Tag: ದಿ ಡೆವಿಲ್‌

  • ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಆಗಿದ್ದ ದರ್ಶನ್ ಸಾಂಗ್ ರಿಲೀಸ್

    ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಆಗಿದ್ದ ದರ್ಶನ್ ಸಾಂಗ್ ರಿಲೀಸ್

    ರ್ಶನ್ ಅಭಿನಯದ `ಡೆವಿಲ್’ (The Devil) ಸಿನಿಮಾದ ಎರಡನೇ ಹಾಡು ರಿಲೀಸ್ ಆಗಿದೆ. ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಿರುವ ಹಾಡು ಇದಾಗಿದ್ದು, ನಟಿ ರಚನಾ ರೈ (Rachana Rai) ಜೊತೆ ದರ್ಶನ್ (Darshan) ರೊಮ್ಯಾಂಟಿಕ್ ಸ್ಪೆಪ್ ಹಾಕಿದ್ದಾರೆ.

    ಕಳೆದ ಜುಲೈ ತಿಂಗಳಲ್ಲಿ ಕೋರ್ಟ್ ಅನುಮತಿ ಪಡೆದುಕೊಂಡು ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದರು. ಇದೀಗ ಅಲ್ಲಿ ಚಿತ್ರೀಕರಣವಾದ `ಒಂದೇ ಒಂದು ಸಲ’ ಹಾಡು ರಿಲೀಸ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ. ಹಾಡು ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಧ್ವನಿಯಲ್ಲಿ ಮೂಡಿಬಂದಿದೆ. ಇದನ್ನೂ ಓದಿ: ದರ್ಶನ್‌ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್‌ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ

    ಈ ಹಾಡಿನ ಮೂಲಕ ದರ್ಶನ್ ಹಾಗೂ ರಚನಾ ರೈ ಆನ್‌ಸ್ಕ್ರೀನ್ ಜೋಡಿ ಮೊದಲ ಬಾರಿ ಒಟ್ಟಿಗೆ ಕಾಣಿಸ್ಕೊಂಡಿದೆ. ಸಂತು ಮಾಸ್ಟರ್ ಕೊರಿಯೋಗ್ರಫಿ ಮಾಡಿರುವ ಹಾಡು ಇದಾಗಿದ್ದು‌, ವಿವಿಧ ಆಕರ್ಷಕ ಕಾಸ್ಟ್ಯೂಮ್‌ನಲ್ಲಿ ದರ್ಶನ್ ಮಿಂಚಿದ್ದಾರೆ.

    ಸಾಮಾನ್ಯವಾಗಿ ದರ್ಶನ್ ಸಿನಿಮಾಗಳಲ್ಲಿ ಮೆಲೋಡಿ ಹಾಡಿಗೂ ಹೆಚ್ಚಿನ ಪ್ರಧಾನ್ಯತೆ ಇರುತ್ತೆ. ಅದನ್ನ ಗಮನದಲ್ಲಿಟ್ಟುಕೊಂಡೇ ಈ ಹಾಡನ್ನ ರಚಿಸಿದಂತಿದೆ. ಇನ್ನು ಪ್ರಕಾಶ್ ವೀರ್ ನಿರ್ದೇಶನದ `ದಿ ಡೆವಿಲ್’ ಚಿತ್ರ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗೋದಕ್ಕೆ ಅನೌನ್ಸ್ ಆಗಿದೆ. ಇದನ್ನೂ ಓದಿ: Fraud Case | ನೋಟು ಅಮಾನ್ಯೀಕರಣದಿಂದಾಗಿ ಸಾಲ ಪಾವತಿಸಲು ಆಗಿರಲಿಲ್ಲ: ಶಿಲ್ಪಾ ಶೆಟ್ಟಿ ಪತಿ

  • ದರ್ಶನ್ ಜೈಲಲ್ಲಿ – `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್ ರಿಲೀಸ್

