Tag: ದಿ ರಾಜಾ ಸಾಬ್

  • ರಾಜಾಸಾಬ್ ವರ್ಸಸ್ ಧುರಂಧರ್ ಬಾಕ್ಸಾಫೀಸ್ ಕ್ಲ್ಯಾಶ್: ಸಂಜುಬಾಬ ಸ್ಫೋಟಕ ಹೇಳಿಕೆ

    ರಾಜಾಸಾಬ್ ವರ್ಸಸ್ ಧುರಂಧರ್ ಬಾಕ್ಸಾಫೀಸ್ ಕ್ಲ್ಯಾಶ್: ಸಂಜುಬಾಬ ಸ್ಫೋಟಕ ಹೇಳಿಕೆ

    ಬಾಲಿವುಡ್‌ನ ನಟ ಸಂಜಯ್ ದತ್ (Sanjay Dutt) ಭಾರತೀಯ ಚಿತ್ರರಂದಲ್ಲಿ ಭಾರೀ ಬ್ಯುಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಸಂಜುಬಾಬ ಒಂದು ಮುಖ್ಯ ಪಾತ್ರವನ್ನ ನಿರ್ವಹಿಸಿದ್ದಾರೆ. ಕನ್ನಡದ ಕೆಡಿ ಸಿನಿಮಾದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಮುಂಬೈನಲ್ಲಿ ಕೆಡಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಇವೆಂಟ್‌ನಲ್ಲಿ ಮಾತನಾಡಿರುವ ಸಂಜಯ್ ದತ್ ರಾಜಾಸಾಬ್ (The Raja Saab) ಹಾಗೂ ಧುರಂಧರ್ (Dhurandhar) ಚಿತ್ರದ ರಿಲೀಸ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಎರಡೂ ಸಿನಿಮಾಗಳು ಒಂದೇ ದಿನ ತೆರೆಕಂಡರೆ ಎನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರಿಸಿರುವ ಸಂಜಯ್ ದತ್ ತಾವು ನಟಿಸಿದ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆದರೂ ವ್ಯತ್ಯಾಸವೆನಿಸೊಲ್ಲ. `ಯಾಕೆಂದರೆ ಧುರಂಧರ್ ಹಾಗೂ ರಾಜಾಸಾಬ್ ಸಿನಿಮಾದ ಎರಡೂ ಪಾತ್ರಗಳು ತುಂಬಾನೇ ವಿಭಿನ್ನವಾಗಿವೆ. ಎರಡೂ ಒಂದೇ ರೀತಿ ಇರುವುದಿಲ್ಲ’ ಎಂದಿದ್ದಾರೆ. ಇದನ್ನೂ ಓದಿ: ಅಟ್ಲಿ ಸಿನಿಮಾಗೆ ಮತ್ತೆ ಒಂದಾದ ಪುಷ್ಪ ಹಿಟ್ ಜೋಡಿ..!

    ಪ್ರಭಾಸ್ ಅಭಿನಯದ ಮೋಸ್ಟ್ ಅವೈಟೆಡ್ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ಪೋನ್ ಮಾಡಿಕೊಂಡು ಬಂದಿದೆ. 2025ರ ಕೊನೆಯಲ್ಲಿ ಸಿನಿಮಾ ತೆರೆಗೆ ಬರುತ್ತೆ ಅನ್ನೋ ಮಾಹಿತಿಯನ್ನ ಚಿತ್ರತಂಡ ಶೇರ್ ಮಾಡಿಕೊಂಡಿದೆ. ಇನ್ನು ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಕೂಡಾ ಇದೇ ವರ್ಷ ಡಿಸೆಂಬರ್‌ಗೆ ತೆರೆಗೆ ಬರೋಕೆ ಸಿದ್ಧವಾಗಿದೆ.

