– ತೆಲಂಗಾಣ ಪೊಲೀಸರಿಂದ ಮಾನ್ವಿ, ಸಿಂಧನೂರಿನಲ್ಲಿ ತೀವ್ರ ವಿಚಾರಣೆ
ರಾಯಚೂರು: ಹೈದರಾಬಾದ್ ನಲ್ಲಿ ನಡೆದ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೂ ರಾಜ್ಯಕ್ಕೂ ಸಂಬಂಧವಿರುವ ಬಗ್ಗೆ ತೆಲಂಗಾಣ ಪೊಲೀಸರಿಗೆ ಅನುಮಾನ ಕಾಡುತ್ತಿದೆ. ಹೀಗಾಗಿ ರಾಯಚೂರು ಜಿಲ್ಲೆಯ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.
ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಕರಣಕ್ಕೆ ಸಂಬಂಧಿಸಬಹುದಾದ ಜಿಲ್ಲೆಯ ಮಾಹಿತಿಗಳನ್ನ ಪಡೆದಿರುವ ತೆಲಂಗಾಣ ಪೊಲೀಸರು ಈಗ ಮಾನ್ವಿ, ಸಿಂಧನೂರಿನಲ್ಲಿ ಕೆಲವರ ವಿಚಾರಣೆ ನಡೆಸಿದ್ದಾರೆ. ತೆಲಂಗಾಣ ಸೈಬರ್ ಕ್ರೈಂ ಡಿವೈಎಸ್ಪಿ ಶಾಮಬಾಬು ನೇತೃತ್ವದ ತಂಡ ಆರೋಪಿಗಳ ಮೊಬೈಲ್ ಕರೆಗಳ ಪಟ್ಟಿ ಹಿಡಿದು, ಮೊಬೈಲ್ ನಂಬರ್ ಆಧರಿಸಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಅತ್ಯಾಚಾರ ಕೊಲೆ ಪ್ರಕರಣ ಆರೋಪಿಗಳು ಹೈದ್ರಾಬಾದ್ ನಿಂದ ಮಾನ್ವಿ ತಾಲೂಕಿಗೆ ಸಾಮಗ್ರಿ ಸಾಗಿಸುವ ವೇಳೆ ಇಲ್ಲಿನ ಅಂಗಡಿ ಮಾಲೀಕರಿಗೆ, ಪೆಟ್ರೋಲ್ ಬಂಕ್ ಮಾಲೀಕರಿಗೆ, ಪಂಚರ್ ಅಂಗಡಿ ಮತ್ತು ಚಿಕನ್ ಅಂಗಡಿ ಯವರಿಗೆ ಮಾಡಿದ ಮೊಬೈಲ್ ಕರೆ ಮೇಲೆ ವಿಚಾರಣೆ ನಡೆಸಿದ್ದಾರೆ. ಕೊಪ್ಪಳ ಗಂಗಾವತಿಯಲ್ಲೂ ವಿಚಾರಣೆ ನಡೆಸಲಿರುವ ಪೊಲೀಸ್ ಅಧಿಕಾರಿಗಳು ಆರೋಪಿಗಳು ಬೇರೆ ಎಲ್ಲಿಯಾದರೂ ಇದೇ ರೀತಿಯ ಕೃತ್ಯಗಳನ್ನ ಎಸಗಿದ್ದಾರಾ ಅನ್ನೋ ತನಿಖೆಯಲ್ಲಿದ್ದಾರೆ.
ಅಮರಾವತಿ: ದಿಶಾ ಪ್ರಕರಣದ ನಾಲ್ವರು ಅತ್ಯಾಚಾರಿಗಳನ್ನು ಸೈಬರಾಬಾದ್ ಪೊಲೀಸರು ಎನ್‍ಕೌಂಟರ್ ಮಾಡಿದನ್ನು ಪ್ರಶ್ನಿಸಿದ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ನಡೆಯನ್ನು ಆಂಧ್ರಪ್ರದೇಶ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಖಂಡಿಸಿದ್ದು, ಸಿನಿಮಾದಲ್ಲಿ ಎನ್‍ಕೌಂಟರ್ ಮಾಡಿದರೆ ಚಪ್ಪಾಳೆ ಹೊಡಿಯುತ್ತೇವೆ. ಆದರೆ ನಿಜವಾಗಿಯೂ ಎನ್‍ಕೌಂಟರ್ ಮಾಡಿದರೆ ವಿರೋಧಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಆರೋಪಿಗಳ ಹುಟ್ಟಡಗಿಸಿದ ತೆಲಂಗಾಣ ಪೊಲೀಸರ ಕಾರ್ಯವನ್ನು ಆಂಧ್ರ ಸಿಎಂ ಶ್ಲಾಘಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡಿದ ಜಗನ್ ಮೋಹನ್ ರೆಡ್ಡಿ, ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿ ಈ ಘಟನೆ ನನ್ನನ್ನು ಆಳವಾಗಿ ಸಂಕಟಕ್ಕೆ ದೂಡಿತ್ತು. ಒಬ್ಬ ತಂದೆಯಾಗಿ ಇಂತಹ ಘಟನೆಗಳಿಗೆ ನಾನು ಹೇಗೆ ಪ್ರತಿಕ್ರಿಯಿಸಲಿ? ಕ್ರೂರಿಗಳಿಗೆ ಯಾವ ಶಿಕ್ಷೆ ಕೊಟ್ಟರೆ ಪೋಷಕರಿಗೆ ಪರಿಹಾರ ನೀಡಿದಂತಾಗುತ್ತದೆ ಎಂದು ನಾವು ಚಿಂತಿಸಬೇಕಾಗಿದೆ ಎಂದು ಹೇಳಿದರು.
ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಹಾಗೂ ತೆಲಂಗಾಣ ಪೊಲೀಸರಿಗೆ ಹ್ಯಾಟ್ಸ್ ಆಫ್. ಕೆಸಿಎರ್ ಅವರು ನಿಜಕ್ಕೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಆಂಧ್ರ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ದಿಶಾ ಪ್ರಕರಣದ ಆರೋಪಿಗಳ ಎನ್‍ಕೌಂಟರ್ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ನಡೆಯನ್ನು ಜಗನ್ ಅವರು ವಿರೋಧಿಸಿದರು. ಸಿನಿಮಾಗಳಲ್ಲಿ ನಾಯಕ ಎನ್‍ಕೌಂಟರ್ ಮಾಡಿದರೆ ನಾವೆಲ್ಲಾ ಚಪ್ಪಾಳೆ ಹೊಡೆಯುತ್ತೇವೆ. ಆದರೆ ಅದೇ ಕೆಲಸವನ್ನು ಒಬ್ಬ ವ್ಯಕ್ತಿ ರಿಯಲ್ ಆಗಿ ಮಾಡಿದರೆ, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ಕೆಲವರು ದೆಹಲಿಯಿಂದ ಬಂದು ಇದು ತಪ್ಪು ಎನ್ನುತ್ತಾರೆ. ಏಕೆ ಮಾಡಿದೆ ಎಂದು ಪ್ರಶ್ನೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆ ಹಾಗೂ ಶಿಕ್ಷೆ ಸಂಬಂಧ ಬಲವಾದ ಕಾನೂನು ಜಾರಿಗೆ ತರಲು ನಿರ್ಧರಿಸಿದ್ದೇವೆ. ಇದೇ ಅಧಿವೇಶನದಲ್ಲಿ ಆ ಮಸೂದೆಯನ್ನು ನಮ್ಮ ಸರ್ಕಾರ ಮಂಡಿಸಲಿದೆ ಎಂದು ಘೋಷಿಸಿದರು. ಜೊತೆಗೆ ಅದರಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗುವ ಕಾಮುಕರಿಗೆ 21 ದಿನಗಳಲ್ಲಿ ಮರಣದಂಡನೆ ವಿಧಿಸುವ ಬಗ್ಗೆ ಕೂಡ ಪ್ರಸ್ತಾಪವಿದೆ ಎಂದು ತಿಳಿಸಿದರು.
ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಾಳೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ದೇಶದಲ್ಲಿ ಮಹಿಳೆಯರ ಮೇಲಿನ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಹುಟ್ಟುಹಬ್ಬ ಆಚರಿಸದಿರಲು ಸೋನಿಯಾ ಗಾಂಧಿ ತೀರ್ಮಾನಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಡಿಸೆಂಬರ್ 9ರಂದು ಸೋನಿಯಾ ಗಾಂಧಿಯವರು 73ನೇ ವಸಂತಕ್ಕೆ ಕಾಲಿಡಲಿದ್ದು, ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಹುಟ್ಟುಹಬ್ಬ ಆಚರಣೆ ಮಾಡಬೇಡಿ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗುತ್ತಿದೆ.
ದಿಶಾ ಮತ್ತು ಉನ್ನಾವೋ ಪ್ರಕರಣಗಳಿಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ದಿಶಾ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ನಲ್ಲಿ ಹೊಡೆದುರಳಿಸಿದ್ದಾರೆ. ಉನ್ನಾವೋ ಪ್ರಕರಣದ ಕಾಮುಕರಿಗೆ ಶಿಕ್ಷೆ ಆಗಬೇಕೆಂಬ ಕೂಗು ಕೇಳಿ ಬರುತ್ತಿದೆ.
Congress Interim President Sonia Gandhi will not celebrate her birthday tomorrow in wake of rising crime against women across the country. pic.twitter.com/8hIKBnRNft
ಶನಿವಾರ ಉನ್ನಾವೋ ಸಂತ್ರಸ್ತೆ ಕುಟುಂಬಸ್ಥರನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸಾಂತ್ವಾನ ಹೇಳಿದ್ದರು. ಈ ಹಿಂದೆ ಇಂತಹುದೇ ಪ್ರಕರಣ ನಡೆದಿದ್ದರೂ 23 ವರ್ಷದ ಮಹಿಳೆಗೆ ಯಾಕೆ ರಕ್ಷಣೆ ನೀಡಲಿಲ್ಲ. ಈ ಮೂಲಕ ಈ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಮೇಲೆ ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಲಾರಿ ಹರಿಸಿ ಅಪಘಾತವಾಗಿದೆ ಎನ್ನುವ ರೀತಿಯಲ್ಲಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಹೇಳಲಾಗಿತ್ತು. ಸಂತ್ರಸ್ತೆಯ ಕುಟುಂಬಕ್ಕೆ ಬೆಂಬಲ ನೀಡುವ ಸಲುವಾಗಿ ವ್ಯಾಪಕ ಪ್ರಚಾರ ನೀಡಬೇಕಿದೆ ಎಂದು ಪ್ರಿಯಾಂಕ ಗಾಂಧಿ ಒತ್ತಾಯಿಸಿದ್ದರು.
ಎಫ್‍ಐಆರ್ ದಾಖಲಿಸಿಕೊಳ್ಳಲೂ ನಿರಾಕರಿಸಿದ ಪೊಲೀಸರು ಯಾವ ರೀತಿಯ ಕ್ರಮ ಕೈಗೊಂಡಿದ್ದಾರೆ? ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದರು. ನಿತ್ಯ ನಡೆಯುವ ಪ್ರಕರಣದ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕವಾಗಿ ಪ್ರತಿಯೊಬ್ಬರ ಸಾಮೂಹಿಕ ವೈಫಲ್ಯದಿಂದಾಗಿ ಮಹಿಳೆಗೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಸಾಮಾಜಿಕವಾಗಿ ನಾವೆಲ್ಲರೂ ತಪ್ಪಿತಸ್ಥರು. ಅದೇ ರೀತಿ ಯುಪಿಯಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುತ್ತದೆ ಎಂದು ಪ್ರಿಯಾಂಕ ಹರಿಹಾಯ್ದಿದ್ದಾರೆ.
– ಎನ್‍ಕೌಂಟರ್ ನಡೆಸಿಲ್ಲ, ಗುಂಡಿನ ಚಕಮಕಿಯಲ್ಲಿ ಸಾವು
– ಆರೋಪಿಗಳಿಗೆ ಆಯುಧ ಬಳಕೆ ಗೊತ್ತಿತ್ತು
– 4 ಭಾಷೆಯಲ್ಲಿ ವಿವರ ನೀಡಿದ ಸಜ್ಜನರ್
ಹೈದರಾಬಾದ್: ನಾವು ಎನ್‍ಕೌಂಟರ್ ನಡೆಸಿದಲ್ಲ. ಪಿಸ್ತೂಲ್ ಕಸಿದುಕೊಂಡು ನಮ್ಮ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಕ್ಕೆ ಆತ್ಮರಕ್ಷಣೆಗಾಗಿ ನಾವು ಆರೋಪಿಗಳ ಮೇಲೆ ಶೂಟೌಟ್ ಮಾಡಿದ್ದೇವೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಹೀಗೆ:
ದಿಶಾ ಅವರನ್ನು ನ.26 ರಂದು ಅಪಹರಣ ಮಾಡಿ ಬಳಿಕ ಲೈಂಗಿಕ ದಾಳಿ ನಡೆಸಿ ಬಳಿಕ ಕೊಲೆ ಮಾಡಿ ಸೇತುವೆ ಕೆಳಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಯಾವುದೇ ಸಾಕ್ಷಿ ಇಲ್ಲದೇ ಆರಂಭವಾದ ತನಿಖೆಯಲ್ಲಿ ದೊರೆತ ಸಾಕ್ಷಿಗಳ ಆಧಾರವಾಗಿ ನಾಲ್ವರನ್ನು ಬಂಧಿಸಲಾಗಿತ್ತು. ಆ ಬಳಿಕ ನ್ಯಾಯಮೂರ್ತಿಗಳ ಎದುರು ಹಾಜರು ಪಡಿಸಿ ಬಂಧಿತ ಮೊಹಮದ್ ಆರಿಫ್, ಚನ್ನಕೇಶವಲು, ಜೊಲ್ಲು ನವಿನ್, ಜೊಲ್ಲು ಶಿವನನ್ನು ಚರ್ಲಪಾಲ್ಲಿ ಜೈಲಿನಲ್ಲಿ ಅವರನ್ನು ಇಡಲಾಗಿತ್ತು. ಪೊಲೀಸರ ಮನವಿಯಂತೆ ನ್ಯಾಯಾಲಯ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ಡಿ.4 ಮತ್ತು 5 ರಂದು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಿ ಪ್ರಕರಣ ಬಗ್ಗೆ ಆರೋಪಿಗಳಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿತ್ತು. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ
ಕಸ್ಟಡಿಯಲ್ಲಿ ಇದ್ದ ಸಂದರ್ಭದಲ್ಲಿ ಅವರು ನೀಡಿದ ಮಾಹಿತಿ ಅನ್ವಯ ವೈಜ್ಞಾನಿಕ ಸಾಕ್ಷಿಗಳನ್ನು ಸಂಗ್ರಹಿಸಲು ಹಾಗೂ ದಿಶಾರ ಮೊಬೈಲ್ ಫೋನ್, ಇತರೇ ವಸ್ತುಗಳನ್ನು ವಶಕ್ಕೆ ಪಡೆಯಲು ಘಟನಾ ಸ್ಥಳಕ್ಕೆ ಕರೆತರಲಾಗಿತ್ತು. ಇದರಂತೆ ಬೆಳಗ್ಗೆ ಅವರನ್ನು ಸ್ಥಳ ಪರಿಶೀಲನೆಗೆ ಕರೆತಂದ ವೇಳೆ ಅವರು ಸರಿಯಾದ ಮಾಹಿತಿ ನೀಡದೆ ಸಮಯ ವ್ಯರ್ಥ ಮಾಡಿ ಅಲ್ಲಿದೆ, ಇಲ್ಲಿದೆ ಎಂದು ಹೇಳುತ್ತಿದ್ದರು. ಆ ಬಳಿಕ ಸ್ಥಳದಲ್ಲಿ ದೊರೆತ ಕಲ್ಲು, ದೊಣ್ಣೆಗಳನ್ನು ಹಿಡಿದು ಪೊಲೀಸರ ಮೇಲೆ ಹಲ್ಲೆ ನಡೆಸಿ ಪೊಲೀಸರಿಂದ 2 ಪಿಸ್ತೂಲ್ ಕಿತ್ತುಕೊಂಡು ದಾಳಿ ನಡೆಸಿದ್ದರು.
ಪ್ರಕರಣ ಎ1 ಮತ್ತು ಎ2 ಆರೋಪಿಗಳಾದ ಆರಿಫ್, ಚನ್ನಕೇಶವಲು ಪೊಲೀಸರ ಮೇಲೆ ಫೈರ್ ಮಾಡಿದ್ದರು. ಈ ಸಂದರ್ಭದಲ್ಲಿ ಇಬ್ಬರು ಪೊಲೀಸರಿಗೆ ಗಾಯವಾಗಿದ್ದು, ಅವರು ಶೂಟ್ ಮಾಡಿದ ಕಾರಣ ಎಚ್ಚರಿಕೆ ನೀಡಿ ಪೊಲೀಸರು ಅನಿವಾರ್ಯವಾಗಿ ಪ್ರತಿದಾಳಿ ನಡೆಸಿದ್ದರು. ಸ್ವಲ್ಪ ಸಮಯದ ಬಳಿಕ ದಾಳಿ ನಿಂತ ಕಾರಣ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನಾಲ್ವರು ಸಾವನ್ನಪ್ಪಿದ್ದು ಖಚಿತವಾಗಿತ್ತು. ಆರೋಪಿಗಳ ಮೇಲೆ ಹಲವು ಅಪರಾಧ ಪ್ರಕರಣಗಳಿದ್ದು, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಅಲ್ಲದೇ ಈ ಹಿಂದೆ ಯಾವ ಯಾವ ಸ್ಥಳಗಳಲ್ಲಿ ಮಹಿಳೆಯರ ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ಬಗ್ಗೆಯೂ ತನಿಖೆ ನಡೆಸಿದ್ದೇವೆ. ಇದನ್ನೂ ಓದಿ: ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು: ಆರೋಪಿ ತಂದೆ
ಘಟನೆ ಬಗ್ಗೆ ಕೇಳಿ ಬಂದ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್ ಅವರು, ಕಾನೂನು ತನ್ನ ಕೆಲಸವನ್ನು ಮಾಡಿದೆ ಅಷ್ಟೇ ಎಂದರು. ಅವರಿಗೆ ಯಾವುದೇ ಹ್ಯಾಂಡ್ ಕಪ್ ಹಾಕಿರಲಿಲ್ಲ. ಅಲ್ಲದೇ ಅವರು ಶಸ್ತ್ರಾಸ್ತಗಳನ್ನು ಬಳಕೆ ಮಾಡುವ ವಿಧಾನ ತಿಳಿದಿದ್ದರು. ಇದುವೇ ಅವರು ಬಹುಬೇಗ ಪೊಲೀಸರ ಮೇಲೆ ದಾಳಿ ನಡೆಸಲು ಕಾರಣವಾಯಿತು. ಅವರನ್ನು ನಾವು ಘಟನೆ ನಡೆದ ಸ್ಥಳಕ್ಕೆ ದಿಶಾರ ಮೊಬೈಲ್ ಹಾಗೂ ಇತರೇ ವಸ್ತುಗಳನ್ನು ವಶಕ್ಕೆ ಪಡೆಯಲು ಕರೆತಂದಿದ್ದೆವು. ಆದರೆ ಪ್ರಕರಣ ಮರುಸೃಷ್ಟಿಗೆ ಕರೆತಂದಿರಲಿಲ್ಲ. ಬೆಳಗ್ಗೆ 5.30 ರಿಂದ 6.15ರ ವೇಳೆಗೆ ಘಟನೆ ನಡೆದಿದೆ ಎಂದರು.
ಪ್ರಕರಣದಲ್ಲಿ ಪೊಲೀಸ್ ಎಸ್‍ಐ ಸೇರಿದಂತೆ ಮತ್ತೊಬ್ಬ ಅಧಿಕಾರಿಯ ತಲೆಗೆ ಗಂಭೀರ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಶಿಫ್ಟ್ ಮಾಡಲಾಗಿದೆ ಎಂದರು. ಅಲ್ಲದೇ ಪೊಲೀಸರಿಗೆ ಯಾವುದೇ ಬುಲೆಟ್ ಗಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ತೆಲಂಗಾಣ ಎನ್‍ಕೌಂಟರ್: ಕೇಜ್ರಿವಾಲ್, ಶಶಿ ತರೂರ್, ಮನೇಕಾ ಗಾಂಧಿ ಅಪಸ್ವರ
ಇದೇ ವೇಳೆ ದಿಶಾ ಕುಟುಂಬಕ್ಕೆ ಹೆಚ್ಚಿನ ಸಮಸ್ಯೆ ನೀಡದಂತೆ ಮನವಿ ಮಾಡಿದ ವಿಶ್ವನಾಥ್ ಅವರು, ಅವರ ಖಾಸಗಿ ಜೀವನವನ್ನು ಗೌರವಿಸಿ ಎಂದರು. ಅಲ್ಲದೇ ಪೊಲೀಸರ ತನಿಖೆಯನ್ನು ನಡೆಸಲು ಸಹಕಾರ ನೀಡಿ. ಪ್ರಕರಣ ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇವೆ. ಆಡೋಪಿಗಳಿಗೆ ಎಷ್ಟು ಬುಲೆಟ್ ತಾಗಿದೆ ಎಂಬ ಬಗ್ಗೆಯೂ ಮರಣೋತ್ತರ ಪರೀಕ್ಷೆಯಲ್ಲಿ ಮಾಹಿತಿ ಲಭ್ಯವಾಗಲಿದೆ. ಇಲ್ಲಿವರೆಗೂ ನಡೆದ ಬೆಳವಣಿಗೆಗಳನ್ನು ನಾವು ಮುಂದಿಟ್ಟಿದ್ದೇವೆ ಎಂದರು.
4 ಭಾಷೆಯಲ್ಲಿ ಮಾಹಿತಿ:
ವಿಶ್ವನಾಥ್ ಸಜ್ಜನರ್ ಅವರು ತಮ್ಮ ಸುದ್ದಿಗೋಷ್ಠಿಯಲ್ಲಿ ಮೊದಲು ತೆಲುಗಿನಲ್ಲಿ ವಿವರಣೆ ನೀಡಿದರು. ಬಳಿಕ ಇಂಗ್ಲಿಷ್, ಹಿಂದಿಯಲ್ಲಿ ನೀಡಿ ಕೊನೆಗೆ ಕನ್ನಡದಲ್ಲೂ ಘಟನೆಯನ್ನು ವಿವರಿಸಿ ಕನ್ನಡ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದು ಸರಿಯಲ್ಲ: ಕಾರ್ತಿ ಚಿದಂಬರಂ
ಹೈದರಾಬಾದ್: ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಅವರ ನೇತೃತ್ವದಲ್ಲಿ ನಡೆದ ದಿಶಾ ಪ್ರಕರಣ ಅತ್ಯಚಾರಿಗಳ ಎನ್‌ಕೌಂಟರ್‌ನನ್ನು 2008ರಲ್ಲಿ ವಾರಂಗಲ್ ಆ್ಯಸಿಡ್ ಪ್ರಕರಣದ ಎನ್‌ಕೌಂಟರ್‌ಗೆ ಹೋಲಿಸಲಾಗುತ್ತಿದೆ. ಇದೇ ಮಾದರಿಯಲ್ಲೇ ಈ ಹಿಂದೆ ಸಜ್ಜನರ್ ಅವರ ತಂಡ ಆ್ಯಸಿಡ್ ದಾಳಿ ಆರೋಪಿಗಳನ್ನು ಕೂಡ ಎನ್‍ಕೌಂಟರ್ ಮಾಡಿತ್ತು.
ಇಂದು ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಸೈದರಾಬಾದ್ ಪೊಲೀಸರು ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರ ನೇತೃತ್ವದಲ್ಲಿ ಪೊಲೀಸರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಲಾಗಿದೆ. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ
ವಾರಂಗಲ್‍ನ ಕಾಕತೀಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಸ್ವಪ್ನಿಕ ಮತ್ತು ಪ್ರಣೀತಾ ಲವ್ ಪ್ರೊಪೊಸಲ್‍ಗೆ ಒಪ್ಪಿಕೊಳ್ಳದೆ ನಿರಾಕರಿಸಿದ್ದಕ್ಕೆ ಶ್ರೀನಿವಾಸ್(25), ಹರಿಕೃಷ್ಣಾ(24) ಮತ್ತು ಸಂಜತ್(22) ಆ್ಯಸಿಡ್ ದಾಳಿ ನಡೆಸಿದ್ದರು. ಇಬ್ಬರು ವಿದ್ಯಾರ್ಥಿನಿಯರು ತರಗತಿ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ ಅವರ ಮೇಲೆ ಆರೋಪಿಗಳು ಆ್ಯಸಿಡ್ ಎರಚಿದ್ದರು.
ಈ ಪ್ರಕರಣ ನಡೆದಿದ್ದಾಗ ವಿಶ್ವನಾಥ್ ಸಜ್ಜನರ್ ಅವರು ವಾರಂಗಲ್ ಎಸ್‍ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ವಿಶ್ವನಾಥ್ ನೇತೃತ್ವದ ತಂಡ ಘಟನೆಯಾದ 48 ಘಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿತ್ತು. ದಿಶಾ ಪ್ರಕರಣ ಆರೋಪಿಗಳನ್ನು ಘಟನಾ ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋದಂತೆ ಬಂಧನವಾದ ಮರುದಿನ ಸಾಕ್ಷಿಗಳನ್ನು ಸಂಗ್ರಹಿಸಲು ಆ್ಯಸಿಡ್ ದಾಳಿ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಪೊಲೀಸರು ಕರೆದೊಯ್ದಿದ್ದರು. ಇದನ್ನೂ ಓದಿ: ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು: ಆರೋಪಿ ತಂದೆ
ಈ ವೇಳೆ ಓರ್ವ ಆರೋಪಿ ಪೊಲೀಸರ ಮೇಲೆ ಕಚ್ಚಾ ಬಾಂಬ್‍ನಿಂದ ದಾಳಿ ಮಾಡಲು ಮುಂದಾಗಿದ್ದನು. ಆಗ ಆತ್ಮರಕ್ಷಣೆಗಾಗಿ ಸಜ್ಜನರ್ ಅವರು ತಮ್ಮ ಜೊತೆಗಿದ್ದ ಪೊಲೀಸರಿಗೆ ಎನ್‍ಕೌಂಟರ್ ಮಾಡಲು ಆದೇಶಿಸಿದ್ದರು. ಈ ವೇಳೆ ಮೂವರು ಆರೋಪಿಗಳು ಖಾಕಿ ಗುಂಡೇಟಿಗೆ ಬಲಿಯಾಗಿದ್ದರು.
ವಾರಂಗಲ್ ಎನ್‍ಕೌಂಟರ್ ಬಳಿಕ ಸಜ್ಜನರ್ ಅವರು `ಎನ್‍ಕೌಂಟರ್ ಸ್ಪೆಷಲಿಸ್ಟ್’ ಆಗಿಬಿಟ್ಟರು. ಆ್ಯಸಿಡ್ ದಾಳಿ ನಡೆದ 48 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ, ಒಂದೆ ದಿನದಲ್ಲಿ ದುಷ್ಟರಿಗೆ ಸಜ್ಜನರ್ ತಕ್ಕ ಪಾಠ ಕಲಿಸಿದ್ದರು. ಅದರಂತೆ ದಿಶಾ ಪ್ರಕರಣ ಸಂಬಂಧ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆ ಸಜ್ಜನರ್ ಅವರ ತಂಡ ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದೆ. ಹೀಗೆ ಈ ಎರಡು ಪ್ರಕರಣದ ಎನ್‍ಕೌಂಟರ್ ಒಂದೇ ಮಾದರಿಯಲ್ಲಿ ನಡೆದಿದೆ.
ಈ ಹಿಂದೆ ವಾರಂಗಲ್ ಆ್ಯಸಿಡ್ ಪ್ರಕರಣ ಆರೋಪಿಗಳನ್ನು ಸಜ್ಜನರ್ ಎನ್‍ಕೌಂಟರ್ ಮಾಡಿದ್ದಾಗ ಸಂತ್ರಸ್ತ ವಿದ್ಯಾರ್ಥಿನಿಯರ ಪೋಷಕರು, ಸ್ನೇಹಿತರು ಹಾಗೂ ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳು ಇಡೀ ಕಾಲೇಜಿಗೆ ಸಿಹಿ ಹಂಚಿ ಸಂಭ್ರಮಿಸಿದ್ದರು. ಆ ಖುಷಿಯ ವಾತಾವರಣ ಇಂದು ಕೂಡ ಎಲ್ಲೆಡೆ ಮನೆ ಮಾಡಿದೆ. ದಿಶಾ ಪ್ರಕರಣದ ಅತ್ಯಚಾರಿಗಳನ್ನು ಸಜ್ಜನರ್ ಅವರ ತಂಡ ಎನ್‍ಕೌಂಟರ್ ಮಾಡಿರುವುದಕ್ಕೆ ದೇಶದ ಜನರು ಪೊಲೀಸರಿಗೆ ಭೇಷ್ ಎನ್ನುತ್ತಿದ್ದಾರೆ.