    ದರ್ಶನ್ ಜೈಲಲ್ಲಿ – `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್ ರಿಲೀಸ್

    ದರ್ಶನ್ ನಟನೆಯ ಡೆವಿಲ್ ಸಿನಿಮಾದ (The Devil) `ಇದ್ರೆ ನೆಮ್ದಿಯಾಗ್ ಇರ್ಬೇಕ್‌ʼ (Idre Nemdiyaag Irbek) ಹಾಡು ಇಂದು ಬಿಡುಗಡೆ ಆಗಿದೆ. ದರ್ಶನ್ ಅಭಿಮಾನಿಗಳು ಹಲವಾರು ದಿನಗಳಿಂದ ಕುತೂಹಲದಿಂದ ಕಾಯ್ತಿದ್ದ ಈ ಹಾಡು ಕೊನೆಗೂ ರಿಲೀಸ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ದೀಪಕ್ ಬ್ಲೂ ಹಾಡಿಗೆ ಧ್ವನಿಯಾಗಿದ್ದಾರೆ. ದರ್ಶನ್ ಜೈಲಿನಲ್ಲಿರುವಾಗಲೇ ಡೆವಿಲ್ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ.

    ಅಂದುಕೊಂಡಂತೆ ಆಗಿದ್ದರೆ, ಆಗಸ್ಟ್ 15ರಂದು ಈ ಹಾಡು ಬಿಡುಗಡೆ ಆಗಬೇಕಿತ್ತು. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ (Supreme Court) ರದ್ದುಗೊಳಿಸಿದ ಕಾರಣದಿಂದಾಗಿ, ಆಗಸ್ಟ್ 14ರಂದು ದರ್ಶನ್ ಮತ್ತೆ ಜೈಲುಪಾಲಾದರು. ಇಂದು ಈ ಹಾಡನ್ನು ರಿಲೀಸ್‌ ಮಾಡಲಾಗಿದೆ. ಚಿತ್ರದ ನಿರ್ದೇಶಕ ಪ್ರಕಾಶ್ ವೀರ್, ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದರ್ಶನ್ (Darshan) ಜೊತೆ ಚರ್ಚಿಸಿ ಇಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ. ಡೆವಿಲ್ ಹಾಡು ನೋಡಿ ದರ್ಶನ್ ಅಭಿಮಾನಿಗಳು ಒಂದು ಕಡೆ ಸಂಭ್ರಮ ಪಡುತ್ತಿದ್ದಾರೆ. ಮತ್ತೊಂದು ಕಡೆ ದಚ್ಚು ಜೈಲಿನಲ್ಲಿರುವ ಕಾರಣದಿಂದ ಫ್ಯಾನ್ಸ್ ಸಂಕಟ ಪಟುವಂತಾಗಿದೆ.

    ದರ್ಶನ್ ಜೈಲಿನಲ್ಲಿದ್ದಾಗಲೇ ಹಾಡನ್ನ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಡೆವಿಲ್ ಸಿನಿಮಾ ತೆರೆಗೆ ಬರಲು ಕೂಡಾ ಸೂಚನೆ ಸಿಕ್ಕಿದೆ. ಸಿನಿಮಾದ ಎಲ್ಲಾ ಕಾರ್ಯಗಳು ಮುಗಿದಿದ್ದು, ಸಿನಿಮಾ ತೆರೆಗೆ ಬರೋದು ಮಾತ್ರ ಬಾಕಿ ಇದೆ. ಹೀಗಾಗಿ ದರ್ಶನ್ ಜೊತೆ ಚರ್ಚಿಸಿ ಸಿನಿಮಾವನ್ನ ರಿಲೀಸ್ ಮಾಡಲು ಚಿತ್ರತಂಡ ಕೂಡಾ ನಿರ್ಧರಿಸಿದೆಯಂತೆ.

    ಡೆವಿಲ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲೇ ದರ್ಶನ್ ಮೈಸೂರಿನಲ್ಲಿ ಬಂಧನವಾಗಿದ್ದರು. ಆನಂತರ ನೂರಾರು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯಿತು. ಜಾಮೀನು ಸಿಕ್ಕು ಆಚೆ ಬಂದ ಮೇಲೆ ಡೆವಿಲ್ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದರು. ಈಗ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಈಗ ಮತ್ತೆ ದರ್ಶನ್ ಜೈಲುಪಾಲಾಗಿದ್ದಾರೆ. ದರ್ಶನ್ ಇಲ್ಲದೇ ಸಿನಿಮಾ ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಗಿದೆ.

  • ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂದ ದರ್ಶನ್!

    ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂದ ದರ್ಶನ್!

    ರ್ಶನ್ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ ಡೆವಿಲ್ (The Devil) ಸಿನಿಮಾ ತಂಡದಿಂದ ಮಹಾ ಅಪ್‌ಡೇಟ್ ಹೊರಬಿದ್ದಿದೆ.

    ಸಿನಿಮಾ ರಿಲೀಸ್ ಡೇಟ್ ಘೋಷಣೆಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಎಕ್ಸೈಟಿಂಗ್ ನ್ಯೂಸ್ ಕೊಟ್ಟಿದೆ ಸಿನಿಮಾ ಟೀಮ್. ಚಿತ್ರದ ಮೊದಲ ಹಾಡನ್ನ ರಿಲೀಸ್ ಮಾಡುವ ದಿನಾಂಕ ಘೋಷಿಸಿದೆ ‘ಡೆವಿಲ್’ ಚಿತ್ರತಂಡ.‌ ಇದನ್ನೂ ಓದಿ: ಧ್ರುವ ಸರ್ಜಾ ಮಕ್ಕಳ ರಕ್ಷಾಬಂಧನ ಆಚರಣೆ

    ಸ್ವಾತಂತ್ರೋತ್ಸವದ ಆ.15 ಕ್ಕೆ ಡೆವಿಲ್ ಸಿನಿಮಾದ ಫಸ್ಟ್ ಸಿಂಗಲ್ ರಿಲೀಸ್ ಆಗಲಿದ್ದು, ಅಭಿಮಾನಿಗಳು ಹಬ್ಬ ಮಾಡುವ ಕ್ಯಾಚಿ ಲಿರಿಕ್ಸನ್ನು ಈ ಹಾಡು ಒಳಗೊಂಡಿದೆ ಎಂಬ ಮಾಹಿತಿ ಇದೆ. ‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಎಂಬ ಲಿರಿಕ್ಸ್ ಕುತೂಹಲ ಹುಟ್ಟಿಸಿದೆ. ಪ್ರಕಾಶ್ ನಿರ್ದೇಶಿಸಿ ನಿರ್ಮಿಸಿರುವ ಡೆವಿಲ್ ಸದ್ಯಕ್ಕೆ ದರ್ಶನ್ ಸಿನಿಮಾ ಕರಿಯರ್‌ನಲ್ಲೇ ಭಾರೀ ನಿರೀಕ್ಷಿತ ಚಿತ್ರವಾಗಿದೆ.

  • ರೇಣುಕಾಸ್ವಾಮಿ ಹತ್ಯೆ ಕೇಸ್‌ – ಥೈಲ್ಯಾಂಡ್‌ಗೆ ತೆರಳಲು ದರ್ಶನ್‌ಗೆ ಕೋರ್ಟ್‌ ಅವಕಾಶ

    ರೇಣುಕಾಸ್ವಾಮಿ ಹತ್ಯೆ ಕೇಸ್‌ – ಥೈಲ್ಯಾಂಡ್‌ಗೆ ತೆರಳಲು ದರ್ಶನ್‌ಗೆ ಕೋರ್ಟ್‌ ಅವಕಾಶ

    ರೇಣುಕಾಸ್ವಾಮಿ (Renukaswamy Murder Case) ಹತ್ಯೆ ಪ್ರಕರಣದ ಆರೋಪಿ ದರ್ಶನ್ (Darshan) ವಿದೇಶ ಪ್ರವಾಸಕ್ಕೆ ತೆರಳಲು ಕೋರ್ಟ್ ಈಗ ಅನುಮತಿ ನೀಡಿದೆ. ಡೆವಿಲ್ (Devil) ಚಿತ್ರದ ಚಿತ್ರೀಕರಣಕ್ಕಾಗಿ ದರ್ಶನ್ ಈ ಅನುಮತಿಯನ್ನು ಪಡೆದುಕೊಂಡಿದ್ದಾರೆ.