    ಧುರಂಧರ್ ಹಾಗೂ ರಾಜಾಸಾಬ್ ಸಿನಿಮಾ ಒಂದೇ ದಿನ ತೆರೆಗೆ ಬಂದರೂ ಬಾಕ್ಸಾಫೀಸ್‌ನಲ್ಲಿ ಆಗಲಿ, ಸಿನಿಮಾದ ಪಾತ್ರದ ಮೇಲೆಯಾಗಲಿ ಯಾವುದೇ ಡಿಫರೆನ್ಸ್ ಆಗೋದಿಲ್ಲ ಎನ್ನು ಮಾತುಗಳನ್ನ ನಟ ಸಂಜಯ್ ದತ್ ಕೆಡಿ ಸಿನಿಮಾದ ಇವೆಂಟ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: `ನನ್ನ ಬ್ಲೌಸ್ ಒಳಗೆ ಕೈಹಾಕಿದ’ – ಆಶೀರ್ವಾದದ ನೆಪದಲ್ಲಿ ಅರ್ಚಕನಿಂದ ಮಾಡೆಲ್‌ಗೆ ಲೈಂಗಿಕ ದೌರ್ಜನ್ಯ ಆರೋಪ

  • ಚಾಮುಂಡಿ ತಾಯಿ ಕಾಪಾಡಮ್ಮ – `ದಿ ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್‌ ಘರ್ಜನೆ

    ಚಾಮುಂಡಿ ತಾಯಿ ಕಾಪಾಡಮ್ಮ – `ದಿ ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್‌ ಘರ್ಜನೆ

    ಬಾಹುಬಲಿ (Bahubali) ಚಿತ್ರದ ಯಶಸ್ಸಿನ ಬಳಿಕ ಪ್ರಭಾಸ್‌ಗೆ (Prabhas) ಯಾವ ಚಿತ್ರವೂ ಕೈ ಹಿಡಿಯುತ್ತಿಲ್ಲ. ನಿರೀಕ್ಷೆಯಂತೆ ಚಿತ್ರಗಳು ಹಿಟ್ ಆಗುತ್ತಿಲ್ಲ. ಹೀಗಾಗಿ ಪ್ರಭಾಸ್ ಹೊಸ ಹೊಸ ಪ್ರಯೋಗಕ್ಕೆ ಅಣಿಯಾಗುತ್ತಿದ್ದಾರೆ. ಪ್ರಯೋಗದ ಇನ್ನೊಂದು ಭಾಗವೇ `ದಿ ರಾಜಾ ಸಾಬ್’ (The Raja Saab). ಇದೀಗ ಪ್ರಭಾಸ್ ಅಭಿನಯದ ರಾಜಾಸಾಬ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಪ್ರಭಾಸ್ ಕರಿಯರ್‌ನ ವಿಭಿನ್ನ ಚಿತ್ರ ಅನ್ನೋದಾಗಿ ಟೀಸರ್ ಸುಳಿವು ನೀಡುತ್ತಿದೆ.

    ಪ್ರಭಾಸ್ ಹಾಗೂ ಸಂಜಯ್ ದತ್ (Sanjay Datt) ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ `ದಿ ರಾಜಾ ಸಾಬ್’ ಹಾರರ್, ಫ್ಯಾಂಟಸಿ ಕಥೆಯ ಚಿತ್ರ. ಸ್ಟಾರ್ ನಟರು ಆಕ್ಷನ್ ಸಿನಿಮಾಗಳಿಗೆ ಪಟ್ಟು ಹಿಡಿದು ಕುಳಿತಿರುವ ವೇಳೆ ಪ್ರಭಾಸ್ ಇಂಥದ್ದೊಂದು ವಿಭಿನ್ನ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು ವಿಶೇಷ. ಈ ಮೂಲಕ ಹೊಸ ಪ್ರಯೋಗಕ್ಕೆ ಪ್ರಭಾಸ್ ಮುಂದಾದಂತೆ ಕಾಣುತ್ತಿದೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ

    `ದಿ ರಾಜ ಸಾಬ್’ ಚಿತ್ರದಲ್ಲಿ ಪ್ರಭಾಸ್ ಜೊತೆ ಮಾಳವಿಕಾ, ನಿಧಿ ಅಗರ್‌ವಾಲ್, ರಿದ್ದಿ ಕುಮಾರ್ ಅಭಿನಯಿಸಿದ್ದಾರೆ. ಬಂಗಲೆಯೊಂದರಲ್ಲಿ ನಡೆಯುವ ಫ್ಯಾಂಟಸಿ ಕಥೆಯಾಗಿದ್ದು, ಸತ್ತು ಹೋಗಿರೋ ರಾಜ ಹಾಗೂ ಆತನ ತೀರದ ಆಸೆಯಿಂದ ಬಂಗಲೆಗೆ ಬರುವವರಿಗೆ ಕಾಟ ಕೊಡುವ ಕಥೆಯನ್ನ ಟೀಸರ್ ಬಿಚ್ಚಿಟ್ಟಿದೆ. ಟೀಸರ್‌ನ ಕೊನೆಯಲ್ಲಿ ಪ್ರಭಾಸ್‌, ಚಾಮುಂಡಿ ತಾಯಿ ಕಾಪಾಡಮ್ಮ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾಗೆ ದೇವರೇ ದಿಕ್ಕು – ರವೀನಾ ಟಂಡನ್

    ಮಾರುತಿ ನಿರ್ದೇಶಿಸಿರುವ ಈ ಚಿತ್ರವು ಅನೇಕ ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ ಶೂಟಿಂಗ್ ಮುಗಿಸಿದ್ದು, ಇದೀಗ ಡಿಸೆಂಬರ್ 5ಕ್ಕೆ ರಿಲೀಸ್ ಘೋಷಿಸಿದೆ. ವಿಶೇಷ ಅಂದ್ರೆ 5 ಭಾಷೆಯಲ್ಲಿ ಚಿತ್ರ ತಯಾರಾಗಿದ್ದು, ಕನ್ನಡದಲ್ಲೂ ಟೀಸರ್ ರಿಲೀಸ್ ಆಗಿದೆ.

  • ಮುಂದಿನ ಜನ್ಮದಲ್ಲಿ ಪ್ರಭಾಸ್ ನನ್ನ ಮಗನಾಗಬೇಕು: ಹಿರಿಯ ನಟಿ ಜರೀನಾ ವಹಾಬ್

    ಮುಂದಿನ ಜನ್ಮದಲ್ಲಿ ಪ್ರಭಾಸ್ ನನ್ನ ಮಗನಾಗಬೇಕು: ಹಿರಿಯ ನಟಿ ಜರೀನಾ ವಹಾಬ್

    ಹಿರಿಯ ನಟಿ ಜರೀನಾ ವಹಾಬ್ (Zarina Wahab) ಅವರು ‘ದಿ ರಾಜಾ ಸಾಬ್’ (The Raja Saab) ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಡಾರ್ಲಿಂಗ್ ಪ್ರಭಾಸ್‌ಗೆ (Prabhas) ತಾಯಿಯಾಗಿ ನಟಿಸಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಪ್ರಭಾಸ್ ಮುಂದಿನ ಜನ್ಮದಲ್ಲಿ ನನ್ನ ಮಗನಾಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ಮದುವೆ ವಿಚಾರದಲ್ಲಿ ನನ್ನಿಂದ ತಪ್ಪಾಗಿದೆ – ತಂದೆಯ ಬಳಿ ಕ್ಷಮೆ ಕೇಳಿದ ಗಾಯಕಿ ಪೃಥ್ವಿ ಭಟ್

    ನಟಿ ಮಾತನಾಡಿ, ಪ್ರಭಾಸ್ ವೃತ್ತಿಪರತೆ ಮತ್ತು ಸೆಟ್‌ನಲ್ಲಿ ಅವರು ನಡೆದುಕೊಳ್ಳುತ್ತಿದ್ದ ರೀತಿಯ ಬಗ್ಗೆ ಶ್ಲಾಘಿಸಿದ್ದಾರೆ. ಪ್ರಭಾಸ್ ಅಂತವರು ಯಾರು ಇಲ್ಲ. ಅವರು ತುಂಬಾ ಒಳ್ಳೆಯವರು ಎಂದಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಆಗಿ 2 ತಿಂಗಳಲ್ಲಿ ಖ್ಯಾತ ಕಿರುತೆರೆ ನಟಿಯ ಮಾಜಿ ಪತಿ ವಿಧಿವಶ

