Tag: ದಿಸ್ಪುರ್

  • ಗಾಯಕ ಜುಬೀನ್ ಗಾರ್ಗ್ ಸಾವು ಕೇಸ್ – ಮ್ಯಾನೇಜರ್, ಸಿಂಗಾಪುರದ ಕಾರ್ಯಕ್ರಮ ಆಯೋಜಕ ಅರೆಸ್ಟ್

    ಗಾಯಕ ಜುಬೀನ್ ಗಾರ್ಗ್ ಸಾವು ಕೇಸ್ – ಮ್ಯಾನೇಜರ್, ಸಿಂಗಾಪುರದ ಕಾರ್ಯಕ್ರಮ ಆಯೋಜಕ ಅರೆಸ್ಟ್

    ದಿಸ್ಪುರ್: ಪ್ರಸಿದ್ಧ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ (Zubeen Garg) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾರ್ಗ್ ಮ್ಯಾನೇಜರ್ ಹಾಗೂ ಸಿಂಗಾಪುರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಪ್ರಕರಣ ಸಂಬಂಧ ರಚಿಸಲಾದ ಎಸ್‌ಐಟಿಯು ಮಂಗಳವಾರ (ಸೆ.30) ದೆಹಲಿ ವಿಮಾನ ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಕ ಶ್ಯಾಮಕಾನು ಮಹಾಂತನನ್ನು ಹಾಗೂ ರಾಜಸ್ಥಾನದಲ್ಲಿ ಮ್ಯಾನೇಜರ್ ಸಿದ್ಧಾರ್ಥ ಶರ್ಮಾ ಅವರನ್ನು ಬಂಧಿಸಿದೆ.ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಸಾವಿನ ತನಿಖೆಗೆ ಸಿಂಗಾಪುರ ಸರ್ಕಾರದ ಸಹಕಾರ: ಅಸ್ಸಾಂ ಸಿಎಂ

    ಜುಬೀನ್ ಸಾವನ್ನಪ್ಪುವ ಮುನ್ನ ಬಂಧಿತ ಆರೋಪಿಗಳಿಬ್ಬರು ಅವರ ಜೊತೆಗಿದ್ದರು ಎಂಬ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಲ್ಲದೇ ಈ ಇಬ್ಬರ ಹೊರತಾಗಿಯೂ 60ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಈ ಕುರಿತು ಗಾಯಕ ಜುಬೀನ್ ಗಾರ್ಗ್ ಅವರ ಪತ್ನಿ ಗರಿಮಾ ಗಾರ್ಗ್ ಮಾತನಾಡಿ, ನಾನು ಕಾನೂನು ಪ್ರಕ್ರಿಯೆಯಲ್ಲಿ ವಿಶ್ವಾಸ ಹೊಂದಿದ್ದೇನೆ. ಸಾವಿನ ಬಗ್ಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಜುಬೀನ್ ಗಾರ್ಗ್ ಅವರು ಸಿಂಗಾಪುರಕ್ಕೆ ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಸಂದರ್ಭದಲ್ಲಿ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಗ್ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. ಅದಾದ ಬಳಿಕ ಗಾಯಕನ ಸಾವಿನ ತನಿಖೆಗಾಗಿ ಅಸ್ಸಾಂ ಸರ್ಕಾರ ವಿಶೇಷ ಡಿಜಿಪಿ ಎಂಪಿ ಗುಪ್ತಾ ನೇತೃತ್ವದಲ್ಲಿ 10 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಸಿಂಗಾಪುರ ಸರ್ಕಾರವು ತನಿಖೆಗೆ ಒಪ್ಪಿಗೆ ಸೂಚಿಸಿದ್ದು, ಸದ್ಯ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಅವರ ಸಹಾಯ ಪಡೆಯಲು ಇಬ್ಬರು ಅಸ್ಸಾಂ ಪೊಲೀಸ್ ಅಧಿಕಾರಿಗಳನ್ನು ಸಿಂಗಾಪುರಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕ ಜುಬೀನ್ ಗಾರ್ಗ್ ಅಂತ್ಯಕ್ರಿಯೆ