    ಈ ಹಿಂದೆ ಇಸ್ರೇಲ್‌ನಲ್ಲಿ ಚಿತ್ರೀಕರಣಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಇಸ್ರೇಲ್‌ನಲ್ಲಿ ಯುದ್ಧದ ವಾತಾವರಣ ‌ಹಿನ್ನೆಲೆ ಪ್ರಯಾಣ ಕೈಬಿಟ್ಟ ಚಿತ್ರತಂಡ ಥೈಲ್ಯಾಂಡ್‌ನಲ್ಲಿ ಮಾತ್ರ ಚಿತ್ರೀಕರಣ ಮಾಡಲು ನಿರ್ಧರಿಸಿದೆ. ಇದನ್ನೂ ಓದಿ: ಡೆವಿಲ್‌ಗೆ ಯುದ್ಧಾತಂಕ – ವಿದೇಶಿ ಪ್ರವಾಸ ಮರುನಿಗದಿ ಕೋರಿ ದರ್ಶನ್ ಅರ್ಜಿ

    ಡೆವಿಲ್‌ ಶೂಟಿಂಗ್‌ನಲ್ಲಿ ದರ್ಶನ್‌

    ಈ ಹಿಂದೆ ಕೋರ್ಟ್‌ನಲ್ಲಿ ಜು.1ರಿಂದ‌ ಜು.25ರ ವರೆಗೆ ಅವಕಾಶ ಪಡೆಯಲಾಗಿತ್ತು. ಆದರೆ, ಇಸ್ರೇಲ್‌ನಲ್ಲಿ ಯುದ್ಧ ನಡೆಯುತ್ತಿದ್ದು, ಆ ದೇಶದಲ್ಲಿ ಚಿತ್ರೀಕರಣ ಕೈಬಿಡಲಾಗಿದೆ. ಇದೀಗ ಜು.11 ರಿಂದ ಜು.30 ರವರೆಗೆ ಅವಕಾಶ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿತ್ತು. ದರ್ಶನ್ ಪರ ವಕೀಲ ಎಸ್.ಸುನಿಲ್ ಕುಮಾರ್ ವಾದ ಮಂಡಿಸಿದರು.

    ವಿದೇಶ ಪ್ರಯಾಣದ ದಿನಾಂಕ ಮರುನಿಗದಿಗೆ ಕೋರಿ ದರ್ಶನ್ (Darshan) ಅವರು 57ನೇ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಡೆವಿಲ್ ಸಿನಿಮಾ ಶೂಟಿಂಗ್‌ಗೆ (Devil Shooting) ವಿದೇಶಕ್ಕೆ ತೆರಳಲು ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿಯಾಗಿರುವ ದರ್ಶನ್‌ಗೆ ಜುಲೈ 1 ರಿಂದ 25ರ ವರೆಗೆ ಕೋರ್ಟ್‌ ಅನುಮತಿ ನೀಡಿತ್ತು. ಆದರೆ ಇಸ್ರೇಲ್‌ (Israel) ಮತ್ತು ಇರಾನ್‌ (Iran) ಮಧ್ಯೆ ಯುದ್ಧದ ವಾತಾವರಣದಿಂದ ದುಬೈ ಪ್ರಯಾಣವನ್ನು ಚಿತ್ರ ತಂಡ ಕೈಬಿಟ್ಟಿದೆ. ಆದರೆ, ಈಗ ಶೂಟಿಂಗ್‌ ಅನ್ನು ಥಾಯ್ಲೆಂಡ್‌ನಲ್ಲಿ ಮಾತ್ರ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಸ್ನೇಹಿತರಿಂದ ವಿಶೇಷ ಪೂಜೆ

