Tag: ದಿ ಕಾಶ್ಮೀರಿ ಫೈಲ್ಸ್

  • The Vaccine War ಸಿನಿಮಾ ನೋಡಿ ಹೊಗಳಿದ ಸುಧಾ ಮೂರ್ತಿ

    The Vaccine War ಸಿನಿಮಾ ನೋಡಿ ಹೊಗಳಿದ ಸುಧಾ ಮೂರ್ತಿ

    ‘ದಿ ಕಾಶ್ಮೀರಿ ಫೈಲ್ಸ್’ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈಗ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಮೂಲಕ ಸದ್ದು ಮಾಡ್ತಿದ್ದಾರೆ. ರಿಲೀಸ್‌ಗೂ ಮುನ್ನವೇ ಸಿನಿಮಾ ಗಮನ ಸೆಳೆಯುತ್ತಿದೆ. ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋವೊಂದನ್ನ ಬೆಂಗಳೂರಿನಲ್ಲಿ (ಸೆ.18) ಆಯೋಜಿಸಲಾಗಿತ್ತು. ಈ ವೇಳೆ ಸುಧಾ ಮೂರ್ತಿ ಅವರು ಆಗಮಿಸಿದ್ದರು. ದಿ ವ್ಯಾಕ್ಸಿನ್ ವಾರ್ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್

    ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಮನ ಮುಟ್ಟುವ ಸಿನಿಮಾ ಎಂದು ಸುಧಾ ಮೂರ್ತಿ ಕರೆದಿದ್ದಾರೆ. ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಆರಂಭಿಸಿ ಆ ಬಳಿಕ ಇಂಗ್ಲಿಷ್‌ನಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು. ನಾನು ಮಹಿಳೆಯರ ಪಾತ್ರವನ್ನು ಅರ್ಥ ಮಾಡಿಕೊಂಡಿದ್ದೇನೆ. ಅವಳು ತಾಯಿ, ಪತ್ನಿ ಜೊತೆ ವೃತ್ತಿ ಬದುಕನ್ನು ನಡೆಸುವವಳೂ ಹೌದು. ಕುಟುಂಬ ಹಾಗೂ ಕೆಲಸವನ್ನು ಸಮದೂಗಿಸಿಕೊಂಡು ಹೋಗುವುದು ಕಷ್ಟ. ಕೆಲವರು ಈ ವಿಚಾರದಲ್ಲಿ ಅದೃಷ್ಟಶಾಲಿಗಳು. ನಾವು ಉಳಿದುಕೊಂಡ ಕಟ್ಟಡದ ಮೇಲೆ ನಮ್ಮ ತಂದೆ ತಾಯಿ ವಾಸಿಸುತ್ತಿದ್ದರು. ನಾನು ಕೆಳಗೆ ವಾಸಿಸುತ್ತಿದ್ದೆ. ಹೀಗಾಗಿ ಹೆಚ್ಚಿನ ಕೆಲಸ ಮಾಡಲು ನನಗೆ ಸಹಕಾರಿ ಆಯಿತು. ಮಕ್ಕಳನ್ನು ಬೆಳೆಸುತ್ತಾ ವೃತ್ತಿ ಜೀವನ ನಡೆಸಿಕೊಂಡು ಹೋಗೋದು ಕಷ್ಟ. ಹಾಗೆ ಮಾಡಬೇಕು ಎಂದರೆ ಕುಟುಂಬದ ಬೆಂಬಲ ಬೇಕು ಅದು ಮುಖ್ಯ ಎಂದಿದ್ದಾರೆ. ಇದನ್ನೂ ಓದಿ:‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್

    ಮಹಿಳಾ ವಿಜ್ಞಾನಿಗಳು ಕೊವಿಡ್ ಸಂದರ್ಭದಲ್ಲಿ ಲ್ಯಾಬ್‌ಗೆ ಬಂದು ಸಂಶೋಧನೆ ಮಾಡಿದ್ದರು. ಇದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕೊವಾಕ್ಸಿನ್ ಏನು ಎಂಬುದು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಆದರೆ, ಹಿಂದಿರುವ ಶ್ರಮವನ್ನು ಈ ಸಿನಿಮಾ ತೋರಿಸುತ್ತದೆ. ಎಲ್ಲಾ ವಿಜ್ಞಾನಿಗಳು ಮಾಡಿದ್ದು ನಿಸ್ವಾರ್ಥದ ಕೆಲಸ. ಕೊವಿಡ್ ಅವಧಿಯಲ್ಲಿ ಅವರು ಗರಿಷ್ಟ ಸಮಯವನ್ನು ಔಷಧ ಕಂಡು ಹಿಡಿಯಲು ಕಳೆದರು. ಇದರಿಂದ ನಾವು ಸುಖವಾಗಿ ಬದುಕುವಂತಾಯಿತು ಎಂದು ಸುಧಾ ಮೂರ್ತಿ ಮಾತನಾಡಿದ್ದರು. ಕಲಾವಿದರ ನಟನೆ, ವಿವೇಕ್‌ ಅಗ್ನಿಹೋತ್ರಿ ನಿರ್ದೇಶನ ಮತ್ತು ತಂಡದ ಶ್ರಮಕ್ಕೆ ಭೇಷ್ ಎಂದಿದ್ದಾರೆ.

