Tag: ದಿವ್ಯಸ್ಪಂದನ

  • ಕೇಸರಿ ಸೀರೆಯುಟ್ಟ ರಮ್ಯಾ ಫೋಟೋ ವೈರಲ್

    ಕೇಸರಿ ಸೀರೆಯುಟ್ಟ ರಮ್ಯಾ ಫೋಟೋ ವೈರಲ್

    ಮೋಹಕ ತಾರೆ ರಮ್ಯಾ (Ramya) ನಿನ್ನೆ ಅಭಿಷೇಕ್ ಅಂಬರೀಶ್–ಅವಿವಾ ಆರತಕ್ಷತೆಗೆ ಕೇಸರಿ ಸೀರೆಯುಟ್ಟು (Kesari Saree) ಬಂದಿದ್ದರು. ಇಡೀ ವೇದಿಕೆ ಗೋಲ್ಡನ್ ಕಲರ್ ನಿಂದ ಕಂಗೊಳಿಸುತ್ತಿದ್ದರೆ ರಮ್ಯಾ ಮಾತ್ರ ಕೇಸರಿ ಸೀರೆಯುಟ್ಟು ನೋಡುಗರ ಕೇಂದ್ರಬಿಂದು ಆಗಿದ್ದರು. ಸಖತ್ ಹಾಟ್ ಹಾಟ್ ಆಗಿಯು ಕಾಣುತ್ತಿದ್ದರು.

    ರಮ್ಯಾ ಆರತಕ್ಷತೆಗೆ ಬರುತ್ತಿದ್ದಂತೆಯೇ ಅಷ್ಟೂ ಕ್ಯಾಮೆರಾಗಳು ಅವರನ್ನು ಸುತ್ತುವರೆದಿದ್ದವು. ಬಂದಿದ್ದ ಅತಿಥಿಗಳು ಕೂಡ ರಮ್ಯಾರನ್ನು ಮಾತನಾಡಿಸಲು ಸಾಲುಗಟ್ಟಿದರು. ಒಂದು ರೀತಿಯಲ್ಲಿ ರಮ್ಯಾ ಎಲ್ಲರ ಗಮನ ಸೆಳೆಯುವಂತೆ ರೆಡಿಯಾಗಿ ಬಂದಿದ್ದರು. ಅಷ್ಟೇ ಲವಲವಿಕೆಯಿಂದ ಎಲ್ಲರನ್ನೂ ಮಾತನಾಡಿಸುತ್ತಿದ್ದರು. ಇದನ್ನೂ ಓದಿ:ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್

    ಸಿನಿಮಾ ರಂಗದಿಂದ ಹಲವು ವರ್ಷಗಳ ಕಾಲ ರಮ್ಯಾ ದೂರವಿದ್ದರೂ ಸಿನಿಮಾ ರಂಗ ಅವರಿಂದ ದೂರವಿರಲಿಲ್ಲ ಎನ್ನುವುದಕ್ಕೆ ಅವರ ಅಭಿಮಾನಿಗಳೇ ಸಾಕ್ಷಿಯಾಗಿದ್ದರು. ರಮ್ಯಾ ವಿಷಯ ಬಂದರೆ ಯಾವತ್ತಿಗೂ ಅವರು ನೆಚ್ಚಿನ ನಟಿಯ ಪರವಾಗಿಯೇ ಇರುತ್ತಿದ್ದರು. ಹಾಗಾಗಿ ಇವತ್ತಿಗೂ ಅಸಂಖ್ಯಾತ ಅಭಿಮಾನಿಗಳನ್ನು ರಮ್ಯಾ ಹೊಂದಿದ್ದಾರೆ.

    ಮತ್ತೆ ರಮ್ಯಾ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಒಂದು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರ ನಿರ್ಮಾಣದಲ್ಲಿ ಮೂಡಿ ಬಂದ ಚಿತ್ರ ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿದೆ. ನಟಿಸಬೇಕಾದ ಸಿನಿಮಾ ಕೇವಲ ಮುಹೂರ್ತವಷ್ಟೇ ಆಗಿದೆ.