  • ಅಕ್ರಮವಾಗಿ ಸೆಕ್ಸ್‌ ಮೂವಿ ಶೂಟಿಂಗ್‌ – ಬಾಂಗ್ಲಾ ಮಹಿಳೆ ಸೇರಿ ಮೂವರು ಅರೆಸ್ಟ್‌

    ಅಕ್ರಮವಾಗಿ ಸೆಕ್ಸ್‌ ಮೂವಿ ಶೂಟಿಂಗ್‌ – ಬಾಂಗ್ಲಾ ಮಹಿಳೆ ಸೇರಿ ಮೂವರು ಅರೆಸ್ಟ್‌

    ದಿಸ್ಪುರ್‌: ಅಸ್ಸಾಂನ (Assam) ಗುವಾಹಟಿಯ ಹೋಟೆಲ್‌ ಒಂದರಲ್ಲಿ ಸೆಕ್ಸ್‌ ಮೂವಿ ಶೂಟಿಂಗ್‌ ಮಾಡುತ್ತಿದ್ದ ಆರೋಪದ ಮೇಲೆ ಬಾಂಗ್ಲಾದೇಶಿ (Bangladesh) ಮಹಿಳೆ ಸೇರಿದಂತೆ ಮೂವರನ್ನು ದಿಸ್ಪುರ್ (Dispur) ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಅಸ್ಸಾಂ ಮೂಲದ ಶಫಿಕುಲ್, ಜಹಾಂಗೀರ್ ಮತ್ತು ಬಾಂಗ್ಲಾದೇಶದ ನಿವಾಸಿ ಮೀನ್ ಅಖ್ತರ್ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಗುವಾಹಟಿಯ ಸೂಪರ್ ಮಾರ್ಕೆಟ್ ಪ್ರದೇಶದ ಹೋಟೆಲ್‌ ಒಂದರಲ್ಲಿ ಕೊಠಡಿಗಳನ್ನು ಬುಕ್ ಮಾಡಿದ್ದರು. ಅಲ್ಲಿ ಅವರು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಯೋಜಿಸಿದ್ದಾರೆ ಎಂದು ತನಿಖಾಧಿಕಾರಿಗಳು ಶಂಕಿಸಿ ದಾಳಿ ನಡೆಸಿದ್ದರು.

    ಮೀನ್ ಅಖ್ತರ್ ಬಾಂಗ್ಲಾದೇಶ ಗಡಿಗೆ ಏಕಾಂಗಿಯಾಗಿ ಪ್ರಯಾಣಿಸಿ ಉದ್ಯೋಗದ ಸುಳ್ಳು ನೆಪದಲ್ಲಿ ಭಾರತವನ್ನು ಪ್ರವೇಶಿಸಿದ್ದಾಳೆ ಎಂದು ಮೂಲಗಳು ಬಹಿರಂಗಪಡಿಸಿವೆ. ಆಕೆ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೇ ಅಸ್ಸಾಂಗೆ ಪ್ರವೇಶಿಸಿದ್ದಾಳೆ ಎಂದು ಆರೋಪಿಸಲಾಗಿದೆ.

    ಇದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಜಾಲಗಳ ಸಂಪರ್ಕದ ಬಗ್ಗೆ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 2.5 ಕೋಟಿ ರೂ.ಗೆ ಬೇಡಿಕೆ, ಕೊಡದಿದ್ದರೆ ಎನ್‍ಕೌಂಟರ್ ಬೆದರಿಕೆ – 9 ಪೊಲೀಸರು ಅರೆಸ್ಟ್

    2.5 ಕೋಟಿ ರೂ.ಗೆ ಬೇಡಿಕೆ, ಕೊಡದಿದ್ದರೆ ಎನ್‍ಕೌಂಟರ್ ಬೆದರಿಕೆ – 9 ಪೊಲೀಸರು ಅರೆಸ್ಟ್

    ದಿಸ್ಪುರ್: ಹಣ ಕೊಡದಿದ್ದರೆ ಜಿಹಾದಿಗಳೊಂದಿಗೆ ಸಂಬಂಧವಿದೆ ಎಂದು ಬಿಂಬಿಸಿ ಎನ್‍ಕೌಂಟರ್ ಮಾಡುವುದಾಗಿ ಉದ್ಯಮಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಅಸ್ಸಾಂನಲ್ಲಿ (Assam) 9 ಜನ ಪೊಲೀಸರನ್ನು (Police) ಬಂಧಿಸಲಾಗಿದೆ.