    ಇದೇ ಸೆ.28ರಂದು ‘ದಿ ವ್ಯಾಕ್ಸಿನ್ ವಾರ್’ (The Vaacine War) ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ, ಅನುಪಮ್ ಖೇರ್, ಪಲ್ಲವಿ ಜೋಶಿ, ರೈಮಾ ಸೇನ್ ಸೇರಿದಂತೆ ಹಲವರು ನಟಿಸಿದ್ದಾರೆ. ‘ದಿ ಕಾಶ್ಮೀರಿ ಫೈಲ್ಸ್’ ಸಕ್ಸಸ್ ನಂತರ ಈ ಸಿನಿಮಾಗೆ ವಿವೇಕ್ ಅಗ್ನಿಹೋತ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ರಿಲೀಸ್‌ಗೆ ಫ್ಯಾನ್ಸ್ ಕಾಯ್ತಿದ್ದಾರೆ.

    ‘ಕಾಂತಾರ’ (Kantara) ಸಿನಿಮಾದ ಸಕ್ಸಸ್ ನಂತರ ಸಪ್ತಮಿ ಗೌಡ (Saptami Gowda) ನಟನೆಯ ಮೊದಲ ಬಾಲಿವುಡ್ ಸಿನಿಮಾ ಇದಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಶ್ಮೀರಿ ಪಂಡಿತರಿಗೆ ಲಕ್ಷಗಳ ರೂಪದಲ್ಲಿ ನೆರವಿನ ಹಸ್ತಚಾಚಿದ ನಟ ಅನುಪಮ್ ಖೇರ್

    ಕಾಶ್ಮೀರಿ ಪಂಡಿತರಿಗೆ ಲಕ್ಷಗಳ ರೂಪದಲ್ಲಿ ನೆರವಿನ ಹಸ್ತಚಾಚಿದ ನಟ ಅನುಪಮ್ ಖೇರ್

    ದಿ ಕಾಶ್ಮೀರ್ ಫೈಲ್ಸ್  (The Kashmiri Files)ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬಾಲಿವುಡ್ ನಟ ಅನುಪಮ್ ಖೇರ್ (Anupam Kher), ಕಾಶ್ಮೀರಿ ಪಂಡಿತರಿಗೆ (Kashmiri Pandit) ನೆರವಿನ ಹಸ್ತ (Donation)ಚಾಚಿದ್ದಾರೆ. ದೆಹಲಿಯಲ್ಲಿ ನಡೆದ ಗ್ಲೋಬಲ್ ಕಾಶ್ಮೀರಿ ಪಂಡಿತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ‘ನಿಮ್ಮಿಂದ ನಾವು ದುಡ್ಡು ಮಾಡಿದ್ದೇವೆ. ನಿಮಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ’ ಎಂದಿರುವ ಅವರು ಐದು ಲಕ್ಷ ರೂಪಾಯಿ ದೇಣಿಗೆ ಘೋಷಿಸಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ 2022 ಮಾರ್ಚ್ 11ರಂದು ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಈ ಸಿನಿಮಾವನ್ನು ಎಲ್ಲರಿಗೂ ತೋರಿಸುವ ಉದ್ದೇಶದಿಂದ ನಾನಾ ರಾಜ್ಯಗಳ ಸರಕಾರವು ತೆರಿಗೆ ವಿನಾಯತಿ ಕೂಡ ಘೋಷಣೆ ಮಾಡಿದ್ದವು. ಅಲ್ಲದೇ, ಅನೇಕ ರಾಜ್ಯಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿತು. ಫಲವಾಗಿ ಬರೋಬ್ಬರಿ 340 ಕೋಟಿ ರೂಪಾಯಿ ಸಿನಿಮಾ ಸಂಪಾದಿಸಿತು. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತಾಗಿ ಈಗಲೂ ಭಿನ್ನಾಭಿಪ್ರಾಯಗಳು ಇದ್ದರೂ, ಆ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಸಿನಿಮಾ ಪ್ರದರ್ಶನವಾಯಿತು. ಅನೇಕ ಪ್ರಶಸ್ತಿಗಳು ಸಿನಿಮಾವನ್ನು ಹುಡುಕಿಕೊಂಡು ಬಂದವು. ಈಗಲೂ ಓಟಿಟಿಯಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಚಿತ್ರ ಸಾಕಷ್ಟು ದುಡ್ಡು ಮಾಡಿದೆ.

