Tag: ದಿವ್ಯ ಸುರೇಶ್
-

ಕುಡಿದ ಮತ್ತಿನಲ್ಲಿ ಬಿಗ್‍ಬಾಸ್ ಸ್ಪರ್ಧಿ ದಿವ್ಯ ಸುರೇಶ್ ರಂಪಾಟ
ಬೆಂಗಳೂರು: ಬಿಗ್‍ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯ ಸುರೇಶ್ ಬ್ರಿಗೇಡ್ ರೋಡ್‍ನಲ್ಲಿ ರಂಪಾಟ ಮಾಡಿದ ಘಟನೆ ಇಂದು ರಾತ್ರಿ ನಡೆದಿದೆ.

ಬ್ರಿಗೇಡ್ ರೋಡ್‍ನಲ್ಲಿ ಸ್ನೇಹಿತರೊಂದಿಗಿದ್ದ ದಿವ್ಯ ಸುರೇಶ್ ಕುಡಿದ ಅಮಲಿನಲ್ಲಿ ಗಲಾಟೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಪೊಲೀಸರು ಮತ್ತು ಮಾಧ್ಯಮಗಳು ಬರುತ್ತಿದ್ದಂತೆ ಕ್ಯಾಮೆರಾ ಕಂಡು ದಿವ್ಯ ಸುರೇಶ್ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿ ಡಿಂಪಲ್ ಕ್ವೀನ್ ರಚಿತಾ ಡಿಸ್ಚಾರ್ಜ್

ಪೊಲೀಸರು ದಿವ್ಯ ಸುರೇಶ್ ಜೊತೆ ಮಾತನಾಡುತ್ತಿದ್ದಂತೆ ಮಾಧ್ಯಮಗಳು ಕೂಡ ಸ್ಥಳಕ್ಕೆ ದಾವಿಸಿವೆ. ಈ ವೇಳೆ ದಿವ್ಯ ಸುರೇಶ್ ಕ್ಯಾಮೆರಾ ಕಂಡು ಆಟೋ ಹತ್ತಿ ತೆರಳಿದಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಸೆಲೆಬ್ರೆಷನ್‍ಗೆ ಮಾಲ್ಡೀವ್ಸ್‌ಗೆ ಹಾರಿದ ಬಾಲಿವುಡ್ ಲವ್ ಬರ್ಡ್ಸ್

ಬಿಗ್‍ಬಾಸ್ ಕನ್ನಡ ಸೀಸನ್ 8ರಲ್ಲಿ 6ನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರ ಬಂದ ದಿವ್ಯಾ ಸುರೇಶ್ ಅವರು ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕವೇ ಹೆಚ್ಚು ಜನಪ್ರಿಯವಾಗಿದ್ದರು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
-

ಮಂಜನ ಅಪ್ಪ, ಅಮ್ಮನ ಜೊತೆ ಮದುವೆ ಬಗ್ಗೆ ಮಾತನಾಡಿದ್ದೇನೆ: ದಿವ್ಯಾ ಸುರೇಶ್
ಬಿಗ್‍ಬಾಸ್ ಸೀಸನ್-8 ಗ್ರ್ಯಾಂಡ್ ಫಿನಾಲೆ ಭಾನುವಾರ ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ಕಿಚ್ಚ ಸುದೀಪ್ ಅವರು ಅರವಿಂದ್ ಮದುವೆಗಿಂತ ಮೊದಲು ಮಂಜನ ಮದುವೆಯಾಗುತ್ತೆ ಎಂದು ಕೇಳಿದರು. ಅದಕ್ಕೆ ಒಂದಿಬ್ಬರು ಹೊರತುಪಡಿಸಿ ಎಲ್ಲರೂ ಯಸ್ ಎಂದು ಹೇಳಿದರು.

