Tag: ದಿವ್ಯ ಉರುಡುಗ

  • ಯೋಗರಾಜ್ ಭಟ್ಟರು ಮತ್ತೊಂದು ಎಣ್ಣೆ ಸಾಂಗ್ ಬಿಟ್ರು

    ಯೋಗರಾಜ್ ಭಟ್ಟರು ಮತ್ತೊಂದು ಎಣ್ಣೆ ಸಾಂಗ್ ಬಿಟ್ರು

    ನಿರ್ದೇಶಕ ಯೋಗರಾಜ್ ಭಟ್ ‘ಎಣ್ಣೆ ಸಾಂಗ್’ ಪಿತಾಮಹಾ ಆಗುವತ್ತ ದಾಪುಗಾಲು ಇಡುತ್ತಿದ್ದಾರೆ. ಒಂದರ ಮೇಲೊಂದು ಎಣ್ಣೆ ಸಾಂಗ್ ಬರೆಯುತ್ತಿದ್ದಾರೆ. ಈಗಾಗಲೇ ‘ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು’ ಹಾಡು ಕುಡಿಯುವವರಿಗೆ ಹಾಗೂ ಕುಡಿಯದವರಿಗೆ ಇಬ್ಬರಿಗೂ ಮೆಚ್ಚುಗೆಯಾಗಿತ್ತು. ಇದೀಗ “ಗಿರ್ಕಿ” ಚಿತ್ರಕ್ಕಾಗಿ “ಗ್ಲಾಸು ಗ್ಲಾಸಿಗೆ  ತಾಗೊ ಟೈಮಲಿ ದೇಶ ಚಿಂತನೆ ಮಾಡೋಣ” ಎಂಬ ಹಾಡನ್ನು ಬರೆದಿದ್ದಾರೆ. ವಿಜಯ್ ಪ್ರಕಾಶ್ ಹಾಡಿದ್ದಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ಇತ್ತೀಚೆಗೆ ಹಾಡನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. A2 music ಸಂಸ್ಥೆ ಈ ಹಾಡನ್ನು ಹೊರತಂದಿದೆ.  ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಈ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎಣ್ಣೆ ಪ್ರಿಯರಿಗೆ ಮತ್ತೊಂದು ಒಳ್ಳೆಯ ಹಾಡು ಸಿಕ್ಕಿದೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ “ಗಿರ್ಕಿ” ಚಿತ್ರವನ್ನು  ಯೋಗರಾಜ್ ಭಟ್ ಅವರ ಶಿಷ್ಯ ವೀರೇಶ್ ಪಿ.ಎಂ ನಿರ್ದೇಶಿಸಿದ್ದಾರೆ‌. ಲವ್, ಥ್ರಿಲ್ಲರ್  ಹಾಗೂ ಕಾಮಿಡಿ  ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ವಾಸುಕಿ ಭುವನ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ‌. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ನವೀನ್ ಕುಮಾರ್ ಛಲ್ಲ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನವಿರುವ ಈ ಚಿತ್ರಕ್ಕೆ ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ರಾಮು, ಮೋಹನ್ ಅವರ ನೃತ್ಯ ನಿರ್ದೇಶನವಿದೆ. ತಮ್ಮ ಕಾಮಿಡಿ ಮೂಲಕ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ.

  • ಅಂದು ಅವಮಾನ, ಇಂದು ಸನ್ಮಾನ- ವೈಷ್ಣವಿ ಬಗ್ಗೆ ಮಂಜು ಮೆಚ್ಚುಗೆ ಮಾತು

    ಅಂದು ಅವಮಾನ, ಇಂದು ಸನ್ಮಾನ- ವೈಷ್ಣವಿ ಬಗ್ಗೆ ಮಂಜು ಮೆಚ್ಚುಗೆ ಮಾತು

    ಎರಡೇ ಟಾಸ್ಕ್ ನಲ್ಲಿ ಮನೆ ಮಂದಿಯ ಆಲೋಚನೆ ಬದಲಿಸಿದ ವೈಷ್ಣವಿ ಗೌಡ?!