    ಮುಂದಿನ ಜನ್ಮದಲ್ಲಿ ನನಗೆ ಇಬ್ಬರೂ ಮಕ್ಕಳು ಜನಿಸಲಿ ಎಂದು ನಾನು ದೇವರಲ್ಲಿ ಕೇಳುತ್ತೇನೆ. ಅವರಲ್ಲಿ ಒಬ್ಬರು ಸೂರಜ್ ಆಗಿರಬೇಕು. ಇನ್ನೊಬ್ಬ ಪ್ರಭಾಸ್ ಆಗಿರಬೇಕು ಎಂದು ನಟನ ಬಗ್ಗೆ ಹೊಗಳಿ ನಟಿ ಜರೀನಾ ವಹಾಬ್ ಮಾತನಾಡಿದ್ದಾರೆ. ಶೂಟಿಂಗ್ ಇಲ್ಲದೇ ಇದ್ದರೆ ಅವರು ವ್ಯಾನಿಟಿ ವ್ಯಾನ್‌ಗೆ ಹೋಗುತ್ತಿರಲಿಲ್ಲ. ಸೆಟ್‌ನಲ್ಲಿ ಇರುವವರೊಂದಿಗೆ ಕುಳಿತು ಮಾತನಾಡುತ್ತಿದ್ದರು. ಸೆಟ್‌ನಲ್ಲಿ ಯಾರಾದರೂ ಹಸಿದಿದ್ದರೆ, ಪ್ರಭಾಸ್ ಮನೆಗೆ ಕರೆ ಮಾಡಿ ಸುಮಾರು 40-50 ಸದಸ್ಯರಿಗೆ ಆಗುವಷ್ಟು ಊಟ ತರಿಸುತ್ತಿದ್ದರು. ಸೆಟ್‌ನಲ್ಲಿರುವ ಎಲ್ಲರಿಗೂ ಸ್ವತಃ ಪ್ರಭಾಸ್ ಅವರೇ ಬಡಿಸುತ್ತಾರೆ. ಪ್ರಭಾಸ್ ಒಬ್ಬ ಆಹಾರಪ್ರಿಯ ಎಂದು ಜರೀನಾ ಹೇಳಿದ್ದಾರೆ. ಅವರ ಈ ಹೇಳಿಕೆ ಪ್ರಭಾಸ್‌ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

    ಮಾರುತಿ ನಿರ್ದೇಶನದ ‘ದಿ ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ತಾಯಿ ಪಾತ್ರವಾಗಿದ್ರೂ ಪವರ್‌ಫುಲ್ ರೋಲ್‌ಗೆ ಜರೀನಾ ವಹಾಬ್ ಜೀವ ತುಂಬಿದ್ದಾರೆ.

    ಹಿರಿಯ ನಟಿ ಜರೀನಾಗೆ ಸೂರಜ್ ಪಾಂಚೋಲಿ ಎಂಬ ಮಗನಿದ್ದಾರೆ. ಅವರು ಕೂಡ ಬಾಲಿವುಡ್ ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ.

  • ಹೊಸ ಗೆಟಪ್‌ನಲ್ಲಿ ಪ್ರಭಾಸ್- ‘ದಿ ರಾಜಾ ಸಾಬ್’ ಚಿತ್ರದ ಪೋಸ್ಟರ್ ಔಟ್

    ಹೊಸ ಗೆಟಪ್‌ನಲ್ಲಿ ಪ್ರಭಾಸ್- ‘ದಿ ರಾಜಾ ಸಾಬ್’ ಚಿತ್ರದ ಪೋಸ್ಟರ್ ಔಟ್

    ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರದ ಸಕ್ಸಸ್ ನಂತರ ‘ದಿ ರಾಜಾ ಸಾಬ್’ (The Raja Saab) ಸಿನಿಮಾ ಮೂಲಕ ಪ್ರಭಾಸ್ ಗಮನ ಸೆಳೆಯುತ್ತಿದ್ದಾರೆ. ಇಂದು (ಅ.23) ನಟನ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಚಿತ್ರತಂಡ ಸರ್ಪ್ರೈಸ್ ಕೊಟ್ಟಿದೆ. ಪ್ರಭಾಸ್ ಎಂದೂ ಕಾಣಿಸಿಕೊಂಡಿರದ ಡಿಫರೆಂಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ದಿ ರಾಜಾ ಸಾಬ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.