ಇದೇ ವೇಳೆ ಸುದೀಪ್ ಯಸ್ ಯಾಕೆ ದಿವ್ಯಾ ಸುರೇಶ್ ಎಮದು ಕೇಳಿದಾಗ, ನಾನು ಅವರ ಅಪ್ಪ-ಅಮ್ಮ ಜೊತೆ ಮದುವೆ ವಿಚಾರ ಮಾತನಾಡಿದ್ದೇನೆ. ಆಗ ಅವರು ಅವನು ಆಡುತ್ತಿರುವ ರೇಂಜ್ ನೋಡಿದರೆ ಶೋ ಮುಗಿಸಿ ಬಂದ ಕೊಡಲೇ ಮದುವೆಯಾಗುತ್ತಾನೆ ಎಂದು ಹೇಳಿದ್ದಾಗಿ ತಿಳಿಸಿದರು. ಇದನ್ನೂ ಓದಿ: ದಿವ್ಯಾ ಸುರೇಶ್ ಬಗ್ಗೆ ಲ್ಯಾಗ್ ಮಂಜು ಹೇಳಿದ್ದೇನು..?

ಆಗ ಕಿಚ್ಚ ಆ ರೇಂಜ್ ಅಂದ್ರೆ ಏನ್ ನೋಡಿದ್ರು ಅವರು ಎಂದು ಕೇಳಿದಕ್ಕೆ ದಿವ್ಯಾ, ಯಾವಾಗಲೂ ಮದುವೆಯಾಗಬೇಕು, ಮದುವೆ ಆಗಬೇಕು ಎಂದು ಹೇಳುತ್ತಿರುತ್ತಾರೆ. ಅದಕ್ಕೆ ಬಂದ ಕೂಡಲೇ ಆಗಬಹುದು ಎಂದು ಹೇಳಿದೆ ಎಂದರು. ಇದನ್ನೂ ಓದಿ: ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್..!

ಇತ್ತ ರಾಜೀವ್ ಅವರು ಈ ಬಗ್ಗೆ ಮಾತನಾಡಿ, ಹೌದು ಅಣ್ಣ ಮಂಜಗೆ ತುಂಬಾ ಆಸೆ ಇದೆ. ಅದರಲ್ಲಿ ಮದುವೆಯಾಗಬೇಕು ಎಂಬುದು ಟಾಪ್‍ನಲ್ಲಿದೆ. ಅದಕ್ಕೆ ಅವರು ಆಚೆ ಬಂದ ತಕ್ಷಣ ಮದುವೆಯಾಗುತ್ತಾರೆ. ರಾಜೀವ್ ಮಾತಿಗೆ ಅರವಿಂದ್ ಸಹ ದನಿಗೂಡಿಸಿದ್ದು, ಹೌದು ಸರ್ ತುಂಬಾ ಅಜೆರ್ಂಟ್‍ನಲ್ಲಿದ್ದಾನೆ. ಬೇಗ ಮದುವೆಯಗುತ್ತಾನೆ ಎಂದು ತಮಾಷೆ ಮಾಡಿ ಎಲ್ಲಾ ಸ್ಪರ್ಧಿಗಳು ಮಂಜನ ಕಾಲೆಳೆದಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಲ್ಲಿ ಮಂಜು ಕಲಿತಿದ್ದೇನು..?- ಮುಂದಿನ ಯೋಚನೆ, ಯೋಜನೆಗಳ ಬಗ್ಗೆ ವಿನ್ನರ್ ಮಾತು