    ಬೆಂಗಳೂರು: ಬಿಗ್ ಬಾಸ್ ಸೀಸನ್ 8 ಶುರುವಾಗಿ ಹತ್ತತ್ತಿರ ಐದನೇ ವಾರ ಕಂಪ್ಲೀಟ್ ಆಗ್ತಾ ಬರ್ತಾ ಇದೆ. ಈ ಐದು ವಾರದಲ್ಲಿ ಯಾವ ಕಂಟೆಸ್ಟೆಂಟ್ ಹೇಗೆ..? ಅವರು ಸ್ಟ್ರಾಂಗಾ..? ವೀಕಾ ಅನ್ನೋದು ಒಂದು ರೌಂಡ್ ಪಿಚ್ಚರ್ ಸಿಕ್ಕಿದೆ. ಆರಂಭದಿಂದಲೂ ಬಿಗ್ ಮನೆಯಲ್ಲಿ ವೀಕ್ ಎನಿಸಿಕೊಂಡವರು ಈ ವಾರ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅವರೇ ವೈಷ್ಣವಿ ಗೌಡ.. ವೈಷ್ಣವಿ ಗೌಡ ನಿನ್ನೆ ಮೊನ್ನೆ ನಡೆದ ಎರಡು ಟಾಸ್ಕ್ ನಲ್ಲಿ ಯಾರೂ ನಿರೀಕ್ಷಿಸಿರದ ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ.

    ಬಿಗ್ ಬಾಸ್ ಕ್ಯಾಪ್ಟನ್ಸಿ ಅಂಗವಾಗಿ ನೀರಿಗೆ ಎಲ್ಲೆ ಎಲ್ಲಿದೆ ಹಾಗೂ ಸುತ್ತಮುತ್ತಲು ಹಗ್ಗಸುತ್ತಲು ಟಾಸ್ಕ್ ನೀಡಿದ್ದರು. ಈ ಎರಡು ಟಾಸ್ಕ್ ನಲ್ಲಿ ವೈಷ್ಣವಿ ಗೌಡ ಉತ್ತಮ ಪ್ರದರ್ಶನ ನೀಡಿ ಶುಭಾ ನೇತೃತ್ವದ ಜಾತ್ರೆ ಟೀಂ ಗೆಲುವಿಗೆ ಕಾರಣರಾಗಿದ್ದಾರೆ. ರಾತ್ರಿ, ಹಗಲು, ಊಟ ತಿಂಡಿ ಎಲ್ಲವನ್ನೂ ಬಿಟ್ಟು ನೀರಿಗೆ ಎಲ್ಲೆ ಎಲ್ಲಿದೆ ಟಾಸ್ಕ್ ಕಂಪ್ಲೀಟ್ ಮಾಡಿದ್ದರು. ಅದೇ ರೀತಿ ಸುತ್ತಮುತ್ತಲು ಹಗ್ಗಸುತ್ತಲು ಟಾಸ್ಕ್ ನಲ್ಲಿ ದೇಹಕ್ಕೆ ಹಗ್ಗ ಸುತ್ತಿಕೊಂಡು ಕಂಬಕ್ಕೆ ವರ್ಗಾವಣೆ ಮಾಡುವಲ್ಲಿ ಮೊದಲು ಯಶಸ್ಸು ಗಳಿಸಿದರು. ವೈಷ್ಣವಿ ಈ ಉತ್ಸಾಹ, ಆಟದ ಪರ್ಫಾರ್ಮೆನ್ಸ್ ಕಂಡು ಎದುರಾಳಿ ಟೀಂನ ಕ್ಯಾಪ್ಟನ್ ದಿವ್ಯಾ ಉರುಡುಗ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಅದೇ ರೀತಿ ವೈಷ್ಣವಿ ಆಟಕ್ಕೆ ಮನೆ ಮಂದಿಯೆಲ್ಲಾ ಶಾಬ್ಬಾಸ್ ಗಿರಿ ಕೊಟ್ಟಿದ್ದಾರೆ. ಅದ್ರಲ್ಲೂ ಮಂಜು ವೈಷ್ಣವಿ ವೀಕ್.. ಅವರು ಇನ್ನೂ ಆಟವಾಡ್ತಿಲ್ಲ.. ಮನೆಯಲ್ಲಿ ಎಲ್ಲರೊಂದಿಗೆ ಓಪನ್ ಅಪ್ ಆಗ್ತಿಲ್ಲ ಅಂತಾ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದರು. ಬಿಗ್ ಬಾಸ್ ನೀಡಿದ್ದ ಚಟುವಟಿಕೆಯೊಂದರಲ್ಲಿ ತಮ್ಮ ಸ್ಪರ್ಧಿಯಲ್ಲ ಎಂದು ಲ್ಯಾಗ್ ಮಂಜು ವೈಷ್ಣವಿ ಫೋಟೋವನ್ನು ಕಸದ ಬುಟ್ಟಿಗೆ ಹಾಕುತ್ತಿದ್ದರು. ನಾಮಿನೇಟ್ ಸಂದರ್ಭದಲ್ಲಿಯೂ ವೈಷ್ಣವಿ ವೀಕ್ ಎಂದು ನಾಮಿನೇಟ್ ಮಾಡುತ್ತಿದ್ದರು. ಆದ್ರೆ ಈ ವಾರದ ಟಾಸ್ಕ್ ನಲ್ಲಿ ವೈಷ್ಣವಿ ಗೌಡ ಆಟ ಕಂಡು ಲ್ಯಾಗ್ ಮಂಜು ಸಖತ್ ಖುಷಿಪಟ್ಟಿದ್ದಾರೆ.