  • ರಮ್ಯಾ ಜೊತೆಗಿನ ಫೋಟೋ ಹಂಚಿಕೊಂಡು ವಿಶ್ ಮಾಡಿದ ಹೊಂಬಾಳೆ ಕಾರ್ತಿಕ್ ಗೌಡ

    ರಮ್ಯಾ ಜೊತೆಗಿನ ಫೋಟೋ ಹಂಚಿಕೊಂಡು ವಿಶ್ ಮಾಡಿದ ಹೊಂಬಾಳೆ ಕಾರ್ತಿಕ್ ಗೌಡ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟು ಹಬ್ಬದ ಸಂದರ್ಭದಂದು ಕೆ.ಆರ್.ಜಿ ನಿರ್ಮಾಣ ಸಂಸ್ಥೆಯ ನಿರ್ಮಾಪಕ ಹಾಗೂ ಹೊಂಬಾಳೆ ಫಿಲ್ಮ್ಸ್ ನ ಕಾರ್ತಿಕ್ ಗೌಡ ರಮ್ಯಾ ಜೊತೆಗಿನ ವಿಶೇಷ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ‘ಹ್ಯಾಪಿ ಬರ್ತಡೇ ದಿವ್ಯಾಸ್ಪಂದನ’ ಎಂದು ಪೋಸ್ಟ್ ಮಾಡಿದ್ದಾರೆ.

    ಈ ಪೋಸ್ಟ್ ಗೆ ರಮ್ಯಾ ಕೂಡ ಪ್ರತಿಕ್ರಿಯಿಸಿದ್ದು, ‘ಥ್ಯಾಂಕ್ಯೂ K’ ಎಂದು ಬರೆದಿದ್ದಾರೆ.  ಕಾರ್ತಿಕ್ ಗೌಡ ಅವರು ತಮ್ಮ ನಿರ್ಮಾಣದ ಸಂಸ್ಥೆಯಿಂದ ತಯಾರಾಗುತ್ತಿರುವ ‘ಉತ್ತರಕಾಂಡ’ ಸಿನಿಮಾದ ಮೂಲಕ ರಮ್ಯಾ ಅವರನ್ನು ವಾಪಸ್ಸು ಸಿನಿಮಾ ರಂಗಕ್ಕೆ ಕರೆತಂದಿದ್ದಾರೆ. ಅಲ್ಲದೇ, ರಮ್ಯಾ ನಿರ್ಮಾಣ ಮಾಡುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ಇದೇ ಕಾರ್ತಿಕ್ ಗೌಡ ಅವರ ಕೆ.ಆರ್.ಜಿ ಮೂಲಕ ವಿತರಣೆ ಆಗಲಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಕಾರ್ತಿಕ್ ಗೌಡ ನಿರ್ಮಾಣದ, ಡಾಲಿ ಧನಂಜಯ್ ನಟನೆಯ ಹೊಯ್ಸಳ ಸಿನಿಮಾದ ಶೂಟಿಂಗ್ ಸ್ಥಳಕ್ಕೂ ರಮ್ಯಾ ಅವರು ಹೋಗಿದ್ದರು. ಅಲ್ಲಿಂದ ಕೆ.ಆರ್.ಜಿ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ.

    ಈ ಹುಟ್ಟು ಹಬ್ಬಕ್ಕೆ ರಮ್ಯಾ ಅವರಿಗೆ ಡಬಲ್ ಧಮಾಕಾ. ಒಂದು ಕಡೆ ಅವರ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಸಿನಿಮಾ ಶೂಟಿಂಗ್ ಮುಗಿಸಿದೆ. ಮತ್ತೊಂದು ಕಡೆ ಇನ್ನಷ್ಟೇ ಅವರ ನಟನೆಯ ಉತ್ತರ ಕಾಂಡ ಚಿತ್ರ ಶೂಟಿಂಗ್ ಆಗಬೇಕಿದೆ. ಹಾಗಾಗಿ ರಮ್ಯಾ ಅವರಿಗೆ ಈ ಹುಟ್ಟು ಹಬ್ಬ ವಿಶೇಷವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಟ ಚೇತನ್ ಬೆನ್ನಿಗೆ ನಿಂತ ರಮ್ಯಾ