    ಪ್ರಭಾಸ್ ಹುಟ್ಟುಹಬ್ಬದ ದಿನವೇ ಮುಂದಿನ ಸಿನಿಮಾದ ಕ್ರೇಜಿ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ದಿ ರಾಜಾ ಸಾಬ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಸಿಗಾರ್ ಬಾಯಲ್ಲಿ ಇಟ್ಟುಕೊಂಡು ರಾಯಲ್ ಆಗಿ ಪ್ರಭಾಸ್ ಪೋಸ್ ಕೊಟ್ಟಿದ್ದಾರೆ. ನಟನ ಖಡಕ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:2ನೇ ಮದುವೆಗೆ ಸಜ್ಜಾದ ‘ಜೊತೆ ಜೊತೆಯಲಿ’ ನಟಿ ಮಾನಸ ಮನೋಹರ್‌

     

    View this post on Instagram

     

    A post shared by Prabhas (@actorprabhas)

    ಇನ್ನೂ ಇತ್ತೀಚೆಗೆ ‘ದಿ ರಾಜಾ ಸಾಬ್’ ಸಿನಿಮಾ ಮೊದಲ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಅದರಲ್ಲಿ ಪ್ರಭಾಸ್ ಲವರ್ ಬಾಯ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಬಿಟ್ಟಿರುವ ಪೋಸ್ಟರ್‌ನಲ್ಲಿ ನಟ ಖಡಕ್ ಆಗಿ ಕಾಣಿಸಿಕೊಂಡಿರೋದು ಫ್ಯಾನ್ಸ್‌ಗೆ ಚಿತ್ರದ ಕುರಿತು ಕುತೂಹಲ ಮೂಡಿಸಿದೆ.

    ಇನ್ನೂ ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ರಿದ್ಧಿ ಕುಮಾರ್ ನಟಿಸಿದ್ದಾರೆ. ಸಂಜಯ್ ದತ್, ಅನುಪಮ್ ಖೇರ್, ವರಲಕ್ಷ್ಮಿ ಶರತ್‌ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರಕ್ಕೆ ಮಾರುತಿ ನಿರ್ದೇಶನ ಮಾಡಿದ್ದಾರೆ.

  • ಬೊಕ್ಕೆ ಹಿಡಿದು ಲವರ್ ಬಾಯ್ ಗೆಟಪ್‌ನಲ್ಲಿ ಬಂದ ಪ್ರಭಾಸ್

    ಬೊಕ್ಕೆ ಹಿಡಿದು ಲವರ್ ಬಾಯ್ ಗೆಟಪ್‌ನಲ್ಲಿ ಬಂದ ಪ್ರಭಾಸ್

    ಡಾರ್ಲಿಂಗ್ ಪ್ರಭಾಸ್ (Actor Prabhas) ಇದೀಗ ಬೊಕ್ಕೆ ಹಿಡಿದು ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ರೊಮ್ಯಾಂಟಿಕ್‌ ಹುಡುಗನ ಅವತಾರದಲ್ಲಿ ಪ್ರಭಾಸ್‌ ಮಿಂಚಿದ್ದಾರೆ. ‘ದಿ ರಾಜಾ ಸಾಬ್’ ಸಿನಿಮಾದ ಪ್ರಭಾಸ್ ಪಾತ್ರದ ಗ್ಲಿಂಪ್ಸ್ ಇದೀಗ ರಿವೀಲ್ ಆಗಿದೆ. ಇದನ್ನೂ ಓದಿ:ಕಾರ್ತಿ ನಟನೆಯ ‘ಸರ್ದಾರ್ 2’ ಸಿನಿಮಾ ರಿಜೆಕ್ಟ್ ಮಾಡಿದ ಶ್ರೀಲೀಲಾ