    ಈ ಎಲ್ಲ ಕಾರಣದಿಂದಾಗಿ ಕಾಶ್ಮೀರಿ ಪಂಡಿತ್ ಕಾನ್ ಕ್ಲೇವ್ ದಲ್ಲಿ ಮಾತನಾಡಿದ ಅನುಪಮ್ ಖೇರ್, ‘ನಮ್ಮ ಜನರಿಗೆ ನಾನು ನೆರವಿನ ಹಸ್ತ ಚಾಚುವಂತಹ ಸಮಯ ಬಂದಿದೆ. ಈ ಸಮಯದಲ್ಲಿ ನಾವು ಕಾಶ್ಮೀರಿ ಪಂಡಿತರ ಜೊತೆ ನಿಂತುಕೊಳ್ಳಬೇಕು. ಅವರಿಂದ ದುಡ್ಡು ಮಾಡಿದ್ದೇವೆ. ಆ ಎಚ್ಚರಿಕೆ ನಮ್ಮಲ್ಲಿ ಇರಬೇಕು’ ಎಂದು ಅವರು ಭಾವುಕರಾಗಿ ಮಾತನಾಡಿದ್ದಾರೆ.

  • ‘ದಿ ಕಾಶ್ಮೀರ್ ಫೈಲ್ಸ್’ ಹಲವು ದೇಶಗಳಲ್ಲಿ ಬ್ಯಾನ್ : ಭಾರತದ ಹೆಸರು ಕೆಡಿಸುವ ಹುನ್ನಾರ ಎಂದ ನಿರ್ದೇಶಕ

    ‘ದಿ ಕಾಶ್ಮೀರ್ ಫೈಲ್ಸ್’ ಹಲವು ದೇಶಗಳಲ್ಲಿ ಬ್ಯಾನ್ : ಭಾರತದ ಹೆಸರು ಕೆಡಿಸುವ ಹುನ್ನಾರ ಎಂದ ನಿರ್ದೇಶಕ

    ಭಾರತದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸಿನಲ್ಲೂ ಕೂಡ ಕೋಟಿ ಕೋಟಿ ಲೂಟಿ ಮಾಡಿದೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಈ ಚಿತ್ರಕ್ಕಾಗಿ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದವು. ಅಲ್ಲದೇ ಕರ್ನಾಟಕ ಸರ್ಕಾರದ ಹಲವು ಮಂತ್ರಿಗಳು ಈ ಸಿನಿಮಾದ ವಿಶೇಷ ಪ್ರದರ್ಶನ ಕೂಡ ಏರ್ಪಡಿಸಿದ್ದರು. ಆದರೆ ಹಲವು ದೇಶಗಳಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ.

    ಈ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸಿಂಗಪುರ್ ಬ್ಯಾನ್ ಮಾಡಿತ್ತು. ಇದರ ಬೆನ್ನಲ್ಲೇ ಅರಬ್ ದೇಶಗಳು ಕೂಡ ಈ ಸಿನಿಮಾವನ್ನು ತಮ್ಮ ಪ್ರಜೆಗಳಿಗೆ ತೋರಿಸಲು ಹಿಂದೇಟು ಹಾಕಿವೆ. ಅಲ್ಲದೇ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಕೂಡ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಭಾಷಣಗಳಿಗೆ ಬ್ರೇಕ್ ಹಾಕಿವೆ. ಈ ಕುರಿತು ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    ಸತ್ಯವನ್ನು ಹೇಳುವುದೇ ತಪ್ಪು ಅನ್ನುವಂತಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆಯನ್ನು ಈ ಸಿನಿಮಾದಲ್ಲಿ ತೋರಿಸಿದ್ದೇನೆ. ಕಾಶ್ಮೀರಿ ಪಂಡಿತರಿಗೆ ಆದ ಅನ್ಯಾಯವನ್ನು ಚಿತ್ರದಲ್ಲಿ ತೆರೆದಿಟ್ಟಿದ್ದೇನೆ. ಹಾಗಾಗಿ ಈ ಸಿನಿಮಾವನ್ನು ಬೇರೆ ಬೇರೆ ದೇಶಗಳಲ್ಲಿ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ಭಾರತದ ಹೆಸರನ್ನು ಕೆಡಿಸುವ ಹುನ್ನಾರ ಎಂದು ಅವರು ಮಾತನಾಡಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

  • ಜಸ್ಟ್‌ ಮಿಸ್‌ – ಬಿಟ್ಟಾ ಕರಾಟೆಯಿಂದ ಪಾರಾಗಿ ಇಂದಿಗೂ ಜೀವಂತವಿದ್ದಾರೆ ವ್ಯಕ್ತಿ

    ಜಸ್ಟ್‌ ಮಿಸ್‌ – ಬಿಟ್ಟಾ ಕರಾಟೆಯಿಂದ ಪಾರಾಗಿ ಇಂದಿಗೂ ಜೀವಂತವಿದ್ದಾರೆ ವ್ಯಕ್ತಿ

    – ಬಿಟ್ಟಾನ ಮತ್ತೊಂದು ಕರಾಳ ಮುಖ ಬಹಿರಂಗ
    – ಮಾವ ಪಾರಾದ ರೋಚಕ ಕಥೆ ತಿಳಿಸಿದ ಎನ್‌ಆರ್‌ಐ ವೈದ್ಯ

