Tag: ದಿಶಾ ಪಟಾನಿ

  • ಸಲ್ಮಾನ್ ಖಾನ್ ಹಾಡಿಗೆ ವೈದ್ಯರ ಡ್ಯಾನ್ಸ್ – ನೃತ್ಯ ನೋಡಿ ದಿಶಾ ಪಟಾನಿ ಫಿದಾ

    ಸಲ್ಮಾನ್ ಖಾನ್ ಹಾಡಿಗೆ ವೈದ್ಯರ ಡ್ಯಾನ್ಸ್ – ನೃತ್ಯ ನೋಡಿ ದಿಶಾ ಪಟಾನಿ ಫಿದಾ

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಇತ್ತೀಚೆಗೆ ಬಿಡುಗಡೆಗೊಂಡ ರಾಧೆ ಸಿನಿಮಾದ ಹಾಡೊಂದಕ್ಕೆ ವೈದ್ಯರ ಗುಂಪೊಂದು ಡ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಆಸ್ಪತ್ರೆಯ ಕಾರಿಡೋರ್‍ನಲ್ಲಿ ವೈದ್ಯರ ಗುಂಪು ರಾಧೆ ಸಿನಿಮಾದ ಸೀಟಿ ಮಾರ್ ಹಾಡಿನ ವಾದ್ಯಕ್ಕೆ ಒಟ್ಟಿಗೆ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಾವ್, ನಮ್ಮ ರಿಯಲ್ ಹೀರೋಸ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ದಿಶಾ ಪಟಾನಿ ಫ್ಯಾನ್ಸ್ ಕ್ಲಬ್‍ನಲ್ಲಿ ಮೊದಲಿಗೆ ಪೋಸ್ಟ್ ಮಾಡಿದ್ದು, ನಂತರ ದಿಶಾ ಕೂಡ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Team Disha (@teamdishap)

    ವೈರಲ್ ಆಗಿರುವ ವಿಡಿಯೋದಲ್ಲಿ ಕೊರೊನಾ ವೈರಸ್ ವಿರುದ್ಧ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು , ಮಾಸ್ಕ್ ಧರಿಸಿ, ಪಿಪಿಇ ಕಿಟ್ ಧರಿಸಿ ಹಾಡಿನ ವಾದ್ಯಕ್ಕೆ ನೃತ್ಯ ಮಾಡಿದ್ದಾರೆ. ಅಲ್ಲದೆ ವೈದ್ಯರಲ್ಲಿ ಒಬ್ಬರು ಮ್ಯಾಂಡೊಲಿನ್ ನುಡಿಸುವುದನ್ನು ಕಾಣಬಹುದಾಗಿದೆ.

  • ಇದುವರೆಗೂ ಯಾವ ಹುಡ್ಗನೂ ಪ್ರಪೋಸ್ ಮಾಡಿಲ್ಲ: ದಿಶಾ ಪಟಾನಿ

    ಇದುವರೆಗೂ ಯಾವ ಹುಡ್ಗನೂ ಪ್ರಪೋಸ್ ಮಾಡಿಲ್ಲ: ದಿಶಾ ಪಟಾನಿ

    – ಟೈಗರ್ ಜೊತೆಗಿನ ರಿಲೇಶನ್ ಶಿಪ್ ಬಗ್ಗೆ ಮಾತು
    – ಒನ್‍ಸೈಡ್ ಲವ್ ಕಹಾನಿ ಬಿಚ್ಚಿಟ್ಟ ದಿಶಾ

    ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ಬಾಲಿವುಡ್ ನಟಿ ದಿಶಾ ಪಟಾನಿ, ತಮಗೆ ಇಲ್ಲಿಯವರೆಗೂ ಯಾವ ಹುಡುಗನೂ ಪ್ರಪೋಸ್ ಮಾಡಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

    ಕ್ರಿಕೆಟಿಗ ಧೋನಿ ಜೀವನಾಧರಿತ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ ದಿಶಾ ದಿಶಾ ಪಟಾನಿ ಸದ್ಯ ‘ಭಾರತ್’ ಚಿತ್ರದಲ್ಲಿ ನಟಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದಿಶಾ ತಮ್ಮ ಖಾಸಗಿ ಜೀವನದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೊಬೈಲ್ ಪಾಸ್‍ವರ್ಡ್ ನಿಂದಾಗಿ ದಿಶಾ-ಟೈಗರ್ ಮಧ್ಯೆ ಬ್ರೇಕಪ್-ಏನಿದು ಲವ್ ಸ್ಟೋರಿ?

