Tag: ದಿವ್ಯಾಶ್ರೀ

  • ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

    ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

    ಟ ರಾಕೇಶ್ ಪೂಜಾರಿ ನಿಧನರಾಗಿರುವ ಬಗ್ಗೆ ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಖ್ಯಾತಿಯ ದಿವ್ಯಾಶ್ರೀ (Divyashree) ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಒಳ್ಳೆಯ ಕಲಾವಿದರು ಸಿಕ್ತಾರೆ, ಆದರೆ ಒಳ್ಳೆಯ ವ್ಯಕ್ತಿಯನ್ನ ನೋಡೋದು ಕಡಿಮೆ ಎನ್ನುತ್ತಾ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಕುಟುಂಬ ಸಮೇತ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಉಪೇಂದ್ರ

    ರಾಕೇಶ್ ಪೂಜಾರಿ ಮತ್ತು ನಟಿ ದಿವ್ಯಾ ಹಲವು ವರ್ಷಗಳಿಂದ ಪರಿಚಿತರು. ಹೀಗಾಗಿ ಅವರೊಂದಿನ ಒಡನಾಟದ ಬಗ್ಗೆ ಮತ್ತು ಅವರ ನಿಧನ ಸುದ್ದಿ ತಮಗೆ ತಿಳಿದಿದ್ದು ಹೇಗೆ ಎಂದು ನಟಿ ‘ಪಬ್ಲಿಕ್ ಟಿವಿ’ಗೆ ವಿವರಿಸಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ನಟ ಸದಾನಂದ ಕಡೆಯಿಂದ ಬೆಳಗ್ಗೆ 5.30ಕ್ಕೆ ರಾಕೇಶ್ ಸಾವಿನ ಸುದ್ದಿ ತಿಳಿಯಿತು. ಈ ವಿಷ್ಯ ಕೇಳಿದಾಗ ಮೊದಲಿಗೆ ಸುಳ್ಳು ಸುದ್ದಿ ಅಂದುಕೊಂಡಿದ್ವಿ, ಆ ನಂತರ ಖಾತ್ರಿಯಾಯಿತು ಅಂತ ಹೇಳಿದ್ದಾರೆ. ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದ ರಾಕೇಶ್ ಪೂಜಾರಿ

    ಇತ್ತೀಚೆಗೆ ‘ದಸ್ಕತ್’ ಅಂತ ತುಳು ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ ನಮ್ಮೊಂದಿಗೆ ಕುಳಿತು ಸಿನಿಮಾ ನೋಡಿದ್ದರು. ಸದಾ ಎಲ್ಲರನ್ನು ನಗಿಸುತ್ತಿದ್ದರು. ಅವರಿಗೆ 33 ವರ್ಷ ವಯಸ್ಸು ಆಗಿದ್ರು. ಅವರಲ್ಲಿ ಮಗುವಿನಂತ ಗುಣವಿತ್ತು ಎಂದಿದ್ದಾರೆ. `ದಸ್ಕತ್’ ಸಿನಿಮಾ ಪ್ರದರ್ಶನದಲ್ಲಿ ಕಡೆಯ ಬಾರಿ ಭೇಟಿಯಾಗಿದ್ದು ಅಂತ ಹೇಳಿಕೊಂಡಿದ್ದಾರೆ.