    ಬೆಂಗಳೂರು: ಕಾಶ್ಮೀರ ಪಂಡಿತರ ಮಾರಣಹೋಮವನ್ನು ಬಿಚ್ಚಿಡುವ ʼ ದಿ ಕಾಶ್ಮೀರ ಫೈಲ್ಸ್‌ʼ ಸಿನಿಮಾ ಬಿಡುಗಡೆಯಾದ ಬಳಿಕ ಬಹಳಷ್ಟು ಪಂಡಿತ ಕುಟುಂಬದ ಸದಸ್ಯರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈಗ ಅಮೆರಿಕದಲ್ಲಿರುವ ವೈದ್ಯರೊಬ್ಬರು ತಮ್ಮ ನೋವನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

    ರಾಜೀವ್‌ ಪಂಡಿತ್‌ ತನ್ನ ಮಾವ ಫಾರೂಕ್ ಅಹ್ಮದ್ ದಾರ್ ಅಲಿಯಾಸ್‌ ಬಿಟ್ಟಾ ಕರಾಟೆ ಕೈಯಿಂದ ಪಾರಾದ ಕಥೆಯನ್ನು ಮೊದಲ ಬಾರಿಗೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್‌ ಗಳನ್ನು ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ರೀಟ್ವೀಟ್‌ ಮಾಡಿದ್ದಾರೆ.

    ರಾಜೀವ್‌ ಪಂಡಿತ್‌ ಹೇಳಿದ್ದು ಏನು?
    ನನ್ನ ಮಾವ ಬಿಟ್ಟಾ ಕರಾಟೆಯ ಗುಂಡೇಟಿನಿಂದ ಪಾರಾಗಿ ಇಂದಿಗೂ ಜೀವಂತವಾಗಿದ್ದಾರೆ. ಈ ಕಥೆಯನ್ನು ನಾನು ಇಲ್ಲಿಯವರೆಗೆ ಹೇಳಿರಲಿಲ್ಲ. ಈಗ ಮೊದಲ ಬಾರಿಗೆ ಬಹಿರಂಗ ಪಡಿಸುತ್ತಿದ್ದೇನೆ.

    ಫಾರೂಕ್ ಅಹ್ಮದ್ ದಾರ್ ಸೈಕೋಪಾತ್ ಭಯೋತ್ಪಾದಕನಾಗುವ ಮೊದಲು ಅವನು ನಮ್ಮ ಕುಟುಂಬದ ಸದಸ್ಯರ ಜೊತೆ ಶ್ರೀನಗರದಲ್ಲಿ ಕ್ರಿಕೆಟ್ ಆಡುತ್ತಿದ್ದ. ಬಾಲ್ಯದಲ್ಲಿ ಆತನನ್ನು ಮುದ್ದಿನಿಂದ ಬಿಟ್ಟಾ ಎಂದು ಕರೆಯಲಾಗುತ್ತಿತ್ತು. ಶಾಲೆಗೆ ಹೋಗುವ ಸಮಯದಲ್ಲಿ ಬಿಟ್ಟಾನಿಗೆ ಮಾವ ಹಣವನ್ನು ಕೊಟ್ಟಿದ್ದರು.

    ಬಿಟ್ಟಾ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ತರಬೇತಿ ಪಡೆದು ಮರಳಿದ ಬಳಿಕ ನನ್ನ ಮಾವನನ್ನು ಹತ್ಯೆ ಮಾಡಲು ಆದೇಶ ಸಿಕ್ಕಿತು. ಬಿಟ್ಟಾ ಮತ್ತು ಮತ್ತೊಬ್ಬ ಜೆಕೆಎಲ್‌ಎಫ್‌(ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌) ಉಗ್ರ ಮನೆಯಿಂದ ಮಾವ ಹೊರ ಹೋಗುವುದನ್ನೇ ಕಾಯುತ್ತಿದ್ದರು. ಶ್ರೀನಗರದ ಬಳಿಯ ಹಬ ಕಡಲ ಬಳಿ ಬಂದಾಗ ಹಿಂದಿನಿಂದ ಬಂದು ಮಾವನನ್ನು ಶೂಟ್‌ ಮಾಡಿ ಹತ್ಯೆ ಮಾಡಲು ಅವರು ಪ್ಲ್ಯಾನ್‌ ಮಾಡಿದ್ದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    1990ರ ಫೆ.16 ರಂದು ಬೆಳಿಗ್ಗೆ 9:30 ಕ್ಕೆ ನನ್ನ ಚಿಕ್ಕಪ್ಪ ಚರ್ಮದ ಜಾಕೆಟ್ ಧರಿಸಿ ಮನೆಯಿಂದ ಹೊರಹೋಗುವುದನ್ನು ಗಮನಿಸಿದ ಉಗ್ರ ಬಿಟ್ಟಾನಿಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಸಿಕ್ಕಿದ ಕೂಡಲೇ ಬಿಟ್ಟ ಪಿಸ್ತೂಲ್‌ ಸಿದ್ಧ ಪಡಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಮಾವನಿಗೆ ಇವತ್ತು ಅಣ್ಣ ಹುಟ್ಟಿದ ದಿನ ಎಂದು ಥಟ್ಟನೆ ನೆನಪಾಗಿ ಮತ್ತೆ ಪೂಜೆ ಮಾಡಲೆಂದು ಮನೆಗೆ ತೆರಳುತ್ತಾರೆ.