ಲಕ್ನೋ: ಹೈದರಾಬಾದಿನ ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಎನ್‍ಕೌಂಟರ್ ಬಗ್ಗೆ ಬಹುಜನ್ ಸಮಾಜ್ ಪಕ್ಷ(ಬಿಎಸ್‍ಪಿ) ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯಿಸಿ, ದೆಹಲಿ, ಉತ್ತರ ಪ್ರದೇಶ ಪೊಲೀಸರು ಹೈದರಾಬಾದ್ ಪೊಲೀಸರನ್ನು ಪ್ರೇರಣೆಯಾಗಿ ಸ್ವೀಕರಿಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮಾಯಾವತಿ ಅವರು ಹೈದರಾಬಾದ್ ಪೊಲೀಸರಿಗೆ ಅಭಿನಂದನೆ ತಿಳಿಸಿದರು. ಜೊತೆಗೆ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಸಾಕಷ್ಟು ಒತ್ತು ಕೊಟ್ಟಿಲ್ಲವೆಂದು ಯೋಗಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಉತ್ತರ ಪ್ರದೇಶ ಮತ್ತು ದೆಹಲಿ ಪೊಲೀಸ್ ಹೈದರಾಬಾದ್ ಪೊಲೀಸರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಆದರೆ ದುರಾದೃಷ್ಟವಶಾತ್ ಇಲ್ಲಿ ಕ್ರಿಮಿನಲ್‍ನಳನ್ನು ರಾಜ್ಯದ ಅತಿಥಿಗಳ ರೀತಿ ಸತ್ಕರಿಸುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಕಳೆದ 7 ವರ್ಷಗಳಿಂದ ಪ್ರತಿದಿನವೂ ಸಾಯುತ್ತಿದ್ದೇವೆ: ನಿರ್ಭಯಾ ತಾಯಿ
Mayawati: Crimes against women are on the rise in Uttar Pradesh, but the state government is sleeping.Police here and also in Delhi should take inspiration from Hyderabad Police,but unfortunately here criminals are treated like state guests, there is jungle raj in UP right now pic.twitter.com/KeN53KCV4A
ಈಗ ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್ ನಡೆಯುತ್ತಿದೆ. ಮುಂದೆ ಈ ಮನೋಭಾವ ಬದಲಾಗುತ್ತದೆಂದು ಆಶಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರೆ ರಾಜ್ಯ ಸರ್ಕಾರ ನಿದ್ರೆ ಮಾಡುತ್ತಿದೆ ಎಂದು ಕಿಡಿಕಾಡಿದರು. ಇದನ್ನೂ ಓದಿ: ‘ಹತ್ಯಾಚಾರಿ’ಗಳ ಎನ್‍ಕೌಂಟರ್- ಪೊಲೀಸರಿಗೆ ಸ್ಟಾರ್ಸ್ ಶಬ್ಬಾಶ್
ಇಂದು ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಸೈಬರಾಬಾದ್ ಪೊಲೀಸರು ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರ ನೇತೃತ್ವದಲ್ಲಿ ಪೊಲೀಸರು ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ.
Independent MP Navneet Rana:Being a mother, a daughter and a wife, I welcome this(Telangana encounter),or else they would be in jail for years. Nirbhaya ka naam bhi nirbhaya nahi tha, logon ne naam diya tha,mujhe lagta hai use naam dene ke bajaye inhe aisa anjaam dena zaruri hai pic.twitter.com/Tjl51Bj1sv
ಸೈಬರಾಬಾದ್ ಪೊಲೀಸರ ಈ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಸಿನಿಮಾ ಕಲಾವಿದರು, ರಾಜಕಾರಣಿಗಳು, ಸಾರ್ವಜನಿಕರು ಪೊಲೀಸರಿಗೆ ಸಲಾಂ ಎಂದಿದ್ದಾರೆ. ಬೆಳ್ಳಂಬೆಳಗ್ಗೆ ಒಳ್ಳೆ ಸುದ್ದಿ ಕೊಟ್ಟಿದ್ದೀರಿ, ಅತ್ಯಾಚಾರಿಗಳನ್ನು ಹತ್ಯೆಗೈದಿದ್ದು ಸರಿಯಾಗಿದೆ. ಇದು ಬೇರೆಯವರಿಗೆ ಪಾಠವಾಗಲಿದೆ ಎಂದು ಪೊಲೀಸರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.
Baba Ramdev on Telangana encounter: What police has done is very courageous and I must say that justice has been delivered. Legal questions over it are a different matter, but I am sure people of the country are at peace now. pic.twitter.com/7WJcCoIM8z
ಏನಿದು ಪ್ರಕರಣ?
ನವೆಂಬರ್ 27ರಂದು 26 ವರ್ಷದ ಪಶುವೈದ್ಯೆಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮೊಹಮ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈ ಕೃತ್ಯಕ್ಕೆ ಇವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
Delhi CM Arvind Kejriwal on #Telangana encounter: It is also something to be worried about, the way people have lost their faith in the criminal justice system. Together all the governments will have to take action on how to strengthen criminal justice system. 2/2 https://t.co/bDXkXqnRS7pic.twitter.com/oDZDeretFh
ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದರು. ಸಾಮೂಹಿಕ ಅತ್ಯಾಚಾರದ ಬಳಿಕ ಪಶುವೈದ್ಯೆ ಓಡಿಹೋಗಬಾರದು ಎನ್ನುವ ಉದ್ದೇಶದಿಂದ ಅವಳ ಕೈ ಕಾಲುಗಳನ್ನು ಕಟ್ಟಿದ್ದೆವು. ಅತ್ಯಾಚಾರದ ನಂತರವೂ ಸಂತ್ರಸ್ತೆಗೆ ಮದ್ಯಪಾನ ಮಾಡುವಂತೆ ಒತ್ತಾಯಿಸಿದ್ದೆವು. ಸಂತ್ರಸ್ತೆ ಪ್ರಜ್ಞೆ ತಪ್ಪಿದಾಗ ಆಕೆಯನ್ನು ಸೇತುವೆಯ ಕೆಳಗೆ ಸಾಗಿಸಲಾಗಿತ್ತು. ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ವಿ ಎಂದು ಮುಖ್ಯ ಆರೋಪಿ ಮೊಹಮ್ಮದ್ ಪಾಷಾ, ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳನ್ನು ಆಧರಿಸಿ ಮಾಧ್ಯಮ ವರದಿ ಮಾಡಿತ್ತು.
DCP Shamshabad Prakash Reddy: Cyberabad Police had brought the accused persons to the crime spot for re-construction of the sequence of events. The accused snatched weapon and fired on Police. In self defence the police fired back, in which the accused were killed. #Telanganahttps://t.co/4wAH9W8g3O
ಬೆಂಕಿ ಹಚ್ಚುವುದಕ್ಕೂ ಮುನ್ನ ಪಶುವೈದ್ಯೆ ಮೃತಪಟ್ಟಿದ್ದಾಳೆ ಎಂದು ಭಾವಿಸಿದ್ದೇವು. ಆದರೆ ಬೆಂಕಿಯ ಹಚ್ಚಿದಾಗ ಅವಳು ಕಿರುಚಲು ಪ್ರಾರಂಭಿಸಿದಳು. ಹೀಗಾಗಿ ಸಂತ್ರಸ್ತೆ ಸಾಯುವವರೆಗೂ ನೋಡುತ್ತಲೇ ಇದ್ದೆವು. ಏಕೆಂದರೆ ಒಂದು ವೇಳೆ ಆಕೆ ಜೀವಂತವಾಗಿ ಉಳಿದರೆ ಪೊಲೀಸರು ನಮ್ಮನ್ನು ಹಿಡಿಯುತ್ತಾರೆ ಎನ್ನುವ ಭಯ ನಮ್ಮಲ್ಲಿತ್ತು ಎಂದು ಆರೋಪಿ ಪಾಷಾ ಬಾಯಿ ಬಿಟ್ಟಿದ್ದನು.
#WATCH Hyderabad: People celebrate and cheer for police at the encounter site where the four accused were killed in an encounter earlier today. #Telanganapic.twitter.com/WZjPi0Y3nw
ಹೈದರಾಬಾದ್: ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿ ಹತ್ಯೆಗೈದು ಪೊಲೀಸರು ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿದ್ದಾರೆ. ಅವರಿಗೆ ನಮ್ಮ ಧನ್ಯವಾದ ಎಂದು ಹೇಳುವ ಮೂಲಕ ಪಶುವೈದ್ಯೆ ಪೋಷಕರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನನ್ನ ಮಗಳು ತೀರಿಹೋಗಿ ಇವತ್ತಿಗೆ 10 ದಿನಗಳು ಕಳೆದಿದೆ. ಇಂದು ಸೈಬರಾಬಾದ್ ಪೊಲೀಸರು ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ನಾನು ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಈಗ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಪೊಲೀಸರು ನನ್ನ ಮಗಳಿಗೆ ಭಾಗಶಃ ನ್ಯಾಯ ಕೊಡಿಸಿದ್ದಾರೆ ಎಂದು ಪಶುವೈದ್ಯೆ ತಂದೆ ಖಾಕಿ ಪಡೆಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ- ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ ಪೊಲೀಸರು
DCP Shamshabad Prakash Reddy: Cyberabad Police had brought the accused persons to the crime spot for re-construction of the sequence of events. The accused snatched weapon and fired on Police. In self defence the police fired back, in which the accused were killed. #Telanganahttps://t.co/4wAH9W8g3O
ಇತ್ತ ಸಂತ್ರಸ್ತೆಯ ತಾಯಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಎನ್‍ಕೌಂಟರ್ ನಿಂದ ಸಮಾಧಾನ ಆಗಿದೆ. ನನ್ನ ಮಗಳಿಗೆ ಪೊಲೀಸರು ಹಾಗೂ ತೆಲಂಗಾಣ ಸರ್ಕಾರ ಭಾಗಶಃ ನ್ಯಾಯ ಕೊಡಿಸಿದ್ದಾರೆ. ನನ್ನ ಮಗಳು ಮತ್ತೆ ಮರಳಿ ಬರಲ್ಲ. ಆದರೆ ಪೊಲೀಸರ ಕಾರ್ಯದಿಂದ ಇಂದು ನನ್ನ ಮಗಳ ಸಾವಿಗೆ ನ್ಯಾಯ ಸಿಕ್ಕಿದೆ. ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿ ಪೊಲೀಸರು ನಮ್ಮ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಆಗುವಂತೆ ಮಾಡಿದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ
Hyderabad: Heavy police presence at the spot where accused in the rape and murder of the woman veterinarian were killed in an encounter earlier today. #Telanganapic.twitter.com/tpIzyBgxdZ
ಇಂದು ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಸೈಬರಾಬಾದ್ ಪೊಲೀಸರು ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರ ನೇತೃತ್ವದಲ್ಲಿ ಪೊಲೀಸರು ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ. ಇದನ್ನೂ ಓದಿ: ದೇಶಕ್ಕಾಗಿ ಒಳ್ಳೆಯ ನಿರ್ಧಾರ- ವಿಶ್ವನಾಥ್ ಕೆಲಸಕ್ಕೆ ಸಹೋದರ ಶ್ಲಾಘನೆ
Cyberabad Police Commissioner V C Sajjanar: The accused Mohammed Arif, Naveen,Shiva and Chennakeshavulu were killed in a Police encounter at Chatanpally,Shadnagar today in the wee hours, between 3 am and 6am.I have reached the spot and further details will be revealed #Telangana
ಸೈಬರಾಬಾದ್ ಪೊಲೀಸರ ಈ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಸಿನಿಮಾ ಕಲಾವಿದರು, ರಾಜಕಾರಣಿಗಳು, ಸಾರ್ವಜನಿಕರು ಪೊಲೀಸರಿಗೆ ಸಲಾಂ ಎಂದಿದ್ದಾರೆ. ಬೆಳ್ಳಂಬೆಳಗ್ಗೆ ಒಳ್ಳೆ ಸುದ್ದಿ ಕೊಟ್ಟಿದ್ದೀರಿ, ಅತ್ಯಾಚಾರಿಗಳನ್ನು ಹತ್ಯೆಗೈದಿದ್ದು ಸರಿಯಾಗಿದೆ. ಇದು ಬೇರೆಯವರಿಗೆ ಪಾಠವಾಗಲಿದೆ ಎಂದು ಪೊಲೀಸರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
#WATCH Hyderabad: People celebrate and cheer for police at the encounter site where the four accused were killed in an encounter earlier today. #Telanganapic.twitter.com/WZjPi0Y3nw
ಹೈದರಾಬಾದ್: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹತ್ಯೆಗೈದಿದ್ದಾರೆ.
ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ. ಇದನ್ನೂ ಓದಿ: ಸುಡುವಾಗ ಪಶುವೈದ್ಯೆ ಜೀವಂತವಾಗಿದ್ಳು: ಸತ್ಯ ಬಾಯಿಬಿಟ್ಟ ಮೃಗೀಯ ಮನುಷ್ಯ
Hyderabad: Senior Police officials arrive at the site of the encounter. All four accused in the rape and murder of woman veterinarian in Telangana were killed in an encounter with the police when the accused tried to escape while being taken to the crime spot. https://t.co/TB4R8EuPyrpic.twitter.com/7fuG87MP0m
ಏನಿದು ಪ್ರಕರಣ?
ನವೆಂಬರ್ 27ರಂದು 26 ವರ್ಷದ ಪಶುವೈದ್ಯೆಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮೊಹಮ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈ ಕೃತ್ಯಕ್ಕೆ ಇವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಇದನ್ನೂ ಓದಿ: ಅತ್ಯಾಚಾರಿಗಳನ್ನು ಗಲ್ಲಿಗೇರಿಸುವುದಕ್ಕೆ ನನ್ನ ಸಹಮತವಿಲ್ಲ – ಪವನ್ ಕಲ್ಯಾಣ್
ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದರು. ಸಾಮೂಹಿಕ ಅತ್ಯಾಚಾರದ ಬಳಿಕ ಪಶುವೈದ್ಯೆ ಓಡಿಹೋಗಬಾರದು ಎನ್ನುವ ಉದ್ದೇಶದಿಂದ ಅವಳ ಕೈ ಕಾಲುಗಳನ್ನು ಕಟ್ಟಿದ್ದೆವು. ಅತ್ಯಾಚಾರದ ನಂತರವೂ ಸಂತ್ರಸ್ತೆಗೆ ಮದ್ಯಪಾನ ಮಾಡುವಂತೆ ಒತ್ತಾಯಿಸಿದ್ದೆವು. ಸಂತ್ರಸ್ತೆ ಪ್ರಜ್ಞೆ ತಪ್ಪಿದಾಗ ಆಕೆಯನ್ನು ಸೇತುವೆಯ ಕೆಳಗೆ ಸಾಗಿಸಲಾಗಿತ್ತು. ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ವಿ ಎಂದು ಮುಖ್ಯ ಆರೋಪಿ ಮೊಹಮ್ಮದ್ ಪಾಷಾ, ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳನ್ನು ಆಧರಿಸಿ ಮಾಧ್ಯಮ ವರದಿ ಮಾಡಿತ್ತು. ಇದನ್ನೂ ಓದಿ: ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು: ನಿರ್ದೇಶಕ
Telangana Police: All four people accused in the rape and murder of woman veterinarian in Telangana have been killed in an encounter with the police. More details awaited. pic.twitter.com/AxmfQSWJFK
ಬೆಂಕಿ ಹಚ್ಚುವುದಕ್ಕೂ ಮುನ್ನ ಪಶುವೈದ್ಯೆ ಮೃತಪಟ್ಟಿದ್ದಾಳೆ ಎಂದು ಭಾವಿಸಿದ್ದೇವು. ಆದರೆ ಬೆಂಕಿಯ ಹಚ್ಚಿದಾಗ ಅವಳು ಕಿರುಚಲು ಪ್ರಾರಂಭಿಸಿದಳು. ಹೀಗಾಗಿ ಸಂತ್ರಸ್ತೆ ಸಾಯುವವರೆಗೂ ನೋಡುತ್ತಲೇ ಇದ್ದೆವು. ಏಕೆಂದರೆ ಒಂದು ವೇಳೆ ಆಕೆ ಜೀವಂತವಾಗಿ ಉಳಿದರೆ ಪೊಲೀಸರು ನಮ್ಮನ್ನು ಹಿಡಿಯುತ್ತಾರೆ ಎನ್ನುವ ಭಯ ನಮ್ಮಲ್ಲಿತ್ತು ಎಂದು ಆರೋಪಿ ಪಾಷಾ ಬಾಯಿ ಬಿಟ್ಟಿದ್ದನು.