Tag: ದಿವ್ಯಾ ಪಹುಜಾ

  • ಪಂಜಾಬ್‌ ಕಾಲುವೆಯಲ್ಲಿ ಬಿಸಾಡಿದ್ದ ಮಾಜಿ ಮಾಡೆಲ್‌ ಶವ ಹರಿಯಾಣದಲ್ಲಿ ಪತ್ತೆ – ಪ್ರಕರಣ ಭೇದಿಸಿದ್ದೇ ರೋಚಕ

    ಪಂಜಾಬ್‌ ಕಾಲುವೆಯಲ್ಲಿ ಬಿಸಾಡಿದ್ದ ಮಾಜಿ ಮಾಡೆಲ್‌ ಶವ ಹರಿಯಾಣದಲ್ಲಿ ಪತ್ತೆ – ಪ್ರಕರಣ ಭೇದಿಸಿದ್ದೇ ರೋಚಕ

    – 270 ಕಿಮೀವರೆಗೆ ಶವ ಹೊತ್ತೊಯ್ದು ಕಾಲುವೆಯಲ್ಲಿ ಶವ ಬಿಸಾಡಲಾಗಿತ್ತು
    – ಪೊಲೀಸರ ಎದುರು ತಪ್ಪೊಪ್ಪಿಕೊಂಡ ಆರೋಪಿ

    ಹರಿಯಾಣ: ಕಳೆದ ಒಂದು ವಾರಗಳ ಹಿಂದೆಯಷ್ಟೇ ಗುರುಗ್ರಾಮ್‌ನ ಹೋಟೆಲ್‌ವೊಂದರಲ್ಲಿ (Gurugram Hotel) ಗುಂಡು ಹಾರಿಸಿ ಹತ್ಯೆಗೀಡಾದ ಮಾಜಿ ಮಾಡೆಲ್‌ ದಿವ್ಯಾ ಪಹುಜಾ (Divya Pahuja) ಅವರ ಮೃತದೇಹವು ಹರಿಯಾಣದ ಕಾಲುವೆಯಲ್ಲಿ ಪತ್ತೆಯಾಗಿದೆ. ಪಂಜಾಬ್‌ನ ಭಾಕ್ರಾ ಕಾಲುವೆಯಲ್ಲಿ ಮೃತದೇಹವನ್ನು ಎಸೆಯಲಾಗಿದ್ದು, ಪಕ್ಕದ ರಾಜ್ಯಕ್ಕೆ ತೇಲಿಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಹರಿಯಾಣದ ಕಾಲುವೆಯಲ್ಲಿ ಪತ್ತೆಯಾದ ಮೃತದೇಹವನ್ನು ಗುರುಗ್ರಾಮ್‌ ಪೊಲೀಸರ ತಂಡವು ಹೊರತೆಗೆದು, ಪಹುಜಾ ಕುಟುಂಬಕ್ಕೆ ಫೋಟೋಗಳನ್ನ ಕಳುಹಿಸಿದೆ. ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಕೆ ಕೊಲೆಯಾದ ಮರುದಿನ (ಜನವರಿ 3) ಪಂಜಾಬ್‌ನ ಕಾಲುವೆಯಲ್ಲಿ ಶವವನ್ನು ಎಸೆದಿರುವುದಾಗಿ ಆರೋಪಿಗಳಲ್ಲಿ ಒಬ್ಬ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!