    ಮಾವ ಮನೆಗೆ ಮರಳಿದ ವಿಚಾರವನ್ನು ಮತ್ತೊಬ್ಬ ಉಗ್ರ ಗಮನಿಸಿರಲಿಲ್ಲ. ಈ ಸಮಯದಲ್ಲೇ ಬೆಳಗ್ಗೆ 9:30 ಕ್ಕೆ ನನ್ನ ಮಾವನ ಮನೆಯಿಂದ ಕೆಲ ದೂರದಲ್ಲಿ ಶೀಘ್ರವೇ ಮದುವೆಯಾಗಲಿದ್ದ ಅನಿಲ್‌ ಭಾನ್‌(26) ಹಬಾ ಕಡಲ ಕಡೆಗೆ ನಡೆಯಲು ಆರಂಭಿಸಿದ್ದರು. ಅವರು ಚರ್ಮದ ಜಾಕೆಟ್‌ ಧರಿಸಿದ್ದರು.

    ಈ ವಿಚಾರ ತಿಳಿಯದ ಬಿಟ್ಟಾ ಕರಾಟೆ ಅನಿಲ್‌ ಅವರನ್ನು ನಡೆಯುತ್ತಿರುವುದನ್ನು ನೋಡಿ ಪಿಸ್ತೂಲ್‌ನಿಂದ ಶೂಟ್‌ ಮಾಡಿ ಹತ್ಯೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಅನಿಲ್‌ ಮೃತ ದೇಹದ ಮುಂದೆ ತಾಯಿಯ ಕಣ್ಣೀರನ್ನು ಎಂದೂ ಮರೆಯಲು ಸಾಧ್ಯವಿಲ್ಲ.

    ಬಿಟ್ಟಾ ಕರಾಟೆ ನಾನು ತಪ್ಪಾಗಿ ಗುರುತಿಸಿ ವ್ಯಕ್ತಿಯನ್ನು ಕೊಲೆ ಮಾಡಿದ್ದೇನೆ ಎಂದು ನಂತರ ಒಪ್ಪಿಕೊಂಡಿದ್ದ. ಅನಿಲ್ ಅವರ ತ್ಯಾಗದ ಕಾರಣದಿಂದ ನನ್ನ ಮಾವ ಇಂದಿಗೂ ಜೀವಂತವಾಗಿದ್ದಾರೆ. ಇದನ್ನೂ ಓದಿ: 20 ಪಂಡಿತರ ಹತ್ಯೆ, ಕೆಎಎಸ್ ಅಧಿಕಾರಿ ಜೊತೆ ಮದುವೆ – ಕಾಶ್ಮೀರದ ರಕ್ತಪಾತದ ವಿಲನ್ ಬಿಟ್ಟಾ ಕರಾಟೆಯ ಕಥೆಯಿದು

    ನಾನು ಈ ಕಥೆಯನ್ನು ಮೊದಲು ಹೇಳಿಲ್ಲ ಯಾಕೆಂದರೆ ಕಾಶ್ಮೀರಿ ಹಿಂದೂಗಳ ಪರವಾಗಿ 30 ವರ್ಷಗಳ ಕಾಲ ಅಮೆರಿಕದಲ್ಲಿ ಕಾಂಗ್ರೆಸ್ ಮತ್ತು ಮಾಧ್ಯಮಗಳಲ್ಲಿ ಮಾತನಾಡುತ್ತಿದ್ದರೂ ಯಾರೂ ಕೇಳುತ್ತಿರಲಿಲ್ಲ. ಈಗ ನೊಂದ ಜನರಿಗೆ ನ್ಯಾಯ ಒದಗಿಸಿದ್ದಕ್ಕೆ ವಿವೇಕ್‌ ಅಗ್ನಿಹೋತ್ರಿ ಅವರಿಗೆ ಧನ್ಯವಾದ ಹೇಳುತ್ತೇನೆ.

  • ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಪ್ರಕಾಶ್ ರೈ ಮಾಡಿದ ಟ್ವೀಟ್ ಗೆ ಜಗ್ಗಾಟ ಶುರು

    ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಪ್ರಕಾಶ್ ರೈ ಮಾಡಿದ ಟ್ವೀಟ್ ಗೆ ಜಗ್ಗಾಟ ಶುರು

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಬಗ್ಗೆ ಮೊದಲಿನಿಂದಲೂ ಪರ ವಿರೋಧ ಕೇಳಿ ಬರುತ್ತಿದೆ. ಅದನ್ನು ಒಂದು ಸಿನಿಮಾವಾಗಿ ತಗೆದುಕೊಂಡಿದ್ದರೆ, ಇಷ್ಟೊತ್ತಿಗೆ ನೂರಾರು ಸಿನಿಮಾಗಳಲ್ಲಿ ಅದೂ ಒಂದಾಗಿರುತ್ತಿತ್ತು. ಆದರೆ, ಧರ್ಮಾಧಾರದ ಮೇಲೆ, ಪಕ್ಷಗಳ ವಿರುದ್ಧ ಹೀಗೆ ತಮ್ಮಿಷ್ಟಕ್ಕೆ ಈ ಸಿನಿಮಾವನ್ನು ಬಳಸಿಕೊಂಡಿರುವ ಪರಿಣಾಮ, ಇವತ್ತು ಆ ಸಿನಿಮಾವನ್ನು ವಿರೋಧಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

    ಬಾಲಿವುಡ್ ನಟಿ , ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್ ಈ ಸಿನಿಮಾವನ್ನು ಹಿಗ್ಗಾಮುಗ್ಗ ಹೊಗಳಿದರೆ, ಹೆಸರಾಂತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಕಾಶ್ ರೈ ಈ ಸಿನಿಮಾವನ್ನು ಬೇರೆ ರೀತಿಯಲ್ಲಿ  ತಗೆದುಕೊಂಡಿದ್ದಾರೆ. ಈ ಕುರಿತು ಅವರು ಟ್ವಿಟ್ ಮಾಡಿದ್ದು, ಅದು ಈಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಎಲ್ಲರಿಗೂ ಗೊತ್ತಿರುವಂತೆ ಪ್ರಕಾಶ್ ರೈ, ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ವಿರುದ್ಧ ತಿರುಗಿ ಬಿದ್ದಾಗಿನಿಂದ ‘ಜಸ್ಟ್ ಆಸ್ಕಿಂಕ್’ ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದಾರೆ. ಈ ಹ್ಯಾಷ್ ಟ್ಯಾಗ್ ಅಡಿಯಲ್ಲಿಯೇ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಅವರು ಪ್ರಶ್ನೆ ಮಾಡಿದ್ದಾರೆ. ಅವರು ಮಾಡಿದ ಪ್ರಶ್ನೆಗೆ ಕೆಲವರು ಮೆಚ್ಚುಗೆ ಸೂಚಿಸಿದ್ದರೆ, ಇನ್ನೂ ಕೆಲವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತಾಗಿ ಟ್ವೀಟ್ ಮಾಡಿರುವ ಪ್ರಕಾಶ್ ರೈ, ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಗಾಯ ಕೆದರುತ್ತಿದೆಯೋ, ವಾಸಿ ಮಾಡುತ್ತದೆಯೋ ಅಥವಾ ದ್ವೇಷವನ್ನು ಹರಡುತ್ತಿದೆಯೋ?’ ಎಂದು ಕೇಳಿದ್ದಾರೆ. ಈ ಪ್ರಶ್ನೆಯನ್ನು ಕೇಳುವುದರ ಜತೆ ಜತೆಗೆ ಅವರು ಥಿಯೇಟರ್ ನಲ್ಲಿ ಜನರು ವೀಕ್ಷಿಸುತ್ತಿರುವ ಮತ್ತು ಪ್ರತಿಕ್ರಿಯೆಯ ವಿಡಿಯೋವನ್ನೂ ಅವರು ಟ್ವಿಟ್ ಮಾಡಿದ್ದಾರೆ. ಒಂದು ಕಡೆ ಈ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದು ಕಡೆ ವಿರೋಧದ ಅಲೆಯೂ ಎದ್ದಿದೆ. ಏನೇ ಆದರೂ, ಸಿನಿಮಾ 100 ಕೋಟಿ ಕ್ಲಬ್ ಸೇರುವ ಮೂಲಕ ಯಶಸ್ಸಿನ ಸಿನಿಮಾ ಪಟ್ಟಿಗೆ ಸೇರಿದೆ.

  • ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಕಂಗನಾ ಹೊಗಳಿದ್ದು ಇದಕ್ಕಾ? : ಹೊರ ಬಿತ್ತು ಹೊಸ ಸುದ್ದಿ

    ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಕಂಗನಾ ಹೊಗಳಿದ್ದು ಇದಕ್ಕಾ? : ಹೊರ ಬಿತ್ತು ಹೊಸ ಸುದ್ದಿ

    ಬಾಲಿವುಡ್ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತ ತಾರೆ ಕಂಗನಾ ರಣಾವತ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಿಡುಗಡೆಯಿಂದ ಈವರೆಗೂ ಚಿತ್ರದ ಜತೆಗೆ ಇದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ನಟ ನಟಿಯರು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಗರಂ ಆದರು. ಇಂತಹ ಚಿತ್ರವನ್ನು ಬೆಂಬಲಿಸಬೇಕು ಎಂದು ಅಭಿಮಾನಿಗಳಿಗೆ ಕರೆ ಕೊಟ್ಟರು. ಇಂಥದ್ದೊಂದು ಸಿನಿಮಾ ಬಂದು, ಬಾಲಿವುಡ್ ಪಾಪ ತೊಳೆಯಿತು ಎಂದು ಬರೆದುಕೊಂಡರು. ಇಷ್ಟೆಲ್ಲ ಮಾಡಿದ್ದು ಅವರು ನಿರ್ದೇಶಕ ವಿವೇಕ್ ಅಗ್ನಿಹೋತ್ರ ಅವರ ಮೇಲಿನ ಅಭಿಮಾನಕ್ಕಂತೆ. ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