    ನಟ ಚೇತನ್ ಬೆನ್ನಿಗೆ ನಿಂತ ರಮ್ಯಾ

    ನ್ಯಾಯಮೂರ್ತಿಗಳಿಗೆ ಅಗೌರವ ತೋರುವಂತಹ ಟ್ವಿಟ್ ಮಾಡಿದ ಕಾರಣಕ್ಕಾಗಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ನಟ ಚೇತನ್ ಪರ, ನಟಿ ರಮ್ಯಾ ಬ್ಯಾಟ್ ಬೀಸಿದ್ದಾರೆ. ರಮ್ಯಾ ಕೂಡ ಈ ಕುರಿತು ಟ್ವಿಟ್ ಮಾಡಿದ್ದು, ಚೇತನ್ ಮಾಡಿರುವ ಟ್ವಿಟ್ ನಲ್ಲಿ ದೋಷ ಏನಿದೆ ಎಂದು ಕೇಳಿದ್ದಾರೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಅವರು ಯಾವ ರೀತಿಯಲ್ಲಿ ಅಪರಾಧ ಮಾಡಿದ್ದಾರೆ? ಯಾಕೆ ಪೊಲೀಸ್ ಅವರನ್ನು ಬಂಧಿಸಿದ್ದಾರೆ ಎನ್ನುವ ಅರ್ಥದಲ್ಲಿ ಅವರ ಟ್ವಿಟರ್ ಸಾರವಿದೆ. ಚೇತನ್ ಬಂಧನದ ಕುರಿತು ಸ್ಯಾಂಡಲ್ ವುಡ್ ಮೌನ ವಹಿಸಿರುವ ಸಂದರ್ಭದಲ್ಲಿ ರಮ್ಯಾ ಟ್ವಿಟ್ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ : ಬ್ಯಾಚುಲರ್ ಹುಡುಗಿಯರ ನಾಯಕಿಯಂತೆ ಈ ರೂಪಾ

    ಮಂಗಳವಾರ ಮಧ್ಯಾಹ್ನದೊತ್ತಿಗೆ ಶೇಷಾದ್ರಿಪುರಂ ಪೊಲೀಸ್ ಅಧಿಕಾರಿಗಳು ಚೇತನ್ ಅವರನ್ನು ವಶಕ್ಕೆ ಪಡೆದಿದ್ದರು. ಚೇತನ್ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡಿಲ್ಲವಾದ್ದರಿಂದ ಚೇತನ್ ಪತ್ನಿ ಮೇಘಾ, ಫೇಸ್ ಬುಕ್ ಲೈವ್ ನಲ್ಲಿ ತಮ್ಮ ಪತಿ ಕಿಡ್ನ್ಯಾಪ್ ಆಗಿದ್ದಾರೆ ಎಂದು ಹೇಳಿದ್ದರು. ಅಲ್ಲದೇ, ಶೇಷಾದ್ರಿಪುರಂ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಚೇತನ್ ಅಭಿಮಾನಿಗಳು ಠಾಣೆಯ ಮುಂದೆ ಜಮಾಯಿಸಿದಾಗ, ಚೇತನ್ ಅದೇ ಠಾಣೆಯಲ್ಲಿ ಇರುವುದು ಗೊತ್ತಾಯಿತು. ಇದನ್ನೂ ಓದಿ : ಜೈಲಿನಲ್ಲಿ ಚೇತನ್ ಕೂಲ್ ಆಗಿದ್ದಾರೆ : ಪತ್ನಿ ಮೇಘಾ

    ಆನಂತರ ಅವರನ್ನು 8ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಚೇತನ್ ಗೆ 14 ದಿನ ನ್ಯಾಯಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು.

  • ರಮ್ಯಾ – ರಾಗಿಣಿ ಮುನಿಸು ಮಾಯವಾಯ್ತಾ?

    ರಮ್ಯಾ – ರಾಗಿಣಿ ಮುನಿಸು ಮಾಯವಾಯ್ತಾ?

    ಮೋಹಕ ತಾರೆ ರಮ್ಯಾ ಇದೀಗ ಸಂಪೂರ್ಣವಾಗಿ ರಾಜಕಾರಣದಲ್ಲಿ ಕಳೆದು ಹೋಗಿದ್ದಾರೆ. ಆದರೆ ಈಗಲೂ ಕೂಡಾ ಹಲವಾರು ಮಂದಿ ಅವರು ಮತ್ತೆ ಬಂದು ಚಿತ್ರಗಳಲ್ಲಿ ನಟಿಸಲಿ ಎಂದೇ ಬಯಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ರಮ್ಯಾ ಜೊತೆ ಕಿತ್ತಾಡಿಕೊಂಡಿದ್ದ ರಾಗಿಣಿ ದ್ವಿವೇದಿ ಕೂಡಾ ಅದನ್ನೇ ಬಯಸುತ್ತಿದ್ದಾರಾ ಎಂಬ ಅಚ್ಚರಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾಗಿದೆ!

    ಟ್ವಿಟ್ಟರ್‍ನಲ್ಲಿ ರಮ್ಯಾ ಅಭಿಮಾನಿಯೊಬ್ಬರು ಅವರು ಮತ್ತೆ ಬರಬೇಕೆಂದು ಗೋಗರೆಯುವಂತೆ ಒಂದು ಟ್ವೀಟ್ ಮಾಡಿದ್ದರು. ಅದನ್ನು ರಾಗಿಣಿ ದ್ವಿವೇದಿ ಕೂಡಾ ರೀಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ವಿಚಾರಕ್ಕೆ ಸಹಮತ ವ್ಯಕ್ತಪಡಿಸಲು ಈ ರೀ ಟ್ವೀಟ್ ಬಳಕೆಯಾಗುತ್ತದೆ. ರಾಗಿಣಿ ಕೂಡಾ ಅದನ್ನೇ ಮಾಡಿರೋದರಿಂದ ಅವರೂ ಕೂಡಾ ಮುನಿಸು ಮರೆತು ಮತ್ತೆ ರಮ್ಯಾ ಚಿತ್ರ ರಂಗಕ್ಕೆ ಮರಳಲಿ ಅಂತ ಆಶಿಸುತ್ತಿದ್ದಾರಾ ಎಂಬ ಪ್ರಶ್ನೆ ಸಿನಿಪ್ರಿಯರನ್ನು ಕಾಡುತ್ತಿದೆ.

    ರಾಗಿಣಿ ದ್ವಿವೇದಿ ಅವರ ಈ ನಡೆ ಅಚ್ಚರಿ ಮೂಡಿಸಲು ಕಾರಣ ಇಲ್ಲದಿಲ್ಲ. ವರ್ಷಾಂತರಗಳ ಹಿಂದೆ ರಾಗಿಣಿ ರಮ್ಯಾ ವಿರುದ್ಧ ಮಾತಾಡಿದ್ದರೆಂಬ ಬಗ್ಗೆ ಗುಲ್ಲೆದ್ದಿತ್ತು. ಈ ವಿಚಾರವಾಗಿ ರಮ್ಯಾ ಕೂಡಾ ಪರೋಕ್ಷವಾಗಿ ರಾಗಿಣಿಯವರನ್ನು ಫೇಸ್ ಬುಕ್ ಮೂಲಕ ತಿವಿದಿದ್ದರು. ರಾಗಿಣಿ ಕೂಡಾ ಅದಕ್ಕೆ ಅಷ್ಟೇ ಮೊನಚಾಗಿ ಮಾರುತ್ತರ ನೀಡಿದ್ದರು.

    ಈ ಮೂಲಕ ರಮ್ಯಾ ಮತ್ತು ರಾಗಿಣಿ ವಿರುದ್ಧಾರ್ಥಕ ಪದಗಳಂತಾಗಿದ್ದರು. ಆದರೀಗ ಇವರಿಬ್ಬರ ನಡುವೆ ಮುನಿಸಿನ ಮುಸುಕು ಸರಿದಂತಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv