Tag: ‘ದಿ ಕಾಶ್ಮೀರ್ ಫೈಲ್

  • ಕಾಶ್ಮೀರ್‌ ಫೈಲ್ಸ್‌ ಕಾಲ್ಪನಿಕ ಅಂತಾ ಸಾಬೀತುಪಡಿಸಿದ್ರೆ, ಸಿನಿಮಾ ಮಾಡೋದನ್ನೇ ಬಿಡ್ತೀನಿ- ವಿವೇಕ್ ಅಗ್ನಿಹೋತ್ರಿ

    ಕಾಶ್ಮೀರ್‌ ಫೈಲ್ಸ್‌ ಕಾಲ್ಪನಿಕ ಅಂತಾ ಸಾಬೀತುಪಡಿಸಿದ್ರೆ, ಸಿನಿಮಾ ಮಾಡೋದನ್ನೇ ಬಿಡ್ತೀನಿ- ವಿವೇಕ್ ಅಗ್ನಿಹೋತ್ರಿ

    ತ್ತೀಚೆಗೆ ಗೋವಾ ಸಿನಿಮೋತ್ಸವದಲ್ಲಿ ಜ್ಯೂರಿ ಕಮಿಟಿ ಅಧ್ಯಕ್ಷ ನಡಾವ್ ಲಪಿಡ್(Nadav Lapid) `ದಿ ಕಾಶ್ಮೀರಿ ಫೈಲ್ಸ್’ (The Kashmir Files) ಸಿನಿಮಾ ಬಗ್ಗೆ ಅವಹೇಳನಕಾರಿ ಹೇಳಿಕೆಯೊಂದನ್ನ ಕೊಟ್ಟಿದ್ದರು. ಇದೊಂದು ಪ್ರಚಾರದ, ಅಶ್ಲೀಲ ಸಿನಿಮಾ ಎಂದು ನಡಾವ್ ಕಿಡಿಕಾರಿದ್ದರು. ಇದೀಗ ನಡಾವ್ ಹೇಳಿಕೆಗೆ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ರಿಯಾಕ್ಟ್ ಮಾಡಿದ್ದಾರೆ. ನಮ್ಮ ಚಿತ್ರದಲ್ಲಿ ಯಾವುದೇ ದೃಶ್ಯ ಕಾಲ್ಪನಿಕ ಅಂತಾ ಸಾಬೀತಾದ್ರೆ ತಾವು ಸಿನಿಮಾ ಮಾಡುವುದನ್ನೇ ಬಿಟ್ಟು ಬಿಡ್ತೀನಿ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.

    ನಡಾವ್ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ನಡಾವ್‌ಗೆ ಟಕ್ಕರ್ ಕೊಡುವಂತಹ ವೀಡಿಯೊವೊಂದನ್ನ ವಿವೇಕ್ ಶೇರ್ ಮಾಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್ ವಿರುದ್ಧ ಮಾತನಾಡಿದ ನಡಾವ್ ಲಪಿಡ್ ಮನಸ್ಥಿತಿ ಬಗ್ಗೆ ವಿವೇಕ್ ಅಗ್ನಿಹೋತ್ರಿ ಟೀಕೆ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ

    ಜ್ಯೂರಿ ಕಮಿಟಿಯ ಅಧ್ಯಕ್ಷ ಆ ರೀತಿ ಹೇಳಿಕೆ ನೀಡಿದ್ದು ನನಗೆ ಹೊಸದೇನೂ ಅನಿಸುತ್ತಿಲ್ಲ. ಭಯೋತ್ಪಾದಕ ಸಂಘಟನೆಗಳು, ಅರ್ಬನ್ ನಕ್ಸಲರು, ತುಕ್ಡೆ ತುಕ್ಡೆ ಗ್ಯಾಂಗ್ ಸದಸ್ಯರು ಮೊದಲಿನಿಂದಲೂ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಆಶ್ಚರ್ಯ ಎನಿಸಿದ್ದು ಏನೆಂದರೆ, ಭಾರತ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ವಿಚಾರಕ್ಕೆ ಬೆಂಬಲ ನೀಡಲಾಯಿತು. ಭಾರತದ ಕೆಲವು ಜನರೇ ಆ ವಿಚಾರವನ್ನು ದೇಶ ವಿರೋಧಿಯಾಗಿ ಬಳಸಿಕೊಂಡಿದ್ದಾರೆ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