    ಇದು ಬಿಟೌನ್ ಅಂಗಳದಿಂದ ಹೊರ ಬಿದ್ದಿರುವ ಮಾಹಿತಿ ಪ್ರಕಾರ ನಿರ್ದೇಶಕ ವಿವೇಕ್ ಅಗ್ನಿಹೋತ್ರ ಮತ್ತು ಕಂಗನಾ ರಣಾವತ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ತಯಾರಿ ಆಗಲಿದೆಯಂತೆ. ದೇಶ ಪ್ರೇಮ ಸಾರುವಂತಹ ಕಥೆಯನ್ನು ಕಂಗನಾ ಅವರಿಗಾಗಿ ನಿರ್ದೇಶಕರು ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯಾಕಾಂಡವನ್ನು ಆಧರಿಸಿದ ಸಿನಿಮಾ ದಿ ಕಾಶ್ಮೀರ್ ಫೈಲ್ಸ್. ಹೀಗಾಗಿ ಕಂಗನಾ ರಣಾವತ್, ಈ ಸಿನಿಮಾದ ಕುರಿತು ಅನೇಕ ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಂಥದ್ದೊಂದು ಚಿತ್ರಕ್ಕೆ ಬೆಂಬಲವಾಗಿ ನಿಂತವರಿಗೆ ಅಭಿನಂದನೆ ಸಲ್ಲಿಸಿದ್ದರು. ನಿಲ್ಲದವರನ್ನು ಝಾಡಿಸಿದ್ದರು.  ಇದನ್ನೂ ಓದಿ : ಪುನೀತ್ ಹುಟ್ಟು ಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ ಮಂದಣ್ಣ ಮತ್ತೆ ನೆಟ್ಟಿಗರು ಗರಂ

    ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಿನಿಮಾದ ಬೆನ್ನಿಗೆ ನಿಂತರು. ಕರ್ನಾಟಕದಲ್ಲೂ ಈ ಸಿನಿಮಾದ ಹವಾ ಜೋರಾಯಿತು. ಸದ್ಯದಲ್ಲೇ ಕನ್ನಡಕ್ಕೂ ಈ ಸಿನಿಮಾ ಡಬ್ ಆಗಲಿದೆ ಎನ್ನುವ ಮಾಹಿತಿ ಇದೆ.

  • ವಾಸ್ತವವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಹಿಂಜರಿಯುತ್ತಿದೆ: ಬಿಜೆಪಿ

    ವಾಸ್ತವವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಹಿಂಜರಿಯುತ್ತಿದೆ: ಬಿಜೆಪಿ

    ಬೆಂಗಳೂರು: ದಿ ಕಾಶ್ಮೀರ್‌ ಫೈಲ್ಸ್ ಸಿನಿಮಾ ಕುರಿತು ಕಾಂಗ್ರೆಸ್ ನಾಯಕರು ಉಡಾಫೆಯ ಮಾತುಗಳನ್ನಾಡ್ತಿದ್ದಾರೆ. ಆ ಮೂಲಕ ವಾಸ್ತವವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಹಿಂಜರಿಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.

    ಟ್ವೀಟ್‍ನಲ್ಲಿ ಏನಿದೆ?:
    ದಿ ಕಾಶ್ಮೀರ್‌ ಫೈಲ್ಸ್ ಸಿನಿಮಾ ಕುರಿತು ಕಾಂಗ್ರೆಸ್ ನಾಯಕರು ಉಡಾಫೆಯ ಮಾತುಗಳನ್ನಾಡುತ್ತಿದ್ದಾರೆ. ಆ ಮೂಲಕ ಕಾಶ್ಮೀರದಲ್ಲಿ ಹತ್ಯೆಯಾದ ಕಾಶ್ಮೀರಿ ಪಂಡಿತರ, ದಲಿತರ, ಮುಸಲ್ಮಾನರ ಹತ್ಯೆಯನ್ನು ತುಚ್ಛವಾಗಿಸುತ್ತಿದ್ದಾರೆ. ವಾಸ್ತವವನ್ನು ಒಪ್ಪಿಕೊಳ್ಳಲೂ ಕಾಂಗ್ರೆಸ್ ಹಿಂಜರಿಯುತ್ತಿದೆ. ಏಕೆಂದರೆ ಇದರ ರೂವಾರಿಗಳು ಅವರೇ ಆಗಿದ್ದಾರೆ. ವಿಧಾನ ಮಂಡಲದ ಉಭಯ ಸದನದಲ್ಲಿ ಕಾಶ್ಮೀರ್‌ ಫೈಲ್ಸ್ ಸಿನಿಮಾ ಬಗ್ಗೆ ಕಾಂಗ್ರೆಸ್ ಪ್ರತಿರೋಧ ತೋರುತ್ತಿದೆ. ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡವನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುತ್ತಿದೆಯೇ ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಹಿಜಬ್ ಪರ ವಾದಿಗಳ ಬೆದರಿಕೆಗೆ ಸರ್ಕಾರ ಮಣಿಯದು: ಅಶ್ವತ್ಥನಾರಾಯಣ

    ಕಾಂಗ್ರೆಸ್ ಪಕ್ಷ ಕಾಶ್ಮೀರ್‌ ಫೈಲ್ಸ್ ಸಿನಿಮಾವನ್ನು ಏಕೆ ವಿರೋಧಿಸುತ್ತಿದೆ ಗೊತ್ತೇ? ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ, ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡ ನಡೆಸಿದವರಿಗೆ, ಸೇನಾಪಡೆಗಳ ಮೇಲೆ ದಾಳಿ ನಡೆಸಿದವರಿಗೆ ಕಾಂಗ್ರೆಸ್ ಹತ್ತಿರವಾಗಿತ್ತು. ಸಾಕ್ಷ್ಯ ಇಲ್ಲಿದೆ, ಮಾಜಿ ಪ್ರಧಾನಿ ಭಯೋತ್ಪಾದಕನೊಂದಿಗೆ ಸಂವಾದ ನಡೆಸುತ್ತಿರುವ ಕ್ಷಣಗಳು!!! ಎಂದು ವೀಡಿಯೋವೊಂದನ್ನು ಹಂಚಿಕೊಂಡಿದೆ. ಈ ಮೂಲಕ ಬಿಜೆಪಿ ಕಾಂಗ್ರೆಸ್ ಮೇಲೆ ಆರೋಪ ಮಾಡಿದೆ.

  • ದಿ ಕಾಶ್ಮೀರ್ ಫೈಲ್ಸ್ ಹಿಂದಿ ಚಿತ್ರಕ್ಕೆ ಕರ್ನಾಟಕದಲ್ಲಿ 100% ಟ್ಯಾಕ್ಸ್ ವಿನಾಯಿತಿ : ಬೊಮ್ಮಾಯಿ

    ದಿ ಕಾಶ್ಮೀರ್ ಫೈಲ್ಸ್ ಹಿಂದಿ ಚಿತ್ರಕ್ಕೆ ಕರ್ನಾಟಕದಲ್ಲಿ 100% ಟ್ಯಾಕ್ಸ್ ವಿನಾಯಿತಿ : ಬೊಮ್ಮಾಯಿ

    ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಹಿಂದಿ ಚಿತ್ರಕ್ಕೆ ಕರ್ನಾಟಕದಲ್ಲಿ ಶೇ.100 ಟ್ಯಾಕ್ಸ್ ವಿನಾಯಿತಿ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಿನಿಮಾ ನೋಡಿದ ಬಳಿಕ ನನಗೆ ಮಾತನಾಡಲು ಆಗುತ್ತಿಲ್ಲ. ಯಾವ ಪರಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ದಾಳಿಯಾಗಿತ್ತು ಎನ್ನುವದನ್ನ ತೋರಿಸಿದ್ದಾರೆ. ಅದೆಷ್ಟೂ ಜನ ಉಗ್ರರ ಕೈಲಿ ಸಿಕ್ಕಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಹೀಗಾಗಿಯೇ ಕಾಶ್ಮೀರದಲ್ಲಿ 370ಯನ್ನ ನರೇಂದ್ರ ಮೋದಿ ಸರ್ಕಾರ ತೆರವುಗೊಳಿಸಿದರು. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್

    ದಿ ಕಾಶ್ಮೀರ್ ಫೈಲ್ಸ್ ಹಿಂದಿ ಚಿತ್ರಕ್ಕೆ ಕರ್ನಾಟಕದಲ್ಲಿ ಶೇ.100 ಟ್ಯಾಕ್ಸ್ ವಿನಾಯಿತಿ ನೀಡುತ್ತೇವೆ. ಪ್ರತಿಯೊಬ್ಬ ಭಾರತೀಯರು ಈ ಸಿನಿಮಾವನ್ನ ನೋಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಾಜಾಜಿ ನಗರದಲ್ಲಿರೋ ಒರಾಯನ್ ಮಾಲ್‍ನಲ್ಲಿ ಬೊಮ್ಮಾಯಿ ಅವರು ದಿ ಕಾಶ್ಮೀರಿ ಫೈಲ್ಸ್ ಹಿಂದಿ ಸಿನಿಮಾ ವೀಕ್ಷಿಸಿದ್ದಾರೆ. ಮಾಜಿ ಸಚಿವ ಆನಂತ್ ಕುಮಾರ್ ಪತ್ನಿ ತೇಜಸ್ವಿನಿ, ಹಿರಿಯ ನಟಿ ಸುಧಾರಾಣಿ, ಸಿಹಿಕಹಿ ಚಂದ್ರು, ಕೆಎಸ್ ಆರ್.ಪಿ ಎಡಿಜಿಪಿ ಅಲೋಕ್ ಕುಮಾರ್, ಸೇರಿ ಹಲವು ಮಂದಿ ಸಾಥ್ ನೀಡಿದ್ದಾರೆ.