    ಈ ಬಗ್ಗೆ ನಿನ್ನೆ ವೈಷ್ಣವಿಯೊಂದಿಗೆ ಲ್ಯಾಗ್ ಮಂಜು ಚರ್ಚೆ ನಡೆಸಿದ್ದಾರೆ. ಗಾರ್ಡನ್ ಏರಿಯಾದಲ್ಲಿದ್ದ ವೈಷ್ಣವಿ ತಬ್ಬಿಕೊಂಡು ಮಂಜು, ನಾನು ಅಂದುಕೊಂಡಿರಲಿಲ್ಲ ಅದ್ಭುತವಾಗಿ ಆಡವಾಡಿದೆ. ನಿನ್ನ ಆಟ ನೋಡಿ ಸಿಕ್ಕಾಪಟ್ಟೆ ಖುಷಿಯಾಯ್ತು. ನಿನ್ನ ಬಗ್ಗೆ ಇದ್ದ ಗೌರವ ಎರಡು ಟಾಸ್ಕ್ ನಿಂದ ಡಬ್ಬಲ್ ಆಗಿದೆ ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ವೈಷ್ಣವಿ ಮಂಜು ಮಾತುಗಳನ್ನು ಕೇಳಿ ಖುಷಿಯಾಗಿ ಧನ್ಯವಾದ ತಿಳಿಸಿದ್ದಾರೆ.

    ಒಟ್ನಲ್ಲಿ ವೈಷ್ಣವಿ ತಮ್ಮನ್ನು ವೀಕ್ ಎಂದು ಹೇಳಿದವರಿಗೆ ತಮ್ಮದೇ ಧಾಟಿಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ವೈಷ್ಣವಿಯ ಪರ್ಫಾರ್ಮೆನ್ಸ್ ಕಂಡು ಇತರೆ ಸ್ಪರ್ಧಿಗಳಲ್ಲಿ ಇದೇ ರೀತಿ ಆಟವಾಡುವ ಉತ್ಸಾಹ, ಹಂಬಲ ಹೆಚ್ಚುತ್ತಾ..? ಯಾವುದಕ್ಕೂ ಕಾದು ನೋಡಬೇಕು.

  • ‘ಗರ್ಲ್‍ಫ್ರೆಂಡ್’ ಎಂದಿದ್ದಕ್ಕೆ ಪ್ರಶಾಂತ್ ವಿರುದ್ಧ ದಿವ್ಯ ಕೆಂಡ

    ‘ಗರ್ಲ್‍ಫ್ರೆಂಡ್’ ಎಂದಿದ್ದಕ್ಕೆ ಪ್ರಶಾಂತ್ ವಿರುದ್ಧ ದಿವ್ಯ ಕೆಂಡ

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಗಡಿಗೋಪುರ ಟಾಸ್ಕ್ ಬಹಳ ರೋಚಕವಾಗಿ ಸಾಗಿತ್ತು. ಈ ನಡುವೆ ಬಿಗ್‍ಬಾಸ್ ಕಡೆಯಾದಾಗಿ ನೀಡಿದ ಅವಕಾಶದಲ್ಲಿ ಜಾತ್ರೆ ತಂಡದ ಸದಸ್ಯರು ಮತ್ತು ಅನುಬಂಧ ತಂಡದ ಸದಸ್ಯರ ನಡುವೆ ಆಟದ ನಡುವೆ ಮಾತಿನ ಚಕಮಕಿಯು ಜೋರಾಗಿತ್ತು. ಈ ವೇಳೆ ಪ್ರಶಾಂತ್ ಸಂಬರಗಿ ಹೇಳಿದ ಆ ಒಂದು ಮಾತಿನಿಂದ ಸಿಟ್ಟಿಗೆದ್ದ ದಿವ್ಯ ಉರುಡುಗ ಪ್ರಶಾಂತ್‍ಗೆ ವಾರ್ನಿಂಗ್ ಕೊಟ್ಟಿದ್ದಾರೆ.