    ನಾಲ್ಕು ವರ್ಷದ ಹಿಂದೆ ನಾನು ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕಾಗಿ ಅಧ್ಯಯನ ಶುರುಮಾಡಿದಾಗ ಅದನ್ನು ಪ್ರಚಾರ ಎಂದು ಹೇಳಿದ್ದು ಇದೇ ಜನರು. 700 ಜನರು ಸಂದರ್ಶನ ನಡೆಸಿ ಈ ಸಿನಿಮಾ ಮಾಡಲಾಯ್ತು. ಆ 700 ಜನರ ಕುಟುಂಬದವರ ಮೇಲೆ ಕೊಲೆ-ಅತ್ಯಾಚಾರ ಆಗಿದ್ದು ಅಶ್ಲೀಲ ಮತ್ತು ಪ್ರಚಾರವೇ ಇಂದಿಗೂ ಆ ನೆಲದಲ್ಲಿ ಹಿಂದೂಗಳನ್ನು ಆರಿಸಿ ಕೊಲ್ಲಲಾಗುತ್ತಿದೆ. ಕಾಶ್ಮೀರದಲ್ಲಿ ಹತ್ಯಾಕಾಂಡ ಆಗಿರಲೇ ಇಲ್ಲ ಎಂದು ಆಗಾಗ ಈ ವಿಚಾರ ಚರ್ಚೆ ಆಗುತ್ತಲೇ ಇರುತ್ತದೆ. ಹಾಗಾದರೆ ನಮ್ಮ ಚಿತ್ರದಲ್ಲಿ ಯಾವುದೇ ದೃಶ್ಯ ಕಾಲ್ಪನಿಕ ಅಂತಾ ಸಾಬೀತಾದ್ರೆ ತಾವು ಸಿನಿಮಾ ಮಾಡುವುದನ್ನೇ ಬಿಟ್ಟು ಬಿಡ್ತೀನಿ ಎಂದು ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಸವಾಲು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಿ ಕಾಶ್ಮೀರ್ ಫೈಲ್ ನಿರ್ದೇಶಕನ ವಿರುದ್ಧ ದೂರು ದಾಖಲು

    ದಿ ಕಾಶ್ಮೀರ್ ಫೈಲ್ ನಿರ್ದೇಶಕನ ವಿರುದ್ಧ ದೂರು ದಾಖಲು

    ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ‘ದಿ ಕಾಶ್ಮೀರ್ ಫೈಲ್’ ಸಿನಿಮಾ ಒಂದಿಲ್ಲೊಂದು ಕಾರಣಕ್ಕಾಗಿ ಸದ್ದು ಮಾಡುತ್ತಲೇ ಇದೆ. ಟ್ಯಾಕ್ಸ್ ಫ್ರಿ ಸೇರಿದಂತೆ ಹಲವು ಕಾರಣಗಳಿಂದಾಗಿ ರಾಜಕೀಯ ವಲಯದಲ್ಲಿ ಈ ಸಿನಿಮಾದ ಬಗ್ಗೆ ಪರ ವಿರೋಧದ ಮಾತು ಕೇಳಿ ಬರುತ್ತಿದ್ದರೆ, ಮತ್ತೊಂದು ಕಡೆ ಧಾರ್ಮಿಕ ಮನಸುಗಳು ಬಡಿದಾಡುತ್ತಿವೆ.

    ಈ ನಡುವೆ ಸಿನಿಮಾವನ್ನು ಸ್ವಯಂ ಪ್ರೇರಿತರಾಗಿ ಅಲ್ಲಲ್ಲಿ ಉಚಿತ ಪ್ರದರ್ಶನ, ಸೆಲೆಬ್ರಿಟಿ ಪ್ರದರ್ಶನಗಳು ಕೂಡ ಏರ್ಪಟ್ಟಿವೆ. ಕರ್ನಾಟಕದ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲೂ ಈ ಸಿನಿಮಾದ ಕುರಿತು ಗಲಾಟೆ ನಡೆಯಿತು. ದೆಹಲಿ ಮುಖ್ಯಮಂತ್ರಿ ಕೆಜ್ರಿವಾಲಾ ಅವರು ಯೂಟ್ಯೂಬ್ ನಲ್ಲಿ ಸಿನಿಮಾ ಹಾಕಿ, ಎಲ್ಲರಿಗೂ ಉಚಿತವಾಗಿ ಸಿನಿಮಾ ತೋರಿಸಿ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಕಂಗನಾ ರಣಾವತ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಈ ಸಿನಿಮಾದ ಬೆನ್ನಿಗೆ ನಿಂತುಕೊಂಡರು. ನೋಡು ನೋಡುತ್ತಿದ್ದಂತೆಯೇ ಸಿನಿಮಾ ಬಾಕ್ಸ್ ಆಫೀಸಿನಲ್ಲಿ 200 ಕೋಟಿಗೂ ಅಧಿಕ ಗಳಿಕೆ ಮಾಡಿತು. ಈಗಲೂ ಹಲವು ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾ ನಿರ್ದೇಶಕರ ಮೇಲೆ ದೂರೊಂದು ದಾಖಲಾಗಿದೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

     

    ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಭೋಪಾಲ್ ಜನರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಮುಂಬೈನ ವರ್ಸೋವಾದಲ್ಲಿನ ಪಿ.ಆರ್ ಮ್ಯಾನೇಜರ್ ರೋಹಿತ್ ಪಾಂಡೆ ಎನ್ನುವವರು ನಿರ್ದೇಶಕರ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ಊರಿನ ಜನರ ಬಗ್ಗೆ ವಿವೇಕ್ ಕೆಟ್ಟದ್ದಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ

    ವಿವೇಕ್ ಅಗ್ನಿಹೋತ್ರಿ ಸಂದರ್ಶನವೊಂದರಲ್ಲಿ ‘ಭೋಪಾಲ್ ಜನರನ್ನು ಸಾಮಾನ್ಯವಾಗಿ ಸಲಿಂಗಿ ಕಾಮಿಗಳು ಅಂದುಕೊಳ್ಳುತ್ತಾರೆ. ಕಾರಣ ನವಾಬಿ ಆಸೆಗಳು. ನಾನೂ ಕೂಡ ಭೂಪಾಲದವನು. ಭೂಪಾಲಿ ಜನ ಎಂದರೆ ಅವರನ್ನು ಬೇರೆ ರೀತಿಯಲ್ಲೇ ಕಲ್ಪಿಸಿಕೊಳ್ಳುತ್ತಾರೆ. ಹಾಗಾಗಿ ನಾನು ಆ ಭಾಗದವನು ಎಂದು ಹೇಳಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ ಎನ್ನುವ ಕಾರಣಕ್ಕಾಗಿ ದೂರು ದಾಖಲಾಗಿದೆ.

  • ಹಳೆಯ ಘಟನೆ ರಿವೀಲ್ – ಬೆಂಗಳೂರಿನಲ್ಲಿ ಕಾಶ್ಮೀರ ಭವನಕ್ಕೆ ಬೆಂಕಿ ಹಚ್ಚಿ ಅಡ್ಡಿ

    ಹಳೆಯ ಘಟನೆ ರಿವೀಲ್ – ಬೆಂಗಳೂರಿನಲ್ಲಿ ಕಾಶ್ಮೀರ ಭವನಕ್ಕೆ ಬೆಂಕಿ ಹಚ್ಚಿ ಅಡ್ಡಿ

    ಬೆಂಗಳೂರು: ಮತಾಂಧರ ಭಯಕ್ಕೆ ನಲುಗಿ ಹೋಗಿದ್ದ ಕಾಶ್ಮೀರ ಪಂಡಿತರು ಪ್ರಾಣ ರಕ್ಷಣೆಗಾಗಿ ಒಂದೊಂದು ರಾಜ್ಯಕ್ಕೆ ತೆರಳಿದ್ದರು. ಹೀಗೆ ತೆರಳಿದ್ದ ಪಂಡಿತರು ಬೆಂಗಳೂರಿಗೂ ಆಗಮಿಸಿದ್ದರು.

    1990ರ ದಶಕದಲ್ಲಿ ಕಾಶ್ಮೀರಿ ಪಂಡಿತರು ಬೆಂಗಳೂರಿಗೆ ಬಂದಿದ್ದರು ಎಂದು ಹಿಂದೂ ಜಾಗರಣಾ ವೇದಿಕೆಯ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ. ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಡೆದ ಗಲಭೆಯ ಬಳಿಕ ಕಾಶ್ಮೀರಿ ಪಂಡಿತರು ಬೆಂಗಳೂರಿಗೆ ಬಂದಿದ್ದರು. ಅವರಿಗಾಗಿ ಕಾಶ್ಮೀರ್ ಭವನ ಸಹ ಬೆಂಗಳೂರಿನಲ್ಲಿ ನಿರ್ಮಾಣವಾಗಿತ್ತು ಎಂದು ವಿವರಿಸಿದರು. ಇದನ್ನೂ ಓದಿ: ಪುರಿ ಬೀಚ್‍ನಲ್ಲಿ ಅರಳಿತು ‘ದಿ ಕಾಶ್ಮೀರ್ ಫೈಲ್ಸ್’