    ಪ್ಯಾನ್ ಇಂಡಿಯಾ ಚಿತ್ರ ‘ಕಲ್ಕಿ’ (Kalki 2898 AD) ಯಶಸ್ಸಿನ ನಂತರ ‘ದಿ ರಾಜಾ ಸಾಬ್’ (The Raja Saab) ಚಿತ್ರದ ಮೂಲಕ ಪ್ರಭಾಸ್ ಸದ್ದು ಮಾಡುತ್ತಿದ್ದಾರೆ. ಮತ್ತೆ ಲವರ್ ಬಾಯ್ ಗೆಟಪ್‌ನಲ್ಲಿ ನಟ ಮಿಂಚಿದ್ದಾರೆ. ಬೈಕ್ ರೈಡ್ ಮಾಡುತ್ತಾ ಬೊಕ್ಕೆ ಹಿಡಿದು ನಟ ಮಸ್ತ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸಖತ್ ಸ್ಟೈಲೀಶ್ ಆಗಿರುವ ಪ್ರಭಾಸ್ ಪಾತ್ರದ ಮೊದಲ ಲುಕ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    ಈ ಚಿತ್ರವನ್ನು ಮಾರುತಿ ಎಂಬುವವರು ನಿರ್ದೇಶನ ಮಾಡಿದ್ದು, ಪ್ರಭಾಸ್‌ಗೆ ನಿಧಿ ಅಗರ್‌ವಾಲ್ ಜೋಡಿಯಾಗಿ ನಟಿಸಿದ್ದಾರೆ. ಮತ್ತೋರ್ವ ನಟಿಯಾಗಿ ಪಾಕಿಸ್ತಾನಿ ಬೆಡಗಿ ಸಜಲ್ ಅಲಿ ಕೂಡ ಇರಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಪರಿಸರ ಸ್ನೇಹಿ ಇನ್ವಿಟೇಷನ್ ಮೂಲಕ ಮಾದರಿಯಾದ ನಟಿ ಸೋನಲ್, ತರುಣ್ ಸುಧೀರ್

    ಇನ್ನೂ ಸಿನಿಮಾದಲ್ಲಿನ ಪ್ರಭಾಸ್ ಪಾತ್ರದ ಗ್ಲಿಂಪ್ಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಮುಂದಿನ ವರ್ಷ ಏ.10ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

  • ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ‘ದಿ ರಾಜಾ ಸಾಬ್’ ಚಿತ್ರದ ಬಗ್ಗೆ ಸಿಕ್ತು ಅಪ್‌ಡೇಟ್

    ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ‘ದಿ ರಾಜಾ ಸಾಬ್’ ಚಿತ್ರದ ಬಗ್ಗೆ ಸಿಕ್ತು ಅಪ್‌ಡೇಟ್

    ಡಾರ್ಲಿಂಗ್ ಪ್ರಭಾಸ್ (Prabhas) ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ‘ಕಲ್ಕಿ’ (Kalki 2898 AD) ಸಿನಿಮಾದ ಯಶಸ್ಸಿನ ನಂತರ ಪ್ರಭಾಸ್ ಮುಂದಿನ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ (The Raja Saab) ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿವೀಲ್ ಆಗಲಿದೆ.

    ಇದೇ ಜು.29ರಂದು ಸಂಜೆ 5 ಗಂಟೆಗೆ ‘ದಿ ರಾಜಾ ಸಾಬ್’ ಸಿನಿಮಾದ ಮೊದಲು ತುಣುಕು ಹೊರಬೀಳಲಿದೆ. ಪ್ರಭಾಸ್ ಲುಕ್ ಅನಾವರಣ ಆಗಲಿದೆ. ಚಿತ್ರದ ಗ್ಲಿಂಪ್ಸ್ ಕುರಿತು ಚಿತ್ರತಂಡ ಮಾಹಿತಿ ನೀಡಿದೆ. ಪ್ರಭಾಸ್ ಬ್ಯಾಕ್‌ ಸೈಡ್ ನಿಂತಿರುವ ಪೋಸ್ಟರ್ ರಿವೀಲ್ ಮಾಡಿ ಈ ಸಿಹಿಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಈ ಚಿತ್ರದಲ್ಲಿ ಪ್ರಭಾಸ್‌ಗೆ ನಿಧಿ ಅಗರ್‌ವಾಲ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಮಾರುತಿ ಎಂಬುವವರು ನಿರ್ದೇಶನ ಮಾಡಿದ್ದಾರೆ. ಎಂದಿಗಿಂತ ಪ್ರಭಾಸ್ ಈ ಬಾರಿ ಸ್ಟೈಲೀಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಕುರಿತು ಫ್ಯಾನ್ಸ್‌ಗೆ ಭಾರೀ ನಿರೀಕ್ಷೆ ಇದೆ.