    ರಾಕೇಶ್‌ಗೆ ಆರೋಗ್ಯ ಸಮಸ್ಯೆ ಇತ್ತಾ ಗೊತ್ತಿಲ್ಲ. ಕಲಾವಿದರಿಗೆ ಬೆಳಗ್ಗೆಯಿಂದ ರಾತ್ರಿಯವರೆಗೆ ಶೂಟ್ ಇರುತ್ತದೆ. ಊಟ ನಿದ್ರೆ ಸಮಸ್ಯೆ ಇರುತ್ತದೆ. ಹೀಗಾಗಿ ಲೋ ಬಿಪಿ ಆಗಿರಬಹುದು. ಕಷ್ಟ ಆದರೂ ಇಷ್ಟಪಟ್ಟು ಕೆಲಸ ಮಾಡುತ್ತೇವೆ. ಅವರಿಗೆ ಮದುವೆ ವಿಚಾರದಲ್ಲಿ ನಾವು ರೇಗಿಸುತ್ತಿದ್ದೇವು. ರಾಕೇಶ್‌ಗೆ ಅಪ್ಪ ಇಲ್ಲ ಆದರೆ ತಂಗಿ, ಅಮ್ಮ ಇದ್ದಾರೆ. ಅವರು ಅದಷ್ಟೇ ತಮಾಷೆ ಮಾಡಿಕೊಂಡು ಇದ್ದರು. ಜೀವನದಲ್ಲಿ ಅವರಿಗೆ ಸೀರಿಯಸ್‌ನೆಸ್ ಇತ್ತು. ತಂಗಿ ಮದುವೆ ಮಾಡಬೇಕು ಎಂದಿತ್ತು. ತಂಗಿಗೆ ಮದುವೆ ಮಾಡಿದ್ಮೇಲೆ ನಾನು ಮದುವೆ ಆಗುತ್ತೇನೆ ಎಂದಿದ್ದರು. ನನಗೆ ಅವರ ಅಮ್ಮನದ್ದೇ ಯೋಚನೆ ಆಗ್ತಿದೆ. ಅವರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಅವರನ್ನು ಇಷ್ಟಪಡದೇ ಇರುವವರು ಯಾರಿಲ್ಲ. ಒಳ್ಳೆಯ ಕಲಾವಿದರನ್ನು ನೋಡಿದ್ದೇವೆ. ಆದರೆ ಒಳ್ಳೆಯ ವ್ಯಕ್ತಿ ಸಿಗೋದು ಕಡಿಮೆ ಅಲ್ವಾ ಎಂದಿದ್ದಾರೆ. ರಕ್ಷಿತಾ ಪ್ರೇಮ್ ಮೇಡಂಗೆ ರಾಕೇಶ್ ಫೇವರೇಟ್. ಈಗ ಅವರು ಇಲ್ಲ ಅಂತ ಬೇಜಾರು ಎನ್ನುತ್ತಾ ನಟಿ ಭಾವುಕರಾಗಿದ್ದಾರೆ.

    ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಇಂದು ಸಂಜೆ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಪಾರು’ ಖ್ಯಾತಿಯ ಶರತ್ ಪದ್ಮನಾಭ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಪಾರು’ ಖ್ಯಾತಿಯ ಶರತ್ ಪದ್ಮನಾಭ್

    ಕಿರುತೆರೆಯ ಜನಪ್ರಿಯ ಧಾರಾವಾಹಿ `ಪಾರು’ (Paaru) ಮೂಲಕ ಮನೆ ಮಾತಾದ ನಟ ಶರತ್ ಪದ್ಮನಾಭ್ (Sharath Padmanabh) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟ ಶರತ್ ಬಹುಕಾಲದ ಗೆಳತಿ ದಿವ್ಯಶ್ರೀ (Divyashree) ಜೊತೆ ಹಸೆಮಣೆ ಏರಿದ್ದಾರೆ.

    ಜಸ್ಟ್ ಮಾತ್ ಮಾತಲ್ಲಿ, ಪುಟ್ಮಲ್ಲಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮಿಂಚಿದ್ದ ಪ್ರತಿಭಾನ್ವಿತ ನಟ ಶರತ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ (ಜ.22)ರಂದು ಶರತ್ ಮತ್ತು ದಿವ್ಯಶ್ರೀ ಮದುವೆಯಾಗಿದ್ದಾರೆ.

    ಮದುವೆಗೆ `ಪಾರು’ ಸೀರಿಯಲ್ ತಂಡ ಮತ್ತು ವಾಹಿನಿ ಕೆಲ ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿತ್ತು. ನಟ ಅನಿರುದ್ಧ, ʻಗಟ್ಟಿಮೇಳʼ ಖ್ಯಾತಿಯ ರಕ್ಷ್, ‌ʻಹಿಟ್ಲರ್‌ ಕಲ್ಯಾಣʼ ಸೀರಿಯಲ್‌ ದಿಲೀಪ್‌ ರಾಜ್ ಸೇರಿದಂತೆ ಹಲವರು ಮದುವೆ (Wedding) ಸಂಭ್ರಮದಲ್ಲಿ ಭಾಗಿಯಾಗಿದ್ದರು.

    ಇನ್ನೂ ನಟ ಶರತ್ ತಮ್ಮ ಎಂಗೇಜ್‌ಮೆಂಟ್ ಬಗ್ಗೆಯಾಗಲಿ, ಅಥವಾ ಮದುವೆ ಬಗ್ಗೆಯಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k