    ವಲಸೆ ಬಂದಿದ್ದ ಪಂಡಿತರು 2000ನೇ ಇಸ್ವಿಯಲ್ಲಿ ಕಾಶ್ಮೀರಿ ಭವನ ನಿರ್ಮಾಣಕ್ಕೆ ದಿ.ಅನಂತ್ ಕುಮಾರ್‍ಗೆ ಮನವಿ ಮಾಡಿದ್ದರು. ಅವರ ಮನವಿಯನ್ನು ಸ್ವೀಕರಿಸಿದ ಅನಂತ್ ಕುಮಾರ್ ಅವರು ಎಸ್.ಎಂ.ಕೃಷ್ಣ ಅವರಿಗೆ ಮನವಿ ಮಾಡಿದ್ರು. 2003ರಲ್ಲಿ ಬೆಂಗಳೂರಿನ ತಿಲಕನಗರದಲ್ಲಿ ಛಿದ್ರವಾಗಿದ್ದ ಕಾಶ್ಮೀರ ಪಂಡಿತರಿಗಾಗಿ ಕಾಶ್ಮೀರ ಭವನಕ್ಕಾಗಿ ನಿವೇಶನ ಮಾಡಲಾಯಿತು ಎಂದು ತಿಳಿಸಿದರು.

    ನಿವೇಶನ ಕೊಟ್ಟಿದ್ದೇ ಶುರುವಾಯ್ತು ಕಲಹ
    ಕಾಶ್ಮೀರ ಭವನಕ್ಕೆ ಇಪ್ಪತ್ತುಸಾವಿರ ಅಡಿ ಜಾಗ ಕೊಡುತ್ತಿದ್ದಂತೆ ದೊಡ್ಡ ಗಲಭೆ ಸಂಭವಿಸಿತು. ಸ್ಥಳೀಯ ಕೆಲ ಮುಸ್ಲಿಂ ಸಂಘಟನೆಗಳು ಪ್ರತಿ ಮನೆ ಮನೆಗೂ ತೆರಳಿ ಇವರ ಭವನ ನಿರ್ಮಾಣಕ್ಕೆ ಅಡ್ಡಿಪಡಿಸುವಂತೆ ಹೇಳಿದ್ರು. ಕಾಶ್ಮೀರದಲ್ಲಿ ಪಂಡಿತರು ಮಿಲಿಟರಿ ಜೊತೆ ಗಲಾಟೆ ಮಾಡಿದ್ದಾರೆ. ಇಲ್ಲಿ ಬಂದರೆ ಬೆಂಗಳೂರು ಅವರದ್ದೇ ಆಗುತ್ತೆ ಎಂದು ತಪ್ಪು ಸಂದೇಶ ಹರಡಿಸಿದ್ದರು. ಕೊನೆಗೆ ಕೋರ್ಟ್ ಮೊರೆಯೂ ಹೋದ್ರು. ಆದರೆ ಹೈಕೋರ್ಟ್ ಸುಪ್ರೀಂಕೋರ್ಟ್‍ನಲ್ಲೂ ತೀರ್ಪು ಕಾಶ್ಮೀರ ಪಂಡಿತರ ಪರವೇ ಬಂತು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ

    ಕೋರ್ಟ್‍ನಲ್ಲಿ ತೀರ್ಪು ಉಲ್ಟಾ ಆಗುತ್ತಿದ್ದಂತೆ, ಕಾಶ್ಮೀರ ಭವನ ನಿರ್ಮಾಣದ ಹಂತದಲ್ಲಿ ಇರುವಾಗಲೇ ಬೆಂಕಿ ಹಚ್ಚಲಾಯ್ತು. ಬಳಿಕ ಇದೆಲ್ಲವನ್ನು ನಾನು ಸೇರಿದಂತೆ ದಿ.ಅನಂತ್ ಕುಮಾರ್, ಅಂದಿನ ದಿ.ವಿಜಯ್ ಕುಮಾರ್ ಅಲ್ಲಿ ಸ್ಥಳೀಯರ ಮನವೊಲಿಸಲಾಯಿತು. ಕೊನೆಗೆ ಅನಂತ್ ಕುಮಾರ್ 2003ರಲ್ಲಿ ಕಾಶ್ಮೀರ ಭವನವನ್ನು ಉದ್ಘಾಟನೆ ಮಾಡಿದ್ರು ಎಂದು ನೋವಿನ ಕಥೆಯನ್ನು ಪಬ್ಲಿಕ್ ಟಿವಿ ಜೊತೆ ಬಿಚ್ಚಿಟ್ಟರು.