Tag: `ದಿ ಗ್ರೇ ಮ್ಯಾನ್

  • ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್‌ ನಟನೆಯ ಹಾಲಿವುಡ್ ಚಿತ್ರತಂಡ

    ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್‌ ನಟನೆಯ ಹಾಲಿವುಡ್ ಚಿತ್ರತಂಡ

    ಕಾಲಿವುಡ್‌ನ ಸ್ಟಾರ್ ನಟ ಧನುಷ್ ಈಗ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಹಾಲಿವುಡ್‌ನ `ದಿ ಗ್ರೇ ಮ್ಯಾನ್’ ಚಿತ್ರದ ಮೂಲಕ ಸೌಂಡ್ ಮಾಡುತ್ತಿದ್ದಾರೆ. ಈಗ ಆಮೀರ್ ಖಾನ್ ಮನೆಯಲ್ಲಿ ಔತಣ ಕೂಟದಲ್ಲಿ ಧನುಷ್ ಜತೆ ಹಾಲಿವುಡ್ ಚಿತ್ರತಂಡ ಭಾಗವಹಿಸಿದ್ದಾರೆ.

     

    View this post on Instagram

     

    A post shared by Dhanush (@dhanushkraja)

    ಧನುಷ್ `ದಿ ಗ್ರೇ ಮ್ಯಾನ್’ ಚಿತ್ರದ ಮೂಲಕ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಈ ಚಿತ್ರದ ಪ್ರಿಮೀಯರ್ ಶೋವನ್ನ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಬಾಲಿವುಡ್ ಸ್ಟಾರ್ ಕಲಾವಿದರಿಗೆ ಆಹ್ವಾನ ನೀಡಿತ್ತು ಚಿತ್ರತಂಡ. ಜತೆಗೆ ಸ್ಟಾರ್ ನಟ ಆಮೀರ್ ಖಾನ್‌ಗೂ ಧನುಷ್ ಟೀಂ ಆಹ್ವಾನ ನೀಡಿತ್ತು. ಆದರೆ `ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ಕಾರಣದಿಂದ ಚಿತ್ರದ ಪ್ರೀಮಿಯರ್‌ಗೆ ಆಮೀರ್ ಗೈರಾಗಿದ್ದರು. ಬಳಿಕ ಆಮೀರ್ ಮನೆಯಲ್ಲಿ ಚಿತ್ರತಂಡಕ್ಕೆ ಔತಣ ಕೂಟಕ್ಕೆ ಆಹ್ವಾನ ನೀಡಿ, ಉಪಚರಿಸಲಾಯಿತು. ಈಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಟ್ರೋಲ್ ಮಾಡುವವರಿಗೆ ಡೋಂಟ್ ಕೇರ್: ಹೊಸ ಫೋಟೋ ಶೇರ್ ಮಾಡಿ ಟಾಂಗ್ ಕೊಟ್ಟ ಸುಶ್ಮಿತಾ ಸೇನ್

    `ದಿ ಗ್ರೇ ಮ್ಯಾನ್’ ಚಿತ್ರದ ನಿರ್ದೇಶಕ ರುಸ್ಸೋ ಬ್ರದರ್ಸ್‌ ಜೊತೆ ಧನುಷ್ ಕೂಡ ಆಮೀರ್ ಖಾನ್ ಮನೆಯಲ್ಲಿ ಹಾಜರಿದ್ದರು.ಜತೆಗೆ ಆಮೀರ್ ಮಾಜಿ ಪತ್ನಿ ಕಿರಣ್ ರಾವ್ ಕೂಡ ಭಾಗಿಯಾಗಿದ್ದರು. ಈ ವೇಳೆ ಗುಜರಾತಿ ಶೈಲಿಯ ಭಿನ್ನ ಅಡುಗೆಯನ್ನ ಮಾಡಿಸಲಾಗಿದ್ದು, ಸೂರತ್‌ನಿಂದ ಪ್ರಸಿದ್ಧ ಬಾಣಿಸಿಗರನ್ನ ಕರೆಸಿ ಗುಜರಾತಿ ಖಾದ್ಯವನ್ನು ಮಾಡಿಸಿದ್ದಾರೆ. ಆಮೀರ್ ಆತಿಥ್ಯ ನೋಡಿ ಚಿತ್ರತಂಡ ಕೂಡ ಖುಷಿಪಟ್ಟಿದ್ದಾರೆ. ಸದ್ಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

    ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

    ಮಿಳಿನ ಖ್ಯಾತ ನಟ ಧನುಶ್ ಮತ್ತೆ ಕಮಾಲ್ ಮಾಡಿದ್ದಾರೆ. ಪ್ರತಿ ಬಾರಿಯೂ ಭಾರತೀಯ ಸಿನಿಮಾ ರಂಗದ ಪ್ರೇಕ್ಷಕರನ್ನು ರಂಜಿಸುತ್ತಿದ್ದವರು, ಈ ಬಾರಿ ಭಾರತದ ಗಡಿಯನ್ನು ದಾಟಿದ್ದಾರೆ. ಮೊದಲ ಬಾರಿಗೆ ಧನುಶ್ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದು, ಇದೀಗ ಆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ತಮ್ಮ ನೆಚ್ಚಿನ ನಟನ ಮೊದಲ ಹಾಲಿವುಡ್ ಸಿನಿಮಾ ಹೇಗಿದೆ? ಅವರು ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದನ್ನು ನೋಡುವುದಕ್ಕೆ ಅಭಿಮಾನಿಗಳು ಕಾತರರಾಗಿದ್ದರು. ಇದನ್ನೂ ಓದಿ : ಕೆಜಿಎಫ್ 2 ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಆ ಕಾತರತೆಯ ಕಾವನ್ನು ಹಾಗೆಯೇ ತಗ್ಗಿಸಿದ್ದಾರೆ ನಿರ್ದೇಶಕರು. ಧನುಶ್ ದಿ ಗ್ರೇ ಮ್ಯಾನ್ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರೂ, ಆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದರೂ, ಧನುಶ್ ಮಾತ್ರ ಆ ಟ್ರೇಲರ್ ನಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಹಾಗಂತ ಟ್ರೇಲರ್ ನಲ್ಲಿ ಇಲ್ಲವೇ ಇಲ್ಲ ಅಂತಲ್ಲ, ಧನುಶ್ ಕಾಣಿಸಿಕೊಳ್ಳುವುದು ಕೇವಲ ಎರಡೇ ಎರಡು ಸೆಕೆಂಡ್ ಮಾತ್ರ. ಇದನ್ನೂ ಓದಿ : ತೆರೆಯ ಮೇಲೂ ಒಂದಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

    ಈ ಸಿನಿಮಾದಲ್ಲಿ ಧನುಶ್ ಅವರಿಗೆ ಉತ್ತಮ ಪಾತ್ರ ಕೊಟ್ಟಿದ್ದರು, ಟ್ರೈಲರ್ ನಲ್ಲಿ ಕಾಣಿಸಿಕೊಂಡಿರುವುದು ಗೋಸ್ಲಿಂಗ್ ಮತ್ತು ಕ್ರಿಸ್ ಇವಾನ್ಸ್ ಮಾತ್ರ. ಇವರಿಬ್ಬರೂ ಇಡೀ ಟ್ರೈಲರ್ ಅನ್ನು ಆವರಿಸಿಕೊಂಡಿದ್ದಾರೆ. ಧನುಶ್ ಈ ಟ್ರೈಲರ್ ನಲ್ಲಿ ಮಸುಕು ಮಸುಕಾಗಿ ಕಾಣಿಸಿಕೊಳ್ಳುತ್ತಾರೆ. ಕಾಣಿಸುವುದೇ ಎರಡೇ ದೃಶ್ಯಗಳಲ್ಲಿ ಒಂದರಲ್ಲಿ ಧನುಶ್ ಏಟು ತಿಂದರೆ, ಮತ್ತೊಂದರಲ್ಲಿ ಇವರು ಒದೆ ಕೊಡುತ್ತಾರೆ. ಈ ಎರಡೂ ದೃಶ್ಯಗಳಲ್ಲಿ ಅವರು ಮಾತ್ರ ಕಾಣಿಸಿಕೊಳ್ಳುವುದು ಕೇವಲ ಎರಡೇ ಎರಡು ಸೆಕೆಂಡ್ ಮಾತ್ರ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾ

    ಇದೊಂದು ಕಾದಂಬರಿ ಆಧರಿಸಿದ ಸಿನಿಮಾವಾಗಿದ್ದು, ಭಿನ್ನ ಮನಸ್ಥಿತಿಯ ಅಪರಾಧಿ ಹಾಗೂ ಸಿಐಎ ಏಜೆಂಟ್ ನಡುವಿನ ಕಾಳಗವನ್ನು ಈ ಸಿನಿಮಾ ಹೊಂದಿದೆ. ರುಸ್ಸೋ ಬ್ರದರ್ಸ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದೇ ಜುಲೈ 15 ರಂದು ವಿಶ್ವದಾದ್ಯಂತ ೀ ಸಿನಿಮಾ ರಿಲೀಸ್ ಆಗಲಿದೆ.

  • ಧನುಷ್ ನಟನೆಯ ಹಾಲಿವುಡ್ `ದಿ ಗ್ರೇ ಮ್ಯಾನ್’ ಫಸ್ಟ್ ಲುಕ್ ರಿಲೀಸ್

    ಧನುಷ್ ನಟನೆಯ ಹಾಲಿವುಡ್ `ದಿ ಗ್ರೇ ಮ್ಯಾನ್’ ಫಸ್ಟ್ ಲುಕ್ ರಿಲೀಸ್

    ಟ ಧನುಷ್ ಕಾಲಿವುಡ್ ಅಂಗಳದ ಪ್ರತಿಭಾನ್ವಿತ ಕಲಾವಿದ. ಎಲ್ಲಾ ಭಾಷೆಗಳನ್ನು ಮೀರಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಲಿವುಡ್, ಬಾಲಿವುಡ್ ನಂತರ ಈಗ ಹಾಲಿವುಡ್‌ನಲ್ಲೂ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಧನುಷ್ ನಟನೆಯ ಹಾಲಿವುಡ್ ಬಹುನಿರೀಕ್ಷಿತ `ದಿ ಗ್ರೇ ಮ್ಯಾನ್’ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ.

    ಎಲ್ಲಾ ವುಡ್‌ಗಳಲ್ಲಿ ಸೌಂಡ್ ಮಾಡ್ತಿರೋ ಧನುಷ್ `ದಿ ಗ್ರೇ ಮ್ಯಾನ್’ ಇಂಗ್ಲೀಷ್ ಚಿತ್ರಕ್ಕೆ ಬಣ್ಣಹಚ್ಚಿದ್ದಾರೆ. ಧನುಷ್ ಪಾತ್ರ ಹೇಗಿರಲಿದೆ ಅಂತಾ ಚಿತ್ರದ ಲುಕ್‌ನ್ನ ಇದೀಗ ಚಿತ್ರತಂಡ ರಿವೀಲ್ ಮಾಡಿದೆ. ಕಾರಿನ ಮೇಲೆ ಮಂಡಿಯೂರಿ ನಿಂತಿದ್ದು, ಮುಖದ ಮೇಲೆ ರಕ್ತದ ಕಲೆಯಿದೆ. ಗ್ರೇ ಸೂಟ್‌ನಲ್ಲಿ ಫುಲ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ಪಾತ್ರದ ಕುರಿತು ಸಿನಿಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

    `ದಿ ಗ್ರೇ ಮ್ಯಾನ್’ ಚಿತ್ರವನ್ನು ಅಂಥೋನಿ ಮತ್ತು ಜೋ ರಸ್ಸೋ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಟ ಧನುಷ್ ಎಂದು ಮಾಡಿರದ ಭಿನ್ನ ಪಾತ್ರ ಡಿಫರೆಂಟ್ ಗೆಟೆಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಯಾನ್ ಗೋಸ್ಲಿಂಗ್, ಕ್ರಿಸ್ ಇವಾನ್ಸ್ ಇನ್ನು ಮುಂತದವರು ಸಾಥ್ ನೀಡಿದ್ದಾರೆ. `ದಿ ಗ್ರೇ ಮ್ಯಾನ್’ ಚಿತ್ರ ಒಟಿಟಿನಲ್ಲಿ ಇದೇ ಜುಲೈ 22ರಂದು ರಿಲೀಸ್ ಆಗಲಿದೆ. ಧನುಷ್ ನಟನೆಯ ಹಾಲಿವುಡ್ ಚಿತ್ರ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.