ಬಾಲಿವುಡ್‌ನಲ್ಲಿ (Bollywood) ‘ದಿ ಫ್ಯಾಮಿಲಿ ಮ್ಯಾನ್’ 2 ಸಿರೀಸ್‌ಗಳು ಸೂಪರ್ ಹಿಟ್ ಆಗಿವೆ. ಇದರ ಮುಂದಿನ ಸರಣಿ ಯಾವಾಗ ಎಂದು ಕಾಯುತ್ತಿದ್ದವರಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ‘ದಿ ಫ್ಯಾಮಿಲಿ ಮ್ಯಾನ್ 3’ (The Family Man-3) ಬಗ್ಗೆ ನಟ ಮನೋಜ್ ಬಾಜಪೇಯಿ (Manoj Bajpayee) ಮಾಹಿತಿ ನೀಡಿದ್ದಾರೆ.

ರಾಜ್ & ಡಿಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್ 3’ ಬರಲಿದೆ. ಈಗಾಗಲೇ ಶೂಟಿಂಗ್ ಶುರುವಾಗಿದೆ ಎಂದು ನಟ ಮನೋಜ್ ಬಾಜಪೇಯಿ ಮಾಹಿತಿ ನೀಡಿದ್ದಾರೆ. ಮತ್ತೆ ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ಮನೋಜ್ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ:ಹೆಜ್ಜೇನು ದಾಳಿಗೆ ಜ್ಯೂನಿಯರ್ ಎನ್.ಟಿ.ಆರ್ ಟೀಮ್ ತತ್ತರ: ಆಸ್ಪತ್ರೆಗೆ ದಾಖಲು

ವೈಯಕ್ತಿಕ ಜೀವನ, ಹೆಂಡತಿ ಜೊತೆಗಿನ ಮನಸ್ತಾಪ, ಮಕ್ಕಳು ಹಾಗೂ ರಾಷ್ಟ್ರದ ಭದ್ರತೆಯ ಕೆಲಸವನ್ನು ಶ್ರೀಕಾಂತ್ ಹೇಗೆ ನಿಭಾಯಿಸಿಕೊಂಡು ಹೋಗ್ತಾರೆ ಎಂಬುದು ಈ ಹೊಸ ಸಿರೀಸ್‌ನ ಕಥೆಯ ಎಳೆ ಎನ್ನಲಾಗಿದೆ. ಇದನ್ನೂ ಓದಿ:‘ಪುಷ್ಪ 2’ ಚಿತ್ರದ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಫಹಾದ್ ಫಾಸಿಲ್
ಅಂದಹಾಗೆ, 2019ರಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 2’ ಒಟಿಟಿಯಲ್ಲಿ ತೆರೆಕಂಡಿತ್ತು. ಮನೋಜ್, ಸಮಂತಾ (Samantha), ಪ್ರಿಯಾಮಣಿ (Priyamani) ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.


`ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ ಈಗಾಗಲೇ ಎರಡು ಭಾಗಗಳಾಗಿ ಒಟಿಟಿಯಲ್ಲಿ ಪ್ರಸಾರವಾಗಿದೆ. ಮನೋಜ್ ಬಾಜಪೇಯಿ (Manoj Bhajpayee) ನಟನೆಯ ಅಭಿಮಾನಿಗಳಿಗೆ ಇಷ್ಟವಾಗಿದೆ. ಮನೋಜ್ ನಟನನೆಯ `ದಿ ಫ್ಯಾಮಿಲಿ ಮ್ಯಾನ್ 2′ (The Familyman 2) 2021 ರಿಲೀಸ್ ಆಯಿತು. ಮೊದಲ ಸೀಸನ್‌ನಲ್ಲಿ ಪಾಕ್ ಟೆರರಿಸ್ಟ್‌ಗಳ ಕಥೆ ಹೇಳಿದ್ದ ನಿರ್ದೇಶಕರಾದ ರಾಜ್ ಹಾಗೂ ಡಿಕೆ, ಎರಡನೇ ಸೀಸನ್‌ನಲ್ಲಿ ಶ್ರೀಲಂಕಾದ ಕಥೆಯನ್ನ ಹೇಳಿದ್ದರು.
ಟಾಲಿವುಡ್ (Tollywood) ನಟಿ ಸಮಂತಾ(Samantha) ಪಾತ್ರ ಫ್ಯಾನ್ಸ್‌ಗೆ ಸಾಕಷ್ಟು ಇಷ್ಟ ಆಗಿತ್ತು. ಈ ಸೀಸನ್ ಕೊನೆಯಲ್ಲಿ ಮೂರನೇ ಪಾರ್ಟ್ ಬರಲಿದೆ ಎನ್ನುವ ಸೂಚನೆ ಸಿಕ್ಕಿತ್ತು. ವೈರಸ್ ಕಥೆ ಆಧರಿಸಿ `ದಿ ಫ್ಯಾಮಿಲಿ ಮ್ಯಾನ್ 3′ (The Familyman 3) ಬರುತ್ತಿದೆ. ರಿಲೀಸ್ ದಿನಾಂಕದ ಬಗ್ಗೆ ಮನೋಜ್ ಬಾಜ್‌ಪಾಯಿ ಮಾಹಿತಿ ನೀಡಿದ್ದಾರೆ.