    ಗಡಿಗೋಪುರ ಟಾಸ್ಕ್ ಅಂಗವಾಗಿ ಇಟ್ಟಿಗೆ ಹೊಡೆಯುವ ಸ್ಪರ್ಧೆಯಲ್ಲಿ ಎರಡು ತಂಡಗಳ ನಡುವೆ ಭಾರೀ ಪೈಪೋಟಿ ನಡೆಯಿತು. ಈ ಸಂದರ್ಭ ದಿವ್ಯ ಉರುಡುಗ ಕೈಯಲ್ಲಿದ್ದ ಒಂದು ಇಟ್ಟಿಗೆಯನ್ನು ಪ್ರಶಾಂತ್ ಎಳೆದುಕೊಂಡು ಹೊಡೆದು ಹಾಕಿದರು. ಇದನ್ನು ಗಮನಿಸಿದ ಅರವಿಂದ್ ಇದು ಫೌಲ್ ಎಂದು ಪ್ರಶಾಂತ್ ವಿರುದ್ಧ ಸಿಟ್ಟಿಗೆದ್ದರು. ಇದರಿಂದ ಕೆರಳಿದ ಪ್ರಶಾಂತ್ ನಿನಗೆ ನಿನ್ನ ಗರ್ಲ್‍ಫ್ರೆಂಡ್ ಕೈ ಹಿಡಿದಿದಕ್ಕೆ ಬೇಜಾರಾಗಿದಲ್ವ ಎಂದು ಪ್ರಶ್ನಿಸಿದರು. ಇದನ್ನು ಕೇಳಿಸಿಕೊಂಡ ದಿವ್ಯ ಉರುಡುಗ, ನೆಟ್ಟಗೆ ಮಾತನಾಡಿ ಎಂದು ಪ್ರಶಾಂತ್‍ಗೆ ವಾರ್ನಿಂಗ್ ಕೊಟ್ಟರು.

    ನಂತರ ಪ್ರಶಾಂತ್ ಬಳಿ ಬಂದ ರಾಜೀವ್ ನೀನು ಡೈರೆಕ್ಟ್ ಆಗಿ ಅರವಿಂದ್ ಜೊತೆ ಜಗಳ ಮಾಡು ಇದನ್ನು ಹೊರತು ಪಡಿಸಿ ಹುಡುಗಿಯರ ಹೆಸರನ್ನು ಹೇಳಿಕೊಂಡು ಜಗಳ ಮಾಡಬೇಡ ಎಂದರು. ಈ ವೇಳೆ ಮತ್ತೆ ಸಿಟ್ಟಿಗೆದ್ದ ದಿವ್ಯ ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಖಡಕ್ ಆಗಿ ಹೇಳಿದರು. ನಂತರ ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ವಿಶ್ವ ಮಧ್ಯಪ್ರವೇಶಿಸಿ ಎರಡು ತಂಡವನ್ನು ಸಮಾಧಾನ ಮಾಡಿ ಆಟ ಮುಂದುವರಿಯುವಂತೆ ನೋಡಿಕೊಂಡರು.

    ಈ ಗಲಾಟೆಯ ನಂತರ ದಿವ್ಯ ಸುರೇಶ್ ದಿವ್ಯ ಉರುಡುಗ ಬಳಿ, ಪ್ರಶಾಂತ್ ಅವರು ಗರ್ಲ್‍ಫ್ರೆಂಡ್ ಎಂದು ಹೇಳಿದ್ದಾರೆ ಹೌದು. ಆದರೆ ದಿವ್ಯ ಎಂದು ಹೆಸರನ್ನು ಹೇಳಲಿಲ್ಲ. ಈ ಸಂದರ್ಭದಲ್ಲಿ ನಾನೂ ಸ್ಥಳದಲ್ಲಿ ಇದ್ದೆ. ಹೆಸರನ್ನು ಹೇಳಿ ಮಾತನಾಡಿದ್ದರೆ ನೀನು ಹೇಳಿದ ವಿಷಯ ಸರಿ ಎಂದು ಹೇಳಿ ಸಂಬರಗಿ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಬಿಗ್ ಮನೆಯ ತುಂಬಾ ಆಟ, ಕಿತ್ತಾಟ, ವಾರ್ನಿಂಗ್ ಎಲ್ಲವೂ ಸರ್ವೇಸಾಮಾನ್ಯವಾಗಿದ್ದು, ಮುಂದಿನಗಳಲ್ಲಿ ಇದು ಯಾವರೀತಿ ಮುಂದುವರಿಯುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

  • ಬಿಗ್ ಮನೆಯಲ್ಲಿ ಸ್ವೀಟ್  ಚಾಕ್ಲೇಟ್  ಕದ್ದು ತಿಂದಿದ್ದು ಯಾರು?

    ಬಿಗ್ ಮನೆಯಲ್ಲಿ ಸ್ವೀಟ್ ಚಾಕ್ಲೇಟ್ ಕದ್ದು ತಿಂದಿದ್ದು ಯಾರು?

    ಬೆಂಗಳೂರು: ಬಿಗ್ ಮನೆಯಲ್ಲಿ ನಿನ್ನೆ ನಡೆದ ಟಾಸ್ಕ್ ನಲ್ಲಿ ಗೆದ್ದುಬೀಗಿದ್ದ ಶುಭಾ ಪೂಂಜಾ ನೇತೃತ್ವದ ಜಾತ್ರೆ ಟೀಂಗೆ ಗೆಲುವಿನ ಉಡುಗೊರೆಯಾಗಿ ಚಾಕೊಲೇಟ್ ಸಿಕ್ಕಿತ್ತು. ಇದನ್ನು ತಿಂದು ಉಳಿದದ್ದನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಪ್ರಶಾಂತ್ ಬೆಳಿಗ್ಗೆ ಎದ್ದು ಚಾಕೊಲೇಟ್‍ನ್ನು ಹುಡುಕಾಡಿದಾಗ ಫ್ರಿಡ್ಜ್ ನಲ್ಲಿ ಇರಲಿಲ್ಲ ಈ ವೇಳೆ ಪ್ರಶಾಂತ್ ಸಂಬರಗಿ, ಡಿ ಟೀಂನವರು ಚಾಕೊಲೇಟ್ ಕದ್ದು ತಿಂದಿದ್ದಾರೆ ಎಂದು ಆರೋಪ ಹೊರಿಸಿದ್ದಾರೆ.

    ಚಾಕೊಲೇಟ್ ಫ್ರಿಡ್ಜ್ ನಲ್ಲಿ ಕಾಣಿಸಿಸದೆ ಇದ್ದಾಗ ಪ್ರಶಾಂತ್ ಅತ್ತ ಇತ್ತ ಹುಡುಕಾಡಿದ್ದಾರೆ. ನಂತರ ಪ್ರಿಡ್ಜ್ ನ ಪಕ್ಕದಲ್ಲೇ ಇದ್ದ ಬಾಕ್ಸ್ ಒಂದರಲ್ಲಿ ಚಾಕೊಲೇಟ್ ಪ್ರಶಾಂತ್ ಅವರಿಗೆ ಸಿಕ್ಕಿದೆ ಈ ವೇಳೆ ಇದು ಇಲ್ಲಿ ಯಾರು ಇಟ್ಟಿದ್ದಾರೆ ಎಂದು ನನಗೆ ಗೊತ್ತು. ಅಲ್ಲಿ ಇಟ್ಟಿರುವುದರೊಂದಿಗೆ ಇದರಲ್ಲಿದ್ದ ಚಾಕೊಲೇಟ್‍ನಲ್ಲಿ ಒಂದು ಪೀಸ್ ತಿಂದಿದ್ದಾರೆ. ನಾನು ಇಲ್ಲಿ ಬಂದು ಚಾಕೊಲೇಟ್ ತೆಗೆದುಕೊಂಡಿರುವುದನ್ನು ನೋಡಿದ್ದೇನೆ ಎಂದು ಎದುರಾಳಿ ತಂಡದ ವಿರುದ್ಧ ಆರೋಪ ಮಾಡಿದ್ದಾರೆ.

    ಇತ್ತ ಅಲ್ಲೇ ಪಕ್ಕದಲ್ಲೇ ಇದ್ದ ದಿವ್ಯ ಉರುಡುಗ ತಂಡ ಇದನ್ನು ಗಮನಿಸುತ್ತಿದ್ದಂತೆ, ಚಾಕೊಲೇಟ್ ತೆಗೆದಿರುವುದು ನಿಜ ಆದರೆ ತಿಂದಿದ್ದಾರೆ ಎಂದು ಆರೋಪ ಮಾಡಿರುವುದು ಸುಳ್ಳು ಎಂದು ಚರ್ಚೆ ನಡೆಸಿದ್ದಾರೆ. ಈ ವೇಳೆ ದಿವ್ಯ ಉರುಡುಗ ನಾನು ಚಾಕೊಲೇಟ್ ತೆಗೆದಿದ್ದು ನಿಜ ಅವರು ಬಂದಾಗ ಆ ಬಾಕ್ಸ್ ಒಳಗೆ ಹಾಕಿ ಬಂದಿದ್ದೆ, ಆದರೆ ನಾನು ಚಾಕೊಲೇಟ್‍ನಿಂದ ಒಂದು ಪೀಸ್ ಮುಟ್ಟಿಲ್ಲ ಎಂದಿದ್ದಾರೆ.

    ಈ ವೇಳೆ ತಂಡದ ಸದಸ್ಯ ರಾಜೀವ್ ಅವರು ಚಾಕೊಲೇಟ್ ತಿಂದಿದ್ದೇವೆಂದು ಸುಳ್ಳು ಹೇಳುತ್ತಿದ್ದಾರೆ ಕ್ಯಾಮೆರಾ ನೋಡಿದರೆ ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತಿದೆ ಎಂದು ತಮ್ಮ ತಂಡವನ್ನು ಸಮರ್ಥಿಸಿಕೊಂಡಿದ್ದಾರೆ.

    ಚಾಕೊಲೇಟ್ ಕದ್ದು ತಿಂದಿಲ್ಲ ಎಂದು ದಿವ್ಯಾ ಟೀಂ ಹೇಳುತ್ತಿರುವುದು ನಿಜನಾ? ಅಥವಾ ಪ್ರಶಾಂತ್ ಸಂಬರಗಿ ಮಾಡಿರುವ ಆರೋಪ ನಿಜಾನ? ಎನ್ನುವುದನ್ನು ಬಿಗ್‍ಬಾಸ್ ತಮ್ಮ ಕ್ಯಾಮೆರಾದಲ್ಲಿ ಸೆರೆಮಾಡಿದ್ದು ಯಾರು ಸತ್ಯ ಹೇಳುತ್ತಿದ್ದಾರೆ ಎನ್ನುವುದು ಮುಂದೆ ತಿಳಿಯಲಿದೆ.

     

  • ಶುಭಾ ಜೊತೆ ನಮಗೆ ಇನ್ನೊಂದು ಮದ್ವೆ ಊಟ ಪಕ್ಕಾ ಅಂದ್ರು ಗೀತಾ..!

    ಶುಭಾ ಜೊತೆ ನಮಗೆ ಇನ್ನೊಂದು ಮದ್ವೆ ಊಟ ಪಕ್ಕಾ ಅಂದ್ರು ಗೀತಾ..!

    ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯ ಉರುಡುಗ ಜೋಡಿ ಟಾಸ್ಕ್ ಆಡಿ ಗೆದ್ದಿದ್ದರು. ಅದಾದ ಬಳಿಕದಿಂದ ಈ ಜೋಡಿ ಬಗ್ಗೆ ಮನೆಮಂದಿಯೆಲ್ಲಾ ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ. ಈ ಕುರಿತು ಗೀತಾ ಹಾಗೂ ಪ್ರಶಾಂತ್ ಸಂಬರ್ಗಿ ಕೂಡ ಭಾರೀ ಚರ್ಚೆಯನ್ನೇ ನಡೆಸಿದ್ದಾರೆ.

    ಹೌದು. ಜೋಡಿ ಟಾಸ್ಕ್‍ನಲ್ಲಿ ಆಡಲು ದಿವ್ಯ ಉರುಡುಗ ಅವರು ಅರವಿಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಬಳಿಕದಿಂದ ಇಬ್ಬರೂ ಹೆಚ್ಚು ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ದಿವ್ಯ ಹಾಗೂ ಅರವಿಂದ್ ಮಧ್ಯೆ ಏನೋ ನಡೆಯುತ್ತಿದೆ ಅಂತ ಮನೆ ಮಂದಿ ಪಿಸು ಪಿಸು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಹಿಂದೆ ದಿವ್ಯ ಉರುಡುಗ ಅವರು ಪ್ರಶಾಂತ್ ಸಂಬರ್ಗಿ ಜೊತೆ ಚೆನ್ನಾಗಿಯೇ ಇದ್ದರು. ಆದರೆ ಜೋಡಿ ಟಾಸ್ಕ್ ಬಂದ ಬಳಿಕ ದಿವ್ಯ ಉರುಡುಗ ವರ್ತನೆ ಬದಲಾಗಿದೆ ಎಂದು ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಮಾತನಾಡಿಕೊಂಡಿದ್ದಾರೆ.

    ಇತ್ತ ಗೀತಾ ಹಾಗೂ ಸಂಬರ್ಗಿ ಕೂಡ ದಿವ್ಯ, ಅರವಿಂದ್ ಜೋಡಿ ಬಗ್ಗೆ ರಾತ್ರಿ ಚರ್ಚೆ ನಡೆಸಿದ್ದಾರೆ. ಇವರು ಲವ್ ಮಾಡ್ತಿದ್ದಾರೋ ಹೇಗೆ ಎಂದು ಗೀತಾ ಅವರು ದಿವ್ಯ ಬಳಿಯೇ ಹಲವು ಬಾರಿ ಪ್ರಶ್ನೆ ಮಾಡಿದ್ದರಂತೆ. ಆಗ ದಿವ್ಯ, ಜೋಡಿ ಟಾಸ್ಕ್ ಅಂತ ಒಟ್ಟಾಗಿ ಇದ್ದೇವೆ ಎಂದು ಉತ್ತರಿಸಿರುವುದಾಗಿ ಸಂಬರ್ಗಿ ಬಳಿ ಗೀತಾ ಹೇಳಿದ್ದಾರೆ.

    ಅರವಿಂದ್ ಅವರು ದಿವ್ಯಾರನ್ನು ಲವ್ ಮಾಡುವ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಓಪನ್ ಆಗಿದ್ದಾರೆ ಎಂದು ಸಂಬರ್ಗಿ ಹೇಳಿದ್ದಾರೆ. ಸಂಬರ್ಗಿ ಮಾತಿಗೆ ದನಿಗೂಡಿಸಿದ ಗೀತಾ, ಶುಭಾ ಪೂಂಜಾ ಮದುವೆ ನಂತರದಲ್ಲಿ ಇನ್ನೊಂದು ಮದುವೆ ಊಟ ಸಿಗಬಹುದು ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ಜೋಡಿ ಟಾಸ್ಕ್ ಮುಗಿದು 2 ದಿನವಾದರೂ ಇವರಿಬ್ಬರು ಒಟ್ಟಾಗಿದ್ದಾರೆ ಅಂತ ಹೇಳಿಕೊಂಡು ಗೀತಾ, ಪ್ರಶಾಂತ್ ನಕ್ಕಿದ್ದಾರೆ. ಜೊತೆಗೆ ಒಳ್ಳೆಯದಾದರೆ ಆಗಲಿ, ನಾವು ಓವರ್ ಆಗಿ ಯೋಚನೆ ಮಾಡುತ್ತಿದ್ದೆವೆ ಅಂತ ಗೀತಾ ಅವರನ್ನೇ ಅವರು ಪ್ರಶ್ನೆ ಮಾಡಿಕೊಂಡಿದ್ದಾರೆ.

  • ಬಿಗ್ ಮನೆಗೆ ಬಂತು ವಿಶೇಷ ಗಿಫ್ಟ್

    ಬಿಗ್ ಮನೆಗೆ ಬಂತು ವಿಶೇಷ ಗಿಫ್ಟ್

    ಬೆಂಗಳೂರು: ವಾರದ ಕಟ್ಟೆ ಪಂಚಾಯ್ತಿಯಲ್ಲಿ ಮನೆಯ ಸದಸ್ಯರಿಗೆ ಕೆಲವು ಬುದ್ದಿಮಾತುಗಳನ್ನು ಸುದೀಪ್ ಹೇಳಿದ್ದಾರೆ. ಮನೆಯಿಂದ ಒಬ್ಬರು ಹೊರ ಹೋಗಿದ್ದಾರೆ. ಮುಂದಿನವಾರದ ಯೋಚನೆಯೊಂದಿಗೆ ಒಂಟಿ ಮನೆಯ ಸದಸ್ಯರು ದಿನವನ್ನು ಆರಂಭಿಸಿದ್ದಾರೆ. ಬೆಳ್ಳಂಬೆಳಗ್ಗೆನೆ ಬಿಗ್‍ಬಾಸ್ ಮನೆಗೆ ಒಂದು ವಿಶೇಷ ಗಿಫ್ಟ್ ಕಳುಹಿಸಿಕೊಟ್ಟಿದ್ದಾರೆ.

    ವಾರದ ಕಟ್ಟೆ ಪಂಚಾಯ್ತಿಯಲ್ಲಿ ಕಿಚ್ಚನಿಂದ ಚಪ್ಪಾಳೆ ಪಡೆದ ಬಿಗ್ ಮನೆಯ ಸದಸ್ಯರಾದ ಶಂಕರ್ ಅಶ್ವಥ ಅವರಿಗೆ ಬಿಗ್ ಬಾಸ್ ನಿಂದ ವಿಶೇಷವಾದ ಗಿಫ್ಟ್ ಬಂದಿದೆ. ಮನೆಯ ಸದಸ್ಯರು ನಗು ಮುಖದಿಂದ ಶುಭ ಕೋರಿದ್ದಾರೆ. ಆದರೆ ನಗು ಮುಖದ ಹಿಂದೆ ನಾವು ಮುಂದಿನವಾರ ಚಪ್ಪಾಳೆ ಪಡೆಯಬೇಕು ಹಂಬಲ ಪ್ರತಿಯೊಬ್ಬರಲ್ಲಿಯೂ ಇದೆ.

    ಬ್ರೋ ಗೌಡಾ ಇದೆಲ್ಲಾ ನಿಮ್ಮಿಂದ..!
    ಲಿವಿಂಗ್ ಏರಿಯಾದಲ್ಲಿ ಇರುವ ಫೋಟೋ ಪ್ರೇಮ್‍ಗಳಲ್ಲಿ ಈ ಫೋಟೋವನ್ನು ಜೋಡಿಸಿ ಎಂದು ಬಿಗ್ ಬಾಸ್ ಸೂಚಿಸಿದ್ದರು. ಫೋಟೋವನ್ನು ನೋಡುತ್ತಿದ್ದಂತೆ ಮನೆಯ ಸದಸ್ಯರು ಸಂತೋಷ ಪಟ್ಟಿದ್ದಾರೆ. ಈ ಚಪ್ಪಾಳೆಗೆ ಕಾರಣರಾದ ಮನೆಯ ಸದಸ್ಯರಿಗೆ ಶಂಕರ್ ಆಶ್ವಥ್ ಧನ್ಯವಾದವನ್ನು ಹೇಳಿದ್ದಾರೆ. ಹಾಗೇ ಬ್ರೋ ಗೌಡಾ ಅವರಿಗೆ ನೀವು ನನ್ನ ನಾಮಿನೇಟ್ ಮಾಡಿರುವುದು ಎಂದು ಹೇಳಿದ್ದಾರೆ. ಆಗ ಬ್ರೋ ಗೌಡಾ ತಮ್ಮದೇ ಆಗಿರುವ ಮುಗ್ದತೆಯಿಂದ ಅಶ್ವಥ್ ಅವರನ್ನು ತಬ್ಬಿಕೊಂಡಿದ್ದಾರೆ.

    ಬಾ ದಿ ಎಂದರೆ ಏನ್ ಅರ್ಥ ಗೊತ್ತಾ?
    ಗಾರ್ಡ್‍ನ್ ಏರಿಯಾದಲ್ಲಿ ಎಲ್ಲರೂ ಕುಳಿತ್ತಿದ್ದರು. ಈ ವೇಳೆ ದಿವ್ಯ ಉರುಡುಗ ಅವರು ಅರುಣ್ ಮತ್ತು ಮಂಜು ಇರುವ ಸ್ಥಳಕ್ಕೆ ಬರುತ್ತಾರೆ ಆಗ ಮಂಜು ಬಾ ದಿ ಎನ್ನುತ್ತಾರೆ. ಓ ಏನು ಕಾಫಿ ಏನಾದರೂ ಬೇಕಾ.. ದಿ ಎಂದರೆ ನೀವು ಅದಕ್ಕೆ ಕರೆಯುತ್ತಿರಾ ಹೇಳಿ ಎಂದು ದಿವ್ಯಾ ಹೇಳಿದ್ದಾರೆ. ಈ ವೇಳೆ ಮಂಜು, ಅರುಣ್ ಕೆಲವೆ ದಿನದಲ್ಲಿ ದಿವ್ಯ ಎಷ್ಟೊಂದು ಹುಶಾರಾಗಿ ಬಿಟ್ಟಿದ್ದಾರೆ ಎಂದು ಹೇಳಿ ನಕ್ಕಿದ್ದಾರೆ.

    ನಿಜವಾದ ಪ್ರೀತಿಗೆ ಕಣ್ಣಿಲ್ಲ..!
    ಪ್ರೀತಿ ಮಾಡೋದ್ ಗೊತ್ತಿಲ್ಲ ನನಗೆ.. ಪ್ರೀತಿ ಹುಟ್ಟೋದು ಒಳಗಿಂದಾನೆ ಗೊತ್ತಿಲ್ಲವಾ ನಿನಗೆ ಎಂದು ದಿವ್ಯನಿಗೆ ಹಾಡು ಹೇಳಿ ನಿಜವಾದ ಪ್ರೀತಿಗೆ ಕಣ್ಣಿಲ್ಲ ಎಂದಿದ್ದಾರೆ. ಇದನ್ನು ಕೇಳಿದ ದಿವ್ಯ ಉರುಡುಗ ಮಂಜಾ ನಿನಗೆ ಎಷ್ಟು ಪ್ರೀತಿ ಇದೆಯೋ ಎಂದು ಹೇಳಿ ನಕ್ಕಿದ್ದಾರೆ.

    ಬಿಗ್ ಮನೆಯಲ್ಲಿ ಜಗಳ, ಕಣ್ಣೀರು, ಕಾಮಿಡಿ ಎಲ್ಲ ಕಾಮನ್. ಬಿಗ್ ಬಾಸ್ ಹೌಸ್ ನಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣಕ್ಕಂತೂ ಕಮ್ಮಿ ಇಲ್ಲ. ಪ್ರತಿನಿತ್ಯ ಮನೆಯಲ್ಲಿ ಬಣ್ಣ ಬಣ್ಣದ ಕಥೆಗಳು ಸಿಗುತ್ತಲೆ ಇರುತ್ತವೆ. ಬಿಗ್ ಮನೆಯ ಸೂತ್ರದಗೊಂಬೆಗಳನ್ನು ಆಡಿಸುವಾತ ಬಿಗ್‍ಬಾಸ್ ಇವರೆಲ್ಲ ನೆಪ ಮಾತ್ರ.