Tag: ದಿಲೀಪ್ ಪೈ

  • ಕಾಗೆ ಮೇಲಿನ ಕಥೆಯ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದ ದಿಲೀಪ್

    ಕಾಗೆ ಮೇಲಿನ ಕಥೆಯ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದ ದಿಲೀಪ್

    ವಿಶ್ವನಾಥ್.ಜಿ.ಪಿ ಹಾಗೂ ಪ್ರಬಿಕ್ ಮೊಗವೀರ್ ಅವರು ನಿರ್ಮಿಸುತ್ತಿರುವ ಹಾಗೂ ವೇದ್ ನಿರ್ದೇಶನದ ‘ರಾವೆನ್’ (Raven) ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಾಸಕ ಗೋಪಾಲಯ್ಯ ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ದೇಶಕ ಎಂ.ಡಿ.ಶ್ರೀಧರ್ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

    ಸಾಮಾನ್ಯವಾಗಿ ಕಾಗೆ ತಾಕಿದ್ದರೆ ಸ್ನಾನ ಮಾಡಬೇಕು. ಅದು ವಾಹನದ ಮೇಲೆ ಕೂರಬಾರದು ಮುಂತಾದ ನಂಬಿಕೆಗಳು ರೂಡಿಯಲ್ಲಿದೆ.‌ ಆದರೆ ನಮ್ಮ ಸಿನಿಮಾದಲ್ಲಿ ಕಾಗೆಯೇ ಪ್ರಮುಖ ಪಾತ್ರಧಾರಿ. ಕಾಗೆಯಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಎಂಬುದನ್ನು ತೋರಿಸುತ್ತಿದ್ದೇವೆ. ಈ ತಿಂಗಳ 21ರಿಂದ ಚಿತ್ರೀಕರಣ ಆರಂಭವಾಗಲಿದೆ. ದಿಲೀಪ್ ಪೈ (Dilip Pai) ನಾಯಕನಾಗಿ ನಟಿಸುತ್ತಿದ್ದಾರೆ. ಸ್ವಪ್ನ ಶೆಟ್ಟಿಗಾರ್ (Swapna Shettygar), ಕುಂಕುಮ ನಾಯಕಿಯರು. ಸುಚೇಂದ್ರ ಪ್ರಸಾದ್, ಲೀಲಾ ಮೋಹನ್, ಶ್ರೇಯಾ ಆರಾಧ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಾನು ಎಂ.ಡಿ.ಶ್ರೀಧರ್ ಅವರು ಸೇರಿದಂತೆ ಅನೇಕರ ಬಳಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ನಿರ್ದೇಶಕ ವೇದ್.

    ನಾನು ಕನ್ನಡಪರ ಹೋರಾಟಗಾರ ಎಂದು ಮಾತು ಆರಂಭಿಸಿದ ನಿರ್ಮಾಪಕ ವಿಶ್ವನಾಥ್, ವೇದ್ ಅವರು ಮಾಡಿಕೊಂಡಿರುವ ಕಥೆ ಇಷ್ಟವಾಯಿತು. ಹಾಗಾಗಿ ಪ್ರಬಿಕ್ ಮೊಗವೀರ್ ಅವರೊಂದಿಗೆ ಸೇರಿ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನನ್ನ ಹುಟ್ಟುಹಬ್ಬದ ದಿನವೇ ಚಿತ್ರ ಆರಂಭವಾಗಿರುವುದು ಖುಷಿಯಾಗಿದೆ ಎಂದರು. ಮತ್ತೊಬ್ಬ ನಿರ್ಮಪಕರಾದ ಪ್ರಬಿಕ್ ಮೊಗವೀರ್ ಮಾತನಾಡುತ್ತಾ, ನಾನು ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಸಾಕಷ್ಟು ಪ್ರಾಣಿಗಳ ಕುರಿತಾದ ಚಿತ್ರವನ್ನೇ ಮಾಡಿದ್ದೇನೆ. ಈ ಚಿತ್ರ ಕೂಡ ಕಾಗೆಯ ಬಗ್ಗೆ ಇದೆ‌ ಎಂದು ತಿಳಿಸಿದರು‌.

    ಬಹಳ ದಿನಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ.‌ ಒಳ್ಳೆಯ ಪಾತ್ರ. ಕಾಗೆ ಶನಿಮಹಾತ್ಮನ ವಾಹನ. ಅಂಥಹ ಕಾಗೆ ಕುರಿತಾದ ಚಿತ್ರವಿದು. ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಗೆಯ ಜೊತೆ ಕನೆಕ್ಟ್ ಆಗುತ್ತದೆ ಎಂದರು ನಾಯಕ ದಿಲೀಪ್ ಪೈ. ಚಿತ್ರದ ನಾಯಕಿಯರಾದ ಸ್ವಪ್ನ ಶೆಟ್ಟಿಗಾರ್, ಕುಂಕುಮ್ , ಸಂಗೀತ ನಿರ್ದೇಶಕ ಕ್ರಿಸ್ಟಫರ್ ಹಾಗೂ ಛಾಯಾಗ್ರಾಹಕ ಆರ್ ಸಿ ಟಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾರರ್ ‘ವಜ್ರಮುಖಿ’ಯ ಹಾಡು ಬಂತು

    ಹಾರರ್ ‘ವಜ್ರಮುಖಿ’ಯ ಹಾಡು ಬಂತು

    ಸಿಗಂಧೂರು ದೇವಿ ಕುರಿತ ಭಕ್ತಿ ಪ್ರಧಾನ ಸಿನಿಮಾ ನಿರ್ಮಾಣ ಮಾಡಿದ್ದ ಶಶಿಕುಮಾರ್.ಪಿ.ಎಮ್ ಈ ಬಾರಿ ‘ವಜ್ರಮುಖಿ’ ಎನ್ನುವ ಹಾರರ್ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ಹಣ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ರಾಜ್ ಭಾಸ್ಕರ್ ಸಂಗೀತ ಸಂಯೋಜನೆಯ ಮೂರು ಹಾಡುಗಳ ಆಡಿಯೋ ಸಿಡಿ ಅನಾವರಣಗೊಂಡಿತು. ಹಾರರ್, ಸೆಂಟಿಮೆಂಟ್ ಮತ್ತು ಪ್ರೀತಿ ಕಥಾವಸ್ತು ಹೊಂದಿರುವ ತ್ರಿಕೋನ ಕತೆ ಈ ಚಿತ್ರದ್ದು ಎಂದು ಎಂದು ನಿರ್ಮಾಪಕರು ಬಣ್ಣಿಸಿದರು. ರೋಡ್ ರೋಮಿಯೋ ನಂತರ ಎರಡನೆ ಇನ್ನಿಂಗ್ಸ್ ಇದಾಗಿದೆ. ಹಾರರ್ ಅಂದ ಮಾತ್ರಕ್ಕೆ ಯಾವಾಗಲೂ ದೆವ್ವ ಕಾಣಿಸಿಕೊಳ್ಳುವುದಿಲ್ಲ. ಎಲ್ಲಿ ಬೇಕೋ ಅಷ್ಟು ಮಾತ್ರ ಬರುತ್ತದೆಂದು ಆ್ಯಡ್ ಫಿಲಂ ಮೇಕರ್ ಪಾತ್ರ ಮಾಡಿರುವ ನಾಯಕ ದಿಲೀಪ್ ಪೈ ಹೇಳಿದರು.

    ನಲವತ್ತೈದು ದಿನಗಳ ಕಾಲ ಮೂರು ಹಂತಗಳಲ್ಲಿ ಸಾಗರ, ಜೋಗ್ ಜಲಪಾತ, ತಾಳಗುಪ್ಪದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬ ಮಾಹಿತಿಯನ್ನು ಸಂಕಲನ, ನಿರ್ದೇಶನ ಮಾಡಿರುವ ಎನ್.ಆದಿತ್ಯ ಕುಣಿಗಲ್ ನೀಡಿದರು.

    ಶೀರ್ಷಿಕೆಯಲ್ಲಿ ಪ್ರೇಕ್ಷಕರಿಗೆ ಹೆದರಿಸುತ್ತೇನೆ. ಡಾ.ನಾಗೇಂದ್ರ ಪ್ರಸಾದ್ ಶಿಫಾರಸಿನಿಂದ ಅವಕಾಶ ಒದಗಿಬಂತು. ಬಹುತೇಕ ಚಿತ್ರೀಕರಣವು ಸಾಯಂಕಾಲ 6 ರಿಂದ ಬೆಳಿಗ್ಗಿನ ಜಾವದ ತನಕ ನಡೆದಿದೆ. ನನಗಾಗಿಯೇ ಬರೆದಿರುವ ಕಾಲ ಚಂಚಲ ಹಾಡು ಚೆನ್ನಾಗಿ ಬಂದಿದೆ. ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣದಲ್ಲಿ ಎಲ್ಲರನ್ನೂ ಸುಂದರವಾಗಿ ತೋರಿಸಿದ್ದಾರೆಂದು ನಟಿ ನೀತು ಸಂತಸ ವ್ಯಕ್ತಪಡಿಸಿದರು.

    80ರ ಕಾಲದಲ್ಲಿ ಆಡಿಯೋ ಕಂಪನಿಗೆ ಸುವರ್ಣಯುಗ ಎನ್ನಬಹುದು. ಅಂದು ವಾರಕ್ಕೆ ಒಂದು ಆಡಿಯೋ ಕಂಪೆನಿಗಳು ಆರಂಭವಾಗುತ್ತಿದ್ದವು. ಇದರ ಸ್ಪರ್ಧೆಯೂ ಚೆನ್ನಾಗಿತ್ತು. ಮುಂದೆ ಒಂದೊಂದೇ ಮುಚ್ಚಿಕೊಳ್ಳುತ್ತಾ, ಇಂದು ಬೆರಳಣಿಕೆಯಷ್ಟು ಮಾತ್ರ ಚಾಲ್ತಿಯಲ್ಲಿದೆ. ಯೂಟ್ಯೂಬ್‍ನಲ್ಲಿ ಲಹರಿ ಸಂಸ್ಥೆಗೆ ಹತ್ತು ಕೋಟಿ ಚಂದದಾರರು ಇದ್ದಾರೆ. ದೇವರನ್ನು ನೋಡಿದ್ದೇನೆ. ದೆವ್ವ ನೋಡಿಲ್ಲ. ರಾಜಕೀಯದಲ್ಲಿ ಮನುಷ್ಯರು ದೆವ್ವ ಆಗಿ ಕಾಣಿಸಿಕೊಳ್ಳುತ್ತಾರೆಂಬುದು ಲಹರಿವೇಲು ನುಡಿಯಾಗಿತ್ತು.

    ಡಾ. ರಾಜ್‍ಕುಮಾರ್ ನಿರ್ಮಾಪಕರನ್ನು ಅನ್ನದಾತರು ಎನ್ನುತ್ತಿದ್ದರು. ಈಗ ಲಹರಿ ಸಂಸ್ಥೆಯು ಹೊಸ ನಿರ್ಮಾಪಕರಿಗೆ ಆಶ್ರಯದಾತರಾಗುತ್ತಿದ್ದಾರೆ. ಸಿಡಿಗೆ ಮಾರುಕಟ್ಟೆ ಇದೆ ಅಂತ ತೋರಿಸಿಕೊಟ್ಟವರು. ಮನ ಮೆಚ್ಚಿದ ಹುಡುಗಿ ಚಿತ್ರದ ಆಡಿಯೋ ಹಕ್ಕುಗಳಿಗೆ ಎರಡೂವರೆ ಲಕ್ಷ, ಅನುರಾಗ ಅರಳಿತು ಸಿನಿಮಾಕ್ಕೆ ನಲವತ್ತು ಲಕ್ಷ ನೀಡಿದ್ದು ದಾಖಲೆಯಾಗಿತ್ತು. ಅದರಂತೆ ನೀವು ಈಗ ಬರುವ ಚಿತ್ರಗಳನ್ನು ಮೇಲಕ್ಕೆ ಎತ್ತಬೇಕೆಂದು ನಿರ್ಮಾಪಕರ ಪರವಾಗಿ ವೇಲುರವರನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಕೋರಿಕೊಂಡರು.

    ಹಾರರ್ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಧಾನ್ಯತೆ ಇರುವುದಿಲ್ಲ ಎನ್ನುವ ಮಾತಿದೆ. ಆದರೆ ವಜ್ರಮುಖಿಯಲ್ಲಿ ಜನ ಇಷ್ಟ ಪಡುವಂಥಾ ಮೂರು ಹಾಡುಗಳಿವೆ. ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರಾಜ್ ಭಾಸ್ಕರ್ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಲಹರಿ ಸಂಸ್ಥೆ ಹಾಡುಗಳ ಹಕ್ಕು ಪಡೆದಿದೆ ಅಂದರೆ ಆ ಹಾಡುಗಳು ಉತ್ತಮವಾಗಿ ಮೂಡಿಬಂದಿರುತ್ತದೆ ಎಂಬುದು ಖಾತರಿ.