ನಂತರ ಮಂಜ ಅವರ ತಾಯಿಯ ಬಳಿ ಕಿಚ್ಚ ಮಾತನಾಡಿ, ಯಾವಾಗ ಮದುವೆ ಮಾಡಿಸುತ್ತೀರಾ ಅಮ್ಮ ಎಂದು ಕೇಳಿದಕ್ಕೆ, ಅವನು ಹೊರಗೆ ಬಂದು ಯಾವಾಗ ಇಷ್ಟ ಪಡುತ್ತಾನೆ ಆಗ ಮದುವೆ ಮಾಡಿಸುತ್ತೇವೆ ಎಂದರು. ಅದಕ್ಕೆ ಸುದೀಪ್ ಬೇಡ ಅವರು ಬಂದ ತಕ್ಷಣ ಮದುವೆ ಮಾಡಿಬಿಡಿ. ನೋಡಿ ಫುಲ್ ರೆಡಿಯಾಗಿ, ಚೆನ್ನಾಗಿ ಹಲ್ಲು ಉಜ್ಜಿಕೊಂಡಿದ್ದಾರೆ. ಹುಡುಗಿಯನ್ನ ಹುಡುಕಲು ಹೋಗುವಾಗ ಶುಭಾ ಮತ್ತೆ ಚಕ್ರವರ್ತಿ ಅವರನ್ನು ಕರೆದುಕೊಂಡು ಹೋಗಿ ಎಂದು ತಮಾಷೆ ಮಾಡಿದ್ದಾರೆ. ಕಿಚ್ಚನ ಮಾತಿಗೆ ನೆರೆದಿದ್ದವರು ಜೋರಾಗಿ ನಕ್ಕಿದ್ದಾರೆ.
-

ನನ್ನ ಮದ್ವೆಯಾಗಲ್ವ ಅಂತ ಮಂಜುನ ದಿವ್ಯಾ ಕೇಳಿದ್ಯಾಕೆ..?
ಬಿಗ್ ಬಾಸ್ ಆರಂಭವಾದಾಗಲೇ ಮಂಜು ಹಾಗೂ ದಿವ್ಯಾ ಸುರೇಶ್ ಹೆಸರು ಹೆಚ್ಚಾಗಿ ಕೇಳಿಬಂದಿತ್ತು. ಈ ವಿಚಾರ ಚರ್ಚೆಗೆ ಗ್ರಾಸವಾಗ್ತಿದ್ದಂತೆಯೇ ಇಬ್ಬರೂ ಬೇರೆಯವರ ಜೊತೆಗೂ ಬರೆಯಲು ಆರಂಭಿಸಿದ್ದರು. ಈ ಮಧ್ಯೆ ಇದೀಗ ದಿವ್ಯಾ ಸುರೇಶ್ ಅವರು ಮಂಜು ಬಳಿ ನನ್ನ ಮದುವೆಯಾಗಲ್ವ ಎಂದು ಕೇಳಿ ಮತ್ತೆ ಅಚ್ಚರಿ ಹುಟ್ಟಿಸಿದ್ದಾರೆ.

ಹೌದು. ಮಂಜು, ಶುಭಾ ಹಾಗೂ ದಿವ್ಯಾ ಸುರೇಶ್ ಮೂವರು ಒಟ್ಟಿಗೆ ಕುಳಿತು ಮಾತಾಡ್ತಿದ್ದರು. ಈ ವೇಳೆ ದಿವ್ಯಾ ಅವರು ಶುಭಾ ಬಳಿ ಹೇರ್ ಫಾಲ್ ಬಗ್ಗೆ ಹೇಳಿಕೊಂಡರು. ಇತ್ತ ಮಂಜು.. ನಂಗೆ ಬಿಳಿ ಕೂದಲೇ ಇರ್ಲಿಲಲ್ಲ, ಈಗ ಬಿಳಿ ಕೂದಲು ಬರ್ತಿವೆ. ಹೋಗೋಷ್ಟರಲ್ಲಿ ತಲೆ ತುಂಬಾ ಬೆಳ್ಳಗೆ ಆಗ್ಬೇಕು ಅಂದ್ರು. ಆಗ ದಿವ್ಯಾ, ಹೊಸ ಲುಕ್ ಚೆನ್ನಾಗಿರುತ್ತೆ.. ನೀನು ಹೆಂಗಿದ್ರೂ ಚೆನ್ನಾಗಿರ್ತಿಯಾ ಬಿಡು ಅಂದ್ರು.