    ಶುಕ್ರವಾರ (ಜ.12) ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಆರೋಪಿ ಬಾಲರಾಜ್ ಗಿಲ್ ಎಂಬಾತನನ್ನು ಗುರುಗ್ರಾಮ್‌ ಪೊಲೀಸರ ತಂಡ ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಆರೋಪಿ, ಜನವರಿ 2 ರಂದು ಕೊಲೆ ಮಾಡಿ, ಮರುದಿನ ಗುರುಗ್ರಾಮ್‌ನಿಂದ ಸುಮಾರು 270 ಕಿಮೀ ದೂರದಲ್ಲಿರುವ ಪಟಿಯಾಲದ ಕಾಲುವೆಯಲ್ಲಿ ಎಸೆದಿದ್ದೆವು ಎಂದು ಒಪ್ಪಿಕೊಂಡಿದ್ದ. ಆರೋಪಿ ಹೇಳಿಕೆ ಪಡೆದು ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಹರಿಯಾಣದ ಕಾಲುವೆಯಲ್ಲಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ದರ್ಶನ್ ಟಾರ್ಗೆಟ್: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ಏನಿದು ಘಟನೆ?
    ಜನವರಿ 2 ರಂದು ಗುರ್ಗಾಂವ್ ಹೋಟೆಲ್‌ನಲ್ಲಿ ದಿವ್ಯಾ ಪಹುಜಾ (27) ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಬಳಿಕ ಆಕೆಯ ಶವವನ್ನು ಹೋಟೆಲ್‌ನಿಂದ ಕಾರಿಗೆ ಎಳೆದೊಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಶಂಕಿತ ಆರೋಪಿ ಅಭಿಜಿತ್ ಸೇರಿದಂತೆ ಪ್ರಕಾಶ್ ಮತ್ತು ಇಂದ್ರಜ್ ಎಂಬವರನ್ನು ಗುರುಗ್ರಾಮ್ ಕ್ರೈಂ ಬ್ರಾಂಚ್ ಅಧಿಕಾರಿಗಳು ಬಂಧಿಸಿದ್ದರು. ಪ್ರಕಾಶ್ ಮತ್ತು ಇಂದ್ರಜ್ ಇಬ್ಬರೂ ಅಭಿಜಿತ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಹೋಟೆಲ್ ಮಾಲೀಕ ಅಭಿಜಿತ್ ತನ್ನ ಸಹಚರರೊಂದಿಗೆ ಸೇರಿ ದಿವ್ಯಾಳನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ವಿಲೇವಾರಿ ಮಾಡಲು ತನ್ನ ಸಹಚರರಿಗೆ 10 ಲಕ್ಷ ರೂ. ನೀಡಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿತ್ತು.

    ದಿವ್ಯಾ ಪಹುಜಾ ಯಾರು?
    ದಿವ್ಯಾ ಪಹುಜಾ 2016ರ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಗ್ಯಾಂಗ್‌ಸ್ಟರ್‌ ಸಂದೀಪ್‌ ಗಡೋಲಿಯ ಗೆಳತಿ. ಹನಿಟ್ರ್ಯಾಪ್ ಮೂಲಕ ದಿವ್ಯಾ ಪಹುಜಾ ಸಂದೀಪ್‌ನನ್ನು ಕರೆಸಿಕೊಂಡು ಬಳಿಕ ಪೊಲೀಸರ ಸಹಾಯದಿಂದ ನಕಲಿ ಎನ್‌ಕೌಂಟರ್‌ನಲ್ಲಿ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದರು. ಈ ಪ್ರಕರಣದಲ್ಲಿ ದಿವ್ಯಾ ಪ್ರಮುಖ ಆರೋಪಿಯಾಗಿದ್ದಳು, ಅಲ್ಲದೇ ಆಕೆಯ ತಾಯಿ ಮತ್ತು ಐವರು ಪೊಲೀಸ್ ಸಿಬ್ಬಂದಿಯ ವಿರುದ್ಧವೂ ಹತ್ಯೆ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷವಷ್ಟೇ ದಿವ್ಯಾಳಿಗೆ  ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಜಾಮೀನು ಪಡೆಯುವ ಮೊದಲು ದಿವ್ಯಾ ಸುಮಾರು 7 ವರ್ಷಗಳ ಕಾಲ ಜೈಲಿನಲ್ಲಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

