ಬಾಲಿವುಡ್ (Bollywood) ನಟಿ ದಿಶಾ ಪಟಾನಿ(Disha Patani) ಸಿನಿಮಾಗಿಂತ ಸದಾ ಹಾಟ್ ಫೋಟೋಶೂಟ್ (Hot Photoshoot) ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ನಟಿಯ ಹೊಸ ಫೋಟೋಶೂಟ್ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಸಿನಿಮಾ ಮಾಡೋದು ಬಿಟ್ಟು ಇದೆಲ್ಲಾ ನಿಮಗೆ ಬೇಕಾ ಅಂತಾ ದಿಶಾಗೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಎಂ.ಎಸ್ ಧೋನಿ, ಭಾಘಿ 2, ಭಾಘಿ 3, ಸಲ್ಮಾನ್ ಖಾನ್ (Salman Khan) ಜೊತೆ ರಾಧೆ (Radhe) ಹೀಗೆ ಸಾಕಷ್ಟು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ದಿಶಾ ಪಟಾನಿಗೆ ತಮ್ಮ ಸಿನಿಮಾಗಳಿಂದ ಚಿತ್ರರಂಗದಲ್ಲಿ ಬಿಗ್ ಬ್ರೇಕ್ ಸಿಗುತ್ತಿಲ್ಲ. ಸಿನಿಮಾ ಜೊತೆ ಸದಾ ಹಾಟ್ ಫೋಟೋಶೂಟ್ ಮೂಲಕ ಗಮನ ಸೆಳೆಯುವ ನಟಿ ದಿಶಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚಿನ ಫೋಟೋಶೂಟ್‌ವೊಂದರಲ್ಲಿ ನೇರಳೆ ಬಣ್ಣದ ಮಾಡರ್ನ್ ಡ್ರೆಸ್‌ನಲ್ಲಿ ದಿಶಾ ಮಿಂಚಿದ್ದಾರೆ. ಮಾದಕ ನೋಟದಿಂದ ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಫೋಟೋದಲ್ಲಿ ಗಮನ ಸೆಳೆದಿದ್ದಾರೆ. ಆದರೆ ನಟಿಯ ಹೊಸ ಲುಕ್‌ಗೆ ನೆಗೆಟಿವ್ ಕಾಮೆಂಟ್ ಬಂದಿದೆ. ಇದನ್ನೂ ಓದಿ: ಸಮಂತಾಗೆ ಹೋಲಿಸಿದ ನೆಟ್ಟಿಗರಿಗೆ `ಗಾಳಿಪಟ 2′ ನಾಯಕಿ ಏನಂದ್ರು ಗೊತ್ತಾ?
View this post on Instagram
ಫೋಟೋಶೂಟ್ ಎಲ್ಲಾ ಬಿಟ್ಟು ನಿಮ್ಮ ಸಿನಿಮಾಗಳತ್ತ ಗಮನ ಕೊಡಿ. ಟ್ಯಾಲೆಂಟ್ ಇದ್ದಿದ್ರೆ ಈ ತರಹ ಮೈ ತೋರಿಸುವ ಅಗತ್ಯವಿರಲ್ಲ ಎಂದು ದಿಶಾ ಪಟಾನಿಗೆ ಖಡಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನ್ನೂ ದಿಶಾ ಪಟಾನಿ ಮುಂಬರುವ ಸಿನಿಮಾಗಳು, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಯೋಧ (Yodha), ಪ್ರಭಾಸ್ ಜೊತೆ `ಪ್ರಾಜೆಕ್ಟ್ ಕೆ’ (Project k) ಸಿನಿಮಾಗಳು ರೆಡಿಯಿದೆ. ಈ ಚಿತ್ರವಾದರೂ ತೆರೆಗೆ ಮೇಲೆ ಮೋಡಿ ಮಾಡುತ್ತಾ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k







ಟೈಗರ್ ಶ್ರಾಫ್, ದಿಶಾ ಪಠಾಣಿ ಅವರು ಸ್ನೇಹಿತರಾಗಿದ್ದರು, ಸ್ನೇಹಿತರಾಗಿ ಉಳಿದಿದ್ದಾರೆ. ಇಬ್ಬರೂ ಜೊತೆಯಾಗಿ ಹೊರಗೆ ಹೋಗೋದನ್ನು ನಾನು ನೋಡಿರುವೆ. ಹಾಗಂತ ನನ್ನ ಮಗನನ್ನು ಟ್ರ‍್ಯಾಕ್ ಮಾಡ್ತೀದ್ದೀನಿ ಅಂತಲ್ಲ. ಅವರಿಬ್ಬರೂ ತುಂಬ ಆತ್ಮೀಯರು ಅಂತ ನನಗೆ ಗೊತ್ತಿದೆ, ಕೆಲಸದ ಹೊರತಾಗಿ ಅವರಿಬ್ಬರೂ ಸಮಯ ಕಳೆಯುತ್ತಾರೆ ಅಂತ ಗೊತ್ತಿದೆ ಎಂದು ಜಾಕಿ ಶ್ರಾಫ್ ಹೇಳಿದ್ದಾರೆ. ಬೇರೆಯಾಗಿರೋದು, ಒಟ್ಟಿಗೆ ಇರೋದು ಅವರಿಬ್ಬರಿಗೆ ಬಿಟ್ಟಿದ್ದು. ನಾನು, ನನ್ನ ಪತ್ನಿ ತರ ಇದು ಅವರ ಲವ್ ಸ್ಟೋರಿ. ದಿಶಾ ಜೊತೆ ನಮಗೆ ಒಳ್ಳೆಯ ಸಂಬಂಧ ಇದೆ ಎಂದು ಜಾಕಿ ಶ್ರಾಫ್ ಹೇಳಿದ್ದಾರೆ.
ಬಿಟೌನ್ ಕ್ವೀನ್ ದಿಶಾ ಈಗ `ಏಕ್ ವಿಲನ್ ರಿಟರ್ನ್ಸ್’ ಚಿತ್ರದ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಅರ್ಜುನ್ ಕಪೂರ್, ಜಾನ್ ಅಬ್ರಹಾಂ, ತಾರಾ ಜತೆ ಪ್ರಮುಖ ಪಾತ್ರದಲ್ಲಿ ದಿಶಾ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ಮತ್ತು ಪೋಸ್ಟರ್ ಮೂಲಕ ಭರ್ಜರಿ ಸೌಂಡ್ ಮಾಡುತ್ತಿದ್ದು, ಇದೇ ಜುಲೈ 29ಕ್ಕೆ ತೆರೆಗೆ ಅಬ್ಬರಿಸಲಿದೆ. ಹಾಗಾಗಿ ಪ್ರಚಾರ ಕಾರ್ಯದಲ್ಲಿ ಭಾಗಿದ್ದ ವೇಳೆ ದಿಶಾ ಹಾಟ್ ಲುಕ್ ಗಂಡ್ ಹೈಕ್ಳ ಟೆಂಪ್ರೇಚರ್ ಹೆಚ್ಚಿಸಿದೆ. ಇದನ್ನೂ ಓದಿ:
ಬ್ಲ್ಯಾಕ್ ಕಲರ್ ಕ್ರಾಪ್ ಟಾಪ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ದಿಶಾ ಲುಕ್ ಈಗ ನೋಡುಗರ ಗಮನ ಸೆಳೆಯುತ್ತಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.