ಆಗ ಮಂಜು.. ಅಲ್ಲ ನಿನಿಗೆ ಚೆನ್ನಾಗಿ ಕಾಣ್ತೀನಿ. ಮದ್ವೆ ಆಗಬೇಕಲ್ವಮ್ಮ. ಈವಾಗ್ಲೇ ವಯಸ್ಸು ತುಂಬಾ ಆಗ್ಬಿಟ್ಟದೆ ಅಂತ ಶುರು ಮಾಡಿದ್ರು. ಇದೇ ವೇಳೆ ದಿವ್ಯಾ… ಅಂದ್ರೆ ನನ್ನ ಮದುವೆ ಆಗಲ್ವ ಎಂದು ಪ್ರಶ್ನೆ ಹಾಕಿಯೇ ಬಿಟ್ಟರು. ದಿವ್ಯಾ ಪ್ರಶ್ನೆ ಕೇಳಿ ಕಳವಳಗೊಂಡ ಮಂಜು.. ಯೋಚನೆ ಮಾಡ್ತಾ ಇದ್ದೀನಿ ಏನ್ ಮಾಡಬೇಕು ಅಂತ ಹೇಳುವ ಮೂಲಕ ಜಾರಿಕೊಂಡ್ರು.

ಅಲ್ಲದೆ ಸ್ವಲ್ಪ ಹೊತ್ತಿನ ಬಳಿಕ ಅಲ್ಲಮ್ಮ ನೀನು ಮೂರು ವರ್ಷ ಮದುವೆ ಆಗಲ್ಲ ಅಂತ ಹೇಳಿದ್ದಿ ಅಲ್ವ. ಆದ್ರೆ ನಂಗೆ ಬಿಗ್‍ಬಾಸ್ ಮನೆಯಿಂದ ಹೋದ ತಕ್ಷಣ ಮದುವೆ ಆಗ್ಬೇಕು. 2-3 ವರ್ಷ ಕಾಯೋ ಸೀನೇ ಇಲ್ಲ. ಆಗಲ್ಲಮ್ಮ ವಯಸ್ಸಾಗಿದೆ ಅಂತ ಹೇಳಿದ್ದಾರೆ. ಆಗ ಶುಭಾನೂ ಮಂಜು ಮಾತಿಗೆ ದನಿಗೂಡಿಸಿದ್ರು. ಇಬ್ಬರದ್ದೂ ಇದೇ ವರ್ಷ ಮದುವೆ ಅಲ್ವ ನೈಸ್ ಅಂತ ದಿವ್ಯಾ ಸುರೇಶ್ ಹೇಳಿದ್ರು.

ಒಟ್ಟಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದು ಹೊರಗೆ ಬಂದ ಬಳಿಕ ಮನೆಯೊಳಗೆ ಕ್ಲೋಸ್ ಆಗಿದ್ದವರನ್ನೇ ಮದ್ವೆಯಾಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
-

ರಘುನ ಚುಡಾಯಿಸಿ ಮಜಾ ತಗೊಂಡ ಮನೆ ಹೆಂಗಳೆಯರು!
ಬಿಗ್‍ಬಾಸ್ ಮನೆ ಸದಸ್ಯರಲ್ಲಿ ರಘು ಕೊಂಚ ಡಿಫ್ರೆಂಟ್ ಎಂದು ಹೇಳಿದರೆ ತಪ್ಪಾಗಲಾರದು. ರಘು ಸೀರಿಯಸ್ ಆಗಿನೂ ಮಾತನಾಡುತ್ತಾರೆ. ಕಾಮಿಡಿನೂ ಮಾಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಬಿಗ್‍ಬಾಸ್ ಮನೆಯಲ್ಲಿ ಒಂದು ಘಟನೆ ನಡೆದಿದೆ.

