir Files) ಈ ಎರಡು ಸಿನಿಮಾಗಳಲ್ಲಿ ಒಂದು ಚಿತ್ರ ಭಾರತದಿಂದ ಆಸ್ಕರ್‌ಗೆ ಸ್ಪರ್ಧಿಸಲಿದೆ ಎಂದೇ ನಂಬಲಾಗಿತ್ತು. ಹಾಗಾಗಿ ಈ ಎರಡೂ ಸಿನಿಮಾಗಳ ಅಭಿಮಾನಿಗಳು ಯಾವ ಚಿತ್ರ ಸೆಲೆಕ್ಟ್ ಆಗಬಹುದು ಎನ್ನುವ ಕುತೂಹಲದೊಂದಿಗೆ ದಿನಗಳನ್ನು ದೂಡುತ್ತಿದ್ದಾರೆ. ಆದರೆ, ಈ ಎರಡೂ ಸಿನಿಮಾಗಳ ಬದಲಾಗಿ ಗುಜರಾತಿನ ‘ಚೆಲ್ಲೋ ಶೋ’ (Chello Show) ಸಿನಿಮಾವನ್ನು ಭಾರತದ ಅಧಿಕೃತ ಪ್ರವೇಶದ ಸಿನಿಮಾ ಎಂದು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಘೋಷಣೆ ಮಾಡಿದೆ. ಇದನ್ನೂ ಓದಿ:‘ಸೈಮಾ ಅವಾರ್ಡ್’ ಐಷಾರಾಮಿ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳ ತಡರಾತ್ರಿ ಪಾರ್ಟಿ : FIR ದಾಖಲು

    ದಕ್ಷಿಣದವರು ಆರ್.ಆರ್.ಆರ್ ಸಿನಿಮಾ ಕಳುಹಿಸಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದರೆ, ಹಿಂದಿಯವರ ಆಸಕ್ತಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಮೇಲಿತ್ತು. ಆದರೆ, ಅಲ್ಲಿ ಆಯ್ಕೆಯಾಗಿದ್ದೇ ಬೇರೆ ಸಿನಿಮಾ. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆಯು ಪಾನ್ ನಳಿನ್ (Paan Nalin) ನಿರ್ದೇಶನದ ‘ಚೆಲ್ಲೋ ಶೋ; ಸಿನಿಮಾವನ್ನು ಆಯ್ಕೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಭಾವಿನ್ ರಾಬರಿ, ದಿಚಾ ಮೀನಾ, ಪರೇಶ್ ಮೆಹ್ತಾ ಸೇರಿದಂತೆ ಹಲವರು ನಟಿಸಿದ್ದಾರೆ.

    ತಮ್ಮ ಸಿನಿಮಾ ಆಯ್ಕೆಗೆ ನಿರ್ದೇಶಕರು ಕೃತಜ್ಞತೆ ತಿಳಿಸಿದ್ದಾರೆ. ಒಂಭತ್ತು ವರ್ಷದ ಹುಡುಗನೊಬ್ಬ ಡಿಜಿಟಲ್ ಕ್ರಾಂತಿಯ ಮಾಂತ್ರಿಕತೆ ಬೆನ್ನು ಬೀಳುವಂತಹ ಕಥೆಯು ಸಿನಿಮಾದಲ್ಲಿ ಇದೆಯಂತೆ. ನಿರ್ದೇಶಕರ ಜೀವನದಲ್ಲಿ ನಡೆದ ಹಲವು ಘಟನೆಗಳನ್ನೂ ಸಿನಿಮಾದಲ್ಲಿ ಬಳಸಿದ್ದಾರಂತೆ. ಈ ಸಿನಿಮಾ ಈಗಾಗಲೇ ವಿವಿಧ ದೇಶಗಳಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಹತ್ತಾರು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]