  • ದರ್ಶನ್ ನಟನೆಯ ‘ಡೆವಿಲ್’ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ

    ದರ್ಶನ್ ನಟನೆಯ ‘ಡೆವಿಲ್’ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ

    ಟಿ ಶರ್ಮಿಳಾ ಮಾಂಡ್ರೆ (Sharmiela Mandre) ಅವರು ದರ್ಶನ್ ನಟನೆಯ ‘ದಿ ಡೆವಿಲ್’ (The Devil) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದಾರೆ. ಇದನ್ನೂ ಓದಿ:ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್; ನಟಿ ರನ್ಯಾ ಜಾಮೀನು ಭವಿಷ್ಯ ಇಂದು ನಿರ್ಧಾರ

    ಮಿಲನಾ ಪ್ರಕಾಶ್ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿರುವ ‘ದಿ ಡೆವಿಲ್’ ಚಿತ್ರಕ್ಕೆ ಶರ್ಮಿಳಾ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣದ ಸ್ಥಳದಲ್ಲಿ ತಾವು ಇರುವ ಕ್ಯಾರವಾನ್ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಹೇಗಿದೆ? ಎಂಬುದು ರಿವೀಲ್ ಆಗಿಲ್ಲ.

    ಶರ್ಮಿಳಾ ಅಷ್ಟೇ ಅಲ್ಲ, ‘ಬಿಗ್ ಬಾಸ್ ಕನ್ನಡ 10’ರ ಸ್ಪರ್ಧಿ ವಿನಯ್ ಗೌಡ (Vinay Gowda) ‘ಡೆವಿಲ್’ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಡೆವಿಲ್‌ನಲ್ಲಿ ವಿಲನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ದರ್ಶನ್ (Darshan), ಶರ್ಮಿಳಾ, ವಿನಯ್ ಇರುವ ಚಿತ್ರೀಕರಣದ ಸ್ಥಳದಲ್ಲಿ ಭಾರೀ ಬಿಗಿ ಭದ್ರತೆ ಕೊಡಲಾಗಿದೆ. ಪೊಲೀಸ್ ಮತ್ತು ಬೌನ್ಸರ್ ಇಟ್ಟುಕೊಂಡು ನಿರ್ದೇಶಕ ಶೂಟಿಂಗ್ ಶುರು ಮಾಡಿದ್ದಾರೆ.

    ಇನ್ನೂ ಈ ಹಿಂದೆ ‘ನವಗ್ರಹ’ (Navagraha) ಸಿನಿಮಾದಲ್ಲಿ ದರ್ಶನ್ (Darshan) ಜೊತೆ ಶರ್ಮಿಳಾ ತೆರೆಹಂಚಿಕೊಂಡಿದ್ದರು. ಇದೀಗ 2ನೇ ಬಾರಿ ದರ್ಶನ್ ಜೊತೆ ನಟಿ ಸಿನಿಮಾ ಮಾಡ್ತಿದ್ದಾರೆ.

  • ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಶುರು- ದರ್ಶನ್ ಭಾಗಿ

    ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಶುರು- ದರ್ಶನ್ ಭಾಗಿ

    ಟ ದರ್ಶನ್ (Darshan) ಮತ್ತೆ ‘ದಿ ಡೆವಿಲ್’ (The Devil) ಚಿತ್ರೀಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಸ್ಥಗಿತಗೊಂಡಿದ್ದ ಶೂಟಿಂಗ್‌ಗೆ ಇಂದು (ಮಾ.12) ಚಾಲನೆ ನೀಡಲಾಗಿದೆ. ಇದನ್ನೂ ಓದಿ:ದರ್ಶನ್ ಯಾವತ್ತಿದ್ರೂ ನನ್ನ ಮಗ: ತಾಯಿ, ಮಗನ ಸಂಬಂಧದಲ್ಲಿ ವಿವಾದ ಸೃಷ್ಟಿಸಬೇಡಿ ಎಂದ ಸುಮಲತಾ

    ಇಂದಿನಿಂದ ಮಾ.15ರವರೆಗೆ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ಈ ಹಿನ್ನೆಲೆ, ದರ್ಶನ್ ಚಿತ್ರೀಕರಣಕ್ಕೆ ಬಂದಿದ್ದಾರೆ. ಸರ್ಕಾರಿ ಅಥಿತಿ ಗೃಹದಲ್ಲಿ ಶೂಟಿಂಗ್ ನಡೆಯುತ್ತಿದೆ. ಮಾ.15ರಂದು ಲಲಿತ್ ಮಹಲ್ ಪ್ಯಾಲೆಸ್‌ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.

