Tag: ದಿವ್ಯಶ್ರೀ

  • Lakshmi Nivasa: ದಿವ್ಯಶ್ರೀ ಕೈಬಿಟ್ಟ ಪಾತ್ರಕ್ಕೆ ನಟಿ ರೂಪಿಕಾ ಎಂಟ್ರಿ

    Lakshmi Nivasa: ದಿವ್ಯಶ್ರೀ ಕೈಬಿಟ್ಟ ಪಾತ್ರಕ್ಕೆ ನಟಿ ರೂಪಿಕಾ ಎಂಟ್ರಿ

    ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮಿ ನಿವಾಸ’ ಸೀರಿಯಲ್‌ನಿಂದ ದಿವ್ಯಶ್ರೀ ಗುಡ್ ಬೈ ಹೇಳಿದ್ದಾರೆ. ಅವರ ಪಾತ್ರಕ್ಕೆ ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯ ಆಗಮನವಾಗಿದೆ. ದಿವ್ಯಶ್ರೀ ಕೈಬಿಟ್ಟ ಪಾತ್ರಕ್ಕೆ ‘ಚೆಲುವಿನ ಚಿಲಿಪಿಲಿ’ ನಟಿ ರೂಪಿಕಾ ಅವರು ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ತಮನ್ನಾ ಬಾಯ್‌ಫ್ರೆಂಡ್ ವಿಜಯ್ ಜೊತೆ ಕಾಣಿಸಿಕೊಂಡ ಸಮಂತಾ

    ‘ಲಕ್ಷ್ಮಿ ನಿವಾಸ’ದಲ್ಲಿ ಸ್ಟಾರ್ ಕಲಾವಿದರ ದಂಡೇ ಇರುವ ಧಾರಾವಾಹಿ. ಕರ್ಪೂರದ ಗೊಂಬೆ ಸೀರಿಯಲ್ ನಟಿ ಶ್ವೇತಾ, ಪವಿತ್ರಾ ಲೋಕೇಶ್, ರಘು ಮುಖರ್ಜಿ, ದಿಶಾ ಮದನ್, ‘ಬಿಗ್ ಬಾಸ್’ ಬೆಡಗಿ ಚಂದನಾ ಅನಂತಕೃಷ್ಣ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ತುಂಬು ಕುಟುಂಬದ ಕಥೆ ಜನರ ಮನಮುಟ್ಟಿದೆ. ಇತ್ತೀಚೆಗೆ ಹಿರಿಯ ನಟಿ ಪವಿತ್ರಾ ಲೋಕೇಶ್, ರಘು ಮುಖರ್ಜಿ ಪಾತ್ರ ಅಂತ್ಯವಾಗಿದೆ. ಆದರೆ ಈ ಸೀರಿಯಲ್ ಕಥೆಗೆ ಉತ್ತಮ ಟಿಆರ್‌ಪಿ ಕೂಡ ಬರುತ್ತಿದೆ.

     

    View this post on Instagram

     

    A post shared by Roopika (@roopika_appu)

    ಈ ಸೀರಿಯಲ್‌ನಲ್ಲಿ ಮತ್ತೊರ್ವ ನಾಯಕಿ ನಟಿ ಚಂದನಾ ಅಂದರೆ ಜಾಹ್ನವಿ ಅತ್ತಿಗೆ ಪಾತ್ರದಲ್ಲಿ ನಟಿಸುತ್ತಿದ್ದ ದಿವ್ಯಶ್ರೀ ತಮ್ಮ ಪಾತ್ರಕ್ಕೆ ಅಂತ್ಯ ಹಾಡಿದ್ದಾರೆ. ಸದ್ಯ ಅವರು ನವೀನ್ ಸಜ್ಜು ಜೊತೆ ಮುಖ್ಯಪಾತ್ರದಲ್ಲಿ ಚುಕ್ಕಿತಾರೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.

    ದಿವ್ಯಶ್ರೀ ಬಿಟ್ಟು ಹೋದ ಪಾತ್ರಕ್ಕೆ ಸ್ಯಾಂಡಲ್‌ವುಡ್ ನಟಿ ರೂಪಿಕಾ ಆಗಮನವಾಗಿದೆ. ಬೀರ, ಮಂಜರಿ, ನವರಂಗಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ರೂಪಿಕಾ ಲಕ್ಷ್ಮಿ ನಿವಾಸಕ್ಕೆ ಸಾಥ್ ನೀಡಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

    ರೂಪಿಕಾ ಅವರಿಗೆ ಕಿರುತೆರೆ ಏನು ಹೊಸದಲ್ಲ. ಈ ಹಿಂದೆ ‘ದೊರೆಸಾನಿ’ ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ರೂಪಿಕಾ ನಟಿಸಿದ್ದರು. ಈಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ರೂಪಿಕಾ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.

  • ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಮಾಡಿದ ಕಾಮಿಡಿ ಕಿಲಾಡಿ ಜೋಡಿ

    ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಮಾಡಿದ ಕಾಮಿಡಿ ಕಿಲಾಡಿ ಜೋಡಿ

    ಪುನೀತ್ ರಾಜ್ ಕುಮಾರ್ ನಿಧನಾ ನಂತರ ಅವರ ಸಾವಿರಾರು ಅಭಿಮಾನಿಗಳು ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದರು. ನೇತ್ರದಾನದಂತಹ ಪವಿತ್ರ ಕಾರ್ಯ ಮುಂದುವರೆಯುತ್ತಲೇ ಇದೆ. ಪುನೀತ್ ರಾಜ್ ಕುಮಾರ್ ಅವರನ್ನು ಆದರ್ಶವಾಗಿ ತಗೆದುಕೊಂಡಿದ್ದ ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಜೋಡಿಯೊಂದು ಸೀಮಂತ ಕಾರ್ಯಕ್ರಮದಲ್ಲೇ ನೇತ್ರದಾನ ಮಾಡಿದೆ. ಇದನ್ನೂ ಓದಿ : ನಟ ಧನ್ವೀರ್ ಮೇಲೆ ನಿಲ್ಲುತ್ತಿಲ್ಲ ದಾಳಿ : ದಾಳಿ ಹಿಂದೆ ಸ್ಟಾರ್ ನಟರ ಕೈವಾಡ?


    ಕಾಮಿಡಿ ಕಿಲಾಡಿಗಳು ಅಂದಾಕ್ಷಣ ಥಟ್ಟನೆ ನೆನಪಾಗುವ ಜೋಡಿ ಗೋವಿಂದೇಗೌಡ ಮತ್ತು ದಿವ್ಯಶ್ರೀ ಅವರದ್ದು. ಕಾಮಿಡಿ ಕಿಲಾಡಿಗಳು ಶೋಗೆ ಸ್ಪರ್ಧೆಯಾಗಿ ಬಂದವರು, ನಂತರ ಸ್ನೇಹಿತರಾದರು. ಆನಂತರ ಪ್ರೇಮಿಗಳಾದರು. ಪ್ರೇಮವೇ ಸಪ್ತಪದಿ ತುಳಿಯುವುದಕ್ಕೆ ಕಾರಣವಾಗಿತ್ತು. ಇತ್ತೀಚೆಗಷ್ಟೇ ದಿವ್ಯಶ್ರೀ ಅವರ ಸೀಮಂತ ಕಾರ್ಯಕ್ರಮವಾಯಿತು. ಅಂದು ಈ ದಂಪತಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ನೇತ್ರದಾನ ಮಾಡುವ ಮೂಲಕ ನವ ಜೋಡಿಗಳಿಗೆ ಮಾದರಿಯಾದರು. ಇದನ್ನೂ ಓದಿ : ಶಬ್ದ ಚಿತ್ರದ ವಿಭಿನ್ನ ಪಾತ್ರದಲ್ಲಿ ಮೇಘನಾ ರಾಜ್ : ನಿರ್ದೇಶಕ ಕಾಂತ ಹೇಳಿದ್ದೇನು?


    ಮೊದಲಿನಿಂದಲೂ ನನಗೆ ಪುನೀತ್ ರಾಜ್ ಕುಮಾರ್ ಅಂದರೆ ಇಷ್ಟ. ಅವರ ಸಿನಿಮಾಗಳನ್ನೇ ನೋಡಿಕೊಂಡು ಬೆಳೆದವರು ನಾವು. ಅಂತಹ ಮಹಾನ್ ನಟರೇ ಕಣ್ಣುದಾನ ಮಾಡಿದ್ದಾರೆ. ಅವರಿಂದ ಸ್ಫೂರ್ತಿಗೊಂಡು ನಾವು ಕೂಡ ಈ ಕೆಲಸಕ್ಕೆ ಮುಂದಾದೆವು ಅನ್ನುತ್ತಾರೆ ಕಿಲಾಡಿ ಜೋಡಿ. ಇದನ್ನೂ ಓದಿ : ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿ


    ತಾವು ಮಾತ್ರ ನೇತ್ರದಾನ ಮಾಡಿಲ್ಲ, ಜತೆಗೆ ಇದೇ ವೇಳೆ ನೇತ್ರದಾನ ಶಿಬಿರವನ್ನು ಕೂಡ ಅವರು ಆಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ ಡಾ.ರಾಜ್ ಐ ಬ್ಯಾಂಕಿನ ಸಿಬ್ಬಂದಿ ಕೂಡ ಹಾಜರಿತ್ತು.

  • ಪುಣ್ಯಾತ್ ಗಿತ್ತೀರ ಹಾಡು ಪಾಡು!

    ಪುಣ್ಯಾತ್ ಗಿತ್ತೀರ ಹಾಡು ಪಾಡು!

    ಬೆಂಗಳೂರು: ಸರಿಸುಮಾರು ಎರಡು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಪಾಸಿಬಲ್ ಸಿನಿಮಾವನ್ನು ನಿರ್ದೇಶಿಸಿದ್ದವರು ರಾಜ್ ಬಿ.ಎನ್. ಮತ್ತೆ ಅವರದ್ದೇ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ `ಪುಣ್ಯಾತ್‍ಗಿತ್ತೀರು’. ಬೇರೆ ಬೇರೆ ಬಗೆಯ ವ್ಯಕ್ತಿತ್ವದ ನಾಲ್ವರು ಹುಡುಗಿಯರ ಬದುಕಿನ ಶೈಲಿಯನ್ನೇ ಕಥೆಯನ್ನಾಗಿಸಿರುವ ಈ ಚಿತ್ರದಲ್ಲಿ ಮಮತಾ ರಾವುತ್, ದಿವ್ಯಶ್ರೀ, ಸಂಭ್ರಮ ಹಾಗೂ ಐಶ್ವರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸಂಪೂರ್ಣಗೊಳಿಸಿಕೊಂಡಿರುವ ಚಿತ್ರತಂಡ ಈಗ ಸಿನಿಮಾವನ್ನು ಬಿಡುಗಡೆಯ ಹಂತಕ್ಕೆ ತಂದಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ನೆರವೇರಿತು. ಪುಣ್ಯಾತ್‍ಗಿತ್ತೀರು ಚಿತ್ರದಲ್ಲಿ ರಾಮಾನುಜಂ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳಿವೆ.

    ಸಾಮಾನ್ಯವಾಗಿ ಘಟುವಾಣಿ ಥರದ, ಧೈರ್ಯವಂತ ಹೆಂಗಸರನ್ನು ಪುಣ್ಯಾತ್ ಗಿತ್ತೀರು ಎಂದು ಕರೆಯುತ್ತಾರೆ. ಈ ಚಿತ್ರದಲ್ಲಿ ಕೂಡ ಅಂಥಾ ಡೇರ್ ಕ್ಯಾರೆಕ್ಟರ್ ಇರುವ ನಾಲ್ವರು ಹುಡುಗಿಯರ ಕಥೆ ಇರುವುದರಿಂದ ಚಿತ್ರಕ್ಕೆ ಈ ಹೆಸರಿಟ್ಟಿರುವುದಾಗಿ ನಿರ್ದೇಶಕ ರಾಜ್ ತಿಳಿಸಿದ್ದಾರೆ.

    ಈ ಚಿತ್ರದ ನಾಲ್ವರು ಹುಡುಗಿಯರು ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿರೆ. ಪಿಜಿಯಲ್ಲಿ ಉಳಿದುಕೊಂಡಿದ್ದ ನಾಲ್ವರು ಅನಾಥ ಹುಡುಗಿಯರು ಸದಾ ಜನರಿಗೆ ವಂಚನೆ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ. ಒಂದು ಘಟನೆ ನಡೆದಾಗ, ಅವರ ಗುಣದಲ್ಲಿ ಬದಲಾವಣೆಯಾಗಿ ಸಮಾಜಕ್ಕೆ ಒಳ್ಳೇ ಕೆಲಸ ಮಾಡುವಲ್ಲಿ ಸಫಲರಾಗುತ್ತಾರೆ. ಮೊದಲ ಭಾಗದಲ್ಲಿ ವೀಕ್ಷಕರಿಂದ ಬೈಸಿಕೊಳ್ಳುವ ಪಾತ್ರಗಳಿದ್ದು, ವಿರಾಮದ ನಂತರ ಎಲ್ಲರಿಗೂ ಅಚ್ಚುಮೆಚ್ಚಿನ ಮಹಿಳೆಯರಾಗುತ್ತಾರೆ.

    ಬೆಂಗಳೂರು, ಬಳ್ಳಾರಿ, ಕನಕಪುರ ಮುಂತಾದ ಕಡೆಗಳಲ್ಲಿ ಮೂವತ್ತು ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಿರ್ದೇಶಕ ರಾಜ್. ಬಿ.ಎನ್. ಅವರೇ ಚಿತ್ರದ ಕತೆ ಬರೆದು ನಿರ್ದೇಶನ ಮಾಡಿರೆ. ಮಮತಾ ರಾವುತ್ ಈ ಚಿತ್ರದಲ್ಲಿ ಆರ್ಟಿಸ್ಟ್ ಆರತಿ ಆಗಿ ಬಣ್ಣಹಚ್ಚಿದ್ದರೆ. ಹಿರಿಯ ನಟಿಯರ ಅಭಿನಯವನ್ನು ತೋರಿಸುವ ಪ್ರಯತ್ನ ಮಾಡಿದ್ದರೆ. ಅವಕಾಶಗಳು ಸಿಗದೆ ಗ ಬೇರೆ ಥರದ ಕೆಲಸ ಮಾಡಲು ನಿರ್ಧರಿಸಿದಾಗ ಇವರ ಪರಿಚಯವಾಗುತ್ತದೆ. ಮೀಟ್ರು ಮಂಜುಳ ಹೆಸರಿನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಶ್ರೀ ಅಭಿನಯಿಸಿದ್ದಾರೆ. ಬಾಯ್ಬಡ್ಕಿಯಾಗಿ ಹೆಸರು ಮಾಡಿರುವ ಐಶ್ವರ್ಯ ಮತ್ತು ಸದಾ ಸುಳ್ಳನ್ನು ಹೇಳುವ ಸಂಭ್ರಮ ಕೂಡ ಚಿತ್ರದಲ್ಲಿದ್ದು, ಈಕೆಯ ಸುಳ್ಳು ಕತೆಗೆ ತಿರುವು ಕೊಡುತ್ತದೆ, ಹಾಗೂ ಕೆಲವೊಮ್ಮೆ ಒಳ್ಳೆಯದೇ ಆಗುತ್ತದಂತೆ.

    ಚಿತ್ರದ ಉಳಿದ ತಾರಾಬಳಗದಲ್ಲಿ ಶೋಭರಾಜ, ಜಡೆನಾಗನ ಪಾತ್ರದಲ್ಲಿ ಟಗರು ಕಾಕ್ರೋಚ್ ಕುರಿರಂಗ, ಕಾಮಿಡಿ ಕಿಲಾಡಿಗಳು ಗೋವಿಂದೇಗೌಡ ಅಭಿನಯಿಸಿದ್ದರೆ. ಚಿತ್ರದ ನಿರ್ಮಾಪಕ ಸತ್ಯನಾರಾಯಣ ಮನ್ನೆ ಮಾತನಾಡಿ ಒಂದು ಒಳ್ಳೆಯ ಚಿತ್ರವನ್ನು ನಿರ್ಮಾಣ ಮಾಡಿದ ತೃಪ್ತಿ ನನಗೆ ಇದೆ. ನಮ್ಮ ಚಿತ್ರ ಎಲ್ಲಾ ವರ್ಗದ ಜನರಿಗೂ, ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.