ರಘು ಮನೆಯಲ್ಲಿ ಬೆಲ್ಲಿ ಡಾನ್ಸ್ ಮಾಡಲು ತಯಾರಿ ನಡೆಸಿದ್ದಾರೆ. ಈ ವೇಳೆ ಮನೆ ಸದಸ್ಯರ ಬಳಿ ಹುಡುಗಿಯ ಹಾಗೇ ಹಾವ-ಭಾವದಲ್ಲಿ ಮಾತನಾಡುತ್ತಿದ್ದಾರೆ. ಮನೆಯವರು ರಘುವನ್ನು ಚುಡಾಯಿಸುತ್ತಾ ಸಖತ್ ಮಜಾ ತಗೋತ್ತಿದ್ದಾರೆ.

ರಘು ಬಾರೆ… ಇಲ್ಲಿ.. ಎಂದು ಶುಭ ಪೂಂಜಾ ಮಾದಕ ಧ್ವನಿಯಲ್ಲಿ ಕರೆದಿದ್ದಾರೆ. ಈ ವೇಳೆ ರಘು ಏನೇ… ಎಂದು ನಾಚುತ್ತಾ ಮಾತನಾಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ವಿಶ್ವನಾಥ್, ವೈಷ್ಣವಿ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ ಜೋರಾಗಿ ನಕ್ಕಿದ್ದಾರೆ.

ಏನೇ ಹೊಟ್ಟೆ ಎಲ್ಲಾ ಬಿಟ್ಟ್ಕೊಂಡಿದ್ದಿಯಾ ಮೊಟ್ಟೆತರ ಎಂದು ದಿವ್ಯ ಸುರೇಶ್, ರಘು ಅವರಿಗೆ ಹೇಳಿದ್ದಾರೆ. ಈ ವೇಳೆ ರಘು ನಾಚುತ್ತಾ ತುಂಬಾ ಕಾಣಿಸ್ತಾ ಇದ್ಯಾ. ಕ್ರಾಪ್ ಟಾಪ್ ಅಂತ ಅಂಗಡಿಯವನು ಕೊಟ್ಟ. ತುಂಬಾ ಕ್ರಾಪ್ ಆಗಿ ಹೋಯ್ತಾ. ಇದನ್ನು ಹಾಕಿಕೊಳ್ಳೊಕೆ ಅಂತಾನೆ ದಿನಾ ವರ್ಕ್‍ಔಟ್ ಮಾಡುತ್ತೇನೆ ಎಂದು ಹುಡುಗಿಯ ಧ್ವನಿಯಲ್ಲಿ ನಾಚುತ್ತಾ ಹೇಳಿದ್ದಾರೆ.

ಮನೆಯವರು ಕೇಳುತ್ತಿರುವ ಪ್ರಶ್ನೆಗಳಿಗೆ ರಘು ನಗುತ್ತಾ ನಾಚುತ್ತಾ ಹೆಣ್ಣಿನ ಧ್ವನಿಯಲ್ಲಿ ಉತ್ತರಿಸಿದ್ದಾರೆ. ಮನೆಯ ಹೆಂಗಳೆಯರೆಲ್ಲಾ ಸೇರಿ ರಘುವನ್ನು ಚುಡಾಯಿಸಿ ಜೋರಾಗಿ ನಕ್ಕಿದ್ದಾರೆ.
-

ನನಗೆ ಯಾರು ಸ್ನೇಹಿತರಿಲ್ಲ ಎಂದ ದಿವ್ಯ
ನಾವು ಬೇರೆ ಪ್ರಪಂಚದಲ್ಲೇ ಇದ್ದೇವೆ. ಯಾವುದೇ ಚಿಂತೆ ಇಲ್ಲದೇ ಇರಬೇಕೆಂದು ಮಂಜು ಹೇಳಿದ್ದಾರೆ. ಆದರೆ ನನಗೆ ಮನೆಯ ಯೋಚನೆ ಆಗುತ್ತಿದೆ. ಅಣ್ಣ, ಅಮ್ಮ ಹೇಗೆ ಇದ್ದಾರೆ. ಹೇಗೆ ಬಂದು ನನಗೆ ಪ್ರತಿವಾರ ಬಟ್ಟೆಯನ್ನು ಕೊಡುತ್ತಾರೆ ಎಂದು ನನಗೆ ಯೋಚನೆ ಆಗುತ್ತಿದೆ ಎಂದು ದಿವ್ಯಾ ಸುರೇಶ್ ಮನೆಯ ನೆನಪು ಮಾಡಿಕೊಂಡಿದ್ದಾರೆ.