  • ಮಾಜಿ ಮಾಡೆಲ್‌ ಕೊಲೆಗೈದು ಶವ ಎಳೆದುಕೊಂಡು ಹೋದ್ರಾ?-  ಹೋಟೆಲ್ ಮಾಲೀಕ ಸೇರಿ ಮೂವರ ಬಂಧನ

    ಮಾಜಿ ಮಾಡೆಲ್‌ ಕೊಲೆಗೈದು ಶವ ಎಳೆದುಕೊಂಡು ಹೋದ್ರಾ?- ಹೋಟೆಲ್ ಮಾಲೀಕ ಸೇರಿ ಮೂವರ ಬಂಧನ

    ನವದೆಹಲಿ: ಗುರುಗ್ರಾಮ್‌ನ (Gurugram) ಹೋಟೆಲ್‌ವೊಂದರಲ್ಲಿ (Hotel) 27 ವರ್ಷದ ಮಾಜಿ ಮಾಡೆಲ್ (Ex Model) ಒಬ್ಬಳನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹತ್ಯೆಯಾದಾಕೆಯನ್ನು ದಿವ್ಯಾ ಪಹುಜಾ (Divya Pahuja) ಎಂದು ಗುರುತಿಸಲಾಗಿದ್ದು, ಕೊಲೆ ನಡೆದ ಹೋಟೆಲ್‌ನ ಮಾಲೀಕ ಅಭಿಜಿತ್ ಸಿಂಗ್ ಎಂಬಾತ ಆಕೆಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಶಂಕಿತ ಆರೋಪಿ ಅಭಿಜಿತ್ ಸೇರಿದಂತೆ ಪ್ರಕಾಶ್ ಮತ್ತು ಇಂದ್ರಜ್ ಎಂಬವರನ್ನು ಗುರುಗ್ರಾಮ್ ಕ್ರೈಂ ಬ್ರಾಂಚ್ ಬಂಧಿಸಿದೆ. ಪ್ರಕಾಶ್ ಮತ್ತು ಇಂದ್ರಜ್ ಇಬ್ಬರೂ ಅಭಿಜಿತ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜಪಾನ್‌ ವಿಮಾನ ಅವಘಡ- ಕೋಸ್ಟ್‌ ಗಾರ್ಡ್‌ನ ಐವರು ಸಿಬ್ಬಂದಿ ದುರ್ಮರಣ

    ಹೋಟೆಲ್ ಮಾಲೀಕ ಅಭಿಜಿತ್ ತನ್ನ ಸಹಚರರೊಂದಿಗೆ ಸೇರಿ ದಿವ್ಯಾಳನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ವಿಲೇವಾರಿ ಮಾಡಲು ತನ್ನ ಸಹಚರರಿಗೆ 10 ಲಕ್ಷ ರೂ. ನೀಡಿದ್ದಾನೆ ಎನ್ನಲಾಗಿದೆ. ಘಟನೆ ಕುರಿತಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಭಿಜಿತ್ ಸೇರಿದಂತೆ ಕೊಲೆ ಆರೋಪಿಗಳು ನೀಲಿ ಬಣ್ಣದ ಬಿಎಂಡಬ್ಲ್ಯು ಕಾರಿನಲ್ಲಿ ದಿವ್ಯಾಳ ಶವವನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: Iran Blasts: ಅವಳಿ ಬಾಂಬ್‌ ಸ್ಫೋಟದಲ್ಲಿ 103 ಸಾವು, 141ಕ್ಕೂ ಹೆಚ್ಚು ಮಂದಿಗೆ ಗಾಯ

    ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅಭಿಜಿತ್, ಯುವತಿ ಮತ್ತು ಇನ್ನೊಬ್ಬ ವ್ಯಕ್ತಿ ಜನವರಿ 2 ರಂದು (ಮಂಗಳವಾರ) ಮುಂಜಾನೆ 4 ಗಂಟೆಗೆ ಹೋಟೆಲ್‌ಗೆ ಆಗಮಿಸಿ ಕೊಠಡಿಯೊಂದಕ್ಕೆ ಹೋಗುತ್ತಿರುವ ದೃಶ್ಯವನ್ನು ತೋರಿಸುತ್ತದೆ. ನಂತರ ರಾತ್ರಿ ಅಭಿಜಿತ್ ಮತ್ತು ಇತರರು ದಿವ್ಯಾಳ ದೇಹವನ್ನು ಎಳೆದುಕೊಂಡು ಹೋಗುವುದು ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮಕ್ಕಳು ಹೂ ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿ ಮೂಗು ಕತ್ತರಿಸಿದ ಮಾಲೀಕ

    ಗುರುಗ್ರಾಮ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೊಲೆಯ ತನಿಖೆ ನಡೆಸುತ್ತಿದ್ದಾರೆ. ಕ್ರೈಂ ಬ್ರಾಂಚ್‌ನ ಹಲವಾರು ತಂಡಗಳು ಪಂಜಾಬ್ ಮತ್ತು ಇತರ ಪ್ರದೇಶಗಳಲ್ಲಿ ಶವವನ್ನು ಪತ್ತೆಹಚ್ಚಲು ಶೋಧ ನಡೆಸುತ್ತಿವೆ. ದಿವ್ಯಾ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಅಭಿಜಿತ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ದಲಿತ ಯುವತಿಯ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಹತ್ಯೆ ಮಾಡಿದ ಪೊಲೀಸ್ ಪೇದೆ

    ದಿವ್ಯಾ ಪಹುಜಾ ಯಾರು?: ದಿವ್ಯಾ ಪಹುಜಾ 2016ರ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ‘ನಕಲಿ’ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದಳು. ಅಲ್ಲದೇ ಈಕೆ ಸಂದೀಪ್ ಗಡೋಲಿಯ ಗೆಳತಿಯಾಗಿದ್ದಳು. ಹನಿಟ್ರ್ಯಾಪ್ ಮೂಲಕ ದಿವ್ಯಾ ಪಹುಜಾ ಸಂದೀಪ್‌ನನ್ನು ಕರೆಸಿಕೊಂಡು ಬಳಿಕ ಪೊಲೀಸರ ಸಹಾಯದಿಂದ ನಕಲಿ ಎನ್‌ಕೌಂಟರ್‌ನಲ್ಲಿ ಆತನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಸ್, ಟ್ರಕ್ ನಡುವೆ ಅಪಘಾತ – 12 ಮಂದಿ ದುರ್ಮರಣ

    ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿಯ ಸಹೋದರಿ ಸುದೇಶ್ ಕಟಾರಿಯಾ ಮತ್ತು ಆತನ ಸಹೋದರ ಬ್ರಹ್ಮ್ ಪ್ರಕಾಶ್ ಅವರು ಅಭಿಜಿತ್ ಜೊತೆ ಶಾಮೀಲಾಗಿ ಆಕೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ದಿವ್ಯಾ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಹೋಟೆಲ್ ಮಾಲೀಕ ಅಭಿಜಿತ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ನಾನು ಸತ್ತೇ ಹೋದೆ ಅಂದ್ಕೊಂಡೆ – ಅವಘಡಕ್ಕೀಡಾದ ವಿಮಾನದೊಳಗಿದ್ದ ಪ್ರಯಾಣಿಕ

    ಸಂದೀಪ್ ಗಡೋಲಿ ಹತ್ಯೆಯ ಆರೋಪಿ ದಿವ್ಯಾ ಪಹುಜಾಳಿಗೆ ಕಳೆದ ವರ್ಷ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. 2016 ಫೆಬ್ರವರಿ 6ರಂದು ಮುಂಬೈನ ಹೋಟೆಲ್‌ನಲ್ಲಿ ನಡೆದ ‘ನಕಲಿ’ ಎನ್‌ಕೌಂಟರ್‌ನಲ್ಲಿ ದಿವ್ಯಾ, ಆಕೆಯ ತಾಯಿ ಮತ್ತು ಐವರು ಪೊಲೀಸ್ ಸಿಬ್ಬಂದಿಯ ಮೇಲೆ ಗಡೋಲಿ ಹತ್ಯೆಯ ಪ್ರಕರಣ ದಾಖಲಾಗಿತ್ತು. ಜಾಮೀನು ಪಡೆಯುವ ಮೊದಲು ದಿವ್ಯಾ ಸುಮಾರು ಏಳು ವರ್ಷಗಳ ಕಾಲ ಜೈಲಿನಲ್ಲಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.‌ ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ; ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ – 20 ಜನರ ವಿರುದ್ಧ ದೂರು