    ಪೊಲೀಸರು ನನ್ನನ್ನು ಅಕ್ರಮವಾಗಿ ಬಂಧಿಸಿ 2.5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಎನ್‍ಕೌಂಟರ್‌ನಲ್ಲಿ ಕೊಲ್ಲುತ್ತೇವೆ ಎಂದು ಪೊಲೀಸರು ಬೆದರಿಸಿದ್ದಾರೆ ಎಂದು ಉದ್ಯಮಿ ರಬಿಯುಲ್ ಇಸ್ಲಾಂ ಎಂಬುವವರು ಆರೋಪಿಸಿದ್ದಾರೆ. ಇದನ್ನೂ ಓದಿ: ಕೈದಿಗಳಿಗೆ ಸೇಬು, ಮೂಸಂಬಿ ಹಣ್ಣಿನಲ್ಲಿ ಗಾಂಜಾ ಸಪ್ಲೈ – ಮೂವರು ಅರೆಸ್ಟ್

    ಪೊಲೀಸ್ ಅಧಿಕಾರಿಗಳು ತಮ್ಮ ಮನೆಗೆ ಬಂದು ಏಕಾಏಕಿ ಡ್ರಗ್ಸ್ ಹಾಗೂ ಹಣದ ಬಗ್ಗೆ ಮಾತು ಶುರು ಮಾಡಿದರು. ನಂತರ ಪೊಲೀಸರು ನನ್ನ ಜೊತೆ ಇಬ್ಬರು ಸಂಬಂಧಿಕರನ್ನು ಭವಾನಿಪುರ ಪೊಲೀಸ್ ಠಾಣೆಗೆ ಕರೆದೊಯ್ಯುವ ಮೊದಲು ಗಂಟೆಗಳ ಕಾಲ ಹೊಡೆದಿದ್ದಾರೆ. ಬಳಿಕ ಠಾಣೆಯಲ್ಲಿ ಹಲವಾರು ಗಂಟೆಗಳ ಕಾಲ ಬಂಧಿಸಲಾಯಿತು. ಮರುದಿನ ಎಸ್‍ಪಿ ಅವರ ನಿವಾಸಕ್ಕೆ ಕರೆದೊಯ್ದು ಅಲ್ಲಿ ವಿಚಾರಣೆ ನಡೆಸಿದರು ಎಂದು ಉದ್ಯಮಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಬಳಿಕ ಡಿಟರ್ಜೆಂಟ್ ಕಾರ್ಖಾನೆ ಒಂದಕ್ಕೆ ಕರೆದೊಯ್ದು ಅಕ್ರಮ ಹಣ ಸಂಪಾದನೆ ಹಾಗೂ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಆರೋಪ ಹೊರಿಸಿ ಎನ್‍ಕೌಂಟರ್ ಮಾಡುವ ಬೆದರಿಕೆ ಒಡ್ಡಲಾಗಿದೆ ಎಂದು ಉದ್ಯಮಿ ಆರೋಪಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಸಿಐಡಿ 2014ರ ಬ್ಯಾಚ್ ಐಪಿಎಸ್ ಅಧಿಕಾರಿ ಸಿದ್ಧಾರ್ಥ ಬುರಗೋಹನ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ. ಸಿದ್ಧಾರ್ಥ ಅವರು ಎರಡು ದಿನಗಳ ಹಿಂದೆ ಅಸ್ಸಾಂ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆಯಾಗುವವರೆಗೂ ಬಜಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು.

    ಉಪ ಪೊಲೀಸ್ ವರಿಷ್ಠಾಧಿಕಾರಿ ಪುಷ್ಕಲ್ ಗೊಗೊಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಾಯತ್ರಿ ಸೋನೊವಾಲ್ ಮತ್ತು ಅವರ ಪತಿ ಸುಭಾಸ್ ಚಂದರ್, ಸಬ್ ಇನ್ಸ್‌ಪೆಕ್ಟರ್ ದೇಬಜಿತ್ ಗಿರಿ, ಕಾನ್‍ಸ್ಟೆಬಲ್ ಇಂಜಮಾಮುಲ್ ಹಸನ್, ಕಿಶೋರ್ ಬರುವಾ, ನಬೀರ್ ಅಹ್ಮದ್ ಮತ್ತು ದಿಪ್‍ಜಾಯ್ ಕಲಿತಾ ಬಂಧಿತ ಅಧಿಕಾರಿಗಳಾಗಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ ತಲೆ ತಂದವರಿಗೆ 10 ಕೋಟಿ ಬಹುಮಾನ; ಅಯೋಧ್ಯೆಯ ಹಿಂದೂ ಧರ್ಮದರ್ಶಿ ಘೋಷಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಲಾಪದ ವೇಳೆ ತ್ರಿಪುರ ಬಿಜೆಪಿ ಶಾಸಕನಿಂದ ಅಶ್ಲೀಲ ದೃಶ್ಯ ವೀಕ್ಷಣೆ – ವಿಡಿಯೋ ವೈರಲ್

    ಕಲಾಪದ ವೇಳೆ ತ್ರಿಪುರ ಬಿಜೆಪಿ ಶಾಸಕನಿಂದ ಅಶ್ಲೀಲ ದೃಶ್ಯ ವೀಕ್ಷಣೆ – ವಿಡಿಯೋ ವೈರಲ್

    ದಿಸ್ಪುರ್: ವಿಧಾನಸಭೆಯ ಅಧಿವೇಶನದ ವೇಳೆ ತ್ರಿಪುರದ ಬಿಜೆಪಿ (BJP) ಶಾಸಕ (MLA) ತಮ್ಮ ಮೊಬೈಲ್  ಫೋನ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆ ಹುಟ್ಟು ಹಾಕಿದೆ.

    ಈಶಾನ್ಯ ರಾಜ್ಯದ ಬಾಗ್ಬಸ್ಸಾ (Bagbassa) ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಜಾದವ್ ಲಾಲ್ ನಾಥ್ ಅಧಿವೇಶನದ ವೇಳೆ ಅಶ್ಲೀಲ ದೃಶ್ಯ ವೀಕ್ಷಿಸಿದ್ದಾರೆ. ರಾಜ್ಯ ಬಜೆಟ್ ಬಗ್ಗೆ ಚರ್ಚೆಯಾಗುತ್ತಿದ್ದ ವೇಳೆ ಶಾಸಕ ಮೊಬೈಲ್‍ನಲ್ಲಿ ನೋಡುತ್ತಿರುವ ದೃಶ್ಯಗಳನ್ನು ಹಿಂಬದಿ ಕುಳಿತಿದ್ದ ವ್ಯಕ್ತಿ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಪಕ್ಷ, ಶಾಸಕನಿಂದ ಸ್ಪಷ್ಟನೆ ಕೇಳಿದ್ದು, ಶಾಸಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ರಾಮನವಮಿ ಆಚರಣೆ ವೇಳೆ ದೇವಾಲಯದ ನೆಲ ಕುಸಿತ – ಬಾವಿಗೆ ಬಿದ್ದ 25 ಜನ

    ಈ ಹಿಂದೆ 2012ರಲ್ಲಿ ಕರ್ನಾಟಕ (Karnataka) ವಿಧಾನಸಭೆಯ (Assembly) ಕಲಾಪದ ವೇಳೆ ಬಿಜೆಪಿ ನಾಯಕರಾದ ಸಿ.ಸಿ ಪಾಟೀಲ್ ಹಾಗೂ ಲಕ್ಷ್ಮಣ್ ಸವದಿ ಇಬ್ಬರೂ ಅಶ್ಲೀಲ ವಿಡಿಯೋ ನೋಡುತ್ತಿರುವುದು ಚರ್ಚೆಯಾಗಿ ರಾಜಿನಾಮೆ ನೀಡಿದ್ದರು. ನಂತರದ ತನಿಖೆಯಲ್ಲಿ ತಪ್ಪಿತಸ್ಥರಲ್ಲ ಎಂಬುದು ಸಾಬೀತಾದ ಮೇಲೆ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ವಾಹನ ಸವಾರನ ಮೇಲೆ‌ ಎಕ್ಸ್‌ಪ್ರೆಸ್‌ ವೇ ಟೋಲ್ ಸಿಬ್ಬಂದಿ ಹಲ್ಲೆ

  • ನಾಗಾಲ್ಯಾಂಡ್‍ಗೆ ಸಾಗಾಟವಾಗುತ್ತಿದ್ದ 24 ಶ್ವಾನಗಳ ರಕ್ಷಣೆ

    ನಾಗಾಲ್ಯಾಂಡ್‍ಗೆ ಸಾಗಾಟವಾಗುತ್ತಿದ್ದ 24 ಶ್ವಾನಗಳ ರಕ್ಷಣೆ

    ದಿಸ್ಪುರ್: ಅಕ್ರಮವಾಗಿ ನಾಗಾಲ್ಯಾಂಡ್‍ಗೆ ಸಾಗಾಟ ಮಾಡುತ್ತಿದ್ದ 24 ನಾಯಿಗಳನ್ನು ಪುಲಿಬೋರ್ ಪೊಲೀಸರು ರಕ್ಷಿಸಿದ್ದಾರೆ.

    ಡಿಸೆಂಬರ್ 15 ರಂದು ಪುಲಿಬೋರ್ ಪೊಲೀಸರು, ಮಾಮೋನಿ ಹಜಾರಿಕಾ ಅವರ ನೇತೃತ್ವದಲ್ಲಿ ಶ್ವಾನಗಳ ರಕ್ಷಣೆ ಮಾಡಿದ್ದಾರೆ. ಅಸ್ಸಾಂನ ಜೋರ್ಹತ್ ನಗರದ 24 ಸ್ಥಳೀಯ ನಾಯಿಗಳನ್ನು ಅಕ್ರಮವಾಗಿ ನಾಗಾಲ್ಯಾಂಡ್‍ಗೆ ಕಳ್ಳಸಾಗಣೆಯಿಂದ ರಕ್ಷಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಾಯಿಗಳಿಗೆ ಹಗ್ಗ ಮತ್ತು ಗೋಣಿಚೀಲಗಳಿಂದ ಕಟ್ಟಲಾಗಿತ್ತು. ನಾಯಿಗಳಿಗೆ ಪ್ರಜ್ಞೆ ತಪ್ಪಿಸಲು ಔಷಧಗಳನ್ನು ಚುಚ್ಚಲಾಗಿತ್ತು. ಕಳ್ಳಸಾಗಣೆದಾರರು ಬಹಳ ದಿನಗಳಿಂದ ಆ ಪ್ರದೇಶಗಳಿಗೆ ನಾಯಿಗಳನ್ನು ಸಾಗಾಟ ಮಾಡುತ್ತಿದ್ದು, ಪ್ರತಿ ನಾಯಿಯನ್ನು 2,500 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ: ಬಿಳಿಕೂದಲಿನಲ್ಲಿಯೇ ಹಸೆಮಣೆಯೇರಿದ ನಟನ ಮಗಳು

    ಪುಲಿಬೋರ್ ಪೊಲೀಸರು ಡಿಸೆಂಬರ್ 15 ರಂದು ಸಂಜೆ 6.30ರ ಸುಮಾರಿಗೆ 24 ನಾಯಿಗಳನ್ನು ರಕ್ಷಿಸಿ ಮತ್ತು ದೋಕುರ್ ಡೋಲಿ ಎಂಬ ಕಳ್ಳಸಾಗಣೆದಾರನನ್ನು ಬಂಧಿಸಲಾಗಿದೆ. ರಕ್ಷಿಸಲಾದ ನಾಯಿಗಳು ಈಗ ಆರೋಗ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಡ್ರಗ್ಸ್ ಸೇವೆನೆಗೆ ಹಣ ಇಲ್ಲವೆಂದು ಮಗುವನ್ನು ಮಾರಾಟ ಮಾಡಿದ ತಂದೆ

    ಡ್ರಗ್ಸ್ ಸೇವೆನೆಗೆ ಹಣ ಇಲ್ಲವೆಂದು ಮಗುವನ್ನು ಮಾರಾಟ ಮಾಡಿದ ತಂದೆ

    ದಿಸ್ಪುರ: ಡ್ರಗ್ಸ್ ಸೇವನೆಗೆ ಹಣವಿಲ್ಲವೆಂದು ತಂದೆಯೋರ್ವ ಎರಡೂವರೆ ವರ್ಷದ ಮಗುವನ್ನು 40 ಸಾವಿರಕ್ಕೆ ಮಾರಾಟ ಮಾಡಿರುವ ಘಟನೆ ಅಸ್ಸಾಂನ ಮೊರಿಗನ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಮೊರಿಗನ್ ಜಿಲ್ಲೆಯ ಲಹರಿಘಾಟ್‍ನಲ್ಲಿ ಘಟನೆ ನಡೆದಿದ್ದು, ಅಮುನುಲ್ ಇಸ್ಲಾಂ, ಸಜೀದಾ ಬೇಗಂ ಎಂಬವರಿಗೆ ಮಗುವನ್ನು 40 ಸಾವಿರಕ್ಕೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ. ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಮಗುವಿನ ತಾಯಿ ರುಕ್ಮಿಣಾ ಬೇಗಂ ಪತಿ ಜೊತೆಗೆ ಜಗಳ ಮಾಡಿಕೊಂಡು ತನ್ನ ತಂದೆಯ ಮನೆಯಲ್ಲಿ ವಾಸವಾಗಿದ್ದಳು. ಈ ವೇಳೆ ಒಂದು ದಿನ ಮಾವನ ಮನೆಗೆ ಬಂದ ಅಮಿನುಲ್ ಇಸ್ಲಾಂ ಮಗುವಿನ ಆಧಾರ್ ಕಾರ್ಡ್ ಮಾಡಿಸಬೇಕು ಎಂದು ಹೇಳಿ ಮಗುವನ್ನು ಕರೆದುಕೊಂಡು ಹೋಗಿದ್ದಾನೆ. ಎರಡು ಮೂರು ದಿನಗಳು ಕಳೆದರೂ ಕರೆದುಕೊಂಡು ಬಂದಿಲ್ಲ. ಅನುಮಾನಗೊಂಡ ರುಕ್ಮಿಣಾ ಬೇಗಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ನಂತರ ಪೊಲೀಸರು ತನಿಖೆ ನಡೆಸಿ ಮಗುವನ್ನು ಪತ್ತೆ ಹಚ್ಚಿದ್ದಾರೆ.

  • ಟ್ರಕ್ ಗುದ್ದಿದ ರಭಸಕ್ಕೆ ಬಸ್ಸಿನಲ್ಲಿದ್ದ 7 ಮಂದಿ ಸಾವು, 20 ಮಂದಿಗೆ ಗಾಯ

    ಟ್ರಕ್ ಗುದ್ದಿದ ರಭಸಕ್ಕೆ ಬಸ್ಸಿನಲ್ಲಿದ್ದ 7 ಮಂದಿ ಸಾವು, 20 ಮಂದಿಗೆ ಗಾಯ

    ದಿಸ್ಪುರ್: ಬಸ್ಸಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 7 ಮಂದಿ ಮೃತಪಟ್ಟ ಘಟನೆ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ -17 ರಲ್ಲಿ ನಡೆದಿದೆ.

    ಈ ಭೀಕರ ರಸ್ತೆ ಅಪಘಾತದಲ್ಲಿ ಅನೇಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಸ್ಸಿಲ್ಲಿದ್ದ ಏಳು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇನ್ನು 20 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಬೋಗ್ರಿಬಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

    ಬಸ್ ಸಪತ್‍ಗ್ರಾಮ್‍ನಿಂದ ಧುಬ್ರಿಗೆ ಹೋಗುತ್ತಿದ್ದರೆ, ಟ್ರಕ್ ಗುವಾಹಟಿಗೆ ಹೋಗುತ್ತಿತ್ತು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಗುದ್ದಿದ ರಭಸಕ್ಕೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕಿಡಾಗಿದೆ. ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದವರಿಗೆ ಗಾಯಗಳಾಗಿವೆ. ಹಲವು ಜನರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೂಡಲೇ ಹತ್ತಿರದಲ್ಲಿದ್ದ ಸ್ಥಳೀಯರ ತಂಡವು ವಾಹನಗಳಿಂದ ಪ್ರಯಾಣಿಕರನ್ನು ರಕ್ಷಿಸಿ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಿದ್ದಾರೆ. ಅಪಘಾತದಲ್ಲಿ ಗಾಯಾಗೊಂಡಿರುವ ಗಾಯಾಳುಗಳು 20 ಗುವಾಹಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಫಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎಂಬ ವರದಿಗಳು ನಮಗೆ ಬಂದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ಅಪಘಾತದಲ್ಲಿ ಆಗಿರುವ ಪ್ರಾಣಹಾನಿ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಹಾರೈಸಿದ್ದಾರೆ.

  • ಮನೆ ಸ್ವಚ್ಛ ಮಾಡುವಾಗ ಭೂಕುಸಿತ- ಜಾನಪದ ನರ್ತಕಿ ದುರ್ಮರಣ

    ಮನೆ ಸ್ವಚ್ಛ ಮಾಡುವಾಗ ಭೂಕುಸಿತ- ಜಾನಪದ ನರ್ತಕಿ ದುರ್ಮರಣ

    – ಲಂಡನ್‍ನಲ್ಲಿ ನೃತ್ಯ ಮಾಡಲು ಅವಕಾಶ ಸಿಕ್ಕಿತ್ತು

    ದಿಸ್ಪುರ್: ಅಸ್ಸಾಂನ ಗುವಾಹಟಿಯ ಖಾರ್ಘುಲಿ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಯುವ ಜಾನಪದ ನರ್ತಕಿಯೊಬ್ಬರು ಮೃತಪಟ್ಟಿದ್ದಾರೆ.

    ಪ್ರಿಯಾಂಕಾ ಬೋರೊ (21) ಮೃತ ಯುವತಿ. ಈಕೆ ಗುವಾಹಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಭಾನುವಾರ ಬೆಳಗ್ಗೆ ಸುಮಾರು 6 ಗಂಟೆಗೆ ಪ್ರಿಯಾಂಕಾ ಮನೆಕೆಲಸಗಳಲ್ಲಿ ನಿರತರಾಗಿದ್ದಳು. ಈ ವೇಳೆ ನಿರಂತರ ಸುರಿದ ಮಳೆಯಿಂದ ಭೂಕುಸಿತದ ಉಂಟಾಗಿದೆ. ಪರಿಣಾಮ ಮನೆ ಸ್ವಚ್ಛ ಮಾಡುತ್ತಿದ್ದ ಪ್ರಿಯಾಂಕಾ ಮಣ್ಣಿನೊಳಗೆ ಸಿಲುಕಿ ಮೃತಪಟ್ಟಿದ್ದಾರೆ.

    ಪ್ರಿಯಾಂಕಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಗೌಹತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಪ್ರಿಯಾಂಕಾ ಅಸ್ಸಾಂನಲ್ಲಿ ಪ್ರತಿಭಾವಂತ ನರ್ತಕಿ ಎಂದು ಪ್ರಸಿದ್ಧರಾಗಿದ್ದರು. ಅನೇಕ ವೇದಿಕೆಗಳಲ್ಲಿ ಪ್ರಿಯಾಂಕಾ ತನ್ನ ನೃತ್ಯ ಪ್ರದರ್ಶಗಳನ್ನು ನೀಡಿದ್ದರು.

    21 ವರ್ಷದ ಪ್ರಿಯಾಂಕಾ 2015ರ ಎಚ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಂಗೀತ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಶ್ರೇಯಾಂಕ ಪಡೆದಿದ್ದರು. ಬಿಹು, ಶಾಸ್ತ್ರಿ ಮತ್ತು ಇತರ ಸಾಂಸ್ಕೃತಿಕ ನೃತ್ಯಗಳನ್ನು ಮಾಡುತ್ತಿದ್ದರು. ಅನೇಕ ದೇಶಗಳಲ್ಲಿ ಮತ್ತು ಭಾರತದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಮ್ಮ ನೃತ್ಯ ಪ್ರದರ್ಶನಗಳ ಮೂಲಕ ಅಸ್ಸಾಂಗೆ ಪ್ರಶಸ್ತಿಗಳನ್ನು ತಂದಿದ್ದರು.

    ಇತ್ತೀಚೆಗೆ ಲಂಡನ್‍ನಲ್ಲಿ ಜಾನಪದ ನೃತ್ಯ ಮಾಡಲು ಅವಕಾಶ ಸಿಕ್ಕಿತ್ತು. ಆದರೆ ಅಷ್ಟರಲ್ಲಿ ಭೂಕುಸಿತದಿಂದ ಪ್ರಿಯಾಂಕಾ ಬೋರೊ ಮೃತಪಟ್ಟಿದ್ದಾರೆ. ಹೀಗಾಗಿ ಪ್ರಿಯಾಂಕಾ ಸಾವಿನಿಂದ ಇಡೀ ಪ್ರದೇಶ ದುಃಖದ ಮಡುವಿನಲ್ಲಿದೆ. ಪ್ರಿಯಾಂಕಾ ಸಾವಿಗೆ ಸಾಂಸ್ಕೃತಿಕ ರಂಗದ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ.

  • ಅಸ್ಸಾಂನ ಮೂರು ಜಿಲ್ಲೆಯಲ್ಲಿ ಭಾರೀ ಭೂ ಕುಸಿತ- 20 ಮಂದಿ ದುರ್ಮರಣ

    ಅಸ್ಸಾಂನ ಮೂರು ಜಿಲ್ಲೆಯಲ್ಲಿ ಭಾರೀ ಭೂ ಕುಸಿತ- 20 ಮಂದಿ ದುರ್ಮರಣ

    ದಿಸ್ಪುರ್: ದಕ್ಷಿಣ ಅಸ್ಸಾಂನ ಬರಾಕ್ ಕಣಿವೆ ಪ್ರದೇಶದ ಮೂರು ಜಿಲ್ಲೆಯಲ್ಲಿ ಭಾರೀ ಭೂ ಕುಸಿತ ಸಂಭವಿಸಿದ ಪರಿಣಾಮ ಸುಮಾರು 20 ಮಂದಿ ಮೃತಪಟ್ಟಿದ್ದಾರೆ.

    ಮೃತಪಟ್ಟವರಲ್ಲಿ ಕ್ಯಾಚರ್ ಜಿಲ್ಲೆಯಲ್ಲಿ ಏಳು, ಹೈಲಕಂಡಿ ಜಿಲ್ಲೆಯಲ್ಲಿ ಏಳು ಮತ್ತು ಕರಿಮ್‍ಗಂಜ್ ಜಿಲ್ಲೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಮೂರು ಕುಟುಂಬಗಳಲ್ಲಿ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 11 ಮಕ್ಕಳು ಮತ್ತು ಮೂವರು ಮಹಿಳೆಯರಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕಳೆದ ಎರಡು ದಿನಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲದೇ ಈ ಭೂ ಕುಸಿತದಿಂದ ಹಲವಾರು ಮಂದಿ ಗಾಯಗೊಂಡಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.

    ಭಾರತದ ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಈಗಾಗಲೇ ಪ್ರವಾಹದಿಂದ 3.72 ಲಕ್ಷ ತೊಂದರೆಗೀಡಾಗಿದ್ದಾರೆ. ಗೋಲ್ಪಾರ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದ್ದು, ಪ್ರವಾಹದಿಂದ ನೂರಾರು ಗ್ರಾಮಗಳು ಜಲಾವೃತವಾಗಿದೆ. ಸುಮಾರು 27,000 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

    ಭೂಕುಸಿತದ ನಂತರ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ, ಶೀಘ್ರವೇ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ಹೊರಡಿಸಿದ್ದಾರೆ.

  • 7 ವಿದ್ಯಾರ್ಥಿಗಳಿಂದ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್ – ಮರಕ್ಕೆ ನೇಣು ಹಾಕಿ ಪೈಶಾಚಿಕ ಕೃತ್ಯ

    7 ವಿದ್ಯಾರ್ಥಿಗಳಿಂದ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್ – ಮರಕ್ಕೆ ನೇಣು ಹಾಕಿ ಪೈಶಾಚಿಕ ಕೃತ್ಯ

    – 10ನೇ ತರಗತಿಯ 7 ಆರೋಪಿಗಳು ಅರೆಸ್ಟ್

    ದಿಸ್ಪುರ್: 10ನೇ ತರಗತಿಯ ಏಳು ವಿದ್ಯಾರ್ಥಿಗಳು 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಸಂತ್ರಸ್ತೆಯನ್ನು ಮರಕ್ಕೆ ನೇಣು ಹಾಕಿ ಕೊಲೆ ಮಾಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಅಸ್ಸಾಂನ ಬಿಸ್ವನಾಥ್ ಜಿಲ್ಲೆಯಲ್ಲಿ ಈ ಘಟನೆ ಶುಕ್ರವಾರ ನಡೆದಿದೆ. ಗೋಹಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಕ್ಲಾ ಗ್ರಾಮದಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ನಂತರ ಸಂತ್ರಸ್ತೆಯನ್ನು ಮರಕ್ಕೆ ನೇಣು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    10ನೇ ತರಗತಿಯ ಏಳು ಆರೋಪಿಗಳು ಪರೀಕ್ಷೆ ನಂತರ ಪಾರ್ಟಿಯನ್ನು ಆಯೋಜನೆ ಮಾಡುವ ನೆಪದಲ್ಲಿ ಸಂತ್ರಸ್ತೆಯನ್ನು ಶುಕ್ರವಾರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಏಳು ವಿದ್ಯಾರ್ಥಿಗಳು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ನಂತರ ಮನೆಯ ಸಮೀಪದ ಕಾಡಿನಲ್ಲಿದ್ದ ಮರವೊಂದಕ್ಕೆ ನೇಣು ಹಾಕಿದ್ದಾರೆ.

    ಇತ್ತ ನಾಪತ್ತೆಯಾದ ಮಗಳನ್ನು ಪೋಷಕರು ಹುಡುಕುತ್ತಿದ್ದರು. ಆಗ ಶನಿವಾರ ಸಂತ್ರಸ್ತೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಂತರ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ಭಾನುವಾರ 10ನೇ ತರಗತಿಯ ಏಳು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.