ಕಣ್ಣೀರಿಟ್ಟ ದಿವ್ಯ ಸುರೇಶ್!
ನಿನ್ನ ಪರ್ಸನಲ್ ಯಾರು ಮ್ಯಾನೇಜ್ ಮಾಡುತ್ತಾರೆ ಎಂದು ಮಂಜು ಕೇಳಿದ್ದಾರೆ. ಆಗ ದಿವ್ಯ ಕಣ್ಣಿರು ಹಾಕುತ್ತಾ ನನಗೆ ಯಾರು ಅಂತ ಸ್ನೇಹಿತರು ಎಂದು ಇಲ್ಲ. ಅಮ್ಮ, ಅಣ್ಣನೇ ನನ್ನ ಎಲ್ಲಾ ವಿಚಾರಗಳನ್ನು ಅವರೇ ನೋಡಿಕೊಳ್ಳುತ್ತಾರೆ ಎಂದು ಹೇಳುತ್ತಾ ಮನೆಮಂದಿಯನ್ನು ನೆನೆಪು ಮಾಡಿಕೊಂಡು ದಿವ್ಯಾ ಕಣ್ಣೀರಿಟ್ಟಿದ್ದಾರೆ.

ಇಬ್ರು ಮಜಾ ಮಾಡನಾ!
ಕಣ್ಣೀರಿಗೆ ಬೆಲೆ ಇದೆ ಕಣ್ಣೀರು ಹಾಕಬೇಡ. ನೀನು ನನ್ನ ಹತ್ರ ಏನ್ ಬೇಕಾದರೂ ಹೇಳಿಕೊ ನಿನಗಾಗಿ ಇನ್ನು ಮಂದೆ ನಾನು ಇದ್ದೇನೆ. ಸ್ನೇಹಿತರಾಗಿ ಇಬ್ರು ಮಜಾ ಮಾಡುವ ಎಂದು ಹೇಳಿ ದಿವ್ಯಾ ಸುರೇಶ್‍ಗೆ ಸಮಾಧಾನ ಮಾಡಿದ್ದಾರೆ.
ಬಿಗ್‍ಮನೆಯಲ್ಲಿ ಹೆಚ್ಚಾಗಿ ಕಣ್ಣೀರು ಹಾಕುವ ಸದಸ್ಯೆ ಎಂದರೆ ದಿವ್ಯಾ ಸುರೇಶ್. ಅವರಿಗೆ ಕೊಂಚ ಬೇಸರವಾದರೂ ಮೊದಲು ಕಣ್ಣೀರು ಬರುತ್ತದೆ. ಆದರೆ 2 ನೇ ವಾರಕ್ಕೆ ದಿವ್ಯಾಗೆ ಮನೆ ನೆನಪು ಕಾಡುತ್ತಿದೆ. ಮನೆಯಲ್ಲಿ ಜಗಳ, ಸದಸ್ಯರು ಹೊಂದಿಕೊಳ್ಳುತ್ತಿಲ್ಲ, ಮನೆ ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಾರೆ. ಆದರೆ ದಿವ್ಯಾ ಸುರೇಶ್ ನನಗೆ ಎಲ್ಲಾ ಅಮ್ಮ, ಅಣ್ಣನೇ ಎಂದು ಹೇಳುವಾಗ ಅವರು ಒಂಟಿ ಎಂದು ಭಾವಿಸುತ್ತಿದ್ದಾರೆ ಎಂದು ಅವರ ಮಾತಿನ ದಾಟಿಯಲ್ಲಿಯೇ ಅರ್ಥವಾಗುತ್ತಿತ್ತು.
ವಾರಾಂತ್ಯದ ಕಟ್ಟೆ ಪಂಚಾಯತ್ತಿಯಲ್ಲಿ ಕಾಯುತ್ತಿರುವ ಬಿಗ್‍ಬಾಸ್ ಅಭಿಮಾನಿಗಳಿಗೆ ಮನೆ ಮಂದಿ ಕಣ್ಣೀರು, ಹೈಡ್ರಾಮಾ, ಜಗಳ. ಮಾತು ಎಲ್ಲಾ ಸಹಜವಾಗಿದೆ. ಈ ವಾರ ಯಾರು ಮನೆಯಿಂದ ಆಚೆ ಹೋಗುತ್ತಾರೆ ಎನ್ನುವ ಕೂತುಹೊಲ ಇದೆ. ಏನೇ ಆಗಲಿ ಬಿಗ್ ಮನೆಯ ಸದಸ್ಯರ ಡ್ರಾಮಾ ಹಿಂದೆ ನಿಂತು ಸೂತ್ರದ ಗೊಂಬೆಯಂತೆ ಆಡಿಸುತ್ತಿರುವವನು ಬಿಗ್‍ಬಾಸ್.
-