    ಇಂದಿನವರೆಗೂ ಯಾವ ಹುಡುಗ ನನಗೆ ಪ್ರಪೋಸ್ ಮಾಡಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ, ಯಾವ ಹುಡುಗರಿಂದಲೂ ನನಗೆ ಪ್ರಪೋಸ್ ಮಾಡುವ ರೀತಿಯ ಸನ್ನೆಗಳು ಬಂದಿಲ್ಲ. ಟೈಗರ್ ಶ್ರಾಫ್ ಜೊತೆ ತಿರುಗಾಡುತ್ತೇನೆ. ಊಟಕ್ಕೆ ಹೋಗಿ ಎಂಜಾಯ್ ಮಾಡುತ್ತೇವೆ. ಕೇವಲ ನಾವಿಬ್ಬರು ಒಳ್ಳೆಯ ಗೆಳೆಯರು ಎಂಬ ದೃಷ್ಟಿಕೋನದಿಂದ ತಿರುಗಾಡುತ್ತೇವೆಯೇ ಹೊರತು ನಮ್ಮಿಬ್ಬರ ಮಧ್ಯೆ ಪ್ರೀತಿ ಪ್ರೇಮ ಏನಿಲ್ಲ. ಟೈಗರ್ ಗಾಗಿ ಜಿಮ್ನಾಸ್ಟಿಕ್ ಎಲ್ಲ ಮಾಡಿದ್ರೂ ಅವರು ಇಂಪ್ರೆಸ್ ಆಗಿಲ್ಲ ಎಂದು ಹೇಳುವ ಮೂಲಕ ಒನ್‍ಸೈಡ್ ಲವ್ ಕಹಾನಿಯನ್ನ ಬಿಚ್ಚಿಟ್ಟರು. ಇದನ್ನೂ ಓದಿ: ದಿಶಾ ಪಟಾನಿ ಬಿಕಿನಿ ತೊಟ್ಟ ಫೋಟೋ ವೈರಲ್

    ಶಾಟ್ರ್ಸ್, ಬಾಸ್ಕೆಟ್ ಬಾಲ್ ಜರ್ಸಿ ಮತ್ತು ಸ್ಪೋರ್ಟ್ಸ್ ಶೂಗಳನ್ನು ಧರಿಸಲು ಇಷ್ಟಪಡುತ್ತೇನೆ. ಸಿನಿಮಾ ಮತ್ತು ಮಾಡೆಲಿಂಗ್ ಅಂಗಳಕ್ಕೆ ಬರುವ ಮುನ್ನ ಟಾಮ್ ಬಾಯ್ ಲುಕ್ ನಲ್ಲಿರಲು ಇಷ್ಟಪಡುತಿದ್ದೆ. ಸಿನಿಮಾಗೆ ಬಂದ ಮೇಲೆ ಕೂದಲು ಉದ್ದ ಬಿಟ್ಟಿದ್ದೇನೆ ಎಂದು ತಿಳಿಸಿದರು.

    ನನ್ನ ಗ್ಲಾಮರಸ್ ಲುಕ್ ಬಗ್ಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಲ್ಲ. ನನ್ನ ತಾಯಿ ಬೇರೆ ಹೆಸರಿನ ಖಾತೆಯ ಮೂಲಕ ಇನ್‍ಸ್ಟಾಗ್ರಾಂನಲ್ಲಿ ನ್ನನ್ನು ಫಾಲೋ ಮಾಡುತ್ತಾರೆ. ಕೆಲವೊಂದು ನನ್ನ ವಿಚಿತ್ರ ಗ್ಲಾಮರಸ್ ಫೋಟೋಗಳನ್ನು ನೋಡಿ ತಂದೆ ಚಕಿತರಾಗುತ್ತಾರೆ ಎಂದು ಸಂದರ್ಶನದಲ್ಲಿ ದಿಶಾ ಹೇಳಿಕೊಂಡಿದ್ದಾರೆ.

  • ದಿಶಾ ಪಟಾಣಿ ಬಿಕಿನಿ ತೊಟ್ಟ ಫೋಟೋ ವೈರಲ್

    ದಿಶಾ ಪಟಾಣಿ ಬಿಕಿನಿ ತೊಟ್ಟ ಫೋಟೋ ವೈರಲ್

    ಮುಂಬೈ: ಬಾಲಿವುಡ್ ನಟಿ ದಿಶಾ ಪಟಾಣಿ ಬಿಕಿನಿ ತೊಟ್ಟ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಎಂ. ಎಸ್ ಧೋನಿ ದ ಅನ್‍ಟೋಲ್ಡ್ ಸ್ಟೋರಿ ಸಿನಿಮಾದ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟ ಕ್ವೀನ್ ಆಫ್ ಆರ್ಟ್ ದಿಶಾ ಪಟಾನಿ ಇತ್ತೀಚೆಗೆ ಬ್ಲೂ ಬಣ್ಣದ ಬಿಕಿನಿ ತೊಟ್ಟ ಫೋಟೋವೊಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದರು. ಇದಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದು, ಇದೀಗ ಈ ಫೋಟೋ ಹೆಚ್ಚು ವೈರಲ್ ಆಗಿದೆ. ಅಪ್ಲೋಡ್ ಮಾಡಿದ ಒಂದೇ ದಿನಕ್ಕೆ 16 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು ಕಮೆಂಟ್‍ಗಳನ್ನು ಪಡೆದುಕೊಂಡಿದೆ.

    https://www.instagram.com/p/BpBZZH6Fwc7/?hl=en&taken-by=dishapatani

    ಇತ್ತೀಚೆಗೆ ಬಾಂಬೆ ಟೈಮ್ಸ್ ಫ್ಯಾಶನ್ ವೀಕ್‍ನಲ್ಲಿ ನಟಿ ದಿಶಾ ಪಟಾನಿ ಕ್ಯಾಟ್ ವಾಕ್ ಮಾಡಿದ್ದರು. ಅದರಲ್ಲಿ ಅವರು ಗುಲಾಬಿ ಬಣ್ಣದ ಲೇಹೆಂಗಾ ತೊಟ್ಟು ಸಿಂಪಲ್ ಮೇಕಪ್‍ನಲ್ಲಿ ವಧುವಿನ ಹಾಗೇ ಕಾಣಿಸಿಕೊಂಡಿದ್ದರು. ಈ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

    https://www.instagram.com/p/Bo6-QqLl9Y5/?hl=en&taken-by=dishapatani

    ವೈಯಕ್ತಿಕ ವಿಚಾರದಲ್ಲಿ ದಿಶಾ ಪಟಾನಿ ಟೈಗರ್ ಶ್ರಾಫ್ ಜೊತೆ ಸುದ್ದಿಯಾಗಿದ್ದರು. ಮೂರು ವರ್ಷಗಳಿಂದ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕಳೆದೆರಡು ತಿಂಗಳಿನಿಂದ ಎಲ್ಲಿಯೂ ಕಾಣುತ್ತಿಲ್ಲ. ಟೈಗರ್ ಮತ್ತು ದಿಶಾ ಇಬ್ಬರು ಭಾಗಿ-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಇಬ್ಬರ ಒಡನಾಟ, ಬಾಂಧವ್ಯ ಎಲ್ಲವೂ ತಾವು ಪ್ರೀತಿಯಲ್ಲಿದಿದ್ದನ್ನು ತೋರಿಸುತ್ತಿತ್ತು. ಒಂದು ಮೂಲಗಳ ಪ್ರಕಾರ ಇಬ್ಬರ ಮದುವೆಗೂ ಎರಡೂ ಕುಟುಂಬಸ್ಥರು ಒಪ್ಪಿಗೆಯನ್ನು ಸೂಚಿಸಿದ್ದರು. ಇತ್ತೀಚೆಗೆ ಟೈಗರ್ ಸ್ವತಃ ತಾವೇ ದಿಶಾರಿಂದ ದೂರ ಉಳಿಯುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದವು.

    ಸದ್ಯಕ್ಕೆ ದಿಶಾ ಪಟಾನಿ ಸಲ್ಮಾನ್‍ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಅದ್ದೂರಿ ಸಿನಿಮಾ`ಭಾರತ್’ನಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಬೆಂಗ್ಳೂರಿಗೆ ಬಂದ ಬಾಲಿವುಡ್ ಚೆಲುವೆ ದಿಶಾ ಪಟಾನಿ

    ಬೆಂಗ್ಳೂರಿಗೆ ಬಂದ ಬಾಲಿವುಡ್ ಚೆಲುವೆ ದಿಶಾ ಪಟಾನಿ

    ಬೆಂಗಳೂರು: ಬಾಲಿವುಡ್ ಎಂ.ಎಸ್.ಧೋನಿ ಸಿನಿಮಾ ಖ್ಯಾತಿಯ ಬ್ಯೂಟಿಫುಲ್ ನಟಿ ದಿಶಾ ಪಟಾನಿ ಮೊದಲ ಬಾರಿಗೆ ಬುಧವಾರ ನಗರಕ್ಕೆ ಆಗಮಿಸಿದ್ದರು. ತಮ್ಮ ನೆಚ್ಚಿನ ನಟಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ರು.

    ಮಹದೇವಪುರದ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಸಿ. ಕೃಷ್ಣಯ್ಯ ಚೆಟ್ಟಿ ಜುವೆಲರ್ಸ್ ಫಾರ್ ಎವರ್ ಮಾರ್ಕ್ ನ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿಶಾ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ದಿಶಾ ಪಟಾನಿ, ಫಾರ್ ಎವರ್ ಮಾರ್ಕ್ ನಲ್ಲಿನ ವಜ್ರದ ಅಭರಣಗಳು ಜಗತ್ತಿನ ಅತ್ಯಂತ ಸುಂದರ ಹಾಗೂ ಅಪರೂಪದ ವಜ್ರಗಳು. ಇದರ ಮೊದಲ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿರುವುದು ತುಂಬಾ ಸಂತಸ ತಂದಿದೆ. ಬೆಂಗಳೂರಿನ ವಾತಾವರಣ ತುಂಬಾ ಚೆನ್ನಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ದಿಶಾ ಪಟಾನಿ ತೆಲಗುವಿನ ಲೋಫರ್, ಹಿಂದಿಯ ಎಂ.ಎಸ್.ಧೋನಿ, ಕುಂಗ್ ಫೂ ಯೋಗ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಭಾಗಿ-2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಎಂ.ಎಸ್.ಧೋನಿ ಸಿನಿಮಾ ದಿಶಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.