    ಇನ್ನೂ 9 ತಿಂಗಳ ಹಿಂದೆ ಮೈಸೂರಿನಲ್ಲಿ ರೇಣುಕಾಸ್ವಾಮಿ ಪ್ರಕರಣದ ಸಂಬಂಧ ದರ್ಶನ್ ಬಂಧನವಾಗಿತ್ತು. ‘ಡೆವಿಲ್’ ಸಿನಿಮಾಗೆ ಚಿತ್ರೀಕರಣಕ್ಕೆಂದು ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ 9 ತಿಂಗಳ ಬಳಿಕ ಮತ್ತೆ ಮೈಸೂರಿನಲ್ಲಿ ‘ದಿ ಡೆವಿಲ್’ ಶೂಟಿಂಗ್‌ನಲ್ಲಿ ನಟ ಭಾಗಿಯಾಗಿದ್ದಾರೆ. ಈ ಸುದ್ದಿ ಕೇಳಿ ಡಿಬಾಸ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ಈ ಸಿನಿಮಾಗೆ ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್‌ಗೆ ರಚನಾ ರೈ (Rachana Rai) ಜೋಡಿಯಾಗಿದ್ದಾರೆ. ‘ಬಿಗ್ ಬಾಸ್ ಕನ್ನಡ 10’ರ ಸ್ಪರ್ಧಿ ವಿನಯ್ ಗೌಡ (Vinay Gowda) ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ.

  • ‘ದಿ ಡೆವಿಲ್’ ಶೂಟಿಂಗ್ ಮತ್ತೆ ಆರಂಭ- ದರ್ಶನ್ ಭದ್ರತೆಗಾಗಿ ಭಾರೀ ಮೊತ್ತ ಕಟ್ಟಿದ ಚಿತ್ರತಂಡ

    ‘ದಿ ಡೆವಿಲ್’ ಶೂಟಿಂಗ್ ಮತ್ತೆ ಆರಂಭ- ದರ್ಶನ್ ಭದ್ರತೆಗಾಗಿ ಭಾರೀ ಮೊತ್ತ ಕಟ್ಟಿದ ಚಿತ್ರತಂಡ

    ಟ ದರ್ಶನ್ (Darshan) ಮತ್ತೆ ‘ದಿ ಡೆವಿಲ್’ (The Devil) ಶೂಟಿಂಗ್‌ಗೆ ಎಂಟ್ರಿ ಕೊಡಲಿದ್ದಾರೆ. ಮೈಸೂರಿನಲ್ಲಿ ಸ್ಥಗಿತಗೊಂಡಿದ್ದ ಶೂಟಿಂಗ್ ಮತ್ತೆ ಚಾಲನೆ ನೀಡಲಾಗುತ್ತಿದೆ. ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಭದ್ರತೆಗಾಗಿ ಭಾರೀ ಮೊತ್ತ ಹಣವನ್ನು ಚಿತ್ರತಂಡ ಖರ್ಚು ಮಾಡಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್- ಮತ್ತೆ ಕಿರುತೆರೆಗೆ ಕಿರಣ್ ರಾಜ್

    ಮಾರ್ಚ್ 12ರಿಂದ 15ರವರೆಗೆ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ಮಾ.12ರಿಂದ ಮಾ.14ರವರೆಗೆ ಸರ್ಕಾರಿ ಅಥಿತಿ ಗೃಹದಲ್ಲಿ ಚಿತ್ರತಂಡ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ಮಾಡಲಿದ್ದಾರೆ. ಮಾ.15ರಂದು ಲಲಿತಮಹಲ್ ಪ್ಯಾಲೆಸ್‌ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.

    ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ. ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 32 ಸಿಬ್ಬಂದಿ ಶೂಟಿಂಗ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನಟನ ಭದ್ರತೆಗಾಗಿ  ಸಿಬ್ಬಂದಿ ನಿಯೋಜಿಸಲು 1,64,785 ರೂ. ‘ದಿ ಡೆವಿಲ್’ ಚಿತ್ರತಂಡ ಪಾವತಿಸಿದೆ.

    ಅಂದಹಾಗೆ, 10 ತಿಂಗಳ ಹಿಂದೆ ಮೈಸೂರಿನಲ್ಲಿ ರೇಣುಕಾಸ್ವಾಮಿ ಪ್ರಕರಣದ ಸಂಬಂಧ ದರ್ಶನ್ ಬಂಧನವಾಗಿತ್ತು. ‘ಡೆವಿಲ್’ ಸಿನಿಮಾಗೆ ಚಿತ್ರೀಕರಣಕ್ಕೆಂದು ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ 10 ತಿಂಗಳ ಬಳಿಕ ಮತ್ತೆ ಮೈಸೂರಿನಲ್ಲಿ ‘ದಿ ಡೆವಿಲ್’ ಶೂಟಿಂಗ್ ನಡೆಯಲಿದೆ.

    ಇನ್ನೂ ಈ ಸಿನಿಮಾಗೆ ಮಿಲನಾ ಪ್ರಕಾಶ್‌ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್‌ಗೆ ರಚನಾ ರೈ ಜೋಡಿಯಾಗಿದ್ದಾರೆ. ‘ಬಿಗ್‌ ಬಾಸ್‌ ಕನ್ನಡ 10’ರ ಸ್ಪರ್ಧಿ ವಿನಯ್‌ ಗೌಡ ಕೂಡ  ಈ ಚಿತ್ರದಲ್ಲಿ ನಟಿಸಲಿದ್ದಾರೆ.

  • ದರ್ಶನ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ – ‘ಡೆವಿಲ್’ ಸಿನಿಮಾದ ಟೀಸರ್ ರಿಲೀಸ್

    ದರ್ಶನ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ – ‘ಡೆವಿಲ್’ ಸಿನಿಮಾದ ಟೀಸರ್ ರಿಲೀಸ್

    ಟ ದರ್ಶನ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್ (Darshan) ಅಭಿನಯದ ‘ಡೆವಿಲ್’ (The Devil) ಸಿನಿಮಾದ ಟೀಸರ್ ಭಾನುವಾರ ಬಿಡುಗಡೆಯಾಗಿದೆ.

    ಮಿಲನ ಪ್ರಕಾಶ್ ನಿರ್ದೇಶಿಸಿ ನಿರ್ಮಿಸಿರುವ ಚಿತ್ರ ಇದಾಗಿದೆ. ಫೈಟ್ ದೃಶ್ಯಗಳನ್ನೇ ಒಳಗೊಂಡಿರುವ ಟೀಸರ್ ರಿಲೀಸ್ ಆಗಿದೆ. ನನಗೇ ‘ಚಾಲೆಂಜ್’ ಎನ್ನುವಂತೆ ಡೈಲಾಗ್ ಹೊಡೆದಿರುವ ಡೆವಿಲ್, ಫ್ಯಾನ್ಸ್‌ಗೆ ಥ್ರಿಲ್ ನೀಡಿದ್ದಾರೆ.

    ಪ್ರಕಾಶ್ ವೀರ್ ನಿರ್ದೇಶನದ ‘ದಿ ಡೆವಿಲ್’ ಚಿತ್ರದಲ್ಲಿ ದರ್ಶನ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ರೋಮಾಂಚನಕಾರಿ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಈ ಚಿತ್ರದಲ್ಲಿ ರಚನಾ ರೈ, ಮಹೇಶ್ ಮಂಜ್ರೇಕರ್ ಮತ್ತು ವಿನಯ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.