ದಿವ್ಯ ಸುರೇಶ್ ಪ್ರೀತಿಸ್ತಿದ್ದ ಬ್ರೋ ಗೌಡ – ಬಂಡೆಯಾಗಿ ಎದುರು ಬಂದ ಲ್ಯಾಗ್ ಮಂಜು
ಬೆಂಗಳೂರು: ಎರಡನೇ ಬಾರಿ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಬ್ರೋ ಗೌಡ ಈ ಹಿಂದೆ ಸ್ಪರ್ಧಿಯೊಬ್ಬರನ್ನು ಲವ್ ಮಾಡುತ್ತಿರುವುದಾಗಿ ಕೆಲವು ಸದಸ್ಯರ ಮುಂದೆ ಹೇಳಿಕೊಂಡಿದ್ದರು. ಅಂತೆಯೇ ಆ ಬಳಿಕ ಶಮಂತ್ ಇಷ್ಟಪಟ್ಟ ಹುಡುಗಿ ಯಾರಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿತ್ತು. ಆದರೆ ಇದೀಗ ಬ್ರೋ ಗೌಡ ತಾನಿಷ್ಟಪಟ್ಟ ಹುಡುಗಿ ಯಾರೆಂಬುದನ್ನು ಬಹಿರಂಗಪಡಿಸಿದ್ದು, ನಿರಾಸೆಯನ್ನೂ ಕೂಡ ವ್ಯಕ್ತಪಡಿಸಿದ್ದಾರೆ.

ಹೌದು. ಶಮಂತ್ ಅವರು ತಾನಿಷ್ಟಪಟ್ಟ ಹುಡುಗಿಯ ಹೆಸರನ್ನು ಬಹಿರಂಗಪಡಿಸಿದ್ದು, ಆಕೆಯನ್ನು ಪ್ರೀತಿಸುತ್ತಿದ್ದೆ. ಆದರೆ ಮಂಜು ಪಾವಗಡ ಬಂಡೆಯಾಗಿ ಅಡ್ಡಿಯಾದರು ಎನ್ನುವ ಮೂಲಕ ತಮಗಾದ ನಿರಾಸೆಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮೊದಲ ನೋಟದಲ್ಲೇ ಪ್ರೀತಿಯಾಗಿದ್ದು ಅಲ್ಲದೆ ಅದರಿಂದ ಆದ ನಿರಾಸೆಯನ್ನು ಕೂಡ ಇತರ ಸದಸ್ಯರೊಂದಿಗೆ ಹೇಳಿಕೊಂಡಿದ್ದಾರೆ.

ಮಿಸ್ ಇಂಡಿಯಾ ಸೌತ್ ವಿಜೇತೆ ದಿವ್ಯ ಸುರೇಶ್ ಅವರನ್ನೇ ಬ್ರೋ ಗೌಡ ಇಷ್ಟಪಟ್ಟಿದ್ರಂತೆ. ಆದರೆ ಬ್ರೋ ಗೌಡ ಪಾಲಿಗೆ ಮಂಜು ಬಂಡೆಯಾಗಿ ಎದುರು ನಿಂತಿರುವುದಾಗಿ ಮನೆಯ ಇತರ ಸದಸ್ಯರ ಬಳಿ ಬ್ರೋ ಗೌಡ ತಮ್ಮ ನಿರಾಸೆಯನ್ನು ತೋರ್ಪಡಿಸಿದ್ದಾರೆ.

ಗೀತಾ ಭಟ್, ಚಂದ್ರಕಲಾ ಮೋಹನ್, ಧನುಶ್ರೀ ಹಾಗೂ ಶಮಂತ್ ನಾಲ್ಕು ಜನ ಕಿಚನ್‍ನಲ್ಲಿರುವಾಗ ಶಮಂತ್ ಪ್ರೇಮ ವಿಚಾರ ಚರ್ಚೆಯಾಗಿದೆ. ಈ ಹಿಂದೆ ವಿಷಯ ನಿರ್ಮಲಾ ಮತ್ತು ಗೀತಾ ಭಟ್ ಇಬ್ಬರಿಗೆ ಮಾತ್ರ ತಿಳಿದಿತ್ತು. ಆದರೆ ಹುಡುಗಿ ಯಾರೆಂದು ಗೊತ್ತಾಗದೆ ಗೀತಾ ಅವರು ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದರು. ಇದೀಗ ಕಿಚನ್ ನಲ್ಲಿ ನಡೆದ ಚರ್ಚೆಯಲ್ಲಿ ಶಮಂತ್ ತಾನು ಇಷ್ಟ ಪಡುತ್ತಿರುವ ಹುಡುಗಿ ದಿವ್ಯ ಸುರೇಶ್ ಎಂದು ಬಹಿರಂಗಪಡಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಇತ್ತ ದಿವ್ಯ ಸುರೇಶ್ ಹಾಗೂ ಮಂಜು ಪಾವಗಡ ಗೆಳೆತನ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಾ ಬರುತ್ತಿದೆ. ಮೊದ ಮೊದಲು ಮಂಜು ಅವರ ತಮಾಷೆಯ ಮಾತುಗಳಿಗೆ ಸಿಟ್ಟುಮಾಡಿಕೊಳ್ಳುತ್ತಿದ್ದ ದಿವ್ಯ ಇದೀಗ ತಾವು ಕೂಡ ಸಪೋರ್ಟ್ ಮಾಡುತ್ತಿದ್ದಾರೆ. ಅಲ್ಲದೆ ಮಂಜು ಮತ್ತು ದಿವ್ಯಗೆ ಮದುವೆ ಆಗಿದೆ. ಅವರಿಬ್ಬರು ಗಂಡ-ಹೆಂಡತಿ ಎಂದೆಲ್ಲ ಮನೆಯವರು ರೇಗಿಸಿದ್ದಾರೆ.

ಒಟ್ಟಿನಲ್ಲಿ ಪ್ರತಿ ಬಿಗ್ ಬಾಸ್ ಶೋನಲ್ಲಿ ಒಂದೊಂದು ಪ್ರೇಮ ಕಥೆಗಳು ಹೊರಬರುತ್ತಿದ್ದಂತೆಯೇ ಈ ಬಾರಿಯೂ ಅಂಥದ್ದೇ ಕಥೆಯೊಂದು ಹೊರಬರುವ ಸಾಧ್ಯತೆಗಳಿವೆ. ಆದರೆ ತ್ರಿಕೋನ ಪ್ರೇಮ ಕಥೆ ಎಲ್ಲಿವರೆಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದುನೋಡಬೇಕಿದೆ.
